ಪುಣ್ಯಕೋಟಿ - ರಾಮರಾಜ್ಯ

0

ಸನ್ಮಾನ್ಯ ಪುಣ್ಯಕೋಟಿಯ ನಾಡಿಗರೇ!

ಈಗ ನಡೆಯುತ್ತಿರುವ ರಾಜಕೀಯ ದೊಂಬರಾಟವನ್ನು ನೋಡಿ ಎಲ್ಲಾ ಪುಣ್ಯಕೋಟಿಗರಿಗೂ [ ಇವರಿಗೆ ಮೊದಲೇ ರಾಜಕೀಯವೆಂದರೆ "ಹೊಲಸುರಾಜಕೀಯ!" ಇದರಿಂದಾಗಿಯೇ ಕೆಸೆರೆರಚಾಟವೆಲ್ಲಾ ): ] ತುಂಬಾ ನಾಚಿಕೆಯಾಗುತ್ತಿರಬೇಕು. ಆದರೆ ನಾವೆಲ್ಲಾ ತಿಳಿದಿರುವಂತೆ, ಸುಖಾಸುಮ್ಮನೆ ದೇವೇಗೌಡರೊಬ್ಬರೇ ಎಲ್ಲಾ ನಾಟಕದ ಸೂತ್ರದಾರಲ್ಲ. ಅವರೊಬ್ಬ ಮುಖ್ಯಪಾತ್ರದಾರಿಯಷ್ಷೇ. ಅವರೂ ಕೂಡಾ ನಮ್ಮ ಕನ್ನಡದ ಸೆಗಣಿ ತಿಂದು ಬೆಳೆದವರಾದ್ದರಿಂದ (ಕನ್ನಡದ ಅನ್ನವನ್ನು ತಿಂದಿದ್ದರೆ ಅಪ್ಪಿತಪ್ಪಿ ಕೂಡಾ ಈರೀತಿ ಮೋಸ ಮಾಡುತ್ತಿರಲಿಲ್ಲ.) ತಾವುಂಡ ಉಪ್ಪಿನ ಋಣತೀರಿಸಲಿಕ್ಕಾಗಿ ಇಷ್ಟೆಲ್ಲಾ ನೋವನನುಭವಿಸುತ್ತಿದ್ದಾರೆ. ಅವರೊಬ್ಬ ದಕ್ಷ ರಾಜಕಾರಣಿಯಾಗಿದ್ದು ಈಗಿರುವ ಋಣತೀರಿಸುವ ಬುದ್ಧಿಯು ಮೊದಲೇ ಇದ್ದಿದ್ದರೆ, ತಾವು ತಮಗೊಪ್ಪದ ಪದವಿಯಾದ ಪ್ರಧಾನಿಪಟ್ಟಕ್ಕೋಗದೇ ತಾವು ಮುಖ್ಯಮಂತ್ರಿಯಾಗೇ ಉಳಿದು, ಎಲ್ಲಾರೀತಿಯಲ್ಲೂ ಪ್ರಧಾನಿಯಾಗುವ ಅರ್ಹತೆಯುಳ್ಳ ಒಬ್ಬನೇ ಒಬ್ಬ ಕನ್ನಡಿಗನಾದ ( ಸಂದರ್ಭದಲ್ಲಿ!) ಸನ್ಮಾನ್ಯ ರಾಮಕೃಷ್ಣ ಹೆಗಡೆಯವರನ್ನು ಪ್ರಧಾನಿಯಾಗಿಸಿ ತಾವೂ "ಕಿಂಗ್ ಮೇಕರ್" ಎಂಬುದನ್ನು ತೋರಿಸಿ ತುಂಬಾ ದೊಡ್ಡವರಾಗಬಹುದಿತ್ತು. ತನ್ಮೂಲಕ ತಾವೂ ಮುಂದೆ ಪಟ್ಟಕ್ಕೆ ಅರ್ಹರಾಗಬಹುದಾಗಿತ್ತು. ಆದರೆ ಸ್ವಾರ್ಥವೇ ಮೂರ್ತಿಯೆತ್ತಿದಂತಿರುವ ಅವರಂತಹವರಿಂದ ಇಂತಹುದೇನನ್ನೂ ನಿರೀಕ್ಷಿಸಲಾದೀತೆ?. ಹಾಗೂ ಅವರು ಎಲ್ಲರನ್ನೂ ತುಳಿದು ಮೇಲೆ ಬಂದವರಾದ್ದರಿಂದ ಅವರ ಮಂಡೆಗೆ ತರಹಾ ಏನೂ ಹೊಳೆಯುವುದಿಲ್ಲವೇನೋ!

