ಮೊಬೈಲಿನ ಬಗ್ಗೆ ಎಲ್ಲರು ತಿಳಿಯಲೇ ಬೇಕಾದ ೪ ವಿಷಯಗಳು

5

ಗೆಳೆಯ ಕಳಿಸಿದ ಈ-ಮೇಲ್ನಲ್ಲಿ ಇದ್ದ , ಉಪಯುಕ್ತ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳುತಿದ್ದೇನೆ.
ಮೊಬೈಲ್ ಅನ್ನು ಕೇವಲ ಮಿಸ್ಸಕಾಲ್ ಕೊಡಲು , ಇಲ್ಲ ಬಸ್ಸಿನಲ್ಲಿ ಹೋಗುವಾಗ ಜೋರಾಗಿ ಮಾತಾಡುತ್ತ ಪಕ್ಕದಲ್ಲಿ ಕುಳಿತವರಿಗೆ ಹಿಂಸೆ ಕೊಡಲು, ಇಲ್ಲ ವಾಹನ ಚಲಾಯಿಸುವಾಗ ಕುತ್ತಿಗೆಯನ್ನು ವಕ್ರವಾಗಿ ಮಾಡಿಕೊಂಡು ಮಾತನಾಡಲು ಬಳಸುವವರೇ ಈ ಕೆಳಗಿನ ೪ ಉಪಯುಕ್ತ ಅಂಶಗಳನ್ನು ಒಮ್ಮೆ ಓದಿ.
೧. 112 ಈ ನಂಬರ್ ಅನ್ನು ಪ್ರಪಂಚದ ಎಲ್ಲ ಮೊಬೈಲ್ ನಲ್ಲೂ ಎಮರ್ಜೆನ್ಸಿ ನಂಬರ್ ಅಂತ ಬಳಸುತ್ತಾರೆ.
ನಿಮ್ಮ ಮೊಬೈಲ್ ನೆಟ್ವರ್ಕ್ ಇಲ್ಲದಂತಹ ಜಾಗದಲ್ಲಿ 'ಎಮರ್ಜೆನ್ಸಿ' ಯಂತಹ ಸಂಧರ್ಭಗಳಲ್ಲಿ ಬಳಸಬಹುದು.
ಇನ್ನೊಂದು ಸೋಜಿಗವೆಂದರೆ 112 ಸಂಖೆಯನ್ನು ನಿಮ್ಮ ಮೊಬೈಲ್ ಲಾಕ್ ಆಗಿದ್ದಗಾಲು ಡಯಲ್ ಮಾಡಬಹುದು.

