ಟೆಕ್ ಸುದ್ದಿ - ವರ್ಚುಅಲ್ ಬಾಕ್ಸ್ ನಲ್ಲೀಗ ಆಟ ಆಡಿ, ಮಜಾ ಮಾಡಿ

0

  ವರ್ಚುಅಲ್ ಬಾಕ್ಸ್ - ಈಗಾಗಲೆ ಕಂಪ್ಯೂಟರಿನಲ್ಲಿ ನಡೀತಿರೋ ಆಪರೇಟಿಂಗ್ ಸಿಸ್ಟಂನ ಮೇಲೆ ಮತ್ತೊಂದು ಆಪರೇಟಿಂಗ್ ಸಿಸ್ಟಂ ಅನ್ನು, ಬೇರೆಯದೇ ಕಂಪ್ಯೂಟರ್ನಲ್ಲಿ ನೆಡೆಸಿ ಅದನ್ನು ನಮ್ಮ ಕಂಪ್ಯೂಟರ್ ತೆರೆಯ ಮೇಲೆಯೇ ಮೂಡುವಂತೆ ಮಾಡಬಲ್ಲ ತಂತ್ರಾಂಶ.

ವಿಂಡೋಸ್ ಬಳಸಿ ಅಭ್ಯಾಸವಿರುವವರಿಗೆ, ಗ್ನು/ಲಿನಕ್ಸ್ ಬಳಸಿ ನೋಡಿ ಅಂತಂದ್ರೆ ಸ್ವಲ್ಪ ಹಿಂದು ಮುಂದು ನೋಡ್ತಾರೆ.. ಅದಕ್ಕೇ, ನೀವೇನೂ ಅದನ್ನು ವಿಂಡೋಸ್ ಕಿತ್ತು ಹಾಕಿ ಬಳಸ ಬೇಕಿಲ್ಲಾ, ಈಗಿರುವ ವಿಂಡೋಸ್ ಮೇಲೆಯೇ ವರ್ಚುಅಲ್ ಬಾಕ್ಸ್ ಇನ್ಸ್ಟಾಲ್ ಮಾಡಿಕೊಳ್ಳಿ.. ಅದರ ಒಳಗೆ ಲಿನಕ್ಸ್ ಇನ್ಸ್ಟಾಲ್ ಮಾಡಿಕೊಳ್ಳಬಹುದು ಅಂತ ಹೇಳಿ ಅನೇಕ ಜನರಿಗೆ ಇದರ ಪರಿಚಯವನ್ನೂ ಮಾಡಿಸಿದ್ದಿದ್ದೆ. ಹಾಗೆಯೇ, ವಿಂಡೋಸ್ ಬಳಸಲಿಕ್ಕೆ ಮನಸ್ಸಿಲ್ಲದಿದ್ದರೂ, ಹೊಸದಾಗಿ ಬಂದ ವಿಂಡೋಸ್ -೭ ರಲ್ಲಿ ಏನಿದೆ ನೋಡಿಯೇ ಬಿಡೋಣ ಎಂದೆನಿಸಿದಾಗ, ಗ್ನು/ಲಿನಕ್ಸ್ ನಲ್ಲಿ ಕೆಲಸ ಮಾಡುತ್ತಿರುವ ಲ್ಯಾಪ್ಟಾಪ್ ನಲ್ಲಿ ವರ್ಚುಅಲ್ ಬಾಕ್ಸ್ ಇನ್ಸ್ಟಾಲ್ ಮಾಡಿಕೊಂಡು ಅದರಲ್ಲೇ ವಿಂಡೋಸ್ ೭ ನ ವರ್ಚುಅಲ್ ಪಿ.ಸಿ ಇನ್ಸ್ಟಾಲ್ ಮಾಡಿನೋಡಿದ್ದೂ ಆಯ್ತು.

