ಅವರಿವರ ಭಯಾಗ್ರಫಿ- 1

0
ಭಾರತದ ತಂಡ ಟ್ವೆಂಟಿ ೨೦ ವಿಶ್ವಕಪ್‌ನಿಂದ ಹೊರಕ್ಕೆ ಎಸೆಯಲ್ಪಟ್ಟಿದ್ದರೂ ಭಾರತೀಯರಲ್ಲಿ ಕ್ರಿಕೆಟ್ ಜ್ವರ ಕಮ್ಮಿಯಾಗುವ ಲಕ್ಷಣ ಕಾಣುತ್ತಿಲ್ಲ. ಕೋಣಕ್ಕೆ ಬಂದ ಜ್ವರಕ್ಕೆ ಎಮ್ಮೆಗೆ ಬರೆ ಹಾಕುವಂತೆ ಅಲ್ಲಲ್ಲಿ ಕೆಲವರು ಆಟಗಾರರ ಪ್ರತಿಕೃತಿ ದಹಿಸುವ, ಚಪ್ಪಲಿಯಲ್ಲಿ ಹೊಡೆಯುವ ಚಿಕಿತ್ಸೆಯನ್ನು ನಡೆಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಕ್ರಿಕೆಟಿಗೆ ಸಂಬಂಧಿಸಿದ ಕೆಲವು ರಸವತ್ತಾದ ಅನೆಕ್ಡೋಟುಗಳನ್ನು ಮೆಲುಕು ಹಾಕುವುದಕ್ಕೆ ಸಾಮ್ರಾಟರು ತೀರ್ಮಾನಿಸಿದ್ದಾರೆ.

ಅತೀಂದ್ರಿಯವಾದಿಯ ಪವಾಡ!

ಮಾಜಿ ಬ್ರಿಟೀಷ್ ಪ್ರಧಾನಿ ಜಾನ್ ಮೇಜರ್ ಹೇಳಿದ ಘಟನೆಯಿದು: “೧೯೬೦ರಲ್ಲಿ ನೈಜೀರಿಯಾದಲ್ಲಿ ನಡೆದ ಗಂಭೀರ ಕಾರ್ ಅಪಘಾತದಲ್ಲಿ ನನ್ನ ಕಾಲು ಮುರಿದ ನಂತರ ನಾನು ಕ್ರಿಕೆಟ್ ಆಡಲಿಲ್ಲ. ಕಳೆದ ಎರಡು ಮೂರು ವರ್ಷಗಳಲ್ಲಿ ಅನೇಕ ಮಂದಿ ಹಿಂದೆ ನನಗೆ ಸಂಭವಿಸಿದ ಘಟನೆಯ ಬಗ್ಗೆ ಅಸಾಧಾರಣವಾಗಿ ಮಾತನಾಡುವುದನ್ನು ಕಂಡಿದ್ದೇನೆ. ಅತೀಂದ್ರಿಯವಾದಿಗಳು ಭವಿಷ್ಯದಲ್ಲಿನ ಎಲ್ಲಾ ಥರದ ವಿಚಿತ್ರ ಘಟನೆಗಳನ್ನು ಕಾಣಬಲ್ಲವರಂತೆ ಕಾಣುತ್ತಾರೆ. ಹಿಂದೆ ನಡೆದಿದ್ದ ಘಟನೆಗಳನ್ನು ಬದಲಾಯಿಸುವ ಶಕ್ತಿ ಹೊಂದಿರುವವರಂತೆ ತೋರುತ್ತಾರೆ.

“ಒಮ್ಮೆ ಇಂಥ ಅತೀಂದ್ರಿಯವಾದಿ ಒಬ್ಬಾಕೆ ನನಗಾದ ಅಪಘಾತದ ಬಗ್ಗೆ ವಿಷಾದ ವ್ಯಕ್ತ ಪಡಿಸುತ್ತಾ, ‘ನಿಮಗೆ ಸಂಭವಿಸಿದ ಅಪಘಾತ ದುರದೃಷ್ಟಕರ. ಅದು ನಿಮ್ಮೆದುರಿದ್ದ ಕಾರಿಗೆ ಸಂಭವಿಸಬೇಕಾದ ಅಪಘಾತವಾಗಿತ್ತು’ ಎಂದಳು.

