ಭಾರತ ಬಂದ್

5

ನಿನ್ನೆ ಬೆಳಿಗ್ಗೆ ಎದ್ದಕೂಡ್ಲೇ ಮನೆಯಿಂದ ಫೋನು, "ಹೊರಗೆ ಹೋಯ್ಬೇಡ ಅಕ್ಕಾ, ಎಂಥಾತ್ತೋ ಏನೋ.. ಮನೇಲೆ ಆಯ್ಕೋ" ಅಂತ. ಸರಿ ಅಂತ ತಲೆ ಆಡ್ಸಿ ತಿಂಡಿ ತಿಂದು ಕೂತಿದ್ದೆ. ಬರೀ ಬಂದಲ್ಲ ಗಲಾಟೆ ಎಲ್ಲಾಗುತ್ತೆ, ಇಲ್ಲೇ ಮನೆ ಹತ್ರ ಒಂದು ರೌಂಡ್ ನೋಡ್ಕೊಂಡು ಬರೋಣ ಅಂತ ಹೊರಟೆ.

ಹೊರಗಡೆ ಬಂದ್ರೆ ಅಂಗಡಿಯೆಲ್ಲಾ ಬಾಗಿಲು, ಅದರ ಮುಂದೆ ಹರಟೆ ಹೊಡೀತಾ ಕೂತೀರೋ ಜನಗಳು.

From India Bandh 2010

ಕರ್ನಾಟಕ ಸರ್ಕಾರದ ಉದ್ಯಮ ಸಾರ್, ಬಾಗ್ಲು ಹಾಕ್ಲೇ ಬೇಕು

From India Bandh 2010

ಖಾಲಿ ಖಾಲಿ ರೋಡು, ಅಲ್ಲಲ್ಲಿ ಒಂದೆರೆಡು ಸ್ವಂತ ವಾಹನಗಳು

From India Bandh 2010

ಹೋಟೆಲ್ ಮುಚ್ಚಿದ್ರೂ ಅರ್ಧ ಬಾಗಿಲು ತೆರೆದ ಬೇಕರಿಗಳು

From India Bandh 2010

ಕೇನ್-ಓ-ಲಾ ಇಲ್ಲದಿದ್ರೂ ರಸ್ತೆ ಬದಿಯ ಕಬ್ಬಿನಹಾಲಿನ ಅಂಗಡಿ

From India Bandh 2010

ತರಕಾರಿ ಅಂಗಡಿ ಮುಚ್ಚಿದ್ರೂ ಸೈಕಲ್-ತಳ್ಳೋ ತರಕಾರಿ ಗಾಡಿ

From India Bandh 2010

ಸಂಪೂರ್ಣ ತೆರೆದಿದ್ದ ಮೆಡಿಕಲ್ ಶಾಪು, ಹಣ್ಣಿನಂಗಡಿ, ATM, ಹಾಲಿನಂಗಡಿ

From India Bandh 2010
From India Bandh 2010
From India Bandh 2010
From India Bandh 2010

