Narayana ರವರ ಬ್ಲಾಗ್

ಎನ್. ನರಸಿಂಹಯ್ಯ ಇನ್ನಿಲ್ಲ

ಪತ್ತೇದಾರಿ ಕಾದಂಬರಿಕಾರ ಎನ್. ನರಸಿಂಹಯ್ಯ ಇನ್ನಿಲ್ಲ. ಅಂತ ಟಿವಿಯಲ್ಲಿ ನೋಡಿದೊಡನೆಯೇ ಮನಸ್ಸು ಹಿಂದೆ ಓಡಿತು.

ನಮ್ಮೂರಲ್ಲಿ ಒಂದು ಲೈಬ್ರರಿ ಇತ್ತು. ಒಂದು ಪುಸ್ತಕಕ್ಕೆ ವಾರಕ್ಕೆ ಹತ್ತು ಪೈಸೆ. ಸಂಜೆ ಮಾತ್ರಾ ತೆರೆದಿರುತ್ತಿದ್ದ ಆ ಲೈಬ್ರರಿಯಲ್ಲಿ ಜನ ಪ್ರತಿದಿನ ಕಿಕ್ಕಿರುತ್ತಿರುತ್ತಿದ್ದರು. ಹೊಸ ಪುಸ್ತಕಗಳ ಹೊದಿಕೆಗಳನ್ನು ಪೋಣಿಸಿ ಬಂಟಿಂಗ್ಸ್ ತರಹ ನೇತು ಹಾಕಿರುತ್ತಿರುತ್ತಿದ್ದರು. ತ್ರಿವೇಣಿ, ಕಾರಂತರು, ಎಂ.ಕೆ.ಇಂದಿರಾ ಜೊತೆಜೊತೆಯಾಗಿಯಾಗಿಯೇ,ಎನ್. ನರಸಿಂಹಯ್ಯ ಕೂಡ ಅಲ್ಲಿಯ ಅತಿ ಜನಪ್ರಿಯ ಲೇಖಕರುಗಳಲ್ಲಿ ಮುಖ್ಯರಾಗಿದ್ದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (5 votes)
To prevent automated spam submissions leave this field empty.

ಬೆ0ಗಳೂರಿನಲ್ಲಿ ಕನ್ನಡ ಭಾಷೆ

 

ಬೆ೦ಗಳೂರಿನಲ್ಲಿ ಕನ್ನಡದ ದುಸ್ಥಿತಿಯ ಬಗ್ಯೆ ನಮ್ಮ ತಕರಾರು ಈವತ್ತಿನದಲ್ಲ. ಈಗ ಉದ್ಯಮೀಕರಣದಿ೦ದ ಉಂಟಾದ ಹೊರರಾಜ್ಯಗಳವರ ವಲಸೆಯಿ೦ದ   ಬೆ೦ಗಳೂರಿನಲ್ಲಿ ಕನ್ನಡ ಕೇಳುವುದು ಮತ್ತಷ್ಟು ದುರ್ಲಭವಾಗುತ್ತಿದೆ.

ಇದಕ್ಕೆ ಹೊರಗಿನವರು ಎಷ್ಟು ಕಾರಣವೋ , ನಾವೂ ಅಷ್ಟೇ ಕಾರಣ. 

ನಾನು ಬೆ೦ಗಳೂರಿನ ನಿವಾಸಿಯಲ್ಲ. ಆದರೂ ಬೆ೦ಗಳೂರಿಗೆ ಆಗಾಗ ಹೋದಾಗ ನನ್ನ ಅನುಭವ ಹೀಗಿದೆ. ನಾನು ಪ್ರಯತ್ನ ಪೂರ್ವಕವಾಗಿ ಆದಷ್ಟೂ ಕನ್ನಡದಲ್ಲಿಯೇ ವ್ಯವಹರಿಸುತ್ತೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪಾಚಿ ಕಟ್ಟಿದ ಪಾಗಾರ : ಒಂದು ಅನಿಸಿಕೆ

 

