ಜಾನುವಾರು ಬೆಳ್ಳಕ್ಕಿ

0

ಬಲಿಷ್ಟ ಹಳದಿ ಬಣ್ಣದ ಕೊಕ್ಕು, ಗಿಡ್ಡಗಿನ ಅಗಲವಾದ ಕುತ್ತಿಗೆ

  • ಜಾನುವಾರು ಬೆಳ್ಳಕ್ಕಿ (Cattle Egret) ಏಶ್ಯಾ, ಆಫ್ರಿಕಾ, ಯೂರೋಪ್ನಂತಹ ಉಷ್ಣವಲಯ ಹಾಗೂ ಸಮಶೀತೋಷ್ಣವಲಯಗಳಲ್ಲಿ ಕಂಡುಬರುವ, ಕೊಕ್ಕರೆಯನ್ನು ಹೋಲುವ ಅಚ್ಚ ಬಿಳಿ ಬಣ್ಣದ ಹಕ್ಕಿ.
  • ಇದರ ಅಗಲ ೮೮-೯೬ ಸೆ.ಮೀ. (ರೆಕ್ಕೆ ಬಿಡಿಸಿದಾಗ), ಉದ್ದ ೪೬-೫೬ ಸೆ.ಮೀ, ಹಾಗೂ ೨೭೦-೫೧೨ ಗ್ರಾಂಗಳವರೆಗೆ ತೂಗುತ್ತದೆ.
  • ಬಲಿಷ್ಟ ಹಳದಿ ಬಣ್ಣದ ಕೊಕ್ಕು, ಗಿಡ್ಡಗಿನ ಅಗಲವಾದ ಕುತ್ತಿಗೆ(ಇತರ ಕೊಕ್ಕರೆ ಜಾತಿಯ ಹಕ್ಕಿಗಳಿಗೆ ಹೋಲಿಸಿದಲ್ಲಿ), ಗೂನು ಬೆನ್ನಿನ ನಿಲುವು, ಬಿಳಿ ಬಣ್ಣದ ಗರಿ, ಬೂದು ಮಿಶ್ರಿತ ಹಳದಿ ಬಣ್ಣದ ಕಾಲು.
  • ಈ ಹಕ್ಕಿಗಳು ಕೂಡುವ ಸಮಯದಲ್ಲಿ ನೆತ್ತಿ, ಬೆನ್ನು ಮತ್ತು ಎದೆಯ ಮೇಲೆ ಕಿತ್ತಳೆ ಬಣ್ಣದ ಗರಿ ಮತ್ತು ಕಣ್ಪೊರೆ, ಕೊಕ್ಕು, ಕಾಲುಗಳು ಕೆಂಪು ಬಣ್ಣ ತಳೆಯುತ್ತದೆ. ಗಂಡು ಹಕ್ಕಿ ಹೆಣ್ಣಿಗಿಂತ ಉದ್ದನೆಯ ಪುಕ್ಕವನ್ನು ಹೊಂದಿರುತ್ತದೆ.
  • ನೀರಿನ ಒರತೆಯ ಬಳಿ, ಮರ ಗಿಡಗಳ ಕಡ್ಡಿಯಿಂದ ಗೂಡು ಕಟ್ಟಿ, ಇತರ ನೀರಿನ ಹಕ್ಕಿಗಳೊಂದಿಗೆ ಸಾಮೂಹಿಕವಾಗಿ ನೆಲೆಸುತ್ತದೆ.
  • ಕೆಲವು ಜಾತಿಯ ಜಾನುವಾರು ಬೆಳ್ಳಕ್ಕಿಗಳು, ವಲಸೆ ಹೋಗುವುದೂ ಉಂಟು.
  • ಆಹಾರ ಕೆರೆ, ಜವುಗು ಪ್ರದೇಶದಲ್ಲಿನ ಕಪ್ಪೆ, ಏಡಿ, ಪುಡಿ ಮೀನುಗಳೂ ಅಲ್ಲದೇ ಸಾಮಾನ್ಯವಾಗಿ ದನ, ಎಮ್ಮೆ ಮೊದಲಾದ ಜಾನುವಾರುಗಳು ಹುಲ್ಲು ಮೇಯುವಲ್ಲಿ ಹಾರುವ ಕೀಟಗಳನ್ನೂ, ಜಾನುವಾರಿನ ಮೇಲಿನ ಪರಾವಲಂಭಿ ಜೀವಿಗಳನ್ನೂ ತಿನ್ನುತ್ತದೆ.
  • ಮೊಟ್ಟೆ ಇಟ್ಟು ಮರಿ ಮಾಡುವ ಕಾಲ, ನವೆಂಬರಿನಿಂದ ಫೆಬ್ರವರಿಯವರೆಗೆ.
ಜಾನುವಾರಿನೊಂದಿಗಿನ ನಂಟು ಗೂನು ಬೆನ್ನಿನ ನಿಲುವು, ಬಿಳಿ ಬಣ್ಣದ ಗರಿ, ಬೂದು ಮಿಶ್ರಿತ ಹಳದಿ ಬಣ್ಣದ ಕಾಲು ಕೂಡುವ ಸಮಯದಲ್ಲಿ ನೆತ್ತಿ, ಬೆನ್ನು ಮತ್ತು ಎದೆಯ ಮೇಲೆ ಕಿತ್ತಳೆ ಬಣ್ಣದ ಗರಿ ತಳೆದ ಜಾನುವಾರು ಬೆಳ್ಳಕ್ಕಿ

