ನಿಮ್ಮ ಪ್ರಯಾಣ ಸುಖಕರವಾಗಿರಲಿ

0

ಜೀವನವೆಂಬುದು ನಂಬಿಕೆಯೆಂಬ


ಹಳಿಗಳಮೇಲಿನ ರೈಲು ಪಯಣ


ಹಳಿತಪ್ಪಿದರದು ಭಾರೀ ದುರಂತ,


ಭಾಂದವ್ಯಗಳ ಸಾವು


ಮನದ ತುಂಬಾ ನೋವು


ಪ್ರತಿಕ್ಷಣವೂ ಹೊಸಾ ಪಯಣಿಗರ ಸೇರ್ಪಡೆ


ಹಳೆ ಪಯಣಿಗರ ಬೀಳ್ಗೊಡುಗೆ


ಹೊಸ ಪಯಣಿಗನ ಆಗಮನದ ಸಂತಸ


ಹಳೆ ಪಯಣಿಗನ ನಿರ್ಗಮನದ ಬೇಸರ


ಪರಿಚಿತ, ಅಪರಿಚಿತ ಮೊಗದ ಸಹಪಯಣಿಗರ ನಡುವೆ


ನಮ್ಮ ನಿಮ್ಮ ಪಯಣ ನಿರಂತರ


ನಿಂತಲ್ಲೇ ನಿಂತು ಬರುವ ರೈಲಿಗಾಗಿ ಕಾದಿರುವ ನಿಲ್ದಾಣಗಳು


ನಿಂತ ಕೆಲ ನಿಮಿಷದ ನಂತರ ಮುಂದಿನ ನಿಲ್ದಾಣದ ನಿರೀಕ್ಷೆ


ಪಯಣದ ನಡುವಲ್ಲಿ ಸಿಗುವ ಅಪರಿಚಿತ ಮುಖಗಳಲ್ಲಿ


ಪರಿಚಯದ ಹುಡುಕಾಟ, ನಡು ನಡುವೆ ಹುಡುಗಾಟ


ಮುಂಬರುವ ನಿಲ್ದಾಣದ ಅರಿವು ಯಾರಿಗುಂಟು, ಯಾರಿಗಿಲ್ಲ


ನಮ್ಮ ನಿಲ್ದಾಣ ಬಂದಾಗ ರೈಲಿನಿಂದಿಳಿಯಲೇ ಬೇಕು


ಸಹ ಪಯಣಿಗರ ಪಯಣ ಸಾಗಲೇ ಬೇಕು


ದೇವನೆಂಬ ಚಾಲಕನ ವೇಗ ಬಲ್ಲವರಾರು


ಪಯಣವನೆಲ್ಲಿ ನಿಲ್ಲಿಸುವನೋ ಅರಿತವರು ಯಾರು


ಸಹ ಪಯಣಿಗನಾಗಿ ನಾ ಕೋರುವುದಿಷ್ಟೇ...


 


ನಿಮ್ಮ ಪ್ರಯಾಣ ಸುಖಕರವಾಗಿರಲಿ.... :)

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

<<ಸಹ ಪಯಣಿಗನಾಗಿ ನಾ ಕೋರುವುದಿಷ್ಟೇ... ನಿಮ್ಮ ಪ್ರಯಾಣ ಸುಖಕರವಾಗಿರಲಿ.... :)>> ಸಹ ಪಯಣಿಗನಾಗಿ ನಾ ಕೋರುವುದಿಷ್ಟೇ... ನಮ್ಮ ಪ್ರಯಾಣ ಸುಖಕರವಾಗಿರಲಿ.... :) ಸಹ ಅನ್ನುವುದಕ್ಕೆ ಅರ್ಥಬರಬೇಕಾದರೆ ನಾನು + ನೀವು -> ನಾವು ಆಗಬೇಕು. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.