ಆಟದ ಮೈದಾನದ ಇಂಚಿಂಚೂ ಬಿಡದೆ ಸದುಪಯೋಗಪಡಿಸಿಕೊಂಡ ಹುಡುಗ್ರು

From India Bandh 2010

ಖಾಲಿ ರಸ್ತೇಲಿ ಟೈರಾಟಾಡೋ ಹುಡುಗ್ರು

From India Bandh 2010

ಖಾಲಿ ರೋಡು, ಜಾಲಿ ರೈಡು

From India Bandh 2010

ಹೆಚ್ಚಿನ ದುಡ್ಡು ಕಲೆಕ್ಟ್ ಆಗದೇ ಬಂದ್ಗೆ ಶಾಪ ಹಾಕ್ತಾ ಇರೋ ಭಿಕ್ಷುಕಿ

From India Bandh 2010

ತಮ್ಮ ಶಟ್ಟರನ್ನೇ ರೋಲ್ ಮಾಡಿಕೊಂಡ್ ರೋಲಿಂಗ್ ಶಟ್ಟರ್ಸ್ ಅಂಗಡಿ

From India Bandh 2010

ಕೂಲಿ ಕೆಲ್ಸ ಮುಗ್ಸಿ ಬೇಗ ಮನೆಗೆ ಬರ್ತಾ ಇರೋ ಜನರು

From India Bandh 2010

ಮುಚ್ಚಿದ ಸಾಫ್ಟ್-ವೇರ್ ಕಂಪೆನಿ

From India Bandh 2010

ಗಿರಾಕಿ ಇಲ್ಲದ ದೇವಸ್ಥಾನ

From India Bandh 2010

ಮುಚ್ಚಿದ ಕಾಲೇಜು

From India Bandh 2010

ಸಂಜೆ ಮೇಲೆ ಬೇಕಾಗಬಹುದು ಅಂತ ಹೂವು ಕಟ್ತಾ ಇರೋರು

From India Bandh 2010

ಸೆಕ್ಯುರಿಟಿಗೆ ಅಂತ ಪೋಲೀಸರು

From India Bandh 2010

ಬಂದಿನ ಸುತ್ತ ಖ್ಯಾತರಾದವರು

From India Bandh 2010

ತಿಳಿಯದಂತೆ ಹೆಚ್ಚು ಕಡಿಮೆ ೮-೧೦ ಕಿ.ಮೀ ಕಾಲ್ನಡಿಗೇಲೇ ಪೂರೈಸಿದ್ದೆ. ಹಿಂದಿನ ಎರಡು ದಿನ ಜ್ವರ ಅಂತ ಮನೆಲಿ ಬಿದ್ಕೊಂಡಿದ್ರೂ ನನ್ನ ಅಮೋಘ ಕಾಲಿನ ಶಕ್ತಿಯ ಬಗ್ಗೆ ಅತೀವ ಹೆಮ್ಮೆ ಆಯ್ತು. ರಾತ್ರಿ ಮಲ್ಗಿದ್ರೆ ಸವಿ ಕನಸು; ವಾಹನ ದಟ್ಟಣಿಯಿಲ್ಲದ ಸ್ವಚ್ಛ ಸುಂದರ ಬೆಂಗಳೂರು, ನನ್ನಂತೆ ಬರೀ ಕಾಲ್ನೆಡಿಗೆಯಲ್ಲಿ ಸುತ್ತುತ್ತಾ ಇರೋ ಬೆಂಗಳೂರಿಗರು.. ಆಹಾ..

