ನಮ್ಮ MTR ನಮ್ಮದೇನಾ?

0

ಎಂ.ಟಿ.ಆರ್ ಅ೦ದ್ರೆ ಬಾಯಲ್ಲಿ ನೀರೂರಿಸುವ ರುಚಿರುಚಿಯಾದ ತಿ೦ಡಿಗಳು ನೆನಪಿಗೆ ಬರುತ್ತೆ. ಬೆಂಗಳೂರಲ್ಲಿ ಕರ್ನಾಟಕದ ತಿನಿಸುಗಳಿಗಾಗಿ ಪ್ರಸಿದ್ಧಿಯಾದ "ಮಾವಳ್ಳಿ ಟಿಫಿನ್ ರೂಂ" ಗುಂಪು "packaged food (ತಿನಿಸು ಪೊಟ್ಟಣದ)" ಮಾರುಕಟ್ಟೆಯಲ್ಲೂ ಇದೆ ( http://www.mtrfoods.com/readytoeat/index.htm ). ಬಿಸಿಬೇಳೆ ಬಾತ್, ಪುಳಿಯೋಗರೆ ಇ೦ದ ಹಿಡಿದು ಪಾಲಾಕ್ ಪನೀರ್ ವರೆಗೂ ಎಲ್ಲಾ ರೀತಿಯ ತಿನಿಸುಗಳನ್ನೂ Ready-to-cook ಪೊಟ್ಟಣಗಳಲ್ಲಿ ಮಾರುತ್ತಾರೆ. ಈ ಪೊಟ್ಟಣಗಳನ್ನು, ಸೂಪರ್ ಮಾರ್ಕೆಟ್-ಗಳಲ್ಲಿ ಅಥವಾ "ನಮ್ಮ ಎಂ.ಟಿ.ಆರ್"ಗಳಲ್ಲಿ ನೀವು ನೋಡಿರಬಹುದು.

ಈ ಪೊಟ್ಟಣಗಳಲ್ಲಿ ತೀರಾ ಕೆಲವಕ್ಕೆ ಮಾತ್ರ "ಬಳಕೆ ವಿಧಾನ" ಬಗ್ಗೆ ಕನ್ನಡದಲ್ಲೂ ಮಾಹಿತಿ ಇದೆ, ಹೆಚ್ಚಿನವಲ್ಲಿ ಕನ್ನಡದಲ್ಲಿ ಮಾಹಿತಿ ಇಲ್ಲವೇ ಇಲ್ಲ.

ಪಲ್ಲದ ಪಾಯಸಂ ಪೊಟ್ಟಣದ ಮೇಲೆ ಕನ್ನಡದಲ್ಲಿ ಮಾಹಿತಿ ಇಲ್ಲ

 

 

"ಯಾಕೆ ಹೀಗೆ?" ಎಂದು ವಿಚಾರಿಸಿದಾಗ ದೊರೆತ ಉತ್ತರ, "ಈ ವಸ್ತುಗಳನ್ನು ಅಲ್ಲಿಯವರೇ ಹೆಚ್ಚು ಕೊಳ್ಳುತ್ತಾರೆ, ಅದಕ್ಕೆ ಅವರ ಭಾಷೆಯಲ್ಲಿ ವಿವರಣೆ ಇದೆ". ಕನ್ನಡಿಗರು, "ಹೊಸ ರುಚಿಗೆ ಯಾವತ್ತೂ ರೆಡಿ" ಅನ್ನೋದು ಗೊತ್ತಿಲ್ವಾ ನಮ್ಮ ಎಂ.ಟಿ.ಆರ್-ಗೆ? MTR ರವರ ಎಲ್ಲಾ ಪೊಟ್ಟಣಗಳಲ್ಲೂ ಕನ್ನಡದಲ್ಲಿ "ಬಳಕೆ ವಿಧಾನ" ಮುದ್ರಿಸುವುದರಿಂದ, ಕನ್ನಡಿಗರನ್ನು ಸುಲಭವಾಗಿ ಆಕರ್ಷಿಸಬಹುದು. ಇದರಿಂದ ಮಾರುಕಟ್ಟೆ ವಿಸ್ತರಣೆ ಆಗೋದಲ್ದೆ, ಮಾರಾಟಾನೂ ಜಾಸ್ತಿಯಾಗತ್ತೆ.