ಇನ್ನು ಎಲ್ಲಾ ದೊಂಬರಾಟಗಳ ಮುಖ್ಯಸೂತ್ರದಾರ! ಕಾಂಗ್ರೆಸ್!

ಸಾಕಷ್ಟು ಮಂದಿಗೆ ತಿಳಿದಂತೆ ಇದು ವಿದೇಶಿಯೊಬ್ಬರಿಂದ, ವಿದೇಶಿಗಳಿಗಾಗ, ಭಾರತದ ಪರ್ದೇಶಿಗಳೊಂದಿಗೆ ಕೈಜೋಡಿಸಿ ಕಟ್ಟಿದ ಸಂಘ ಕಾಂಗ್ರೆಸ್. ಆಂಗ್ಲರು ನಮ್ಮನ್ನು ಸಂಪೂರ್ಣ ಕೊಳ್ಳೆ ಹೊಡೆದು ಕೊಳ್ಳೆಯೆಲ್ಲಾ ಮುಗಿದು ಹೋದಂತೆನಿಸಿದಾಗ ಹಾಗೂ ಅಲ್ಲಲ್ಲಿಯೇ ಭಾರತಾಂಬೆಯ ಮಕ್ಕಳ ಮರಿಸಿಂಹಗಳ ಘರ್ಜನೆಗಂಜಿ, ಇವುಗಳು ಬೆಳೆದು ಕೇಸರಿಗಳಾದರೆ, ಹಾಗೂ ಕೇಸರಿಗಳು ಒಂದೆರಡಾಗಿ, ಎರಡ್ನಾಲ್ಕಾಗಿ, . . . . ಕೋಟಿ ಕೋಟಿಗಳಾಗುತ್ತಾ ಸಾಗಿದರೆ ತಮಗೆ ಭಾರತದಲ್ಲಿಯಷ್ಟೇ ಅಲ್ಲ, ಪ್ರಪಂಚದಲ್ಲೆಲ್ಲಿಯೂ ತಮ್ಮವಂಶವಾಗಲೀ, ತಮ್ಮೆಸರೂ ಹೇಳ ಹೆಸರಿಲ್ಲದಂತಾದ ಸಾವಿರಾರು ನಾಗರೀಕತೆಗಳಂತೆ (ನಾಗರೀಕರೇ ಇವರು, ಮೊನ್ನೆಯವರೆಗೆ ದುಡಿದು ತಿನ್ನುವ ಬದಲು ತಲೆ ಹೊಡೆದು ತಿನ್ನುತ್ತಿದ್ದ ಕಿರಾತಕರಿವರು!) ತಾವಾಗಿಯೇ ಇದನ್ನು ಬಿಟ್ಟುಹೋಗುವ ಬದಲು ಇಷ್ಟೆಲ್ಲಾ ನಾಟಕವಾಡಿ, ತಾವೇ ತಮ್ಮ ಕತ್ತಿ, ಬಂದೂಕಿನ ಬಲದಿಂದ ನಮ್ಮ ಪುಣ್ಯಭೂಮಿಯನ್ನು ಗುಲಾಮಗಿರಿಗೆ ನೂಕಲು Universityಗಳೆಂಬ ಗುಲಾಮರ ಗುಲಾಮರನ್ನು ತಯಾರಿಸುವ ಕರ್ಖಾನೆಗಳನ್ನು ಕಟ್ಟಿ ಗುಲಾಮರಿಂದ ಕಾಂಗ್ರೆಸ್ ಹುಟ್ಟಿ, ಕಾಂಗ್ರೆಸ್ ಗೆ, ಸತ್ಯಾಗ್ರಹವೆಂಬ ಆಟಕಟ್ಟಿ ನಮ್ಮ ವೀರಕೇಸರಿಗಳಿಗಂಜಿ ದೇಶಬಿಟ್ಟೋಡಿದ ಗ್ರಾಮಸಿಂಗಗಳು! ಇಂತಹಾ ಕಾಂಗ್ರೆಸ್ಸಿನಿಂದ ಏನನ್ನಾದರೂ ನಿರೀಕ್ಷಿಸಲಾದಿತೇ.

