ಗಾರ್ಡನ್ ಸಿಟಿನಾ.... ? ಮೆಟ್ರೋ ಸಿಟಿನಾ......??

0

ನಮಸ್ಕಾರ ಸ್ನೇಹಿತರೇ,

ನಮ್ಮ ಬೆಂಗಳೂರನ್ನ ಉದ್ಯಾನ ನಗರ ಅಂತ ಕರಿತಾರೆ, ಹೈಟಕ್ ಸಿಟಿ, ಸಿಲಿಕಾನ್ ಸಿಟಿ ಹೀಗೆಲ್ಲಾ ಕರಿತಾರೆ ಇತ್ತೀಚೆಗೆ ಮೆಟ್ರೊ ಸಿಟಿ ಅಂತ ಸಹ ಕರಿತಾ ಇದ್ದಾರೆ. ಅದರ ಬಗ್ಗೆ ನಿಮಗೆಲ್ಲಾ ಗೊತ್ತಿದೆ ಬಿಡಿ ಆದ್ದರಿಂದ  ನೇರವಾಗಿ ವಿಷಯಕ್ಕೆ ಬರ್ತೀನಿ. ಬೆಂಗಳೂರು ನಗರವನ್ನ ಉದ್ಯಾನ ನಗರ ಅಂತ ಕರೀತಾ ಇರುವುದಕ್ಕೆ ಕಾರಣ ಬೆಂಗಳೂರು ನಗರ ಹಚ್ಚ ಹಸರಾಗಿತ್ತು ಅದರಿಂದ ಈ ಹೆಸರು ಬಂತು ಆದ್ರೆ ಕಾಲ ಕ್ರಮೇಣ ರಸ್ತೆ ಅಗಲೀಕರಣ, ಕಟ್ಟಡಗಳ ನಿರ್ಮಾಣ ಇತ್ಯಾದಿ ಕಾರಣಗಳಿಂದ ಮರ ಗಿಡಗಳನ್ನೆಲ್ಲಾ ಕಡಿದಾಕ್ತಾ ಬಂದ್ರು, ಕಡೆಗೆ ಉಳಿದದ್ದು ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಆದ್ರೆ ಇದಕ್ಕೂ ಸಹ ಕೊಡಲಿ ಏಟು ಬಿದ್ದಿದೆ. ಈಗಾದ್ರೆ ಮುಂದಿನ ದಿನಗಳಲ್ಲಿ ಮರ ಗಿಡಗಳು ಕಾಣದಾಗ್ತಾವೆ. ಇವೆಲ್ಲಾವನ್ನು ನೋಡಿದಾಗ ಲಾಲ್ ಬಾಗಿನ ಪಾರಂಪರಿಕ ಮಹತ್ವವೊಂದಿರುವ ಮರಗಳನ್ನೆಲ್ಲಾ ಹಗಲು ದರೋಡೆ ಮಾಡುತ್ತಿದ್ದಾರೆ ಅನಿಸುವುದಿಲ್ಲವೇ.?

 

 

 

 

ಏಪ್ರಿಲ್ 13,14 ನೇ ತಾರೀಖಿನಂದು ಮೆಟ್ರೊ ನಿಲ್ದಾಣಕ್ಕೊಸ್ಕರ ಲಾಲ್ ಬಾಗ್ ನ 500 ಅಡಿಯಷ್ಟು ಗೋಡೆಯನ್ನು ಕೆಡವಿ, 5  ಮರಗಳನ್ನು  ನೆಲಕ್ಕೆ ಉರುಳಿಸಿದ್ದಾರೆ, ಇದೂ ಅಲ್ಲದೆ ಮೆಟ್ರೊ ನಿಲ್ದಾಣಕ್ಕೆ ಅಂತ ಲಾಲ್ ಬಾಗ್ ನಲ್ಲಿ 1135.8 ಚದರ ಮೀಟರ್ ನಷ್ಟು ಜಾಗವನ್ನು ಆಕ್ರಮಣ ಮಾಡಿಕೊಂಡಿದ್ದಾರ. ಇಲ್ಲಿ ಇನ್ನಷ್ಟು ಜಾಗವನ್ನು ಮುಂದಿನ ದಿನಗಳಲ್ಲಿ ನಿಲ್ದಾಣಕ್ಕೆ ಮತ್ತು ಮಹಡಿಗಳ ನಿರ್ಮಾಣಕ್ಕೆ ಅಂತ ಆಕ್ರಮಣ ಮಾಡಲಿದ್ದಾರೆ.

