ನಮ್ಮ ರಸ್ತೆ

0

ನಮ್ಮ ರಸ್ತೆ
ನಮ್ಮ ಬೆಂಗಳೂರನ್ನ ಹೈಟೆಕ್ ಸಿಟಿಯನ್ನು ಮಾಡುವ ಉದ್ದೇಶದಿಂದ ನಮ್ಮ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಂದಾಗಿರುವ ಸಂಗತಿ ನಿಮಗೆ ಗೊತ್ತಿರುವ ಸಂಗತಿಯೇ. ಇದರಿಂದ ಸಾರ್ವಜನಿಕರಿಗೆ ಮತ್ತು ವಾತಾವರಣದ ಮೇಲೆ ಎಷ್ಟು ದುಷ್ಪರಿಣಾಮ ಬೀರುತ್ತಿದೆ ಎಂದರೆ ಹೇಳುವುದಕ್ಕೆ ಒಂದಲ್ಲ ಎರಡಲ್ಲ ಸಾಕಾದಷ್ಟಿವೆ. ಇದರಲ್ಲಿ ಮುಖ್ಯವಾಗಿ ಹೇಳಬೇಕಂದ್ರೆ ರಸ್ತೆ ಅಗಲೀಕರಣದಿಂದ ರಸ್ತೆ ಪಕ್ಕದಲ್ಲಿ ಇದ್ದಂತಹ ಮರಗಳನ್ನೆಲ್ಲಾ ಕಟ್ ಮಾಡಿದ್ದಾರೆ. ಮರಗಳನ್ನು ಕಟ್ ಮಾಡ್ತಾ ಇರೋದ್ರಿಂದ,ಗಾರ್ಡನ್ ಸಿಟಿ ಎಂದು ಕರೆಸಿಕೊಳ್ಳುತ್ತಿದ್ದ ಬೆಂಗಳೂರು ನಗರ ತನ್ನ ಪ್ರಾಬಲ್ಯ ಕಳೆದುಕೊಳ್ಳುತ್ತಿದೆ. ಇದರ ಜೊತೆಗೆ ರಸ್ತೆ ಬದಿಯಲ್ಲಿ ಇರುತ್ತಿದ್ದ ಮನೆಗಳು ಅಂಗಡಿಮುಕ್ಕಟ್ಟುಗಳನ್ನೂ ರಸ್ತೆ ಅಗಲೀಕರಣದಿಂದ ಕಟ್ ಮಾಡುತ್ತಿದ್ದು ಇದರಿಂದ ನೂರಾರು ಜನರು ತಮ್ಮ ಜೀವನವನ್ನು ಕಳೆದುಕೊಳ್ಳುತ್ತಿದ್ದು ತುಂಬಾ ಕಷ್ಟ ಪಡುತ್ತಿದ್ದಾರೆ. ಬೆಂಗಳೂರಿನಲ್ಲಿ ರಸ್ತೆ ಅಗಲೀಕರಣವಾಗುತ್ತಿರುವ ಒಟ್ಟು ರಸ್ತೆಗಳು 132 ಅಂದರೆ ಯೋಚನೆ ಮಾಡಿ ಎಷ್ಟು ಜನರು ಬಿದಿಪಾಲಾಗುತ್ತಾರೆ? ಎಷ್ಟು ಮರಗಳ ಬುಡಕ್ಕೆ ಕೊಡಲಿ ಏಟು ಬಿಳತ್ತೆ?
ಸಿಎಂಎಚ್ ರಸ್ತೆಯಲ್ಲಿ ಹಾದುಹೋಗುವ ಬೆಂಗಳೂರು ಮೈಟ್ರೋ ರೈಲು ಮಾರ್ಗಓಲ್ಡ್ ಮದ್ರಾಸ್ ರಸ್ತೆಗೆ ಸ್ಥಳಾಂತರಿಸಿ ಎಂಬ ಮನವಿಗೆ ಕಡೆಗೂ ಮಾನ್ಯತೆ ಸಿಗಲಿಲ್ಲ. ಈ ರಸ್ತೆಯಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಹೊಟ್ಟೆಹೊರೆಯುತ್ತಿದ್ದ ವರ್ತಕರು ಈಗ ಬೀದಿಗೆ ಬಿದ್ದಿದ್ದಾರೆ.