- ಅಂದ್ರೆ ಹೊಸ ಸಿಸ್ಟಂ ಕೊಳ್ಳದೆ, ಇರುವ ಹಾರ್ಡ್ವೇರ್ ಅನ್ನೇ ಉಪಯೋಗಿಸಿ ಒಮ್ಮೆಲೆ ಒಂದಕ್ಕಿಂತ ಹೆಚ್ಚು ಆಪರೇಟಿಂಗ್ ಸಿಸ್ಟಂಗಳನ್ನು ಕಂಪ್ಯೂಟರಿನಲ್ಲಿ ಬಳಸಲಿಕ್ಕೆ ಅವಕಾಶ ದೊರೆಯಿತು ಅನ್ನಬಹುದು. 

 ಇಷ್ಟೇನಾ ಅಂದ್ರಾ? ಇನ್ನೂ ಬೇಕಷ್ಟಿದೆ ಮಾರಾಯ್ರೆ...

- ನಿಮ್ಮ ಕಂಪ್ಯೂಟರಿನಲ್ಲಿರುವ ಇಂಟರ್ನೆಟ್ ಅನ್ನೇ ನಿಮ್ಮ ವರ್ಚುಅಲ್ ಬಾಕ್ಸ್ ನಲ್ಲಿರೋ ಆಪರೇಟಿಂಗ್ ಸಿಸ್ಟಂ/ವರ್ಚುಅಲ್ ಪಿ.ಸಿ ಬಳಸಿಕೊಳ್ಳುತ್ತದೆ. ಅಲ್ಲಿಂದಲೂ ನೀವು ಚಾಟ್ ಇತ್ಯಾದಿ ಮಾಡಿಕೊಳ್ಳಬಹುದು. ನನ್ನ ಡಯಲಪ್ ಕೂಡ ಇದೇ ರೀತಿ ಕೆಲಸ ಮಾಡುತ್ತೆ ಗೊತ್ತಾ?

- ಲಿನಕ್ಸಾಯಣದ ಎಷ್ಟೋ ಲೇಖನಗಳ ಚಿತ್ರಪಟಗಳನ್ನು ಅಷ್ಟು ಚೆನ್ನಾಗಿ ಮೌಸ್ ಪಾಯಿಂಟರ್ ನ ಜೊತೆ ತಗೀಲಿಕ್ಕಾದದ್ದೂ ಇದರಿಂದಲೇ..

- ನಿಮ್ಮ ಸೌಂಡ್ ಕಾರ್ಡ್ ಕೂಡ ವರ್ಚುಅಲ್ ಪಿ.ಸಿ ನಲ್ಲಿ ಕೆಲಸ ಮಾಡಿಸಬಹುದು..

- ಯು.ಎಸ್.ಬಿ ಡ್ರೈವ್ ಅಂದ್ರಾ? ಅದನ್ನೂ ಸೇರಿಸಿಕೊಳ್ಳಿ..

- ಆಪರೇಟಿಂಗ್ ಸಿಸ್ಟಂ ಇನ್ಸ್ಟಾಲ್  ಮಾಡ್ಲಿಕ್ಕೆ ಬೇಜಾರಾ? ಲೈವ್ ಸಿ.ಡಿ ರನ್ ಮಾಡಿ ಬಿಡಿ.. ಅದೂ ಕೂಡ ನೀರು ಕುಡಿದಷ್ಟೇ ಸುಲಭ

-ಸಿ.ಡಿ ಯಿಂದ ನಿಧಾನವಾಗಿ ಲೈವ್ ಸಿ.ಡಿ ಕೆಲಸ ಮಾಡುತ್ತೆ ಅಂದ್ರಾ? ಸಿ.ಡಿಯನ್ನೂ ನಿಮ್ಮ ಕಂಪ್ಯೂಟರ್ಗೆ ಕಾಪಿ ಮಾಡಿಕೊಂಡು ಅದರ ಐ.ಎಸ್.ಓ ಇಮೆಜಿನಿಂದಲೇ ನಿಮ್ಮ ವರ್ಚುಅಲ್ ಪಿ.ಸಿ ಕೆಲಸ ಮಾಡುವಂತೆ ಮಾಡಬಹುದು... ಸಕತ್ ಫಾಸ್ಟ್ ಆಗಿ ಕೆಲಸ ಮಾಡುತ್ತೆ

- ನೆಟ್ವರ್ಕ್, ಸೆಕ್ಯೂರಿಟಿ ತಂತ್ರಾಂಶಗಳ ಮೇಲೆ ಅಭ್ಯಾಸ ಮಾಡುವವರಿಗೂ ಇದು ಒಂದು ವರದಾನ.. ಸಧ್ಯಕ್ಕೆ ಬ್ಯಾಕ್ಟ್ರಾಕ್ ಮೇಲೆ ಕೆಲಸ ಮಾಡಲು ನಾನು ವರ್ಚುಅಲ್ ಬಾಕ್ಸ್ ಬಳಸುತ್ತಿದ್ದೀನಿ...

