ಮಂಗಳೂರು ಬನ್ಸ್ ಮತ್ತೆ ಬಿಸಿ ಬಿಸಿ ಚಹಾ!

3.5

ಷ್ಟೊತ್ತಿಗೆ ಊರಿನಲ್ಲಿ ಇದ್ದಿದ್ದರೆ ಎಲ್ಲರೊಂದಿಗೆ ಒಟ್ಟಿಗೆ ಊಟ ಮಾಡಿ,ಹರಟಿ ನಿದ್ದೆ ಹೋಗುತಿದ್ದೆ.ಈಗ ಬೆಂಗಳೂರಿನ ರೂಮಿನಲ್ಲಿ ಕಂಪ್ಯೂಟರ್ ಪರದೆಯ ಮುಂದೆ ಒಂಟಿಯಾಗಿ ಕುಳಿತವ, ಮುತ್ತಿನಂತ ೩ ದಿನದ ರಜೆಯನ್ನ ಹಾಳು ಮಾಡಿ ಊರಿಗೆ ಹೋಗದಂತೆ ತಡೆದ ಮ್ಯಾನೇಜರ್ಗೆ ಹಿಡಿ ಶಾಪ ಹಾಕಿ ಇದನ್ನ ಬರಿತಿದ್ದೀನಿ.

ಇವತ್ತ್ ಬೆಳಿಗ್ಗೆ ಮಲ್ಲೇಶ್ವರಮ್ಮಿನ ‘ಹಳ್ಳಿ ಮನೆ’ಯಲ್ಲಿ ‘ಮಂಗಳೂರು ಬನ್ಸ್-ಬಿಸಿ ಬಿಸಿ ಚಹಾ’ ಸ್ವಾಹ ಮಾಡಿದವನಿಗೆ ನೆನಪಾಗಿದ್ದು, ಮನೆಯಲ್ಲಿದ್ದಗಾ,ಅಮ್ಮ  ಏನೇ ತಿಂಡಿ ಮಾಡಿದ್ರು ‘ದಿನ ಏನ್ ತಿಂಡಿ ಅಂತ ಮಾಡ್ತಿರಮ್ಮ, ನೀವೇ ತಿನ್ಕೊಳ್ಳಿ ನಂಗ್ ಬೇಡ’ ಅಂತ ಕಮೆಂಟು ಹೊಡೆದು ಹೋಗ್ತಿದ್ದೆ.ಆದ್ರೆ ಈಗ ಬೆಂಗಳೂರಿನಲ್ಲಿ ಹೋಟೆಲ್ನವನಿಗೆನಾದ್ರು ಹಾಗೆ ಹೇಳಿದ್ರೆ ‘ಬೇಕಿದ್ರೆ ತಿನ್ನಪ್ಪ ಇಲ್ಲಾಂದ್ರೆ ಹೋಗು ‘ ಅಂತಾರೆ ಅಷ್ಟೇ ;)

ಆಗ ಅಮ್ಮ  ವೋಡ್ ರೊಟ್ಟಿ,ನೀರ್ ದೋಸೆ,ಬನ್ಸ್,ಗೆಂಡೆ ತಡ್ಯ,ಗೋಳಿ ಬಜೆ ಮಾಡಿದ್ರೆ ಮುಖ ಸಿಂಡರಿಸುತ್ತಿದೆ.ಈಗ ಹೊಟ್ಟೆ ಪಾಡಿಗೆ ಬೆಂಗಳೂರಿಗೆ ಬಂದ ಮೇಲೆ, ಅದೇ ಗೋಳಿ ಬಜೆ,ಬನ್ಸ್,ನೀರ್ ದೋಸೆ,ಕೋರಿ ರೊಟ್ಟಿಯನ್ನ   ಕಿಲೋಮೀಟರ್ಗಟ್ಟಲೆ ಹುಡುಕಿಕೊಂಡು ಹೋಗಿ ತಿಂದು ಬರ್ತೀನಿ.ತಿಂದ ಮೇಲೆ ಅಮ್ಮನ ಕೈರುಚಿ ಸಿಗುವುದಿಲ್ಲವಲ್ಲಾ :(

