ಎಚ್ಚರಿಕೆ !!!

0

ಇವತ್ತಿಗೆ ನಮ್ಮ ಕಂಪನಿಯ ಮತ್ತೊಂದು Wicket ಬಿತ್ತು. ನಾನು ಕಳೆದ ಒಂದು ವರುಷ ಏಳು ತಿಂಗಳಿಂದಾ ಕೆಲಸಮಾಡುತ್ತಿರುವ ಕಂಪನಿಯ ಆಗು ಹೋಗುಗಳನ್ನ ಗಮನಿಸುತ್ತಾ ಬಂದಿದ್ದೇನೆ. ಒಂದು ಕಂಪನಿಯಲ್ಲಿ ಯಾವ ಯಾವ ರೀತಿಯ ವಾತಾವರಣ ಏನೆಲ್ಲಾ ಮಾಡಬಲ್ಲದು ಅನ್ನೋದಕ್ಕೆ ನಿದರ್ಶನ ಈ ಕಂಪನಿ. ರಾಜಕೀಯ ಅನ್ನೋದು ಕೇವಲ ರಾಜಕಾರಣಿಗಳಿಗಷ್ಟೇ ಸೀಮಿತವಲ್ಲ. ರಾಜಕಾರಣ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹೇರಳವಾಗಿ ಹಬ್ಬಿದೆ. ಒಂದೇ ಸ್ಥಳದಲ್ಲಿದ್ದುಕೊಂಡು ಒಬ್ಬರಮೇಲೆ ಮತ್ತೋಬ್ಬರು ಕತ್ತಿಮಸೆಯುವುದು, ದ್ವೇಷಿಸುವುದು, ಹೊಟ್ಟೇಕಿಚ್ಚು ಪಡುವುದು ಏನೆಲ್ಲಾ ನಮ್ಮ ನಡೆಯುತ್ತಿರುತ್ತದೆ, ನಾವು ಅದನ್ನು ಗಮನಿಸಿ ನೋಡಬೇಕಷ್ಟೆ !!!!

ಯಾರದ್ದೋ ಕಿವಿಮಾತನ್ನು ಕೇಳಿಕೊಂಡು ತಮ್ಮ ಸ್ವಂತಿಕೆಯನ್ನೇ ಕಳೆದುಕೊಂಡು ಸೂತ್ರದ ಗೊಂಬೆಗಳಂತಿರುವ ಜನರು ಹಲವಾರು. ತಮ್ಮ ವೈಯುಕ್ತಿಕ ದ್ವೇಷದಿಂದ ಮತ್ತೊಬ್ಬರ ಜೀವನವನ್ನು ಕಷ್ಟಕ್ಕೀಡುಮಾಡುವವರು ಬಹಳಮಂದಿ. ನಮ್ಮ Office ನಲ್ಲೂ ಕೂಡಾ ಅಂತಹಾ ಒಬ್ಬ ವ್ಯಕ್ತಿ ನನ್ನ ಸಹೋದ್ಯೋಗಿಯು ಕೆಲಸ ಕಳೆದುಕೊಳ್ಳಲು ಮುಖ್ಯ ಕಾರಣ. ರೇಷ್ಮಾ ಕೆಲಸಕ್ಕೆ ಸೇರಿ ಇನ್ನು ಒಂದು ವರುಷವೂ ಆಗಿಲ್ಲ, ಆಗಲೇ ನಮ್ಮ Boss ಅನ್ನು ತನ್ನ ಮೋಡಿಯಲ್ಲಿ ಮರಳುಮಾಡಿ ಒಂದುರೀತಿಯಲ್ಲಿ ಪೂರ್‍ಣವಾಗಿ ತನ್ನ ಅಧಿಕಾರ ಸ್ಥಾಪನೆ ಮಾಡಲು ಹೊರಟಿರುವ ಧೀರ ಮಹಿಳಾಮಣಿ. ತನಗಾಗದವರನ್ನು ಒಂದಲ್ಲಾ ಒಂದು ಸಬೂಬು ಹೇಳಿಕೊಂಡು ಕೆಲಸದಿಂದ ತೆಗೆಯುತ್ತಾ ಬಂದಿರುವ ಈಕೆಯ ಪಾಪದ ಕೊಡ ಎಂದಿಗೆ ತುಂಬುತ್ತದೋ ಎಂದು ಮಿಕ್ಕ ಎಲ್ಲಾಮಂದಿ ಕಾಯ್ತಾ ಕುಳಿತಿದ್ದಾರೆ. ನಮ್ಮ ಈ ಅಳಲನ್ನು ನಮ್ಮ Boss ತನಕ ನಾವು ತಲುಪಿಸಲು ಆಗುತ್ತಿರಲಿಲ್ಲ. ಅಷ್ಟರಮಟ್ಟಿಗೆ ಅವಳಮೋಡಿ ನನ್ನ ಬಾಸ್ ಮೇಲೆ ಪರಿಣಾಮ ಬೀರಿದೆ. ತನಗಾಗದವರನ್ನ ಏನಾದರೂ ಮಾಡಿ ಕೆಲಸದಿಂದ ತೆಗೆಸಿ ತನ್ನ ಬಳಗವನ್ನ ಸೇರಿಸಿಕೊಳ್ಳುವುದು ಆಕೆಯ ದುರುದ್ದೇಶ. ಏಲ್ಲರನ್ನೂ ತನ್ನ ಅಧೀನದಲ್ಲಿ ಇಟ್ಟುಕೊಳ್ಳಬೇಕೆಂಬ ದುರಾಸೆ. ಕನ್ನಡಿಗರನ್ನು ಕಂಡರೆ ತಾತ್ಸಾರ, ತಮಿಳಿಗರಲ್ಲಿ ಅಪಾರ ಮಮಕಾರ. ನಾನು ಇಲ್ಲಿಗೆ ಸೇರಿದಮೇಲೆ ಸರಿ ಸುಮಾರು ೫ ಜನರನ್ನ ಕೆಲಸಬಿಡುವಂತೆ ಒತ್ತಡ ತಂದವಳು ಈಕೆ. ಏನೇ ಆದರೂ ಪ್ರತಿಯೊಬ್ಬರೂ ತನ್ನ ಮಾತನ್ನೇ ಕೇಳಬೇಕು, ತನಗಿಲ್ಲದ ಹಕ್ಕನ್ನು ಸಾಧಿಸಬೇಕೆಂಬ ಹಟ. ಆಕೆಯ ವಿರುದ್ದವಾಗಿರುವವರ ಮೇಲೆ ತನ್ನ ಕೆಂಗಣ್ಣು ಬಿಟ್ಟು ಅವರನ್ನು ಕೆಲಸದಿಂದ ತೆಗೆಸುವುದರಲ್ಲೇ ಒಂದು ರೀತಿಯ ಸಂತೃಪ್ತಿ ಅವಳಿಗೆ.

