ಗಾಂಧಿ ಬಜಾರ್

4

೨೦೦೩, ಇಂಜಿನಿಯರಿಂಗಿನ ಕೊನೇಯ ವರ್ಷ ಪ್ರಾಜೆಕ್ಟಿಗಾಗಿ ಬೆಂಗಳೂರಿಗೆ ಬಂದಾಗ ಮೊದಲು ಇಳಿದು ಕೊಂಡಿದ್ದು ಆಶ್ರಮದ ಸಮೀಪದ ಒಂದು ಮನೆಯಲ್ಲಿ. ೨ ಬೆಡ್ ರೂಂ ಮನೆ ೩೫೦೦ ರೂ ಬಾಡಿಗೆ, ೬ ಜನ ಮನೆಯ ಪಾಲುದಾರರು. ಅಂದಿನಿಂದ ನಾ ಮೆಚ್ಚಿದ ನನ್ನ ನೆಚ್ಚಿನ ತಿರುಗಾಟದ ತಾಣ ಗಾಂಧಿ ಬಜಾರ್. ಛಾಯಾಗ್ರಹಣದಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆಂದು ಎಂದೂ ಕನಸು ಕಂಡಿರಲಿಲ್ಲ. ಇಂಜಿನಿಯರಿಂಗ್ ಮುಗಿಸಿ ಕೆಲಸದ ನಿಮಿತ್ತ ಮೈಸೂರಿಗೆ ಹೋದಾಗ, ನಮ್ಮ ಕಂಪೆನಿಯ ಪ್ರಾಜೆಕ್ಟಿನ ಕೆಲವು ಚಿತ್ರಗಳಿಗೆ ಸಹೋದ್ಯೋಗಿಯ ಜೊತೆ ಹೋದದ್ದಲ್ಲದೇ ಬೇರಾವ ಅನುಭವವೂ ಇರಲಿಲ್ಲ. ನಂತರ ಬೆಂಗಳೂರಿಗೆ ಬಂದು ಕೆಲಸ ಬದಲಾಯಿಸಿ, ಕೈಯಲ್ಲಿ ಸ್ವಲ್ಪ ಕಾಸು ಬಂದ ಮೇಲೆ ಮೊದಲು ಕೊಂಡು ಕೊಂಡಿದ್ದೇ ನನ್ನ ಸೋನಿ ಡಿ.ಎಸ್.ಸಿ ಎಚ್೨ ಕ್ಯಾಮರಾ. ನನ್ನ ಅದರ ಸಂಬಂಧ ಸುಮಾರು ೩.೫ ವರ್ಷಗಳಷ್ಟು. ೨೦೦೬ರ ಪ್ರವಾಸದಲ್ಲಿ ಗೆಳೆಯನಾದ ಪವನ್ ಜೊತೆಗೂಡಿ ಮಾಡಿದ ಕೇರಳದ ಪ್ರವಾಸದಲ್ಲಿ, ಆತನ ಚಿತ್ರ ನೋಡಿ ತುಂಬಾ ಮೆಚ್ಚುಗೆ ವ್ಯಕ್ತ ಪಡಿಸಿದ್ದೆ. ಪ್ರತ್ಯಕ್ಷವಾಗಿ ಛಾಯಾಗ್ರಹಣದ ಬಗ್ಗೆ ಯಾವ ಸಲಹೆ ಕೊಟ್ಟಿಲ್ಲವಾದರೂ ನನ್ನ ಅಭಿರುಚಿ ಕೆರಳಿಸುವಲ್ಲಿ ಆತನ ಚಿತ್ರಗಳು ತುಂಬಾ ಸಹಾಯಕವಾದವು. ಮುಂದೆ ಹನಿವೆಲ್ಲಿನಲ್ಲಿ ನನ್ನ ಸಹೋದ್ಯೋಗಿಯಾಗಿದ್ದ "ಅರವಿಂದ್" ತಮ್ಮ ಅನುಭವ, ಪುಸ್ತಕಗಳನ್ನು ಹಂಚಿಕೊಂಡು ಇನ್ನಷ್ಟು ನೆರವಾದರು. ಹೀಗೆ ಒಂದು ದಿನ ನನಗೆ ಬೇಕಾದ ಯಾವುದೋ ಛಾಯಾಗ್ರಹಣದ ವಿಷಯದ ಬಗ್ಗೆ ಹುಡುಕಾಡುತ್ತಿತ್ತಾಗ ಕಣ್ಣಿಗೆ ಬಿದ್ದಿದ್ದು "ಡಿಜಟಲ್ ಫೋಟೋಗ್ರಫಿ ಸ್ಕೂಲ್" ಎಂಬ ತಾಣ. ಇಲ್ಲಿ ಬರೀ ಪಾಟಗಳಷ್ಟೇ ಅಲ್ಲದೇ ನೀವು ತೆಗೆದ ಚಿತ್ರವನ್ನು