ಒಂದಿಷ್ಟು ಸಂಗ್ರಹಿತ ನಗೆಬುಗ್ಗೆಗಳು..

4.23077

ನಗೆಸಾಮ್ರಾಟರು ಹೆಂಡತಿಗೆ ಫೋನ್ ಮಾಡಿದರು,"ಇವತ್ತು ಮನೆಗೆ ಬರಲಿಕ್ಕೆ ಆಗಲ್ಲ, ಕಾರಿನ ಗೇರ್, ಸ್ಟೀರಿಂಗ್ ಎಲ್ಲಾ ಕಳವಾಗಿದೆ.." ಎಂದು.ಆದರೆ ಐದು ನಿಮಿಷದ ಬಳಿಕ ಮತ್ತೆ ಫೋನ್ ಮಾಡಿ.."ಬರ್ತಿದ್ದೇನೆ, ಮೊದಲು ಮಿಸ್ಸಾಗಿ ಕಾರಿನ ಹಿಂದಿನ ಸೀಟ್ ನಲ್ಲಿ ಕುಳಿತುಬಿಟ್ಟಿದ್ದೆ.." ಅಂದರು.
******
ಸರ್: ಯಾಕ್ಲೇ ಗುಂಡಾ..ಮುಂದ ಇನ್ ಶರ್ಟ್ ಮಾಡಿ ಹಿಂದಾ ಹೊರಗಾ ಬಿಟ್ಟಿದೀಯಲ್ಲಾ?ಗುಂಡ: "ಮುಂದ ಅಂಗಿ ಹರ್ದೆತ್ರಿ... ಹಿಂದ ಪ್ಯಾಂಟ್ ಹರ್ದೆತ್ರಿ.. ಅದಕ್ಕೆ ರಿ ಸರ..."
*****
ರಿಸೆಷನ್ ಟೈಮ್ ನಲ್ಲಿ ಕಂಪನಿಯೊಂದು ಬಳಸಬಹುದಾದ ತಂತ್ರ.
ಟಿಶ್ಯೂ ಪೇಪರ್ ನ ಬದಲು ಹೊಸತಾಗಿ ಕಾಲೇಜು ಮುಗಿಸಿದವರು ಕೆಲಸಕ್ಕಾಗಿ ನೀಡಿದ ರೆಸ್ಯೂಮ್ ಬಳಸುವುದು!
*********
ನಗೆಸಾಮ್ರಾಟರು ಸಲೂನ್ ಗೆ ಹೋದಾಗ ನಡೆದ ಘಟನೆ.
ಅಲ್ಲಿಗೆ ಒಬ್ಬ ನೋಡಲು ಒಂದು ಆಂಗಲ್ ನಲ್ಲಿ ಗಾಂಧಿಯಂತೆ ಕಾಣುತ್ತಿದ್ದ ವ್ಯಕ್ತಿ ಬಂದ ತಲೆಯಲ್ಲಿ ಯಾವ ಕಡೆಯಿಂದ ಕೂಡಿಸಿದರೂ ಒಂಭತ್ತಕ್ಕಿಂತ ಹೆಚ್ಚು ಕೂದಲು ಕಾಣ್ತಿಲ್ಲ. ಅವನ ತಲೆ ನೋಡಿ ಸಿಟ್ಟಾದ ಸಲೂನಿನ ಬಿಲ್ಲು, " ಏನ್ಸಾರ್ ಕೌಂಟ್ ಮಾಡಲಾ? ಕಟ್ ಮಾಡಲಾ?" ಎಂದು ಕೇಳಿದ್ದಕ್ಕೆ