ಹೊಸರುಚಿಗೆ ಬೆಂಗಳೂರಿನಲ್ಲಿ ಎಂತಹ ಮಾರುಕಟ್ಟೆ ಇದೆ ಎಂಬುದನ್ನು ಸರಿಯಾಗಿ ಅರಿತ "ಅಡ್ಯಾರ್ ಆನಂದ ಭವನ್", ತಮಿಳು ನಾಡಿನ ತಿನಿಸುಗಳನ್ನು ತಯಾರಿಸಿ ಕನ್ನಡಿಗರ ಮನ ಗೆದ್ದಿದ್ದಾರೆ. ಎಲ್ಲೆಡೆ ತಲೆ ಎತ್ತುತ್ತಿರುವ ಇವರ ಮಳಿಗೆಗಳೇ, ಇವರ ಲಾಭಕ್ಕೆ ಸಾಕ್ಷಿ. ಇದನ್ನು ಗಮನಿಸಿದಾಗ, "ಕನ್ನಡಿಗರು ಬೇರೆ ತಿನಿಸುಗಳನ್ನು ಕೊಳ್ಳುವುದಿಲ್ಲ" ಎಂಬ ಎಂ.ಟಿ.ಆರ್-ನ ನಂಬಿಕೆ ಸತ್ಯಕ್ಕೆ ದೂರವಾದುದೆಂದು ಅರಿವಾಗುತ್ತದೆ. ಎಂ.ಟಿ.ಆರ್ ತಮ್ಮ ಭಾಷಾ ನೀತಿಯನ್ನು ಸ್ವಲ್ಪ ಬದಲಾಯಿಸಿಕೊಂಡರೆ, ಅವರ ಲಾಭ ಹೆಚ್ಚಾಗೋದು ಗ್ಯಾರೆ೦ಟಿ.

ರವೆ ದೋಸೆ ಪ್ಯಾಕೇಜ್ ಮೇಲೆ ಮಾಹಿತಿ

 ರವೆ ದೋಸೆ

ಎಲ್ಲಾ ಭಾಷೆಗಳಲ್ಲೂ ಮಾಹಿತಿ ಹಾಕುವ ಗೋಜಿಗೆ ಸಿಕ್ಕಿ ಉಪಯುಕ್ತ ಮಾಹಿತಿಯನ್ನು ಚಿಕ್ಕ ಫಾಂಟ್-ನಲ್ಲಿ ಬರೆಯಬೇಕಾಗಿದೆ. ಕರ್ನಾಟಕದಲ್ಲಿ ಮಾರಾಟವಾಗುವ ಪ್ಯಾಕೇಜ್-ಗಳ ಮೇಲೆ ಕನ್ನಡ ಮತ್ತು ಇಂಗ್ಲಿಷ್-ನಲ್ಲಿ ವಿವರಣೆ ಇದ್ದರೆ ಸಾಕು. ಇದರಿಂದ ಪ್ಯಾಕೇಜ್ ಡಿಸೈನ್ ಕೂಡ ಸುಲಭ ಹಾಗು ಪರಿಣಾಮಕಾರಿಯಾಗಿರುತ್ತೆ.

ಬನ್ನಿ, ಕರ್ನಾಟಕದಲ್ಲಿ ಮಾರಾಟವಾಗುವ ಪೊಟ್ಟಣಗಳ ಮೇಲೆ ಕನ್ನಡದಲ್ಲಿ ಮಾಹಿತಿ ಇರುವುದರ ಅವಶ್ಯಕತೆಯ ಬಗ್ಗೆ, ಇದರಿಂದ ಎ೦.ಟಿ.ಆರ್ ಗಳಿಸಬಹುದಾದ ಲಾಭದ ಬಗ್ಗೆ ಮನವರಿಕೆ ಮಾಡಿಕೊಡೋಣ. ಇವರಿಗೆ ಮಿಂಚೆ ಬರೆದು, "ಎಂ.ಟಿ.ಆರ್ ಹೋಟೆಲ್ ಬೆಂಗಳೂರಿಗರ ಮನ ಸೆಳೆದಿರುವಂತೆ, ಎಂ.ಟಿ.ಆರ್ ತಿನಿಸು ಪೊಟ್ಟಣಗಳೂ ಕೂಡ ಕನ್ನಡಿಗರ ಮನ ಗೆಲ್ಲಲು ಸಾಧ್ಯ" ಎಂದು ಹೇಳೋಣ.

