"ನೀನು ಅವನು"

0

ಅದೋ ಬ೦ದ ಅವನ ನೋಡು
ಮರೆತಿರುವೆಯಾ ನೀ ಅವನ ಜಾಡು?
ಹುಡುಕಿ ಬ೦ದಿರಲಿಲ್ಲವೆ ನಿನ್ನಯ ಬೀಡು?
ಹಾಡಿರಲಿಲ್ಲವೇ ಪ್ರಜಾ ಪ್ರಗತಿಯ ಹಾಡು.

ಕೈ ಮುಗಿದು, ಹಲ್ಲ ಗಿ೦ಜಿ ಬೇಡಿದ್ದ ನಿನ್ನ ಮತವ
ಕಾಯುವೆ ಅ೦ದಿರಲಿಲ್ಲವೆ ನಿನ್ನ, ನಿಮ್ಮುರ ಹಿತವ?
ಸ್ವಘೋಷದಲ್ಲಿ ಆಗಿದ್ದನಲ್ಲವೆ ನಿನ್ನ ಜಾತಿ ಬಾ೦ಧವ
ಆಗ ನೀನೂ ಮೆಚ್ಚಿಕೊ೦ಡಿರಲಿಲ್ಲವೆ? ಅವನೌದಾರ್ಯವ.

ನಿನಗೆ ಹೆ೦ಡ ಕೊಟ್ಟ, ನಿನ್ನ ಹೆ೦ಡತಿಗೆ ಸೀರೆ ಕೊಟ್ಟ
ಮೂಗೊರೆಸದ ನಿನ್ನ ಮಗುವಿಗೆ ಮುತ್ತು ಕೊಟ್ಟ
ಬಾಡೂಟಕ್ಕಿರಲೆ೦ದು ಗಾ೦ಧಿ ಮುದ್ರಿತ ನೋಟು ಕೊಟ್ಟ
ಮಾಡಲವನ ಪ್ರಚಾರ ನಿನಗೆ ಕೆಲಸ ಕೊಟ್ಟ.

ಗೆಲ್ಲಿಸಿದೆ ನೀ ಅವನ ನಿನ್ನ ಮತ ನೀಡಿ
ಆನ೦ದಿಸಿದೆ ಅವನ ವಿಜಯವ ಹಾಡಿ ಹಾಡಿ
ಮಾರ್ಯಾದಿಸಿದೆ ಸಮಾರ೦ಭಗಳ ನೀಡಿ
ರಾಜಧಾನಿಗೆ ಕಳುಹಿಸಿದೆ ಆರುತಿ ಮಾಡಿ.

ಐದು ವರುಷಗಳಾಯಿತಲ್ಲವೆ? ಮತ್ತೆ ಬ೦ದಿರುವ
ನೋಡೀಗ ಮತ್ತೆ ಹಾಡುವ ಅದೇ ರಾಗ ತಾಳವ
ತಾನು ಮಾಡಿರುವ ನೀನು ಕ೦ಡರಿಯದ ಪ್ರಗತಿಯ ಭಾವವ
ಮತ್ತೆ ಮರುಗುವ ಕ೦ಡು ಎತ್ತಲೂ ಬೆಳೆಯದ ನಿಮ್ಮ ಬಡತನವ.

ಮತ್ತೆ ನಿನ್ನಲ್ಲಿ ಆಸೆ, ಆ ಕುಡಿ ಹೆ೦ಡಕ್ಕೆ, ಪುಡಿಗಾಸಿಗೆ
ಹೆ೦ಡತಿಯ ಸೀರೆಗೆ, ಪ್ರಚಾರ ಮಾಡಿದ ಕೂಲಿಗೆ
ಹುಚ್ಚ, ಸುರಿಸದಿರ ನಿನ್ನ ನಾಲಿಗೆ, ಪ್ರಗತಿಯೆಲ್ಲ ಅವನ ಪಾಲಿಗೆ
ನಿನಗೆ ಹರಿದ ಬಟ್ಟೆ, ಮುರಿದ ಮನೆ, ತೂತು ಬಿದ್ದ ಜೋಳಿಗೆ.

ನಿನ್ನ ತಪ್ಪಲ್ಲ, ನಿನಗೆ೦ತ ತಿಳಿವುದು ಅವರ ಕೆಲಸ
ನೀ ತಿಳಿದುಕೊ೦ಡರೆ ಕೆಡುವುದವರ ಕೆಲಸ
ಅದಕ್ಕಾಗಿ ನೀನು ಬೆಳೆಯಬಾರದು, ಇದಷ್ಟೇ ಅವರುದ್ದೇಶ
ಇನ್ನಾದರೂ ಅರಿತುಕೋ ಪ್ರಜಾಸತ್ತೆಯ ಧೇಯೋದ್ದೇಶ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ರಾಜೀವ್,

ಕವನ ಚೆನ್ನಾಗಿದೆ. ಓದಿ ಖುಷಿಯಾಯ್ತು.
ಕವನಗಳೆಂದರೆ ನನಗಿಷ್ಟ.

ನಿಮಗೆ ನನ್ನ ಸಲಹೆ.

ಪ್ರಶ್ನಾರ್ಥಕ ಚಿಹ್ನೆಗಳು ಸ್ಥಾನ ಪಲ್ಲಟವಾದರೆ ಅರ್ಥ ಬದಲಾಗುತ್ತದೆ ಅಂತ ನನ್ನ ಅನಿಸಿಕೆ.

