partha1059 ರವರ ಬ್ಲಾಗ್

ನಮ್ಮ ಭಾಷೆ ಪರಿಪೂರ್ಣವಲ್ಲವೆ ?

ನಮ್ಮ ಭಾಷೆ ಪರಿಪೂರ್ಣವಲ್ಲವೆ ?
ಹೀಗೊಂದು ಪ್ರಶ್ನೆ ಇದ್ದಕ್ಕಿದ್ದಂತೆ ನನ್ನಲ್ಲಿ ಮೂಡಿತು. ಕೆಲವು ವಾರಗಳ ಹಿಂದೆ ಅದನ್ನು ಯೋಚಿಸುವ ಅಗತ್ಯವೆ ನನಗಿರಲಿಲ್ಲ, ಎಷ್ಟೋ ವರ್ಷಗಳಿಂದ ಬರೆಯುವ ಅಗತ್ಯವೆ ನನಗೆ ಬಂದಿರಲಿಲ್ಲ , ಸರಿಯಾಗಿ ಹೇಳಬೇಕೆಂದರೆ ಬ್ಯಾಂಕಿನ ಚೆಕ್‍ಗೆ ಸೈನ್ ಮಾಡುವುದು ಹೊರತಾದ ಬರವಣಿಗೆಯೆ ಇರಲಿಲ್ಲ. ATM ನಂತರ ಅದು ಕಡಿಮೆಯಾಯಿತು. ಹೀಗಿರುವಾಗ  ಸಂಪದ ಬಳಗ ಸೇರಿದ ನಂತರ ಬರೆಯುವ, ಬರೆದಿದ್ದನ್ನು ಪುನಃ ಕನ್ನಡದಲ್ಲಿ ಅದನ್ನು ಟೈಪ್ ಮಾಡಿ,ಸಂಪದದ ಮೇಲಕ್ಕೇರಿಸುವ (upload ?) ಕೆಲಸ ಪ್ರಾರಂಬವಾಯಿತು. ಆಗಷ್ಟೆ ಗಮನಿಸಲು ಪ್ರಾರಂಬಿಸಿದೆ, ನಾವು ಮಾತನಾಡುವದಕ್ಕು ಬರೆಯುವದಕ್ಕು ವ್ಯೆತ್ಯಾಸವಿರುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಒಮ್ಮೆ ನಕ್ಕು ಬಿಡಿ _ ೧೮


ಸಿನಿಮಾ ಪ್ರಾರಂಬವಾಗಿ ಕತ್ತಲಾವರಿಸಿದ್ದು. ಸಾಲಿನ ಕೊನೆಯ ಸೀಟಿನಲ್ಲಿ ಕುಳಿತಿದ್ದ ಸಿದ್ದಲಿಂಗ. ಸಾಲಿನ ಮದ್ಯದಿಂದ ಎದ್ದುಹೋದವನೊಬ್ಬ ಇವನ ಕಾಲು ತುಳಿಯುತ್ತ ಹೊರಹೋದ. ಸಿದ್ದಲಿಂಗನಿಗೆ ರೇಗಿ ಹೋಗಿತ್ತು. ಹೊರಹೋಗಿದ್ದ ವ್ಯಕ್ತಿ ಮತ್ತೆ ಕತ್ತಲಲ್ಲಿ ತಡವರಿಸುತ್ತ ಬಂದು ಇವನ ಬಳಿಬಂದು ನಿಂತು ಪ್ರಶ್ನಿಸಿದ
"ಸಾರ್ ನಾನು ಹೋರಹೋಗುವಾಗ ನಿಮ್ಮ ಕಾಲು ತುಳಿದಿದ್ದೆನಾ?"
ಬಹುಷಃ ಕ್ಷಮೆ ಕೇಳಲು ಇರಬಹುದು ಎಂದು ಕೊಂಡು ಸಿದ್ದಲಿಂಗ ಗರಂ ಆಗಿ ಹೌದು ಎಂದ. ಆ ವ್ಯಕ್ತಿ ತಕ್ಷಣ
"ಸರಿ ಬಿಡಿ ಇದೇ ಸಾಲಿನಲ್ಲಿಯೆ ನಾನು ಕುಳಿತ್ತಿದ್ದು " ಎನ್ನುತ್ತ ಅವನನ್ನು ದಾಟಿ ಪುನಃ ಒಳ ಹೋದ.