೨. ನಿಮ್ಮ 'ಕಾರ್' ಗೆ ರಿಮೋಟ್ ಕೀ ವ್ಯವಸ್ಥೆ ಇದ್ದರೆ , ನೀವು ಕೀ ಅನ್ನು ಕಳೆದುಕೊಂಡಿದ್ದಿರಿ , ಇಲ್ಲವೇ ಕಾರಿನ ಒಳಗೆ ಉಳಿದುಬಿಟ್ಟಿದೆ, ಅಂತಹ ಸಮಯದಲ್ಲಿ ನಿಮ್ಮ ಬದಲಿ ಕೀಲಿ ಮನೆಯಲ್ಲಿದ್ದರೆ, ಮನೆಯಲ್ಲಿ ಇರುವವರಿಗೆ ಕರೆ ಮಾಡಿ. ನಂತರ ಕಾರಿನಿಂದ ಹತ್ತಿರ ನಿಮ್ಮ ಮೊಬೈಲ್ ಅನ್ನು ತನ್ನಿ , ಮನೆಯಲ್ಲಿ ಇರುವ ಕೀಲಿಯ ಗುಂಡಿಯನ್ನು ಅವರ ಮೊಬೈಲಿನ ಬಳಿ ಬಂದು ತಂದು ಒತ್ತಲು ಹೇಳಿ. ನಿಮ್ಮ ಕಾರಿನ ಲಾಕ್ ತೆರೆಯುತ್ತದೆ.
೩. ನಿಮ್ಮ ಮೊಬೈಲ್ ಅನ್ನು ಚಾರ್ಜ್ ಮಾಡಲು ಮರೆತುಬಿಟ್ಟಿದ್ದಿರ, ಬ್ಯಾಟರಿ ಎಲ್ಲ ಮುಗಿದು ಮೊಬೈಲ್ ಮಲಗುವ ಸ್ಥಿತಿಗೆ ಬಂದಾಗ *3370# ಒತ್ತಿ ಮೊಬೈಲ್ಗೆ ಅರ್ಧ ಜೀವ ಬರುತ್ತೆ.
೪.ನಿಮ್ಮ ಮೊಬೈಲ್ ಅನ್ನು ಯಾರಾದ್ರೂ ಕದ್ದರೆ , ಅವರಿಗೆ ಹಿಡಿ ಶಾಪ ಹಾಕುವ ಬದಲು ಹೀಗೆ ಮಾಡಬಹುದು. ನಿಮ್ಮ ಮೊಬೈಲಿನಲ್ಲಿ * # 0 6 # ಪ್ರೆಸ್ ಮಾಡಿದರೆ , 15 ಅಂಕೆಗಳ ಸಂಖ್ಯೆಯ ಕಾಣುತ್ತದೆ, ಆ ಸಂಖ್ಯೆ ನಿಮಗೆ ತಿಳಿದಿದ್ದರೆ, ನಿಮ್ಮ 'ಸರ್ವಿಸ್ ಪ್ರೋವೈಡ್' ಮಾಡೋವ್ರಿಗೆ ಈ ಸಂಖ್ಯೆ ಹೇಳಿದರೆ , ಮೊಬೈಲ್ ಲಾಕ್ ಆಗುತ್ತೆ.
ನಮ್ಮ ಮೊಬೈಲ್ ವಾಪಸ್ ಬರೋದಿಲ್ಲವಾದರು , ಕದ್ದವನಿಗು ಉಪಯೋಗವಾಗುವುದಿಲ್ಲ :)
ಎಲ್ಲರು ಹೀಗೆ ಮಾಡಿದರೆ ಯಾರು ಕದಿಯುವ ಸಾಹಸ ಮಾಡುವುದು ಇಲ್ಲ, ಅಲ್ವಾ.
(ಹಿಂಗೆ ಸುಮ್ನೆ : ನಾ ಬರೆದಿರೋದರಲ್ಲಿ ಬಹಳ ಆಂಗ್ಲ ಭಾಷೆ ಬಳಸಿದ್ದೇನೆ, ಮನ್ನಿಸಿ)

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ರಾಕೇಶ್,
ಒಳ್ಳೇ ಮಾಹಿತಿ. ಇದು ಬಹಳ ಹಿಂದೆ (ಅಂದರೆ ಸುಮಾರು ಎಂಟು-ಹತ್ತು ತಿಂಗಳು ಇರಬಹುದು) ಮಿಂಚಂಚೆ ಮೂಲಕ ಬಂದಿತ್ತು.
ಮತ್ತೆ ನೆನಪಿಸಿದ್ದಕ್ಕೆ ಧನ್ಯವಾದಗಳು.

ಇಂತಿ ನಿಮ್ಮ,
ಅನಿಲ್ ರಮೇಶ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆಯ ಮಾಹಿತಿ ರಾಕೇಶ,
ನನ್ನಿ.

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದೊಂದು almost ಕುಹಕ (hoax) *
೧. ಅರೆ ಸುಳ್ಳು.
೨. ಸಾಧ್ಯವಿಲ್ಲ ( ಕಾರ್ ರಿಮೋಟ್ ಕೀ ವ್ಯವಸ್ಥೆ ರೇಡಿಯೋ ಅಲೆಗಳನ್ನು ಉಪಯೋಗಿಸಿ ಕೆಲಸ ಮಾಡುತ್ತದೆ ಹೊರತು, ಧ್ವನಿಯಿಂದಲ್ಲ)
೩. ತಪ್ಪು.
೪. ನನ್ನ ಮೊಬೈಲ್ ಕಳೆದಾಗ ಸರ್ವಿಸ್ ಪ್ರೋವೈಡ್‌ರಿಗೆ ಇದರ ಬಗ್ಗೆ ಕೇಳಿದ್ದೆ. ಈ ವ್ಯವಸ್ಥೆ ಭಾರತದಲ್ಲಿಲ್ಲ ಅಂತ ಉತ್ತರ ಬಂತು.

