pachhu2002 ರವರ ಬ್ಲಾಗ್

ನಾವು ಸಂಪದಿಗರು...

ಸಂಪದಿಗರ ಸಾಗರದಲ್ಲಿ ನಾನೊಂದು ಪುಟ್ಟ ಮೀನು


ಕವಿತೆ, ಕಾವ್ಯ ಬರದೇ ನಾ ಬರೆವುದಾದರೂ ಏನು?


ಸಾಗರದಿ ಈಜಾಡುತಿರುವ ದೊಡ್ಡ ದೊಡ್ಡ ಮೀನುಗಳ ನಡುವೆ


ಸಾಗರದಲ್ಲಿ ಒಮ್ಮೊಮ್ಮೆ ಗಂಭೀರ ಚರ್ಚೆಯ ಅಲೆಗಳು


ಮತ್ತೊಮ್ಮೆ ಮುದನೀಡೋ ಹಾಸ್ಯದ ತೆರೆಗಳು


ಅದರಲ್ಲಿ ಮುಳುಗೇಳುತ್ತಲೇ ಸಾಗುವುದು ಜೀವ


ಹಸನಾಗುವುದು ನಮ್ಮ ಬಾಳು


ನಮ್ಮಯ ಕುಟುಂಬದಿ ಇರುವ ಮಂದಿ ಬಹಳ


ಕೆಲವರ ಹಾಜರಾತಿ ಒಮ್ಮೊಮ್ಮೆ ವಿರಳ


ಕೆಲವರು ಎಲೆಮರೆಯ ಕಾಯಂತೆ


ಮತ್ತೆ ಹಲವರು ಹಸಿರ ಚಿಗುರಂತೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಭಾವನೆಗಳ ಬುತ್ತಿ

ಭಾವನೆಗಳ ಬುತ್ತಿಯ ಬಿಚ್ಚಿಡುತ್ತಿದ್ದೇನೆ


ನೂರೆಂಟು ಬಗೆಯ ಖಾದ್ಯಗಳು ಅದರಲ್ಲಿ


ಒಮ್ಮೆ ಅದರ ಘಮಲು ಮನಸಿಗೆ ಹಿತವಾದರೆ


ಮತ್ತೊಮ್ಮೆ ಅದರದ್ದೇ ಘಾಟು


ಯಾವುದನ್ನು ಪುರಸ್ಕಾರಿಸುವುದು


ಯಾವುದನ್ನು ತಿರಸ್ಕರಿಸುವುದು


ಒಮ್ಮೊಮ್ಮೆ ಸವಿಯಾದ ಭಾವನೆ


ಮತ್ತೊಮ್ಮೆ ಕಹಿಯಾದ ಭಾವನೆ


ಎರಡಕ್ಕೂ ಸರಿ ಸಮಾನ ಪೈಪೋಟಿ


ಸಕಲ ರುಚಿಗಳ ಸಮ್ಮೇಳನ


ಬುತ್ತಿಯ ಹಂಚಿಕೊಳ್ಳಲು ನನ್ನವರಿಲ್ಲ


ಸಕಲ ಖಾದ್ಯಗಳೂ ನನ್ನವೇ


ಅತ್ತ ಇತ್ತ ಎತ್ತನೋಡಿದರೂ ಯಾರ ಸುಳಿವಿಲ್ಲ


ಆದರೂ ಬುತ್ತಿಯ ಬಿಡಲು ಮನಸ್ಸಿಲ್ಲ


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನೀನಾರೇ...

ನೀಳಕೂದಲು, ಹೊಳೆವ ಕಣ್ಗಳು


ಬಂದು ನೆಲೆಸಿಹೆ ಎನ್ನ ಮನದೊಳು


ಬಿಂಕದ ವೈಯಾರಿ, ನೀನಾರೇ...


 


ಮಿಂಚಿನ ನೋಟ, ಸೊಬಗಿನ ಮೈ ಮಾಟ


ತುಂಟತನದಿ ಆಡುವ ಹುಡುಗಾಟ


ಬೈತಲೆಯ ಸೊಬಗಿ, ನೀನಾರೇ...


 


ಸರಳ ಸೌಂದರ್ಯ, ತುಸು ಗಾಂಭೀರ್ಯ


ದನಿಯ ಮಧುರ ಮಾಧುರ್ಯ


ನಾಚಿ ನೀರಾದ ಬಾಲೆ, ನೀನಾರೇ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಇವರು ಬಕೇಟ್ ಹಿಡಿಯುವ ಮಂದಿ...

