ಒ೦ದು ಸು೦ದರ ಸ೦ಜೆ

5

-----------------------------------------------------------------------------------------

ಒ೦ದು ಸು೦ದರ ಸ೦ಜೆ ಎನ್ನ ಮನವನು ಕದ್ದ
ಇ೦ದುವದನೆಯ ಮೊಗವ ನೋಡುತಿದ್ದೆ|
ಚೆ೦ದುಟಿಯ ಮೇಲೊ೦ದು ನಸುನಗೆಯು ಮೇಲೆದ್ದು
ಇ೦ದ್ರಧನುವಾದ ಸೊಗ ಸವಿಯುತಿದ್ದೆ||

ಹಗಲುಗನಸುಗಳಡರಿ ಸುಪ್ತಕಾಮನೆಯೆಣಿಸಿ
ನಗೆಯು ತ೦ಬೆಲರಾಗಿ ಸುಳಿಯಿತೇನೋ|
ಒಗುವ ಮು೦ಗುರುಳನ್ನು ಹದವಾಗಿ ನೇವರಿಸಿ
ಮಿಗಿಲಿರದ ಶೋಭೆಯನು ತ೦ದಿತೇನೋ||

ಚಿಗರೆಗಣ್ಗಳ ಮಿ೦ಚು ಕೋರೈಸುತಿರಲೊಮ್ಮೆ
ಗಗನದ೦ಚಿನ ರವಿಯ ಮರೆಸಿತೇನೋ|
ಸೊಗಸ ನೋಡುತಲಿರಲು ಮುದದಲೆನ್ನಯ ಮನಕೆ
ಯುಗಲಗೀತೆಯ ಬಯಕೆ ತರಿಸಿತೇನೋ||

ಪಡುವಣ ದಿಗ೦ತದಲಿ ಅರವಿ೦ದ ಸಖನಿ೦ದು
ಕಡಲ ಸೇರುತಲಿಹನೊ ತವಕದಿ೦ದ|
ಕಡೆಗಣ್ಣ ನೋಟದಲಿ ಎನ್ನ ಇನಿಯೆಯ ಮೊಗದ
ಬೆಡಗ ನೋಡುತಲಿಹನೊ ಬೆರಗಿನಿ೦ದ||

ನೋಡುತಿರೆ ಚಳಕದಲಿ ಕಡುಗೆ೦ಪು ವರ್ಣವನು
ಪಡೆದ ರವಿ ಎನ್ನವಳ ತುಟಿಗಳಿ೦ದ|
ತುಡಿವ ಮೊಗದಲಿ ಕಾ೦ತಿ ಪ್ರತಿಫಲನವಾದುದರ
ಒಡತನದಿ ನೋಡಿದೆನು ಸನಿಹದಿ೦ದ||

ಅನತಿ ಸಮಯದಿ ಪೂರ್ವದ೦ಚಿನಲಿ ಬರುವನದೊ
ಪೂರ್ಣಚ೦ದ್ರಮ ಹೊಳೆದು ಬಾನ ತು೦ಬ|
ಸನಿಹದಲಿ ಕುಳಿತಿರುವ ಎನ್ನ ಹೃದಯವ ಹೊದೆದು
ಅನವರತ ನಗುತಿರಲಿ ಇವಳ ಬಿ೦ಬ||

ಅನಿಸುತಿದೆ ಮನಕಿ೦ದು ಜೀವನದ ಅನುದಿನವು
ತನುಮನದ ಕಾ೦ತಿಯಿದು ಇರಲಿ ಸತತ|
ಕನಸ ಹೊತ್ತಿಹ ಮನದ ಮಧುರ ಬಯಕೆಗಳೆಲ್ಲ
ನನಸಾಗುತಿರಲೆ೦ದು ಹಸನುಗೊಳುತ||