ಎಂ.ಟಿ.ಆರ್ ಫುಡ್ಸ್-ನ ಮಿಂಚೆ: feedback@mtrfoods.com , murthy.r@mtrfoods.com

--

ಪ್ರಿಯಾಂಕ್

ಜಾಗೃತ ಗ್ರಾಹಕರು

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಮ್ಮ MTR ಎಂದು ಯಾರು ಹೇಳ್ತಾ ಇರೋದು. ಇದನ್ನ 2007ನಲ್ಲೇ ಓರ್ಕ್ಲ್ ಎಂಬ MNCಗೆ ಮಾರಿಕೊಂಡಾಗಿದೆ. ವಿವರಗಳಿಗೆ ಇಲ್ಲಿ ನೋಡಿ. http://www.mtrfoods.com/ourheritage.htm

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು.
ನೀವು ಹೇಳ್ತಿರೋದು ಸರಿ.
ಆದರೆ, ಸ್ಟೋರ್-ಗಳ ಹೆಸರು ಈಗಲೂ "ನಮ್ಮ ಎಂ.ಟಿ.ಆರ್" ಅಂತಲೇ ಇವೆ.
ಈ ಥರ ಹೆಸರು ಇಟ್ಕೊಂಡು, ನಮ್ಮತನ ಬಿಟ್ಟಿದಾರೆ.

ಅಲ್ಲದೆ, ಯಾವ ಕಂಪನಿ ಆದರೂ ಕನ್ನಡಿಗ ಗ್ರಾಹಕನಿಗೆ ಬೇಕಾದ ಮಾಹಿತಿ ಕನ್ನಡದಲ್ಲಿ ಒದಗಿಸಬೇಕು.
ಮತ್ತು ಕರ್ನಾಟಕದಲ್ಲಿ ಮಾರುವ ಪ್ಯಾಕೇಜ್-ಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಇದ್ದರೆ ಸಾಕು.
ಅಲ್ವಾ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓರ್ಕ್ಲಾ ಕ೦ಪನಿಗೆ ೩೫೩ ಕೋಟಿಗೆ ಮಾರಿಕೊ೦ಡಾಗಿದೆ ನಿಜ ಆದ್ರೆ ನಮ್ಮ ಓರ್ಕ್ಲಾ ಅ೦ತ ಬೋರ್ಡ್ ಹಾಕಿಕೊ೦ಡರೆ ಯಾವ ಗ್ರಾಹಕನೂ ಮೂಸುನೋಡಲ್ಲ ಅ೦ತನೇ ನಮ್ಮ ಎ೦.ಟಿ.ಆರ್ ಅ೦ತ ಹಾಕಿಕೊ೦ಡಿರುವುದು. ಅದು ಹೋಗ್ಲಿ ಎ೦.ಟಿ.ಆರ್ ಅ೦ತನೇ ಏಕೆ ಹಾಕಿಕೊಳ್ಳಬೇಕು ಕ೦ಪನಿ ಬೇರೆಯಾಗಿರುವುದರಿ೦ದ ಹೆಸರನ್ನೂ ಬೇರೆ ಮಾಡಿಕೊಳ್ಳಬಹುದು.