 

 

 

 

 

 

 

ನಂದ ರೋಡ್ ನಲ್ಲಿ  ಮೆಟ್ರೊ ಕಾಮಗಾರಿಯನ್ನು ಮಾಡಲು ಅನುಮತಿಯನ್ನು ಪಡೆಯುವಾಗ ರಸ್ತೆ ಪಕ್ಕ ಇರುವ ಕೆಲವು ಮರಗಳ ಕೊಂಬೆಗಳನ್ನು ಮಾತ್ರ ಕಡೆಯುವುದಾಗಿ ಹೇಳಿದ್ದಾರೆ. ಆದ್ರೆ RTI (ಮಾಹಿತಿ ಹಕ್ಕು) ಕಾಯಿದೆಯಿಂದ ಮಾಹಿತಿ ಸಂಗ್ರಹಿಸಿದಾಗ ಮುಂದಿನ ದಿನಗಳಲ್ಲಿ 323 ಮರಗಳನ್ನು ಕಡಿಯುತ್ತಾರೆ ಮತ್ತು 42 ಮರಗಳ ಕೊಂಬೆಗಳನ್ನು ಕಡಿಯುವ ಯೋಜನೆಯನ್ನು ಮಾಡಿದ್ದಾರೆ.

ಹೀಗೆ ಮಾಡುವುದರಿಂದ ಪಾರ್ಕಿನ ಜಾಗ ಮತ್ತು ಸಾಲು ಮರಗಳು ನಾಶವಾಗುತ್ತವೆ. BMRCL ಪ್ರಕಾರ ಇಂದಿರಾಗಾಂಧಿ ಮ್ಯೂಸಿಕಲ್  ಪೌಂಟನ್ ಮತ್ತು ಕಬ್ಬನ್ ಪಾರ್ಕಿನ ಜಮೀನನ್ನು ಸಹ ಪಡೆಯಲು ಯೋಜನೆಯನ್ನು ರೂಪಿಸಿದ್ದಾರೆ. ಈ ಯೋಜನೆಯ ಪ್ರಕಾರ ಇಲ್ಲೀಯೂ ಸಹ ನೂರಾರು ಮರಗಳ ಬುಡಕ್ಕೆ ಕೊಡಲಿ ಏಟು ಬೀಳಲಿದೆ. ಈ ರೀತಿಯಾಗಿ ಮಾಡುವುದರಿಂದ ಬೆಂಗಳೂರು ನಗರದ ಸೌಂದರ್ಯವನ್ನು ಕಳೆದುಕೊಳ್ಳುತ್ತೇವೆ.

 

ಇದಕ್ಕೆಲ್ಲಾ ವಿರೋಧವನ್ನು ವ್ಯಕ್ತಪಡಿಸಿ ಕೆಲವು ಸ್ವಯಂ ಸೇವಾಸಂಸ್ಥೆಗಳು, ಸಾರ್ವಜನಿಕರು ಲಾಲ್ ಬಾಗ್ ಬಳಿ ಮಾನವ ಸರಪಳಿಯನ್ನು  ಏಪ್ರಿಲ್ 15ಕ್ಕೆ ಹಮ್ಮಿಕೊಂಡಿದ್ದರು ಸುಮಾರು 300ಕ್ಕೂ ಹೆಚ್ಚು ಜನರು ಈ ಮಾನವ ಸರಪಳಿಯಲ್ಲಿ ಭಾಗವಹಿಸಿದ್ದರು. ಮತ್ತೆ ಲಾಲ್ ಬಾಗ್ ಬಳಿ ಏಪ್ರಿಲ್ 17 ನೇ ತಾರೀಖಿನಂದು ಸಂಜೆ 6 ಗಂಟೆಗೆ ಸಹ ಹಮ್ಮಿಕೊಂಡಿದ್ದಾರೆ ನೀವು ಸಹ ಭಾಗವಹಿಸಿ ಹಸಿರನ್ನು ಉಳಿಸಿ.