ಮತ್ತೆ ಆಟದ ಬಗ್ಗೆ?

 ಹೌದು.. ನಾನು ಹೇಳ್ಬೇಕು ಅಂದದ್ದೂ ಅದರ ಬಗ್ಗೆನೆ. 

 ಕಂಪ್ಯೂಟರ್ ಗೇಮ್ಸ್ ಆಡುವವರಿಗೆ ವಿಂಡೋಸ್ ನ ಅನೇಕ ಗೇಮ್ ಗಳು ಇರಲೇ ಬೇಕು.. ಅದಕ್ಕೆ ಗ್ರಾಫಿಕ್ಸ್ ಕಾರ್ಡ್ ಕೆಲಸ ಮಾಡ್ಲೇ ಬೇಕು. ಇದೆಲ್ಲಾ ವರ್ಚುಅಲ್ ಬಾಕ್ಸ್ ಒಳಗೆ ಇನ್ಸ್ಟಾಲ್ ಮಾಡಿದ ವಿಂಡೋಸನಲ್ಲಿ ಆಗುತ್ತಾ? ಯಾಕಿಲ್ಲ

 ವರ್ಚುಅಲ್ ಬಾಕ್ಸ್ ನ ಡೆವೆಲಪರ್ಸ್ ತಂಡ ಇದರ ಮೇಲೆ ಈಗಾಗಲೇ ಬಹಳಷ್ಟು ಕೆಲಸ ಮಾಡಿದೆ. ಇತ್ತೀಚೆಗೆ ಬಿಡುಗಡೆಯಾದ ವರ್ಚುಅಲ್ ಬಾಕ್ಸ್ ೩ ರ ಬೀಟಾ (ಇನ್ನೂ ಅಭಿವೃದ್ದಿ ಹಂತದಲ್ಲಿರುವ ತಂತ್ರಾಂಶದ ಆವೃತ್ತಿ)  ಆವೃತ್ತಿಯಲ್ಲಿ ವಿಂಡೋಸ್ ನ DirectX ೮ ಮತ್ತು ೯ ಡೈರೆಕ್ಟ್ ೩ಡ್ ಗ್ರಾಫಿಕ್ಸ್ ತಂತ್ರಜ್ಞಾನ ಕೆಲಸ ಮಾಡುವಂತೆ ಮಾಡಲಾಗಿದೆ. ಇದರ ಬಗೆಗಿನ ಹೆಚ್ಚಿನ ಮಾಹಿತಿ ಈ ಕೊಂಡಿಯಲ್ಲಿದೆ.

ಮತ್ತೇಕೆ ಯೋಚಿಸ್ತಿದ್ದೀರಿ.. ಎದ್ದು ಒಂದೆರಡು ಗೇಮ್ ಆಡ್ರಲ್ಲ ಮತ್ತೆ... 