ಮಾಹಿತಿ ಆಧಾರ: ವಿಕಿ ಪೀಡಿಯಾ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನೀವು ಬರೀ ಹುಳುಹುಪ್ಪಟೆ ತಿನ್ನುವ ಹಕ್ಕಿಗಳ ಫೋಟೊಗಳನ್ನಷ್ಟೇ ತೆಗೆಯುತ್ತಿದ್ದೀರಿ ಪಾಲಚಂದ್ರ. :(

ಗಂಡುಜಾತಿಯನ್ನು ಹೆಕ್ಕಿ, ಕುಕ್ಕುವ ಹಕ್ಕಿಗಳ ಬಗ್ಗೆ ಏನೂ ಬರೆಯುತ್ತಿಲ್ಲ. :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ಕಾಗೆ, ಗುಬ್ಬಿ, ಪಾರಿವಾಳ, ಮೈನಾ, ಈ ಬೆಳ್ಳಕ್ಕಿ ಬಿಟ್ರೆ ಬೇರೆ ಹಕ್ಕಿಗಳು ನನಗೆ ಪೋಸು ಕೊಡ್ತಾ ಇಲ್ಲ.. ಹತ್ರ ಹೋದ್ರೆ ಓಡಿ ಹೋಗ್ತಾವೆ, ದೂರದಿಂದ ಚೆನ್ನಾಗಿ ಬರೋಲ್ಲ, ಮರೆ ಮಾಡಿ ಕೂತ್ಕೊಂಡ್ರೂ ರೇಂಜ್ ಸಾಕಾಗೊಲ್ಲ.
ನಾನು ಈ ವರ್ಷ ಹೊಸ ಕ್ಯಾಮರಾ ತಗೋತೀನಿ, ಆಮೇಲೆ ಬೇರೆ ಬೇರೆ ಹಕ್ಕಿಗಳದ್ದೆಲ್ಲಾ ತೆಗಿತೀನಿ.

--
ಪಾಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಸಂಬಂಧಿಕರೊಬ್ಬರು ನಿಕೊನ್-S10 ಅಲ್ಲಿ ಫುಲ್ ಜೂಮ್(10x) ಉಪಯೋಗಿಸಿ ಮೈನ ಹಕ್ಕಿಯ ಚಿತ್ರ ತೆಗೆದಿದ್ದರು. ಸ್ಪಷ್ಟವಾಗಿ(ಬಣ್ಣ ಕೂಡ) ಬಂದಿತ್ತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ ಹತ್ರಾನೂ ಇದೆ ಮೈನಾ ಹಕ್ಕಿ ಕ್ಲೋಸ್ ಅಪ್, ಅದ್ರ ಬಗ್ಗೆ ಇನ್ನೂ ಓದ್ಕೊಂಡು ನಂತರ ಬರೀತೀನಿ. ಮತ್ತೆ ಅಪರೂಪದ ಪ್ಯಾರಡೈಸ್ ಫ್ಲೈ ಕ್ಯಾಚರ್ ಫೋಟೋನೂ ಇದೆ. "ಪ್ಯಾರಡೈಸ್ ಫ್ಲೈ ಕ್ಯಾಚರ್" ಹೆಣ್ಣು ಒಂದು ಬಣ್ಣ, ಗಂಡು ಇನ್ನೊಂದು ಬಣ್ಣ. ಪ್ರಾಯಕ್ಕೆ ಬರಲಿರುವ ಗಂಡು ಹಕ್ಕಿ ಹೆಣ್ಣಿನ ಬಣ್ಣಾನೇ ಇರುತ್ತೆ, ಆದ್ರೆ ಬದಲಾವಣೆಯ ಹಂತವಾಗಿ ಉದ್ದನೆಯ ಬಾಲ ಬೆಳೆಯುತ್ತೆ. ನಂತರ ಕಂದು ಬಣ್ಣದ ಪುಕ್ಕ ಉದುರಿ, ಬಿಳೀ ಬಣ್ಣದ್ದು ಬರುತ್ತೆ.

