rakshith gundumane ರವರ ಬ್ಲಾಗ್

ಬದಲಾವಣೆ..

ಸುಮಾರು ೧೫ ವರ್ಷಗಳೇ ಕಳೆದವು ಅನ್ಸುತ್ತೆ.. ಅದು ನವರಾತ್ರಿ ರಜೆಯ ಸಮಯ, ನಾನು ಏಳನೇ ಕ್ಲಾಸು.. ಮನೆಯಲ್ಲೆಲ್ಲಾ ಸಡಗರ.. ಎಂತ, ಹಬ್ಬ ಅಂತ ಅಂದುಕೊಂಡ್ರಾ? ಅಲ್ಲಾರೀ.. ನಮ್ಮೂರಿಗೆ ಲ್ಯಾಂಡ್ ಲೈನ್ ಫೋನ್ ಕನೆಕ್ಷನ್ ಬಂದಿತ್ತು. ನಮ್ಮ ಮನೆಗೂ ಅವತ್ತೇ ಫೋನ್ ಲೈನ್ ಎಳೆದು ಕನೆಕ್ಷನ್ ಕೊಟ್ಟುಬಿಡುವುದು ಅಂತ ತೀರ್ಮಾನವೂ ಆಗಿತ್ತು. ನಮಗೆಲ್ಲ ಖುಷಿಯೋ ಖುಷಿ.. ಹುಡುಗ್ರಾದ ನಮಗೆ ಎಲ್ಲವೂ ಖುಷಿನೇ.. ಮನೆಗೆ ಎಂತದೇ ಹೊಸತು ಬಂದರೂ ಸಹ ಅದರಲ್ಲೊಂದು ಖುಷಿ ಹುಡುಕುವ ಅಗತ್ಯವೇ ಇರೋದಿಲ್ಲ.. ಅದಾಗಿಯೇ ಖುಷಿ ಆಗುತ್ತೆ. ಆದ್ರೆ ದೊಡ್ಡವರಿಗೂ ಖುಷಿ ಆಗುವಂಥದ್ದು ಎಂತ ಮಾರ್ರೆ ಆ ಫೋನಲ್ಲಿ? ಬೆಳಗ್ಗಿಂದನೇ ಕಾದು ಕಾದು ಟೆಲಿಫೋನ್ ಡಿಪಾರ್ಟ್‌ಮೆಂಟ್ನವರು ಬರಲಿಲ್ಲ ಅಂತ ಎಲ್ಲರೂ ಶಾಪ ಹಾಕುತ್ತಾ ಮಧ್ಯಾನ ಊಟಕ್ಕೂ ಕೂತಾಯಿತು..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಪೇಪರ್ ಹುಡುಗ..

ಬಹಳ ದಿನಗಳ ಅನಂತರ ಬೆಂಗಳೂರಿನಿಂದ ಮನೆಗೆ ಹೊರಟಿದ್ದೆ. ನೈಟ್ ಶಿಫ್ಟ್ ಮುಗಿಸಿ ಆಫೀಸಿನಿಂದ ಕ್ಯಾಬ್ ಹಿಡಿದು ಸೀದಾ ಮೆಜೆಸ್ಟಿಕ್‌ಗೆ ಹೋಗಿ ಶಿವಮೊಗ್ಗೆಯ ಬಸ್ ಹತ್ತುವಾಗ ಸುಮಾರು ೫:೩೦ ರಿಂದ ಆರು ಘಂಟೆಯಾಗುತ್ತದೆ. ಬಸ್ ಅಂತೂ ಸಿಕ್ಕಿತ್ತು.. ರಾತ್ರಿ ಎಲ್ಲ ಕೆಲಸ ಮಾಡಿ ಕಣ್ಣುಗಳು ದಣಿದಿದ್ದವು.. ಕಣ್ಣು ಮುಚ್ಚಿ ನಿದ್ದೆಗೆ ಜಾರಬೇಕು ಅನ್ನಬೇಕಾದರೆ ಪೇಪರ್ ಬೇಕಾ ಪೇಪರ್ ಅಂತ ಪುಟ್ಟ ಹುಡುಗನೊಬ್ಬ ಹಿಂದಿನ ಬಾಗಿಲಿನಿಂದ ಹತ್ತಿ ಜನರೆಲ್ಲರ ಹತ್ತಿರ ಕೇಳುತ್ತಾ ಬರುವುದು ಕಂಡಿತ್ತು. ಬ್ಯಾಗ್ ಪಕ್ಕದ ಸೀಟಿನಲ್ಲಿತ್ತು ಕುಳಿತ ನನ್ನನ್ನು ಮಧ್ಯವಯಸ್ಕನೊಬ್ಬ ಎಚ್ಚರಿಸಿ ಬ್ಯಾಗ್ ತೆಗೆಯಪ್ಪ ನಾನು ಕುಳಿತುಕೊಳ್ಳಬೇಕು ಅಂತ ಎಚ್ಚರಿಸಿದ್ದ. ಸರಿ ಸಾರ್ ಅಂತ ಜಾಗ ಬಿಟ್ಟೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪಾಠ...

