ಏಕೆ ಇಲ್ಲಿ ಸಿಕ್ಕಿಹಾಕಿಕೊಂಡೆ ನೀನು?

4

(ಇದು ನನ್ನ ಮೊದಲ ಕವನ)

ಏಕೆ ಇಲ್ಲಿ ಸಿಕ್ಕಿಹಾಕಿಕೊಂಡೆ ನೀನು?

ಛತ್ರಿ ಹಿಡಿದು ಹೋದರೆ ನಡೆಯಲು ಬಿಡದ ಮಳೆ-ಗಾಳಿ
ದಾರಿ ಬಿಟ್ಟು ಇಳಿದರೆ ಮುತ್ತಿಕ್ಕಿ ರಕ್ತ ಹೀರುವ ಇಂಬಳಗಳು
ಮುಳುಗಿದ ಸೇತುವೆಯಾಚೆ ನಿಲ್ಲುವ ಅಸಹಾಯಕ ಬಸ್ಸುಗಳು
ಸೊಂಟದ ಮೂಳೆ ಮುರಿಸುವ ಪಾಚಿಗಟ್ಟಿದ ಅಂಗಳ
ಇಲ್ಲಿಗೇಕೆ ಬಂದು ಸಿಕ್ಕಿಹಾಕಿಕೊಂಡೆ ನೀನು?

ಗಾಳಿಗೆ ಬಾಲ ತುಂಡರಿಸಿಕೊಂಡು ಸಾಯುವ ಫೋನು
ಗುಡುಗಿನ ಶಬ್ಧಕ್ಕೆ ಹೆದರಿ ಓಟ ಕೀಳುವ ಕರೆಂಟು
ನೀರು ಬೀಳಿಸಿಕೊಂಡು ಸುಟ್ಟುಹೋಗುವ ಮೂರ್ಖ(ರ) ಪೆಟ್ಟಿಗೆಗಳು
ತೂತು ಮಾಡಿನ ಕೆಳಗಿಟ್ಟ ಪಾತ್ರೆಗಳ ಅಹೋರಾತ್ರಿ ಸಂಗೀತ
ಇದನನುಭವಿಸಲೆಂದೇ ಇಲ್ಲಿಗೆ ಬಂದೆಯಾ ನೀನು?

ದುಡ್ಡು ಕೊಟ್ಟರೂ ಗದ್ದೆ ಕೆಲಸಕ್ಕೆ ಬಾರದ ಕೆಲಸಗಾರರು
ಅಡಿಕೆಯ ಚಿಗುರನ್ನೂ ಸುಮ್ಮನೆ ಬಿಡದ ವಾನರ ಸೈನ್ಯ
ಎರಡು ತಿಂಗಳಿಗೋಸ್ಕರ ವರ್ಷವಿಡೀ ಸಾಕಬೇಕಾದ ಎತ್ತುಗಳು
ಮಳೆ ಬಂದರೆ ಮಣ್ಣಿನ ಮುದ್ದೆಯಾಗುವ ಗೋಡೆ-ಅಡಿಪಾಯಗಳು
ಈ ಕಷ್ಟವ ನೋಡಲೆಂದೇ ಇಲ್ಲಿಗೆ ಬಂದೆಯಾ ನೀನು?

ಕಾಯಿ ಬೀಳಿಸಿ ಹೆಂಚು ಒಡೆಯುವ ತೆಂಗಿನಮರ
ಹೊಂಡ ತಪ್ಪಿಸುವ ಸೈಕಲ್ಲುಗಳಿಗೆ ಚರಂಡಿ ತೋರಿಸುವ ರಸ್ತೆಗಳು
ಸಂಜೆಗೆ ಬರುವ ಬೆಳಗ್ಗಿನ ಹಳಸಲು ನ್ಯೂಸ್ ಪೇಪರ್ರು
ಬಿಸಿಲಿಗೆ ಬಟ್ಟೆ ಹಾಕುವುದನ್ನೇ ಕಾಯುವ ಮಾಯಕಾರ ಮಳೆ
ಇದನ್ನೆಲ್ಲಾ ತಾಳಿಕೊಳ್ಳಲೆಂದೇ ಇಲ್ಲಿಗೆ ಬಂದೆಯಾ ನೀನು?

