pachhu2002 ರವರ ಬ್ಲಾಗ್

ನಿಮ್ಮ ಪ್ರಯಾಣ ಸುಖಕರವಾಗಿರಲಿ

ಜೀವನವೆಂಬುದು ನಂಬಿಕೆಯೆಂಬ


ಹಳಿಗಳಮೇಲಿನ ರೈಲು ಪಯಣ


ಹಳಿತಪ್ಪಿದರದು ಭಾರೀ ದುರಂತ,


ಭಾಂದವ್ಯಗಳ ಸಾವು


ಮನದ ತುಂಬಾ ನೋವು


ಪ್ರತಿಕ್ಷಣವೂ ಹೊಸಾ ಪಯಣಿಗರ ಸೇರ್ಪಡೆ


ಹಳೆ ಪಯಣಿಗರ ಬೀಳ್ಗೊಡುಗೆ


ಹೊಸ ಪಯಣಿಗನ ಆಗಮನದ ಸಂತಸ


ಹಳೆ ಪಯಣಿಗನ ನಿರ್ಗಮನದ ಬೇಸರ


ಪರಿಚಿತ, ಅಪರಿಚಿತ ಮೊಗದ ಸಹಪಯಣಿಗರ ನಡುವೆ


ನಮ್ಮ ನಿಮ್ಮ ಪಯಣ ನಿರಂತರ


ನಿಂತಲ್ಲೇ ನಿಂತು ಬರುವ ರೈಲಿಗಾಗಿ ಕಾದಿರುವ ನಿಲ್ದಾಣಗಳು


ನಿಂತ ಕೆಲ ನಿಮಿಷದ ನಂತರ ಮುಂದಿನ ನಿಲ್ದಾಣದ ನಿರೀಕ್ಷೆ


ಪಯಣದ ನಡುವಲ್ಲಿ ಸಿಗುವ ಅಪರಿಚಿತ ಮುಖಗಳಲ್ಲಿ


ಪರಿಚಯದ ಹುಡುಕಾಟ, ನಡು ನಡುವೆ ಹುಡುಗಾಟ


ಮುಂಬರುವ ನಿಲ್ದಾಣದ ಅರಿವು ಯಾರಿಗುಂಟು, ಯಾರಿಗಿಲ್ಲ


ನಮ್ಮ ನಿಲ್ದಾಣ ಬಂದಾಗ ರೈಲಿನಿಂದಿಳಿಯಲೇ ಬೇಕು


ಸಹ ಪಯಣಿಗರ ಪಯಣ ಸಾಗಲೇ ಬೇಕು


ದೇವನೆಂಬ ಚಾಲಕನ ವೇಗ ಬಲ್ಲವರಾರು


ಪಯಣವನೆಲ್ಲಿ ನಿಲ್ಲಿಸುವನೋ ಅರಿತವರು ಯಾರು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮದುವೆ ಯಾವಾಗ ಮಾಡ್ಕೋತೀಯ ???

ಮದುವೆ ಯಾವಾಗ ಮಾಡ್ಕೋತೀಯ, ನಮ್ಗೆಲ್ಲಾ ಮದ್ವೆ ಊಟ ಯಾವಾಗ ಹಾಕಿಸ್ತೀಯ....??? ಇದು ಮದುವೆಯಾಗದ ಹುಡುಗ ಮತ್ತು ಹುಡುಗಿಯರನ್ನು ಮಿಕ್ಕವರು ಕೇಳುವ ಸಾಮಾನ್ಯ ಪ್ರಶ್ನೆ.