ಭಾಜಪವನ್ನೇಕೆ ತೆಗಳುತ್ತೀರಿ! ಅದರ ಸಹನೆಯನ್ನೂ ಮೆಚ್ಚಲೇಬೇಕು. ೨೦ ತಿಂಗಳು ಒಂದೂ ಮಾತಾಡದೆ ತಮ್ಮ ಸರದಿಗಾಗಿ ಕಾದ, ಹಾಗೂ ದಶಕಗಳಿಂದ, ಕರ್ನಾಟಕದಲ್ಲಿ ಹಾಗೂ ದೇಶದಲ್ಲಿ ಅಧಿಕಾರಕ್ಕೆ ಶಬರಿಯಂತೆ ಕಾಯುತ್ತಿರುವ ಆದಾಗ್ಯೂ ತಮ್ಮತನವನ್ನು ಹಾಗೂ ದೇಶಪ್ರೇಮವನ್ನು ಇನ್ನು ಉಳಿಸಿಕೊಂಡಿರುವ ಹಾಗೂ ದೇಶಕ್ಕಾಗಿ ಕನಿಷ್ಠ ಅಳಿಲುಸೇವೆಯನ್ನಾದರೂ ಸಲ್ಲಿಸಬಲ್ಲವರೆಂದರೇ ಅವರೇ!. ಕನಿಷ್ಠ ಒಂದೆರಡು ತಿಂಗಳಾದರೂ ಅವರು ಅಧಿಕಾರದಲ್ಲಿದ್ದಿದ್ದರೆ ಅವರ ಅಧಿಕಾರದ (ದೇಶ ಪ್ರೇಮದ!) ಝಲಕೊಂದಾದರೂ ಸಿಗುತ್ತಿತ್ತು. ಆದರೆ,ಇದೆಲ್ಲವೂ ಕಾಂಗ್ರೆಸ್ಸಿನ ಕುಮ್ಮಕ್ಕೆನ್ನುವುದರಲ್ಲಿ ಸಂಶಯವೇ ಇಲ್ಲ. ಇಡೀ ದೇಶವೇ ಜೆಡಿ(ಎಸ್) ನೀಡಿರುವುದು ಬೇಷರತ್ ಬೆಂಬಲವೆಂಬುದು ಸ್ವತಃ ರಾಷ್ಟ್ರಪತಿಯವರ ಮುಂದೆ ಶಾಸಕರ ಪೆರೇಡಿನಿಂದ ತಿಳಿದಿರುವಾಗ, ನಮ್ಮ ಗೌರವಾನ್ವಿತ ರಾಜ್ಯಪಾಲರಿಗೆ ಮತ್ತೂ ಬಹುಮತ ಸಾಬೀತು ಮಾಡಿನೋಡುವ ತೀಠೆ ಬೇಕಿತ್ತೇ. ಅಬ್ದುಲ್ ಕಲಾಮರಂತಹ ಮಹಾಚೇತನವೊಂದು ಕುಳಿತಿದ್ದ ನಮ್ಮ ಘನತೆವೆತ್ತ ರಾಷ್ಟ್ರಪತಿಗಳ ಸ್ಥಾನಕ್ಕೆ ತಮ್ಮ ಕೈಗೊಂಬೆಯೊಂದನ್ನು ಕೂರಿಸಿರುವ ಸೋನಿಯಾಳ ಚೇಲಾಗಳಿಂದ ಇನ್ನೆಂತಹ ಕೆಲಸವನ್ನು ನಿರೀಕ್ಷಿಸಲಾಗುತ್ತದೆ. ಇವರಿಂದಾಗಿಯೇ ನಮ್ಮ ರಾಷ್ಟ್ರದ ಮರ್ಯಾದ ಪುರುಷೋತ್ತಮನನ್ನೇ ಇಲ್ಲವೆಂದು ವಾದಿಸುವ ಮೂರ್ಖರನ್ನು ಏನೆಂದು ಕರೆಯಬೇಕು! ಉತ್ತಮ ಆಡಳಿತಕ್ಕೆ ವಿಶ್ವದಲ್ಲಿಯೇ ಒಂದು ಹೆಸರೆಂದಿದ್ದರೆ ಅದು "ರಾಮರಾಜ್ಯ"! ಅದರೆ, ಇಟಲಿಯ ಪೋಪ್ ರ ಮುಖವಾಣಿಯಂತಿರುವ ಸೋನಿಯಾರಿಗೆ ಇದರ ಬಗ್ಗೆ ತಿಳಿದಿದ್ದರೆ ತಾನೇ! ಹೇಳುತ್ತಾ ಹೋದರೆ ಇದಕ್ಕೆ ಕೊನೆಯೇ ಇರುವುದಿಲ್ಲ.

