ಕಾಸು - ಕುರ್ಚಿಯ ಖಾದಿಗಳ ನಡುವೆಯೊಬ್ಬ...

5

 Jai Ram Ramesh            ಕುಮಾರಸ್ವಾಮಿ ಸರಕಾರವಿದ್ದಾಗ ರೇವಣ್ಣ,ಯಡ್ಯೂರಪ್ಪನವರ ಕಾಲದಲ್ಲಿ ಈಶ್ವರಪ್ಪ. ಇಬ್ಬರೂ ಅಬ್ಬರಿಸುತಿದ್ದಿದ್ದು 'ಗುಂಡ್ಯ ಜಲ ವಿದ್ಯುತ್ ಯೋಜನೆ'ಯನ್ನ ಜಾರಿಗೆ ತಂದೆ ತರುತ್ತೇವೆ ಅಂತ.ಹಣಕೋಣ ಉಷ್ಣ ವಿದ್ಯುತ್ ಸ್ಥಾವರದ ಬಗ್ಗೆಯೂ ಸಚಿವರಿಗೆ ಮೋಹವಿತ್ತು.BT (ಬಿಟ್ಟಿ?) ಬದನೇಕಾಯಿ ವಿಷಯದಲ್ಲಿ ಹೆಸರಿಗೆ ಕೃಷಿ ಸಚಿವರಾದರು ಸದಾ ಕಾಲ ಬ್ಯಾಟ್ ಹಿಡಿದು ಕ್ರಿಕೆಟ್ ಬಗ್ಗೆ ತಲೆ ಕೆಡಿಸಿಕೊಳ್ಳುವ ಶರದ್ ಪವಾರ್ ಸಹ ಬಿ.ಟಿ  ಬದನೆ ಒಳ್ಳೇದು ಇರ್ಲಿ ಬಿಡಿ ಅಂದಿದ್ರು.ಮೊನ್ನೆ ಮೊನ್ನೆ ನಮ್ಮ ತಲೆ ಕೆಟ್ಟ ರಾಜ್ಯ ಸರ್ಕಾರ ಮೈಸೂರು-ಶಿವಮೊಗ್ಗದ ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆಗೆ ಅವಕಾಶ ಕೊಟ್ಟಾಗ, ಆಚಾರ್ಯ ಅವ್ರು ಹೇಳಿದ್ರಲ್ಲ ಗಣಿಗಾರಿಕೆಯನ್ನ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳುತ್ತೇವೆ ಅಂತ, ಅದ್ಹೆಂಗೆ ಪರಿಸರಕ್ಕೆ ಹಾನಿಯಾಗದಂತೆ ಮಾಡೋದು ಅಂತ ಪುಣ್ಯಾತ್ಮ ಹೇಳಲಿಲ್ಲ, ಇವ್ರು ಗಣಿ ಅಗೆಯುವವರೆಗೂ ಇರೋ ಬರೋ ಕಾಡು-ಪ್ರಾಣಿ-ಪಕ್ಷಿಗಳನ್ನೆಲ್ಲ ತಮ್ಮ ತವರು ಕರಾವಳಿಯ ಕಡಲಿನಲ್ಲಿ ಇಡುತಿದ್ದರೆನೋ?  ಕುರ್ಚಿ ಸಿಗುತ್ತೆ ಅಂದ್ರೆ ವಿಧಾನ ಸೌಧದ ಕೆಳಗೂ ಅಗೆಯೋಕೆ ಬಿಡೋಕು ಸೈ  ಅನ್ನೋ ಈ ರಾಜಕಾರಣಿಗಳಿಗೆ common sense ಇಲ್ವಾ?

ಆದರೆ ಕಾಸು- ಕುರ್ಚಿಯ ಕನಸು ಕಾಣುವ ಖಾದಿಗಳ ನಡುವೆಯೊಬ್ಬ ಇತ್ತೀಚಿನ ದಿನಗಳಲ್ಲಿ  common sense ಇರುವಂತೆ,ಜನರ ಮನ ಅರಿತಂತೆ ವರ್ತಿಸುತಿದ್ದವ್ರು  ಕೇಂದ್ರ ಅರಣ್ಯ ಪರಿಸರ ಖಾತೆ ಸಚಿವ 'ಜೈ ರಾಮ್ ರಮೇಶ್'.

