ನಾಗೇಶ ಹೆಗಡೆಯವರ ಬೇಟಿ

0

ಸ್ನೇಹಿತರೇ ನಾವು ಸಮುದಾಯ ರೇಡಿಯೋ ಬಗ್ಗೆ ಆನೆಗುಂದಿಯಲ್ಲಿ ಜುಲೈ3 ಮತ್ತು 4 ರಂದು ಕಾರ್ಯಗಾರವನ್ನು ಮಾಡುತ್ತಿದ್ದೇವೆ. ಈ ಕಾರ್ಯಗಾರಕ್ಕೆ ಕರ್ನಾಟಕ ರಾಜ್ಯದ 22 ರಿಂದ 25 ಸಂಘ ಸಂಸ್ಥೆಗಳ ಪ್ರತಿನಿದಿಗಳು ಭಾಗವಹಿಸುತ್ತಾ ಇದ್ದಾರೆ. ಈ ಕಾರ್ಯಗಾರಕ್ಕೆ ವಾರ್ತಾ ಮತ್ತು ಪ್ರಚಾರ ಇಲಾಖೆಯ ನಿರ್ದೇಶಕರು, ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿಗಳು, ಹಂಪಿ ಪಾರಂಪರಿಕ ತಾಣದ ಕಮೀಷನರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಇದಕ್ಕಾಗಿ ಅಂತ ವಾರ್ತಾ ಮತ್ತು ಪ್ರಚಾರ ಇಲಾಖೆಯ ನಿರ್ದೇಶಕರನ್ನು ಬೇಟಿ ಮಾಡಿ ಅವರೊಟ್ಟಿಗೆ ಮಾತನಾಡುತ್ತಿರಬೇಕಾದ್ರೆ  ಅಲ್ಲಿಗೆ ನಾಗೇಶ ಹೆಗಡೆಯವರು ಬಂದರು. ಅವರನ್ನು ಸ್ವಲ್ಪ ಸಮಯ ಕೂರಲು ನಿರ್ದೇಶಕರು ತಿಳಿಸಿದರು. ಅದರಂತೆ ಅವರು ಕೂತರು ನಾವು ನಿರ್ದೇಶಕರೊಟ್ಟಿಗೆ ಚರ್ಚಿಸಿದ ನಂತರ ನಿರ್ದೇಶಕರೇ, ಹೆಗಡೆಯವರನ್ನು ಪರಿಚಯಿಸಿದರು. ನಾನು ಇದುವರೆಗೂ ಹೆಗಡೆಯವನ್ನು ಬೇಟಿ ಮಾಡುವುದಾಗಲಿ, ಮಾತನಾಡುವುದಾಗಲಿ ಮಾಡಿರಲಿಲ್ಲ ಇದೇ ಮೊದಲ ಬಾರಿಗೆ ಬೇಟಿ ಮಾಡಿದ್ದರಿಂದ ನಾನು ಸಂಪದ ಮೆಂಬರ್ , ಹರಿಪ್ರಸಾದ್ ನಾಡಿಗ್ ಪರಿಚಯ ಇದ್ದಾರೆ ಹಾಗೇ ಹೀಗೆ ಅಂತ ಸ್ವಲ್ಪ ಸಮಯ ಮಾತನಾಡಿ ಬಂದೆ. ಅವರು ನಮ್ಮ ಕಛೇರಿಗೆ ಒಮ್ಮೆ ಬರುವುದಾಗಿ ಸಹ ಹೇಳಿದರು ತುಂಬಾನೇ ಖುಷಿಯಾಯಿತು.

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.