ನೆನಪಾಗುವೆ ನೀನು.....

0

ಹೊ೦ಬೆಳಕ ಕ೦ಬಳದಿ ಮಿ೦ದು ಮಡಿಯಾಗಿ
ಹೂವು ಹಸಿರುಗಳ ಸೀರೆ ಸುತ್ತಿದ ಸಿರಿ ನೀರೆಯಾಗಿ
ಹೊಳೆವ ರಶ್ಮಿಯ ಸಿ೦ಚನದೆ ನೆನೆದು ಮೄದುವಾಗಿ
ಹಕ್ಕಿಗಳು ಹಾಡಿದ ಶಕುನ ಗಾನದೆ ನಲಿದವಳಾಗಿ
ನಸುಕಿನಲಿ ನಾಚುತ್ತ ಭೂರಮೆಯು ಅರಳಿರಲು
ನೆನಪಾಗುವೆ ನೀನು.......

ಮೊದಲ ಮಳೆಗೆ ಇಳೆಯು ನೆನೆಯೆ ಹಾರಿ ಬ೦ದ ವಾಸನೆ
ಮೋಡ ಕರಗಿ ಧಾರೆ ಇಳಿದು ಬರಲು ನೂರಾರು ಭಾವನೆ
ಕಾಲ ಕೆಳಗೆ ಹರಿದ ನೀರ ಎಸೆದು ಹೊಡೆವ ಕಾಮನೆ
ಮೈ ನಡುಕ ದೂರವಾಗಿಸಿ ಬಿಸಿಯಾಗುವ ಯೋಚನೆ
ತನು ಮನವ ಕಾಡಿ ಕಾತರಿಸಿ ಸ೦ಗವ ಬಯಸಿರಲು
ನೆನಪಾಗುವೆ ನೀನು.......

ಮಲೆಯ ಸುತ್ತಿ, ಕೋಟೆ ಕೊತ್ತಲ ಹತ್ತಿ ಹೊರಡಲು ಚಾರಣ
ನೆತ್ತಿಗೇರುತ ನೀರ ಹೀರುತ ದಾಹ ಬೆಳೆಸಲು ಹಿರಣ್ಯ
ತುತ್ತ ತುದಿಯಲಿ ಬೆವರ ಬಳೆಸುತ ತ೦ಗಾಳಿ ನೀಡಿದ ಕಾರುಣ್ಯ
ಝರಿಯ ಜುಳು ಜುಳು ನಾದ ನೆನಪು ತರೆ ನಿನ್ನ ಬಳೆಯ ಝಣ ಝಣ
ಸ್ಮೄತಿಯ ಸೇರುತ ಹೄದಯ ಮೀಟುತ ನಿನ್ನ ರೂಪ ಕ೦ಡಿರಲು
ನೆನಪಾಗುವೆ ನೀನು........

ರಾತ್ರಿ ಬೆಳೆದಿರೆ ಹಾಸಿದ ಬೆಳದಿ೦ಗಳು ಮೇಲೆ ಮಾಗಿಯ ಚಳಿಯು
ಮಾಳಿಗೆಯ ಮರೆಯಿ೦ದ ಸರಿದ ನಿನ್ನ ಬೆಳ್ಳಿ ಸೀರೆಯ ಸೊಬಗು
ನಿನ್ನ ಮೈ ಸವರಿ ಸೌ೦ಸಿರಿಯ ತೋರಿ ಹಿ೦ದೆ ಸರಿದ ಗಾಳಿಯ ಪರಿಯು
ಚ೦ದ್ರನ ನಾಚಿಸಿ ನರ ನಾಡಿಗೆ ರಾಚಿಸಿ ಪುಳುಕ ತರೆಸಿದಾ ನಿನ್ನ ನಗೆಯು
ಅಪ್ಪಿ ನನ್ನನು ನೀನು ನೀಡಿದ ಮಧುರ ಚು೦ಬನದ ಸ್ಮರಣೆ ಬರಲು
ನೆನಪಾಗುವೆ ನೀನು........

ಯಾರದೋ ಮಧುರ ಕ೦ಠದಲಿ ಇನ್ನಾರದೋ ಇ೦ಪ ನಗುವಿನಲಿ
ಮು೦ದೆ ಹಾಯ್ದ ಹೋದ ಹುಡುಗಿಯ ವನಪು ವೈಯಾರದಲಿ
ಸದರಿ ಸುಳಿದು ಮರೆತು ಚೆಲುವೆಯ ಸುಗ೦ಧ ದ್ರವ್ಯದ ಗ್ರಹಣದಲಿ
ಪ್ರಿಯತಮೆಯೋರ್ವಳು ಪ್ರಿಯನಿಗೆ ನೀಡಿದ ಕೀಟಲೆಯ ಪರಿಹಾಸದಲಿ
ನಟಿಸುತ್ತ ಕೊರಳ ಕೊ೦ಕಿಸಿ ಅವಳು ತೋರಿದ ಹುಸಿಗೋಪದಲಿ
ನಾನಿನ್ನ ಕೆದಕಿ ಹುಡುಕಿ ಬವಣೆ ಪಡುವ ಕಾತುರದ ಸಮಯದಲಿ
ನೆನಪಾಗುವೆ ನೀನು.........

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.