ಬಿ.ಬಿ.ಎಂ.ಪಿ ಚುನಾವಣೆಯೂ, ಕನ್ನಡಿಗರೂ!

4.75

ನೆನ್ನೆ (21/03/2010) ಬೆಳಿಗ್ಗೆ ಕನ್ನಡಪ್ರಭ ನೋಡ್ತಾ ಇದ್ದೆ. ಸಖತ್ ಶಾಕ್ ಆಯ್ತು.
ಇನ್ನೇನು ಶುರುವಾಗಲಿರುವ ಬಿ.ಬಿ.ಎಂ.ಪಿ ಚುನಾವಣೆಯಲ್ಲಿ 50ಕ್ಕೂ ಹೆಚ್ಚು ಕನ್ನಡೇತರರು ಆಯ್ಕೆಯಾಗುವ ಸಂಭವವಿದೆಯಂತೆ. ಕಾಂಗ್ರೆಸ್ಸು, ಬೀಜೇಪಿ ಮತ್ತು ಜೆ.ಡಿ(ಎಸ್) ಪಕ್ಷಗಳೆಲ್ಲವೂ ಸೇರಿ ಸುಮಾರು 160ಕ್ಕೂ ಹೆಚ್ಚು ಕನ್ನಡೇತರರಿಗೆ ಟಿಕೆಟ್ ನೀಡಿವೆ ಅಂತೆಲ್ಲಾ ಬರ್ದಿದ್ರು. ಇದೇನಪ್ಪಾ ಗ್ರಾಚಾರ ಅಂದುಕೊಂಡೆ. 

ಆಮೇಲೆ ಯೋಚನೆ ಮಾಡಿದಾಗ ಅನ್ನಿಸ್ತಾ ಇತ್ತು, ಈ ರೀತಿ ಇರುವ 198 ವಾರ್ಡ್-ಗಳಲ್ಲಿ, ಪತ್ರಿಕೆಯ ವರದಿಯಂತೆ ನಿಜವಾಗಿಯೂ 50 ಕನ್ನಡೇತರರು ಆಯ್ಕೆಯಾಗಿ ಬಂದರೆ, ಯಾವುದೇ ಕನ್ನಡಪರ ತೀರ್ಮಾನಕ್ಕೆ ಬಿ.ಬಿ.ಎಂ.ಪಿಯಲ್ಲಿ ಪೂರ್ತಿ ಬೆಂಬಲ ಸಿಕ್ಕತ್ತಾ? “ಅಂಗಡಿ ಮುಂಗಟ್ಟುಗಳು ಕನ್ನಡದಲ್ಲೂ ನಾಮಫಲಕ ಹಾಕಬೇಕು” ಎಂಬಂತ ಕಾನೂನು ಮಾಡಲೂ ಬಿ.ಬಿ.ಎಂ.ಪಿ ಹಿಂದೆ ಮುಂದೆ ಯೋಚಿಸುವಂತಹ ದಿನಗಳು ಬರಬಹುದು. ಅಥವಾ, ಪರ ಭಾಷಿಕರು ನಾಳೆ ತಿರುವಳ್ಳುವರ್, ಎಮ್.ಜಿ.ಆರ್, ಎನ್ ಟಿ ರಾಮರಾವ್ ಅವರ ಮೂರ್ತಿಗಳೆಲ್ಲಾ ಕೂರಸ್ತೀವಿ ಅನ್ನಬಹುದು. ಆಗ ಯಾರಿಗಾದ್ರೂ ತಡೆಯೋಕ್ ಆಗುತ್ತಾ? ಅಥವಾ, ನಾಳೆ ತಮಿಳು, ತೆಲುಗು ಅಫಿಶಿಯಲ್ ಲಾಂಗ್ವೇಜ್ (ಅಧಿಕ್ರುತ ಭಾಷೆ) ಮಾಡಿ ಅಂತ ಕೂರಬಹುದು, ಅದನ್ನ ವಿರೋಧಿಸಕ್ಕೆ ಆಗುತ್ತಾ? ರಾಷ್ಟ್ರೀಯ ಪಕ್ಷಗಳು ಇಲ್ಲೀವರೆಗೆ ಆಡಳಿತ ಮಾಡಿರೋ ಸ್ಟೈಲ್ ನೋಡಿದ್ರೆ, ಇದೆಲ್ಲಾ ತಡೀತಾರೆ ಅನ್ನೋ ಭರವಸೆ ನಂಗಂತೂ ಇಲ್ಲ.