(ಕೇಳಿದ್ದು)

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒಮ್ಮೆ ನಕ್ಕು ಬಿಡಿ _ ೧೭


ಈ ಜೋಕ್ ಶ್ರೀಮತಿ|ನಾಗರತ್ನರವರ ನಗು ಬಂದ್ರೆ ನಕ್ಕು ಬಿಡಿಯ ಮುಂದುವರೆದ ಬಾಗ

ಸಣಕಲ ಸಿನಿಮಾ ಟಾಕೀಸಿನಲ್ಲಿ ಮೊದಲು ಟಿಕೆಟ್ ಪಡೆದು ಒಳಓಡಿದ. ತನಗೆ ಪರದೆ ಸರಿಯಾಗಿ ಕಾಣುವಂತೆ ಒಂದು ಸೀಟನ್ನು ಆರಿಸಿ ಕೂತ.  ತಿನ್ನಲು ಏನಾದರು ತರೋಣವೆಂದು ಹೊರಹೋಗಿ ಚಿಪ್ಸ್ ಹಿಡಿದು ಬರುವಷ್ಟರಲ್ಲಿ ಅವನ ಸೀಟನ್ನು ಅ ದಡೂತಿ ಆಸಾಮಿ ಅಕ್ರಮಿಸಿ ಕುಳಿತಿದ್ದ. ಸಣಕಲ ಅವನ ಮುಂದೆ ನಿಂತು ’ಸ್ವಾಮಿ ಇದು ನನ್ನ ಸೀಟು ನಾನು ಮುಂದಾಗಿ ಕುಳಿತಿದ್ದೆ" ಎಂದ
ರೇಗಿದ ದಡೂತಿ "ಇದು ನಿನ್ನದೆ ಸೀಟು ನೀನು ಮೊದಲೆ ಕುಳಿತಿದ್ದೆ ಅನ್ನುವದ್ದಕ್ಕೆ ಏನಯ್ಯ ಸಾಕ್ಷಿ" ಅಂತ ಗಟ್ಟಿಸ್ವರದಲ್ಲಿ ಅವಾಜ್ ಹಾಕಿದ.
ಅದಕ್ಕೆ ಸಣಕಲ ಸಣ್ಣ ಸ್ವರದಲ್ಲಿಯೆ ಎಂದ "ಸೀಟ್ ಮೇಲೆ ಟಮೋಟಗಳನ್ನು ಇರಿಸಿದ್ದೆ !"

(ನಾಡಿಗ್ ರವರ ವ್ಯಂಗಚಿತ್ರದಲ್ಲಿ ನೋಡಿದ್ದು)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಒಮ್ಮೆ ನಕ್ಕು ಬಿಡಿ _ ೧೬ (ಬೆಳಗ್ಗೆ ತಿಂದಿದ್ದು ಏನು?)

ಕೊಳಕಾಗಿ ಶಾಲೆಗೆ ಬರುತ್ತಿದ್ದ ತಿಂಮನಿಗೆ ಟೀಚರ್ ಬುದ್ದಿ ಹೇಳುತ್ತಿದ್ದರು,

"ದಿನವೂ ಶುಭ್ರವಾಗಿ ಬರಬೇಕು ತಿಂಮ, ನಿನ್ನ ಮುಖನೋಡು ಬೆಳಗ್ಗೆ ಎದ್ದು ತಿಂಡಿತಿಂದ ನಂತರ ಮುಖ, ಬಾಯಿ ತೊಳದೆ ಇಲ್ಲ, ನಿನ್ನ ಮೂತಿನೋಡಿದರೆ ಬೆಳಗ್ಗೆ ಏನು ತಿಂಡಿತಿಂದೆ ಅಂತ ಹೇಳಿಬಿಡಬಹುದು ಹೇಳಲಾ?" ಎಂದರು.

