partha1059 ರವರ ಬ್ಲಾಗ್

ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೩)

ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೩)

 

ಪಾಂಡು ನರಸಿಂಹನ ಹತ್ತಿರ ಅಸಿಸ್ಟೆಂಟ್ ಆಗಿ ಸೇರಿ ಎರಡು  ವರ್ಷವಾಗುತ್ತಾ  ಬಂದಿತ್ತು.  ಸ್ವಲ್ಪ ವಿಚಿತ್ರ ವ್ಯಕ್ತಿತ್ವ ಅವನದು. ನೋಡಲು ಅತಿ ಸಾದಾರಣನಂತೆ ಕಾಣುವನು. ಅವನ ಬಟ್ಟೆಗಳು ಅಷ್ಟೆ ಲಾಯರ್ ಹಾಕುವಂತೆ ಇರುತ್ತಲೇ ಇಲ್ಲ. ದೊಗಳೆ ಪ್ಯಾಂಟ್ , ಮೇಲೆ ಒಂದು ಶರ್ಟ್ , ಅವನು ಎಂದೂ ಇನ್ ಶರ್ಟ್ ಮಾಡುತ್ತಿರಲಿಲ್ಲ. ಕಾಲಲ್ಲಿ ಒಂದು ಹವಾಯ್ ಚಪ್ಪಲಿ. ತಕ್ಷಣಕ್ಕೆ ನೋಡಿದರೆ ಯಾರದೋ ಮನೆಗೆ ಪೈಂಟ್ ಮಾಡಲು ಬಂದಿರುವ ಪೈಂಟರ್ ನಂತೆ ಕಾಣುತ್ತಿದ್ದ.   

 

ಪಾಂಡು  ಮಹಾಲಕ್ಷ್ಮೀಪುರಂನ ಪೋಲಿಸ್ ಸ್ಟೇಷನ್‍ಗೆ ಕಾಲಿಟ್ಟಾಗ ಬೆಳಗಿನ ಒಂಬತ್ತು ಗಂಟೆ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೨)

’ರೀ ನಿಮ್ಮನ್ನು ಹುಡುಕಿ  ಮಹಾಲಕ್ಷಮ್ಮನವರು  ಬಂದಿದ್ದಾರೆ,  ನಿಮ್ಮ ಮೇಷ್ಟ್ರು  ವೆಂಕಟೇಶಯ್ಯನವರ ಹೆಂಡತಿ"  

ಹೆಂಡತಿ ಶ್ರೀನಿಧಿ ಒಂದೆ ಸಮನೆ ಕೂಗಿ ಅಲ್ಲಾಡಿಸಿ ಎಬ್ಬಿಸಿದಾಗ ಸಹನೆಗೆಟ್ಟು ಎದ್ದು ಕುಳಿತ ನರಸಿಂಹ.

 

ರಾತ್ರಿ ಮಲಗುವುದು ಸದಾ ತಡವೆ.  ಅರ್ಧರಾತ್ರಿ ದಾಟಿರುತ್ತದೆ, ಬೆಳಗ್ಗೆ ಎಂಟಕ್ಕೆ ಮೊದಲೆ ಎದ್ದು ಅಭ್ಯಾಸವೆ ಇಲ್ಲ ಅವನಿಗೆ. ನರಸಿಂಹ ಪ್ರಖ್ಯಾತ ಕ್ರಿಮಿನಲ್ ಲಾಯರ್  ಆದರೂ ಅವನ ಜೀವನ ಏನು ಸದಾ ಗಡಿಬಿಡಿ ಇಲ್ಲ. ಕೋರ್ಟ್ ನಲ್ಲಿ ಕೇಸ್ ಇದ್ದಾಗ ಸ್ವಲ್ಪ ಮುಂಚೆ ಹೋಗುವುದು ಬಿಟ್ಟರೆ ತಲೆ ಬಿದ್ದು ಹೋಗುವ ಆತುರ ಅವನಿಗೇನು ಇಲ್ಲ, ಹಾಗಾಗೇ ಏಳುವುದು , ಸ್ನಾನ , ನಿದ್ದೆ ಎಲ್ಲ ನಿಧಾನವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೧)

ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೧)

 

ಮಹಾಲಕ್ಷಮ್ಮನವರು ಆತಂಕದಿಂದ ಕಾದಿದ್ದರು. ತನ್ನ ಸ್ನೇಹಿತರ ಮನೆಗೆ ಎಂದು ಹೋದ ವೆಂಕಟೇಶಯ್ಯನವರು ರಾತ್ರಿ ಒಂಬತ್ತಾದರು ಮನೆಗೆ ಬಂದಿರಲಿಲ್ಲ. ಕಡೆಗೊಮ್ಮೆ ಬಾಗಿಲಲ್ಲಿ ಅವರ ಮುಖ ಕಾಣಿಸಿದಾಗ ನೆಮ್ಮದಿ, ಸದ್ಯ ಬಂದರಲ್ಲ ಎಂದು.