ಆ ವ್ಯಕ್ತಿ ವಿನಮ್ರತೆಯಿಂದ.."ಕಲರ್ ಮಾಡು.." ಅಂದ!
ನೋಡಿ ಸಾಮ್ರಾಟರು ಸುಸ್ತು.
******
ಸಾಮ್ರಾಟರ ಮಗನಿಗೆ ಶಾಲೆಯಲಿ ರೇಸ್ ಬಗ್ಗೆ ಬರೆಯಲು ಹೇಳಿದ್ದರು. ಅದನ್ನು ಒಂಚೂರೂ ಎಡಿಟ್ ಮಾಡದೇ ಇಲ್ಲಿ ನೀಡುತ್ತಿದ್ದೇವೆ.
"ಅದು ಇರುವೆಗಳ ಸೈಕಲ್ ರೇಸು. ಕುಂದಾಪುರದಿಂದ ಶುರುವಾದ ರೇಸು ಮುಗಿಯುವುದು ಉಡುಪಿಯಲಿ. ಒಂದು ಇರುವೆಯು ಇಲ್ಲದ ಗೇರನ್ನು ಕಲ್ಪಿಸಿಕೊಳ್ಳುತ್ತ ಸೈಕಲ್ ನ್ನು ಪಲ್ಸಾರ್ ತರಹ ಓಡಿಸುತ್ತಿತ್ತು. ಆಗ ಅಲ್ಲಿಗೆ ಸೈಟ್ ಸೀಯಿಂಗ್ ಗೆ ಬಂದ ಆನೆ ದಾರಿಗಡ್ಡವಾದಾಗ ಸಡನ್ನಾಗಿ ಬ್ರೇಕ್ ಹಾಕಿದ ಇರುವೆಯು .." ಅಡಿಕ್ ಬೂರ್ದು ಸೈಪನ ಮರೆ..!" (ಅಡಿಗೆ ಬಿದ್ದು ಸಾಯ್ತೀಯ ಮಾರಾಯ) ಅಂದಿತು.
ಮಗನ ಕಲ್ಪನೆಗಳ ಬಗ್ಗೆ ಹೆಮ್ಮೆ ಪಟ್ಟ ಸಾಮ್ರಾಟರು ಎಲ್ಲೆಡೆ ಹೇಳಿಕೊಂಡು ತಿರುಗುತ್ತಿದ್ದರೆ, ಮಗರಾಯ ’ಅಪ್ಪ ಹೀಗೆ ಹೇಳ್ತಾ ಇದ್ದರೆ ಆನೆ ಮರ್ಯಾದೆ ಏನಾಗಬೇಕಂತ’ ಆಲೋಚಿಸಿ ಆನೆಯನ್ನೇ ಹೀರೋ ಆಗಿಸಿ ಏನೋ ಬರೆಯುತ್ತಿದ್ದಾನಂತೆ!
*****
ಈ ಸಲ ಇಂಕ್ರಿಮೆಂಟು ನೀಡದ್ದಕ್ಕೆ ಸಿಟ್ಟಾದ ನಗೆಸಾಮ್ರಾಟರು ತನ್ನ ಬಾಸ್ ಗೆ ಧಮಕಿ ಹಾಕಿದ್ದು ಹೇಗೆ ಗೊತ್ತೆ?
" ಈ ತಿಂಗಳು ನನ್ನ ಸಂಬಳ ಹೆಚ್ಚು ಮಾಡದಿದ್ದರೆ, ಆಫೀಸಿನ ಎಲ್ಲರಿಗೂ ನೀವು ನನಗೆ ಇಂಕ್ರಿಮೆಂಟ್ ಕೊಟ್ಟಿರೆಂದು ಸುದ್ಧಿ ಹಬ್ಬಿಸುತ್ತೇನೆ..!"
*****
ಕಳೆದ ಸಲ ನಗೆ ಸಾಮ್ರಾಟರು ಅಮೇರಿಕಾಗೆ ಹೋಗಿದ್ದಾಗ ಅಲ್ಲೊಂದು ಮೆಶೀನ್ ನೋಡಿದರು. ಅದು ಕಳ್ಳರನ್ನು ಹಿಡಿವ ಯಂತ್ರವಾಗಿತ್ತು. ಅಲ್ಲೇ ಸಾಕ್ಷಾತ್ ಅವರ ಕಣ್ಣೆದುರೇ ಘಂಟೆ ೧೦ ಲೆಕ್ಕದಲ್ಲಿ ಕಳ್ಳರನ್ನು ಹಿಡಿಯಿತು. ಖುಷ್ ಆದ ಸಾಮ್ರಾಟರು ಭಾರಿ ಮೊತ್ತ ತೆತ್ತು ಕರ್ನಾಟಕದ ಪೋಲೀಸರಿಗೆ ತೋರಿಸುತ್ತೇನೆ ಅಂತ ಹೇಳಿಕೊಳ್ಳುತ್ತಿದ್ದರು.ಆದರೆ ಇಲ್ಲಿ ಇಟ್ಟ ಮಾರನೇ ದಿನವೇ ಮೆಶೀನ್ ಕಳುವಾಯಿತಂತೆ.
*****
ಭೀಮನು ಧುರ್ಯೋದನನನ್ನು ಹೇಗೆ ಕೊಂದನು?
ಒಂದು ಮಾರ್ಕ್ಸಿನ ಪ್ರಶ್ನೆಯಾದರೆ ಸಾಮ್ರಾಟರ ಮಗ ಅಷ್ಟು ತಲೆತುರಿಸಿಕೊಳ್ಳುತ್ತಿರಲಿಲ್ಲ. ಅಷ್ಟು ದಡ್ಡನೆಂದು ತಿಳಿದಿರೇ? ಆ ಪ್ರಶ್ನೆ ೧೫ ಅಂಕಕ್ಕೆ ಕೇಳಲ್ಪಟ್ಟಿತ್ತು. ಆಗ್ಲೇ ಮೇಷ್ಟ್ರು ತುಂಬಾ ಸಲ ಹೇಳಿದ್ದರು ಹದಿನೈದು ಮಾರ್ಕ್ಸಿನ ಪ್ರಶ್ನೆಗೆ ಉತ್ತರಿಸುವಾಗ ಕೊನೆಯ ಪಕ್ಷ ಒಂದು ಪುಟವಾದರೂ ಬರೆಯಲೇಬೇಕೆಂದು. ಪ್ರಶ್ನೆ ಕೇಳುವವರಿಗೆ ಕಾಮನ್ ಸೆನ್ಸ್ ಬೇಡವೇ ಅಂತ ಬಯ್ದುಕೊಳ್ಳುತ್ತಾ ಕೊನೆಗೆ ಒಂದು ಉಪಾಯ ಕಂಡುಕೊಂಡ.
"ಭೀಮನು ಧುರ್ಯೋಧನನನ್ನು ಗುದ್ದಿ ಗುದ್ದಿ ಗುದ್ದಿ ಗುದ್ದಿ....." ಹೀಗೆ ಬರೆಯುತ್ತಾ ಪುಟದ ಕೊನೆಗೆ ".... ಗುದ್ದಿ ಕೊಂದನು." ಹೀಗೆ ಮುಗಿಸಿದ!