ಹಾಕಿದರೆ, ಆ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಪ್ರಪಂಚದ ನಾನಾ ಭಾಗದ ವೃತ್ತಿನಿರತ/ಹವ್ಯಾಸೀ ಛಾಯಾಚಿತ್ರಕಾರರಿಂದ ಬರುತ್ತದೆ. ಇಲ್ಲಿಯೇ ಭೇಟಿಯಾದ ವೃತ್ತಿಯಿಂದ ಚಿತ್ರಕಾರರಾಗಿರುವ "ಜಿಮ್" ಆರಂಭದಿಂದ ನನಗೆ ಸಲಹೆ ಸೂಚನೆ ನೀಡುತ್ತಾ ಇಲ್ಲಿಯವರೆಗೆ ತಂದು ಬಿಟ್ಟಿದ್ದಾರೆ. ಅದೂ ಅಲ್ಲದೇ ಯಾಹೂವಿನ ಫ್ಲಿಕರ್ ಕೂಡ ನನ್ನ ಅಭಿರುಚಿಯನ್ನು ಬೆಳೆಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಇದೆಲ್ಲದರ ಪ್ರಭಾವದಿಂದ ಎಸ್.ಎಲ್.ಎರ್ ಕ್ಯಾಮರಾ ಕೊಳ್ಳಬೇಕೆಂಬ ನನ್ನ ೨ ವರ್ಷದ ಬಯಕೆ ಈ ವಾರ ಕೊನೆಗೊಂಡಿದೆ. ಕಳೆದ ವರ್ಷ ಮಾರುಕಟ್ಟೆ ಪ್ರವೇಶಿಸಿದ ನಿಕಾನ್ ಕಂಪೆನಿಯ ಡಿ೯೦, ನನ್ನ ವಶವಾಗಿದೆ. ಕಳೆದು ೧ ವರ್ಷದಿಂದ ಕೂಡಿಟ್ಟ ಹಣ ಮುಂದಿನ ನನ್ನ ಸ್ವಸಂತೋಷಕ್ಕಾಗಿ. ಹೊಸ ಕ್ಯಾಮರಾದೊಂದಿಗೆ ನಿನ್ನೆ ಗಾಂಧಿ ಬಜಾರ್ ಸುತ್ತಲು ಹೊರಟಾಗ ಕಣ್ಣಿಗೆ ಬಿದ್ದ ಚಿತ್ರಗಳೇ ಇವು. ಹೊಸ ಕ್ಯಾಮರಾದ ಬಗ್ಗೆ ತಿಳಿದದ್ದು ಇನ್ನೂ ಅಲ್ಪ, ಆದರೂ ಮೊದಲ ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಾಸೆ. ಹೂವು ಎಷ್ಟು ಮೊಳ ಕೊಡಲಮ್ಮ? ಹಣ್ಣಿನ ವ್ಯಾಪಾರಿ ಹೂಮಾಲೆಯೊಂದಿಗೆ ತರ ತರ ಹಣ್ಣುಗಳು ಹೂಮಾಲೆಗೆ ಜರಿ ಸುತ್ತುತ್ತಾ ಬಗೆ ಬಗೆ ಹೂಗೊಂಚಲು ತಕ್ಕಡಿಯ ಮೇಲೇನಿಡಲಿ ಇನ್ನಷ್ಟು ತರಕಾರಿ ಇಳಿ ವಯಸ್ಸಿನಲ್ಲಿ ನನ್ನ ಚಿತ್ರವೇಕೆ? ತೆಂಗಿನ ಕಾಯಿಗೆ ಗಿರಾಕಿ ಎಲ್ಲಿ ಕತ್ತಲಾದರೇನಂತೆ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಕ್ಕತ್ತ್... ಸಂಯೋಜನೆ...
ಸೂಪರ್ರ್ ಫೋಟೋಗಳು... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಫೋಟೋಗೋಸ್ಕರನೆ ಲೈಟಿಂಗ್ ಮಾಡ್ದಹಾಗಿದೆ... :)

