ಒಲವಿನ ಆಮಂತ್ರಣ

5

ಆತ್ಮೀಯ,

ನನ್ನ ಮದುವೆಯ ಮಂಗಳ ಕಾರ್ಯವು ಬರುವ ನವೆಂಬರ್ ತಿಂಗಳಿನ ೧೧ನೇ ತಾರೀಖು ಬೆಂಗಳೂರಿನ ಬಸವನ ಗುಡಿಯಲ್ಲಿರುವ ಬುಲ್ ಟೆಂಪಲ್ ರಸ್ತೆಯ "ಶ್ರೀ ಗುರುನರಸಿಂಹ ಕಲ್ಯಾಣಮಂದಿರ" ದಲ್ಲಿ ನೆರವೇರಲಿದೆ.  ಈ ಮಂಗಳಕಾರ್ಯಕ್ಕೆ ತಾವು ತಮ್ಮ ಕುಟುಂಬ ಹಾಗು ಮಿತ್ರರೊಂದಿಗೆ ಬಂದು ಯಥೋಚಿತ ಸತ್ಕಾರ ಸ್ವೀಕರಿಸಿ ವಧು-ವರ ರಿಗೆ ಹಾರೈಸಬೇಕಾಗಿ ಕೋರಿಕೆ.

ಭಾವಾಂತರಂಗದ ಅಲೆಗಳ ನಡುವೆ

ಬಾಳಿನ ಪಯಣದಿ ಒಂಟಿ ಸಾಗುತ್ತಿದ್ದೆ

ಮನದ ಭಾವನಗಳನರಿತು ಜೊತೆಗೂಡಿ

ನಡೆಯಲು "ಪ್ರಭಾ" ಎನ್ನೊಡನೆ ಬರಲಿದ್ದಾಳೆ

ಗುರು ಹಿರಿಯರ ಆಶೀರ್ವಾದದೊಂದಿಗೆ

ಮಂಗಳಕಾರ್ಯ ನೆರವೇರಲಿದೆ

ಕಷ್ಟವೋ, ಸುಖವೋ ಎಲ್ಲವೂ ಜೊತೆ ಜೊತೆಯಲಿ

ಪರಸ್ಪರ ಅರಿತು ಬಾಳನೌಕೆಯನೇರಿ ಸಾಗಲಿದ್ದೇವೆ 

ಸಿಹಿ ಕಹಿಗಳ ಬುತ್ತಿಯ ಹೊತ್ತು

ನನಗೊಂದುತುತ್ತು, ಅವಳಿಗೊಂದು ತುತ್ತು 

ಜೀವನದಿ ಸಮಪಾಲು ಅಕ್ಕರೆಯ ಸಿರಿಬಾಳು 

ಬಾಳನೌಕೆಯಿದು ತೇಲಿಸಾಗಲಿ

ನಿಮ್ಮೆಲ್ಲರ ಹಾರೈಕೆ ನಮ್ಮದಾಗಲಿ

ಸಮಯದ ಅಭಾವದಿಂದ ಖುದ್ದಾಗಿ ಆಮಂತ್ರಣ ತಲುಪಿಸಲಾಗಲಿಲ್ಲ.  ಕ್ಷಮೆ ಇರಲಿ :)

ಧಾರಾ ಮಹೂರ್ತ ಮಧ್ಯಾಹ್ನ 12.10 ಕ್ಕೆ

ಸ್ಥಳ: ಶ್ರೀ ಗುರುನರಸಿಂಹ ಕಲ್ಯಾಣಮಂದಿರ, ಬುಲ್ ಟೆಂಪಲ್ ರಸ್ತೆ, ರಾಮಕೃಷ್ಣ ಆಶ್ರಮದ ಎದುರು, ಬಸವನಗುಡಿ, ಬೆಂಗಳೂರು.

ಆರತಕ್ಷತೆ:  14-11-2010 ರಂದು ಭಾನುವಾರ

ಸ್ಥಳ: ಶ್ರೀ ಸುಧಾಮ ಭವನ, ಕೃಷ್ಣಧಾಮ, ಸರಸ್ವತೀಪುರಂ, ಮೈಸೂರು.