ನನ್ನ ಸಹೊದ್ಯೋಗಿಗಳಲ್ಲಿ ಕೆಲವರಿಗೆ ಅವರು ಮಾಡಿದ ಕೆಲಸಕ್ಕೆ Experience certificate ಕೂಡಾ ಸಿಗದಂತೆ ಮಾಡಿದ್ದವಳು ಈಕೆ. ಇಂದಿನ ಸರದಿ ನನ್ನ ಗೆಳೆಯ, ಸಹೋದ್ಯೋಗಿ ಹರೀಶನದು. ತನ್ನ ಹಿಂದಿನ ಕಂಪನಿಯಲ್ಲಿ ರಾತ್ರಿಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಅವನಿಗೆ ರಾತ್ರಿ ನಿದ್ರೆ ತಡವಾಗಿ ಬರುತ್ತಿದ್ದರಿಂದ ಬೆಳಗಿನ ಸಮಯದಲ್ಲಿ ಕೆಲಸಕ್ಕೆ ಬರುವುದು ತಡವಾಗುತ್ತಿತ್ತು. ಅದಕ್ಕೆ ತಕ್ಕಂತೆ ಅವನು ರಾತ್ರಿ ತಡವಾಗಿ ಹೋಗುತ್ತಿದ್ದ. ಪ್ರತಿಯೊಂದು Customer call ಅನ್ನೂ attend ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ. ಹೆಚ್ಚು ಕಡಿಮೆ ಒಂದು ವರುಷದಿಂದ ಕೆಲಸ ಮಾಡುತ್ತಿದ್ದ ಅವನಿಗೆ ನಮ್ಮ ರೇಷ್ಮಳನ್ನು ಕಂಡರೆ ಅಷ್ಟಕ್ಕಷ್ಟೇ... ಹಾಗಾಗಿ ಅವಳ ಕೆಂಗಣ್ಣಿಗೆ ಗುರಿಯಾಗಿದ್ದ. ನಾನು ಸೇರಿದ ಹೊಸದರಲ್ಲಿ ಇಲ್ಲಿನ ಉದ್ಯೋಗಿಗಳ ಸಂಖ್ಯೆ ೨೦ ಇದ್ದದ್ದು ಇಂದು ೯ಕ್ಕೆ ಬಂದಿಳಿದಿದೆ. ಪ್ರತೀ meeting ನಲ್ಲೂ ನಾವು ಅಷ್ಟುಜನರನ್ನ Interview ಮಾಡಿದ್ದೇವೆ, ಇಷ್ಟು ಜನ ಕೆಲಸಕ್ಕೆ ಸೇರಬೇಕಿದೆ ಎಂದೆಲ್ಲಾ ಭರವಸೆಯನ್ನ ಕೊಡುತ್ತಾ ಬಂದರೂ ಇಲ್ಲಿಯತನಕ ನಾನು ಯಾವುದೂ ಕಾರ್ಯರೂಪಕ್ಕೆ ಬಂದಿರುವುದನ್ನು ಕಂಡಿಲ್ಲ. ಇನ್ನೂ ಇಲ್ಲಿ ಇರುವ ಉದ್ಯೋಗಿಗಳೇ ಇಲ್ಲಿನ ವಾತಾವರಣ ಸರಿಯಿಲ್ಲ ಎಂದು ಕೆಲಸ ತೊರೆದಿರುವುದನ್ನ ಕಂಡಿದ್ದೇನೆ. ನಿಮಿಷಕ್ಕೊಂದು ನಿರ್ಧಾರವನ್ನ ತೆಗೆದುಕೊಳ್ಳುವ ನನ್ನ reporting officer, so called sales head ಗೆ ಕೆಲಸ ಮಾಡಿದರೂ ತಪ್ಪು ಕೆಲಸ ಮಾಡದಿದ್ದರೂ ತಪ್ಪು. ದೃಢ ನಿರ್ಧಾರವನ್ನ ತೆಗೆದುಕೊಳ್ಳದವರನ್ನು ನೇಮಕಾತಿ ಮಾಡಿಕೊಂಡಿರುವ ನಮ್ಮ Boss, ಅವಳ ಮಾತನ್ನು