partha1059 ರವರ ಬ್ಲಾಗ್

ಒಮ್ಮೆ ನಕ್ಕು ಬಿಡಿ _ ೭ಬೀಚಿಯವರ ಕಛೇರಿಗೆ ಪ್ರಖ್ಯಾತ ಭವಿಷ್ಯಕಾರ ಒಮ್ಮೆ ಬಂದಿದ್ದರು ,  ಸ್ನೇಹಿತರು ಹೇಳಿದರು ನೀವು ಏನನ್ನೆ ನೆನೆಯಿರಿ ಅದು ಎಷ್ಟು ದಿನದಲ್ಲಿ ನೆರವೇರುತ್ತೆ ಅಂತ ಅವರು ಹೇಳ್ತಾರೆ. ನಕ್ಕ ಬೀಚಿ ನಾನು ಏನನ್ನೊ ನೆನೆದು ಅದನ್ನು ಕಾಗದದ ಮೇಲೆ ಬರೆಯುತ್ತೇನೆ ಅದು ಎಷ್ಟು ದಿನದಲ್ಲಿ ಆಗುತ್ತೆ ಅಂತ ಹೇಳ್ತೀರ , ಆ ಭವಿಷ್ಯಕಾರ ಒಪ್ಪಿದರು. ಸರಿ ಬೀಚಿ ಕಾಗದದಲ್ಲಿ ತಮ್ಮ ಕೋರಿಕೆ ಬರೆದು ಅವರ ಕೈಗೆ ಕೊಟ್ಟರು. ಆತ ಕಣ್ಣುಮುಚ್ಚಿ ಲೆಕ್ಕಹಾಕಿ  ನಿಮ್ಮ ಕೋರಿಕೆ ಪ್ರಶ್ನೆಯ ಕಾಲವನ್ನು ಅನುಸರಿಸಿ ಇಂದಿನಿಂದ ಹತ್ತು ದಿನದಲ್ಲಿ ಕೈಗೂಡುತ್ತೆ ಎಂದರು. ನಂತರ ಆ ಭವಿಷ್ಯಕಾರ ಬೀಚಿ ಕೊಟ್ಟ ಕಾಗದ ತೆಗೆದು ನೋಡಿದರೆ ಅದರಲ್ಲಿ ಬರೆದಿತ್ತು
"ಮೈಸೂರಿನಲ್ಲಿರುವ ಚಾಮುಂಡಿ ಬೆಟ್ಟ ಬೆಂಗಳೂರಿಗೆ ಎಂದು ಬರುತ್ತೆ?"

(ಕೇಳಿದ್ದು)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (7 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಒಮ್ಮೆ ನಕ್ಕು ಬಿಡಿ _ ೬

ಒಮ್ಮೆ ನಕ್ಕು ಬಿಡಿ _ ೬

ಕನ್ನಡದಲ್ಲಿ ಬೀchi ಯವರ ಹಾಸ್ಯಗಳು ಸ್ವಲ್ಪ ಹಸಿ ಹಸಿ

ನೀರಿನ ನಡುವೆ ದೋಣಿ ಹೋಗುತ್ತಿತ್ತು , ಇದ್ದಕ್ಕಿದ್ದಂತೆ ದೋಣಿ ಓಲಾಡತೊಡಗಿತು , ಅಂಬಿಗ ಜೋರಾಗಿ ಕೂಗಿಕೊಂಡ "ದೋಣಿ ಬಾರಕ್ಕೆ ಮುಳುಗುತ್ತಿದೆ ನಿಮ್ಮ ಹತ್ತಿರ ಇರುವ ಬಾರವಾದುದ್ದನೆಲ್ಲ ನೀರಿಗೆ ಎಸೆದುಬಿಡಿ" . ಎಲ್ಲರು ಗಾಭರಿಯಗಿ ತಮ್ಮಲ್ಲಿದ್ದ ಪೆಟ್ಟಿಗೆ, ಚೀಲ ಮುಂತಾದವುಗಳನ್ನು ಎಸೆಯಲು ಪ್ರಾರಂಬಿಸಿದರು , ಪಾಪ ತಿಮ್ಮ ಗಾಬರಿಯಾಗಿ ಆಕಡೆ ಈಕಡೆ ನೋಡಿದ ತನ್ನ ಹತ್ತಿರವಿದ್ದ "ಹೆಂಡತಿಯನ್ನು ........?"


(ಓದಿದ್ದು)
ಚಿತ್ರ ಇಂಟರ್ ನೆಟ್ ದು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಒಮ್ಮೆ ನಕ್ಕು ಬಿಡಿ _ ೫ಕನ್ನಡದಲ್ಲಿ ಬೀchi ಯವರ ಹಾಸ್ಯಗಳು ಸ್ವಲ್ಪ ಹಸಿ ಹಸಿ
ಒಮ್ಮೆ ಮನೆಯ ಮುಂದೆ ಹಪ್ಪಳ ಮಾಡಿ ಬಿಸಲಿಗೆ ಹಾಕಿದ ಅಮ್ಮ ತಿಮ್ಮನಿಗೆ
"ಹಸು ಬಂದು ತಿಂದೀತು ನೋಡಿಕೊ" ಅಂತ ಹೇಳಿ ನೀರು ತರಲು ಹೋದರು. ವಾಪಸ್ಸು ಬಂದರೆ ದನವೊಂದು ಹಪ್ಪಳ ತಿನ್ನುತ್ತಿದ್ದರೆ ತಿಮ್ಮ ನೋಡುತ್ತಲೆ ಕುಳಿತ್ತಿದ್ದಾನೆ , ಅಮ್ಮ ರೇಗಿದರು ನಾನು ನೋಡಿಕೊಳ್ಳಲು ಹೇಳಿರಲಿಲ್ಲವ ಎಂದು. ಅದಕ್ಕೆ ತಿಮ್ಮ ಹೇಳಿದ
"ಇಲ್ಲಮ್ಮ ಅದು ಹಸುವಲ್ಲ ನಾನು ಬಗ್ಗಿ ನೋಡಿದೆ"