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

[ತಿಳಿಯದಂತೆ ಹೆಚ್ಚು ಕಡಿಮೆ ೮-೧೦ ಕಿ.ಮೀ ಕಾಲ್ನಡಿಗೇಲೇ ಪೂರೈಸಿದ್ದೆ. ಹಿಂದಿನ ಎರಡು ದಿನ ಜ್ವರ ಅಂತ ಮನೆಲಿ ಬಿದ್ಕೊಂಡಿದ್ರೂ ನನ್ನ ಅಮೋಘ ಕಾಲಿನ ಶಕ್ತಿಯ ಬಗ್ಗೆ ಅತೀವ ಹೆಮ್ಮೆ ಆಯ್ತು. ರಾತ್ರಿ ಮಲ್ಗಿದ್ರೆ ಸವಿ ಕನಸು; ವಾಹನ ದಟ್ಟಣಿಯಿಲ್ಲದ ಸ್ವಚ್ಛ ಸುಂದರ ಬೆಂಗಳೂರು, ನನ್ನಂತೆ ಬರೀ ಕಾಲ್ನೆಡಿಗೆಯಲ್ಲಿ ಸುತ್ತುತ್ತಾ ಇರೋ ಬೆಂಗಳೂರಿಗರು.. ಆಹಾ..] ಪಾಲ ಅವರೇ, ಬೆಂಗಳೂರು ರಸ್ತೆಗಳು ಅಷ್ಟು ಖಾಲಿಯಾಗಿ, ವಿಶಾಲವಾಗಿ, ಧೂಮರಹಿತವಾಗಿ ಇರ್ಬೇಕಾದ್ರೆ ಹೊರಗೆ ತಿರುಗಾಡ್ಕೊಂಡು ಬಂದ ನೀವೇ ಅದೃಷ್ಟವಂತರು. ಫೋಟೋಗಳು ಬಂದ್ ನ ಎಲ್ಲಾ ಮುಖಗಳನ್ನೂ ಚೆನ್ನಾಗಿ ಬಿಂಬಿಸಿವೆ. ಅಲ್ಲ, ದೇವರಿಗೂ ಬಂದಾ? ನಡಕೊಂಡು ಬಾರೋ ಭಕ್ತಾದಿಗಳೇ ಇಲ್ವಾ ಈಗ? :) ಶಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಮಲ ಅವರೇ, ಪ್ರತಿಕ್ರಿಯೆಗೆ ಧನ್ಯವಾದ. ದೇವಸ್ಥಾನಕ್ಕೆ ನಡೆದು ಹೋಗುವ ಭಕ್ತರಿಲ್ಲದಿದ್ದರೂ, ವಿಧಾನಸೌಧಕ್ಕೆ ನಡೆದು ಹೋಗುವ ಮಂತ್ರಿಗಳಿರುವುದರಿಂದ ಇನ್ನೂ ಪ್ರಪಂಚ ಉಳ್ಕೊಂಡಿದೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚನ್ನಗಿದೆ ಪಾಲ ರವರೇ :) ಅದರಲ್ಲೂ ಓಡೋ ಟೈರು ಮತ್ತು ಜಾಲಿ ರೈಡು ತುಂಬಾ ಅದ್ಭುತವಾಗಿವೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ರಾಧಿಕಾ ಅವರೇ... ಓಡಾಡ್ತಾ ಇರೋ ಚಿತ್ರ ಯಾಕೆ ಇಷ್ಟ ಆಗುತ್ತೆ ಅಂತ ಸಂಪದದಲ್ಲಿ ಹಿಂದೊಮ್ಮೆ ಬರೆದಿದ್ದೆ.. ಆದರೆ ಕೊಂಡಿ ಮಾತ್ರ ಸಿಕ್ತಾ ಇಲ್ಲ, ಮನೇಲಿ ನನ್ನ ನೆಟ್ವರ್ಕ್ ತುಂಬಾ ನಿಧಾನ ಇರೋದ್ರಿಂದ.. ನನ್ನ ಬ್ಲಾಗಿನ ಕೊಂಡಿ ನೋಡಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ blog ನೋಡ್ದೆ.. photos ತುಂಬಾ ಚನ್ನಾಗಿವೆ ಹಾಗೂ ನೀವು ನೀಡಿರುವ ಮಾಹಿತಿ ಕೂಡಾ. photography ನನಗೆ ತುಂಬಾ ಇಷ್ಟ :) photography ಬಗ್ಗೆ ನಿವು ಯಾಕೆ ಒಂದು ಲೇಖನ ಬರಿಬಾರ್ದು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