ಕೇಳಿಕೊಂಡು ನಮ್ಮ ಕಾರ್ಯಾಲಯದ ವಾಸ್ತುವನ್ನ ಬದಲಿಸ ಹೊರಟಿದ್ದಾರೆ !!!! ಮುಗ್ದ ಮನಸಿನ ನನ್ನ Boss ಅನ್ನು ಯಾವ ಯಾವ ರೀತಿಯಲ್ಲಿ ವಶಪಡಿಸಿಕೊಳ್ಳಬಹುದು ಏಂಬುದನ್ನ ಚೆನ್ನಾಗಿ ಅರಿತಿರುವ ಈಕೆ ಎಲ್ಲರೆದುರು ತಾನೊಬ್ಬಳೇ ಕೆಲಸಮಾಡುತ್ತಿರುವುದಾಗಿ ತೋರ್ಪಡಿಸುತ್ತಾಳೆ. ನಾನಿಲ್ಲಿ ಬರೆದಿರುವುದು ಅವಳ ಗುಣವನ್ನ ಎಲ್ಲರಿಗೂ ಪ್ರಚಾರ ಪಡಿಸುವ ಉದ್ದೇಶದಿಂದಲ್ಲ, ನನ್ನ ಕಾರ್ಯಾಲಯದಂತೆಯೇ ಬೇರೆ ಕಾರ್ಯಾಲಯದಲ್ಲೂ ಕೂಡಾ ರೇಷ್ಮಾಳಂತ ವ್ಯಕ್ತಿಗಳು ಹೇರಳವಾಗಿ ಇದ್ದೇ ಇರುತ್ತಾರೆ. ನಾವು ನಮ್ಮ ಎಚ್ಚರಿಕೆಯಲ್ಲಿ ಇರಬೇಕಷ್ಟೇ !!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಮ್ಮ ನಡುವೆ ಇಂತವರು ಬಹಳ ಮಂದಿ ಇರುತ್ತಾರೆ ಎನ್ನುವುದಕ್ಕೆ ಇದು ಒಂದು ನಿದರ್ಶನ... ನಿಮ್ಮ ಅಫೀಸ್ ನ ಕಥೆ ಕೇಳಿ ಬೇಜಾರಾಯಿತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಚ್ಚು, ನಮ್ಮ ಕಂಪನಿ ಪರಿಸ್ಥಿತಿನೂ ಇದಕ್ಕಿಂತ ಏನೂ ಭಿನ್ನ ಇಲ್ಲಪ್ಪಾ. ನಾನು ಕೆಲಸ ಮಾಡೋದು ಒಂದು ಸ್ಟಾಕ್ ಬ್ರೋಕಿಂಗ್ ಕಂಪನೀಲಿ.
ಬೆಂಗಳೂರಲ್ಲಿ ಈದಾರು ಶಾಖೆಗಳಿವೆ. ಎಲ್ಲ ಶಾಖೆಗೂ ಒಬ್ಬೊಬ್ಬ ಐ.ಟಿ ಎಂಜಿನಿಯರ್‍. ಅದರಲ್ಲಿ ಎಲ್ಲರೂ ತಮಿಳರು ನಾನೋಬ್ಬ ಮಾತ್ರ ಕನ್ನಡಿಗ. ನನ್ನ ಶಾಖೆಯ ಕೆಲಸ ನಾನು ಸರಿಯಾಗಿ ಮಾಡಿದರೂ ಸುಮ್ಮಸುಮ್ನೆ ಆ ರಿಪೋರ್ಟ ಕಳಿಸು ಇದನ್ನ ಕಳಿಸು ಅದನ್ನ ಕಳಿಸು ಅಂತ ಕಾಡ್ತಾಇರ್ತಾರೆ. ಗೆಟ್ ಟುಗೆದರ್‍ ಮೀಟ್ ಅಲ್ಲಿ ನನ್ನ ರಿಪೋರ್ಟಿಂಗ ಮ್ಯಾನೆಜರ್‍ ಏನು ಹೇಳ್ತಾರೆ ಗೊತ್ತಾ, ಗಿರೀಶ for ur sake i'll put one tamil guy who knows kannada...ನನಗಂತು ಮೈಯಲ್ಲಾ ಉರಿದು ಹೋಯ್ತು. ಕರವೇ ಗೆ ದೂರು ಕೊಡೋಣಾಂತಿದ್ದೀನಿ.