(ಓದಿದ್ದು)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.1 (14 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಒಮ್ಮೆ ನಕ್ಕು ಬಿಡಿ _ ೪ (ಸೀರಿಯಲ್ ನಂಬರ್)


ಮೊನ್ನೆ ನಮ್ಮೂರಿಗೆ ಹೋದಾಗ ಸ್ನೇಹಿತ ಒಬ್ಬ ಸಿಕ್ಕಿದ್ದ ಮಾತನಾಡುತ್ತ ಹೇಳಿದ ನಮ್ಮುರನಲ್ಲಿ ಒಂದು ನಗೆಕೂಟ ಮಾಡಿಕೊಂಡಿದ್ದೀವಿ ಪ್ರತಿ ಬಾನುವಾರ ಎಲ್ಲ ಸೇರಿ ಸಭೆ ನಡೆಸಿ ಜೋಕ್ ಹೇಳ್ತೀವಿ ನೀನು ಬಾ ಅಂತ ಕರೆದ.ಸರಿ ಅಂತ ಹೋದೆ ಸಭೆ ಪ್ರಾರಂಬವಾಯಿತು. ಜೋಕೆ ಹೇಳಲು ಒಬ್ಬನ್ನು ಕರೆದರು.
ಅವನು ಸೀದ ಬಂದು ನಿಂತ ಮೈಕ್ ಕೈಯಲ್ಲಿ ಹಿಡಿದು ತುಸು ಹೊತ್ತು ಎಲ್ಲರನ್ನು ನೋಡಿ "ಇಪ್ಪತ್ತೇಳು" ಅಂದ
ಎಲ್ಲರೂ ಬಿದ್ದು ಬಿದ್ದು ನಗಲು ಪ್ರಾರಂಬ. ಮತ್ತೊಬ್ಬರನ್ನು ಕರೆದರು
ಅವನು ಬಂದ ನಿಂತ ತುಸು ಯೋಚಿಸಿ "ನಲವತ್ತೆರಡು" ಅಂದ ಮತ್ತೆ ನಗು
ಹೀಗೆ ಮುಂದುವರೆದಿತ್ತು ಹನ್ನೆರಡು .. ನಗು. ಮುವತ್ತಾರು ... ನಗು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಒಮ್ಮೆ ನಕ್ಕು ಬಿಡಿ _ ೩

ರಾಜಕಾರಣಿಯೊಬ್ಬ  ಸತ್ತ ನಂತರ ನರಕ ಸೇರಿದ. ಅವನಿಗೆ ಅಲ್ಲೆಲ್ಲ ನೋಡುತ್ತಲೆ ಗಾಭರಿ ಜಾಸ್ತಿಯಾಗಿತ್ತು. ಅಷ್ಟರಲ್ಲಿ ಯಮಧರ್ಮ ಬಂದು ಆಸೀನನಾದ. ಏನಾಯಿತೊ ರಾಜಕಾರಣಿ  ಓಡಿಹೋಗಿ ಯಮನ ಕಾಲು ಹಿಡಿದುಬಿಟ್ಟ. "ಯಮ ನನಗೆ ನಿಜಕ್ಕು ಈ ನರಕ ಯಮಲೋಕ ಇರುವದೆಲ್ಲ ತಿಳಿದಿರಲಿಲ್ಲ ಎಲ್ಲ ಸುಳ್ಳು ಅಂದುಕೊಂಡು ಏನೇನೊ ಪಾಪ ಮಾಡಿಬಿಟ್ಟಿದ್ದೇನೆ, ನನ್ನನ್ನು ಕಾಪಾಡು" ಎನ್ನುತ್ತ ಬೇಡಿಕೊಂಡ. ರಾಜಕಾರಣಿಯ ಕಾಟ ತಾಳಲಾರದೆ ಕಡೆಗೆ ಯಮ ಹೇಳಿದ "ನಮ್ಮ ಲೋಕಕ್ಕೆ ಬಂದ ಮೇಲೆ ಶಿಕ್ಷೆ ಅನುಭವಿಸಲೇ ಬೇಕು, ನಿನಗಾಗಿ ಒಂದು ರಿಯಾಯಿತಿ ಕೊಡುತ್ತಿದೇನೆ,ನಿನ್ನ ಶಿಕ್ಷೆ ನೀನೆ ಆಯ್ಕೆ ಮಾಡಿಕೋ" ಎನ್ನುತ್ತ ಹೊರಗಟ್ಟಿದ. ಸದ್ಯ ಅಷ್ಟಾದರು ಆಯಿತಲ್ಲ ಅಂತ ಯಮದೂತನ ಜೊತೆ ಹೊರಟ ಅವನು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

Pages

Subscribe to RSS - partha1059 ರವರ ಬ್ಲಾಗ್