ಇದು 'ರೈ' ಟ್ 'ಕನಸು'

5

ಡೆನ್ನಾನ  ಡೆನ್ನಾನ
ತುಳುನಾಡ ಸೀಮೆಡು
ರಮರೊಟ್ಟು ಗ್ರಾಮೋಡು
ಗುಡ್ಡಾದ ಭೂತ ಉಂಡುಗೆ...

ಅನ್ನೋ ಹಾಡಿನೊಂದಿಗೆ ದೂರದರ್ಶನದಲ್ಲಿ 'ಗುಡ್ಡದ ಭೂತ' ಅನ್ನೋ ಧಾರವಾಹಿ ಬರ್ತಿತ್ತು . ಆ ಧಾರವಾಹಿ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡು,ಅಲ್ಲಿಂದ ಕನ್ನಡ ಹಿರಿತೆರೆ ಮೇಲೆ ಕಾಣಿಸಿ,ಇಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತಹ ಪಾತ್ರಗಳನ್ನ ನೀಡದೆ ಇದ್ದಾಗ,'ನಾನ್ ತಮಿಳ್ನಾಡ್ ಕಡೆ ಹೊರಟೆ' ಅಂತೇಳಿ ಹೋಗಿ ತಮ್ಮ ದೈತ್ಯ ಪ್ರತಿಭೆಯಿಂದಲೇ ತಮಿಳು,ತೆಲುಗು,ಮಲಯಾಳಂ,ಹಿಂದಿ ಚಿತ್ರಗಳಲ್ಲಿ ಅಭಿನಯಿಸಿ ಮನೆಮಾತಾಗಿ,ದಕ್ಷಿಣ ಭಾರತದ ಚಿತ್ರ ರಂಗದಲ್ಲೇ ಬೇಡಿಕೆಯ ನಟನಾಗಿ ಬೆಳೆದು ನಿಂತವರು ನಮ್ಮ 'ಪ್ರಕಾಶ್ ರೈ'!

ನಟ ಪ್ರಕಾಶ್ ರೈ, ನಿರ್ದೇಶಕ ಪ್ರಕಾಶ್ ರೈ ಆಗಿ ಕನ್ನಡ ಚಿತ್ರ ಮಾಡ್ತಾ ಇದ್ದೀನಿ ಅಂದಾಗ ಸಹಜವಾಗೇ ನಿರೀಕ್ಷೆಯಿತ್ತು.ಒಂದೇ ಮಾತಿನಲ್ಲಿ ಹೇಳುವುದಾದರೆ 'ರೈ' ನಿರೀಕ್ಷೆಯನ್ನ ಹುಸಿಗೊಳಿಸಿಲ್ಲ!

ಚಿತ್ರದ ಹೆಸರು ನೋಡಿ ಡಾಕ್ಯುಮೆಂಟರಿ ತರ ಇರಬಹುದು ಅಂದುಕೊಂಡು,ಗೆಳೆಯನಿಗೆ ಹೇಳ್ದೆ 'ಲೇ,ಸೆಕೆಂಡ್ ಶೋ ಬೇಡ್ವೋ ನಿದ್ರೆ ಬಂದ್ರು ಬರಬಹುದು' ಅಂತ,ಆದ್ರೆ ಮನೆ ಮಂದಿಯೊಂದಿಗೆ ಕುಳಿತು ನೋಡ ಬಹುದಾದ ಒಂದೊಳ್ಳೆ ಸಿನಿಮಾವನ್ನ ಮಾಡಿ ಕೊಟ್ಟಿದ್ದಾರೆ ರೈ. ಅಪ್ಪ-ಮಗಳ ಅವಿನಾಭಾವ ಸಂಬಂಧದ ಸುತ್ತ ತಿರುಗುವ ಚಿತ್ರ,ಯಾವ ಹಂತದಲ್ಲೂ ಬೋರ್ ಅನ್ನಿಸುವುದಿಲ್ಲ,ಮಧ್ಯೆ ಮಧ್ಯೆ ಬಹಳ ನಗಿಸುತ್ತಾರೆ.ಹಂಸಲೇಖ ಬಹಳ ದಿನಗಳ ನಂತರ ಒಳ್ಳೆ ಸಾಹಿತ್ಯ-ಸಂಗೀತ ನೀಡಿದ್ದಾರೆ, ಮಾಮೂಲಿನಂತೆ ಬಾಲಿವುಡ್ ಗಾಯಕರ ದಂಡೆ ಬಂದು ಹಾಡಿ ಹೋಗಿದೆ :(

