ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ

5

ಪ್ರಿಯರೇ,


ಅಂದು ನನ್ನ ವೆಲ್ನೆಸ್ ಟುಡೆ ಆನ್ಲೈನ್ ಪತ್ರಿಕೆಯನ್ನು ಹೊರತಂದ ವಿಷಯ ನಿಮ್ಮಲ್ಲಿ ಹಂಚಿಕೊಂಡಿದ್ದೆ. ಈಗ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ ಹೇಳೋಣ ಅಂತ ಬಂದೆ.


ನನ್ನ ತಾಣದ ಅಂಕಿ-ಅಂಶಗಳಲ್ಲಿ ನನಗೆ ಖುಶಿಯಾದ ವಿಷಯವೇನು ಗೊತ್ತಾ? ಅತಿ ಹೆಚ್ಚು ಓದುಗರು ಭಾರತದಿಂದ ಬಂದಿದ್ದಾರೆ, ಅದರಲ್ಲೂ ಕನ್ನಡಿಗರು, ಅದರಲ್ಲೂ ಸಂಪದಿಗರ ಕೊಡುಗೆ ತುಂಬಾ ಇದೆ. ಸುಮಾರು ೬೦೦ ಓದುಗರಲ್ಲಿ ೨೫೦ ಭಾರತೀಯರು, ಅದರಲ್ಲಿ ೭೫ ಜನ ಸಂಪದದಿಂದ ಬಂದಿದ್ದಾರೆ, ಬಹಳ ಸಂತೋಷವಾಯ್ತು. ಸ್ನೇಹಿತರೇ, ನಿಮ್ಮ ಅಭಿಮಾನ ಸಂತಸ ತಂದಿದೆ. ನಿಮ್ಮಿಂದ ಬರುವ ಸಲಹೆ ಮತ್ತು ಪ್ರಶ್ನೆಗಳಿಗೂ ನನ್ನ ಸ್ವಾಗತವಿದೆ.


ಇನ್ನೊಂದು ಮುಖ್ಯ ವಿಚಾರವೆಂದರೆ, ನನ್ನ ಕೆಲಸವನ್ನು ಮೆಚ್ಚಿ ಸಂಪದಿಗ ವಿಜಯ್ ಪೈ ರವರು ಒಂದು ಸುಂದರವಾದ ಲೋಗೊ ಮತ್ತು ಬ್ಯಾನರ್ ಮಾಡಿಕೊಟ್ಟಿದ್ದಾರೆ, ಉಚಿತವಾಗಿ! ನನ್ನ ಮನಸ್ಸಿಗೆ ಬಲು ಖುಶಿಯಾಯ್ತು :)


ನಿಮ್ಮೆಲ್ಲರ ಸಲಹೆ-ಪ್ರೋತ್ಸಾಹಗಳೇ ನಮ್ಮಂತಹವರ ಕೆಲಸಕ್ಕೆ ಶಕ್ತಿ ತುಂಬುವುದು.


ಬರುತ್ತಿರಿ ಗೆಳೆಯರೆ...


ಹಾಂ...ಮರೆತಿದ್ದೆ... ಈ ಪತ್ರಿಕೆಯ ಫೇಸ್ಬುಕ್ ಪುಟ ಕೂಡಾ ಇದೆ ಮತ್ತು ಇದುವರೆಗೆ ೧೩೨ ಜನ ಅಭಿಮಾನಿಗಳಿದ್ದಾರೆ, ಸಂಪದಿಗರೂ ಇದ್ದಾರೆ ಅಲ್ವಾ...


ನಿಮ್ಮ ಗಮನಕ್ಕೆ: ಇಷ್ಟೆಲ್ಲ ಆಗಿರುವುದು ಕೆಲವೇ ದಿನಗಳಲ್ಲಿ, ಜೂನ್ ೧ ರಂದು ಪತ್ರಿಕೆ ಪ್ರಕಟಣೆಯಾಯ್ತು. :)


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ನಿಮ್ಮ ಅವಿರತ ಪ್ರಯತ್ನ ಇನ್ನು ಹೆಚ್ಚಿನ ಯಶಸ್ಸನ್ನು ಪಡೆಯಲಿ ಎ೦ದು ಹಾರೈಸುತ್ತೇನೆ. ನಿಮ್ಮ "ಆಯುಶ್ಕಾಮೀಯ" ಆಯುರ್ವೇದ ತಾಣದಲ್ಲಿ ಮಾಹಿತಿ ಇನ್ನೂ ಹೆಚ್ಚು ಬ೦ದರೆ ಚೆನ್ನಾಗಿತ್ತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮಗೆ ಶುಭವಾಗಲಿ ಎ೦ದು ಹಾರೈಸುತ್ತೇನೆ. ವಸಂತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು. ಆಯುಷ್ಕಾಮೀಯವನ್ನು ಇನ್ನಷ್ಟು ಮಾಹಿತಿಗಳಿಂದ ಉಪಯುಕ್ತ ಮಾಡಬೇಕು ಎಂದಿದೆ, ಸಮಯದ ಅಭಾವದಲ್ಲಿ ಸಾಧ್ಯವಾಗುತ್ತಿಲ್ಲ. ಆದಷ್ಟು ಶೀಘ್ರ ಪ್ರಯತ್ನಿಸುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನ, ನಮ್ಮೆಲ್ಲರಿಗಿಂತ ಹೆಚ್ಚಿನದಾಗಿ ಸಂಪದದ ಕತೃ ಶ್ರೀಯುತ ಹರೀಶ್ ನಾಡಿಗ್ ರಿಗೆ ಧನ್ಯವಾದ ಹೇಳಿ. ಅವರು ಇದನ್ನು ಹುಟ್ಟು ಹಾಕಲಿಲ್ಲವೆಂದರೆ ನಾವು ನೀವು ಭೇಟಿಯಾಗುತ್ತಲೇ ಇರಲಿಲ್ಲ. ಕ್ರೆಡಿಟ್ ಎಲ್ಲಾ ನಾಡಿಗರಿಗೇ ಸಲ್ಲಬೇಕು ಅನ್ನುವುದು ನನ್ನ ಅನಿಸಿಕೆ. ನಿಮ್ಮ ಉದ್ದೇಶ ಸಂಪನ್ನವಾಗಲಿ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖಂಡಿತ...ಎಲ್ಲ ಕನ್ನಡ"ನಾಡಿಗ"ರಿಗೂ ನನ್ನ ಧನ್ಯವಾದ ಸಲ್ಲುತ್ತದೆ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.