"ಅಲ್ಲಾ ಸ್ವಾಮೀ.... ನಿಮಗೆ ಭರ್ಜರಿ ಊಟ ಬೇಕಾದ್ರೆ ನನ್ನೇ ಕೇಳಿ, ಮಾಡಿ ಹಾಕ್ತೀನಿ. ಅದಿಕ್ಕೆ ನನ್ ಮದುವೇನೇ ಆಗಬೇಕಾ ? ಬೇರೆ ಏನೂ ಕಾರಣನೇ ಸಿಕ್ಲಿಲ್ವಾ ??? ನಾನು ಒಂಟಿಯಾಗಿ ಇರೋದು ಕಂಡು ನಿಮ್ಗೆ (ಮದುವೆ ಆದವರಿಗೆ) ಹೊಟ್ಟೆ ಉರಿ ಬರತ್ತಾ??? ಅಥವಾ ನೀವು ಖೆಡ್ಡಾಗೆ ಬಿದ್ದಾಯ್ತು ಅಂತ ನನ್ನ ಮೇಲೆ ಹೊಟ್ಟೆಕಿಚ್ಚಾ???" ಹೀಗೆಲ್ಲಾ ಕೇಳೋಣಾ ಅನ್ಸತ್ತೆ. ಆದ್ರೆ ಸಮಾಜದಲ್ಲಿ ಸಭ್ಯ.. ಅಂತ ಅನ್ನಿಸ್ಕೊಂಡಿರೋದ್ರಿಂದ.... "ಅಯ್ಯೋ ಅದಕ್ಕೇನಂತೆ.... ಮೊದಲು ಒಳ್ಳೇ ಹುಡುಗಿ ಸಿಕ್ಲಿ....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬಾಲ್ಯ

ಬಾಲ್ಯ ಎಷ್ಟು ಸುಂದರ ಅಲ್ವಾ ? ನಾವೆಲ್ಲಾ Miss ಮಾಡ್ಕೊಳೋ ಬಹು ದೊಡ್ಡ ಆಸ್ತಿ. ನಾವು ಕಳ್ಕೊಂಡ ಬಾಲ್ಯವನ್ನ ನಮ್ಮ ಮಕ್ಕಳಲ್ಲಿ ಅಥವಾ ನಮ್ಮ ಸುತ್ತ ಮುತ್ತ ಕಾಣ ಸಿಗುವ ಮಕ್ಕಳಲ್ಲಿ ಕಂಡು ಸಂತಸ ಪಡುತ್ತೇವೆ. ನಾವು ಚಿಕ್ಕವರಾಗಿದ್ದಾಗಿನ ನೆನಪು ನಮ್ಮ ನನಪಿನಂಗಳದಲ್ಲಿ ಬಂದು ಒಮ್ಮೊಮ್ಮೆ ನಲಿದು, ಕುಣಿದು ಹೋಗುವುದು ಸಾಮಾನ್ಯವೇ.

ಮೊನ್ನೆ ನಾನು ನನ್ನ ಅಜ್ಜನ ಮನೆಯಾದ ಬಾರಕೂರಿಗೆ ಹೋಗಿದ್ದೆ. ಅಲ್ಲಿ ಕಂಡಾಪಟ್ಟೆ ಮಳೆ ಬಂದು ಅಲ್ಲಿನ ತೋಡು (ಗದ್ದೆಗಳ ನಡುವೆ ನೀರು ಹರಿಯುವ ಜಾಗ) ತುಂಬಿ ಹರಿಯುತ್ತಿತ್ತು. ಅದರಲ್ಲಿ ನಡೆದಾಡುತ್ತಾ ಇದ್ದೆ. ಅಲ್ಲಿಗೆ ನನ್ನ ಅಣ್ಣ ಮತ್ತು ಅವನ ೩ ವರ್ಷದ ಮಗಳು ವಿಸ್ಮಯ ಬಂದರು. ಅಣ್ಣ ಅವಳಿಗೆ "ಪೇಪರ್ ದೋಣಿ ಮಾಡಿಕೊಡ್ತೀನಿ, ಅದನ್ನ ನೀರಲ್ಲಿ ಬಿಡೋಣ" ಅಂತಾ ಇದ್ದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಿನಗಾಗಿ...