ಫ್ಲಾಶ್ ಇಲ್ದಿದ್ರೂನೂ blurr ಆಗ್ದಿರೋದು ಹೇಗೆ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಫೋಟೋಗಳು ಜೊತೆಗೆ ಅವುಗಳ ಶೀರ್ಷಿಕೆಗಳು ಸಕ್ಕತ್ತಾಗಿವೆ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು,
ನನ್ನಿ :)

ಪ್ರದೀಪ್,
ಲೈಟಿಂಗಿಗೋಸ್ಕರಾನೇ ಮುಸ್ಸಂಜೆಯ ಸಮಯ ಆರಿಕೊಂಡಿದ್ದು. ಅದ್ರಲ್ಲೂ ಟ್ಯೂಬ್ ಲೈಟ್ ಹಾಕಿದ್ದ ಅಂಗಡಿಗೆ ಹೋಗಿಲ್ಲ, ಬರೀ ಬಲ್ಬು ಹಾಕಿದ್ದ ಅಂಗಡಿಗೆ ಮಾತ್ರ ಹೋಗಿದ್ದು. ಕಡಿಮೆ ಬೆಳಕಿದ್ದಾಗ ಐ.ಎಸ್.ಓ. ಜಾಸ್ತಿ ಇಟ್ಕೊಂಡ್ರೆ ಬ್ಲರ್ ಆಗೊಲ್ಲ.

ರೇಖಾ,
ನನ್ನಿ :)

ಈ ಫೋಟೋ ಸೆಶನಿಗಿಂತ ವಿದ್ಯಾರ್ಥಿ ಭವನ್ ಮಸಾಲೆ ದೋಸೆ ಸೂಪರ್ರಾಗಿತ್ತು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ..information ಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇನ್ನೊಂದ್ ಸ್ವಲ್ಪ ಇನ್ಫೋ ಇಲ್ಲಿದೆ: http://sampada.net/article/14672

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಥ್ಯಾಂಕ್ಸ್ ಪಾಲ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲ ಅವ್ರೆ,
ಚಿತ್ರಗಳು ಚೆನ್ನಾಗಿವೆ. ಮುಂದಿನವಾರದ ಹೊತ್ತಿಗೆ, ಗಾಂಧೀ ಬಜಾರ್, ವಿದ್ಯಾರ್ಥಿ ಭವನ ಎಲ್ಲಾ ಸುತ್ತಬಹುದು ಅಂತ ಮೊದಲೇ ನನ್ನ ಖುಷಿ ತಡ್ಯಕ್ಕೆ ಆಗ್ತಾ ಇಲ್ಲ. ನೀವೂ ಒಳ್ಳೇ ಟೈಮ್ಗೆ 'teaser' ಬೇರೆ ಚಿತ್ರ ಹಾಕಿದೀರ :)
ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಮಲಾ ಅವ್ರೇ,
ನನ್ನಿ,, ಕಾಫಿ ಮಾತ್ರ ರೋಟಿ ಘರನಲ್ಲೇ ಕುಡೀರಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾಕ್ರಿ ಅಲ್ಲಿ? ಎಸ್ ಎಲ್ ವೀಲಿ ಒಳ್ಳೆ ಕಾಫಿ ಸಿಗೋವಾಗ? :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾಫಿ ಟಿಪ್ಸ್ಗಳಿಗೆ ನನ್ನಿ ಹರಿ ಮತ್ತು ಪಾಲ ಅವರೇ,
ಹ್ಮಂ, ನಂಗೆ ಬೆಂಗಳೂರಲ್ಲಿ ಮನೇಲಿ ಕಾಫಿ ಬೀಜ ಹುರಿಸಿ ಪುಡಿ ಮಾಡಿಸಿ ಮಾಡೋ ಫಿಲ್ಟರ್ ಕಾಫೀನೇ ಇಷ್ಟ. ನೋಡೋಣ ಈ ಸರ್ತಿ ಎಸ್. ಎಲ್. ವಿ ನಲ್ಲಿ ರುಚಿ ನೋಡ್ಬರ್ತೀನಿ. ನಂಗೆ ನಾರ್ತ್ ಇಂಡಿಯನ್ ಊಟ ಅಷ್ಟು ಇಷ್ಟ ಇಲ್ಲ. ಆದ್ರಿಂದ ರೊಟಿಘರ್ ಕಡೆ ಹೋಗೋಕೆ ಅನುಮಾನಿಸ್ತಾ ಇದೀನಿ.

ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎರಡೂ ಕಡೆ ಕುಡೀರಿ ಯಾವ್ದು ಚೆನ್ನಾಗಿದೆ ನೀವೇ ಹೇಳಿ..
ಮತ್ತೆ ರೋಟಿ ಘರಲ್ಲಿ ಸೌತ್ ಇಂಡಿಯಾದ್ದೂ ಇರುತ್ತೆ.. ಮಲೆನಾಡ ಕಡ್ಬು, ಗುಳಿಯಪ್ಪ, ಉದ್ದಿನ ದೋಸೆ.. ಆದ್ರೆ ಅಲ್ಲಿ ಟೋಕನ್ ತಗೊಂಡು ಫುಟ್ ಪಾತಿಗೆ ಬಂದು ಹಣ್ಣು ಹೂವಿನ ವಾಸನೆ ತಗೋತಾ ತಿನ್ಬೇಕು ಆವಾಗ್ಲೇ ಮಜಾ.. ನಾರ್ತ್ ಇಂಡಿಯನ್ಸು ಸೌತ್ ಇಂಡಿಯನ್ ತಿಂಡಿ ತಿನ್ತಾರೆ ಅಲ್ಲಿ,

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲ ಅವ್ರೆ,
ನನ್ನೀ. ನಾನು ಗಾಂಧೀ ಬಜಾರ್ಗೆ ಹೋಗೋದೇ ಹೂವಿನ ಆಸೇಗೆ (ಸೀರೆ ಅಸೇನೂ ಇದೆ). ಏನ್ಮಾಡೋದು ಅಲ್ಲಿ ಹೋದ ತಕ್ಷಣ ಹೂವಿನ ಅಂಗಡಿ ಹತ್ರಾನೇ ದೋಸೆ ಅಂಗಡಿ (ವಿದ್ಯಾರ್ಥಿ ಭವನ), ಸೆಳೆದುಬಿಡತ್ತೆ ಇತ್ಲಾಗ್ ಬಾ ಮೊದಲು ಅಂತ :-)

ನಾನು ರೋಟಿ ಘರ್ ಅಂತ ಹೆಸರು ನೋಡಿ ಇದುವರ್ಗೂ ಒಳಗೇ ಹೋಗಿಲ್ಲ. ಮಲ್ನಾಡು ತಿಂಡಿ ಟ್ರೈ ಮಾಡಲೇ ಬೇಕು ಈ ಸಾರ್ತಿ ಖಂಡಿತ ಹೋಗಿಬರ್ತೀನಿ. ಶುಕ್ರವಾರ ಹೋದ್ರೆ ವಿದ್ಯಾರ್ಥಿಭವನದ ಅಡಚಣೆ ಇಲ್ಲ ಆಲ್ವಾ? :D

ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಸ್.ಎಲ್.ವಿ ಕಾಫಿ, ಮಳೆಗಾಲದಲ್ಲಿ ನೀರಾಗಿರುತ್ತೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಯ್ಯೋ ಆಕೆ ತರಕಾರೀಲಿ ಮುಳುಗಿಹೋಗಿದ್ದಾರಲ್ರೀ?
ಇನ್ನೊಬ್ಬರು ಹೂ ಮಾರುವವರಿಗೆ ಯೋಚನೆ" ಈ ಹಾರ ಯಾರು ಯಾರ ಕೊರಳಿಗೆ ಹಾಕ್ತಾರೋ, ಏನೋ?!"
ಪಾಲ ಚಂದ್ರ, ಚೆನ್ನಾಗಿದೇ ರೀ ಚಿತ್ರಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಅಯ್ಯೋ ಆಕೆ ತರಕಾರೀಲಿ ಮುಳುಗಿಹೋಗಿದ್ದಾರಲ್ರೀ
ಹಿ ಹಿ, ಅದು ಕೆಳಗಡೆಯಿಂದ ತೆಗೆದಿದ್ದಕ್ಕೆ ಹಾಗೆ ಕಾಣಿಸುತ್ತೆ ಅಷ್ಟೆ.. ನನ್ನಿ ಶ್ರೀಧರ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