photography ಬಗ್ಗೆ ನಿಮಗಿರುವ ಆಸಕ್ತಿ ತಿಳಿದು ಸಂತೋಷವಾಯಿತು.. ಈ ಹಿಂದೆ ಸಂಪದದಲ್ಲಿ ಛಾಯಾಗ್ರಹಣದ ಬಗ್ಗೆ ಕೆಲವೊಂದು ಲೇಖನ ಬರೆದಿದ್ದಿದೆ. ಕೇವಲ ತಂತ್ರಜ್ಞಾನದ ಕುರಿತು: http://sampada.net/%... ಆದರೆ ಈ ವಿಷಯವಾಗಿ ಬರೆಯುವುದು ಬಹಳಷ್ಟಿದೆ, ನನಗೆ ತಿಳಿದಂತೆ ಬರೆಯುತ್ತಾ ಹೋಗುತ್ತೇನೆ.. ನಾನು ತೆಗೆದ ಚಿತ್ರದ ಉದಾಹರಣೆಗಳ ಮೂಲಕ.. ಕಲಿಯುತ್ತಾ ಹೋದಂತೆ ಹೆಚ್ಚಿನ ವಿಷಯಗಳು ಬರಬಹುದೇನೋ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖಂಡಿತ ಬರೆಯಿರಿ ಪಾಲ ಅವರೇ... ನಿಮ್ಮ ಲೇಖನಕ್ಕಾಗಿ ಕಾಯುತ್ತಿರುತ್ತೇನೆ. ALL THE BEST :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಥ್ಯಾಂಕ್ಸ್ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲಚ೦ದ್ರರೆ, ಬ೦ದ್ ದಿನದ ಚಿತ್ರಗಳು ತು೦ಬಾ ಚೆನ್ನಾಗಿ ಮೂಡಿ ಬ೦ದಿವೆ. ಅದೆಷ್ಟು ಜನರ ಹೊಟ್ಟೆಗೆ ತಣ್ಣೀರ ಬಟ್ಟೆ ಈ ಬ೦ದುಗಳಿ೦ದ, ಒ೦ದು ದಿನದ ಸ೦ಪೂರ್ಣ ರಾಷ್ಟ್ರೀಯ ಆದಾಯ ಖೋತಾ! ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ ದುಡ್ಡಿಲ್ಲ ಎ೦ದು ಹಲುಬುವ ರಾಜಕಾರಣಿಗಳಿಗೆ ಈ ನಷ್ಟದ ಅರಿವಾಗುವುದಿಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಾಥರೇ, ನೀವೆಂದಿದ್ದು ನಿಜ, ದಿನಗೂಲಿ ಮಾಡಿ ಸಂಪಾದಿಸುವವರ ಪಾಡು ಇನ್ನೂ ಕಷ್ಟ.. ಅಂದಹಾಗೇ ನಿನ್ನೆ ರಜೆ, ಈ ಶನಿವಾರ ಆಫೀಸು :(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲ ಅವರೆ.. ಫೊಟೋಗಳು ಸಖತ್ತಾಗಿವೆ.... ನಾನು ಬರೀ ರೂಮಲ್ಲೇ ಬಿದ್ದಿದ್ದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಿರೀಶ್ ಅವರೇ, ಬಂದ್ ದಿನ ರೂಮಲ್ಲೇ ಬಂಧಿಯಾಗಿದ್ರಿ ಅನ್ನಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕತ್.. ಫೋಟೋಸ್... ಪಾಲರೇ.... ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ ನಾವಡರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲವ್ರೆ ಫೋಟೋ ಚೆನ್ನಾಗಿದೆ. ನಾನೂ ೬-೭ ಕಿ.ಮೀ ಓಡಾಡಿದೆ ಆದ್ರೆ ಕ್ಯಾಮೆರಾ ಊರಲ್ಲಿ ಬಿಟ್ಟಿದ್ದೆ :(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಕ್ಕು,