*ಪೂರ್ತಿ ಮಾಹಿತಿಗೆ ಈ ಕೊಂಡಿ ಚಿಟುಕಿಸಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಕೇಶ್ ಶೆಟ್ಟಿ

ಶ್ರೀನಿವಾಸ್
ನೀವು ಕೊಟ್ಟಿರೋ ಕೊಂಡಿಯಲ್ಲಿ, ನಾನು ಇಲ್ಲಿ ಬರೆದಿರುವುದನ್ನೇ ಕೊಟ್ಟಿದ್ದಾರೆ.
೧.'ಅರೆ ಸುಳ್ಳು' ಅಲ್ಲ , ನಾನು ಇದನ್ನು ಪ್ರಯತ್ನಸಿ ನೋಡಿದ್ದೇನೆ. ನಿಮ್ಮ ಸೆಲ್ ಲಾಕ್ ಮಾಡಿ ೧೧೨ ಡಯಲ್ ಮಾಡಿ ನೋಡಿ.
೨.@"ಕಾರ್ ರಿಮೋಟ್ ಕೀ ವ್ಯವಸ್ಥೆ ರೇಡಿಯೋ ಅಲೆಗಳನ್ನು ಉಪಯೋಗಿಸಿ ಕೆಲಸ ಮಾಡುತ್ತದೆ ಹೊರತು, ಧ್ವನಿಯಿಂದಲ್ಲ" , ಹೌದು. ಆದರೆ ಇಲ್ಲಿ ಲಾಕ್ ಓಪನ್ ಆಗೋದು ಅದೇ ರೇಡಿಯೋ ಅಲೆಗಳನ್ನು ಉಪಯೋಗಿಸಿಯೇ ಹೊರತು ಧ್ವನಿಯಿಂದಲ್ಲ. (ನಿಮಗೆ ಗೊತ್ತಿರಬಹುದು , ಪೆಟ್ರೋಲ್ ಬಂಕ್ಗಳಲ್ಲಿ , ಮೊಬೈಲ್ ಬಳಸಬೇಡಿ ಅನ್ನುತ್ತಾರೆ , ಯಾಕೆ ಅಂದ್ರೆ ಧ್ವನಿಯಿಂದಲ್ಲ ಅದು ರೇಡಿಯೋ ಅಲೆಗಳಿಂದ ಇಂದನ ಟ್ಯಾಂಕ್ಗೆ ಬೆಂಕಿ ಆಕಸ್ಮಿಕವಾಗುವ ಸಂಭವ ಇರುತ್ತದೆ ಎಂದು.
೩ ಹಾಗು ೪ ರ ಬಗ್ಗೆ ನನ್ನಲ್ಲಿ ಅಷ್ಟು ಮಾಹಿತಿಯಿಲ್ಲ.

ರಾಕೇಶ್ ಶೆಟ್ಟಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote]ಇನ್ನೊಂದು ಸೋಜಿಗವೆಂದರೆ 112 ಸಂಖೆಯನ್ನು ನಿಮ್ಮ ಮೊಬೈಲ್ ಲಾಕ್ ಆಗಿದ್ದಗಾಲು ಡಯಲ್ ಮಾಡಬಹುದು.[/quote]
ಸರಿ.
[quote]112 ಈ ನಂಬರ್ ಅನ್ನು ಪ್ರಪಂಚದ ಎಲ್ಲ ಮೊಬೈಲ್ ನಲ್ಲೂ ಎಮರ್ಜೆನ್ಸಿ ನಂಬರ್ ಅಂತ ಬಳಸುತ್ತಾರೆ.[/quote]
"ಪ್ರಪಂಚದ ಎಲ್ಲ ಮೊಬೈಲ್ ನಲ್ಲೂ" ಅಲ್ಲ.

However, because '112' is primarily integrated with the GSM network, it may not work if the phone is connected to another type of network such as CDMA. The Australian Government webpage also notes:
In Australia, it is a mandatory obligation for '112' to be built into GSM mobile phones. While this is not the case with CDMA mobile phones - as the international standards for CDMA do not require '112' - some mobile carriers have enabled '112' access in their CDMA mobile phones. However, this service does not have the extra capabilities, such as roaming and PIN override, that '112' has on GSM networks. For further details regarding '112' access on a CDMA phone, consumers should talk to their mobile service providers.