ನಿಜ ಹೇಳ್ಬೇಕು ಅಂದ್ರೆ, ರಾಷ್ಟ್ರೀಯ ಪಕ್ಷಗಳನ್ನೇ ಸದಾ ಪ್ರೀತಿಸುತ್ತಾ ಬಂದಿರುವ ಕನ್ನಡಿಗರಿಗೆ, ಅವುಗಳಿಂದ ಆಗಿರುವ ಅನುಕೂಲಕ್ಕಿಂತಾ ಅನಾನುಕೂಲವೇ ಜಾಸ್ತಿ ಇದೆ. ಈಗ ಅದೇ ರಾಷ್ಟ್ರೀಯ ಪಕ್ಷಗಳು ಇತರರಿಗೆ ಮಣೆ ಹಾಕಿ, ತಮ್ಮನ್ನು ಪ್ರೀತಿಸಿದ ಕನ್ನಡಿಗರನ್ನು ಕಡೆಗಣಿಸುತ್ತಿರುವಂತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ, ಮುಂದೊಂದು ದಿನ ರಾಷ್ಟ್ರೀಯ ಪಕ್ಷಗಳು 100 ಜನ ಕನ್ನಡೇತರರು ಆಯ್ಕೆಯಾಗುವಂತೆ ನೋಡಿಕೊಳ್ಳುಬಹುದು. ಆಮೇಲೆ ಕನ್ನಡಿಗ್ರು ಬಾಯಿ ಬಡ್ಕೊಳದೇ ಸರಿ ಅನ್ಸುತ್ತೆ.

ಈ ಬಾರಿಯ ಚುನಾವಣೆಯಲ್ಲಿ ಕನ್ನಡಪರ ಕಾಳಜಿಯುಳ್ಳ ಅಭ್ಯರ್ಥಿಗಳಿಗೇ ಬೆಂಬಲ ಸೂಚಿಸಬೇಕು ಅಂತ ನನ್ನ ಅನಿಸಿಕೆ. ಮತಯಾಚಿಸುತ್ತಾ ಬರುವ ಯಾವುದೇ ಅಭ್ಯರ್ಥಿಯಾದರೂ “ಕನ್ನಡಪರ ಕೆಲಸವೇನು ಮಾಡುತ್ತೀರಿ” ಎಂದು ನಾನಂತೂ ಕೇಳ್ತೀನು. ನೀವೇನ್ ಅಂತೀರಾ ಗೆಳೆಯರೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (8 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ha ha ! obba Kanndaiga nu comment hakilla.. yellaru election bisi nalli idare ansathe..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಾವು ಇದನ್ನೇ ಕನ್ನಡದಲ್ಲಿ ಬರೆದು ಹಾಕಿ ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಲೇಖನದ ಆಶಯದಂತೆಯೇ ಇದೇ ಸಂಪದದಲ್ಲಿ ನಿನ್ನೆ ನಾನು ಬರೆದ ಲೇಖನ `ನಿಮ್ಮ ಓಟು ಯಾರಿಗೆ' ಓದಿ (ಚರ್ಚೆ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಿಯಾಗ್ ಹೇಳಿದ್ರಿ ಹರ್ಷಾ... ಇವತ್ತು ಬಾಣಸವಾಡಿ, ಥಣಿಸಂದ್ರ ಕಡೆಯೆಲ್ಲ ಹೋಗಿದ್ದೆ.. ಅಲ್ಲಿ ರಾಷ್ಟೀಯ ಪಕ್ಷಗಳು ಉರ್ದು, ಹಿಂದಿ ಲಿ ಪ್ರಚಾರ ಮಾಡೋದನ್ನ ನೋಡಿದೆ.. ಇದೆ ರೀತಿ ಭಾಷಾ ಅಲ್ಪಸಂಖ್ಯಾತರನ್ನ ಓಲೈಸುತ್ತ ಇದ್ರೆ ,, ನಾಳೆ ಆ ಹಾದಿಲಿ ಆಯ್ಕೆ ಯಾಗಿ ಬರೋ ಜನರು ( ಕನ್ನಡಿಗರೇ ಆಗಿದ್ರೂ ಕೂಡ ) ಪಾಲಿಕೆಯಲ್ಲಿ ಕನ್ನಡ - ಕನ್ನಡಿಗರ ಪರವಾಗಿ ದ್ವನಿ ಎತ್ತುತ್ತಾರ ? ನೋ ವೇ !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.