ಮಳೆ-ಗಾಳಿ, ಕೊಟ್ಟಿಗೆಯ ಥಂಡಿಗೆ ನರಳುವ ಜಾನುವಾರುಗಳು
ಹಜಾರದಲ್ಲಿಟ್ಟ ಮರದ ಅಕ್ಕಿಯ ಪಥಾಸನ್ನೂ ಬಿಡದ ಹೆಗ್ಗಣ
ತನ್ನ ಮುಂದೆ ಹೋದ ಇಲಿಯನ್ನು ನೋಡಿ ಸುಮ್ಮನಾದ ಸೋಮಾರಿ ಬೆಕ್ಕು
ಹಾವು ಇಲಿ ಹಲ್ಲಿ ಕಪ್ಪೆಗಳ ಮಿನಿ ಮೃಗಾಲಯದಲ್ಲಿ,
ವಾಸಿಸಲೆಂದೇ ಇಲ್ಲಿಗೆ ಬಂದೆಯಾ ನೀನು?

(ಕೊನೆಯವರೆಗೆ ತಾಳ್ಮೆಯಿಂದ ಓದಿದ್ದಕ್ಕೆ ನಿಮಗೆ ಧನ್ಯವಾದಗಳು. ಪೂರ್ತಿ ಕವನ ಇಷ್ಟವಾಗದಿದ್ದರೂ ಕೆಲವೊಂದು ಸಾಲುಗಳು ನಿಮಗೆ ಮೆಚ್ಚುಗೆಯಾಗುತ್ತವೆ ಎಂದು ನಂಬಿದ್ದೇನೆ. ನಿಮಗೆ ಇಷ್ಟವಾದ ಸಾಲುಗಳನ್ನು ತಿಳಿಸಿ. ಇದು ನನ್ನ ಕವನ ಬರೆಯುವ ಮೊದಲ ಪ್ರಯತ್ನವಾದ್ದರಿಂದ ನಿಮ್ಮೆಲ್ಲರ ಸಲಹೆ ಸೂಚನೆಗಳು ನನಗೆ ಅಮೂಲ್ಯ. ಅದನ್ನು ತಿಳಿಸುವಿರೆಂಬ ನಂಬಿಕೆಯಲ್ಲಿರುವ,
-ಪ್ರಸನ್ನ.ಶಂಕರಪುರ  )