[quote]ನಿಮ್ಮ ಮೊಬೈಲ್ ನೆಟ್ವರ್ಕ್ ಇಲ್ಲದಂತಹ ಜಾಗದಲ್ಲಿ 'ಎಮರ್ಜೆನ್ಸಿ' ಯಂತಹ ಸಂಧರ್ಭಗಳಲ್ಲಿ ಬಳಸಬಹುದು.[/quote]
ಮೊಬೈಲ್ ನೆಟ್ವರ್ಕ್ ಇಲ್ಲದಂತಹ ಜಾಗದಲ್ಲಿ ಬಳಸಲು ಸಾಧ್ಯವಿಲ್ಲ. 112 ನಿಮ್ಮ ಸರ್ವಿಸ್ ಪ್ರೊವೈಡರ್ ಅಲ್ಲದೇ ಎಲ್ಲ ಸರ್ವಿಸ್ ಪ್ರೊವೈಡರ್‌ಗಳಿಗೆ ಕನೆಕ್ಟ್ ಆಗಲು ಪ್ರಯತ್ನಿಸುತ್ತದೆ ಹೊರತು ಯಾವದೇ ನೆಟ್ವರ್ಕ್ ಇಲ್ಲದಂತಹ ಜಾಗದಲ್ಲಿ ಸಾಧ್ಯವಿಲ್ಲ.

ಅದಕ್ಕೇ ಅದನ್ನು ಅರೆ (ಅರ್ಧ) ಸುಳ್ಳು ಎಂದಿದ್ದು.

[quote]ಆದರೆ ಇಲ್ಲಿ ಲಾಕ್ ಓಪನ್ ಆಗೋದು ಅದೇ ರೇಡಿಯೋ ಅಲೆಗಳನ್ನು ಉಪಯೋಗಿಸಿಯೇ ಹೊರತು ಧ್ವನಿಯಿಂದಲ್ಲ. [/quote]
ಯಾವ ರೇಡಿಯೋ ಅಲೆಗಳು? ಮೊಬೈಲ್‌ದ್ದೆ? ಲಾಕ್ ಓಪನ್ ಆಗೋದು ಕಾರ್ ರಿಮೋಟ್ ಕೀಯ ಕೋಡ್ ಸಿಗ್ನಲ್‌ನಿಂದ ಮಾತ್ರ. ಮೊಬೈಲ್‌ ಕಳಿಸೋದು ಕಾರ್ ರಿಮೋಟ್ ಕೀಯ ಧ್ವನಿ ಮಾತ್ರ, ಕೋಡ್ ಸಿಗ್ನಲ್‌ನ್ನಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಕೇಶ್ ಶೆಟ್ಟಿ
ಶ್ರೀನಿವಾಸ್
೧೧೨ ಬಗ್ಗೆ ಒಪ್ಪೋಣ , ಆದರೆ
@"ಯಾವ ರೇಡಿಯೋ ಅಲೆಗಳು? ಮೊಬೈಲ್‌ದ್ದೆ? ಲಾಕ್ ಓಪನ್ ಆಗೋದು ಕಾರ್ ರಿಮೋಟ್ ಕೀಯ ಕೋಡ್ ಸಿಗ್ನಲ್‌ನಿಂದ ಮಾತ್ರ. ಮೊಬೈಲ್‌ ಕಳಿಸೋದು ಕಾರ್ ರಿಮೋಟ್ ಕೀಯ ಧ್ವನಿ ಮಾತ್ರ, ಕೋಡ್ ಸಿಗ್ನಲ್‌ನ್ನಲ್ಲ."