ಮೊನ್ನೆ ನಮ್ಮ ಕಾರ್ಯಾಲಯದ ಮಂದಿಎಲ್ಲಾ ಒಟ್ಟಾಗಿ ಸೇರಿದ್ವಿ. ಅಂದು ನಮ್ಮ ಕಾರ್ಯಾಲಯಕ್ಕೆ ೧೦ ವರುಷ ತುಂಬಿದ ಸಡಗರ. ನಾನು ಆ ಕಾರ್ಯಾಲಯವನ್ನ ಸೇರಿದಾಗ ಕನ್ನಡಿಗರ ಸಂಖ್ಯೆ ಬಹಳವಾಗಿತ್ತು.  ಇದ್ದ ೨೫ ಜನರಲ್ಲಿ ೨೦ ಜನ ಕನ್ನಡಿಗರು :)  ಮೊದಲ ಆರುತಿಂಗಳು ಯಾವುದೇ ತೊಂದರೆಇಲ್ಲದೇ ಸರಾಗವಾಗಿ ಎಲ್ಲಾ ಕೆಲಸಗಳು ನೆರವೇರಿದವು.  ಆಮೇಲೆ ಬಂತು ನೋಡಿ ಗ್ರಹಚಾರ...

ನಮ್ಮ ಕಾರ್ಯಾಲದಮೇಲೆ ತಮಿಳಿಗಳ ವಕ್ರದೃಷ್ಟಿ ಬಿದ್ದೇ ಬಿಡ್ತು.  ಹೌದು... ನಮ್ಮ ಹೊಸಾ HR ಅಡ್ಮಿನ್... ಒಬ್ಬ ತಮಿಳಿಗಳು. ಎಡಗಾಲಿಟ್ಟು ಒಳಗೆ ಬಂದವಳು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ತೊಂದರೆ ಕೊಟ್ಟು ಕೆಲಸ ಬಿಡುವಂತೆ ಮಾಡಿದಳು. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

"ಏಕ್ ಅಜ್ನಭಿ ಹಸೀನಾಸೇ ಯೂ ಮುಲಾಕಾತ್ ಹೋಗಯಿ"

ಪ್ರತೀ ದಿನ ಕಂಪ್ಯೂಟರಿನ ಕೆಲಸ ಬಿಟ್ಟರೆ ನನ್ನ ಚಟುವಟಿಕೆಗಳು ಮತ್ಯಾವುದರಲ್ಲೂ ಹೆಚ್ಚಿಗೆ ಇರದ ದಿನಗಳ ಮಾತು. ನಾನು ಅಂದು ನನ್ನ ಗೆಳೆಯರೊಡನೆ ಚಾರಣಕ್ಕೆ ಹೊರಟಿದ್ದೆ. ಹೊಸಾ ತಂಡ, ಹೊಸಾ ಜನ, ಹೊಸಾ ಪ್ರದೇಶ... ಎಲ್ಲವೂ ಹೊಸತಾಗಿತ್ತು. ಯಾವುದೇ ಪ್ರವಾಸದಲ್ಲಾಗಲಿ, ಅಥವಾ ಸಭೆ ಸಮಾರಂಭಗಳಲ್ಲಾಗಲಿ ನಮಗೆ ಮೊದಲು ಯಾರ ಪರಿಚಯವೂ ಇಲ್ಲದಿದ್ದರೂ ಅಲ್ಲಿಂದ ಹೊರ ನಡೆವಾಗ ಯಾರದ್ದಾದರೂ ಪರಿಚಯ ಆಗಿರುತ್ತದ್ದೆ.

ನನಗೆ ನಿನ್ನ ಪರಿಚಯವೂ ಹಾಗೇ ಆದದ್ದು. ನಾವೆಲ್ಲಾ ಅಂದು ರಾತ್ರಿ ಬೆಂಗಳೂರಿನಿಂದ ಹೊರಟು ನಮ್ಮ ಪ್ರವಾಸದ ತಾಣದೆಡೆಗೆ ತೆರಳುವಾಗ ನೀನಾರೋ ನಾನಾರೋ... ಆ ಬಸ್ಸಿನ ಒಂದು ಮೂಲೆಯಲ್ಲಿ ನಾನು ಕುಳಿತಿದ್ದರೆ ನೀನೆಲ್ಲಿದ್ದೆಯೋ ನನಗಂತೂ ನೆನಪಿಲ್ಲ. ನಾನು ನನ್ನಷ್ಟಕ್ಕೆ ಕಿಟಕಿಯಿಂದ ಇಣುಕಿ ಹೊರ ಪ್ರಪಂಚವನ್ನು ನೋಡುತ್ತಾ ಕುಳಿತಿದ್ದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - pachhu2002 ರವರ ಬ್ಲಾಗ್