 

 

ಅದು ಹಣಕೋಣ ಉಷ್ಣ ವಿದ್ಯುತ್ ಸ್ಥಾವರದ ವಿಷಯವಿರಬಹುದು,ಗುಂಡ್ಯ ಯೋಜನೆಯಿರಬಹುದು,ಬಿ.ಟಿ ಬದನೆಯ ವಿಷಯ ಇರಬಹುದು.ಪರಿಸರಕ್ಕೆ ಹಾನಿಕಾರಕವಾಗಿದ್ದ ಇವುಗಳನ್ನ ಜಾರಿಗೆ ತರುವಲ್ಲಿ ಯಾವ ಲಾಭಿಗೂ  ಮಣಿಯದೆ ತಡೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.ಬಳ್ಳಾರಿ ಹಾಳಾಗಿರೋದು ಸಾಲೋದಿಲ್ಲ ಅಂತ, ಯಡ್ಡಿ ಸರ್ಕಾರ ರಕ್ಷಿತಾ ಅರಣ್ಯದಲ್ಲೂ  ಗಣಿಗಾರಿಕೆ ಮಾಡಲು ಅನುಮತಿ ಕೊಟ್ಟು, ಇದಕ್ಕೆ ಕೇಂದ್ರದ ಒಪ್ಪಿಗೆಯು ಇದೆ ಅಂದಾಗ ಗರಂ ಆಗಿ ಪ್ರತಿಕ್ರಿಯಿಸಿದ ಜೈ ರಾಮ್ ರಮೇಶ್, ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಅಂತ ರಾಜ್ಯ ಸರ್ಕಾರಕ್ಕೆ ತಪರಾಕಿ ಹಾಕಿದ್ದರು. 

ತೀರ ಮೊನ್ನೆ ಮೊನ್ನೆ ಭೋಪಾಲ್ ಕಾನ್ವೊಕೇಷನ್ನಲ್ಲಿ ಗೌನ್ ಕಳಚಿ ಅದನ್ನ ಗುಲಾಮಗಿರಿಯ ಸಂಕೇತ ಅಂದಾಗಲು ಜನ ಖುಷಿ ಪಟ್ಟಿದ್ದರು, ಇಂತ  ಜೈ ರಾಮ್ ಚೈನಾಗೆ ಹೋಗಿ ತಮ್ಮ ಸಂಪುಟದ ಮತ್ತೊಬ್ಬ ದಕ್ಷ 'ಚಿದಂಬರಂ' ಅವರ ಸಚಿವಾಲಯದ ಕಾರ್ಯ ವೈಖರಿಯ ಬಗ್ಗೆ  common ಸೆನ್ಸ್ ಇಲ್ಲದವರಂತೆ ಮಾತಾಡಿದ್ದು ನೋಡಿ ಬೇಸರವಾಯಿತು.ಅವರನ್ನು ಕರೆಸಿ ಗದರಿಸಿ ಪ್ರಧಾನಿ  ಮತ್ತೆ ಇನ್ಯಾರು ಇಂತ ಕೆಲಸಕ್ಕೆ ಕೈ ಹಾಕಲು ಯೋಚಿಸುವಂತೆ ಮಾಡಿದ್ದಾರೆ.ಆದರೆ ಈ ವಿದ್ಯಮಾನಗಳಿಂದ ವಿಚಲಿತರಾಗಿ ರಾಜಿನಾಮೆ ನೀಡಲು ಹೊರಟಿದ್ದರು ಜೈ ರಾಮ್ ಅನ್ನೋ ಸುದ್ದಿ ಕೂಡ ಬಂದಿತ್ತು,ಅದನ್ನು ತಿರಸ್ಕರಿಸಿ ಪ್ರಧಾನಿ ಒಳ್ಳೆಯ ನಿರ್ಧಾರ ತಳೆದಿದ್ದಾರೆ. ಅದೇನೇನೋ ಕಂತ್ರಿ ಕೆಲಸ ಮಾಡಿ ಮಂತ್ರಿಗಳಾಗಿ ಮೂರು ಬಿಟ್ಟು ಕುರ್ಚಿ ಹಿಡಿದು ಕುಳಿತಿರುವ ಕೆಲಸಕ್ಕೆ ಬಾರದ ಮಂತ್ರಿಗಳ ನಡುವೆ , ಜನ ಪರ ನಿಲುವು ತಳೆಯುವ ಜೈ ರಾಮ್ ರಮೇಶ್ ಅಂತವರು ನಮಗಾಗಿ ಅಲ್ಲದಿದ್ದರೂ 'ಪರಿಸರ' ಖಾತೆಗಾಗಿಯಾದರು ಕುರ್ಚಿಯಲ್ಲಿ ಇರಬೇಕು .