ತಿಂಮನಿಗೆ ಏನೊ ಕುತೂಹಲ ಇಷ್ಟಗಲ ಕಣ್ಣರಳಿಸಿ "ಹೇಳಿ ಟೀಚರ್" ಅಂತ ಕೇಳಿದ.

ಆಕೆ ನಗುತ್ತ

"ನೋಡು ಈ ದಿನ ಬೆಳಗ್ಗೆ ಉಪ್ಪಿಟ್ಟು ತಿಂದು ಬಂದಿದ್ದೀಯ, ಬಾಯ ಎರಡು ಕಡೆ ಅದು ಮೆತ್ತಿಕೊಂಡಿರುವುದು ಕಾಣಿಸುತ್ತಿದೆ ಸರಿಯ? " ಎಂದರು.

ಅದಕ್ಕೆ ತಿಂಮ

"ತಪ್ಪು ಟೀಚರ್ ಇವತ್ತು ಬೆಳಗ್ಗೆ ನಾನು ತಿಂದದ್ದು ಇಡ್ಲಿ , ಉಪ್ಪಿಟ್ಟು ನಿನ್ನೆ ಬೆಳಗ್ಗೆ ತಿಂದದ್ದು" ಅಂತ ಇಷ್ಟಗಲ ಹಲ್ಲು ಬಿಟ್ಟ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.4 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಬರೆಯಲಾರೆ ಕವನದಲ್ಲಿ ಗೆಳತಿ

ಬರೆಯಲಾರೆ ಕವನದಲ್ಲಿ ಗೆಳತಿ
ನನ್ನ ಪ್ರೀತಿಯನ್ನು
ಪದಗಳ ನಡುವೆ ಅದು ಕಳೆದು ಹೋದೀತು|

ಕಣ್ಣಿನಲ್ಲಿ ತೋರಲಾರೆ ಗೆಳತಿ
ನನ್ನ ಪ್ರೀತಿಯನ್ನು
ಕಣ್ಣಂಚಿನ ಬಿಂದುವಿನಲ್ಲಿ ಅದು ಕರಗಿ ಹೋದೀತು|

ಮಾತಿನಲ್ಲಿ ಆಡಿ ತೋರಲಾರೆ ಗೆಳತಿ
ನನ್ನ ಪ್ರೀತಿಯನ್ನು

ಮಾತುಗಳ ನಡುವೆ ಅದು ಅರ್ಥ ಕಳೆದುಕೊಂಡೀತು|

ಮನದಲ್ಲಿ ಸದಾ ನೆನೆಯಲಾರೆ ಗೆಳತಿ
ನನ್ನ ಪ್ರೀತಿಯನ್ನು
ಬಾವನೆಗಳ ಗೊಂದಲದಲಿ ಬೆರೆತು ಮರೆತು ಹೋದೀತು|

ಹೃದಯದಲಿ ಅವಿತಿಟ್ಟಿರುವೆ ಗೆಳತಿ
ನನ್ನ ಪ್ರೀತಿಯನ್ನು
ಎಂದಾದರು ನೀನು ಬಂದರೆ ಚಿಪ್ಪಿನಲ್ಲಿರುವ ಮುತ್ತು ಕಂಡೀತು|

(ಹೇಗೆ ಅಂತ ತಿಳಿಯದು ಶ್ರೀ ಸುರೇಶ್ ರವರ ಗೊತ್ತಾಯ್ತೇನೆ... ಕವನ ಇದಕ್ಕೆ ಸ್ಪೂರ್ತಿಯಾಯ್ತು)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

Pages

Subscribe to RSS - partha1059 ರವರ ಬ್ಲಾಗ್