ನನಗೆ ಸಿಕ್ಕಿದ್ದು ಇದೇ ತರದ ಪ್ರೌಢಾವಸ್ಥೆಗೆ ಕಾಲಿಡ್ತಾ ಇರೋ ಗಂಡು ಹಕ್ಕಿ. ಇನ್ನು ಹೆಣ್ಣು ಹಕ್ಕಿ, ಬೆಳೆದ ಗಂಡು ಹಕ್ಕಿ ಚಿತ್ರ ತೆಗೀಬೇಕು. ಯಾವ್ದಕ್ಕೂ ಹಕ್ಕಿ ಸಿಕ್ತಾ ಇಲ್ಲ. ಬರೀ ಜೂಮ್ ಅಂತಾ ಅಲ್ಲ, ಈ ಹಕ್ಕಿಗಳ ಆಕ್ಷನ್ ಫೋಟೋ ತೆಗೆಯೋಕೆ "shutter speed" ಜಾಸ್ತಿ ಬೇಕು. ಬರೀ ಕೂತ್ಕೊಂಡಿದ್ದು ತೆಗೆದ್ರೆ ಅವುಗಳ ಹಾರಾಟದ ವೈಖರಿ ಎಲ್ಲ ತಪ್ಪಿಹೋಗುತ್ತೆ. ಮತ್ತೆ ಇನ್ನೊಂದು ಏನಂದ್ರೆ "P&S"ನಲ್ಲಿ shutterಲ್ಯಾಗ್ ಜಾಸ್ತಿ.

ಇಲ್ಲಿ ಕೊನೇಯ ಚಿತ್ರ ಮೇಟಿಂಗ್ ಸೀಸನ್ ಅಲ್ಲಿ ಕಂದು ಬಣ್ಣ ತಳೆದ ಹಕ್ಕೀದು. ನಾನು ಇದ್ರ ಬಗ್ಗೆ ಓದೋವರೆಗೂ ಇದ್ರ ಬಗ್ಗೆ ತಿಳಿದಿರ್ಲಿಲ್ಲ!

--
ಪಾಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಂಗನತಿಟ್ಟು ಅಥವಾ ಕಬಿನಿಗೆ ಹೋದರೆ ಒಳ್ಳೆಯ ಸಂಗ್ರಹ ಸಿಗಬಹುದು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನಿನ್ನೂ ಒಂದು ಸಲೀನೂ ಹೊಗ್ಲಿಲ್ಲ :( ,, ಒಮ್ಮೆ ಹೋಗ್ಬೇಕು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಯ್ಯೋ ಕರ್ಮವೇ, :(

ಪಾಲಚಂದ್ರ, ನಿಮ್ಮ ಕಣ್ಣ ಕ್ಯಾಮೆರಾದ ಷಟರ್‌ ಮುಚ್ಚಿಕೊಂಡಿರಬೇಕು ನೋಡ್ರೀ. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಹ ಹ್ಹ, ಟ್ಯೂಬ್ ಲೈಟು ಈಗ ಅರ್ಥ ಆಯ್ತು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರಗಳು ಮತ್ತು ಮಾಹಿತಿ ಚೆನ್ನಾಗಿದೆ ಪಾಲಚಂದ್ರರೆ. ನೀವು ಚಿತ್ರಗಳನ್ನು flickr ಲಿಂಕ್ ಕೊಟ್ಟಿದ್ದರೂ ನಮ್ಮಲ್ಲಿ ಕಾಣುತ್ತಿದೆ :).