ಯಡಿಯೂರಪ್ಪನವರನ್ನೇಕೆ ಅಧಿಕಾರದ ದುರಾಸೆಯೆಂದೇಕೆ ಹಂಗಿಸುತ್ತೀರಿ. ಅವರೇನೂ ಗಮಾರನಂತೆ ತಮ್ಮ ತಂದೆಯವರಿಗೇ ಎದುರಾಡುವ, ಅವರ ಕಾಲನ್ನೇ ಎಳೆದು ಅಧಿಕಾರವೇರುತ್ತಿರುವ ನಾಟಕವನ್ನೇನೂ ಆಡಲಿಲ್ಲ. ದಶಕಗಳ ಕಾಲ ಶಬರಿಯಂತೆ ಕಾದು ಊರೂರು, ಕೇರಿಕೇರಿ ಸುತ್ತಿ, ರಾಜಕೀಯವನ್ನೇ ಹಾಸಿ ಹೊದ್ದು, ಇದ್ದುದರಲ್ಲೇ (ಹೊಲಸುರಾಜಕೀಯವೆಂದು ನಾವು ನೀವು ಕರೆಯುವ ವಾತಾವರಣದಲ್ಲಿಯೂ) ಅಳಿಲುಸೇವೆಯನ್ನಾದರೂ ಸಲ್ಲಿಸಿರುತ್ತಾರೆ. ಪುರಾಣ ಪುಣ್ಯಕಥೆಗಳ ಮಹಾಮಹಿಮರ ಹೆಸರನ್ನೆಲ್ಲಾ ಎತ್ತುವ ಗಮಾರನಿಗೆ, ಪಿತೃವಾಕ್ಯ ಪರಿಪಾಲನೆಗೆ ಕಾಡಿಗೋದ ಮರ್ಯಾದಪುರುಷೋತ್ತಮನ ಬಗ್ಗೆ ತಿಳಿದಿರಲಿಲ್ಲವೇ! ಎಲ್ಲಿ ತಿಳಿದೀತು! ತಮ್ಮ ಪಿತೃವು ದೋಚಿ ತಂದಿತ್ತ ಸಗಣಿ ತಿಂದು, ಸುರೆಕುಡಿದು, ವಾರಾಂಗನೆಯರ ಜೊತೆ ಕೇಳಿಯಾಡೇ ತನ್ನೆಲ್ಲಾ ಯವ್ವನ/ಸಮಯ ಕಳೆದಿರಬೇಕು. ಹಾಗೂ ಮುದಿತಂದೆಯಿನ್ನೇನು ಸುಡುಗಾಡಿಗೋಗುವ ಮುಂಚೆ ತಲೆಕೊಡವಿ, ಮತ್ತಿಳಿದು ತನ್ನ ತಂದೆಯನ್ನೇ ಹಂಗಿಸುವ ಆಟವಾಡಿ ಸೀದಾ ಮುಖ್ಯಮಂತ್ರಿಗಾದಿಗೇರಿರಬೇಕು. ಅರುಳುಮರುಳಿನಲ್ಲಿ ಪಿತೃವೂ ಸಹಾ ಆತನ ಯೋಗ್ಯತೆಗೆ ತಕ್ಕಂತೆಯೇ ತನ್ನ ಮರಿಗಳ ಮಹಾವ್ಯಾಮೋಹದಿಂದ ತಾನು ಘನತೆ, ಗೌರವಗಳಿರುವ ಪೀಠದಲ್ಲಿ ತಮ್ಮ ಆಸನವನ್ನೊಮ್ಮೆ ಊರಿದ್ದೆ ಎಂಬುದನ್ನೂ ಮರೆತು, ಕುತಂತ್ರದಿಂದ, ಮೊಸಳೆ ಕಣ್ಣೀರು ಸುರಿಸುತ್ತಲೇ, ಮುಖ್ಯಮಂತ್ರಿ ಮಾಡಿದ್ದಾಯ್ತು. ಇದಕ್ಕೆಲ್ಲಾ ಯಡಿಯೂರಪ್ಪನವರ ಸಪೋರ್ಟೂ ಇದ್ದದ್ದರಿಂದ ಅವರು ರೀತಿಯಾಗಿ ಅವಮಾನ, ನೋವು ಪಡಬೇಕಾಗಿದೆ.

