pachhu2002 ರವರ ಬ್ಲಾಗ್

ಚಿಗರೆ ಕಂಗಳ ಚೆಲುವೆ

ನೀ ಬರುವೆ ಪ್ರತಿದಿನವು ನನ್ನ ಕನಸಿನಲ್ಲಿ
ಆನಂದ ಅನುದಿನವು ನನ್ನ ಮನಸಿನಲ್ಲಿ
ಅನುದಿನವು ಹೂದೋಟ, ನಡೆವದಾರಿಯಲ್ಲಿ
ಸಾಕೆನಗೆ ಆ ಕುಡಿನೋಟ, ಮನಕರಗಿತಿಲ್ಲಿ

ನಿನ್ನದೆಂತಹಾ ಬೆರಗು, ಬಿಂಕ ಬಿನ್ನಾಣ
ನಿನ ಚೆಲುವು ಎನಗಾಯ್ತು ಸ್ಪೂರ್ತಿಯಾ ತಾಣ
ಕನಸಲ್ಲೂ ಹೊಂಬೆಳಕು ತಂದ ಬೆಳದಿಂಗಳು
ದಾಳಿಂಬೆ ನಗುಚೆಲ್ಲಿ ಬಿರಿದ ಆ ತುಟಿಗಳು

ಅರಳಿದಾ ಸುಮವು ನಾಚಿ ನೀರಾಗಿರಲು
ನಿನ ಸೌಂದರ್ಯಕೆ ಸಾಟಿ ನೀನೇ ಆಗಿರಲು
ದುಂಬಿಯದು ಝೇಂಕರಿಸಿ ನಿನ್ನರಸಿ ಬಂದಿರಲು
ಸುಮವಲ್ಲವೋ ಮರುಳೆ, ಕುಸುಮಬಾಲೆಯು ಇವಳು

ಸಿಂಹಿಣಿಯ ನಡು ನಿನದು ಬಳುಕುತಾ ನಡೆ ನೀನು
ಗೆಜ್ಜೆನಾದದಿ ನುಡಿಸಿ ಮಧುರಗೀತೆಯ ಜೇನು
ನಿನ ನಾಟ್ಯವಾ ನೋಡಿ ನವಿಲೂ ನಿಂದಿತ್ತು
ಆ ಮಧುರ ಗಾನಕ್ಕೆ ಕೋಗಿಲೆಯೂ ನಾಚಿತ್ತು

ಬೆಳಗಾಯ್ತ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತಾಯೇ ನಿನಗೆ ವಂದನೆ... (ಎಲ್ಲಾ ತಾಯಂದಿರಿಗೆ ಅರ್ಪಣೆ)

Human body can bear only upto 45 Del(Unit) of pain. But at the time of giving girth, a woman feels upto 57 del of pain. this is similar to 20 bones getting fractured, at a time. Love your Mother till the end of your life....   ಈ SMS ಎಷ್ಟು ನಿಜ ಎಷ್ಟು ಸುಳ್ಳು ಅನ್ನೋದರ ಬಗ್ಗೆ ವಾದ ವಿವಾದ ಮಾಡದೇಇದ್ರೂ ಒಬ್ಬ ತಾಯಿ ತನ್ನ ಮಕ್ಕಳಿಗಾಗಿ ಪಡುವ ಕಷ್ಟ ಅಪಾರವಾದದ್ದು ಅನ್ನೋದು ಸತ್ಯ. ಅಂತಹಾ ತಾಯಂದಿರಿಗಾಗಿ, ಪ್ರತಿಯೊಬ್ಬ ಮಹಿಳಾಮಣಿಯರಿಗಾಗಿ ನಾನು ಬರೆದ ಕೆಲವು ಸಾಲುಗಳಿವು. :)
ನನ್ನ ಈ ಕವನವನ್ನು ಎಲ್ಲಾ ತಾಯಂದಿರಿಗೆ ಗೌರವದಿಂದ ಅರ್ಪಿಸುತ್ತಿದ್ದೇನೆ......

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

ಯಾರು ???

ಮನದಿ ಹುದುಗಿರುವ ವಿಚಾರಗಳು ಹಲವು,
ತನ್ನದೇ ಆದ ಆಲೋಚನೆಗಳು ಹಲವು,
ಮನದಿ ಮೂಡಿರುವ ಭಾವನೆಗಳ ಕದನದಿ
ಗೆದ್ದವರು ಯಾರು ಸೋತವರು ಯಾರು...

ಸುಪ್ತ ಮನಸಿನ ವೇಗವನು ಹಿಡಿಯುವರು ಯಾರು,
ಸುಪ್ತ ಮನಸಿನ ಕನಸನು ಕಂಡವರು ಯಾರು..
ಎಲ್ಲ ಪರಿಧಿಗಳನು ಮೀರಿ ಈ ಮನವು ಜಿಗಿದ
ಜಿಗಿತವನು ಅಳತೆಗೋಲಿಟ್ಟು ಅಳೆದವರು ಯಾರು...