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಒಳ್ಳೆ ಸುದ್ದಿ :)
>>ಇತ್ತೀಚೆಗೆ ಬಿಡುಗಡೆಯಾದ ವರ್ಚುಅಲ್ ಬಾಕ್ಸ್ ೩ ರ ಬೀಟಾ
ಸ್ಟೇಬಲ್ ವರ್ಷನ್ ಯಾವಾಗ ಬರಬಹುದು ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿ ಎಂ ವೇರ್ ಸರ್ವರ್ ಕೂಡ ಫ್ರೀ ಅಲ್ವ ? ಅದನ್ನ ಯಾಕೆ ಉಪಯೋಗಿಸಬಾರದು ? ನಾನು ವಿಂಡೋಸ್ ಮೇಲೆ ಉಬಂಟುನ ಮೊದಲು ಹಾಗೆ ಟ್ರೈ ಮಾಡಿದ್ದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡೆಕ್ಸ್ಟಾಪ್ ಕಂಪ್ಯೂಟರ್ಗಳಿಗೆ ವಿ.ಎಂ ವೇರ್ ಗಿಂತ ವರ್ಚುಅಲ್ ಬಾಕ್ಸ್ ಸೂಕ್ತ.. ಯಾಕೆಂದರೆ, ಇದು ಕೇವಲ ೩೫ - ೪೦ ಎಂ.ಬಿ ಇದ್ದು, ಡೌನ್ಲೋಡ್ ಮಾಡಿಕೊಳ್ಳಲಿಕ್ಕೆ ಸುಲಭ. ವಿ.ಎಂ ವೇರ್ ಹೆಚ್ಚು ರಿಸೋರ್ಸ್ ತಿನ್ನುತ್ತೆ. ಎರಡನ್ನೂ ಉಪಯೋಗಿಸಿ ನೋಡಿದ್ರೆ ನಿಮಗೆ ಇದರ ಬಗ್ಗೆ ಅರಿವಾಗುತ್ತದೆ.

ಇದೆಲ್ಲಕ್ಕಿಂತ ನನಗೆ ವರ್ಚುಅಲ್ ಬಾಕ್ಸ್ ಬಗ್ಗೆ ಇನ್ನೂ ಹೆಚ್ಚಿಗೆ ಮೆಚ್ಚುಗೆಯಾದ ಅಂಶ ಅಂದ್ರೆ ಅದು ಸ್ವತಂತ್ರ ತಂತ್ರಾಂಶವಾಗಿರೋದು.. GPL ಲೈಸೆನ್ಸ್ ನೊಂದಿಗೆ ಈ ತಂತ್ರಾಂಶ ಎಲ್ಲರಿಗೆ ಸಿಗುತ್ತೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ತ೦ತ್ರಾ೦ಶದ ಇನ್ನೊ೦ದು ವಿಶೇಷತೆ ಎ೦ದರೆ, ಇದು VMware wokstatation ನ VM ಗಳನ್ನೂ ಕೂಡ ಸರಾಗವಾಗಿ ರನ್ ಮಾಡುತ್ತದೆ. ಕಳೆದ ವಾರ ನನ್ನ VMware workstation ನ evaluation ಲೈಸನ್ಸ್ ಮುಗಿದು ಕೈ ಕೈ ಹಿಸುಕಿಕೊಳ್ಳುವ ಸ೦ದರ್ಭದಲ್ಲಿ ನನ್ನ ಕೈ ಹಿಡಿದಿದ್ದು ಇದೇ ತ೦ತ್ರಾ೦ಶ. ಇದನ್ನು ಬಳಸಿ VMware workstation ನಲ್ಲಿ ಸೃಷ್ಟಿಸಿದ RHEL, Centos ಮತ್ತು Ubuntu VMಗಳಿಗೆ ಮರುಜೀವ ಕೊಡಲು ಸಾಧ್ಯವಾಯಿತು.

-amg

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೆ ವರ್ಚುವಲ್ ಬಾಕ್ಸ್ ನಿಂದ ಅಂತರ್ಜಾಲಕ್ಕೆ ಕನೆಕ್ಟ್ ಮಾಡಲು ಸಾದ್ಯವಾಗುತ್ತಿಲ್ಲ. ಹೇಗೆ ಕನೆಕ್ಟ್ ಮಾಡುವುದು ಎನ್ನುವುದರ ಬಗ್ಗೆ ಇನಷ್ಟು ಮಾಹಿತಿ ನೀಡಿ. ನಾನು ವಿ.ಎಂ ವೇರ್ ಬಳಸುತ್ತಿದ್ದೇನೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ವರ್ಚುಅಲ್ ಸರ್ವ‌ರ್‌ನ ನೆಟ್ವರ್ಕ್ ಅನ್ನು "Bridged" ನೆಟ್ವರ್ಕ್ ಮಾಡಿಕೊಳ್ಳಿ ನಂತರ ರಿಸ್ಟಾರ್ಟ್ ಮಾಡಿ. ಇದು ಸುಲಭ ಉಪಾಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.