 

ಇದನ್ನೇಲ್ಲಾ ನೋಡಿದ್ರೆ ನಿಮಗೆ ಏನನಿಸತ್ತೆ ನಮ್ಮ ಬೆಂಗಳೂರು ಉದ್ಯಾನ ನಗರನಾ(ಗಾರ್ಡನ್ ಸಿಟಿ)......? ಮೆಟ್ರೊ ನಗರನಾ......?

 

 

ಮಾನವ ಸರಪಳಿಯ ಬಗ್ಗೆ ಮಿಡ್ ಡೇ ವರದಿ

ದಿ ಹಿಂದು ವರದಿ 

ಟೈಂಸ್ ಆಪ್ ಇಂಡಿಯಾ ವರದಿ

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಉದ್ಧಾರ ಮಾಡಬೇಕು ಎಂದರೆ ಕಾಲೆಳೆಯುತ್ತಾರೆ !
ಪ್ರಗತಿ ವಿರೋಧಿಗಳು.!!!
ಇದೆಲ್ಲ ಮಾಡ್ಲಿಲ್ಲ ಅಂದ್ರೆ ಸಾಫ್ತೆರು ಬೆಳೆಯೋದು ಹೆಂಗೆ ? ಫೋರಂ ಗೆ ಜನ ಬರೋದು ಹೆಂಗೆ ?
ನ್ಯಾನೋ ಗೆ ಜಾಗ ಸಾಲೋದು ಹೆಂಗೆ ?
ಇವ್ಯಾವು ಇಲ್ಲ ಅಂದ್ರೆ ರಾಜಕಾರಣಿಗಳಿಗೆ ರೊಕ್ಕ ಸಿಗೋದು ಹೆಂಗೆ ?
ಕಡಿಲಿ ಬಿಡಿ. ಕಬ್ಬನ್ ಪಾರ್ಕ್ ಕಡಿದು ಗಾಲ್ಫ್ ಕೋರ್ಸ್ ಮಾಡ್ಲಿ.
ಲಾಲ್ ಭಾಗ ಕಡಿದು ಮೆಟ್ರೋ ಮಾಡ್ಲಿ.
ಆಮೇಲೆ ಬೀದಿಗೊಂದು ೩೦ X ೬೦ ರ ಜಾಗದಲ್ಲಿ ವಾಕಿಂಗ್ ಗೆ ಪಾರ್ಕ್ ಮಾಡ್ತಾರೆ. ಇದು ಪ್ರಕೃತಿ ಪ್ರೇಮ ಅಲ್ವ ?
ನಿಮಗೆ ಹಸಿರು ಬೇಕು ತಾನೇ ? ಎಲ್ಲ ಬಿಲ್ದಿಂಗುಗಳಿಗೂ ಹಸಿರು ಬಣ್ಣ ಹೊಡೆಸಿ ಅಂತ ಆಜ್ಞೆ ಹೊರಡಿಸಿದರೆ ಆಯ್ತಪ್ಪ.
ಅದರ ಕಾಂಟ್ ರ್ಯಾಕ್ಟು ನಮ್ಮ ಮಂತ್ರಿ ಚೆಲಾನಿಗೆ ಸಿಗುತ್ತೆ. ಅವ್ರು ಬದುಕೋದು ಬೇಡವೆ ಪಾಪ ! ಒಂದು ಪರ್ಸೆಂಟು ಕಮಿಷನ್ ಮಂತ್ರಿಗೆ ಇನ್ನೊದು ಪರ್ಸೆಂಟು ಅಧಿಕಾರಿಗಳಿಗೆ. ಅವರೂ ಬದುಕಲಿ ಬಿಡಿ.
ನೀವು ಸರಪಳಿ ಮಾಡಿ ಎಷ್ಟು ಜನರ ಹೊಟ್ಟೆಗೆ ಕಲ್ಲು ಹಾಕ್ತಿದ್ದಿರಿ ನೋಡಿ!!!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮ್ಮ ಪ್ರತಿಕ್ರಿಯೆಗೆ ಧನ್ಯವಾದ ಹರ್ಷ್ ಸಾಲಿಮಠರವರೆ
ನಿಜ ಸಾರ್ ಪಾಪ ನಮ್ಮಂತವರಿಂದ ಎಷ್ಟು ಜನರ ಹೊಟ್ಟೆಗೆ ಕಲ್ಲು ಬೀಳ್ತಾ ಇದೆ. ;) ಏನೂ ಮಡೋದಕ್ಕೆ ಆಗೋದಿಲ್ಲ :)