-
(ಕೋಳಿಯನ್ನು( ನಗೆಸಾಮ್ರಾಟರನ್ನು) ಕೇಳದೇ ಅಲ್ಲಿ ಇಲ್ಲಿ ಮಾಡಿದ ಸಂಗ್ರಹಕ್ಕೆ ಮಸಾಲೆ ಅರೆಯಲಾಗಿದೆ)

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.2 (13 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ರಂಜಿತ್

>>ನಗೆಸಾಮ್ರಾಟರು ಹೆಂಡತಿಗೆ ಫೋನ್ ಮಾಡಿದರು,"ಇವತ್ತು ಮನೆಗೆ ಬರಲಿಕ್ಕೆ ಆಗಲ್ಲ, ಕಾರಿನ ಗೇರ್, ಸ್ಟೀರಿಂಗ್ ಎಲ್ಲಾ ಕಳವಾಗಿದೆ.." ಎಂದು.ಆದರೆ ಐದು ನಿಮಿಷದ ಬಳಿಕ ಮತ್ತೆ ಫೋನ್ ಮಾಡಿ.."ಬರ್ತಿದ್ದೇನೆ, ಮೊದಲು ಮಿಸ್ಸಾಗಿ ಕಾರಿನ ಹಿಂದಿನ ಸೀಟ್ ನಲ್ಲಿ ಕುಳಿತುಬಿಟ್ಟಿದ್ದೆ.." ಅಂದರು.<<

ನಗೆ ಸಾಮ್ರಾಟರು ಎರಡು ಬಾರಿಯೂ ಪೋನ್ ಮಾಡಿದ್ದು ಅವರ ಶ್ರೀಮತಿಗೆ ತಾನೆ ;)
ಅಥವಾ ಇನ್ಯಾರ್ಗೋ ? :)

ನಗೆ ಬುಗ್ಗೆಗಳು ಓದಿ ಖುಷಿ ಆಯ್ತು :)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಅರವಿಂದ್ ಅವರೇ,

ಮುಖ್ಯ ಕ್ರೆಡಿಟ್ ಮೂಲತಃ ಯಾರು ಬರೆದಿದ್ದರೋ ಆ ಅನಾಮಿಕರಿಗೆ ಸಲ್ಲಬೇಕು. ನನ್ನದಿಲ್ಲಿ ಮಸಾಲೆಭರಿತ ಅನುವಾದವಷ್ಟೇ.

ನಿಮ್ಮ ಪ್ರಶ್ನೆ ನಗೆಸಾಮ್ರಾಟರ ಹೆಂಡತಿಯನ್ನು ಕೇಳಿದಾಗ ಅವರ ಮನೆಯ ಲ್ಯಾಂಡ್ ಲೈನ್ ಕಳೆದ ಒಂದು ವಾರದಿಂದ ಕೆಟ್ಟಿದೆಯಂತೆ.:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಗೆಬುಗ್ಗೆಗಳು ಹೆಸರಿನಂತೆಯೇ ಇವೆ. ನಕ್ಕೂ ನಕ್ಕೂ (ನನಗು ನನ್ನ ಗೆಳತಿಯರಿಗೂ) ಬಹಳ ಸುಸ್ತಾಗಿದೆ. ಎಲೆಕ್ಟ್ರೋಲ್ ಅಥವಾ ಗ್ಲೂಕೋಸ್ ಅರ್ಜೆಂಟಾಗಿ ಬೇಕಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂಬಿಕಾ,

