ಲಿನಕ್ಸಾಯಣ: UEFI – ನಿಮ್ಮ ಪಿ.ಸಿ ಬೇಗ ಶುರುವಾಗುವಂತೆ ಮಾಡಬಲ್ಲದು..

5

೨೫ ವರ್ಷಗಳಿಂದ ಪ್ರತಿಯೊಂದು ಕಂಪ್ಯೂಟರ್ ಮತ್ತು ಅದರಲ್ಲಿನ ಆಪರೇಟಿಂಗ್ ಸಿಸ್ಟಂ ಶುರುವಾಗಲಿಕ್ಕೆ ಕಾರಣವಾಗಿರುವ ಸಣ್ಣದೊಂದು ತಂತ್ರಾಂಶ ಬಯೋಸ್ (BIOS – Basic Input Output System) ಇಷ್ಟು ದಿನ ಇದ್ದದ್ದೇ ಒಂದು ಅಚ್ಚರಿ. ಈ ತಂತ್ರಾಂಶದ ಆಯುಷ್ಯ ಇಷ್ಟು ದೊಡ್ಡದಿರಬಹುದೆಂದು ಯಾರೂ ಊಹಿಸಿರಲೂ ಇಲ್ಲ, ಜೊತೆಗೆ ಇಂದು ನಿಮ್ಮ ಹೊಸ ಕಂಪ್ಯೂಟರ್ ಬೂಟ್ ಆಗಲಿಕ್ಕೆ ಸ್ವಲ್ಪ ಸಮಯ ತೆಗೆದು ಕೊಳ್ಳುತ್ತಿದೆ ಎಂದರೆ.. ಅದಕ್ಕೆ ಈ ಬಯೋಸ್ ಕಾರಣ. ೨ ಜಿ.ಬಿ ರಾಂ ಇದ್ದರೂ ಸ್ವಲ್ಪ ಹೊತ್ತು ತೆಗೆದುಕೊಳ್ಳುತ್ತಿದೆಯಲ್ಲ ಹಳೆಯ ಸಿಸ್ಟಂನಂತೆಯೇ ಎಂದು ನಿಮಗೂ ಅನಿಸಿರಬೇಕಲ್ಲವೆ?

 


ಬಯೋಸ್ : ಚಿತ್ರ : ಬಿ.ಬಿ.ಸಿ

 

ಕಂಪ್ಯೂಟರ್ ಶುರುವಾಗೋದು ಇನ್ನೂ ಕಡಿಮೆ ಸಮಯದಲ್ಲಿ ಆಗಬೇಕು, ಮುಟ್ಟಿದ ತಕ್ಷಣ ಅದು ತನ್ನ ಪರದೆಯ ಮೇಲೆ ನಮಗೆ ಬೇಕಿರುವ ತಂತ್ರಾಂಶ ಕೆಲಸ ಮಾಡುವುದಕ್ಕೆ ಶುರು ಮಾಡಬೇಕು ಎನ್ನುವುದು ಎಲ್ಲರ ಅಪೇಕ್ಷೆ. ಇದನ್ನು ನಿಜ ಮಾಡಲಿಕ್ಕೆ ೨೦೧೧ ರಲ್ಲಿ ಬರಲಿದೆ UEFI ಎಂಬ ಹೊಸ ತಂತ್ರಾಂಶ. ಬಯೋಸ್ ಗೆ ಆಗ ವಿದಾಯ. Unified Extensible Firmware Interface ಎಂಬ ಸಂಕ್ಷಿಪ್ತ ನಾಮದ ಈ ತಂತ್ರಾಂಶ ಬಯೋಸ್ ಗಿಂತ ಬಹಳ ಸದೃಡವಾಗಿಯೂ, ಹೆಚ್ಚು ಉಪಯೋಗಕಾರಿಯೂ ಆಗಿರುವುದಂತೂ ನಿಜ.

 

ನಿಮಗೆ ಗೊತ್ತೆ? :-

 

  • * ಬಯೋಸ್ ಬಳಕೆಗೆ ಬಂದದ್ದು ೧೯೭೯ ರಲ್ಲಿ.