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಯ್ಯಪ್ಪಾ ...!!‌ ಅದಕ್ಕಿಂತಲೂ ಮುಖ್ಯವಾಗಿ ನನ್ನ ತಲೆ ತಿನ್ನುವ ವಿಷಯ ಈ ಪ್ರತಿಭಟನೆ ಎಲ್ಲಾ ಇಂಗ್ಲಿಷ್ ಸ್ವತ್ತಾ.. ಆ ಮಕ್ಕಳ ಕೈ ಹೋರ್ಡಿಂಗ್ ನಲ್ಲೂ ಕನ್ನಡ ಇಲ್ವಲ್ಲಾ... ಒಂದು ಕಡೆ ಮೂಲಭೂತ ಸೌಕರ್ಯ ಇಲ್ಲಾ ಅಂತ ಗಲಾಟೆ ಮಾಡ್ತಾರೆ, ಇನ್ನೊಂದು ಕಡೆ ಮರ ಕಡೀಬೇಡಿ ಅಂತಾರೆ. ಹಿಂಗೇ ಆದ್ರೆ ಕನ್ನಡಿಗರ ಗತಿ ಏನು ಶಿವಾ..?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಾಥರವರೆ ಕನ್ನಡ, ಇಂಗ್ಲೀಷ್ ಎಲ್ಲಾನು ಇರಬೇಕ್ರಿ ಆಗ್ಲೆ ಜನರಿಗೆ ಅರ್ಥ ಆಗೋದು ಇಲ್ಲಂದ್ರೆ ಕಷ್ಟ ನಮ್ಮ ಬೆಂಗಳೂರು ಜನ ಕನ್ನಡ ಬಂದು ಬರದೋರ್ ಥರಾ ಆಡ್ತಾರೆ, ಮೂಲಭೂತ ಸೌಕರ್ಯಗಳನ್ನು ಮಾಡಲು ಮರಗಳನ್ನು ಕಡಿಯೋದಕ್ಕೆ ಹೇಳ್ತಾರ ? ನಿವು ಸಹ ಕನ್ನಡಿಗರೆ ಅಲ್ಲವಾ ಶಿವಾ...... ;)

