ಥಟ್ ಅಂತ ಕೇಳಿದ ತಪ್ಪುಗಳು!

0

ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರತಿರಾತ್ರಿ ಪ್ರಸಾರವಾಗುವ "ಥಟ್ ಅಂತ ಹೇಳಿ" ತುಂಬಾ ಜನಪ್ರಿಯ ಕಾರ್ಯಕ್ರಮ. ಕಳೆದ ಕೆಲವು ವಾರಗಳಿಂದ ಈ ಕಾರ್ಯಕ್ರಮವನ್ನು ನೋಡಲು ಶುರು ಮಾಡಿದ್ದೇನೆ. ಇಲ್ಲಿ ಕೇಳುವ ಕೆಲವು ಪ್ರಶ್ನೆಗಳು ತಪ್ಪುಗಳಿಂದ ಕೂಡಿದ್ದರೆ, ಸ್ಪರ್ಧಿಗಳ ಉತ್ತರಗಳು ಕೆಲವೊಮ್ಮೆ ಹಾಸ್ಯಾಸ್ಪದವಾಗಿರುತ್ತವೆ. 

* ಕಾರ್ಯಕ್ರಮದ ಹೆಸರು "ಥಟ್ ಅಂತ ಹೇಳಿ" ಎಂದಿದ್ದರೂ, ಅರ್ಧ ಗಂಟೆಯ ಕಾರ್ಯಕ್ರಮದಲ್ಲಿ ಬರೀ ೧೦ ಪ್ರಶ್ನೆಗಳು ಸಾಕೆ?
* "ಈ ಗಾದೆಯನ್ನು ಪೂರ್ಣಗೊಳಿಸಿ" ಎಂಬ ಪ್ರಶ್ನೆಯಲ್ಲಿ ಒಗಟನ್ನು ಕೇಳಲಾಗುತ್ತಿದೆ. ಒಗಟಿಗೂ ಗಾದೆಗೂ ವ್ಯತ್ಯಾಸ ಗೊತ್ತಿಲ್ಲವೆ?
* "ಈ ಅಕ್ಷರಗಳನ್ನು ಜೋಡಿಸಿ" ಎಂಬ ಪ್ರಶ್ನೆಯಲ್ಲಿ ಪೂರ್ಣ ಅರ್ಥವಿಲ್ಲವ ಪದಗುಚ್ಚಗಳನ್ನು ಕೊಡಲಾಗಿರುತ್ತದೆ.

* "ಈ ಲೆಕ್ಕವನ್ನು ಪೂರ್ಣಗೊಳಿಸಿ" ಎಂಬ ಪ್ರಶ್ನೆಗೆ ಹಲವಾರು ಉತ್ತರಗಳ ಸಾಧ್ಯತೆಯಿರುತ್ತದೆ. ಮೊದಲಿಗೆ ಉತ್ತರಿಸಿದವರ ಉತ್ತರ ಸರಿಯಿದ್ದರೂ, ಎರಡನೆಯವರಿಗೆ ಅಂಕ ಸಿಗುವ ಉದಾಹರಣೆ ಇದೆ.
* ಪದಬಂಧದಲ್ಲೂ ಅರ್ಥ ಸರಿಯಿರದ ಸುಳುಹುಗಳು ಇರುತ್ತವೆ. 

ಕಳೆದ ವಾರದ ಕೆಲವು ಸ್ಯಾಂಪಲ್ ಗಳು ಇಲ್ಲಿವೆ.
* ಪದಬಂಧದಲ್ಲಿ "ಎಲ್ಲವನ್ನೂ ಬಲ್ಲವನು" ಎಂಬ ಸುಳುಹಿಗೆ ಉತ್ತರ "ಪ್ರಾವಿಣ್ಯ". ಇಲ್ಲಿ ಪ್ರವೀಣ ಎಂದಿದ್ದರೆ ಸರಿಯಾಗುತ್ತಿತ್ತು. ಮಧ್ಯದ ಅಕ್ಷರ "ವಿ" ಬರಬೇಕಿಂದಿದ್ದರೆ, "ಪ್ರಾವಿಣ್ಯ" ಕ್ಕೆ ಸರಿಯಾದ ಸುಳುಹು ಕೊಡಬೇಕಾಗಿತ್ತು.
* ಈ ಲೆಕ್ಕ ಬಿಡಿಸಿ: 25  ?  25  ?  50  ?  50  =  50
 ಇದಕ್ಕೆ 3 ಉತ್ತರಗಳ ಸಾಧ್ಯತೆ ಇದೆ. ಮೊದಲನೆಯವರಾಗಿ ಉತ್ತರಿಸಿದವರು 25 + 25 - 50 + 50 = 50 ಎಂಬ ಉತ್ತರ ಕೊಟ್ತಿದ್ದರು. ಆದರೆ ಎರಡನೆಯವರಾಗಿ  25 + 25 + 50 - 50 = 50 ಎಂದು ಉತ್ತರಿಸಿದವರಿಗೆ ಅಂಕ ಸಿಕ್ಕಿತು!

