ನನ್ನ "ಪ್ರೀತಿಯ" ಒಬ್ಬ " ಸ್ನೇಹಿತ"

5

ನನ್ನ ಒಬ್ಬ ಸ್ನೇಹಿತ .. ಒಂದು ಹುಡುಗಿಯನ್ನು ತುಂಬಾ ಪ್ರೀತಿಸಿದ.. ಅವನ ಅರ್ಥದಲ್ಲಿ ಪ್ರೀತಿಯನ್ನು ಪ್ರೀತಿಯಿಂದನೆ ಗೆಲ್ಲಬೇಕು ಅಂತ... ಅವನು ಪ್ರಯತ್ನಿಸಿದ ಕಾಲ ೬ ವರುಷ.. ಕಂಡ ಕನಸು ಸಾವಿರಾರು..

ಆದರೆ ಅವನ ಪ್ರೀತಿಯನ್ನು ವ್ಯಕ್ತ ಪಡಿಸುವುದರಲ್ಲಿ ಕಾಲ ಮಿಂಚಿ ಹೋಗಿತ್ತು.. ಅವನ ಪ್ರೀತಿ ಬೇರೆಯವರ ಪಾಲಾಗಿತ್ತು ... ಇದರಿಂದ ಅವನು ಬೇಸರ ಆಗ್ಲಿಲ್ಲ.. ಸಂತೋಷದಿಂದ ಇದ್ದ .. ಅವನಲ್ಲಿ ಹೋಗಿ ಕೇಳಿದೆ.. " ಅಲ್ವೋ... ಬೇಡ ಬೇಡ ಅಂದೆ..ನೀನು ಕೇಳಲಿಲ್ಲ.. ಯಾಕೋ ಬೇಕಿತ್ತು ನಿನಗೆ ಇದೆಲ್ಲ " ಅಂತ ಕೇಳಿದ್ದಕ್ಕೆ ಅವನು ಅಂದ.. ಅಲ್ವೋ ನಾನು ಅವಳನ್ನ ಪ್ರೀತಿಸಿದ್ದು ಮತ್ತು ನನ್ನ ಜೊತೆ ಇರಬೇಕೆಂದು ಆಶಿಸಿದ್ದು " ಅವಳನ್ನ ನಾನು ಬಿಟ್ಟರೆ ಇನ್ಯಾರು ಚೆನ್ನಾಗಿ ನೋಡ್ಕೊಳಕ್ಕೆ ಆಗಲ್ಲ, ಅವಳ ಸಂತೋಷವನ್ನ ಸಂತೋಷವಾಗಿಡಲು ನನಗೆ ಮಾತ್ರ ಸಾದ್ಯ, ಅವಳ ದುಃಖಕ್ಕೆ ನನ್ನ ಭುಜವೆ ಸರಿ, ಅವಳಿಗೆ ನೋವಾಗದಂತೆ ನಾನು ನೋಡಿಕೊಳ್ಳುತ್ತೇನೆ, ಇದಕ್ಕೆಲ್ಲ ಹೆಚ್ಚಾಗಿ ನಾನೇ ಅವಳಿಗೆ ಸರಿಯಾದ ಜೋಡಿ ಅಂತ "
ಇಷ್ಟೆಲ್ಲಾ ಆಲೋಚನೆ ಇರುವವನು ಯಾಕೋ ನಿನ್ನ ಪ್ರೀತಿನ ಹೇಳ್ಕೊಲ್ಲಿಲ್ಲ ಅಂತ ಕೇಳಿದಕ್ಕೆ, " ಅದೇ ನಾನು ಮಾಡಿದ ದೊಡ್ಡ ತಪ್ಪು " ಅಂದ..
ಮುಂದೆ ಹೇಗೆ ಅಂತ ಕೇಳಿದೆ... ಅದಕ್ಕೆ ಅವ್ನು ಅಂದಾ.. ನೋಡು ಅವಳು ಈಗ ಇಷ್ಟ ಪಟ್ಟವನ ಜೊತೆ ಮದುವೆ ಆಗಿದಾಳೆ , ಚೆನ್ನಾಗಿದಾಳೆ, ಸಂತೋಷದಿಂದ ಇದ್ದಾಳೆ, ನಾನು ಬಯಸಿದ್ದು ಅದನ್ನೆ (ಅಂದ್ರೆ ಅವಳ ಸಂತೋಷ ) ನೆ ಆದ್ಮೇಲೆ , ನಾನು ಚಿಂತೆ ಪಡೋದ್ರಲ್ಲಿ / ಕೊರಗೊದ್ರಲ್ಲಿ ಅರ್ಥನೇ ಇಲ್ಲ... ಅದಕ್ಕೆ ನಾನು ಸಂತೋಷ ದಿಂದ ಇದ್ದೀನಿ ಅಂದ..
