ಲಿನಕ್ಸಾಯಣ - ಉಬುಂಟು ಅಪ್ದೇಟ್ ಮಾಡೋದ್ ಹ್ಯಾಗೆ? ೯.೧೦ ಗೆ

0

ಈಗ ಕಾರ್ಮಿಕ್ ಕೊಅಲಾ ಅಂದ್ರೆ ಉಬುಂಟು ೯.೧೦ ಆವೃತ್ತಿಗೆ ನಿಮ್ಮ ಉಬುಂಟು ಹೇಗೆ ಅಪ್ಡೇಟ್ ಮಾಡಿಕೊಳ್ಳೋದು ಅಂತ ತಿಳಿದುಕೊಳ್ಳೋಣ.

ಅಪ್ಡೇಟ್ ಮಾಡುವುದಕ್ಕಿಂತ ಮುಂಚೆ

 • ನೀವು ಉಬುಂಟು ೯.೦೪ ಅನ್ನು ನೇರವಾಗಿ ೯.೧೦ ಆವೃತ್ತಿಗೆ ಅಪ್ಗ್ರೇಡ್ ಮಾಡಬಹುದು.
 • ಅಪ್ಗ್ರೇಡ್ ಮಾಡುವುದಕ್ಕಿಂತ ಮುಂಚೆ ೯.೦೪ ಗೆ ಸಂಭಂದಿಸಿದ ಎಲ್ಲ ಅಪ್ಡೇಟ್ ಗಳನ್ನು ನಿಮ್ಮ ಕಂಪ್ಯೂಟರ್ ಹೊಂದಿದೆ ಎನ್ನುವುದನ್ನು ನೋಡಿಕೊಳ್ಳಬೇಕು.
 • ಹಾಗೆಯೇ, ಉಬುಂಟು ೯.೧೦ ಯ [ರಿಲೀಸ್ ನೋಟ್ಸ್] ಅಂದ್ರೆ ೯.೧೦ ದ ಟಿಪ್ಪಣಿ ಓದಿಕೊಳ್ಳುವುದು ಮುಖ್ಯ. ಈ ಟಿಪ್ಪಣಿ, ೯.೧೦ ನಲ್ಲಿರ ಬಹುದಾಗ ಸಾಮಾನ್ಯವಾಗಿ ಕಂಡು ಬಂದಿರುವ ತೊಂದರೆಗಳು ಮತ್ತು ಅದನ್ನು ಹೇಗೆ ಸರಿಪಡಿಸಬಹುದು ಎಂಬುದರ ಬಗ್ಗೆ ಮಾಹಿತಿ ಹೊಂದಿರುತ್ತದೆ.

೯.೦೪ ಗಿಂತ ಹಳೆಯ ಆವೃತ್ತಿ ಹೊಂದಿದ್ದರೆ, [ಅಪ್ಗ್ರೇಡ್ ನೋಟ್ಸ್ ]ಓದಿ, ಅಂತಹ ಆವೃತ್ತಿಗಳನ್ನು ಅಪ್ಡೇಟ್ ಮಾಡುವುದು ಹೇಗೆ ಎಂದು ತಿಳಿಯಿರಿ.

  ಉಬುಂಟು ಡೆಸ್ಕ್ ಟಾಪ್ ಗಳನ್ನು ನೆಟ್ವರ್ಕ್ ಮೂಲಕ ಅಪ್ಗ್ರೇಡ್ ಮಾಡುವುದು (ಶಿಫಾರಸ್ಸು ಮಾಡಲಾದ ಮಾರ್ಗ)

ನೆಟ್ವರ್ಕ್ ಮೂಲಕ ಉಬುಂಟು ಅಪ್ಗ್ರೇಡ್ ಮಾಡುವುದನ್ನು ಈ ಹಂತಗಳಿಂದ ತಿಳಿಯುತ್ತೀರಿ.

 • System/Administration/Update Manager ಶುರು ಮಾಡಿ.
 • Check ಬಟನ್ ಪ್ರೆಸ್ ಮಾಡಿ ಅಪ್ಡೇಟ್ ಗಳಿವೆ ನೋಡಿ.
 • ಯಾವುದಾದರೂ ಅಪ್ಡೇಟ್ ಗಳಿದ್ದರೆ, ಅವನ್ನು Install Updates ಬಟನ್ ಪ್ರೆಸ್ ಮಾಡಿ, ಇನ್ಸ್ಟಾಲ್ ಮಾಡಿ. ಇದಾದ ನಂತರ Check ಬಟನ್ ಮತ್ತೊಮ್ಮೆ ಪ್ರೆಸ್ ಮಾಡಿ.
 • ಹೊಸ ಆವೃತ್ತಿ ಇದ್ದರೆ ಅದರ ಬಗೆಗಿನ ಸಂದೇಶ ನಿಮಗೆ ಕಾಣಸಿಗುತ್ತದೆ.