ಯಾಕ್ರೀ ಊರಲ್ಲಿ ಬಿಟ್ಟು ಬಂದ್ರಿ, ಕೋತಿ ಜಾಸ್ತೀನ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲ ಪಾಲವ್ರೆ, ಅದು ಕಾರಣ ಅಲ್ಲ. ಊರಿಂದ ಬರೋವಾಗ ಅದೂ ಇದೂ ಬ್ಯಾಗ್ನಲ್ಲಿ ತುಂಬ್ಕೊಂಡ್ರೆ, ಕ್ಯಾಮೆರಾ ನನ್ನನ್ನ ಬಿಟ್ಟು ಹೊರಡ್ತಿದೀಯ ಅಂತ ಅಳುತ್ತೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೋ ಹಾಗೇ, ಅಮ್ಮನ ಪ್ರೀತಿಯ ಕಾಣಿಕೆಗಳು.. ಊರಿಗೆ ಹೋಗ್ಬೇಕಾದ್ರೆ ನನ್ನ ಕ್ಯಾಮರಾನೂ ಬ್ಯಾಗಲ್ಲಿರುತ್ತೆ, ಬರ್ಬೇಕಾದ್ರೆ ಬ್ಯಾಗೊಳಗೆ ಹಿಡಿಯದೆ ಕೈಯಲ್ಲೇ ಹಿಡ್ಕೊಂಡ್ ಬರ್ತೀನಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಕುತೂಹಲ, ಅದನ್ನು ಬರಹದಲ್ಲಿಳಿಸಿದ ರೀತಿ ಓದುಗರನ್ನು ಮುದಗೊಳಿಸುವಲ್ಲಿ ಸಫಲವಾಗುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ ಕವಿನಾಗರಾಜರೇ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಗಿರಾಕಿ ಇಲ್ಲದ ದೇವಸ್ಥಾನ>>??!! ಚೆನ್ನಾಗಿದೆ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲಚ೦ದ್ರ ಅವ್ರೆ.....ಚಿತ್ರಗಳು ಚೆನ್ನಾಗಿ ಮೂಡಿ ಬ೦ದಿವೆ.....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ ಪವಿತ್ರಾ ಅವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನ ಅವರೇ ಪ್ರತಿಕ್ರಿಯೆಗೆ ನನ್ನಿ. ದೇವಸ್ಥಾನ ಕೂಡ ವ್ಯಾಪಾರೀ ದೃಷ್ಟಿಗೆ ಹೊರತಾಗಿಲ್ಲವಷ್ಟೇ.. ಇಲ್ಲವಾದಲ್ಲಿ ಚಿನ್ನಾಭರಣದಿಂದ ಹಿಡಿದು ೧೦೦ ರೂಪಾಯಿ ಜೀರ್ಣೋದ್ಧಾರಕ್ಕೆ ಕೊಟ್ಟವರ ಹೆಸರೂ ಕಲ್ಲಿನಲ್ಲಿ ಕೆತ್ತಿಸುವುದ್ಯಾಕೆ.. ಅಲ್ಲದೇ ತಿರುಪತಿಯಂತಹ ದೇವಸ್ಥಾನಕ್ಕೆ ಒಮ್ಮೆ ಭೇಟಿ ಕೊಟ್ಟರೆ ತಿಳಿಯುತ್ತೆ, ದೇವರ ದರ್ಶನ ಕೂಡ ಯಾವ ರೀತಿಯ ವ್ಯಾಪಾರ ಅಂತ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲಚಂದ್ರರೇ ಚಿತ್ರ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿವೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ ಗೋಪಿನಾಥರೇ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುರುವೇ ಸಿದ್ದೇಸ, ಪೋಟೋ ನೋಡಿದ್ರೆ ಬಂದ್ ಚೆನ್ನಾಗೇ ಆಗೈತೆ ಅನ್ನಿಸ್ತದೆ. ಆದ್ರೂ ಒಂದು ಡೌಟ್, ಪೊಲೀಸಪ್ಪನ ಗನ್ನಾಗೆ ಬುಲೆಟ್ ಐತೋ ಇಲ್ಲೋ ಅಂತಾ. ಒಂದ ತಪಾ ಪರೀಕ್ಸೆ ನಡಸೇ ಬಿಡವಾ ಏನಂತೀರಾ ಪಾಲಚಂದ್ರ. ಪೋಟೋ ಪಸಂದಾಗೈತೆ. ಕೋಮಲ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್, ನಿಮ್ಮೂರ್ನಾಗೆ ಬಂದ್ ಎಂಗಾಯ್ತು ಅಂತ ಒಸಿ ಯೋಳಿ.. ಪೋಲೀಸಪ್ನೌರು ಪಟ ತೋರ್ಸಿದ್ ಕೂಡ್ಲೇ, ಸಂದಾಕಿದೆ ಅಂದು ಬೆನ್ ತಟ್ಟಿದ್ರು.. ಅಂಗೇ ತಟ್ಬೇಕಾದ್ರೆ ಬೆಳ್ಳು ಟ್ರಿಗರ್ಗೆ ತಾಗ್ಸೇ ಬುಡೋದಾ.. ನಾ ಎದ್ರಕಂಡೆ... ಇಲ್ಲಾ ತಮ್ಮ ಎದ್ರುಕೊಬೇಡ ಇದು ಖಾಲಿ, ಸುಮ್ನೆ ಇಂಗೇ ಜನಗಳನ್ನ ಎದ್ರಿಸೋಕೆ ಮಡಕ್ಕಂಡಿದೀನಿ ಅಂತಂದ್ರು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲಚಂದ್ರಪ್ಪನೋರೆ, ನಮ್ಮೂರ ಕಡೆ ನೀವೇನಾದರೂ ಬಂದಿದ್ರೆ ಸ್ಯಾನೆ ಪೋಟೋ ತೆಗಿಬೋದಿತ್ತು. ಬಡ್ಡೆ ಹೈಕ್ಳು. ಬಂದ್ ಅಂತಾ ಬೆಳಗ್ಗಿಂದಾನೇ ಕೆರೆತವಾ ಓಗಿರಲಿಲ್ಲ. ಲೇ ಬಂದ್ ಬರೀ ಅಂಗಡಿ ಕನ್ರಲಾ ಅಂದ್ ಮ್ಯಾಕೆ ಎಲ್ಲಾವೂ ಚೊಂಬು ತಕ್ಕಂಡ್ ಹೋದ್ವು. ಇನ್ನು ನಮ್ಮ ಗೌಡಪ್ಪ ಬೆಳಗ್ಗಿಂದನೇ ಗುಬ್ಬರ ಆಕ್ಕೊಂಡು ಮಕ್ಕಂಬಿಟ್ಟಿದ್ದ. ಅವನ್ ಹೆಂಡ್ರು ಅದೇನ್ ರಾಜಕೀಯ ಮಾತ್ತೀಯೋ ಅಂತಾ ಬಯ್ತಾ ಇದ್ಲು. ನಾವು ಮಾತ್ರ ಒಂದು ಹತ್ತು ಅಂಗಡಿ ಕಲ್ಲು ಒಡಿದ್ವಿ. ಅದಾಗಲೇ ಸಟರ್ ಎಳ್ದಾಗಿತ್ತು. ಊರ್ನಾಗೆ ಏಳ್ಬೇಕಲ್ಲಾ ಕಲ್ಲು ಒಡಿದ್ವಿ ಅಂತಾ. ನಮ್ಮ ಸುಬ್ಬ ಮಾತ್ರ ಹೆಂಡದ ಅಂಗಡೀಗೆ ಕಲ್ಲು ಒಡೆಯೋನು. ಯಾಕಲಾ. ಬಡ್ಡೆ ಹತ್ತಾವು ಪುಕ್ಕಟೆ ಎಣ್ಣೆ ಕೊಡ್ಲಿ ಅಂತಾ. ಲೇ ಈ ಎಣ್ಣೆ ಅಲ್ಲಾ ಕನ್ಲಾ. ಪೆಟ್ರೋಲ್ ಅಂದ್ ಮ್ಯಾಕೆ ಬಂಕ್ಗಿಗೆ ಕಲ್ಲು ಒಡೆದ. ಸಾವುಕಾರ ಲೇ ಸುಬ್ಬ ನಿಂಗೆ ಐತಲಾ ಅಂತಿದ್ದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕ್ಕತ್ :D
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.