*  ಇಂದಿನ(29-06-2009) ಸಂಚಿಕೆಯಲ್ಲಿ "ಈ ಹೂವನ್ನು ಗುರುತಿಸಿ" ಎಂಬ ಪ್ರಶ್ನೆ ಕೇಳಿ, ಒಂದು ಹೂವಿನ ಚಿತ್ರ ತೋರಿಸಿ ಅದನ್ನು ಬೀಟ್‍ರೂಟ್ ಹೂವೆಂದು ತಿಳಿಸಿದ್ದು ಹಾಸ್ಯಾಸ್ಪದವಾಗಿತ್ತು. beet root flower ಎಂದು ಗೂಗಲಿಸಿ ಅದು ತೋರಿಸಿದ ಹೂವನ್ನು ಬೀಟ್‍ರೂಟ್ ಹೂವೆಂದು ತಿಳಿದು ಪ್ರಶ್ನೆ ಕೇಳಲಾಗಿತ್ತು. ಅವರು ತೋರಿಸಿದ್ದ ಚಿತ್ರ ಇಲ್ಲಿದೆ.
Salvia involucrata

ಇದು Salvia involucrata ಎಂಬ ಮೆಕ್ಸಿಕನ್ ಹೂ. ಈ ಹೂವಿಗೂ ಬೀಟ್‍ರೂಟ್‍ಗೂ ಯಾವುದೇ ಸಂಬಂಧವಿಲ್ಲ. 
* ಕೊನೆಯ ಬಂಪರ್ ಪ್ರಶ್ನೆಯಲ್ಲಿ ಮಲ್ ಬೆರಿ (ಹಿಪ್ಪನೇರಳೆ) ಜಾತಿಗೆ ಸೇರಿದ "ಮರ"ದಲ್ಲಿ ಬಿಡುವ "ಹಣ್ಣು" ಯಾವುದೆಂದು ಕೇಳಿದಾಗ, ಸ್ಪರ್ಧಿಯೊಬ್ಬರು "ಥಟ್" ಎಂದು ಹೇಳಿದ ಉತ್ತರ ಊಹಿಸಿ!!   ಕುಂಬಳ ಕಾಯಿ !!!

mindry.in ನ ಕಲಾವಿದರು ಮಾಡಿರುವ ಈ ಕಾರ್ಯಕ್ರಮದ ಬಗೆಗಿನ ಅಣಕ ಯೂಟ್ಯೂಬ್ನ‍ಲ್ಲಿವೆ.
http://www.youtube.com/watch?v=2X4DQKeIP1w

http://www.youtube.com/watch?v=SfPbF7FrnjE

 ಇತ್ತೀಚಗೆ "ಥಟ್ ಅಂತ ಹೇಳಿ" ನೋಡಿದರೆ, ಈ ಕಲಾವಿದರ ಅಣಕ ದಲ್ಲಿ ತುಂಬಾ ಕಡಿಮೆ ಉತ್ಪ್ರೇಕ್ಷೆ ಇದೆ ಅನ್ನಿಸಿದಿರಲಾರದು.

- ಶಶಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಕೊಡುವ ಪುಸ್ತಕಗಳು ’ಕಸಾಪ’ ದ ’ಕಸ’ ಎಂದು ಹಾಸ್ಯ ಮಾಡುವುದನ್ನೂ ಕೇಳಿದ್ದೇನೆ.
ಕಡೆಯಲ್ಲಿ ಕೊಡುವ ’ಕುತೂಹಲಕರ ಮಾಹಿತಿ’ ಚೆನ್ನಾಗಿರುತ್ತದೆ. ನಡುನಡುವೆ ಕ್ವಿಝ್ ಮಾಸ್ಟರ್ ಕೊಡುವ ಹೆಚ್ಚಿನ ಮಾಹಿತಿಗಳೂ ಚೆನ್ನಾಗಿರುತ್ತವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿಂದೆ ಒಮ್ಮೆ ಭ್ಹೈರಪ್ಪನವರ ಕಾದಂಬರಿ " ಸಾರ್ಥ" , ಆದನ್ನು ಸಾರ್ಥಕ ಎಂದು ಪದ ಬಂದದಲ್ಲಿ ಬರುವಂತೆ ಜೋಡಿಸಲಾಗಿತ್ತು.