ಮನಸಿನಲ್ಲೇ ಅನ್ಕೊಳ್ಳೋದು ‘ಮಗನೆ,ಮಾಡಿ ಕೊಡುವಾಗ ಧಿಮಾಕು,ಕಮೆಂಟು ಹೊಡಿತಿದ್ಯಲ್ಲ,ಹಿಂಗೆ ಆಗ್ಬೇಕು ಬಿಡು’ ಅಂತ.ಎಲ್ಲ ತಿಂಡಿಗಳಿಗಿಂತ ಹೆಚ್ಚಾಗಿ ನಾ ಮಿಸ್ ಮಾಡಿಕೊಳ್ತಾ ಇರೋದು ‘ಭೂತಾಯಿ ಮೀನಿನ ಸಾರು ಮತ್ತೆ ಫ್ರೈ’ ;)

ಹಾಂ! ಅಂದ ಹಾಗೆ ನೀವು ಮಂಗಳೂರು ಬನ್ಸ್ ತಿಂದಿಲ್ಲ ಅಂದ್ರೆ ಒಮ್ಮೆ ತಿಂದು ನೋಡಿ, ಜೊತೆಗೆ ಚಹಾದ ಕಾಂಬಿನೇಶನ್ ಇದ್ರೆ ಮಸ್ತ್!, ನೀವು ಸಸ್ಯಹಾರಿ ಅಲ್ಲವಾದರೆ ‘ಭೂ ತಾಯಿ ಮೀನಿನ ರುಚಿಯೂ ನೋಡಿ,ಹಾಂ! ಬೆಂಗಳೂರಿನಲ್ಲಿ ಭೂತಾಯಿಗೆ ‘ಮತ್ತಿ’ ಅಂತಾರೆ’