"ಅದೇನು ಇಷ್ಟು ಹೊತ್ತಾಯಿತು, ನಿಮ್ಮ ಗೆಳೆಯರು ಸಿಗಲಿಲ್ಲವೇ"  

ತನ್ನ ಪತಿ ಒಳಗೆ ಬರುವಾಗಲೆ.ಆಕೆ ಪ್ರಶ್ನಿಸಿದರು

"ಸಿಗದೇ ಏನು ಸಿಕ್ಕಿದ್ದ, ಹೀಗೆ ಏನೊ ಮಾತಿಗೆ ಮಾತು, ಹೊರಡುವುದು ತಡವಾಯಿತು, ಏಕೊ ಅವನಿಗೆ ಕೊಟ್ಟ ಹಣ ಹಿಂದೆ ಬರುವಂತಿಲ್ಲ ಬಿಡು, ಸುಮ್ಮನೆ ಮಾತನಾಡಿ ಕೂಗಾಡಿದ್ದೆ ಬಂತು" ಎಂದರು ನಿರಾಶೆಯಿಂದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಎಚ್ಚರ ಎಚ್ಚರ ಎಚ್ಚರಾ ... ಮಹಾ ಚುನಾವಣೇ ಮುಂದಿದೆ

ಚುನಾವಣ ಸಮಯವಿದು. 
ರಾಜಕೀಯದಲ್ಲಿ ಆಸಕ್ತಿ ಇರಲಿ ಬಿಡಲಿ, ಒಮ್ಮೆ ಚುನಾವಣ ಕಣದತ್ತ ಕಣ್ಣಾಡಿಸುವುದು, ಅವರಿವರ ಹೇಳಿಕೆ ಓದುವುದು/ಕೇಳುವುದು ಸಹಜ.
ಪ್ರತಿಯೊಬ್ಬನಿಗೂ ತನ್ನದೇ ಆದ ಪಕ್ಷದ ಬಗ್ಗೆ ಒಲವು ಅಭ್ಯರ್ಥಿಯ ಬಗ್ಗೆ ಆಯ್ಕೆಗಳಿರುತ್ತವೆ. 
ಕೆಲವೊಮ್ಮೆ ನಾವು ಮೆಚ್ಚುವ ಪಕ್ಷಕ್ಕೂ, ನಮ್ಮ ಮೆಚ್ಚಿನ ಅಭ್ಯರ್ಥಿಗೂ ಹೊಂದಿಕೆಯಾಗದೇ ಸಹ ಹೋಗಬಹುದು. ನಿಮ್ಮ ಮೆಚ್ಚಿನ ಅಭ್ಯರ್ಥಿ ನಿಮ್ಮ ಮೆಚ್ಚಿನ ಪಕ್ಷದಲ್ಲಿ ಇರದೇ ಇರುವ ಸಾದ್ಯತೆಗಳು ಇವೆ. 
ಆದರೆ ಒಂದು ವಿಷಯ ನಮ್ಮ ಅಭಿಪ್ರಾಯಗಳು, ನಮ್ಮ ಒಲವು, ಎಲ್ಲವೂ ಸಂಪೂರ್ಣವಾಗಿ ಪತ್ರಿಕೆಗಳ ವರದಿ, ಸುದ್ದಿಗಳ ಮೇಲೆ ನಿರ್ಧಾರವಾಗದಿರಲಿ.
ಈಗಂತು ತಾಂತ್ರಿಕತೆ, ಮಾಧ್ಯಮಗಳು ತುಂಬಾ ಮುಂದಿವೆ,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ರಾಜ್ ನಾರಾಯಣ್‍ _ ಇಂದಿರಾ_ ತುರ್ತುಪರಿಸ್ಥಿತಿ

ರಾಜ್ ನಾರಾಯಣ್‍ _ ಇಂದಿರಾ_ ತುರ್ತುಪರಿಸ್ಥಿತಿ

ರಾಜ್ ನಾರಯಣ್  ಭಾರತದ ರಾಜಕೀಯ ಇತಿಹಾಸದಲ್ಲಿ ಸರ್ವಕಾಲಕ್ಕು ದಾಖಲಾದ ಹೆಸರು.  ಭಾರತದಲ್ಲಿ 1975 ರಲ್ಲಿ  ಹೇರಲ್ಪಟ್ಟ  ತುರ್ತುಪರಿಸ್ಥಿತಿ ಗೆ ಮೂವರು ಪ್ರತ್ಯಕ್ಷ ಹಾಗು ಪರೋಕ್ಷ ಕಾರಣರು. ಅವರೆಂದರೆ ಶ್ರೀಮತಿ ಇಂದಿರಾಗಾಂಧಿ, ನ್ಯಾಯಮೂರ್ತಿ ಜಗಮೋಹನ್ ಲಾಲ್ ಸಿನ್ಹಾ ಹಾಗು ರಾಜ್ ನಾರಯಣ್ .

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - partha1059 ರವರ ಬ್ಲಾಗ್