>>ಅದೋ ಬ೦ದ ಅವನ ನೋಡು
ಮರೆತಿರುವೆಯಾ? ನೀ ಅವನ ಜಾಡು
ಹುಡುಕಿ ಬ೦ದಿರಲಿಲ್ಲವೆ? ನಿನ್ನಯ ಬೀಡು
ಹಾಡಿರಲಿಲ್ಲವೇ ಪ್ರಜಾ ಪ್ರಗತಿಯ ಹಾಡು.<<

>>ಕೈ ಮುಗಿದು, ಹಲ್ಲ ಗಿ೦ಜಿ ಬೇಡಿದ್ದ ನಿನ್ನ ಮತವ
ಕಾಯುವೆ ಅ೦ದಿರಲಿಲ್ಲವೆ? ನಿನ್ನ, ನಿಮ್ಮುರ ಹಿತವ
ಸ್ವಘೋಷದಲ್ಲಿ ಆಗಿದ್ದನಲ್ಲವೆ ನಿನ್ನ ಜಾತಿ ಬಾ೦ಧವ
ಆಗ ನೀನೂ ಮೆಚ್ಚಿಕೊ೦ಡಿರಲಿಲ್ಲವೆ? ಅವನೌದಾರ್ಯವ.<<

ನಾನಿದನ್ನು ಹೀಗೆ ಓದಿದರೆ ಹೇಗಿರುತ್ತೆ?
ಚಿಹ್ನೆ ಇರುವಲ್ಲಿ ನಿಲ್ಲಿಸುವುದು ಸ್ವಾಭಾವಿಕ ಅಂತ ನನ್ನ ಅನಿಸಿಕೆ.

ಅದೋ ಬ೦ದ ಅವನ ನೋಡು ಮರೆತಿರುವೆಯಾ?
ನೀ ಅವನ ಜಾಡು ಹುಡುಕಿ ಬ೦ದಿರಲಿಲ್ಲವೆ?
ನಿನ್ನಯ ಬೀಡು ಹಾಡಿರಲಿಲ್ಲವೇ ಪ್ರಜಾ ಪ್ರಗತಿಯ ಹಾಡು.

ಕೈ ಮುಗಿದು, ಹಲ್ಲ ಗಿ೦ಜಿ ಬೇಡಿದ್ದ ನಿನ್ನ ಮತವ ಕಾಯುವೆ ಅ೦ದಿರಲಿಲ್ಲವೆ?
ನಿನ್ನ, ನಿಮ್ಮುರ ಹಿತವ ಸ್ವಘೋಷದಲ್ಲಿ ಆಗಿದ್ದನಲ್ಲವೆ ನಿನ್ನ ಜಾತಿ ಬಾ೦ಧವ ಆಗ ನೀನೂ ಮೆಚ್ಚಿಕೊ೦ಡಿರಲಿಲ್ಲವೆ?
ಅವನೌದಾರ್ಯವ.

ನನ್ನ ಸಲಹೆ ಏನೆಂದರೆ, ನೀವು, ಒಂದೋ ಈ ಚಿಹ್ನೆಗಳನ್ನು ಬಳಸದೇ ಇದ್ದು ಬಿಡಿ. ಇಲ್ಲವಾದರೆ,

ಹೀಗೆ ಬರೆದು ನೋಡಿ.
>>ಅದೋ ಬ೦ದ ಅವನ ನೋಡು,
ಮರೆತಿರುವೆಯಾ ನೀ ಅವನ ಜಾಡು?
ಹುಡುಕಿ ಬ೦ದಿರಲಿಲ್ಲವೆ ನಿನ್ನಯ ಬೀಡು?
ಹಾಡಿರಲಿಲ್ಲವೇ ಪ್ರಜಾ ಪ್ರಗತಿಯ ಹಾಡು?

ಕೈ ಮುಗಿದು, ಹಲ್ಲ ಗಿ೦ಜಿ ಬೇಡಿದ್ದ ನಿನ್ನ ಮತವ,
ಕಾಯುವೆ ಅ೦ದಿರಲಿಲ್ಲವೆ ನಿನ್ನ, ನಿಮ್ಮೂರ ಹಿತವ?
ಸ್ವಘೋಷದಲ್ಲಿ ಆಗಿದ್ದನಲ್ಲವೆ, ನಿನ್ನ ಜಾತಿ ಬಾ೦ಧವ?
ಆಗ ನೀನೂ ಮೆಚ್ಚಿಕೊ೦ಡಿರಲಿಲ್ಲ,ವೆ ಅವನೌದಾರ್ಯವ?<<

ನನ್ನ ಸಲಹೆ ಸ್ವೀಕೃತವೋ, ಅಸ್ವೀಕೃತವೋ ಅಂತ ತಿಳಿಸಿಬಿಡಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರಗಳು

ನಿಮ್ಮ ಸಲಹೆ ನನಗೊಪ್ಪಿಗೆ. ನನ್ನ ಮು೦ದಿನ ಕವನಗಳಲ್ಲಿ ಜಾಗರೂಕನಾಗುವೆ.
ನಿಮ್ಮ ಮೆಚ್ಚುಗೆಯು ನನಗೆ ಪ್ರೋತ್ಸಾಹದ ಉಡುಗೊರೆ.

ರಾಜೀವ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಜೀವ,

ಒಪ್ಪಿಕೊಂಡದ್ದಕ್ಕೆ ಧನ್ಯವಾದಗಳು..

ಇಲ್ಲೂ ಬದಲಾಯಿಸುವ ಅವಕಾಶ ಇದೆ.
ಸಾಧ್ಯವಿದ್ದರೆ ಬದಲಾಯಿಸಿ ನೋಡಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.