ಇವುಗಳು ಮಳೆಗಾಲದಲ್ಲಿ ಬಹಳ ಕಾಣಿಸುತ್ತವೆ. ಹೊಲದಲ್ಲಿ ಎಮ್ಮೆ, ದನಗಳ ಬೆನ್ನ ಮೇಲೆ ಕುಳಿತಿರುತ್ತವೆ. ಈ ಬಾರಿಯ ಮಳೆಗಾಲದಲ್ಲಿ ನಾನು ಒಂದೆರಡು ಚಿತ್ರಗಳನ್ನು ತೆಗೆಯಬೇಕು :).

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ನಂದಕುಮಾರರೇ,

ಚಿತ್ರ ಸಂಪದಕ್ಕೇ ಅಪ್ಲೋಡು ಮಾಡಿದ್ದು, ಲಿಂಕ್ ಮಾತ್ರ ಫ್ಲಿಕರಿಗೆ ಕೊಟ್ಟಿದ್ದು.. ತುಂಬಾ ಅರ್ಜೆಂಟ್ ಇದ್ದಾಗ ಅಥವ ತುಂಬಾ ಜಾಸ್ತಿ ಚಿತ್ರಗಳೇ ಇದ್ರೆ ಡೈರೆಕ್ಟ್ ಫ್ಲಿಕರಿಂದ ಲಿಂಕ್ ಕೊಡ್ತೀನಿ.
ಚಿತ್ರ ತೆಗೀರಿ, ಅದು ಕೀಟಗಳನ್ನು, ಉಣ್ಣೆನಾ ಹೆಕ್ಕಿ ತಿಂತಾ ಇರೋ ಚಿತ್ರಗಳು ನಿಮಗೆ ಸಿಗಲಿ
--
ಪಾಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

flickr ನಮ್ಮಲ್ಲಿ ಬ್ಲಾಕ್ ಆಗಿರುವುದರಿಂದ ನಿಮ್ಮ ಲಾಲ್ಬಾಗ್ ಮತ್ತು ಕೆಂದೋಟದ ಚಿತ್ರಗಳು ನೋಡಲಿಕ್ಕೆ ಆಗಲಿಲ್ಲ. ಇದನ್ನು ಚಿತ್ರಪುಟದಲ್ಲಿ ಸೇರಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಚಿತ್ರ ತೆಗೀರಿ, ಅದು ಕೀಟಗಳನ್ನು, ಉಣ್ಣೆನಾ ಹೆಕ್ಕಿ ತಿಂತಾ ಇರೋ ಚಿತ್ರಗಳು ನಿಮಗೆ ಸಿಗಲಿ
ಧನ್ಯವಾದಗಳು. ನನ್ನದು ಮಾಮೂಲಿ ಕ್ಯಾಮೆರಾ. ಓಡಿ ಹೊಗಿಲ್ಲವಾದರೆ ತೆಗೆಯಬಹುದು.

ಹೋದ ಸಲ ಊರಿಗೆ ಹೋದಾಗ ಮನೆ ಹತ್ತಿರ ಬಂದಿತ್ತು. ಕ್ಯಾಮೆರಾ ತೆಗೆದುಕೊಂಡು ಬರುವಷ್ಟರಲ್ಲಿ ನಮ್ಮ ಮನೆಯ ಬೆಕ್ಕು ಓಡಿಸಿಬಿಟ್ಟಿತು. ಮಳೆಗಾಲದ ಸಮಯದಲ್ಲಿ ತೆಗೆಯಬೇಕು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಕ್ಕಿ ಬರೋ ಜಾಗ ನೋಡ್ಕೊಂಡು ಮರೇಲಿ ಕೂತಿರಿ, ಸ್ವಲ್ಪ ಕಾಯ್ಬೇಕು.. ಆದ್ರೆ ಅದು ಬಂದ ಮೇಲೆ ಬೆನ್ನಟ್ಟಿ ಹೋದ್ರೆ ಸಿಗೋದು ಕಷ್ಟ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲ, ನಮ್ಮ ಮನೆಯ ಹತ್ತಿರ ನಿತ್ಯ ಕಾಣುತ್ತಿರುತ್ತವೆ ಇವು. ಆದರೆ ಫೋಟೋ ತೆಗೆಯೋದು ಕಷ್ಟ. ಪಟ ಪಟನೆ ದೂರ ಸರಿದುಬಿಡುತ್ತವೆ. zoom ಬಳಸಿ ತೆಗೆದದ್ದಾ? ಅಥವ ಸಮಯ ಇಟ್ಟುಕೊಂಡು ಹತ್ತಿರ ಹೋಗುವ ಸಾಹಸ ಮಾಡಿದ್ದೋ?

