ಮೂರ್ಬಣ್ಣದ ಮುನಿಯ

0

ಬಿಳಿ ಅಥವಾ ಬೆಳ್ಳಿ ಬಣ್ಣದ ಕೊಕ್ಕು, ಕಡು ಕಪ್ಪು ತಲೆ, ಕುತ್ತಿಗೆಯಿಂದ ದೇಹದ ಕೆಳಭಾಗದವರೆಗೆ ಎರಡೂ ಕಡೆ ಹರಿಯುವ ಬಿಳಿಯ ಪಟ್ಟೆ, ಕಪ್ಪಾದ ಎದೆಯ ಭಾಗ, ಕಂದು ಬಣ್ಣದ ಮೇಲ್ಮೈ ಇರುವ ಈ ಹಕ್ಕಿ ಚಿಕ್ಕ ಪುಟ್ಟ ಹುಲ್ಲಿನ ನಡುವೆ ಗುಂಪು ಗುಂಪಾಗಿ ಕಾಣಿಸುತ್ತವೆ. ಹಾರಿದರೆ ಹೂವೊಂದು ಸುರುಳಿ ಸುರುಳಿಯಾಗಿ ಗಿರ್ಕಿ ಹೊಡೆಯುತ್ತಾ ಮೇಲೇರಿದ ಅನುಭವ. ಕೊಕ್ಕು ಗಿಳಿಯ ಕೊಕ್ಕಿನಂತೆ ಬಲಿಷ್ಟವಾಗಿದ್ದು ಇದರ ಆಹಾರವಾದ ಕಾಳು, ಧಾನ್ಯವನ್ನು ತಿನ್ನಲು ಅನುಕೂಲವಾಗಿದೆ. ಜವುಗು ಹುಲ್ಲುಗಾವಲಿನಲ್ಲಿ ಕಾಣಬರುವ ಈ ಹಕ್ಕಿ ಗಾತ್ರದಲ್ಲಿ ಗುಬ್ಬಿಗಿಂತಲೂ ಕೊಂಚ ಚಿಕ್ಕದು.

ಈ ಬಾರಿ ಕೋಟಕ್ಕೆ ಹೋದಾಗ ಸಮುದ್ರದ ಬಳಿಯ ಗದ್ದೆಯಂಚಿನಲ್ಲಿ ಕಾಣಿಸಿದ ಈ ಸುಂದರ ಹಕ್ಕಿಯ ಚಿತ್ರ ತೆಗೆಯಲು ಪ್ರಯತ್ನಿಸಿದೆ. ತುಂಬಾ ಪುಟ್ಟ ಹಕ್ಕಿಯಾದ್ದರಿಂದ ಕೆಳಗಿನದಕ್ಕಿಂತ ಸಮೀಪದಿಂದ ತೆಗೆಯಲಾಗಲಿಲ್ಲ.

TRICOLORED MUNIA

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ತುಂಬಾ ಚೆನ್ನಾಗಿದೆ ಪಕ್ಷಿ ಮೊದಲೆಲ್ಲು ನೋಡಿರಲಿಲ್ಲ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುನಿಯನ ಫೋಟೋ ತುಂಬಾ ಚೆನ್ನಾಗಿ ಬಂದಿದೆ ಫಾಲಚಂದ್ರ. ನೀವು ತೀರ್ಥಹಳ್ಳಿಗೆ ಬಂದಾಗೆ ತೆಗೆದ ಸುಂದರ ಫೋಟೋಗಳು ಸಂಪದದಲ್ಲಿ ಬರುತ್ತವೆ ಅಂತ ನಾನು ಕಾಯುತ್ತಿದ್ದೆ. ಆದರೆ ನೀವು ನನ್ನದೊಂದು ಫೋಟೋ ಮಾತ್ರ ಹಾಕಿ ಉಳಿದುದನ್ನು ಹಾಕಲೇ ಇಲ್ಲ. ಯಾಕೆ? ಕಾರಣಾಂತರದಿಂದ ಹಾಕಲಾಗದಿದ್ದರೆ ನನ್ನ ಈ ಮೇಲ್‍ಗಾದರೂ ಕಳಿಸಿ. ಬಹಳ ಕುತೂಹಲದಿಂದ ಕಾದಿದ್ದೆ ನಾನು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು.. ರಮೇಶ್ ಸರ್, ನಾನು ತೀರ್ಥಹಳ್ಳಿಯಲ್ಲಿ ಹೆಚ್ಚು ಚಿತ್ರವನ್ನೇನೂ ತೆಗೆದಿಲ್ಲ.. ತೆಗೆದ ಕೆಲವು ಕವಿಶೈಲದ್ದು, ಅದೂ ದಾಖಲೆಗೆ ಇರಲಿ ಎಂದು. ನಿಮಗೆ ಆಸಕ್ತಿಯಿದ್ದಲ್ಲಿ http://picasaweb.goo... ಈ ಆಲ್ಬಮಿನಲ್ಲಿ ಕೆಲವಿ ಚಿತ್ರ ನೋಡಬಹುದು. ಬರೀ ತಿರುಗಾಟದ ನಡುವೆ ಇತ್ತ ಕಡೆ ತಲೆ ಹಾಕದೆ ಬಹಳ ದಿನಗಳಾದವು. ಕ್ಷಮೆಯಿರಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರ ಹಕ್ಕಿ. ಫೋಟೋ ತೆಗೆದವರಿಗೆ ಏನೋ ಹೇಳುತ್ತಿರುವಂತಿದೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಪಾಲರೇ ಹಕ್ಕಿ ಪಕ್ಕದವರನ್ನು ತೋರಿಸಿ ಏನೋ ಹೇಳುತ್ತಿರುವಂತೆ ಮುದ್ದಾಗಿ ಬಂದಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Repeated
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.