ನೆನ್ನೆ ನಾಳೆಗಳ ನಡುವೆ ಬಂದು ಹೋಗುವ ದಿನಗಳನು
ಸಂತಸದಿ ಕಳೆದೆನೆಂದು ಹೇಳುವವರು ಯಾರು..
ಪ್ರಕೃತಿಯ ಮಡಿಲಿನ ಈ ಪುಟ್ಟ ಜೀವದೊಳಗಿನ
ಪುಟ್ಟ ಮನಸಿನ ಮಾತನು ಕೆಳುವವರು ಯಾರು..

ಹೃದಯದ ಮಾತ ಬುದ್ದಿ ಕೇಳುವುದಿಲ್ಲ,
ಬುದ್ದಿಯ ಮಾತ ಹೃದಯ ಕೇಳುವುದಿಲ್ಲ
ಈ ಇಬ್ಬರನಡುವೆ ಪ್ರೀತಿ ಮೂಡಿಸುವವರು ಯಾರು...

ಇಂದಲ್ಲ ನಾಳೆ ಮಣ್ಣಲ್ಲಿ ಮಣ್ಣಾಗುವ ಈ ಶರೀರವನ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಕ್ಕಿ ಹಾರಬೇಕಿದೆ....

ಬಂಧನದಿ ಸಿಲುಕಿರುವ ಹಕ್ಕಿ ಮುಕ್ತವಾಗಿ ಹಾರಬೇಕಿದೆ,
ಬಂಧ, ಸಂಭಂಧಗಳ ಸಂಕೋಲೆಯ ಕಳಚಿ

ನೀಲಿಗಗನದಿ ಸ್ವಚ್ಚಂದವಾಗಿ ವಿಹರಿಸಬೇಕಿದೆ.
ಪ್ರತಿ ಕ್ಷಣದಲೂ ಸಿಗುವ ಅಡೆತಡೆಗಳನು ದಾಂಟಿ

ಮನದಿ ಮೂಡುವ ತವಕ, ತುಮುಲಗಳನು ಮೀರಿ ಹಾರಬೇಕಿದೆ.
ನೇಸರನ ಮಡಿಲಿನಲ್ಲಿ ನಿರ್ಭಯವಾಗಿ ಒಂಟಿಯಾಗಿ ಸಾಗಬೇಕಿದೆ,

ತನ್ನ ಸುತ್ತ ಕವಿದಿರುವ ಮೋಹಜಾಲಗಳ
ಪರಿಧಿಯನು ಮೀರಿ ಸ್ವತಂತ್ರವಾಗಿ ತೇಲಬೇಕಿದೆ,

ಎತ್ತಣಿಂದಲೋ ಬೆಳೆದುಬಂದ ಸಂಭಂದಗಳ
ಯಾವಕ್ಷಣದಲೋ ಮೂಡಿದ ಸ್ನೇಹ ಬಾಂಧವ್ಯಗಳ

ಎಲ್ಲವನೂ ಮರೆಯಬೇಕಿದೆ, ಮೂಳೆ ಮಾಂಸಗಳ ಪಂಜರವ ತೊರೆಯಬೇಕಿದೆ...
ಇಂದಲ್ಲ ನಾಳೆ ಹಕ್ಕಿ ಹಾರಬೇಕಿದೆ.... ದೂರ ಬಲುದೂರ ಹೋಗಬೇಕಿದೆ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

bg******@ rediffmail. com ಗೆ ಒಂದು ಪತ್ರ

ಸುಮಾರು ಎಂಟೊಂಭತ್ತು ವರುಷಗಳ ಹಿಂದಿನ ಮಾತು.. ಕಂಪ್ಯೂಟರ್ ಕೋರ್ಸಿಗಾಗಿ ಸೇರಿದ್ದ ನನಗೆ ನಿನ್ನ ಪರಿಚಯವಾಯ್ತು. ಮೊದಲೇ ಕೆಲಸದಲ್ಲಿದ್ದ ನಾನು ಕಂಪ್ಯೂಟರಿನ ಬಗ್ಗೆ ನಿನಗಿಂತಾ ತುಸು ಹೆಚ್ಚೇ ತಿಳಿದಿದ್ದೆ.  ನಮ್ಮೊಡನೆ ಕಲಿಯಲು ಬಂದವರಲ್ಲಿ ನೀನು ನಿನ್ನ ಅನುಮಾನಗಳ ಪರಿಹಾರಕ್ಕೆ ನನ್ನನೇ ಏಕೆ ಆಯ್ಕೆ ಮಾಡಿದೆಯೋ, ಗೊತ್ತಿಲ್ಲ.  ನಮ್ಮ ಪರಿಚಯವಾಯ್ತು.  ನಾನು ಅಂದು ಬಹಳ ಸಂಕೋಚದ ಹುಡುಗ.  ಹೆಚ್ಚಿಗೆ ಯಾರೊಡನೆಯೂ ಬೆರೆಯುತ್ತಿರಲಿಲ್ಲ. ಅದರಲ್ಲೂ ಹುಡುಗಿಯರನ್ನು ಕಂಡರೆ ಮಾರು ದೂರ ಹೋಗಿ ನಿಲ್ಲುತ್ತಿದ್ದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (8 votes)
To prevent automated spam submissions leave this field empty.

Pages

Subscribe to RSS - pachhu2002 ರವರ ಬ್ಲಾಗ್