ನಾ ಕಾಣಬೇಕಿರುವ ಕೊಡಗು

0

ಕಳೆದ ಒಂದೆರಡು ದಿನದಿಂದ ಅಕ್ಟೋಬರ್ನಲ್ಲಿ ಹೋಗಬೇಕಾದ ಪ್ರವಾಸಕ್ಕಾಗಿ ಸ್ಥಳಗಳನ್ನು ಆಯ್ದುಕೊಳ್ಳಲೆಣೆಸಿದಾಗ ಹೊಳೆದದ್ದು ಕೊಡಗು. ಆದರೆ ಕೊಡಗಿನ ಬಗ್ಗೆ ನನಗೆ ಅಂತಹ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಕಾರಣ ಕೊಡಗು ಕೂಡ ಕೇರಳದಂತೆ ಕಾಡನ್ನೆಲ್ಲ ಆಪೋಶನ ತೆಗೆದುಕೊಂಡು ಕಾಫಿ ಎಸ್ಟೇಟ್ ಮತ್ತು ರೆಸಾರ್ಟ್ ಗಳ ಹಾವಳಿ ಈಗಂತೂ ಅಲ್ಲಿ ಹೋಂ ಸ್ಟೇಗಳದ್ದೆ ಕಾರು-ಬಾರು ಆಗಿರುವುದು ಹೀಗಾಗಿ ಕೊಡಗು ಪ್ರಸಿದ್ದ ಪ್ರವಾಸಿ ತಾಣ. ಹಾಗಾಗಿ ಪ್ರವಾಸಿಗರು ಹೆಚ್ಚು. ನನಗೆ ಹೆಚ್ಚು ಜನಸಂದಣಿಯಿರದ ಪ್ರದೇಶಗಳು ಅದರಲ್ಲೂ ಚಾರಣಕ್ಕೆ ಅವಕಾಶವಿರುವ ಪ್ರದೇಶಗಳು ಇಷ್ಟ.
ಸರಿ ಕೊಡಗಿನಲ್ಲಿ ಅಡಗಿರುವ ಪ್ರಸಿದ್ದವಲ್ಲದ ಜಲಪಾತಗಳನ್ನು ಹುಡುಕಲು ಆರಂಭಿಸಿದಾಗ ಆಶ್ಚರ್ಯಚಕಿತನಾಗುವ ಸರದಿ ನನ್ನದಾಗಿತ್ತು. ಅಬ್ಬಬ್ಬ ಸುಮಾರು ೪-೫ ಪ್ರಸಿದ್ದವಲ್ಲದ ಜಲಪಾತಗಳು ಎಲ್ಲವೂ ಮಳೆಗಾಲದ್ದವಾದರೂ ಸೌಂದರ್ಯಕ್ಕೆ ಕಡಿಮೆಯಿಲ್ಲದ ಮತ್ತು ಹೆಚ್ಚು ಜನಕ್ಕೆ ಪರಿಚಯವಿಲ್ಲದ ಈ ಜಲಪಾತಗಳು ಭೇಟಿ ಯೋಗ್ಯವೆನಿಸಿದವು. ಬಹುತೇಕರು ಕೊಡಗಿನ ಜಲಪಾತಗಳೆಂದರೆ ಮಡಿಕೇರಿ ಬಳಿಯ ಅಲ್ಲಿನ ಚರಂಡಿ ನೀರನ್ನು ಸೇರಿಸಿಕೊಂಡು ಹರಿಯುವ ಅಬ್ಬಿ ಜಲಪಾತ ಮತ್ತು ಸುಂದರವಾದ ಇರ್ಪು ಜಲಪಾತ. ಸ್ವಲ್ಪ ಆಸಕ್ತರು ಮಲ್ಲಳ್ಳಿ ಮತ್ತು ಚೇಲಾವರ ಜಲಪಾತವನ್ನು ಸಂದರ್ಶಿಸಿರುತ್ತಾರೆ. ಆದರೆ ನನಗೆ ಸಿಕ್ಕ ಜಲಪಾತಗಳ ಪಟ್ಟಿ ದೊಡ್ಡದಿದೆ. ಅಬ್ಬಿಯಾಲ ಅಬ್ಬಿಮತ್ತ ಕಲ್ಯಾಲ (ತೋಡಿಕಾನ ದಕ್ಷಿಣ ಕನ್ನಡ ಜಿಲ್ಲೆ) ದೇವರಗುಂಡಿ ದೇವರಕೊಲ್ಲಿ. ಈ ಜಲಪಾತಗಳಿಗೆ ಹೋಗುವುದು ಹೇಗೆ? ಚಾರಣ ಸಾಧ್ಯವೆ? ಇವೆಲ್ಲವನ್ನು ಅಲ್ಲಿನ  ಭೇಟಿಯ ನಂತರ ಬರೆಯಬೇಕೆಂದಿದ್ದೇನೆ. ನಿಮಗೆ ಇನ್ನೂ ಹೆಚ್ಚಿನ ಕೊಡಗಿನ ಸ್ಥಳಗಳ ಪರಿಚಯವಿದ್ದರೆ ವಿವರಗಳನ್ನು ಹಂಚಿಕೊಳ್ಳಿ  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಇರ್ಪು ಜಲಪಾತ ನೋಡಿರುವೆ. ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಾಸ್ಕಾರವರೆ ಅಲ್ಲಿ ಅಬ್ಬೆ ಫಾಲ್ಸ್ ಇದೆ. ಹಾಗೇ ಹೋಗುವಾಗ ಬ್ಯಾಂಬೂ ಹೌಸ್ ಸೇರಿದಂತೆ ಹಲವು ಸ್ಥಳಗಳು ಇದೆ. ಮಳೆ ಇಲ್ಲದಾಗ ಹೋಗಿ ಚೆನ್ನಾಗಿ ಇರುತ್ತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನ, ಕೋಮಲ್, ಧನ್ಯವಾದಗಳು, ನಾನು ಈಗಾಗಲೆ ತಿಳಿಸಿದಂತೆ ಇರ್ಪು ಚೆನ್ನಾಗಿದೆ ನಿಜ, ಅಲ್ಲಿಂದ ಮುಂದೆ ನರಿಮಲೆ ಮತ್ತು ಬ್ರಹ್ಮಗಿರಿ ತುಂಬಾ ಚೆನ್ನಾಗಿವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನರಿಮಲೆ ಮತ್ತು ಬ್ರಹ್ಮಗಿರಿ ಚೆನ್ನಾಗಿದೆ. ಚಾರಣ ಮಾಡಿ ಇರ್ಪು ಜಲಪಾತದಲ್ಲಿ ಬಿದ್ರೆ ಆಹಾ ಸೂಪರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.