ವಂದನೆಗಳೊಂದಿಗೆ,

ಪ್ರಶಾಂತ ಜಿ ಉರಾಳ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮದುವೆ ಯಾವಾಗ ಮಾಡ್ಕೋತೀಯ ???ಎಂದು ಕೇಳುವವರಿಗೆ ಮದುವೆ ಈವಾಗ ಎಂದು ಹೇಳಿಬಿಟ್ಟಿರಿ. :). ಅಭಿನಂದನೆಗಳು .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಭಿನಂದನೆಗಳಿಗೆ ನನ್ನಿ :) ಖಂಡಿತಾ ಬರಬೇಕು :) ವಂದನೆಗಳೊಂದಿಗೆ, ಪ್ರಶಾಂತ ಜಿ ಉರಾಳ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮದುವೆಗೆ ಬರಬೇಕೆಂಬ ಇಚ್ಛೆ ಇದೆ. ಇನ್ನು ಆಮಂತ್ರಣ ಪತ್ರಿಕೆಯಲ್ಲಿ ಆರತಕ್ಷತೆಯ ದಿನಾಂಕ ಮತ್ತು ಸಮಯವನ್ನು ಓದಲಾಗುತ್ತಿಲ್ಲ :(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪತ್ರಿಕೆ ಸರಿಯಾಗಿ ಕಾಣ್ಸತ್ತೆ ಅಂತ ಹಾಕಿದ್ದೆ, ಆದ್ರೆ ಕಾಣ್ತಾ ಇಲ್ಲ. ಆದ ತೊಂದರೆಗೆ ಕ್ಷಮೆ ಇರಲಿ :) ಮದುವೆಗೆ ಖಂಡಿತಾ ಬನ್ನಿ. ವಂದನೆಗಳೊಂದಿಗೆ, ಪ್ರಶಾಂತ ಜಿ ಉರಾಳ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಭಿನಂದನೆಗಳು ಪ್ರಶಾಂತ್. ಹೆಗ್ಡೆಯವರೇ, ಆರತಕ್ಷತೆ ೧೯ಕ್ಕೆ, ಮಧ್ಯಾಹ್ನ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೧೯ ಮಧ್ಯಾಹ್ನ ಸರಿ. ವಾರ ಯಾವುದಿದೆ? ನನಗೆ ಅನುಮಾನ ಇದೆ. ೧೯ ರ ಜೊತೆಗೆ ಭಾನುವಾರ ಇದೆಯೆಂದು ಅನಿಸುತ್ತೆ. ೧೯ ಭಾನುವಾರ ಬರುವುದು ದಶಂಬರದಲ್ಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದಲ್ವೇ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂತೋಷ್, ಅಭಿನಂದನೆಗಳಿಗೆ ನನ್ನಿ :) ಆರತಕ್ಷತೆ ೧೯ರ ಮಧ್ಯಾಹ್ನ ಅಲ್ಲ, ಆರತಕ್ಷತೆ: 14-11-2010 ರಂದು ಭಾನುವಾರ, ಮೈಸೂರಿನಲ್ಲಿ ಖಂಡಿತಾ ಬನ್ನಿ. ವಂದನೆಗಳೊಂದಿಗೆ, ಪ್ರಶಾಂತ ಜಿ ಉರಾಳ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಶಾಂತ್ - ಪ್ರಭಾ, ತಮ್ಮ ವೈವಾಹಿಕ ಜೀವನವು ಸುದೀರ್ಘವೂ ಹಾಗೂ ಸದಾ ಆರೋಗ್ಯ ಮತ್ತು ನೆಮ್ಮದಿಯಿಂದ ಕೂಡಿದ್ದುದಾಗಿಯೂ ಇರಲೆಂದು ಹಾರ್ದಿಕವಾಗಿ ಹಾರೈಸುತ್ತೇನೆ. ನಾವು ಎಣಿಸಿದಂತೆ ಎಲ್ಲವೂ ನಡೆಯುವುದಿಲ್ಲ. ಹಾಗಿದ್ದಿದ್ದರೆ, ಇಂದು ನಾನು ಮದುವೆ ಮಂಟಪದಲ್ಲಿ ಹಾಜರಿರುತ್ತಿದ್ದೆ. ಕ್ಷಮಿಸಿ. - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ವೈವಾಹಿಕ ಜೀವನ ಶುಭಕರ ವಾಗಿರಲಿ ಕಾಮತ್ ಕುಂಬ್ಳೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.