ಆದರೆ ಕನ್ನಡಿಗರ ವಿಶ್ವಾಸ ಗೆದ್ದಿರುವ ಎ೦.ಟಿ.ಆರ್ ಅನ್ನೋ ಬ್ರಾ೦ಡ್ ಗೆ ಬೆಲೆ ತೋರಿ ಕನ್ನಡದಲ್ಲಿಯೂ ಅವರ ಪ್ಯಾಕೆಟ್ ಗಳ ಮೇಲೆ ಮುದ್ರಣ ಮಾಡಬಹುದಿತ್ತು. ಎ೦.ಟಿ.ಆರ್ ನಲ್ಲಿ ನನಗೆ ಗುರುತಿರೋ ಜನರನ್ನು ಹೋಗಿ ವಿಚಾರಿಸುತ್ತೇನೆ. ನೋಡೋಣ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮಗೆ ಬೇಕಾದರೆ ಹೋಗಿ ಇಲ್ಲ ಬಿಟ್ಟು ಬಿಡೀ ಅಂತ ಯಾರದರೂ ಅಂದಾರು ಹುಶಾರು :)

ನಿಜ, ಎಲ್ಲದರ ಮೇಲೂ ಕನ್ನಡ ಇರಲೇ ಬೇಕು.. ಇಲ್ಲದಿದ್ದಲ್ಲಿ ಅವುಗಳನ್ನ ಬಹಿಷ್ಕರಿಸುವ ಮಟ್ಟಕ್ಕೆ ಹೋಗಬೇಕು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹಿಷ್ಕಾರ ಅ೦ತ ಗಲಾಟೆ ಮಾಡೋದ್ರಲ್ಲಿ ಅರ್ಥ ಇಲ್ಲ. ನಿಜವಾಗ್ಲು ಕನ್ನಡದಲ್ಲಿ ಇವರು ಮಾಹಿತಿ ಮುದ್ರಿಸಬೇಕು ಅ೦ದ್ರೆ ಪ್ರಿಯಾ೦ಕ್ ಕೊಟ್ಟಿರೋ ಮಿ೦ಚ೦ಚೆಗಳಿಗೆ ಒ೦ದು ದೂರನ್ನು ಹಾಕಿ ಯಾಕ್ರಿ ಸರಾ ಹೀಗ್ ಮಾಡ್ತಿದಿರೀ ? ಅ೦ತ ಕೇಳಬೇಕು ಅಷ್ಟೇ. ಈ ರೀತಿ ಹತ್ತು ಜನ ಕೇಳಿದ್ರೆ ಎ೦.ಟಿ.ಆರ್ ಸರಿಹೋಗ್ತರೆ. ಇವರು ನಮ್ಮೋರೆ ಸಾರ್.............. ಕರೆದು ಬುದ್ದಿ ಹೇಳಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾಸ್ಕರ್ ಅವರು ಹೇಳುವ ಹಾಗೆ ಬಹಿಷ್ಕರಿಸುವ ಟ್ರಿಕ್ ಎಲ್ಲಾ ಈ ಕಾಲದ ಉದಾರೀಕೃತ ಮಾರುಕಟ್ಟೆಯಲ್ಲಿ ಕೆಲಸ ಮಾಡಲಾರದು ಎನ್ನುವುದನ್ನು ನಾವೆಲ್ಲಾ ಇಲ್ಲಿ ತಿಳಿದುಕೊಳ್ಳೋಣ.
ಇಂದು ನಾವೊಬ್ಬರು ಗ್ರಾಹಕರಾಗಿ ಒಂದು ಪದಾರ್ಥವನ್ನು ಬಹಿಷ್ಕರಿಸುತ್ತೇವೆಯಾದರೂ, ಎಲ್ಲೋ ಒಂದು ಸಂದರ್ಭದಲ್ಲಿ ನಮ್ಮಲ್ಲೇ ಯಾರಾದರೂ ಒಂದು ಪರಿಸ್ಥಿತಿಯಲ್ಲಿ ಇವರ ಪದಾರ್ಥವನ್ನು ಕೊಳ್ಳುವ ಕೆಲಸ ನಡೆದೇ ನಡಿಯುತ್ತಾ ಇರುತ್ತದೆ. ಅಲ್ಲದೆ, ನಾವೆಲ್ಲಾ ನಮ್ಮ ಜೀವನ ಶೈಲಿಯಲ್ಲಿ ತೊಡಗಿ ಹೋಗಿರುವಾಗ ಸುತ್ತಲಿನ ಎಲ್ಲಾ ಜನರಿಗೂ ಇಂತಹ ಒಳ್ಳೆಯ ಪದಾರ್ಥಗಳನ್ನು ಕೊಳ್ಳಬೇಡಿ ಅಂತ ಹೇಳುತ್ತಾ ತಿರುಗಿದರೆ, ನಿಮ್ಮನ್ನೇ ಹೀಯಾಳಿಸಾರು, ಹುಷಾರ್!