ಚಿತ್ರ:Update_Manager.png

 • Upgrade ಮೇಲೆ ಕ್ಲಿಕ್ ಮಾಡಿ.
 • ನಿಮ್ಮ ಸ್ಕ್ರೀನ್ ಮೇಲೆ ಕಂಡು ಬರುವ ಸಂದೇಶಗಳನ್ನು ಪಾಲಿಸಿ.

ಚಿತ್ರ:Upgrade_Manager_Notes.png

 ಬದಲಿ ಸಿ.ಡಿ/ಡಿ.ವಿ.ಡಿ ಮೂಲಕ ಅಪ್ಗ್ರೇಡ್ ಮಾಡುವುದು ಹೇಗೆ?

ನಿಮ್ಮ ಸಿಸ್ಟಂ ಇಂಟರ್ನೆಟ್ ಗೆ ಕನೆಕ್ಟ್ ಆಗಿಲ್ಲದಿದ್ದರೆ, ನೀವು ಈ ವಿಧಾನದ ಮೂಲಕ ಉಬುಂಟು ಅಪ್ಗ್ರೇಡ್ ಮಾಡಿಕೊಳ್ಳಬಹುದು.

 • ಬದಲಿ ಇನ್ಸ್ಟಾಲೇಷನ್ ಸಿ.ಡಿ ಡೌನ್ಲೋಡ್ ಮಾಡಿಕೊಳ್ಳಿ
 • ಡೌನ್ಲೋಡ್ ಮಾಡಿಕೊಂಡ ಐ.ಎಸ್.ಓ ಫೈಲ್ ಅನ್ನು ಸಿ.ಡಿಗೆ ಬರೆದು ಕೊಂಡ ನಂತರ ಅದನ್ನು ಅಪ್ಗ್ರೇಡ್ ಮಾಡಬೇಕಿರುವ ಕಂಪ್ಯೂಟರ್ ನ ಸಿ.ಡಿ ರೊಮ್ ಗೆ ಹಾಕಿ.
  • ಅಪ್ಗ್ರೇಡ್ ಮಾಡುವ ಕಂಪ್ಯೂಟರ್ ನಲ್ಲೇ ಡೌನ್ಲೋಡ್ ಮಾಡಿಕೊಂಡ ಐ.ಎಸ್.ಓ ಫೈಲ್ ಇದ್ದರೆ, ಕೆಳಗಿನ ಕಮ್ಯಾಂಡ್ ಬಳಸಿ ಉಬುಂಟು ಅಪ್ಗ್ರೇಡ್ ಮಾಡಿಕೊಳ್ಳ ಬಹುದಾದ್ದರಿಂದ ನೀವು ಒಂದು ಸಿ.ಡಿ ಕೂಡ ಉಳಿಸಬಹುದು:
sudo mount -o loop ~/Desktop/ubuntu-9.10-alternate-i386.iso /media/cdrom0
 • ನಿಮ್ಮ ಎದುರಿಗೊಂದು ಮೆಸೇಜ್ ಬಾಕ್ಸ ಬಂದು ನಿಮ್ಮ ಕಂಪ್ಯೂಟರಿನಲ್ಲಿರುವ ತಂತ್ರಾಂಶವನ್ನು ಅಪ್ಗ್ರೇಡ್ ಮಾಡುವ ಆಯ್ಕೆಯನ್ನು ನೀಡುತ್ತದೆ.

ಚಿತ್ರ:Ubuntu_Upgrade_via_CD.png

 • ನಿಮ್ಮ ಸ್ಕ್ರೀನ್ ಮೇಲೆ ಕಂಡು ಬರುವ ಸಂದೇಶಗಳನ್ನು ಪಾಲಿಸಿ.