ಚೆನ್ನಾಗಿ ಬಂದಿವೆ ಫೋಟೋಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರಿ,
ರಾತ್ರಿ ತೀರ, ೩ಗಂಟೆಗೆಲ್ಲಾ ಮಲ್ಗಿ, ಇಷ್ಟು ಬೇಗ ಎದ್ದಾಯ್ತಾ?

ಇದು ಪೊದೆಹಿಂದೆ ಅಡ್ಗಿ ಕೂತ್ಕೊಂಡು ತೆಗೆದದ್ದು. ಅದಕ್ಕೆ ಮೊದಲ್ನೇ ಚಿತ್ರದಲ್ಲಿ ಔಟ್ ಆಫ್ ಫೋಕಸ್ ಎಲೆ ಎಲ್ಲ್ಲಾ ಬಂದಿದೆ. zoom 12X (72 mm).
ಸುಮ್ನೆ ಹತ್ರ ಹೋದ್ರೆ ಅಷ್ಟೊಂದ್ ಹೆದ್ರಲ್ಲ, ಕ್ಯಾಮರಾ ಹಿಡ್ಕೊಂಡ್ ಹೋದ್ರೆ ಮಾತ್ರ ಎನೋ ಮಾಡೊಕೆ ಬರ್ತಿದಾನೆ ಅಂತ ಓಡೋಗತ್ತೆ :)

--
ಪಾಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-)

>> ಸುಮ್ನೆ ಹತ್ರ ಹೋದ್ರೆ ಅಷ್ಟೊಂದ್ ಹೆದ್ರಲ್ಲ, ಕ್ಯಾಮರಾ ಹಿಡ್ಕೊಂಡ್ ಹೋದ್ರೆ ಮಾತ್ರ ಎನೋ ಮಾಡೊಕೆ ಬರ್ತಿದಾನೆ ಅಂತ ಓಡೋಗತ್ತೆ

ಇದು ಗಮನಕ್ಕೆ ಬಂದದ್ದುಂಟು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ನಮ್ಮ ಪಕ್ಕದ ಮನೆಯ ದನ ಬಾರಿ ಶಬ್ದ ಮಾಡುತ್ತಿತ್ತು. ಅದರ ಶಬ್ದ ರೆಕಾರ್ಡ್ ಮಾಡುವ ಅಂತ ಕ್ಯಾಮೆರಾ ತೆಗೆದುಕೊಂಡು ಹೋದರೆ ಬಾಯಿ ಮುಚ್ಚಿ ಕ್ಯಾಮೆರಾ ಅನ್ನು ದಿಟ್ಟಿಸಿ ನೋಡುತ್ತಿತ್ತು. ೩೦ ನಿಮಿಷ ಆದರೂ ಬಾಯಿ ಬಿಚ್ಚಲಿಲ್ಲ. ಹಾಗೆ ಹೋದಾಗ ಮತ್ತೆ ಅದೇ ರಾಗ ಶುರು ಮಾಡಿತ್ತು. ಏನೋ copyright violate ಮಾಡುತ್ತಾರೆ ಅಂತ ಹಾಗೆ ಮಾಡುತ್ತವೇನೋ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲ,
ಎಲ್ಲಾ ಚಿತ್ರಗಳು ಚೆನ್ನಾಗಿವೆ.
ಆದರೆ, ಮೊದಲನೆಯ ಚಿತ್ರ ತುಂಬಾ ಇಷ್ಟ ಆಯ್ತು. ಪೂರ್ಣ ಆವೃತ್ತಿಯನ್ನು Flickrನಲ್ಲಿ ನೋಡಿದೆ. ತುಂಬಾ ಚೆನ್ನಾಗಿದೆ.

