ಸ್ವಲ್ಪಾದ್ರೂ ಸೀರಿಯಸ್ ಆಗ್ರಿ- 1

5

ದೇವರ ಸಂಕಟ

ಅರವತ್ತು ವರ್ಷ ವಯಸ್ಸಾದ ಅಜ್ಜಿಯೊಬ್ಬಳು ರಸ್ತೆ ದಾಟುತ್ತಿರುವಾಗ ಆಕಾಶದಿಂದ ಧ್ವನಿಯೊಂದು ಮೊಳಗಿದಂತೆ ಕೇಳಿತು: “ನೀನು ನೂರು ವರ್ಷ ಬದುಕುತ್ತೀಯ.” ಅಜ್ಜಿ ತಲೆಯೆತ್ತಿ ನೋಡಿದಳು ಯಾರೂ ಕಾಣಲಿಲ್ಲ. ಎಲ್ಲ ತನ್ನ ಭ್ರಮೆ ಅಂದುಕೊಂಡು ಆಕೆ ರಸ್ತೆ ದಾಟಿದಳು.

ಮತ್ತೊಮ್ಮೆ ಸುಸ್ಪಷ್ಟವಾಗಿ ಧ್ವನಿಯು ಕೇಳಿತು: ‘‘ನಿನ್ನ ಆಯಸ್ಸು ನೂರು ವರ್ಷ”. ಈ ಬಾರಿ ಅಜ್ಜಿಗೆ ಅದು ದೇವರ ಅಭಯ ಎನ್ನುವುದು ಮನದಟ್ಟಾಯಿತು. ತನಗಿನ್ನೂ ಬದುಕುವುದಕ್ಕೆ ನಲವತ್ತು ವರ್ಷಗಳ ಕಾಲಾವಕಾಶವಿದೆ ಎಂದು ಖುಶಿಯಾದಳು.

ಕೂಡಲೆ ಆಕೆ ಪ್ಲಾಸ್ಟಿಕ್ ಸರ್ಜನ್ ಬಳಿ ತೆರಳಿ ತನ್ನ ಮುಖದ ಮೇಲಿನ ನೆರಿಗೆಗಳಿಗೆಲ್ಲಾ ಗತಿ ಕಾಣಿಸಿದಳು. ಅರವತ್ತು ವರ್ಷದ ಮುಪ್ಪನ್ನು ವೈದ್ಯ ವಿಜ್ಞಾನದ ನಾನಾ ಸಲಕರಣೆಗಳ ನೆರವಿನಿಂದ ಮರೆಯಾಗಿಸಿಕೊಂಡಳು. ಕೆನ್ನೆ ಹೇಮಾ ಮಾಲಿನಿಯದಾಯಿತು. ಇನ್ನು ನಲವತ್ತು ವರ್ಷ ಮಹಾರಾಣಿಯ ಬದುಕು ತನ್ನದು ಎಂದುಕೊಂಡು ಕ್ಲಿನಿಕ್ಕಿನಿಂದ ಹೊರ ಬಂದಳು.

ರಸ್ತೆ ದಾಟುವಾಗ ಬಸ್ಸೊಂದು ಢಿಕ್ಕಿ ಹೊಡೆದು ಆಕೆ ಪ್ರಾಣ ಬಿಟ್ಟಳು. “ನನಗಿನ್ನೂ ನಲವತ್ತು ವರ್ಷ ಆಯಸ್ಸಿದೆ ಎಂದಿದ್ದೆಯಲ್ಲ, ಈಗಲೇ ಕರೆದುಕೊಂಡದ್ದು ಯಾವ ನ್ಯಾಯ?” ದೇವರನ್ನು ದಬಾಯಿಸಿದಳು ಮುದುಕಿ.

ದೇವರು ಹೇಳಿದ, “ಹೋ ಅದು ನೀನೇನಾ, ನನಗೆ ಗುರುತೇ ಸಿಕ್ಕಲಿಲ್ಲ.”

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ರೀ ಅವರವತ್ತು ವರ್ಷದ ಹುಡ್ಗೀರನ್ನೆಲ್ಲಾ ಅಜ್ಜಿ ಅನ್ಬೇಡ್ರೀ, ಮಹಿಳಾ ಸಂಘದವರು ನಿಮ್ಮ ಮೇಲೆ ಮಾನ ನಷ್ಟ ಮೊಕದ್ದಮೆ ಹಾಕಿಯಾರು!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನ್ರಿ ಶಾಮಲ, ವಿನಯ, ಸೀರಿಯಸ್ ಆಗ್ರಿ ಅಂದ್ರೆ ಹೀಗೆ ಹಲ್ಲು ಕಿರಿದು ನಗ್ತೀರಿ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅವರನ್ನ ಕ್ಯಾಮೆರಾದಲ್ಲಿ ಸೆರೆಹಿಡಿಲಿಕ್ಕೋಗಿ ಪಾಲಚಂದ್ರರಿಗೇನಾದ್ರೂ..... ಅಲ್ಲಾ ಹಿಂದಿನ ಅನುಭವದ ಮಾತುಗಳಾ ಅಂತ ಒಂದು ಸಣ್ಣ ಸಂದೇಹ ಅಷ್ಟೇ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನಾಮಿಕರೇ,
ಏನ್ರೀ ಇದು ಒಂಚೂರು ಸೀರಯಸ್ನೆಸ್ ಇಲ್ಲ, ನಗೆ ಸಾಮ್ರಾಟರು "ಸ್ವಲ್ಪಾನಾದ್ರೂ ಸೀರಿಯಸ್ ಆಗ್ರಿ" ಅಂತ ಹೇಳಿದಾರೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂತಹ ಸಂದೇಹಗಳನ್ನು ಬಗೆಹರಿಸಲು ನಮ್ಮ ಚೇಲ ಕುಚೇಲನನ್ನು ನಿಮ್ಮಲ್ಲಿಗೆ ಅಟ್ಟುತ್ತೇವೆ ಬಿಡಿ. ಮಹಾನ್ ಪತ್ತೇಗಾರ ಆತ. ಕೊಲೆಗಾರನ ನಿಟ್ಟುಸಿರಿನ ವಾಸನೆ ಹಿಡಿದೇ ಆತನನ್ನು ಪತ್ತೆ ಹಚ್ಚಬಲ್ಲ ಚಾಣಾಕ್ಷ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಯ್ಯೋ ಹಿಂದೊಮ್ಮೆ ಹದಿನೆಂಟು ವರ್ಷದ್ ಅಜ್ಜಿಯರ್ನೆಲ್ಲಾ ಹುಡುಗೀರಾ ಅಂದು ಮಾನನಷ್ಟ ಮೊಕದ್ದಮ್ಮೆ ಹಾಕಿಸಿಕೊಂಡು ನರಳಿದ್ದೇವೆ ಗೊತ್ತೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್! ಸೀರಿಯಸ್ ಯಾವಾಗ ಕಲೀತೀರಿ ನೀವೆಲ್ಲಾ? :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.