ಮುಂದಿನ ಸಲವಾದರೂ ನಗೆಸಾಮ್ರಾಟರ ಲೇಖನ ಓದುವ ಮೊದಲು ಒಂದಿಷ್ಟು ಗೋಡಂಬಿ, ತಂಬಿಗೆ ಹಾಲು ಕುಡಿಯುವ(ಇಷ್ಟೇ ಸಾಕೆ?!) ಮುನ್ನೆಚ್ಚರಿಕೆ ತೆಗೆದುಕೊಳ್ಳಿ ಅನ್ನುತ್ತಿದ್ದಾರೆ ಸಾಮ್ರಾಟರು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಂಜಿತ್ ಅವರಿಗೆ ಈ ರವಿವಾರದ ಬೆಳಿಗ್ಗೆ ನಿಮ್ಮ ನಗೆಬುಗ್ಗೆಗಳು ನಗೆ-ನಲಿವಿನ ಕಾರಂಜಿ ಚಿಮ್ಮಿಸಿವೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರ೦ಜಿತ್ ನಗೆಬುಗ್ಗೆಗಳು ಚೆನ್ನಾಗಿವೆ. ಎಲ್ಲದರಾಗ ಗು೦ಡನ ಜೋಕು ಭಾಳ ಛೊಲೋ ಅದ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಅರವಿಂದ್ ಅವರೇ,

ಮುಖ್ಯ ಕ್ರೆಡಿಟ್ ಮೂಲತಃ ಯಾರು ಬರೆದಿದ್ದರೋ ಆ ಅನಾಮಿಕರಿಗೆ ಸಲ್ಲಬೇಕು. ನನ್ನದಿಲ್ಲಿ ಮಸಾಲೆಭರಿತ ಅನುವಾದವಷ್ಟೇ.

ನಿಮ್ಮ ಪ್ರಶ್ನೆ ನಗೆಸಾಮ್ರಾಟರ ಹೆಂಡತಿಯನ್ನು ಕೇಳಿದಾಗ ಅವರ ಮನೆಯ ಲ್ಯಾಂಡ್ ಲೈನ್ ಕಳೆದ ಒಂದು ವಾರದಿಂದ ಕೆಟ್ಟಿದೆಯಂತೆ.:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಾನು ಕೂಗದೆಯೂ ಬೆಳಗಾಗುವುದೆಂದು ಈ ‘ಕೋಳಿ’ಗೆ ತಿಳಿದಿದೆ ;)
ಅಂದಹಾಗೆ ಮಸಾಲೆ ಘಮಕ್ಕೆ ಕೋಳಿ ಮೈಮರೆತು ಕತ್ತು ಕುಯ್ಸಿಕೊಂಡಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಒಂದು ತಿಂಗಳು ಅಜ್ಞಾತವಾಸದಲ್ಲಿರುವಿರೆಂದು ಬಲ್ಲ ಮೂಲಗಳಿಂದ ಖಚಿತವಾಗಿದ್ದರಿಂದ ನಿಮ್ಮನ್ನು ಈ ಎಲ್ಲಾ ಜೋಕುಗಳಿಗೆ ಹೀರೋ ಆಗಿ ಬಳಸಿಕೊಳ್ಳಲಾಯಿತು.

ಎಂದಿನಂತೆ ನೀವು ನಿಮ್ಮೆಲ್ಲಾ ವ್ರತಗಳನ್ನು ಧಿಕ್ಕರಿಸಿ ಬಂದಿದ್ದೀರಿ.

ಮಸಾಲೆ ಖಾರ ಜಾಸ್ತಿಯಾಗಿದ್ದರೆ ಕ್ಷಮಿಸಬೇಕು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<"ಭೀಮನು ಧುರ್ಯೋಧನನನ್ನು ಗುದ್ದಿ ಗುದ್ದಿ ಗುದ್ದಿ ಗುದ್ದಿ....." ಹೀಗೆ ಬರೆಯುತ್ತಾ ಪುಟದ ಕೊನೆಗೆ ".... ಗುದ್ದಿ ಕೊಂದನು." ಹೀಗೆ ಮುಗಿಸಿದ!>
ಅದಕ್ಕೆ ೧೫ ಮಾರ್ಕು ಕೊಡಲಾಗಿದೆ. ಯಾಕಂದರೆ ಅಸ್ಟು ಗುದ್ದಿದರೆ ಧುರ್ಯೋಧನ ಯೇನು ಅವನ ಅಪ್ಪನೂ ಸಾಯಬೇಕು . :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಗೆ ಬಡಿಸಿ ಬಡಿಸಿ ಸುಸ್ತಾದ ಗುಂಡನಿಗೆ ಕೇವಲ ೧೫ ಮಾರ್ಕ್ಸೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.