೨೦೧೪ ಕಳೆದು ೨೦೧೫ ಶುರು ಆಯಿತು. ಆಗಲೇ ಜನವರಿ ೨ನೇ ತಾರೀಖು. ಫ್ರೆಂಡ್ ಒಬ್ಬಳ 'ಹೊಸ ವರ್ಷದ ಶುಭಾಶಯಗಳು. ನಿನ್ನೆಲ್ಲಾ ಆಸೆ ಆಕಾಂಕ್ಷೆಗಳು ಈ ವರ್ಷ ಪೂರ್ಣವಾಗಲಿ' ಎಂಬ ಸಂದೇಶ ವ್ಹಾಟ್ಸಾಪ್ ನಲ್ಲಿ ಮಿನುಗಿತ್ತು. ತಿರುಗಿ ಅದಕ್ಕೆ ಧನ್ಯವಾದ ತಿಳಿಸಿ ಕಳೆದ ವರ್ಷದ ಕಹಿ ನೆನಪಿಗೆ ಜಾರಿದ್ದೆ. ಆಕಾಂಕ್ಷೆ ಆಸೆಗಳೆಲ್ಲವೂ 'ಅವಳೇ' ಅಂತ ದಿನ ರಾತ್ರಿ ಹತ್ತು ಹಲವು ರೀತಿಯಲ್ಲಿ ಅರ್ಥ ಮಾಡಿಸಿದ್ದ ನನ್ನ ಪ್ರಯತ್ನ ವ್ಯರ್ಥವಾಗಿತ್ತು. ತುಂಬಾ ಇಷ್ಟ ಪಟ್ಟು, ಮನೆಯಲ್ಲಿ ಪೆಪ್ಪರ್ಮೆಂಟು ತಿನ್ನಲು ಕೊಟ್ಟ ಹಣ ಉಳಿಸಿ ಕೊಂಡು ಓದುತ್ತಿದ್ದ ಚಂದಾಮಾಮ, ಚಂಪಕ, ಬಾಲಮಂಗಳ, ದಿನಕ್ಕೊಂದು ಕಥೆ ಪುಸ್ತಕಗಳನ್ನು ಕೊಂಡು ಒಂದೇ ರಾತ್ರಿಗೆ ಅಷ್ಟೂ ಕಥೆಗಳನ್ನು ಹೇಗೆ ಓದಿ ಮುಗಿಸುತ್ತಿದ್ದೆನೋ ಅದಕ್ಕೂ ಚುರುಕಾಗಿ ಅವಳನ್ನು ಹಚ್ಚಿಕೊಂಡಿದ್ದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಪ್ಪ..

