ಜರ್ಮನಿಲಿ ಡೆರ್ ಬ್ಯುರೋ ಆದ್ರೆ, ಬೆಂಗಳೂರಲ್ಲಿ ಏನು?

5

ಹಲವಾರು ದೇಶಗಳಲ್ಲಿ ಪೆನ್ನು ಪೆನ್ಸಿಲ್ಲು ಅಂಗಡಿಗಳನ್ನು ತೆರೆದಿರುವ ಸ್ಟೇಪಲ್ಸ್ ಎ೦ಬ ಕಂಪನಿ ನಮ್ಮ ಬೆಂಗಳೂರಿನಲ್ಲೂ ಮೂರು ಕಡೆ (https://www.staplesfuture.com/staplesstore.asp) ಮಳಿಗೆಗಳನ್ನು ಹೊಂದಿದೆ. ಇವರು ತಮ್ಮ ಜಾಹೀರಾತು ಫಲಕಗಳನ್ನು ಬೆಂಗಳೂರಿನ ಸುತ್ತ-ಮುತ್ತ ಹಾಕಿದ್ದಾರೆ ಮತ್ತು ಈ ಫಲಕ-ಗಳಲ್ಲಿ ಕನ್ನಡ ಹುಡುಕಿದರೂ ಸಿಗಲ್ಲ.
"ಸ್ಕೂಲ್ ಕೆ ಲಿಯೇ ಸಬ್ ಕುಚ್" ಎಂಬ ಹಿಂದಿ ಪಂಚ್-ಲೈನ್-ಅನ್ನು ರೋಮನ್ ಲಿಪಿಯಲ್ಲಿ ಬರೆದು ಕನ್ನಡದ ಮಕ್ಕಳನ್ನು ತಲುಪಲು ಇಚ್ಚಿಸುತ್ತಿದೆ ಈ ಕಂಪನಿ.

ಬೆಂಗಳೂರಿನಲ್ಲಿ ಸ್ಟೇಪಲ್ಸ್ ಅವರ ಜಾಹೀರಾತುಫಲಕ

staples bengalooru

ಸ್ಟೇಪಲ್ಸ್ ಕಂಪನಿಯ ಮಳಿಗೆಗಳಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ ಅವಶ್ಯಕವಾದ ಪ್ರತಿಯೊಂದು ವಸ್ತುವನ್ನೂ ಮಾರಲಾಗುತ್ತದೆ. ಗುಂಡುಸೂಜಿ ಇ೦ದ ಹಿಡಿದು ಕಂಪ್ಯೂಟರ್ ವರೆಗೆ ಸಾಮಗ್ರಿಗಳನ್ನು ಇವರು ಮಾರುತ್ತಾರೆ.
ಇವರ ಜಾಹೀರಾತು ಫಲಕಗಳ ಗತಿ ಹೀಗಾದರೆ ಇನ್ನು ಇವರ ಮಳಿಗೆಯ ಒಳಗಡೆಯೂ ಸಹ ಒಂದೇ ಒಂದು ನಾಮಫಲಕವೂ ಕನ್ನಡದಲ್ಲಿಲ್ಲ. ಎಲ್ಲಾ ಕಡೆ ಕೇವಲ ಇಂಗ್ಲಿಷ್ ಬೋರ್ಡು-ಗಳೇ!!
ಜಾಹೀರಾತಿಗಾಗಿ ದಿನಪತ್ರಿಕೆಗಳ ಜೊತೆ ಹಂಚಿರುವ ಕೈಪಿಡಿಗಳಲ್ಲೂ ಅದೇ ಹಿಂದಿ ಡೈಲಾಗು.

ಜರ್ಮನಿ ದೇಶದಲ್ಲಿ ಜರ್ಮನ್ ಭಾಷೆಯಲ್ಲೇ ವ್ಯವಹರಿಸುವುದರಿಂದ ಲಾಭ ಹೆಚ್ಚು ಎಂದು ಕಂಡುಕೊಂಡಿರುವ ಕಂಪನಿ ಅಲ್ಲಿ ಜರ್ಮನ್ ಭಾಷೆಯನ್ನೇ ಬಳಸುತ್ತಿದೆ.
ಆದರೆ, ಬೆಂಗಳೂರಿನಲ್ಲಿ ಕನ್ನಡದಲ್ಲೇ ವ್ಯವಹರಿಸುವುದು ಲಾಭದಾಯಕ ಎಂದು ಈ ಕಂಪನಿ ತಿಳಿದುಕೊಂಡಿಲ್ಲ.