(ಚಿತ್ರ ಕೃಪೆ : http://beta.thehindu.com)

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಶೆಟ್ರೇ, ಮೊದಲಿಗೆ ಜೈರಾಮ್ ರಮೇಶ್ ಚಿತ್ರ ಕಾಣ್ತಾ ಇಲ್ಲ! ಎರಡನೆಯದಾಗಿ ಜೈರಾಮ್ ರಮೇಶ್, ಪ್ರಬುಧ್ಧ ಮ೦ತ್ರಿಗಳು. ವಿಶ್ಲೇಷಣೆ ಚೆನ್ನಾಗಿದೆ.ಆದರೆ ಅವರಿಗೆ ಪುನ: ರಾಜ್ಯಸಭೆ ಪ್ರವೇಶಿಸಲು ಆ೦ಧ್ರಪ್ರದೇಶ ಕಾ೦ಗ್ರೆಸ್ ನಲ್ಲಿಯೇ ತೀವ್ರ ವಿರೋಧ ಇದೆಯ೦ತೆ? ಅದರ ಬಗ್ಗೆ ನಿಮ್ಮಲ್ಲಿ ಮಾಹಿತಿ ಇದೆಯೇ?ಅಥವಾ ಇದೇ ವಿಚಾರಕ್ಕೋ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರ ಯಾಕೆ ಕಾಣ್ತಾ ಇಲ್ವೋ ಗೊತ್ತಿಲ್ಲ ! ಸಂಪದ ಚಿತ್ರ ಪುಟದಲ್ಲೇ upload ಮಾಡಿ ಅದನ್ನ ಇಲ್ಲಿ ಲಿಂಕ್ ಮಾಡಿದ್ದೇನೆ.ನಿರ್ವಾಹಕರೆ ಹೇಳಬೇಕು. >>ಅವರಿಗೆ ಪುನ: ರಾಜ್ಯಸಭೆ ಪ್ರವೇಶಿಸಲು ಆ೦ಧ್ರಪ್ರದೇಶ ಕಾ೦ಗ್ರೆಸ್ ನಲ್ಲಿಯೇ ತೀವ್ರ ವಿರೋಧ ಇದೆಯ೦ತೆ? ಈ ವಿಷಯದ ಬಗ್ಗೆ ಮಾಹಿತಿಯಿಲ್ಲ.ಬಹುಷಃ ಉಳಿದೆಲ್ಲ ಖಾದಿಗಲಿಗಿಂತ ವಿಭಿನ್ನವಾಗಿ ಕೆಲಸ ಮಾಡುವುದನ್ನ ಸಹಿಸಲಾಗದವರು ವಿರೋಧಿಸುತ್ತಿರಬೇಕು.ಬಿ.ಟಿ ಬದನೆಯ ಗಲಾಟೆಯ ನಂತರದ ದಿನಗಳಲ್ಲಿ, ಇಡಿ ಸಂಪುಟದಲ್ಲಿ ಪ್ರಧಾನಿಯೊಬ್ಬರನ್ನ ಬಿಟ್ಟರೆ ಇನ್ಯಾವ ಸಹುದ್ಯೋಗಿಯು ನನ್ನ ಬೆಮ್ಬಳಕ್ಕಿಲ್ಲ ಅಂತ ಅಲವತ್ತುಕೊಂಡಿದ್ದರು ಇದೆ ಜೈ ರಾಮ್ ರಮೇಶ್. ನನ್ನೀ ನಾವಡ ಅವರೇ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಯರಾಂ ರಮೇಶ ಒಳ್ಳೆಯ ಕನ್ನಡ ಮಾತನಾಡುತ್ತಾರೆ! ಬಿಟಿ ಬದನೆಯ ಬಗೆಗಿನ ಅವರ ನಿಲುವು ಬಂಬಲಿಸಬೆಕಾದದ್ದು. ಆದರೆ ಬಿಟಿ ಭೂತ ಅಷ್ಟು ಸುಲಭವಾಗಿ ಬೆಂಬಿಡುವಂತದ್ದಲ್ಲ. ಹಿಂಬಾಗಿಲಿನಿಂದ ಒಳತರುವ ಮೊಗಸು ನಡೆಯುತಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಹರ್ಷ. ಹಣಕ್ಕಾಗಿ ತಮ್ಮನ್ನು ಮಾರಿಕೊಂಡವರು ಅದನ್ನ ನಮ್ಮ ಮೇಲೆ ಹೇರದೆ ಬಿಡುವುದಿಲ್ಲ.ಹೇರದಿದ್ದರೆ ಅವರಿಗೆ ಸಿಗಬೇಕಾದದ್ದು ಸಿಗುವುದಿಲ್ಲ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.