ಮನಸ್ಸಲ್ಲಿ ಮನಸನಿಟ್ಟು,
ನನ್ನೆದೆಯಲ್ಲಿ ಅಳಿಸಲಾಗದ ಹೆಜ್ಜೆಗುರುತನಿಟ್ಟು
ಎನ್ನೆದೆಯ ಬಡಿತದಲಿ ಅವಳ ಹೆಸರನಿಟ್ಟು
ಮುಗುಳುನಗೆ ನಕ್ಕು ಹೋದವಳು...

ಉರಿಬಿಸಿಲಲಿ ತಂಪನಿಟ್ಟು
ತುಂತುರುಮಳೆಯಲಿ ಪುಳಕವನಿಟ್ಟು
ಮೌನದಲ್ಲೇ ಮಾತನಾಡಿಸಿ ಸಂತಸವ ಕೊಟ್ಟು
ಮತ್ತೆ ಬರುವೆನೆಂದು ಹೇಳಿದವಳು...

ಬೆಳದಿಂಗಳ ರಾತ್ರಿಯಲಿ
ತಾರೆಗಳ ಸಂತೆಯಲಿ
ಚೆಂದಿರನ ನಾಚಿಸುತ್ತಾ
ಬೆಳಕಚೆಲ್ಲಿಬಂದವಳು...

ನೆತ್ತಿಸುಡುವ ಸೂರ್ಯಕಿರಣಗಳ ನಡುವೆ
ದಾಹತುಂಬಿದ ದಾರಿಯಲ್ಲಿ
ತಂಪು ನೆರಳಾಗಿ ಬಂದು
ಅಮೃತ ಸಿಂಚನವನ್ನೆರೆದವಳು...

ಹೊಂಗನಸಿನಲ್ಲಿ ಬಂದು
ಬೆಚ್ಚನೆಯ ಅಪ್ಪುಗೆಯ ಕೊಟ್ಟು
ಸಿಹಿ ಮುತ್ತನಿಟ್ಟವಳು
ನೀ ಹೋದದ್ದಾದರೂ ಎಲ್ಲಿಗೆ ???

ನಿನ್ನ ಅಪ್ಪುಗೆಗಾಗಿ ಕಾದಿರುವ ನನ್ನ ಬಾ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನನ್ನೊಲುಮೆಯಾ ಸಖೀ...

ದೇವ ದೇವರಲಿ ನಮಿಸಿ


ಬೇಡಿಕೆಗಳ ಮಳೆ ಸುರಿಸಿ


ಬಂದೆ ನಾ ನಗು ಮೊಗವನರೆಸಿ


ಹುಡುಕಿದ್ದೆ ನಾನಂದು ಎನ್ನ ಅರಸಿ


 


ಕಂಡಿದ್ದೆ ನಾ ನಂದು


ನಗುಮೊಗದ ಕನಸೊಂದು


ಕನಸಿನಲಿ ನೀ ಬಂದು


ನಿಂತಿದ್ದೆ ನಗು ತಂದು


 


ನಿನ್ನ ಆ ಹೊಳೆವ ಕಣ್ಗಳು


ನಗುವಿನಾ ಅಲೆಗಳು


ಕಣ್ಣಂಚಿನಲಿ ಇದ್ದ ಆ ನಿನ್ನ ಕುಡಿನೋಟ


ಕುಡಿನೋಟದೊಳಗಿದ್ದ ಆ ನಿನ್ನ ತುಂಟಾಟ


 


ಬಾ ಸಖಿ ಸಾಗುವ ಬಾಳ ಬಂಡಿಯಲಿ


ದೂರ, ಬಲುದೂರದಾ ಪಯಣದಲಿ


ನಾ ನಿನ್ನ ಜೊತೆಗಾರ ನೀ ಎನಗೆ ಆಧಾರ


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - pachhu2002 ರವರ ಬ್ಲಾಗ್