ಕೊನೇ ಪಕ್ಷ, ಮುಂದಿನ ಚುನಾವಣೆಯಲ್ಲಿ, ಕನ್ನಡನಾಡಿನಲ್ಲಿ ಜೆಡಿ(ಎಸ್)ನ ಒಬ್ಬ ಶಾಸಕನೂ ಕೂಡಾ ಆ ಪಕ್ಷದಿಂದ ಆರಿಸಿಬರಬಾರದು. ಆ ಹೆಸರಿನಿಂದ (ಅದು ಉಳಿದಿದ್ದರೆ!) ಹಾಗೂ ಈಗ ಆ ಪಕ್ಷದಲ್ಲಿರುವವರೆಲ್ಲರಾ ಠೇವಣಿಗೂ (ಅವರು ಯಾವ ವೇಶ ಮುಖವಾಡ ತೊಟ್ಟಿದ್ದರೂ) ಪಂಗನಾಮವಾಗಬೇಕು. ಹಾಗೂ ಇದೆಲ್ಲಕ್ಕೂ ತೆರೆಮರೆಯಲ್ಲಿ ಕುಮ್ಮಕ್ಕಾಗಿರುವ ಕಾಂಗ್ರೆಸ್ ಕೂಡಾ ಠೇವಣಿ ಕಳೆದುಕೊಳ್ಳಬೇಕು. ಹಾಗಾದಾಗಲೇ ಕರ್ನಾಟಕದಲ್ಲಿ ಪ್ರಜಾಪ್ರಭುತ್ವಕ್ಕೊಂದು ಅರ್ಥ. ಇಲ್ಲದಿದ್ದರೆ, ಮುಷ್ ನಂತಹ ಮುಷ್ಯಾನೊಬ್ಬ ಮುಂದೆ ಈ ರಾಜ್ಯವನ್ನೇ ಮೂರುಕಾಸಿಗೆ ಮಾರಿಕೊಂಡು ಕುಂಡಿತಿರುಗಿಸಿ ಹೋಗುತ್ತಾರೆ.