ನಿಮಗೆ ಮೇಲೆ ತೋರಿಸಿರುವ ಮೆಸೇಜ್ ಬಾಕ್ಸ್ ಕಾಣದಿದ್ದಲ್ಲಿ, Alt+F2 ಕಮ್ಯಾಂಡ್ ಬಳಸಿದ ನಂತರ ಕೆಳಗೆ ಕೊಟ್ಟಿರುವ ಕಮ್ಯಾಂಡನ್ನು ನಿಮ್ಮ ಮುಂದೆ ಬರುವ ಮೆಸೇಜ್ ಬಾಕ್ಸ ನಲ್ಲಿ ರನ್ ಮಾಡಿ.

gksu "sh /cdrom/cdromupgrade"
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಓಂ,

ಮಾಹಿತಿಗೆ ಧನ್ಯವಾದಗಳು..

ರಿಲೀಸ್ ನೋಟ್ಸ್ ಇನ್ನೂ ಓದಿಲ್ಲ.. ಓದಿ ೯.೧೦ಗೆ ಅಪ್ಗ್ರೇಡ್ ಮಾಡ್ಕೊಳ್ತೀನಿ..

 

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂದಹಾಗೆ sudo mount -o loop ~/Desktop/ubuntu-9.10-alternate-i386.iso /media/cdrom0 ಇಲ್ಲಿ ~/Desktop/ ಅನ್ನೋ ಜಾಗದಲ್ಲಿ ನೀವು ಎಲ್ಲಿ ಸಿಡಿ ಇಮೇಜನ್ನು ಡೌನ್ಲೋಡ್ ಮಾಡಿಕೊಂಡಿದ್ದೀರೋ ಅಲ್ಲಿನ ಹಾದಿ ಕೊಡಬೇಕು. ಉದಾ: ನಿಮ್ಮ ಸಿಡಿ ಇಮೇಜು /media/my_path ನಲ್ಲಿದ್ದರೆ ಈ ಕೆಳಗಿನ ರೀತಿ ಕೊಡಿ. sudo mount -o loop /media/my_path/ubuntu-9.10-alternate-i386.iso /media/cdrom0
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈಗ ಫಿಕ್ಸ್ ಆಗಿದೆ. ಇದು "ಇದ್ದದ್ದು" ಬರೀ AMD 64 ಬಿಟ್ ಕಂಪ್ಯೂಟರ್ಗಳಿಗೆ ಮಾತ್ರ. ಧೈರ್ಯವಾಗಿ ಡೌನ್ಲೋಡ್ ಮಾಡಿಕೊಂಡು ಉಪಯೋಗಿಸಿ. https://bugs.launchp...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡೈರೆಕ್ಟ್ ಅಪ್ಡೇಟ್ ಮಾಡಿಕೊಂಡು ಉಬುಂಟು ೯.೧೦ ಆವೃತ್ತಿಯ ಅಲ್ಫಾ ರಿಲೀಸ್ ನಿಂದಲೇ ಉಪಯೋಗಿಸಿಕೊಂಡು ಬಂದಿದ್ದೇನೆ.. ಮೇಲೆ ಹೇಳಿದಂತೆ, ಉಬುಂಟುವಿನ ಎಲ್ಲ ಹಳೆಯ ಅಪ್ಡೇಟ್ ಇನ್ಸ್ಟಾಲ್ ಮಾಡಿ ಹೊಸ ಆವೃತ್ತಿಗೆ ದುಮುಕಿದ್ದರೆ ಈ ತಲೆನೋವು ಅವರಿಗೆ ಬಂದಿರಲಿಕ್ಕಿಲ್ಲ.. ext4, ಎನ್ಕ್ಲಿಪ್ಚನ್ ಗಳನ್ನು ನಾನು ಕೂಡ ಬಳಸುತ್ತಿದ್ದೇನೆ.. ಇಂಟರ್ನೆಟ್ ಫೋಲ್ ನಲ್ಲಿ ನೋಡುವುದಕ್ಕಿಂತ ಬಳಸಿ ನೋಡಿದರೆ ಚೆನ್ನ.. ಹಳೆಯ ಡ್ರೈವರ್ ಗಳನ್ನೆಲ್ಲಾ ತನ್ನೊಡನೆ ಇಟ್ಟುಕೊಂಡಿರುವ ಕಾರ್ಮಿಕ್ ಇಂತಹ ತೊಂದರೆ ಕೊಡಲಿಕ್ಕಿಲ್ಲ ಅನ್ನಿಸ್ತಿದೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.