ಚಿತ್ರ ಕೃಪೆ : ಅಂತರ್ಜಾಲ 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ರಘು .. ಚಪ್ಪಾಳೆ... ಸೂರ್ಯ ಚಂದ್ರ ಇಬ್ಬರನ್ನು ಪ್ರಿಯತಮೆಯ ಮುಖಸೌಂದರ್ಯದ ಜೊತೆ ಗೆ ನೋಡುತ್ತಿರುವ ನಿಮ್ಮ ತಂತ್ರ ಚೆನ್ನಾಗಿ ಮೂಡಿದೆ ಅಭಿನಂದನೆಗಳು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿಮರ್ಶಿಸಿದ್ದಕ್ಕೆ ನಿಮಗಿದೋ ಧನ್ಯವಾದ, ಪಾರ್ಥ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಲ್ಲವೇ ಪಾರ್ಥರೇ?ರಘು ಅಣ್ಣ ಗಾರುಡಿಗಾರರು ಸೂರ್ಯಾಸ್ತ ಚಂದ್ರೋದಯಗಳೆರಡರ ಸೊಬಗು ಇನಿಯೆಯ ಮುಖದಲ್ಲಿ ಪ್ರತಿಫಲಿಸುವುದನ್ನು ಕಾಣುತ್ತ ಸೂರ್ಯ ಚಂದ್ರರಿಬ್ಬರನ್ನೂ ಚೆನ್ನಾಗಿ ಬಳಸಿ ಕೊಂಡಿದ್ದಾರೆ.ಎಂತಹ ತಂತ್ರ ಅಲ್ಲವೇ? ರಘು ಅಣ್ಣ, ನವಿರಾದ,ಮಧುರವಾದ,ಮನಮುಟ್ಟುವ ಸರಳ ಸುಂದರ ರಸಭರಿತ ಕವನ ಓದುಗರ ಮನವನ್ನು ಸೂರೆಗೊಳ್ಳುವುದರಲ್ಲಿ ಸಂಶಯವೇ ಇಲ್ಲ. ಇಂತಹ ಉತ್ತಮ ರಚನೆಗೆ ಅಭಿನಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತ೦ಗೀ,ನಿಮ್ಮ ನಿರ೦ತರ ಪ್ರೋತ್ಸಾಹಕ್ಕೆ ಧನ್ಯವಾದ. ನಿಮ್ಮ ಮಲೆನಾಡಿನ ಕವನ ಓದಿದ ಬಳಿಕ ಷಟ್ಪದಿಗಳ ನಡುವೆ ಇದೊ೦ದು ಪ್ರಯತ್ನ ಮಾಡಬೇಕೆನಿಸಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ಮುಳಿಯರೆ, ಸುಂದರ ಕಲ್ಪನೆ; ಸಮರ್ಥ ಅಭಿವ್ಯಕ್ತಿ. ನಿಮ್ಮ ಕವಿತ್ವಕ್ಕೆ ನಾನು ಮನ ಸೋತಿದ್ದೇನೆ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಆತ್ರೇಯರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒ೦ದು ಅಧ್ಬುತವಾದ ಭಾವಗೀತೆ.. ರಾಗ ಸ೦ಯೋಜಿಸಿ ಹಾಡಿದರೆ ಕೇಳಲು ಮಧುರವಾಗಿರುತ್ತದೆ.. ಸು೦ದರ ಪ್ರೇಮ ಕವನಕ್ಕಾಗಿ ನಿಮಗೆ ವ೦ದನೆಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ನಾವಡರೆ. ಅದ್ಭುತವೋ ಗೊತ್ತಿಲ್ಲ,ಹಾಡಲು ಚೆನ್ನಾಗಿರಬಹುದು ಅನ್ನಿಸಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಘು, ಓದುತೋದುತ ಈ ಸು೦ದರ ಕವನ ಓಡಿತೆನ್ನ ಮನ ಹಿ೦ದಕೆ ಕಾಲು ಶತಮಾನ! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮ೦ಜಣ್ಣಾ.ಧನ್ಯವಾದ. ಆಗಿನ ಕವನಗಳು ಅದೆಷ್ಟು ಸು೦ದರ,ಅರ್ಥಪೂರ್ಣ ಅಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಘು ಅವರೇ ಸುಂದರವಾಗಿದೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಜಯ೦ತರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಘುರವರೇ ಕವನ ಚಂಧಸ್ಸಿನ್ನಿಂದ ಹೊರಬಂದರೂ ತನ್ನ ಚಂದ ಕಳಕೊಂಡಿಲ್ಲ , ಇನ್ನೊಂದು ಸುಂದರ ಕವನ ನಿಮ್ಮಿಂದ !!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿರ೦ತರ ಪ್ರೋತ್ಸಾಹಕ್ಕೆ ಧನ್ಯವಾದ ,ವೆ೦ಕಟೇಶ್,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರ ಸೌಂದರ್ಯತೆ ತುಂಬಿರುವ ಸಾಲುಗಳು, ಸಾಲುಸಾಲು ಪದಗಳು, ಅಕ್ಷರಾಕ್ಷರಗಳು ರಘು ಜಿ. ಅಭಿನಂದನೆಗಳು ಇಂತಿ ರಾಮಮೋಹನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ರಾಮಮೋಹನರೆ. ಸೌ೦ದರ್ಯ ಎ೦ಬ ಪದ,ಸು೦ದರತೆಯಾಗುತ್ತದೆ.ಮಾತಿಗಾಗಿ ಹೇಳಿದೆ,ಅಷ್ಟೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ Raghuji.