ಹಾಗೂ ತಕ್ಷಣವೇ ಆಗಬೇಕಾದ ಮತ್ತೊಂದು ಘನಕಾರ್ಯವೆಂದರೆ, ತಕ್ಷಣವೇ ರಾಷ್ಟ್ರಪ್ರೇಮವುಳ್ಳ ಕನ್ನಡ ಪ್ರಾದೇಶಿಕ ಪಕ್ಷ. ಇದರಲ್ಲಿ ವೃತ್ತಿಪರ ರಾಜಕಾರಣಿಗಳಲ್ಲದ, ಯಾವುದೇ ಸ್ವಂತ ಆಸೆ, ವ್ಯಾಮೋಹಗಳಿಲ್ಲದ, ರಾಜ್ಯದೇಶಗಳಿಗೇ ತಮ್ಮನ್ನು ಸಂಪೂರ್ಣ ಸಮರ್ಪಿಸಿಕೊಂಡವರು ಮುಂದೆ ಬರಬೇಕು. ಈ ನಾಡಿಗಾಗಿ, ನಾಡಸೇವೆಗಾಗಿ ಮುಡಿಪಾಗಿರುವವರಿಗೆ ಹಾಗೂ ಅವರ ಸತ್ಸಂತಾನಕ್ಕೆ ಅನ್ನಕ್ಕೆ ಕೊರತೆಯೇ? ಇಂತಹವರು ಈಗಿನ ರಾಜಕರಣಿಗಳಂತೆ ತಮಗೆ, ತಮ್ಮ ಮಕ್ಕಳಿಗೆ, ಮರಿ/ಗಿರಿ ಮಕ್ಕಳಿಗೂ ಆಗಲೆಂದು ಕೊಳ್ಳೆಹೊಡೆದು ಕೂಡಿಡುವರೇ? ತಮ್ಮ ತೀಠೆ, ದುರಾಸೆಗಳಿಗೆ ಆಡಳಿತವನ್ನೆಂದು ಕಡೆಗಣಿಸದಂತಹ, ತಮ್ಮತನವಿಲ್ಲದೆಯೇ ಬರಿದೇ ಕನ್ನಡ ಶಾಸಕ, ಕನ್ನಡ ಮಂತ್ರಿ, ಕನ್ನಡ ಮುಖ್ಯಮಂತ್ರಿಗಳೆಂದು ಗುರುತಿಸಲ್ಪಡುವ ಪಕ್ಷವೊಂದು ತಕ್ಷಣವೇ ಹುಟ್ಟಿಕೊಳ್ಳಬೇಕು. ನಮ್ಮ ನಾಡು ರಾಮರಾಜ್ಯವಾಗಬೇಕು.

ಇದಕ್ಕಾಗಿ ಕೈ ಜೋಡಿಸುವವರು ಬೇಕಾಗಿದ್ದಾರೆ. ಹೆಸರು ಪುಣ್ಯಕೋಟಿ. ಬನ್ನಿ ಪುಣ್ಯಕೋಟಿಗಳೇ! ನಮ್ಮ ನಾಡ ಕಟ್ಟೋಣ.

ಜೈ ಕರ್ನಾಟಕ! ಜೈ ಭಾರತ!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಮಸ್ಕಾರ,
ತುಂಬ ಚೆನ್ನಾಗಿದೆ ನಿಮ್ಮ ಲೇಖನ. ರಾಜ್ಯ ದೇಶಾಭಿಮಾನವನ್ನು ಬಡದೆಬ್ಬಿಸುವಂಗಿದೆ.
ಧನ್ಯವಾದಗಳು..

ನಿಮ್ಮವ,
ಗಿರೀಶ ರಾಜನಾಳ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.