D 90? ಕೆಲವು ಫೋಟೋಗಳು ಇನ್ನೂ ಚೆನ್ನಾಗಿ ಬರಬಹುದಿತ್ತು. :)

ಆಸಕ್ತರಿಗೆ ಮತ್ತಷ್ಟು ಬಸವನಗುಡಿ ಫೋಟೋಗಳು:
http://mainsandcrosses.blogspot.com/search/label/Basavanagudi

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹು D 90 ನಂದೇ, ಹೊಸಾದು ಮೊನ್ನೆ ಬಂತು .. ಪ್ರತೀ ಸಲ ಗಾಂಧಿ ಬಜಾರ್ ಸಂಜೆ ಮೇಲೆ ನೊಡಿದಾಗ ಅದೂ ಲೈಟಲ್ಲಿ ಸೂಪರಾಗಿ ಕಾಣಿಸುತ್ತೆ. ಒಂದಿನ ಹೋಗ್ಬೇಕು ಅಂದುಕೊಂಡಿದ್ದೆ ಆದ್ರೆ ಜನರಿದ್ದ ಕಡೆ ಕ್ಯಾಮರಾ ತೆಗೆಯೋಕೆ ಸಂಕೋಚ!

ಅದೂ ನಿನ್ನೆ ಕ್ಯಾಮರಾ ತೆಗೆದಿದ್ದೆ ತಡ, ಸರ್ ನೀವು ಯಾವ ಪೇಪರಿನವ್ರು, ನಂದೊಂದು ಫೋಟೋ ಪ್ರಿಂಟ್ ಹಾಕ್ ಕೊಡ್ತೀರ, ತಗೊಳಿ ಸಾರ್ ಹಣ್ ತಗೋಳಿ.. ಹಿಂಗೆಲ್ಲಾ ಮಾತಾಡ್ಸಿಬಿಟ್ರೆ ನಾಚಿಕೆ ಮುದ್ದೆ ಆಗ್ಬಿಡ್ತೀನಿ ನಾನು.. ಒಂಥರಾ ಚೆನ್ನಾಗಿತ್ತು ಎಕ್ಸ್ಪೀರಿಯನ್ಸು.. ಅಂದಹಾಗೇ ಯಾವ ಪೇಪರ್ ಅಂದಿದ್ದಕ್ಕೆ ಸಂಪದ ಅಂದಿದೀನಿ :)

ಕೊಂಡಿ ಚೆನ್ನಾಗಿದೆ, ನಮ್ಮಿಂದಲೂ ಬೆಂಗಳೂರಿನ ಹಲವು ಬೀದಿಗಳ ದರ್ಶನ ಮುಂದೆ ನಿರೀಕ್ಷಿಸಬಹುದು, ಇನ್ನೂ ಉತ್ತಮ ಚಿತ್ರಗಳೊಂದಿಗೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚೆನ್ನಾಗಿದೆ! ನಿಮ್ಮಿಂದ ಇನ್ನೂ ಉತ್ತಮವಾದ ಚಿತ್ರಗಳನ್ನು ನಿರೀಕ್ಷಿಸುತೇವೆ.

ನಾನು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ ದಿನಕರ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅವರೆಲ್ಲಾ ಸಂಪದ ಪೇಪರಿಗೆ ಕೇಳ್ತಾ ಹುಡುಕಾಡಬಹುದು :)
ನಿಮಗೂ ಕ್ಯಾಮರಾ ತೆಗೆಯಲು ಸಂಕೋಚ? ಅದಕ್ಕೇ ಕೀಟಗಳದ್ದೇ ಜಾಸ್ತಿ ತೆಗೀತೀದ್ರಾ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲನಿಗೆ ಸಂಕೋಚ ಅಂತಾದ್ರೆ ನಮಗೆಲ್ಲ ವಿಪರೀತ ಸಂಕೋಚ ಅಂತಾದೀತು!

