PrasannAyurveda ರವರ ಬ್ಲಾಗ್

ವಾಹ್ ರೇ ಸಂಪದ!

ಪ್ರಿಯರೇ,

ಬಹುದಿನಗಳ, ಅಲ್ಲಲ್ಲ... ಬಹು ಮಾಸಗಳ ನಂತರ ಸಂಪದಕ್ಕೆ ಪುನಃ ಭೇಟಿ ನೀಡಿದ್ದೇನೆ... ಹೊಸ ಬಣ್ಣ, ಹೊಸ ಲಾವಣ್ಯ ತುಂಬಿ ನಿಂತಿದ್ದಾಳೆ ಸಂಪದ (ದಾ)...!!! ಸಂತೋಷವಾಗ್ತಿದೆ...

ಈಗ ನಾನು ಬ್ಯಾಂಕಾಕಿನಿಂದ ಅಲ್ಲ, ಭಾರತದ ಮಂಗಳೂರಿನಿಂದ ಈ ಅಕ್ಷರಗಳನ್ನು ಟೈಪಿಸುತ್ತಿದ್ದೇನೆ! ಹೌದು, ನಾನು ಭಾರತಕ್ಕೆ ಮರಳಿ ಬಂದಿದ್ದೇನೆ. :)

ಆಯುರ್ವೇದ ಪಾಠ, ಚಿಕಿತ್ಸೆ ಮತ್ತು ಫೋಟೋಗ್ರಫಿಯ ಜೊತೆಗೆ ರಿ/ಮ್ಯಾಕ್ಸ್ ಎಂಬ ಸಂಸ್ಥೆಯ ಫ಼್ರ್ಯಾಂಚೈಸಿಯನ್ನು ನಡೆಸುತ್ತಿದ್ದೇನೆ. ಅದರಲ್ಲಿ ಜನರಿಗೆ ಎಲ್ಲಾ ಬಗೆಯ ಆಸ್ತಿ (ರಿಯಲ್ ಎಸ್ಟೇಟ್) ಗೆ ಸಂಬಂಧಿಸಿದ ವ್ಯವಹಾರಗಳನ್ನು ನಡೆಸಲು ಅನುಕೂಲ ಮಾಡಿಕೊಡುತ್ತಿದ್ದೇವೆ. :)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮಿತ್ರರೇ, ನನ್ನನ್ನು ಬೆಂಬಲಿಸಿ !

ಸಂಪದಿಗ ಮಿತ್ರರೇ, 


ಇದೊಂದು ವಿನಂತಿ ಪತ್ರ.... 


ದಿಲ್ಲಿಯಲ್ಲಿ ನಡೆಯಲಿರುವ ಪ್ರವಾಸಿ ಭಾರತೀಯ ದಿವಸ ೨೦೧೧ ರ ಪ್ರಯುಕ್ತ ಪ್ರಕಟಣೆಯಾಗಿರುವ ಅನಿವಾಸಿ ಭಾರತೀಯರ ಒಂದು ಸ್ಪರ್ಧೆಯಲ್ಲಿ ಭಾಗವಹಿಸಿರುವ ನಾನು ನಿಮ್ಮ ಪ್ರೋತ್ಸಾಹ ದೊರೆತಲ್ಲಿ ಭಾರತದ ಮಹತ್ವವನ್ನು ಎಲ್ಲೆಡೆ ಪಸರಿಸುವ ಕೆಲಸ ಮಾಡಬೇಕೆಂಬ ಆಸೆ ಹೊಂದಿದ್ದೇನೆ. ಈ ಕಾರ್ಯದಲ್ಲಿ ನನ್ನನ್ನು ಬೆಂಬಲಿಸಿ ಗೆಲ್ಲಿಸುತ್ತೀರಿ ಅಂತ ನಂಬಿದ್ದೇನೆ. ಇದಕ್ಕಾಗಿ ತಮ್ಮ ಸ್ವಲ್ಪ ಸಮಯ ನೀಡಿ, ಈ ತಾಣಕ್ಕೆ ಹೋಗಿ, ಅಲ್ಲಿ ನನ್ನ ಬಗ್ಗೆ ಬರೆದ ವಿಚಾರಗಳು ಸರಿಯೆನಿಸಿದರೆ, ನನ್ನನ್ನು ದೃಢೀಕರಿಸಿ (endorse me) ಮತ್ತು ತಮ್ಮ ಮತ ಹಾಕಿ (vote for me) ಬೆಂಬಲಿಸುವಿರಿ ಎಂದು ನಂಬಿದ್ದೇನೆ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ

ಪ್ರಿಯರೇ,


ಅಂದು ನನ್ನ ವೆಲ್ನೆಸ್ ಟುಡೆ ಆನ್ಲೈನ್ ಪತ್ರಿಕೆಯನ್ನು ಹೊರತಂದ ವಿಷಯ ನಿಮ್ಮಲ್ಲಿ ಹಂಚಿಕೊಂಡಿದ್ದೆ. ಈಗ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ ಹೇಳೋಣ ಅಂತ ಬಂದೆ.


ನನ್ನ ತಾಣದ ಅಂಕಿ-ಅಂಶಗಳಲ್ಲಿ ನನಗೆ ಖುಶಿಯಾದ ವಿಷಯವೇನು ಗೊತ್ತಾ? ಅತಿ ಹೆಚ್ಚು ಓದುಗರು ಭಾರತದಿಂದ ಬಂದಿದ್ದಾರೆ, ಅದರಲ್ಲೂ ಕನ್ನಡಿಗರು, ಅದರಲ್ಲೂ ಸಂಪದಿಗರ ಕೊಡುಗೆ ತುಂಬಾ ಇದೆ. ಸುಮಾರು ೬೦೦ ಓದುಗರಲ್ಲಿ ೨೫೦ ಭಾರತೀಯರು, ಅದರಲ್ಲಿ ೭೫ ಜನ ಸಂಪದದಿಂದ ಬಂದಿದ್ದಾರೆ, ಬಹಳ ಸಂತೋಷವಾಯ್ತು. ಸ್ನೇಹಿತರೇ, ನಿಮ್ಮ ಅಭಿಮಾನ ಸಂತಸ ತಂದಿದೆ. ನಿಮ್ಮಿಂದ ಬರುವ ಸಲಹೆ ಮತ್ತು ಪ್ರಶ್ನೆಗಳಿಗೂ ನನ್ನ ಸ್ವಾಗತವಿದೆ.


ಇನ್ನೊಂದು ಮುಖ್ಯ ವಿಚಾರವೆಂದರೆ, ನನ್ನ ಕೆಲಸವನ್ನು ಮೆಚ್ಚಿ ಸಂಪದಿಗ ವಿಜಯ್ ಪೈ ರವರು ಒಂದು ಸುಂದರವಾದ ಲೋಗೊ ಮತ್ತು ಬ್ಯಾನರ್ ಮಾಡಿಕೊಟ್ಟಿದ್ದಾರೆ, ಉಚಿತವಾಗಿ! ನನ್ನ ಮನಸ್ಸಿಗೆ ಬಲು ಖುಶಿಯಾಯ್ತು :)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ನನ್ನ ಸಂತಸ ನಿಮ್ಮೊಂದಿಗೆ...ಅನಿಸಿಕೆ ಕೂಡಾ ಬೇಕು...

ಸಂಪದಿಗ ಮಿತ್ರರಲ್ಲಿ ನನ್ನ ಒಂದು ಸಂತಸವನ್ನು ಹಂಚಿಕೊಳ್ಳೋಣ ಅನಿಸಿತು...ಅದಕ್ಕೇ ಈ ಬರಹ. :) 


