ನನ್ನ ಸಂತಸ ನಿಮ್ಮೊಂದಿಗೆ...ಅನಿಸಿಕೆ ಕೂಡಾ ಬೇಕು...

4.8

ಸಂಪದಿಗ ಮಿತ್ರರಲ್ಲಿ ನನ್ನ ಒಂದು ಸಂತಸವನ್ನು ಹಂಚಿಕೊಳ್ಳೋಣ ಅನಿಸಿತು...ಅದಕ್ಕೇ ಈ ಬರಹ. :) 

ಬಹಳ ದಿನಗಳಿಂದ ಆರೋಗ್ಯ ಕ್ಷೇತ್ರದಲ್ಲಿನ ವಿಚಾರಗಳನ್ನು ಹಂಚಿಕೊಳ್ಳಲು ಒಂದು ವೆಬ್ಸೈಟ್ ಮಾಡಬೇಕು ಅಂದುಕೊಂಡಿದ್ದೆ. ಕಳೆದ ತಿಂಗಳು ಅದಕ್ಕೊಂದು ಸ್ಪಷ್ಟ ಕಲ್ಪನೆ ಸಿಕ್ಕಿ, ಇ-ಪತ್ರಿಕೆ ಮಾಡುವುದು ಅಂತ ಹೊರಟೆ. ಬಹಳ ಹುಡುಕಾಡಿ, ಜನಸಂಪರ್ಕ ಮಾಡಿ, ಲೇಖನಗಳು ದೊರೆತ ಮೇಲೆ ಜೂನ್ ೧ ರಂದು ಅದನ್ನು ಹೊರತಂದಾಯಿತು. :) 

"ದ ವೆಲ್ನೆಸ್ ಟುಡೆ" ಅಂತ ಹೆಸರೂ ಇಟ್ಟಿದ್ದಾಯಿತು. ಮೊದಲಿಗೆ ಅದನ್ನು ಹಣ ಕೊಟ್ಟು ಸೇರುವಂತೆ ಮಾಡಿದ್ದೆ (ಉಚಿತಕ್ಕೆ ಬೆಲೆ ಇಲ್ಲ ಎಂಬ ಭಾವನೆಯಿಂದ). ನಂತರ ಯಾಕೋ 'ಆರೋಗ್ಯ' ವಿಷಯದಲ್ಲಿ ಅದು ಸರಿಯಲ್ಲ ಅನ್ನಿಸಿತು. ಹಾಗೇ ಅದನ್ನು ಉಚಿತ ಸದಸ್ಯತ್ವ ಅಂತ ಮಾಡಿದೆ. ಆದರೆ, ಅದನ್ನು ನಡೆಸುವ, ಬರಹಗಾರರಿಗೆ ಸಂಭಾವನೆ ಕೊಡುವ ಇತ್ಯಾದಿ ಖರ್ಚಿಗೆ ಬೇಕಲ್ಲ ಅಂತ ಎಷ್ಟಾದರೂ ಕೊಡಬಹುದು ಅಂತ 'ಡೊನೇಷನ್' ಗುಂಡಿ ಇಟ್ಟಿದ್ದೇನೆ. 

ನನ್ನ ಒಬ್ಬ ಸ್ನೇಹಿತನ ಪ್ರಕಾರ ಅದು ಕೂಡ ಮಾಡಬಾರದಂತೆ, ಇಮೇಜ್ ಒಳ್ಳೆಯದಿರಲ್ಲ ಅಂತಾನೆ. ಒಂದು ರೀತಿಯಲ್ಲಿ ಹೌದಾದರೂ, ಒತ್ತಾಯವಿಲ್ಲದ ಕಾರಣ ಮತ್ತು ಎಷ್ಟಾದರೂ ಕೊಡಬಹುದಾದ ಕಾರಣ, ನಮ್ಮ ಒಳ್ಳೆಯ ಪ್ರಯತ್ನವನ್ನು ಮುಂದಾದರೂ ಗುರ್ತಿಸುತ್ತಾರೆ ಅಂತ ನನ್ನ ಭಾವನೆ. ನಿಮ್ಮ ಅಭಿಪ್ರಾಯವೇನು, ತಿಳಿಸ್ತೀರಾ? 