ನನಗೆ ಸ್ವಲ್ಪ ಮಟ್ಟಿಗೆ ಇದೆಂಥ ಪ್ರೀತಿನಪ್ಪ ಅನ್ನಿಸ್ತು.. ಆಮೇಲೆ ಅವ್ನಿಗೆ ಕೇಳಿದೆ.. ಅಣ್ಣ ನಿನ್ನ ಪ್ರೀತಿಯ ಅರ್ಥ ಏನು ಅಂತ...
ಅದಕ್ಕೆ ಅವನಂದ.." ನೋಡೋ, ನಂದು ಎಷ್ಟರ ಮಟ್ಟಿಗಿನ ದೊಡ್ಡ ಪ್ರೀತಿ ಅಂತ ನನಗೆ ಗೊತ್ತಿಲ್ಲ, ಸಧ್ಯ ನಾನು ಅವಳಿಗೆ ಹೇಳದೆ ಇದ್ದದ್ದೇ ಒಳ್ಳೇದೇ ಆಯಿತು.. ಕೊನೆಯಲ್ಲಿ ನನಗೆ ಅನ್ನಿಸಿದ್ದು ಅವಳಿಗೆ ನನ್ನ ಬಗ್ಗೆ ಜೀವನ ಸಂಗಾತಿಯಾಗುವ ಭಾವನೆ ಅವಳಲ್ಲಿ ಇಲ್ಲ ಅಂತ, ಮತ್ತು ಪ್ರೀತಿಸಿದ ಮೇಲೆ ಮದುವೆಯಾಗಿಯೇ ಅದನ್ನ ನಿರೂಪಿಸ ಬೇಕು ಅಂತ ಇಲ್ಲ, ಸ್ವಲ್ಪ ಹೊತ್ತು ಸಮಾದಾನವಾಗಿ ಯೋಚನೆ ಮಾಡಿದಾಗ ಆನಿಸ್ತು ಆಗಿದ್ದೆಲ್ಲ ಒಳ್ಳೇದಕ್ಕೆ " ಅಂತ ಹೇಳಿ ಮಾತು ನಿಲ್ಲಿಸ್ಬಿಟ್ಟ...
ನನಗೆ ಸ್ವಲ್ಪ ಬೇಜಾರು ಆಯಿತು.... ಇನ್ನೇನ್ ಮಾಡೋದು ನನ್ನ ಕೈಯಲ್ಲಿ ಏನು ಸಹಾಯ ಮಾಡುವ ಪರಿಸ್ಥಿತಿಯಲ್ಲಿ ಇರ್ಲಿಲ್ಲ.
ಆಮೇಲೆ ನನ್ನ ಮನಸಿನಲ್ಲಿ ಉಳಿದಿದ್ದು.. ಇವ್ನು ಮಾಡಿದ್ದೂ ಸರಿನಾ ಅಥವಾ ತಪ್ಪಾ ಅಂತ....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪ್ರೀತಿಸಿದವನೇ ಸಂತೋಷವಾಗಿದ್ದಾನೆ ಅಂದ್ಮೇಲೆ
ಇದು ಸರಿ ಅಂತ ನನ್ನ ಅನಿಸಿಕೆ

ಅಷ್ಟಕ್ಕೋ ಈಗ ಸರಿನೋ ತಪ್ಪೋ ಅಂತ ಯೋಚಿಸಿ ಪ್ರಯೋಜನವಿಲ್ಲ ಅಲ್ವ? ಈಗಂತೂ ಏನೂ ಮಾಡಲು ಸಾಧ್ಯವಿಲ್ಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಹೇಳುವುದು ಸರಿಯಾಗಿಯೇ ಇದೆ.. ಆದ್ರೆ ಈ ತರನು ಪ್ರೀತಿ ಮಾಡೋರು ಇರ್ತಾರ ಅಂತ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿಗ್ ತಿಕ್ಕ್ಲುಗಳು ಇರ್ತಾರೆ..
ನಂದೊಂತು ಒಂದೆ ಸಿದ್ಧಾಂತ, ಟ್ರೈನು ಮತ್ತು ಹುಡ್ಗೀರ್ ಹಿಂದೆ ಯಾವತ್ತೂ ಒಡ್ಬಾರ್ದು.. ಬರ್ತಾ ಇರ್ತಾವೆ.. ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.