ಬಹಳ ದಿನಗಳಿಂದ ಆರೋಗ್ಯ ಕ್ಷೇತ್ರದಲ್ಲಿನ ವಿಚಾರಗಳನ್ನು ಹಂಚಿಕೊಳ್ಳಲು ಒಂದು ವೆಬ್ಸೈಟ್ ಮಾಡಬೇಕು ಅಂದುಕೊಂಡಿದ್ದೆ. ಕಳೆದ ತಿಂಗಳು ಅದಕ್ಕೊಂದು ಸ್ಪಷ್ಟ ಕಲ್ಪನೆ ಸಿಕ್ಕಿ, ಇ-ಪತ್ರಿಕೆ ಮಾಡುವುದು ಅಂತ ಹೊರಟೆ. ಬಹಳ ಹುಡುಕಾಡಿ, ಜನಸಂಪರ್ಕ ಮಾಡಿ, ಲೇಖನಗಳು ದೊರೆತ ಮೇಲೆ ಜೂನ್ ೧ ರಂದು ಅದನ್ನು ಹೊರತಂದಾಯಿತು. :) 


"ದ ವೆಲ್ನೆಸ್ ಟುಡೆ" ಅಂತ ಹೆಸರೂ ಇಟ್ಟಿದ್ದಾಯಿತು. ಮೊದಲಿಗೆ ಅದನ್ನು ಹಣ ಕೊಟ್ಟು ಸೇರುವಂತೆ ಮಾಡಿದ್ದೆ (ಉಚಿತಕ್ಕೆ ಬೆಲೆ ಇಲ್ಲ ಎಂಬ ಭಾವನೆಯಿಂದ). ನಂತರ ಯಾಕೋ 'ಆರೋಗ್ಯ' ವಿಷಯದಲ್ಲಿ ಅದು ಸರಿಯಲ್ಲ ಅನ್ನಿಸಿತು. ಹಾಗೇ ಅದನ್ನು ಉಚಿತ ಸದಸ್ಯತ್ವ ಅಂತ ಮಾಡಿದೆ. ಆದರೆ, ಅದನ್ನು ನಡೆಸುವ, ಬರಹಗಾರರಿಗೆ ಸಂಭಾವನೆ ಕೊಡುವ ಇತ್ಯಾದಿ ಖರ್ಚಿಗೆ ಬೇಕಲ್ಲ ಅಂತ ಎಷ್ಟಾದರೂ ಕೊಡಬಹುದು ಅಂತ 'ಡೊನೇಷನ್' ಗುಂಡಿ ಇಟ್ಟಿದ್ದೇನೆ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (5 votes)
To prevent automated spam submissions leave this field empty.

ಆಧ್ಯಾತ್ಮ ಮತ್ತು ವಿಜ್ಞಾನ...

ಇತ್ತೀಚಿಗೆ ಆಧ್ಯಾತ್ಮ ಮತ್ತು ವಿಜ್ಞಾನ (conventional science)ಗಳ ಬಗ್ಗೆ ಸಂಪದದಲ್ಲಿ ಬಹಳ ಚರ್ಚೆ ನಡೆಯುತ್ತಿದೆ... ಇದನ್ನೆಲ್ಲಾ ಓದಿ ನನ್ನ ಮನಸ್ಸಿನಲ್ಲಿ ಜಿಜ್ಞಾಸೆ ನಡೆಯುತ್ತಿತ್ತು... ಹಾಗೆಯೇ ನನಗೆ ಅನಿಸಿದ್ದು ಹೀಗೆ...


  • ವಿಜ್ಞಾನ ಮತ್ತು ಆಧ್ಯಾತ್ಮಗಳೆರಡೂ ಒಂದು ನಾಣ್ಯದ ಎರಡು ಮುಖಗಳು.

  • ಆಧ್ಯಾತ್ಮ ಅಂತರ್ಮುಖಿ, ವಿಜ್ಞಾನ ಬಹಿರ್ಮುಖಿ.

  • ಎರಡರ ಉದ್ದೇಶವೂ ಅನ್ವೇಷಣೆ.

  • ವಿಜ್ಞಾನ ಹೊರಪ್ರಪಂಚದ ಪ್ರಶ್ನೆಗಳಿಗೆ ಉತ್ತರವನ್ನು ಮತ್ತು ಹೊರಪ್ರಪಂಚದ ಸುಖ-ಸೌಲಭ್ಯಗಳನ್ನು ಅನ್ವೇಷಿಸುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - PrasannAyurveda ರವರ ಬ್ಲಾಗ್