ಸರ್, ಲಾಕ್ ಓಪನ್ ಆಗೋದು ಕಾರ್ ರಿಮೋಟ್ ಕೀಯ ಕೋಡ್ ಸಿಗ್ನಲ್‌ನಿಂದ ತಾನೆ, ಅದು ಒಂದು ರೀತಿಯ ರೇಡಿಯೋ ಅಲೆ , ಮೊಬೈಲ್ನಿಂದ ಬರೋದು ರೇಡಿಯೋ ಸಿಗ್ನಲ್ , ನೀವು ಮೊಬೈಲಿನ ಬಳಿ ಇಡಿದು ಪ್ರೆಸ್ ಮಾಡಿದಾಗ ಅದೇ ಅಲೆ ಮೊಬೈಲ್ನ ಮೂಲಕ ಟ್ರಾನ್ಸ್ಫೇರ್ ಆಗುತ್ತೆ ಅಲ್ವಾ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote]ನೀವು ಮೊಬೈಲಿನ ಬಳಿ ಇಡಿದು ಪ್ರೆಸ್ ಮಾಡಿದಾಗ ಅದೇ ಅಲೆ ಮೊಬೈಲ್ನ ಮೂಲಕ ಟ್ರಾನ್ಸ್ಫೇರ್ ಆಗುತ್ತೆ ಅಲ್ವಾ[/quote]
ಖಂಡಿತ ಇಲ್ಲ ರಾಕೇಶ್. ಕಾರ್ ರಿಮೋಟ್ ಕೀ ಏನಾದ್ರು ಶಬ್ದ ಮಾಡಿದ್ರೆ, ಆ ಧ್ವನಿ ಮಾತ್ರ ರೇಡಿಯೋ ಅಲೆಯಾಗಿ ಬದಲಾಗಿ ಪ್ರಸಾರ ಆಗುತ್ತೆ. ಕಾರ್ ರಿಮೋಟ್ ಕೀಯ ಕೋಡ್ ಸಿಗ್ನಲ್‌ ಪ್ರಸಾರ ಆಗಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಕೇಶ್ ಶೆಟ್ಟಿ

ಸರಿ, ಇದನ್ನ ನಾನು ಪ್ರಯತ್ನಿಸಿ ನೋಡಿ ಹೇಳುತ್ತೇನೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಪೆಟ್ರೋಲ್ ಬಂಕ್ಗಳಲ್ಲಿ , ಮೊಬೈಲ್ ಬಳಸಬೇಡಿ ಅನ್ನುತ್ತಾರೆ , ಯಾಕೆ ಅಂದ್ರೆ ಧ್ವನಿಯಿಂದಲ್ಲ ಅದು ರೇಡಿಯೋ ಅಲೆಗಳಿಂದ ಇಂದನ ಟ್ಯಾಂಕ್ಗೆ ಬೆಂಕಿ ಆಕಸ್ಮಿಕವಾಗುವ ಸಂಭವ ಇರುತ್ತದೆ ಎಂದು"

ಮೊಬೈಲ್ ಬಳಸುವಾಗ ಉಂಟಾಗುವ ಸೂಕ್ಷ್ಮ ಕಿಡಿಯಿಂದ ಪೆಟ್ರೋಲ್ ಆವಿ ಇರುವ ಬಂಕ್ ಪರಿಸರದಲ್ಲಿ ಅಪಾಯ ಸಂಭವಿಸಬಹುದು ಎನ್ನುವುದು ಇದರ ಹಿಂದಿನ ಉದ್ದೇಶ ರಾಕೇಶ್!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಕೇಶ್ ಶೆಟ್ಟಿ

ಪ್ರೇಮ್
ನೀವು ಹೇಳಿದ್ದು ಸರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಕೇಶ್ ರವರೆ ನಿಮ್ಮ ಈ ಮೊಬೈಲ್ ಮಾಹಿತಿ ಗೆ ನನ್ನ ಧನ್ಯವಾದಗಳು. ಮೊದಲ ಎರಡು ಮಾಹಿತಿ ಗಳು ನನಗೆ ಗೊತ್ತಿರಲಿಲ್ಲ. ತುಂಬ ಉಪಯುಕ್ತ ಮಾಹಿತಿಯನ್ನೇ ನೀಡಿದ್ದೀರ.
ಕನ್ನಡದ ಕುವರಿ
ದಿವ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಕೇಶ್ ಶೆಟ್ಟಿ
ವಿದ್ಯಾ
ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಕೇಶ್ ರವರೆ ನನ್ನ ಹೆಸರು ವಿದ್ಯಾ ಅಲ್ಲ ದಿವ್ಯ :)
ಕನ್ನಡದ ಕುವರಿ
ದಿವ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಕೇಶ್ ಶೆಟ್ಟಿ