ಜರ್ಮನಿ-ಯಲ್ಲಿ ಸ್ಟೇಪಲ್ಸ್ ಅವರ ನಾಮಫಲಕ

Germany staples store

ಉತ್ತರ ಭಾರತದ ಕೆಲವು ಭಾಗಗಳಿಗೆ ಅಂತ ಮಾಡಿದ ಜಾಹೀರಾತನ್ನು ತಂದು ಬೆಂಗಳೂರಿನ ಗೋಡೆಗಳ ಮೇಲೆ ಅಂಟಿಸಿದರೆ, ಜನರನ್ನು ತಲುಪಕ್ಕೆ ಆಗಲ್ಲ ಅನ್ನೋದು ಇವರು ತಿಳಿದುಕೊಳ್ಳಬೇಕಾಗಿದೆ. ಕರ್ನಾಟಕದ ಜನರನ್ನು ತನ್ನ ಗ್ರಾಹಕರಾಗಿ ಮಾಡಿಕೊಳ್ಳಬೇಕು ಎ೦ಬ ಕನಸನ್ನೇನಾದರೂ ಇವರು ಕಾಣುತ್ತಿದ್ದರೆ, ಇವರ ಹಿ೦ದಿ ಜಾಹೀರಾತಿನಿ೦ದ ಅದು ಖ೦ಡಿತ ಸಾಧ್ಯವಿಲ್ಲ. ಬೆಂಗಳೂರಿನ ಜನತೆಯನ್ನು ಪರಿಣಾಮಕಾರಿಯಾಗಿ ತಲುಪಲು ಸಹಾಯಕವಾಗುವ ಭಾಷೆ ಕನ್ನಡ ಮಾತ್ರ, ಇಂಗ್ಲಿಷ್ ಅಥವಾ ಹಿಂದಿ ಅಲ್ಲ ಎಂಬುದು ಈ ಕಂಪನಿಗೆ ಮನವರಿಕೆಯಾಗಬೇಕು.

ಸ್ಟೇಪಲ್ಸ್ ರವರ ಈ ಧೋರಣೆ ಕನ್ನಡಿಗ ಗ್ರಾಹಕರನ್ನು ಬರಮಾಡಿಕೊಳ್ಳುತ್ತಿಲ್ಲ, ಬದಲಾಗಿ ಹೊರಗಟ್ಟುತ್ತಿರೋಹಾಗಿದೆ.
ಬನ್ನಿ, ಕನ್ನಡ ಬಳಸುವುದರಿಂದಲೇ ಸ್ಟೇಪಲ್ಸ್ ರವರು ಹೆಚ್ಚಲು ಬೆಳೆಯಲು ಸಾಧ್ಯ ಎಂಬ ಮಾತು ಅವರಿಗೆ ಹೇಳೋಣ.
ಸ್ಟೇಪಲ್ಸ್ ಕಂಪನಿ ಕನ್ನಡಿಗರನ್ನು ಕನ್ನಡದಲ್ಲೇ ಮಾತನಾಡಿಸುವಂತೆ ಬದಲಾಗಲು ಕಾರಣರಾಗೋಣ.

ಇವರ ಮಿಂಚೆ:
sales@staplesfuture.com

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಇವರು ಇನ್ನು ಇಲ್ಲಿನ ಮಾರುಕಟ್ಟೆ ತಿಳಿದಿಲ್ಲಾ ಅಂಥ ಕಾಣತ್ತೆ. ಇವರಿಗೆ ಕನ್ನಡ ತಮ್ಮ ಜಂಬಾರಕ್ಕೆ ಎಶ್ಟು ಮುಕ್ಯ ಗೊತ್ತಿಲ್ಲಾ. ಹಾಗಾಗಿ ಅದು ನಮ್ಮ ಕೆಲಸ, ಆದುದರಿಂದ ತಾವು ಅವರಿಗೆ ದೂರನ್ನು ನೀಡಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.