ಪಾಚಿ ಕಟ್ಟಿದ ಪಾಗಾರ:
ಕಾದಂಬರಿ
ಮಿತ್ರಾ ವೆಂಕಟ್ರಾಜ
ಮನೋಹರ ಗ್ರಂಥಮಾಲಾ,ಧಾರವಾಡ
            ಪಾಚಿ ಕಟ್ಟಿದ ಪಾಗಾರ ಕಾದಂಬರಿಯ ಕಾಲಮಾನ ೧೯೪೦ರ ಮಧ್ಯಭಾಗದಿಂದ ೧೯೭೦ರ ಮೊದಲ ವರ್ಷಗಳವರೆಗೆ - ಒಟ್ಟಿನಲ್ಲಿ ಸುಮಾರು ಮೂರು ದಶಕಗಳು. ಕುಂದಾಪುರ ಸೀಮೆಯಲ್ಲಿನ ಬ್ರಾಹ್ಮಣ ಸಮುದಾಯದ ಸಾಮಾಜಿಕ ಸಂದರ್ಭದ ಹಿನ್ನೆಲೆಯಲ್ಲಿ ನಡೆಯುವ ಈ ಕಾದಂಬರಿಯ ಕೇಂದ್ರ ಬಿಂದುಗಳು ಪಾರ ಎಂಬ ಹೆಣ್ಣು ಮತ್ತು ಕೆಮ್ಮಾಡಿ ಮನೆ ಎಂಬ ಜಮೀನುದಾರಿ ಮನೆತನ. ಇವೆರಡರ ಕಥಾನಕಗಳೂ ಸಮಾನಾಂತರವಾಗಿ ಶುರುವಾದರೂ, ಮುಂದೆ ಒಂದುಗೂಡಿ ಮುಂದುವರಿಯುತ್ತದೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

ಸಂಪದದಲ್ಲಿ ಮೂರು ವರುಷ

 


ನಾನು ಸಂಪದಕ್ಕೆ ಕಾಲಿಟ್ಟು ಫೆಬ್ರವರಿ ೪ಕ್ಕೆ ಮೂರು ವರುಷ. ಅಂತರಜಾಲದಲ್ಲಿ ಅಲೆಯುತ್ತಿದ್ದಾಗ ಅಕಸ್ಮಾತ್ತಾಗಿ ಕಾಲಿಗೆ ತೊಡರಿದ್ದು ಸಂಪದ. ಆಗ ನಾನು ಕನ್ನಡ ವಿಕಿಪೀಡಿಯಾದಲ್ಲಿ ಸಕ್ರಿಯನಾಗಿದ್ದೆ. ಅನೇಕ ಇಂಗ್ಲೀಷ್ ಲೇಖನಗಳನ್ನು ಭಾಷಾಂತರ ಮಾಡಿ ಕನ್ನಡಕ್ಕೆ ಸೇರಿಸುತ್ತಿದ್ದೆ. (google translator ಉಪಯೋಗಿಸಿ ಅಲ್ಲ. ಹಳೆಯ ಕಾಲದ manual ಭಾಷಾಂತರ!). ಆಗ Sysadmin  ಆಗಿದ್ದ ನಾಡಿಗರ ಜಾಡು ಹಿಡಿದು ಹೊರಟಾಗ ಸಿಕ್ಕಿದ್ದು ಸಂಪದ. ಆಗ ಹತ್ತಿದ ’ಹುಚ್ಚು’ ಇನ್ನೂ ಬಿಟ್ಟಿಲ್ಲ !

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.

ಗಾಂಧೀ ಸಂಗತಿಗಳು - ೧

 

೧. ಗಾಂಧೀಜಿಯವರ ತಂದೆಗೆ ಒಬ್ಬರಾದಮೇಲೆ ಒಬ್ಬರಂತೆ ನಾಲ್ವರು ಹೆಂಡಿರು. ಗಾಂಧೀಜಿಯವರ ತಾಯಿ ಕೊನೆಯವರು. ಅವರ ನಾಲ್ಕು ಮಕ್ಕಳಲ್ಲಿ ಗಾಂಧೀಜಿ ಕೊನೆಯವರು

೨. ಗಾಂಧೀಜಿಯ ಪಾರ್ಥಿವ ಶರೀರವನ್ನು ಅಲಂಕರಿಸಿದ ಮಿಲಿಟರಿ ಮೋಟಾರಿನಲ್ಲಿ ಇಡಲಾಗಿತ್ತು. ಈ ವಾಹನವನ್ನು ಹಗ್ಗ ಕಟ್ಟಿ ೨೦೦ ಜನ ಭಾರತೀಯ ಸೇನಾಪಡೆಯ ಯೋಧರು, ರಥ ಎಳೆದಂತೆ ಎಳೆದುಕೊಡು , ಐದೂವರೆ ಮೈಲಿ ದೂರದ ಸ್ಮಶಾನಭೂಮಿಗೆ ಮೆರವಣಿಗೆಯಲ್ಲಿ ಕೊಂಡೊಯ್ದರು.

೩. ಗಾಂಧೀಜಿಯ ಚಿತಾಭಸ್ಮವನ್ನು ಸಂಗ್ರಹಿಸುತ್ತಿದ್ದಾಗ, ಅದರಲ್ಲಿ ಅವರ ದೇಹದಲ್ಲಿದ್ದ ಗುಂಡೊಂದು ಸಿಕ್ಕಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - Narayana ರವರ ಬ್ಲಾಗ್