“ಆಕೆಗೇನು ಉತ್ತರಿಸಬೇಕೆಂದು ನನಗೆ ತಿಳಿಯಲಿಲ್ಲ. ನಾನು ಹೇಳಿದೆ: ‘ಹಾಗಾದರೆ ಅದೃಷ್ಟ ನನ್ನ ಕಾಲುಗಳನ್ನು ಮತ್ತೆ ಸರಿ ಪಡಿಸಲು ಸಾಧ್ಯವೇ?’ ‘ತುಂಬಾ ಕಷ್ಟ’ ಆಕೆ ಹೇಳಿದಳು, ‘ಕಾಲು ಮುರಿದಿದೆ, ಲಿಗಮೆಂಟುಗಳು ಹರಿದಿವಿ, ಮಂಡಿ ಚಿಪ್ಪು ಚೂರಾಗಿದೆ. ಅವನ್ನೆಲ್ಲ ಸರಿ ಪಡಿಸುವುದು ಅಸಾಧ್ಯ. ಆದರೆ ನಾನು ಸಮಾಧಾನಕರ ಬಹುಮಾನವಾಗಿ ನಿಮಗೆ ಒಂದು ವರವನ್ನು ಕೊಡಬಲ್ಲೆ.’ ‘ಅದ್ಭುತ!’ ನಾನಂದೆ, ‘ಮುಂದಿನ ಟೆಸ್ಟ್ ಮ್ಯಾಚಿನಲ್ಲಿ ದಯವಿಟ್ಟು ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಕುಸಿತವನ್ನು ತಪ್ಪಿಸು.’ ಆಕೆ ತುಸು ಆಲೋಚಿಸಿ, ‘ಎಲ್ಲಿ, ನಿಮ್ಮ ಕಾಲನ್ನೊಮ್ಮೆ ತೋರಿಸಿ’ ಎಂದಳು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

>>ಅನೆಕ್ಡೋಟು
ಏನ್ರೀ ಹಿಂಗಂದ್ರೆ?

[quote]ಆಕೆ ಹೇಳಿದಳು, ‘ಕಾಲು ಮುರಿದಿದೆ, ಲಿಗಮೆಂಟುಗಳು ಹರಿದಿವಿ, ಮಂಡಿ ಚಿಪ್ಪು ಚೂರಾಗಿದೆ. ಅವನ್ನೆಲ್ಲ ಸರಿ ಪಡಿಸುವುದು ಅಸಾಧ್ಯ’[/quote]

[quote]ಆಕೆ ತುಸು ಆಲೋಚಿಸಿ, ‘ಎಲ್ಲಿ, ನಿಮ್ಮ ಕಾಲನ್ನೊಮ್ಮೆ ತೋರಿಸಿ’ [/quote]
ಮೊದಲನೆಯ ಹೇಳಿಕೆ ಕಾಲು ನೋಡದೇ ಹೇಳಿದ್ದೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>> >>ಅನೆಕ್ಡೋಟು
ಏನ್ರೀ ಹಿಂಗಂದ್ರೆ?

ಅದೇನೋ ಅಂತಾರೆ ಅನೆಕ್ ಡೋಟು ಅಂತ ನಮ್ಗೆ ಗೊತ್ತಿಲ್ಲದ ಭಾಷೆಯಲ್ಲಿ.

>>>ಮೊದಲನೆಯ ಹೇಳಿಕೆ ಕಾಲು ನೋಡದೇ ಹೇಳಿದ್ದೇ?

ಅತೀಂದ್ರಿಯವಾದಿಗಳ ಬಗ್ಗೆ ಹಾಗೆಲ್ಲ ನೋಡಿದರು, ಕೇಳಿದರು, ಮಾತಾಡಿದರು ಎಂದು ಇಂದ್ರಿಯಗಳ ಭಾಷೆಯಲ್ಲಿ ಮಾತಾಡಬಾರದು!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.