ಸಿಎಂಎಚ್ ರಸ್ತೆ ಮೂಲಕ ಹಾದುಹೋಗುವ ಮೈಟ್ರೊ ರೈಲು ಮಾರ್ಗಕ್ಕೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡದ ಕಾರಣ ಯೋಜನೆ ಯಾವುದೇ ಅಭ್ಯಂತರವಿಲ್ಲದೆ ಮುಂದುವರಿಯುತ್ತಿದೆ.ಹಾಗಾಗಿ ಬಿಡುವಿಲ್ಲದ ವಾಣಿಜ್ಯ ಚಟುವಟಿಕೆಗಳ ತಾಣವಾದ ಇಂದಿರಾನಗರದ ಸಿಎಂಎಚ್ ರಸ್ತೆ ತನ್ನ ಹಳೆ ಖದರ್ ಕಳೆದುಕೊಂಡಿದೆ. ವ್ಯಾಪಾರಿಗಳಿಲ್ಲದೆ,ವಾಣಿಜ್ಯ ಮಳಿಗೆಗಳಿಲ್ಲದೆ ಸಿಎಂಎಚ್ ರಸ್ತೆ ಈಗ ಬಿಕೋ ಎನ್ನುತ್ತಿದೆ. ಈ ರಸ್ತೆಯಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಸಣ್ಣ ವ್ಯಾಪಾರಿಗಳಂತೂ ಬಿಕಾರಿಗಳಾಗಿದ್ದಾರೆ. ಇಂದಿರಾನಗರದ ಇತರ ಪ್ರದೇಶಗಳಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣಗಳು ತಲೆಯೆತ್ತುತ್ತಿವೆ. ಬಹಳಷ್ಟು ಗ್ರಾಹಕರು ಈ ರಸ್ತೆಗೆ ಹೊಂದಿಕೊಂಡಿದ್ದರು,ಮೆಟ್ರೊ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಲು ಸ್ಥಳ ಇಲ್ಲದಂತಾಗಿ ಜನ ಪರದಾಡುವಂತಾಗಿದೆ. ಒಟ್ಟಿನಲ್ಲಿ ಮೈಟ್ರೋ ಕಾಮಗಾರಿ ಅಡಿಯಿಟ್ಟ ಕಾರಣ ಸಿಎಂಎಚ್ ರಸ್ತೆಯಲ್ಲಿ ವರ್ತಕರಲ್ಲಿ ಸ್ಮಶಾಣ ಮೌನ ಆವರಿಸಿದೆ. ಇಂತದ್ದು ಬರೀ ಸಿ.ಎಂ.ಎಚ್ ರಸ್ತೆಯಲ್ಲಿ ಮಾತ್ರವಲ್ಲ ಹಲವಾರು ಪ್ರದೇಶಗಳಲ್ಲಿ ಇಂತದ್ದೆ ತೊಂದರೆಗಳು. ಇದನ್ನು ತಡೆಯುವ ಉದ್ದೇಶದಿಂದ Environment Support Group, CIVIC Bangalore and Alternative Law Forum ರವರು ಅಂಗಡಿಗಳ ವರ್ತಕರ ಜೊತೆಗೂಡಿ ರವರು ಅಂಗಡಿಗಳ ವರ್ತಕರ ಸಂಘಗಳು, ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘಗಳ ಜೊತೆಗೂಡಿ ಒಂದು ಕಾರ್ಯಗಾರವನ್ನು ಜುಲೈ 19 ರಂದು ಬೆಳಿಗ್ಗೆ 9:30 ಯಿಂದ ಸಂಜೆ 5:30 ರ ತನಕ ವಿದ್ಯಾದೀಪ, ಅಲಸೂರು ರಸ್ತೆಯಲ್ಲಿ ಏರ್ಪಡಿಸಿದ್ದರು. ನಾನು ಸಹ ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ ನನಗೆ ತುಂಬಾನೆ ಆಶ್ಚರ್ಯವಾಯಿತು ರಸ್ತೆ ಅಗಲೀಕರಣ ಮತ್ತು ಮೆಟ್ರೋದಿಂದ ಇಷ್ಟೊಂದು ತೊಂದರೆ ಆಗತ್ತಾ ಅಂತ. ಇಲ್ಲಿ ಭಾಗವಹಿಸಿದ್ದ ಎಲ್ಲಾ ತಂಡಗಳು, ಸಂಘ ಸಂಸ್ಥೆಗಳು ಸಹ ಆಗುತ್ತಿರುವ ನಷ್ಟಗಳ ಮತ್ತು ತೊಂದರೆಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನ ಸಂಗ್ರಹಿಸಿದ್ದರು. ಈ ಕಾರ್ಯಗಾರದಲ್ಲಿ ಹಲವಾರು ಸಂಘ ಸಂಸ್ಥೆಗಳು ಭಾಗವಹಿಸಿ ಹಲವಾರು ತೊಂದರೆಗಳ ಬಗ್ಗೆ ಚರ್ಚಿಸಿ ಕಡೆಗೆ ಹಲವಾರು ಯೋಜನೆಗಳನ್ನು ಸಹ ರೂಪಿಸಲಾಯಿತು ಅದರಂತೆ ಇದುವರೆಗೂ ಸುಮಾರು 3 ರಿಂದ 4 ಮೀಟಿಂಗ್ ಗಳನ್ನೂ ನಡೆಸಿ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಅವುಗಳಲ್ಲಿ ಮೊದಲನೇದಾಗಿ ರಸ್ತೆ ಅಗಲೀಕರಣವನ್ನು ವಿರೋದಿಸಿ ಅವಿನ್ಯೂ ರಸ್ತೆಯಲ್ಲಿ ಎಲ್ಲಾ ಅಂಗಡಿ ಮುಕ್ಕಟ್ಟುಗಳನ್ನೂ ಸಂಪೂರ್ಣ ಬಂದ್ ಮಾಡಿ ವಿರೋಧವನ್ನು ವ್ಯಕ್ತ ಪಡಿಸಿದರು ಈಗ ಇನ್ ಪಂಟ್ರೀ ರಸ್ತೆಯಲ್ಲಿ ಸಹ ಬಂದ್ ಮಾಡಿ ವಿರೋಧವನ್ನು ವ್ಯಕ್ತ ಪಡಿಸುವುದರ ಜೊತೆಗೆ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಇದರ ಜೊತೆಗೆ ನೂರಾರು ವರ್ಷಗಳ ಇತಿಹಾಸ ಇರುವಂತಹ ಅಂಗಡಿಗಳು, ಮನೆಗಳು ಇದ್ದು ಇವರುಗಳ ಅವರಲ್ಲಿ ಇರುವಂತಹ ಹಳೆಯ ಪೋಟೋಗಳನ್ನು ತಂದು ಪ್ರದರ್ಶನಕ್ಕೆ ಇಡುತ್ತಿದ್ದಾರೆ ಸದ್ಯದಲ್ಲಿಯೇ.
ಇವರ ಉದ್ದೇಶ ಏನಂದರೆ ರಸ್ತೆಯನ್ನು ಸಾರಿಗೆಗೆ ಮಾತ್ರ ಬಳಸುತ್ತಿಲ್ಲ ಎಷ್ಟೋ ಜನ ಅದರಿಂದ ಜೀವನ ಸಾಗಿಸುತ್ತಿದ್ದಾರೆ, ಎಷ್ಟೋ ಜನ ವಾಸವನ್ನು ಮಾಡುತ್ತಿದ್ದಾರೆ ಅದ್ದರಿಂದ ರಸ್ತೆ ಅಗಲೀಕರಣ ಮಾಡುವುದು ಬೇಡ ಅನ್ನೋದು. ಇದಕ್ಕೆ ನೀವ್ ಏನಂತೀರಿ..........

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.