ಓಹೋ ಸ್ವಲ್ಪ ಆ ಕಡೆ ಈ ಕಡೆ ಆಗಿದೆ :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಕೇಶ್ ನೀವು ಹೇಳಿರುವ ವಿಚಾರಗಳು ಸರಿ ಅಥವಾ ತಪ್ಪಿನ ಬಗ್ಗೆ ಬರೆಯುತ್ತಿಲ್ಲ. *೩೩೭೦॑ ಬರೇ ನೊಕಿಯಾ ಫೊನಿಗೆ ಮಾತ್ರ ಬಳಕೆಯಾಗುತ್ತದೆ. ಅದು ಎಲ್ಲ ಬಗೆಯ ನೊಕಿಯಾ ಮಾಡೆಲ್ಗಳಿಗೆ ಅಲ್ಲ.

ಕನ್ನಡವೇ ತಾಯ್ನಾಡಿಯು, ಕರುನಾಡು ತಾಯ್ನಾಡು, ಕನ್ನಡಿಗನು ನೀನೆಂಬ ಅಭಿಮಾನವಿರಲಿ.
ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಹಿತಿಗೆ ಧನ್ಯವಾದಗಳು, ಆದರೆ 112ಗೆ ಕರೆ ಮಾಡಲು ಯಾವುದಾದರು ಒಂದು ಜಿ.ಎಸ್.ಎಮ್(bsnl, airtel, hutch, spice,ನಮ್ಮ ರಾಜ್ಯದಲ್ಲಿ ಇವಿಷ್ಟೇ ಸದ್ಯಕ್ಕೆ, ಬೇರೆಡೆ ಇನ್ನೂ ಹಲವಿದೆ) ನೆಟ್ವರ್ಕ್ ಇರಲೇಬೇಕು, ಅಥವಾ ನಿಮ್ಮದು ಸಿ.ಡಿ.ಎಮ್ಎ ಮೊಬೈಲ್ (reliance, tata indicom)ಆಗಿದ್ದರೆ ಅದರ ತರಂಗಾತರವಿದ್ದರಷ್ಟೇ ಕರೆ ಮಾಡಲು ಸಾದ್ಯ...
೨ನೇ ಮಾಹಿತಿ, ಅದ್ಬುತವೆ ಸರಿ, ನನಗೆ ಗೊತ್ತಿರಲಿಲ್ಲ, ದನ್ಯವಾದಗಳು
೩ನೇಯದು ಬರಿ ನೋಕಿಯಾ ಮೊಬೈಲ್ ಗಳಲ್ಲಿ ಮಾತ್ರ ಇದು ಲಭ್ಯ :)

೪ನೇಯದು ನೀವು ಹೇಳಿದಷ್ಟು ಸುಲಭವಲ್ಲ, ಸಿಂ ನಂಬರನ್ನು ಬರೆದಿಟ್ಟುಕೊಳ್ಳುವುದು ಒಳ್ಳೆಯದು, ಮೊಬೈಲ್ ಬಳಕೆದಾರರು ತಮ್ಮ ಮೊಬೈಲ್ ಸುರಕ್ಷತೆಗೆ ಹೆಚ್ಚಿನ ಗಮನ ಕೊಡದೆ ಇರುವುದೇ ಕಳ್ಳರಿಗೆ ವರದಾನವಾಗಿದೆ, ಮೊಬೈಲ್ ನ ಸುರಕ್ಷತೆಗಾಗಿ ಸಿಂ ಪಿನ್ ರಿಕ್ವೆಷ್ಟ್ ಆನ್ ಮಾಡಿಕೊಂಡರೆ, ಕಳುವಾದರೆ ಕಳ್ಳ ಒಮ್ಮೆ ಮೊಬೈಲನ್ನು ಸ್ವಿಚ್ ಆಪ್ ಮಾಡಿಕೊಂಡರೆ ಪುನಃ ಉಪಯೋಗಿಸಲು ೪ ಅಂಖ್ಯೆಯ ಗುಪ್ತಸಂಖೆ ಬೇಕಾಗುತ್ತದೆ, ವಿ.ಸೂ ಈ ಸೇವೆ ಬಳಸಲು ನಿಮ್ಮ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ ಪಿನ್ ಸಂಖ್ಯೆ, ಪಿಯೂಕೆ ಸಂಖ್ಯೆಯನ್ನು ಬರೆದುಕೊಂಡು ಸೇವೆ ಬಳಸಿಕೊಳ್ಳುವ ವಿದಾನವನ್ನು ಅವರೊಂದಿಗೆ ಮಾತನಾಡಿ ತಿಳಿದುಕೊಳ್ಳಿ

ಸರ್ವೀಸ್ ಪ್ರೋವಯ್ಡರ್ ಗಳ ಗ್ರಾಹಕ ಸೇವಾ ಕೇಂದ್ರದೊಂದಿಗೆ ಏಗಿದವರಿಗೆ ಗೊತ್ತು
ನೀವು ನಿಮ್ಮ ಮೋಬೈಲ್ ಕಳೆದುಹೋಗಿದೆ ಎಂದು ಹತ್ತಿರದ ಪೋಲಿಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿ ಅದರ ಪ್ರೂಪನ್ನು ನಿಮ್ಮ ಸೇವಾದಾತರಿಗೆ( ಮೊಬೈಲ್ ಕಂಪನಿಗೆ) ತಲುಪಿಸಿದರೆ.. ಮೊಬೈಲ್ ಲಾಕ್ ಮಾಡುತ್ತಾರೆ, ಜೊತೆಗೆ ಸಿಂ ಅನ್ನು ಕೂಡಾ ತಕ್ಷಣವೆ ಬ್ಲಾಕ್ ಮಾಡಿಸಿ ಮತ್ತೆ ಅದೇ ನಂಬರಿನ ಡೂಪ್ಲಿಕೇಟ್ ಸಿಂ ಕಾರ್ಡನ್ನು ಪಡೆದುಕೊಳ್ಳಿ..

ಮೊಬೈಲ್ ಬಗ್ಗೆ ನಾನೊಂದು ಬ್ಲಾಗ್ ಆರಂಭಿಸಿದ್ದೇನೆ ಸಮಯ ಸಿಕ್ಕಾಗ ಓದಿ ಪ್ರತಿಕ್ರಿಯಿಸಿ..http://www.adibedur.wordpress.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಹ ಎಂತ ಉಪಯುಕ್ತ ಮಾಹಿತಿ... ಮೊಬೈಲ್ ಉಪಯೋಗಿಸಿ ಹೇಗೆಲ್ಲಾ ಮಾಡಬಹುದು ಅಂತ ಗೊತ್ತಿರಲಿಲ್ಲ..

ಧನ್ಯವಾಧಗಳು....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲಾ ಓ ಕೆ ಆದರೆ *3370# ಬಳಸಿ ಬ್ಯಾಟರಿ ಚಾರ್ಜ್ ಆಗುವುದನ್ನು ಅನೇಕ ಮೊಬೈಲ್ ನಲ್ಲಿ ಬಳಸಿದ್ದರೂ ಸಾಧ್ಯವಾಗಿಲ್ಲ.

ಪ್ರೀತಿಯಿಂದ ನಿಮ್ಮವ,
ಮಾ.ಕೃ.ಮಂಜು
http://makrumanju.blogspot.com/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಮಾಹಿತಿಗಳು ಮೊಬೈಲ್ ಜನಪ್ರಿಯಗೊಂಡಾಗ ಎಲ್ಲ ಮಿಂಚೆಗಳಲ್ಲು ಸುಳಿದಾಡಿತ್ತು. IMIE ಒಂದನ್ನು ಬಿಟ್ಟು ಮತ್ತೆಲ್ಲ ಮಾಹಿತಿಗಳು ಸುಳ್ಳು ರಾಕೇಶ್ ಸುಳ್ಳು ಹೇಳ್ತಾ ಇದರೆ ಎಂದು ಇದರ ಅರ್ಥವಲ್ಲ. ಅವರಿಗೆ ಸಿಕ್ಕ ಮಾಹಿತಿ ಸುಳ್ಳು. ಕಾರಿನ ಬಾಗಿಲು ತೆಗೆಯುವದಂತು ಅಯ್ಯೂ ೧೦೦೦ ಪ್ರತಿಶತ ಸುಳ್ಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.