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೊದ್ಲು ಆ ಕೆಲಸ ಮಾಡಿ.., ಸುಮ್ನೆ ಅಂತೂ ಕೂರಬೇಡಿ.....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲರೂ "office space" ಅಂತ ಒಂದು ಸಿನಿಮಾ ಇದೆ ನೋಡಿ.

ನಿಮ್ಮವನೇ,
ಅರವಿಂದ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೋ , ಮ್ಮ್ಮ್ಮ್..... ಅರವಿಂದಾ ... ವಾಟ್ಶ್ಯಾಪೆನಿಂಗ್? ಇಫ್ ಯು ಕ್ಯಾನ್ ಸಬ್ಮಿಟ್ ದೋಸ್ TPS reports ಎ.ಎಸ್.ಎ.ಪೀ, ದಟ್'ಡ್ ಬಿ ರಿಯಲಿ ಗ್ರೇಟ್ ! :P

ಸಿಕ್ಕಾಬಟ್ಟೆ ಮಜಾ ಫಿಲಮ್ಮು office space. ನಂಗಂತೂ ತುಂಬಾ ಹತ್ರಕ್ಕೆ relate ಆಗತ್ತೆ!

--_ರಾಘವ_
http://raghavan.vinay.googlepages.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಥವನ್ನು ನೋಡಿ ನೋಡಿ ಬೇಸತ್ತು ಹೋಗಿದೆ. ಇಂಥವ್ರನ್ನೆಲ್ಲಾ ಸುನಾಮಿ ಎತ್ಕೊಂಡು ಹೋದ್ರೆ
ಜಗತ್ತು ಎಷ್ಟೋ ಪಟ್ಟು ಚೆನ್ನಾಗಿರ್ತಿತ್ತು ಅನ್ಸತ್ತೆ.ನನ್ನಣ್ಣ ಹಾಗು ಸ್ನೇಹಿತರಿಗೆ ಇಂಥ ಅನುಭವ ಬಹಳ.
ನಂಗೂ ಇಂಥ ಅನುಭವ ಆದ್ರೆ ಅವರ ಬಣ್ಣವನ್ನು ಬಯಲಿಗೆಳೆಯದೇ ಬಿಡುವುದಿಲ್ಲ.ಒಂದ್ಗತಿ ಕಾಣ್ಸೇ ಕಾಣಿಸ್ತೀನಿ..
ಒಳ್ಳೆ ಪ್ರಯತ್ನ ಪಚ್ಚು.ನಿಂಜೊತೆ ನಾವಿದ್ದೀವಿ :)

-ಸುಶೀಲ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು, ಆದರೆ ಆಕೆಯ ಈ ಹುಚ್ಚಾಟಕ್ಕೆ ಕಡಿವಾಣ ಹಾಕೊದು ಹೇಗೆ ??? ಇಲ್ಲಿ ಎಷ್ಟರ ಮಟ್ಟಿಗೆ ತಮಿಳುಮಯ ಮಾಡಿದ್ದಾಳೆ ಅಂದರೆ, ಕಸ ಗುಡಿಸುವಾಕೆ ಕೂಡಾ ತಮಿಳಿಗಳು...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.