ಮಧ್ಯಾಹ್ನವಾಗಿತ್ತು. ಅಡುಗೆ ಮಾಡಿ ಮುಗಿಸಿ ಮನೆಯಲ್ಲಿ ಒಂಟಿಯೆನಿಸಿ ಊರಿನ ನೆನಪಾಯಿತು. ಮಧ್ಯಾಹ್ನ ಮನೆಯಲ್ಲಿ ಯಾಕಿದ್ದಾನೆ ಅಂತ ಅನಿಸಬಹುದು ನಿಮಗೆ. ಬೆಂಗಳೂರಿಗೆ ಬಂದು ೭ ವರ್ಷವಾದರೂ ನನಗೆ ನೈಟ್ ಶಿಫ್ಟ್ ಬಿಟ್ಟು, ಬೆಳಗಿನ ಕೆಲಸ ಹುಡುಕುವ ಆಸಕ್ತಿ ಇನ್ನೂ ಬಂದಿಲ್ಲ ನೋಡಿ. ಬೆಂಗಳೂರು ಟ್ರಾಫಿಕ್ ನೆನೆಸಿಕೊಂಡಾಗಲೆಲ್ಲಾ, ಕಿಂಚಿತ್ ಮನೆಗೆ ಬರುವಾಗಾದರೂ ಆರಾಮವಾಗಿ ಉಸಿರಾಡಬಹುದಲ್ಲ ಅಂತಾಣಿಸುತ್ತದೆ. ಹೆಚ್ಚು ಟ್ರಾಫಿಕ್ ಇರುವುದಿಲ್ಲ. ಇರಲಿ ವಿಷಯದ ಆಚೆಗೆ ಯೋಚಿಸುವುದು ಬೇಡ. ಊರಿನ ಸ್ಥಿರ ದೂರವಾಣಿಗೆ ಕರೆ ಮಾಡಿದೆ. ನಮ್ಮೂರ ಫೋನ್ ಸ್ಥಿರವೇ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮರಳಿ ನೆನಪಿಗೆ..

ನನ್ನ ಮಾವನ ಮಗನ ಮದುವೆಗೆ ಇನ್ನೂ ೨ ದಿನ ಬಾಕಿ ಇತ್ತು. ಡಿಸೆಂಬರ್ ತಿಂಗಳಿನಲ್ಲಿ ಮಾವನ ಮಗ ಮಾತ್ರವಲ್ಲದೆ ನನ್ನ ಇನ್ನೂ ಇಬ್ಬರು ಆಪ್ತ ಗೆಳೆಯರು ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದರು. ಆಫೀಸ್‌ನಲ್ಲಿ ರಜೆ ಸಿಗುವುದು ತೀರಾ ಕಷ್ಟವಾದರೂ ನನ್ನ ಕೆಲಸದ ರೀತಿ ರಿವಾಜುಗಳನ್ನರಿತ ನನ್ನ ಮ್ಯಾನೇಜರ್ ನನಗೆ ರಜೆ ಅಂತ ಕೊಡದಿದ್ದರೂ, ಇಂಟರ್ನೆಟ್ ನೆಟ್ವರ್ಕ್ ಇರುವಂಥ ಜಾಗದಿಂದ ಕುಳಿತು ಕೆಲಸ ಮಾಡಲು ಅನುಮತಿ ನೀಡಿದ್ದಳು. ಒಂದೇ ವಾರದಲ್ಲಿ ಮೂರು ಮದುವೆ ಇದ್ದ ಕಾರಣ ನಾಲ್ಕು ದಿನಗಳ ಮುಂಚೆಯೇ ನಮ್ಮೂರ ಕಡೆ ಧಾವಿಸಿದ್ದೆ. ಮಾವನ ಮನೆ ಇರುವುದು ತೀರ್ಥಹಳ್ಳಿಯಲ್ಲಿ. ಅಲ್ಲೇ ಕುಳಿತು ಸಂಜೆಯ ನಂತರ ಅಮೇರಿಕ ಕಚೇರಿ ವೇಳೆಯಲ್ಲಿ ಕೆಲಸ ಮಾಡಬೇಕಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - rakshith gundumane ರವರ ಬ್ಲಾಗ್