ಮನವು ಹೀಗೇಕೆ ಗೆಳತಿ ?!!

0

ತಿಳಿ ನೀರ ಕೊಳದಂತೆ ನಿನ್ನ
ಮನವು ಹೀಗೇಕೆ ?! ಬಾಡಿ
ರವಿ ಕಾಣದ ಕಮಲದಂತಾಯಿತು ||
ಅಂತರಾಳದ ಭಾವನೆ ಹೃದಯದಲ್ಲೇ
ಅಡಗಿಸಿಟ್ಟು ಹೊರಗೇಕೆ ನಗುವ
ಮುಖವಾಡ ತೊಟ್ಟಿರುವೆ ||
ಎದೆಯೊಳಗೆ ಬಣ್ಣ ತುಂಬಿ
ಮತ್ತೇಕೆ ಕನಸನ್ನು ಕತ್ತಾಗಿಸಿ
ಕೊರಗಿ ನೀರಾಗಿ ಬತ್ತುತ್ತಲಿರುವೆ ||
ಹೇಳಬೇಕು ಎನ್ನುವ ಮಾತು
ಗಂಟಲಲ್ಲೇ ನುಂಗಿ ಯಾರಿಗೂ
ತಿಳಿದಿಲ್ಲ ಎಂದು ಹೇಳುತ್ತಿರುವೆ ||
ಹರಿದರೆ ಹರಿದು ಬಿಡಲಿ
ಮನದಾಳದ ಚಿಂತೆಯ ಚಿತೆ
ಹುದುಗಿದರೆ ಒಡಲು ಸಿಡಿದಿತು ||
ಮೌನವೇ ಮನೆಯಾಗಿಸಿದರೇನು?!
ವಾಸ್ತವನ್ನೆ ತುಂಬಿಕೊ ಜೀವನದಿ
ಕೈ ಜಾರಿ ಬಿದ್ದು ಒಡೆದಿತು ಬದುಕು ||

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೆಣ್ಣಿನ ಮನ್ಸೆ ಹಾಗೆ ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.