ಬಹಳ ದಿನದ ನಂತರ ಕಾಣಿಸಿಕೊಂಡ ಸಿತಾರ ಗಮನ ಸೆಳೆಯುತ್ತಾರೆ, ಅಚ್ಯುತ ,ಪ್ರಕಾಶ ರೈ,ಅಮೂಲ್ಯ,ರಮೇಶ್ ಅರವಿಂದ್ ಎಲ್ಲರ ಅಭಿನಯವು ಮಸ್ತ್ ! ಒಟ್ಟಿನಲ್ಲಿ ಒಂದೊಳ್ಳೆ ಕನ್ನಡ ಸಿನೆಮ ನೋಡಿದ ಖುಷಿ ಅಂತು ಆಯ್ತು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

<<ಒಟ್ಟಿನಲ್ಲಿ ಒಂದೊಳ್ಳೆ ಕನ್ನಡ ಸಿನೆಮ ನೋಡಿದ ಖುಷಿ ಅಂತು ಆಯ್ತು.>> ಈ ಮಾತು ನೂರಕ್ಕೆ ನೂರು ನಿಜ. ನಾ ವೀಕ್ಷಿಸುತ್ತಿದ್ದಾಗ ಚಿತ್ರ ನಾನೂ ನನ್ನ ಕನಸೂ ಮುದಗೊಂಡೆವು ಅಂದು ನಾನೂ ನನ್ನ ಮನಸೂ ಒಂಟಿ ಮಗಳ ಅಪ್ಪ ನಾನೂ ಅಲ್ಲಿನ ಉತ್ತಪ್ಪನಂತೆ ನನ್ನ ಮಗಳೂ ನನ್ನ ಕನಸು ಆತನ ಆ ಕನಸಿನಂತೆ ನಮ್ಮದೇ ಚಿತ್ರ ಬಿಡಿಸಿಕೊಂಡಂತಾಗಿ ನನ್ನ ಕಣ್ಮುಂದೆ ಸಂತಸದೊಂದಿಗೆ ಅಲ್ಲಿ ಕ್ಷಣ ಪ್ರತಿಕ್ಷಣ ನಾನು ನೊಂದೆ ಹೆಣ್ಮಗಳ ಅಪ್ಪನಾಗುವುದು ನಿಜದಿ ಅದೆಂತಾ ಸೌಭಾಗ್ಯ ನನ್ನದು ಅದು ನಿಜದಿ ಬಯಸಿ ಬಯಸಿ ಬಂದಂತ ಭಾಗ್ಯ ಮೊನ್ನಿನ ತನಕ ಹೆಗಲೇರಿ ಕೂರುತ್ತಿದ್ದವಳು ಭಯವಿಲ್ಲದೇ ಭುಜದೆತ್ತರಕ್ಕೆ ಬೆಳೆದು ನಿಂತಾಗಿದೆ ಈಗ ನನಗರಿವಿಲ್ಲದೇ ಭವಿಷ್ಯದ ವಿದಾಯದ ಚಿತ್ರ ಕಣ್ಣೆದುರು ತೆರೆದುಕೊಂಡಾಗ ನನ್ನಲ್ಲಿ ಧೈರ್ಯ ತುಂಬಲು ದೇವರೇ ಬರಬೇಕಾದೀತಾಗ - ಆತ್ರಾಡಿ ಸುರ‍ೇಶ ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾವನೆಗಳ ಅನಾವರಣ ಚೆನ್ನಾಗಿದೆ.ನನ್ನ ವಿಮರ್ಶೆಗಿಂತ ನಿಮ್ಮ ಕವನವೇ ಸೂಪರ್ರ್ :) ಅದರಲ್ಲೂ ಕಡೆಯ ಸಾಲುಗಳಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಕೆಶಣ್ಣ , ಚಿತ್ರ ಚೆನ್ನಾಗಿ ಮಾಡುವ ಪ್ರಯತ್ನ ಮಾಡಿದ್ದಾರೆ ಅನ್ನಬಹುದೇನೋ. ಮೊದಲಾರ್ಧದ ಬಗ್ಗೆ ಎರಡು ಮಾತಿಲ್ಲ , ಯಾಕೋ ಎರಡನೆಯ ಭಾಗವನ್ನ ಸ್ವಲ್ಪ ಎಳೆದಿದ್ದಾರೆನೋ ಅನ್ನೋ ಹಾಗಿದೆ. ಒಮ್ಮೆ ನೋಡಬಹುದಾದ ಉತ್ತಮ ಚಿತ್ರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು,ಸ್ವಲ್ಪ ಹಾಗೆನ್ನಿಸುವುದು ನಿಜ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶೆಟ್ರೇ ಧನ್ಯವಾದಗಳು ನಿಮ್ಮ ಮತ್ತು ಹೆಗಡೆಯವರ ಲೇಖನ, ಕವನ ನೋಡಿದ ಮೇಲೆ ಸಿನೇಮಾ ನೋಡಲೇ ಬೇಕಲ್ಲ ಅನ್ನಿಸಿತು. ನಾನೂ ರೈ ಬೀಸಣಿಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೋಡಿ ಬನ್ನಿ :) ನಾನು ಅವರ ಬೀಸಣಿಗೆಯಲ್ಲ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.