ಪಾಲ ಬಹುಶಃ ಫೋಟೋ ತೆಗೆದಾದ ಮೇಲಿನ ಸಂಕೋಚದ ಬಗ್ಗೆ ಹೇಳುತ್ತಿದ್ದಾನೆ ;)
ನಾವೆಲ್ಲ ಫೋಟೋ ತೆಗೆದ ಮೇಲೆ ಸುಮ್ಮನೆ ಸ್ಮೈಲ್ ಕೊಟ್ಟು ಈಚೆ ಬರ್ತಿರ್ತೀವಪ್ಪ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಪಾಲ ಬಹುಶಃ ಫೋಟೋ ತೆಗೆದಾದ ಮೇಲಿನ ಸಂಕೋಚದ ಬಗ್ಗೆ ಹೇಳುತ್ತಿದ್ದಾನೆ
:),, ಕೆಲವು ಸರ್ತಿ ಆಗುತ್ತೆ, ಅದ್ರಲ್ಲೂ ಕ್ರೌಡ್ ಜಾಸ್ತಿ ಇದ್ರೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲ,

ಫೋಟೋಗಳು ಚೆನ್ನಾಗಿವೆ. ಒಳ್ಳೆಯ ಪ್ರಯತ್ನ. ಮುಂದುವರೆಸಿ.

>ಹು D 90 ನಂದೇ, ಹೊಸಾದು ಮೊನ್ನೆ ಬಂತು ..

ಅಂದ ಹಾಗೆ ಕ್ಯಾಮೆರಾಗೆ ದುಡ್ಡು ಎಷ್ಟಾಯ್ತು?. ಇಲ್ಲೇನಾ ತಗೊಂಡಿದ್ದು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ, ಕ್ಯಾಮರಾ ಬಗ್ಗೆ ಪಿ.ಎಂ. ಹಾಕಿದೀನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೋಡಿದೆ , ನನ್ನೀ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರಗಳೆಲ್ಲ ಚೆನ್ನಾಗಿದೆ ಪಾಲಣ್ಣ ,
ಮುಂಚೆನೇ ಹೇಳಿದ್ರೆ ನಾನು ಬಂದು ಒಂದು ಪೋಸ್ ಕೊಡ್ತಾ ಇದ್ದೆ :D :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲ ಅವ್ರೆ,

ಚೆನ್ನಾಗಿವೆ ಫೋಟೊಗಳು !!! ಬಂದ್ರೆ ನಮ್ಗು ಟ್ರೈನಿಂಗ್ ಕೊಡ್ತೀರಿ ಅಲ್ವಾ ??

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಿನಕರ, ವಿನಯ್
ನನ್ನಿ

ಶಶಾಂಕ,
ಬನ್ನಿ ಸಾರ್ ಕಲಿಯೋಣ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಭಿನಂದನೆಗಳು ಪಾಲಚಂದ್ರರೆ. ನಾನು ಕೂಡಿಟ್ಟ ಹಣದಲ್ಲಿ ಒಂದು ವಾರದ ಹಿಂದೆ ಒಂದು ಸಿಸ್ಟಮ್ ತಗೊಂಡೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಭಿನಂದನೆಗಳು, ಪ್ರತಿಕ್ರಿಯೆಗೆ ನನ್ನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲ,
>>ಹೂವು ಎಷ್ಟು ಮೊಳ ಕೊಡಲಮ್ಮ? >>ಹೂಮಾಲೆಗೆ ಜರಿ ಸುತ್ತುತ್ತಾ
ಚಿತ್ರಗಳು ಸೂಪರ್ :)
ಯಾಕೋ..ಹೂವಿನವರಲ್ಲಿರೋ ಸಂತಸ ತರಕಾರಿಯವರಲ್ಲಿಲ್ಲ!!
ಹೊಸ ಕ್ಯಾಮರಾದೊಂದಿಗೆ..ಹೊಸ ಚಿತ್ರಗಳ ನಿರೀಕ್ಷೆಯಲ್ಲಿ.. :)
-ಸವಿತ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸವಿತ,
ಪಾಪ ತರ್ಕಾರಿ ಮಾರಿ ಸುಸ್ತಾಗಿರ್ಬೇಕು.. ಎಷ್ಟಂದ್ರೂ ಜನ್ರು ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಅಲ್ವ.. ತರಕಾರಿ ಅಂಗಡೀಲಿ ಮಾಡೋ ಚೌಕಾಸಿ ಹೂವಿನ ಅಂಗಡೀಲಿ ಮಾಡೋದಿಲ್ವೇನೋ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲ ಫೋಟೋಗಳು ಸೂಪರ್ರ್ :)
ಗಾಂಧೀ ಬಜಾರ್ ನನ್ನ ಫೆವರೈಟ್ ಜಾಗ, ಮೇನ್ ರೋಡ್ನಲ್ಲಿ ಹಣ್ಣು ,ತರಕಾರಿಗಳ ಜೋರಾದರೆ, ಡಿ.ವಿ.ಜಿ ರೋಡ್ನಲ್ಲಿ.... ;)