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಮ್ಮ ಕವನ ಚೆನ್ನಾಗಿದೆ ನಮ್ಮ ಊರು ಜ್ಞಾಪಕಕ್ಕೆ ಬಂತು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಚೇತನ್, -ಪ್ರಸನ್ನ.ಶಂಕರಪುರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಹೊಂಡ ತಪ್ಪಿಸುವ ಸೈಕಲ್ಲುಗಳಿಗೆ ಚರಂಡಿ ತೋರಿಸುವ ರಸ್ತೆಗಳು>> ಹ..ಹ..ಹಾ ನಾನೂ ಒಮ್ಮೆ ಬಿದ್ದಿದ್ದೆ ಚರ೦ಡಿಯಲ್ಲಿ ಹೊ೦ಡ ತಪ್ಪಿಸಲು ಹೋಗಿ. ನಿಮ್ಮ ಮೊದಲ ಕವನ ಬಹಳ ಚೆನ್ನಾಗಿದೆ. ಹೀಗೇ ಮು೦ದುವರಿಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಸುಧೀಂದ್ರ, ನಾನು ಚರಂಡಿಗೆ ಬಿದ್ದೂ... ಬಿದ್ದೂ ಆಮೇಲೆ ಹೊಂಡ ತಪ್ಪಿಸುವುದನ್ನೇ ಬಿಟ್ಟುಬಿಟ್ಟೆ! ;-) -ಪ್ರಸನ್ನ.ಶಂಕರಪುರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಚೆನ್ನಾಗಿದೆ. ನಮ್ಮ ಅಜ್ಜನ ಊರಿನ ನೆನಪಾಯ್ತು. ಯಥಾವತ್ ಇದೇ ಚಿತ್ರಣ. ಬಿಡದ ಮಳೆ, ಪಾಚಿಗಟ್ಟಿದ ಅ೦ಗಳ,ಸಾಯುವ ಫ಼ೋನು, ಓಟ ಕೀಳುವ ಕರೆ೦ಟು, ಹೆ೦ಚು ಒಡೆಯುವ ತೆ೦ಗಿನಮರ, ಸ೦ಜೆ ಬರುವ ಪೇಪರ್,ಬಟ್ಟೆ ಒಣಹಾಕುವುದನ್ನೇ ಕಾಯುವ ಮಳೆ>>>>>>>>..ಓಹ್ ತು೦ಬಾ ಆಕರ್ಷಕವಾಗಿ ಪದಗಳನ್ನು ಜೋಡಿಸಿದ್ದೀರಿ. ತು೦ಬಾ..............ಇಷ್ಟವಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಸಂಧ್ಯಾ, -ಪ್ರಸನ್ನ.ಶಂಕರಪುರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಂಕರ, ನನಗೆ ಇಷ್ಟವಾಗದ ಕೆಲವೊಂದು ಸಾಲುಗಳು ಇಲ್ಲಿವೆ... ... ಎಲ್ಲಿವೆ? ಮುಂದೆಯೂ ಬರೆಯಿರಿ ಹೀಗೆಯೇ... ಶುಭವಾಗಲಿ. - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಸರ್‍, "ಶಂಕರ"ಪುರ ಅನ್ನೋದು ನನ್ನ ಊರಿನ ಹೆಸರು, "ಪ್ರಸನ್ನ" ನನ್ನ ಹೆಸರು! ಇರಲಿ ಕಾವ್ಯನಾಮವನ್ನು "ಶಂಕರ" ಎಂದೇ ಇಟ್ಟುಕೊಳ್ಳುವೆ. :) -ಪ್ರಸನ್ನ.ಶಂಕರಪುರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದು ಅಚಾತುರ್ಯದಿಂದಾದ ತಪ್ಪು. ತಿದ್ದಲಿಕ್ಕೆ ಬರುವ ಮೊದಲೇ ನಿಮ್ಮ ಪ್ರತಿಕ್ರಿಯೆ ಬಂತು, ಹಾಗಾಗಿ ತಿದ್ದದಾದೆ. :(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇರಲಿ ಬಿಡಿ, ತೊಂದರೆಯೇನಿಲ್ಲ. ಧನ್ಯವಾದಗಳೊಂದಿಗೆ, -ಪ್ರಸನ್ನ ಶಂಕರಪುರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆಯ ಪ್ರಯತ್ನ....ಹಳ್ಳಿ ಜೀವನದ ಅನಾವರಣ ವಾಯಿತು.....ಇಷ್ಟವಾದ ಸಾಲುಗಳು....ಸೊಂಟದ ಮೂಳೆ ಮುರಿಸುವ ಪಾಚಿಗಟ್ಟಿದ ಅಂಗಳ,,,ಬಿಸಿಲಿಗೆ ಬಟ್ಟೆ ಹಾಕುವುದನ್ನೇ ಕಾಯುವ ಮಾಯಕಾರ ಮಳೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಅಶ್ವಥ್, -ಪ್ರಸನ್ನ.ಶಂಕರಪುರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗ್ರಾಮ್ಯ ವಾತಾವರಣವನ್ನು ಬಿ೦ಬಿಸುವ ನಿಮ್ಮ ಕವನ ಖುಷಿ ತ೦ದಿತು. ಹೀಗೆಯೇ ಬರೆಯುತ್ತಿರಿ... ಪ್ರಸನ್ನರೇ. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ನಾವಡರೇ, ಇನ್ನಷ್ಟು ಕವನ ಬರೆಯುವ ಪ್ರಯತ್ನ ಮಾಡುವೆ. ಬರೆಯಲು ತುಂಬಾ ವಿಷಯಗಳಿವೆ. ಆದರೆ ಅದನ್ನು ಕವನವಾಗಿ ಬರೆಯಬೇಕೋ ಅಥವಾ ಪ್ರಬಂಧ ರೂಪದಲ್ಲಿ ಬರೆಯಬೇಕೋ ಗೊತ್ತಾಗುತ್ತಿಲ್ಲ. -ಪ್ರಸನ್ನ.ಶಂಕರಪುರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಲೆನಾಡ ಹುಡಗನ ಕವನ ಚೆನ್ನ , ಅವನ ಬರಹ ಚಿನ್ನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ರಘು ಸರ್‍, -ಪ್ರಸನ್ನ.ಎಸ್.ಪಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನ ಹಳ್ಳಿಯ ವಾಸ್ತವ್ಯದ ವಾಸ್ತವಿಕ ಚಿತ್ರಣ.ಸುಂದರ ಕವನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಭಾಗ್ವತ ಅವರೇ, -ಪ್ರಸನ್ನ.ಶಂಕರಪುರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಷ್ಟವಾಗದ ಸಾಲುಗಳಿಲ್ಲ ಎಲ್ಲವೂ ಇಷ್ಟವಾಗಿವೆ ಎಂದಲ್ಲ ನನ್ನ ಮನಕ್ಕೂ ಚಿಮ್ಮಿತು ಮಳೆಯ ಹನಿಗಳು ಊರನ್ನು ನೆನಪಿಸಿದಿರಿ, ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚುಟುಕು ಕವನಕ್ಕೆ ಧನ್ಯವಾದಗಳು ಸಂತೋಷ್, -ಪ್ರಸನ್ನ.ಶಂಕರಪುರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನರೇ ಸ್ವಪ್ರಯತ್ನ, ಅನಿಸಿಕೆ ಚೆನ್ನಾಗಿ ಮೂಡಿ ಬಂದಿದೆ ಪ್ರಶ್ನೆಗಳಲ್ಲದೇ ಉತ್ತರವೂ ಇದ್ದರೆ ಚೆನ್ನು ಅನ್ನಿಸಿತು ಸರಿಯೆನ್ನಿಸಿದರೆ ಮುಂದಿನದರಲ್ಲಿ ಪ್ರಯತ್ನಿಸಿ. ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನಿಸಿಕೆಗೆ ಧನ್ಯವಾದಗಳು ರಾಯರೇ, ಉತ್ತರವನ್ನೂ ಕವನದ ಇನ್ನೊಂದು ಭಾಗದಲ್ಲಿ ಬರೆದಿದ್ದೆ. ಆದರೆ ಅದು ಅಷ್ಟು ಚೆನ್ನಾಗಿರಲಿಲ್ಲ ಅಂತ ಪ್ರಕಟಿಸಲಿಲ್ಲ. ಅದನ್ನು ಸ್ವಲ್ಪ ಬದಲಾಯಿಸಿ ಪ್ರಕಟಿಸುವ ಪ್ರಯತ್ನ ಮಾಡುತ್ತೇನೆ. ಧನ್ಯವಾದಗಳೊಂದಿಗೆ, -ಪ್ರಸನ್ನ.ಶಂಕರಪುರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನ, ನಿಮ್ಮ ಕವನದ ಎಲ್ಲ ಸಾಲುಗಳೂ ಇಷ್ಟವಾದವು, ಮಲೆನಾಡಿನ ಸು೦ದರ ಚಿತ್ರಣವನ್ನು ಮೊದಲ ಕವನದಲ್ಲೇ ಚೆನ್ನಾಗಿ ಕಟ್ಟಿದ್ದೀರಿ. ಅಭಿನ೦ದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಮಂಜಣ್ಣ, -ಪ್ರಸನ್ನ.ಶಂಕರಪುರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಲ್ಪನಾವಿಲಾಸಕ್ಕಿಂತಾ ಅನುಭವ ಜನ್ಯ ಬರಹ ಉತ್ತಮವೆಂಬುದಕ್ಕೆ ನಿಮ್ಮ ಪ್ರಯತ್ನ ಉದಾಹರಣೆ. ಚೆನ್ನಾಗಿದೆ, ಮುಂದುವರೆಸಿರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ನಾಗರಾಜ್ ಸರ್‍, ಅನುಭವ ಜನ್ಯ ಬರಹಗಳು ಯಾವಾಗಲೂ ಹೃದಯಕ್ಕೆ ಹತ್ತಿರವಾಗುತ್ತವೆ. -ಪ್ರಸನ್ನ.ಶಂಕರಪುರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ಶಂಕರ್. ಕವನ ಸರಣಿಯನ್ನು ಮುಂದುವರೆಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಕೋಮಲಣ್ಣ. ಅಂದ ಹಾಗೆ ನನ್ನ ಹೆಸರು ಪ್ರಸನ್ನ ಎಂದು, ಶಂಕರಪುರ ನನ್ನ ಊರಿನ ಹೆಸರು ;-) -ಪ್ರಸನ್ನ.ಶಂಕರಪುರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಕವನ ಬರೆದ ಮೇಲೆ ಅಂಗಳಕ್ಕೆ ನನ್ಮೇಲೆ ಅದ್ಯಾಕೆ ಸಿಟ್ಟು ಬಂದಿತ್ತೋ ಗೊತ್ತಿಲ್ಲ, ಇವತ್ತು ನನ್ನನ್ನು ಜಾರಿ ಬೀಳಿಸಿತು! ಅದೃಷ್ಟಕ್ಕೆ ಸೊಂಟದ ಮೂಳೆ ಮುರಿಯಲಿಲ್ಲ! ;-) :) -ಪ್ರಸನ್ನ.ಎಸ್.ಪಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.