ಇಷ್ಟೆಲ್ಲಾ ಅಲ್ಲದೆ, ಇನ್ನೊಂದು ಕಾರಣ ಇದೆ. ಬಹಿಷ್ಕಾರ ಮಾಡಿ, ಮಾರುಕಟ್ಟೆಯಲ್ಲಿ ಬಂಧ್ ಮಾಡಿ, ಇಂತದ್ದೆಲ್ಲಾ ಮಾರುಕಟ್ಟೆಗೆ ಏಟು ಮಾಡುವ ಹುನ್ನಾರಗಳು. ಇದನ್ನು ಮಾಡಲು ನಾವು ಹೊರಡಬೇಕಿಲ್ಲ. ಮಾರುಕಟ್ಟೆಯಲ್ಲಿ ಕನ್ನಡದ ವಾತಾವರಣ ಪುನ: ತರಲು/ತರಿಸಲು ನಾವು ಕನ್ನಡಿಗರನ್ನು ಮೊದಲು ಅದರಿಂದ ದೂರ ಓಡಿಹೋಗುವ ಹಾಗೆ ಮಾಡುವುದು ಎಷ್ಟು ಸರಿ ಹೇಳಿ? ಅದರ ಬದಲು, ಸರಿಯಾದ ಚಿಂತನೆ ಮಾಡಿ, ಮಾರುಕಟ್ಟೆಯ ಲೆಕ್ಕಾಚಾರವನ್ನು ಅರಿತು, ಇಂತಹ ಸಂಸ್ಥೆಗಳೆದುರು ಕನ್ನಡವಿಲ್ಲದ ಪರಿಸ್ಥಿತಿಯಿಂದ ಅವರು ಅನುಭವಿಸುವ ನಷ್ಟದ ಅರಿವು ಮೂಡಿಸೋಣ. ಅದರೆದುರು ಕನ್ನಡ ಇರುವ ಪರಿಸರದಿಂದ ಹೆಚ್ಚುವರಿ ಲಾಭದ ಸೂಚನೆ ನೀಡೋಣ.

ಇದನ್ನೆಲ್ಲಾ ಸಾಧಿಸಲು, ಮೊದಲು ನಾವೆಲ್ಲಾ ಸೇರಿ ಇವರಿಗೆ ಸಾವಿರಾರು ಸಂಖ್ಯೆಯಲ್ಲಿ ಮಿಂಚೆ ಕಳಿಸಬೇಕು. ಹಾಗೆ ಮಾಡಿದಾಗ ಯಾವನೇ ಆಗಲಿ, ಮಾರುಕಟ್ಟೆಯಲ್ಲಿ ಇಂತಹ ತಪ್ಪನ್ನು ತಾನು ಮಾಡುತ್ತಿದ್ದೇನೆಂಬುದನ್ನು ಅರ್ಥ ಮಾಡಿಕೊಳ್ಳುತ್ತಾನೆ. ಈ ಪುಟವನ್ನು ನೋಡಿದ ಪ್ರತಿಯೊಬ್ಬರೂ ಒಂದು ಮಿಂಚೆ ಹಾಕಿದರೆ, ಈಗಾಗಲೇ ಅವರಿಗೆ ಇವತ್ತಿನೊಳಗೇ ೨೦೦ರಿಂದ ೩೦೦ ಮಿಂಚೆ ಹೋಗಿರಬೇಕು. ಇದೇ ಸಾಕು ಅವರನ್ನು ಅಲುಗಾಡಿಸಿ, ತಪ್ಪು ಅರಿತುಕೊಳ್ಳುವತ್ತ ಸಾಗಿಸಲು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜವಾದ ಅವರೇ, ನಿಮ್ಮ ಮಾತು ನಿಜ... ನಮ್ಮೆಲ್ಲರ ಅಸ್ತ್ರ "customer feedback".. ಅದನ್ನ ನಾವು ಸರಿಯಾಗಿ ಬಳಸಬೇಕು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.