ರಾಕೇಶ್ ಶೆಟ್ಟಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಡಿ.ವಿ.ಜಿ ರೋಡ್ನಲ್ಲಿ.... Eye-wink
ಸಕ್ಕತ್ ಅಲಾ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲ ಚಿತ್ರಗಳು ತುಂಬಾ ಚೆನ್ನಾಗಿವೆ.

ಇಳಿ ವಯಸ್ಸಿನಲ್ಲಿ....... ಈ ತರಕಾರಿ ಮಾರುವ ಮಹಿಳೆಯನ್ನು ನಾನು ಸುಮಾರು ೧೮ - ೨೦ ವರ್ಷಗಳಿಂದ ನೋಡ್ತಿದೀನಿ. ವಿದ್ಯಾರ್ಥಿ ಭವನ್ ಮಸಾಲೆ ದೋಸೆ ಚಿತ್ರ ಎಲ್ಲ್ರಿ ? ಅಲ್ಲಿ ಮಾತ್ರ ಕ್ಯಾಮೆರಾ ಮುಚ್ಚಿಟ್ಟು ಸುಮ್ನೆ
ತಿಂದಿದ್ದಾ? :-)

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುಂ ಕಣ್ರಿ ೨೦ ನಿಮಿಷ ಕಾದಿದ್ದಕ್ಕೆ ೨ ಮಸಾಲೆ ದೋಸೆ ತಿನ್ಕೊಂಡ್ ಬಂದೆ :) ಕ್ಯಾಮರಾ ಬ್ಯಾಗೊಳಗಿಂದ ತೆಗೀಲೆ ಇಲ್ಲ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

D-90 ಒಳ್ಳೆಯ ಕ್ಯಾಮರಾ ... ಆದ್ರೂ ನಾನಂತೂ ಕ್ಯಾನನ್ ಫ್ಯಾನು :)
ಇನ್ನೂ ಒಳ್ಳೊಳ್ಳೆಯ ಫೊಟೊಗಳ ನಿರೀಕ್ಷೆಯಲ್ಲಿ ...
ಅಂದ ಹಾಗೆ ಒಂದು ಒಳ್ಳೆಯ ಬ್ಯಾಗ್ ತೊಗೊಳ್ಳಿ ...ತುಂಬಾ ಬೇಕಾದ accessory ಅದು ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಆದ್ರೂ ನಾನಂತೂ ಕ್ಯಾನನ್ ಫ್ಯಾನು
ಹಂಗೇ ನಾನ್ ನಿಕಾನ್ ಫ್ಯಾನು, ಕ್ಯಾನನ್ ೪೦ಡಿ/ ನಿಕಾನ್ ಡಿ೯೦ ಎರಡರ ಮಧ್ಯಾನೂ ಸಕ್ಕತ್ ಹೋರಾಟ ನಡೆದು ಕೊನೇಗೆ ಡ್೯೦ ವಿನ್ನಾಯ್ತು.. ಅಂಥಾ ಮಹತ್ತರ ಕಾರಣ ಏನೂ ಇಲ್ಲ, ಡಿ೯೦ ಹೊಸ ಮಾಡೆಲ್ ಅಂತ ಅಷ್ಟೆ