ಏನೇ ಆದರೂ , ಕಾರ್ಯಕ್ರಮ ಚೆನ್ನಾಗಿ ಮೂಡಿ ಬರುತ್ತಿದೆ. ಕನ್ನಡ ಚಂದನ ವಾಹಿನಿಯಲ್ಲಿ ಬಹುಶ: ಹಲವಾರು ಜನ ಇಷ್ಟ ಪಟ್ಟು ನೋಡುವ ಕಾರ್ಯಕ್ರಮ ಇದು ಅನಿಸುತ್ತೆ,,

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ಒಂದು ಒಳ್ಳೆಯ ಕಾರ್ಯಕ್ರಮ ,ಯಾವ ಕಾರ್ಯಕ್ರಮವೂ ಪರಿಪೂರ್ಣವಲ್ಲ .ಎಲ್ಲದರಲ್ಲೂ ಎಲ್ಲೋ ತಪ್ಪುಗಳಾಗುವದು ಸಹಜ.ಅವುಗಳನ್ನ ನಿರ್ವಾಹಕರ ಗಮನಕ್ಕೆ ತಿಳಿಸುವದು ನೋಡುಗನ ಕರ್ತವ್ಯ. ಅದರ ಪರಿಪೂರ್ಣತೆಗೆ ನಿಮ್ಮ ಸಲಹೆಗಳನ್ನು ನಿರ್ವಾಹಕರ ಗಮನಕ್ಕೆ ತನ್ನಿ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು. ಕಾರ್ಯಕ್ರಮದ ಧನಾತ್ಮಕ ಅಂಶಗಳು ಜಾಸ್ತಿಯೇ ಇರುವುದರಿಂದ ಸಣ್ಣ ಸಣ್ಣ ತಪ್ಪುಗಳು ಗೌಣವೆನಿಸುತ್ತವೆ. ಆದರೂ ತಪ್ಪು ಮಾಹಿತಿ ನೀಡುವ ಪ್ರಶ್ನೋತ್ತರಗಳು ಇಲ್ಲದೆ ಗುಣಮಟ್ಟ ಹೆಚ್ಚಾಗಲಿ ಎಂಬುದೇ ನನ್ನ ಹಾರೈಕೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

* ಈ ಲೆಕ್ಕ ಬಿಡಿಸಿ: 25 ? 25 ? 50 ? 50 = 50
ಇದಕ್ಕೆ 3 ಉತ್ತರಗಳ ಸಾಧ್ಯತೆ ಇದೆ. ಮೊದಲನೆಯವರಾಗಿ ಉತ್ತರಿಸಿದವರು 25 + 25 - 50 + 50 = 50 ಎಂಬ ಉತ್ತರ ಕೊಟ್ತಿದ್ದರು. ಆದರೆ ಎರಡನೆಯವರಾಗಿ 25 + 25 + 50 - 50 = 50 ಎಂದು ಉತ್ತರಿಸಿದವರಿಗೆ ಅಂಕ ಸಿಕ್ಕಿತು!

ಇದು ಬಹುಶ: ಅಚಾತುರ್ಯದಿಂದ ಆದದ್ದು ಇರಬೇಕು.. ನಾ ಸೋ ಅವರು ಹಲವಾರು ಬಾರಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.. ಒಂದು ಲೆಕ್ಕವನ್ನು ಹಲವಾರು ವಿಧದಲ್ಲಿ ಬಿಡಿಸಬಹುದು.. ಅದನ್ನು ಪರೀಕ್ಷೆಕೂಡ ಮಾಡುತ್ತಾರೆ....

ಇಂದಿನ(29-06-2009) ಸಂಚಿಕೆಯಲ್ಲಿ "ಈ ಹೂವನ್ನು ಗುರುತಿಸಿ" ಎಂಬ ಪ್ರಶ್ನೆ ಕೇಳಿ, ಒಂದು ಹೂವಿನ ಚಿತ್ರ ತೋರಿಸಿ ಅದನ್ನು ಬೀಟ್‍ರೂಟ್ ಹೂವೆಂದು ತಿಳಿಸಿದ್ದು ಹಾಸ್ಯಾಸ್ಪದವಾಗಿತ್ತು.

ಇದನ್ನು ನಾನು ಕೂಡ ನೋಡಿದ್ದೇನೆ.. :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು. ಅದರಲ್ಲಿ ಸೋಮೇಶ್ವರರ ತಪ್ಪೇನು ಇಲ್ಲ. ಲೆಕ್ಕ ಬಿಡಿಸಿದವರು ಅದನ್ನು ಕೇಳಬೇಕಿತ್ತು.
ಹಾಗೆಯೇ ರಸಪ್ರಶ್ನೆಗಳ ತಯಾರಿಯಲ್ಲೂ ಸೋಮೇಶ್ವರರ ಪಾತ್ರ ಎಷ್ಟಿದೆ ಎಂದು ಗೊತ್ತಿಲ್ಲ. ಪ್ರಶ್ನೆಗಳ ಗುಣಮಟ್ಟ ಮಾತ್ರ ಇಳಿಮುಖವಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.