ವಿ.ಸೂ: ಹೆಚ್ಚು ಜನವನ್ನು ತಲುಪಲಿ ಅಂತ ಇಂಗ್ಲಿಷ್ನಲ್ಲಿ ಮಾಡಿದ್ದೇನೆ ಅಷ್ಟೆ, ಬೇರೇನಿಲ್ಲ. :) ಅಲ್ಲದೆ ನನ್ನ ಇಲ್ಲಿನ ಬಹಳಷ್ಟು ಮಿತ್ರರಿಗೆ ಕನ್ನಡ ಬರುವುದಿಲ್ಲವಲ್ಲ, ಅದು ಇನ್ನೊಂದು ಕಾರಣ. :) :)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸರ್ ಒಂದು ಒಳ್ಳೆ ಕಾರ್ಯಕ್ಕೆ ಮುಂದಾಗಿದ್ದೀರಾ. ನಿಮಗೆ ಶುಭವಾಗಲಿ. ಆಮೇಲೆ ನಿಮ್ಮ ವೆಬ್ ಸೈಟ್ ನೋಡಿದೆ ಚೆನ್ನಾಗಿದೆ. ನನ್ನದೊಂದು ಮನವಿ ಇಂಗ್ಲೀಷ್ ಮತ್ತು ಕನ್ನಡ ಎರಡೂ ಭಾಷೆಯಲ್ಲಿ ಇರಲಿ ಎನ್ನುವುದು ನನ್ನ ಆಸೆ. ನಿಮ್ಮಿಂದ ಹೀಗೆ ಉತ್ತಮ ಕೆಲಸವಾಗುತ್ತಿರಲಿ ಎಂದು ಹಾರೈಸುತ್ತೇನೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಹಾರೈಕೆಯಿಂದ ಇನ್ನಷ್ಟು ವಿಶ್ವಾಸ ಬಂದಿದೆ, ಧನ್ಯವಾದಗಳು. ಕನ್ನಡದಲ್ಲಿ ಮಾಡುವ ಆಸೆಯಿದೆ, ಆದರೆ ಆಟೋಮೇಟೆಡ್ ಭಾಷಾಂತರ ಇಷ್ಟವಿಲ್ಲ. ಸಾಧ್ಯವಾದರೆ ಭವಿಷ್ಯದಲ್ಲಿ ಪ್ರಯತ್ನಿಸುತ್ತೇನೆ. ಕೆಲಸದ ಒತ್ತಡದ ಮಧ್ಯೆ ಈಗ ಸಾಧ್ಯವಾಗುತ್ತಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಭಿನಂದನೆಗಳು ಡಾ. ಪ್ರಸನ್ನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಹಾರೈಕೆಗಳು ಮತ್ತಷ್ಟು ಬಲ ತುಂಬುತ್ತದೆ. ನೀವೆಲ್ಲ ಬಂದು, ಓದಿ, ಸಲಹೆ ನೀಡಿದರೆ ಅದನ್ನು ಇನ್ನಷ್ಟೂ ಉತ್ತಮಗೊಳಿಸಬಹುದು. ಯಾವ ವಿಷಯಗಳನ್ನು ತಿಳಿಯಬಯಸುತ್ತೀರಿ ಎಂದೂ ತಿಳಿಸಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆರೋಗ್ಯದ ಬಗ್ಗೆ ಕಾಳಜಿ ಬೇಕೇ ಬೇಕಲ್ಲ ಎಂದು ನಾವು ನಮ್ಮ ಆರೋಗ್ಯದ ಬಗ್ಗೆ ನಾವು ಕಾಳಜಿ ವಹಿಸುತ್ತೇವೆ, ನೀವು ಎಲ್ಲರ ಆರೋಗ್ಯದ ಬಗೆಗೆ (ಮಾಹಿತಿ ಒದಗಿಸುವ ಮೂಲಕ) ಕಾಳಜಿ ವಹಿಸುತ್ತಿದ್ದೀರಿ ನಿಮ್ಮ ಪ್ರಯತ್ನಗಳೆಲ್ಲ ಸಫಲಗೊಳ್ಳಲಿ. ಹೆಚ್ಚು ಹೆಚ್ಚು ಜನರು ಇದರ ಫಲಾನುಭವಿಗಳಾಗಲಿ ಎಂದು ಆಶಿಸುತ್ತೇನೆ. ನಿಮಗೆ ಶುಭವಾಗಲಿ. ವಂದನೆಗಳು. ಅಂಬಿಕಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು... ನಿಮ್ಮ ಅಭಿಪ್ರಾಯ, ಸಲಹೆಗಳನ್ನು ಎದುರುನೋಡುತ್ತೇನೆ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನ .. ತಮ್ಮ ವೈದ್ಯಕಿಯ ವೃತ್ತಿಯ ಒತ್ತಡಗಳ ನಡುವೆಯೂ ತಾವು ಈ ಎಲ್ಲ ಉದ್ದೇಶಗಳಿಗೆ ಸಮಯ ಮೀಸಲಿಡತ್ತಿರುವುದು ಅಭಿನಂದನಾವಾರ್ಹವಾದದ್ದು. ತಮ್ಮ ಅಂತರಜಾಲ ತಾಣ ಅತ್ಯುತ್ತಮ ಮಾಹಿತಿಯನ್ನು ಹೊಂದಿ, ಸ್ವಾಸ್ಥ್ಯ ಸಂಬಂದಿತ ವಿಷಯದಲ್ಲಿ ಜನರು ವಿಶ್ವಾಸಪೂರ್ಣವಾಗಿ ಉಲ್ಲಖಿಸಬಹುದಾದ ತಾಣವಾಗಲಿ ಎಂಬ ಹಾರೈಕೆ. --- ಒಬ್ಬ ವೆಬ್ ಡಿಸೈನರ ದೃಷ್ಟಿಕೋನದಿಂದ ಕೆಲವೊಂದು ವಿಷಯಗಳನ್ನು ಗಮನಿಸಿದ್ದೇನೆ. ತಮ್ಮ ಇಮೇಲ್ ಎಡ್ರೆಸ್ ಕೊಟ್ಟಲ್ಲಿ ಮೇಲ್ ಮಾಡುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದು ತುಂಬಾ ಉಪಯುಕ್ತವಾಗಬಹುದು, ಸಂತಸವಾಯ್ತು. prasanna(at)kakunje(dot)com
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ವಿಜಯ್, ನಿಮ್ಮ ಸಲಹೆ ಮತ್ತು ಸಹಾಯ ತುಂಬಾ ಉಪಯೋಗವಾಯ್ತು. ನನ್ನ ತಾಣವೀಗ ( www.thewellnesstoday... ) ಹೊಸ ಕಳೆಯಿಂದ ಲಕಲಕಿಸುತ್ತಿದೆ :) ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನ..ತಮ್ಮ ಉತ್ತಮ ಉದ್ದೇಶಕ್ಕೆ ನನ್ನದೊಂದು ಅಳಿಲು ಕಾಣಿಕೆ. ಸ್ವಾಸ್ಥ್ಯ ಸಂಬಂಧಿತ ವಿಷಯಗಳಲ್ಲಿ ತಮ್ಮ ತಾಣ ಜನಪ್ರಿಯ ಮತ್ತು ಉಪಯುಕ್ತವಾಗಲಿ ಎಂಬ ಶುಭಹಾರೈಕೆ ಮತ್ತೊಮ್ಮೆ :).
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.