>>ಅಂದ ಹಾಗೆ ಒಂದು ಒಳ್ಳೆಯ ಬ್ಯಾಗ್ ತೊಗೊಳ್ಳಿ
ಸಾಧಾರಣದ್ದೊಂದಿದೆ, ಸಧ್ಯಕ್ಕೆ ಒಂದೇ ಲೆನ್ಸಿರೋದು, ಈ ವರ್ಷ ಬೇರೆ ಲೆನ್ಸಿಗೆ ಬಡ್ಜೆಟ್ ಇಲ್ಲ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಸಧ್ಯಕ್ಕೆ ಒಂದೇ ಲೆನ್ಸಿರೋದು,>>
ಕ್ಯಾಮರ ಜೊತೆ ಒಂದೇ ಲೆನ್ಸ್ ಬಂತಾ ?....೧೮-೫೫ ಜೊತೆ ೭೦-೩೦೦ ಕೂಡ ಕೊಡ್ತಾ ಇದಾರೆ ಅಂತ ಕೇಳಿದ್ದೆ ... ಅಲ್ದೆ ನಿಕಾನ್ ಒಂದು ಸೆಟ್ ಆಗಿ ಕೂಡ ಬರುತ್ತೆ ...ಕ್ಯಾಮರಾ, ೨ ಲೆನ್ಸ್, ಬ್ಯಾಗ್ (ಅಷ್ಟೇನೂ ಚೆನ್ನಾಗಿರೊದಲ್ಲ) ...

ಇರಲಿ ... ಕ್ಯಾಮರಾ ಬಂತಲ್ಲ ... ಇನ್ನು ಶುರು ಆಗುತ್ತೆ ಖರ್ಚುಗಳ ಸುರಿಮಳೆ .... ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೀ ಡಿ೯೦ ಜೊತೆ ಒಂದೇ ಕಿಟ್ ಲೆನ್ಸು ೧೮-೧೦೫ ಎಮ್.ಎಮ್, ನೀವ್ಯಾವ್ದೋ ಯು.ಎಸ್. ಆಫರ್ ನೊಡಿರ್ಬೇಕು.

>>ಇನ್ನು ಶುರು ಆಗುತ್ತೆ ಖರ್ಚುಗಳ ಸುರಿಮಳೆ ....
ಯಾಕ್ರೀ ಹೆದರಿಸ್ತೀರ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಯು.ಎಸ್ ಆಫರ್ ನೋಡಿದ್ದೆ ....

ಹೆದರ್ಸ್ತಾ ಇಲ್ಲ ವಾರ್ನಿಂಗ್ ಅಷ್ಟೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಫೋಟೊ ಚೆನಾಗಿದೆ ಪಾಲಣ್ಣ....
ಫೋಟೋ ತೆಗಿತಾ ಇರಿ ಸಂಪದಕ್ಕೆ ಹಾಕ್ತಾಇರಿ...ಮುಂದಿನ್ ಜನಾಂಗಕ್ಕೆ ಬೇಕಾಗುತ್ತೆ ಒಂದ್ ಕಾಲ್ದಲ್ಲಿ ಗಾಂಧಿಬಜಾರು ಹಿಂಗಿತ್ತು ಅಂತ ತೋರ್ಸೋಕೆ.....ಅಂತು ಒಳ್ಳೊಳ್ಳೆ ತರಕಾರಿ ಹೂವು ನೋಡುದ್ವಿ ಆದ್ರೆ ಕೊಂಡ್ಕೊಳ್ಳೊಕ್ಕಾಗ್ಲಿಲ್ಲ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ ಮೇಡಮ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ್ಯಾಮರ ಬೆಲೆ ಎಷ್ಟು ಸಾರ್?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಾ೦ಧೀಬಜಾರ್ ನನಗೂ ತು೦ಬ ಇಷ್ಟವಾದ ತಾಣ..
ನಾನು ಹುಟ್ಟಿ ಬೆಳೆದದ್ದೆಲ್ಲ ಇಲ್ಲಿಯೇ!!..
ಈಗಲು ರೋಟಿಘರ್ ಮಸಲಪುರಿ ತಿ೦ದು ಬ೦ದೆ!
ನೋಡಿದ್ರೆ ನೀವು ಒಳ್ಳೇ ಚಿತ್ರಗಳನ್ನೆ ಹಾಕಿದೀರ‍ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ ಅಭಿಜಿತ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Pages