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಘು, "ಜೀವನದ ಅನುದಿನವು ತನುಮನದ ಕಾ೦ತಿಯಿದು ಇರಲಿ ಸತತ" ಇದೇ ಆಶಯ ಹಾಗೂ ಹಾರೈಕೆ ನನ್ನದೂ ಕೂಡ. .. ಸುಂದರವಾದ ಬಣ್ಣನೆ, ಸುಂದರವಾದ ಪದಬಳಕೆ! -ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುರೇಶ್,ನಿಮ್ಮ ಹಾರೈಕೆಗಳು ಸದಾ ಹೀಗೆಯೇ ಇರಲಿ.ಧನ್ಯವಾದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರ ಕವಿತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಾಲರೆ,ಧನ್ಯವಾದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಘು ಸರ್ ಸೂಪರ್. <ಚೆ೦ದುಟಿಯ ಮೇಲೊ೦ದು ನಸುನಗೆಯು ಮೇಲೆದ್ದು ಇ೦ದ್ರಧನುವಾದ ಸೊಗ> ಶಬ್ದಗಳು ಚಿತ್ರವನ್ನೇ ಮೂಡಿಸಿವೆ. ಸುಂದರ ಕಾವ್ಯ. printer friendlly version ಮಾತ್ರ ಯಾಕೋ ಇಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಶ್ರೀನಿವಾಸ್. "printer friendlly version"ಇಲ್ಲ.ಕವಿತೆಯನ್ನೆ ಇಳಿಸಿಕೊಳ್ಳಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಘುಜೀ, ಕವನ ಚೆನ್ನಾಗಿದೆ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಗಣೇಶ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರ ಭಾವ ಭಟ್ಟಿಯಿಳಿಸಿರುವಿರಿ. ಸುಂದರ ಮಾಲೆ ಹೆಣೆದಿದ್ದೀರಿ - ಪ್ರಕೃತಿಗೂ ಇನಿಯಳಿಗೂ ಸೇರಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ನಾಗರಾಜರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಘು ವಾಹ್!! ಸುಂದರ ಅತೀ ಸುಂದರ ನಿಮ್ಮ ಅತಿ ಸುಂದರ ಕನಸು ನಿಜವೇ ಆಗುತಿರಲಿ "ರಘು ನಿಮ್ಮ ಕವನ ಮನವನಾಳಿತು ಬಹಳ"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಗೋಪೀನಾಥರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಣ್ಣ, ರಂಗು ರಂಗಿನ ಚಿತ್ರದಂತೆಯೇ ರಾಗ-ಭಾವ-ರಂಜಿತವಾಗಿ ಮೂಡಿ ಬಂದ ಕವನ!! ``ಯುಗಲಗೀತೆಯ ಬಯಕೆ ತರಿಸಿತೇನೋ'' ಯುಗಳ ಗೀತೆಯ ರಸದೌತಣ ಕಾದಿದೆ ಎಂದಾಯಿತು!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಮಹೇಶ,ಸುಸ್ವರ ಇರಲಿಕ್ಕಿಲ್ಲ !!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಷಟ್ಪದಿಗಳಂತಹ ಛಂದಸ್ಸುಗಳಲ್ಲಿ ಬರೆಯುವವರೇ ಕಡಿಮೆಯಾಗಿರುವ ಈ ಕಾಲದಲ್ಲಿ ಭಾಮಿನಿ ಷಟ್ಪದಿಯಲ್ಲಿ ಅದಕ್ಕನುಗುಣವಾದ ಪದಗಳನ್ನೇ ಬಳಸಿ, ದ್ವಿತೀಯಾಕ್ಷರ ಪ್ರಾಸವನ್ನೂ ತ್ರಾಸವಿಲ್ಲದೇ ಉಳಿಸಿಕೊಂಡು ಸರಾಗವಾಗಿ, ತಿಳುಕಾಟವಿಲ್ಲದೇ ರಚಿಸಿದ ಸುಂದರ ರಚನೆಗಳನ್ನು ನೀಡುತ್ತಿರುವ ಶ್ರೀ ರಘು ಮುಳಿಯರಿಗೆ ಅಭಿನಂದನೆಗಳು. ಅವರ ಷಟ್ಪದಿಗಳನ್ನು ತಿರುತಿರುಗಿ ಓದಿ ಆಸ್ವಾದಿಸುವ ಅನೇಕರಲ್ಲಿ ನಾನೂ ಒಬ್ಬ. ಅವರ ಈ ಕವಿತ್ವ ಶಕ್ತಿ ಇನ್ನಷ್ಟು ಬಲಿತು ಬೆಳಗಲಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ.ತಮ್ಮ ಮಾತುಗಳಿ೦ದ ನನ್ನ ಹೃದಯ ತು೦ಬಿತು.ಖ೦ಡಿತಾ ಪ್ರಯತ್ನಿಸುತ್ತೇನೆ, ಚೆನ್ನಾಗಿ ಬರೆಯಲು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.