* ಬಯೋಸ್ ಬಳಕೆ ೨೫೦, ೦೦೦ ಕಂಪ್ಯೂಟರ್ ಗಳಲ್ಲಿ ಬಳಸಬಹುದು ಎಂಬ ಅಂದಾಜಿತ್ತು
* ಇಂದು ಅದನ್ನು ಬಳಸಿಕೊಂಡು ಉಸಿರಾಡುತ್ತಿರುವ ಕಂಪ್ಯೂಟರ್ ಗಳ ಲೆಕ್ಕ ತಪ್ಪಬಹುದು.
* ೬೪ – bit ಕಂಪ್ಯೂಟರ್ ಗಳು ಬಳಕೆಗೆ ಬರುತ್ತಿರುವ ಈ ಸಮಯದಲ್ಲಿ ಬಯೋಸ್ ನ ಅಭಿವೃದ್ದಿ ಕುಂಠಿತವಾಗಿದೆ ಎನ್ನುತ್ತಾರೆ ಬಯೋಸ್ ಉತ್ಪಾದಿಸುವ ಕಂಪೆನಿ AMI ನ ವಕ್ತಾರರು.
* ಕಂಪ್ಯೂಟರ್ ಗಳು ಬರೀ ಡೆಸ್ಕ್ ಟಾಪ್ , ಲ್ಯಾಪ್ ಟಾಪ್, ಸರ್ವರ್ ಗಳನ್ನು ಬಿಟ್ಟು ಪಾಮ್ ಟಾಪ್, ಟ್ಯಾಬ್ಲೆಟ್ ಇತ್ಯಾದಿಗಳ ರೂಪದಲ್ಲಿ ಬರುತ್ತಿರುವುದೂ ಕೂಡ ಬಯೋಸ್ ನ ಅಭಿವೃದ್ದಿಗೆ ಹೊಸ ಪ್ರಶ್ನೆಗಳನ್ನು ಒಡ್ಡುತ್ತಿದೆ.
* ನಿಮ್ಮ ಹಾರ್ಡ್ ಡಿಸ್ಕ್ ನಲ್ಲಿ ೨ ಟೆರಾ ಬೈಟ್ ಗಿಂತ ಹೆಚ್ಚಿನ ಡೆಟಾ ಇಡಬೇಕೆ? ನಿಮಗೆ ಬಯೋಸ್ ಸಹಕರಿಸದಿರಬಹುದು.
* ಬಯೋಸ್ ನಿಂದ ಕಾರ್ಯ ಪ್ರವೃತ್ತರಾಗುತ್ತಿದ್ದ ಮೌಸ್ , ಕೀ-ಬೋರ್ಡ್ ಗಳು AT ಅಥವಾ PS/2 ಬಿಟ್ಟು USB ಬಳಸಲಿಕ್ಕೆ ಶುರು ಮಾಡಿವೆ. ಬಯೋಸ್ ನಿನಗೆ ಇನ್ನು ಕೆಲಸ ಏನಿದೆ?
* ತಮ್ಬ್ ಡ್ರೈವ್ ಬಳಸ ಬೇಕಿದ್ರೆ ಬಯೋಸ್ ತೊಂದರೆ ಕೊಡ್ತಿರ್ಬೇಕಲ್ವಾ?

ಇದೆಲ್ಲದಕ್ಕೆ ಉತ್ತರ UEFI. ಇದನ್ನು ಮೊದಲು ಇಂಟೆಲ್ ಮದರ್ ಬೋರ್ಡ್ ಗಳಿಗೆ ತಯಾರಿಸಿದ್ದು (EFI) ನಂತರ ಉದ್ಯಮದಲ್ಲಿನ ಇತರ ತಯಾರಕರಿಗೂ ಮೆಚ್ಚಿಗೆಯಾಯಿತು . ೨೫-೩೦ ಸೆಕೆಂಡುಗಳಲ್ಲಿ ಬೂಟ್ ಆಗುತ್ತಿರುವ ನಿಮ್ಮ ಕಂಪ್ಯೂಟರ್ ಮುಂದೆ ಕೆಲವೇ ಕೆಲವು ಸೆಕೆಂಡುಗಳಲ್ಲಿ ಬೂಟ್ ಆದರೆ ಆಶ್ಚರ್ಯವಿಲ್ಲ. ಓ, ಈಗಾಗಲೇ UEFI ಇರುವ ಅನೇಕ ಲ್ಯಾಪ್ ಟಾಪ್, ಎಂಬೆಡೆಡ್ ಸಿಸ್ಟಂ ಗಳಲ್ಲಿ ಇರಬಹುದು.. ಸ್ವಲ್ಪ ಹುಡುಕಿ ನೋಡಿ.  ಜೊತೆಗೆ UEFI ಗೆ ಕೂಡ ಬದಲಿ ವ್ಯವಸ್ಥೆ ಇದೆ – ಹೆಚ್ಚಿನ ಮಾಹಿತಿಗೆ Open Firmware ಬಗ್ಗೆ ಇಂಟರ್ನೆಟ್ ನಲ್ಲಿ ಓದಿ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಉತ್ತಮ ಲೇಖನ. UEFI ನ ಮೇಲೊಂದಿಷ್ಟು ಬೆಳಕು ಚೆಲ್ಲಿದ್ದಕ್ಕೆ ಧನ್ಯವಾದಗಳು ನಿಮ್ಮವ ನಾಗರಾಜ ಸಾಠೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲೇಖನ ಚೆನ್ನಾಗಿದೆ ಓ೦. UEFI ಜೊತೆ ಕೊ೦ಚ ಆಟವಾಡಲು ಯತ್ನಿಸುವೆ ನನ್ನ FPGA ಬೋರ್ಡನ ಮೇಲೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.