ಇದೆ ಬ್ಲಾಗ್ ಅನ್ನ ತುಳುವಿನಲ್ಲಿ ಬರೆದಿದ್ದೇನೆ ಮಂಗಳೂರು ಬನ್ಸ್ ಬೊಕ್ಕ ಬೆಚ್ಚ ಚಾ 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಶೆಟ್ರೇ, ಚಿತ್ರ ಬಾಯಲ್ಲಿ ನೀರೂರಿಸಿತು. (ಟೀ ಎರಡು ಲೋಟಾ? ಬೇಕಿದ್ದರೆ ಬನ್ಸ್ ಎರಡು ಜಾಸ್ತಿ ತಿನ್ನಿ. ಟೀ ಒಂದೇ ಲೋಟ ಸಾಕು.) ಬನ್ಸ್ ಹಾಗೂ ಗೋಳಿಬಜೆ ನನಗೂ ಬಹಳ ಇಷ್ಟ. ಬನ್ಸ್ ಮಾಡುವುದು ಬಹಳ ಸುಲಭವಿದೆ. ಹಳ್ಳಿಮನೆ ಹುಡುಕಿಕೊಂಡು ಹೋಗುವ ಅಗತ್ಯವಿಲ್ಲ. ಅಮ್ಮನಿಗೆ ಫೋನ್ ಮಾಡಿ ತಿಳಿದುಕೊಳ್ಳಿ. ಬನ್ಸ್ ಮಾಡಿದ ಮೇಲೆ ನನ್ನ ಕರೆಯಲು ಮರೀಬೇಡಿ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಂದು ಲೋಟ ನಂದು, ಇನ್ನೊಂದು ಗೆಳೆಯಂದು :) ಅಮ್ಮ ಏನೋ ಹೇಳ್ತಾರೆ, ಆದ್ರೆ ಮಾಡೋಕೆ ಉದಾಸೀನ ;) ನನ್ನೀ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಕೇಶ್, ಅದು ಹಾಗೇನೆ. ಸಿಗದೆ ಇದ್ದಾಗ್ಲೆ ಅದರ ಬೆಲೆ ಗೊತ್ತಾಗೋದು. ನಾವು ಹೆಬ್ರಿಗೆ ಹೋದಾಗ "ಬಡ್ಕಿಲ್ಲಾಯ ಹೋಟೆಲ್" ನಲ್ಲಿ ಬಿಸಿ ಬಿಸಿ ಬನ್ಸ್ ತಿಂದಿದ್ವಿ. ಕರಾವಳಿ ಕಡೆ ಮಾಡೋದು ಕಡಿಮೆ. ಮಾಡಲು ಬೇಕಾಗುವ ಸಾಮಗ್ರಿಗಳು: ೧) ೧ ಬಟ್ಟಲು ಬಾಳೇಹಣ್ಣು ೨) ೧ ಬಟ್ಟಲು ಗೋದಿಹಿಟ್ಟು (ಗೋದಿಹಿಟ್ಟಿನ ಬದಲು ಮೈದಾಹಿಟ್ಟನ್ನು ಬಳಸಬಹುದು) ೩) ೧/೩ ಬಟ್ಟಲು ಬೆಲ್ಲ (ಬೆಲ್ಲದ ಬದಲು ಸಕ್ಕರೆ ಹಾಕಬಹುದು) ೪) ೧ ಚಮಚ ತುಪ್ಪ ೫) ಚಿಟಕಿಯಷ್ಟು ಏಲಕ್ಕಿ ೬)ಎಣ್ಣೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಡಿ ತಿನ್ನುವುದು ಕಷ್ಟ,ಮಾಡಿ ಕೊಟ್ಟರೆ ತಿನ್ನುವುದು ಇಷ್ಟ :) ನನ್ನೀ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಈಗ ಇರುವದು ದೂರದ ಹೈದರಾಬಾದಾನಲ್ಲಿ . ಇಲ್ಲಿ ಬನ್ಸ್ ಸಿಗುವದು ಎಲ್ಲಿ ಅಂತ ಇನ್ನೂ ಗೊತ್ತಿಲ್ಲ. ಯಾರಿಗಾದ್ರೂ ಗೊತ್ತಿದ್ದರೆ ದಯಮಾಡಿ ತಿಳಿಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಂದೇ ಬನ್ ಕೊಟ್ಟರೂ ಬನ್ಸ್ ಅಂತ ಯಾಕೆ ಹೇಳ್ತಾರೆ ಅಂತ ಏನಾದ್ರೂ ಗೊತ್ತಾ? ರಾಕೇಶ್.. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬ್ರೆಡ್ ಬನ್ ಅನ್ನೋದು ಬೇರೆ ಇದೆ ಅದನ್ನು ಬಹುವಚನದಲ್ಲಿ ಬನ್ಸ್ ಅನ್ನುತಾರೆ ಇದು ಒಂದಾದರೂ ಎರಡಾದರೂ ಬನ್ಸೆ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಪ್ಪಾ! ಎಂತ ಪ್ರಶ್ನೆ ;) ಅದರ ಹೆಸರು ಬನ್ಸ್ ಸರ್, so 1-2-3-4 ಎಷ್ಟು ಕೊಟ್ರು ಅದನ್ನ ಬನ್ಸ್ ಅಂತಾನೆ ಹೇಳೋದು ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಕೇಶ್, ನಾನು ನಿಮ್ಮೀ ಮಂಗ್ಳೂರು ಬನ್ಸ್ ಮತ್ತ್ತು ಬಿಸಿ ಬಿಸಿ ಚಹಾದ ಸವಿಯನ್ನು ನಾನು ತುಳುವಿನಲ್ಲಿ ಸವಿದಿದ್ದೇನೆ. ಆದರೆ ತುಳುವಿನಲ್ಲಿ "ಕುಡ್ಲ" ಇರಬೇಕಾಗಿತ್ತು ಅಂತ ಅನಿಸಿತ್ತು ನನಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲೇಖನದಲ್ಲಿ ಪೋಟೋ ಸೇರಿಸುವುದು ಹೇಗೆ ಸರ್. ನಿಮ್ಮ ಲೇಖನ ಓದಿ ಬನ್ಸ್ ತಿಂದಷ್ಟೇ ಖುಷಿಯಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಕೇಶ್ ಅಮ್ಮ ರುಚಿ ರುಚಿಯಾಗಿ ಮನೆಲಿ ತಿ೦ಡಿ ಮಾಡಿಕೊಟ್ರೆ ನಾವೂ ಮುಖ ಸಿ೦ಡರಿಸುತ್ತಿದ್ದೆವು. ಈಗ ನೀವು ಹೆಳಿದ೦ತೆ ಅದೇ ತಿ೦ಡಿ ಹುಡುಕಿಕೂ೦ಡು ಕಿಲೋಮೀಟರ್ಗಟ್ಟಲೆ ಹೋಗಿ ತಿಂದು ಬರ್ತೀವಿ... ಇವಾಗ ತು೦ಬಾ ಮಿಸ್ ಮಾಡ್ಕೊತಿವಿ ಅದನ್ನೆಲ್ಲ.. ನಿಮ್ಮ ಲೇಖನ ಓದಿ ಬನ್ಸ್ ತಿಂದಷ್ಟೇ ಖುಷಿಯಾಯಿತು. ನನ್ನಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.