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಿ.ಎಮ್.ಎಚ್ ರಸ್ತೆ ಸಂಪೂರ್ಣ ಬೋಳು ಬೋಳಾಗಿ ಮೆಟ್ರೋ ರೈಲಿನ ಪಿಲ್ಲರ್ಗಳು ಮಾತ್ರ ಕಾಣುತ್ತಿವೆ. ಹಾಗಂತ ಹೇಳಿ ಮೆಟ್ರೋ ನಿಲ್ಲಿಸಲು ಸಾಧ್ಯವಿಲ್ಲ. ವಾಹನ ದಟ್ಟಣೆಗೆ ಸಧ್ಯಕ್ಕೆ ಅದೊಂದೆ ಪರಿಹಾರ. ಇನ್ನೊಂದು ಸಲಹೆ ಎಂದರೆ ಟೈರ್-೩ (ಮೈಸೂರು, ಮಂಗಳೂರು, ಹುಬ್ಬಳ್ಳಿ..) ನಗರಗಳನ್ನು ಅಭಿವೃದ್ಧಿಗೊಳಿಸಿದರೆ ಬೆಂಗಳೂರು ಮೇಲಿನ ಒತ್ತಡ ಕಡಿಮೆ ಮಾಡಬಹುದು ಎಂಬುದು ನನ್ನ ಅಭಿಪ್ರಾಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್,
ಇದು ನಮ್ಮೆಲ್ಲರ ಮನಸ್ಸಿಗೆ ತುಂಬಾ ಬೇಸರ ನೀಡುತ್ತಿರುವ ವಿಚಾರ.
ಯೋಜನೆಗಳ ಅನುಷ್ಠಾನಕ್ಕೆ ಮೊದಲು ಒಳಿತು ಕೆಡುಕುಗಳ ಬಗ್ಗೆ ಸರಿಯಾದ ವಿಚಾರ ವಿನಿಮಯ, ಚರ್ಚೆ, ಇಲ್ಲದಿರುವುದರಿಂದ ಈ ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ.
ಬದಲಾವಣೆ ಬೇಕು ಆದರೆ, ಇದ್ದುದನ್ನು ಉಳಿಸಿಕೊಳ್ಳುವ ಬದಲಿ ವ್ಯವಸ್ಥೆಯನ್ನೂ ಯೋಚಿಸಬೇಕು.
ಹಾಗಾಗುತ್ತಿಲ್ಲ ಎನ್ನುವುದೇ ಖೇದಕರ ಸಂಗತಿ...
:-(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಛೇ - ಅಡ್ಡ ಕಸಬಿಗಳು ಅಧಿಕಾರದಲ್ಲಿದ್ರೆ ಇದೆ ಆಗೋದು. ಡಾ. ಡಿ.ವಿ.ಜಿ ಯಂತಹ ಸಾರ್ವಜನಕ ಹಿತಾಸಕ್ತಿಯಿರುವ ಒಬ್ಬ ನಾಗರೀಕನೂ ಇಲ್ಲವೇ ಈಗಿನ ರಾಜಕೀಯದಲ್ಲಿ? ವಿದೇಶದಲ್ಲಿ ಎಷ್ಟು ಕಡೆ ಮೆಟ್ರೋ ಹಾಕಿಲ್ಲ, ಮಾನೋರೇಲ್ ಹಾಕಿಲ್ಲ? ಅಲ್ಲೆಲ್ಲ ಸುತ್ತಲಿರುವ ಪರಿಸರಕ್ಕೆ ಧಕ್ಕೆ ಬಾರದಂತೆ ಈ ಪ್ರಾಜೆಕ್ಟ್ಗಳನ್ನ ಮಾಡ್ತಾರೆ. ಇವರು ಅದನ್ನು ನೋಡಿಬಂದು ಅರೆಬೆಂದ ಪ್ರಾಜೆಕ್ಟ್ಗಳ್ನ ಮಾಡಿ ಹಣಾನೂ ನಷ್ಟ ಮಾಡಿ permanent ಡ್ಯಾಮೇಜೂ ಮಾಡ್ತಾರೆ.

ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದಕ್ಕೆ ಕೆ.ಆರ್. ಪುರಂ ತೂಗು ಸೇತುವೆಯೇ ಸಾಕ್ಷಿ, ಶಿವ ಶಿವ ಎಷ್ಟು ಜಾಗ ತಿಂದಿದಾರೆ ಏನು ಕಥೆ ಉಪಯೋಗ ಮಾತ್ರ ೩೫% ಪಾಸ್ ಆಗಿದೆ ಅಷ್ಟೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಹೇಳಿದ್ದ್ಉ ನಿಜ ನರೇಂದ್ರರವರೇ ಇದೆಲ್ಲಾವನ್ನು ಹಾಗೇ ಬಿಟ್ರೆ ಬೆಂಗಳೂರನ್ನೇ ನುಂಗಿ ಹಾಕ್ತಾರೆ.

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.