ಎಲ್ಲಿ ನೋಡಿದ್ದು ಈ ಬೆಳ್ಳಕ್ಕಿಯನ್ನು?

ತಡವಾದ ಕಮೆಂಟಿಗೆ ಕ್ಷಮೆಯಿರಲಿ.

-ಅನಿಲ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನಿಲ್,
ಪ್ರತಿಕ್ರಿಯೆಗೆ ಧನ್ಯವಾದ.. ಮೊದಲು ಮೂರು ಊರಲ್ಲಿ, ಕೊನೇದು ಬಿಸಿಲೇ ಘಾಟಿನಲ್ಲಿ.
--
ಪಾಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓಹ್!!!

ಮಾಹಿತಿಗೆ ಧನ್ಯವಾದ.

-ಅನಿಲ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲ,
ಚಿತ್ರಗಳು ಚೆನ್ನಾಗಿವೆ :)
ಹಾರಾಡೋ ಬೆಳ್ಳಕ್ಕಿ ಕಂಡರೆ ಚಿಕ್ಕಂದಿನಲ್ಲಿ ನಾವು ಆಕಾಶದೆಡೆಗೆ ಕೈ ತೋರಿಸಿ
"ಬೆಳ್ಳಕ್ಕಿ ಬೆಳ್ಳಕ್ಕಿ ನನ್ನ ಉಗುರು ಕೊಡ್ತೀನಿ..ನಿನ್ನ ಉಗುರು ಕೊಡ್ತೀಯ..."
ಅಂತ ಕೂಗ್ತಾ ಇದ್ವಿ..ಈ ರೀತಿ ಕೂಗಿದರೆ ಉಗುರ ತುದಿಯಲ್ಲಿ ಬಿಳಿಯ ಗುರುತು ಮೂಡತ್ತೆ ಅಂತ ಅದೇನೋ ನಂಬಿಕೆ ಇತ್ತು :)
-ಸವಿತ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>"ಬೆಳ್ಳಕ್ಕಿ ಬೆಳ್ಳಕ್ಕಿ ನನ್ನ ಉಗುರು ಕೊಡ್ತೀನಿ..ನಿನ್ನ ಉಗುರು ಕೊಡ್ತೀಯ..."
ಅಂತ ಕೂಗ್ತಾ ಇದ್ವಿ..ಈ ರೀತಿ ಕೂಗಿದರೆ ಉಗುರ ತುದಿಯಲ್ಲಿ ಬಿಳಿಯ ಗುರುತು ಮೂಡತ್ತೆ ಅಂತ ಅದೇನೋ ನಂಬಿಕೆ ಇತ್ತು

ಇದೇ ರೀತಿ ನಾವು ಗರುಡವನ್ನು ನೋಡಿದಾಗ "ಕೃಷ್ಣ, ಕೃಷ್ಣ ಹೊಸ ಬಟ್ಟೆ ಕೊಡು" ಅಂತ ಹೇಳ್ತಿದ್ವಿ.
ಉಗುರ ತುದಿಯಲ್ಲಿ ಬಿಳಿಯ ಗುರುತು ಮೂಡಿದರೆ ಹೊಸ ಬಟ್ಟೆ ದೊರೆಯಲಿದೆ ಅನ್ನೋ ನಂಬಿಕೆ ಇತ್ತು.

ಈಗ ನೆನೆಸಿಕೊಂಡರೆ ನಗು ಬರುತ್ತೆ. :)

-ಸ್ವಾಮಿ ಶರಣಂ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) ನಾವು ಕುಪ್ಳಾನ ನೋಡಿದ್ರೆ, ಕುಪ್ಳ ಕುಪ್ಳ ಕುಪ್ಳ ಅಂತ ೩ ಗೆರೆ ನೆಲದ ಮೇಲೆ ಎಳೀತಿದ್ವಿ.. ಅದೃಷ್ಟ ಅಂತೆ
ಸವಿತ, ಅನಿಲ್,
ನಿಮ್ಮಿಬ್ರ ಅನುಭವ ಸಖತ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.