ಸಂಪದದಲ್ಲಿ ಯಾಕೆ ಹೀಗೆ....?

0

ಸಂಪದ.ನೆಟ್ ಕನ್ನಡಿಗರಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ಕಾರಣ ಏನಪ್ಪ ಅಂದ್ರೆ , ಇಲ್ಲಿ ಬ್ಲಾಗ್, ಲೇಖನಗಳು, ಚರ್ಚೆ, ಕವನಗಳು, ಚಿತ್ರಪಟಗಳು, ನುಡಿಮುತ್ತುಗಳು, ನಮ್ಮ ಸುತ್ತಮುತ್ತ ನಡೆಯುವ ಕಾರ್ಯಕ್ರಮಗಳು ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆಯಲು, ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಚರ್ಚಿಸಲು ಒಂದು ಸಮರ್ಥ ವೇದಿಕೆಯಾಗಿದೆ ನಮ್ಮ ಈ ಸಂಪದ . ಈ ವೇದಿಕೆಯಲ್ಲಿ ಸಾವಿರಾರು ಜನರು ತಮ್ಮೆಲ್ಲ ಕೆಲಸ ಕಾರ್ಯಗಳ ನಡುವೆಯೂ ಅತ್ಯಂತ ಪ್ರೀತಿಯಿಂದ ಭಾಗವಹಿಸುತ್ತಿದ್ದಾರೆ. ಭಾಗವಹಿಸುವುದರ ಜೊತೆಗೆ ಬೇರೆ ಬೇರೆ ಭಾಗಗಳಲ್ಲಿ ಇರುವಂತಹ ಎಷ್ಟೋ ಜನರು ಸ್ನೇಹಿತರಾಗಿದ್ದಾರೆ.

ಹೀಗಿರುವಾಗ ಕೆಲವರು, " ನಾನು ಸಂಪದಕ್ಕೆ ಗುಡ್ ಬೈ ಹೇಳ್ತೀನಿ, ನಾನು ಇನ್ನು ಸಂಪದದಲ್ಲಿ ಬರೆಯೋದಿಲ್ಲ, ಸಂಪದ ಸಹವಾಸವೇ ಬೇಡ, ಸಂಪದದಲ್ಲಿ ಇನ್ನು ಸ್ವಲ್ಪ ದಿನ ಬರೆಯೋದಿಲ್ಲ" ಅಂತ ಹೇಳ್ತಾರೆ. ಸಂಪದ ಏನ್ ಮಾಡಿದೆ ? ಸಂಪದದಲ್ಲಿ ಬರೆಯುವವರು ಸರಿಯಾದ ರೀತಿಯಲ್ಲಿ ಮನಸ್ಸಿಗೆ ಬೇಸರವಾಗದ ಬರೆಯಬೇಕು. ಕಾಮೆಂಟ್ ಹಾಕುವವರು ಸಹ ಕಾಮೆಂಟ್ ಹಾಕಿದ್ರೆ ಅದರಿಂದ ಲೇಖಕರ ಮನಸ್ಸಿನ ಮೇಲೆ ಏನು ಪರಿಣಾಮ ಬೀರತ್ತೆ ಅಂತಲೂ ಸಹ ಯೋಚಿಸಬೇಕು. ಯಾಕೆ ಅಂದ್ರೆ ಸಂಪದ ಒಂದು ದೊಡ್ಡ ಕುಟುಂಬ ಇದ್ದ ಹಾಗೆ . ಅಪ್ಪ, ಅಮ್ಮ, ಅಕ್ಕ, ಅಣ್ಣ, ತಮ್ಮ, ತಂಗಿ ಹೀಗೆ ಎಲ್ಲರೂ ಇರ್ತಾರೆ. ನಮ್ಮ ಮನೆಯಲ್ಲಿ ನಾವು ನಾವೇ ಕಿತ್ತಾಡಿಕೊಂಡ್ರೆ ಆಗತ್ತಾ... ನಾವೆಲ್ಲರೂ ಸಹ ಒಂದು ಒಂದು ಮನೆಯವರು , ಅದರಲ್ಲೂ ಸಹ ಕನ್ನಡಿಗರು ಅನ್ನೋ ಭಾವನೆ ನಮ್ಮಲ್ಲಿ ಮೂಡಬೇಕು. ನನಗಂತೂ ಸಂಪದದಲ್ಲಿ ಇದ್ದಷ್ಟು ಸಮಯ ತುಂಬಾನೆ ಖುಷಿಯಿಂದ ಇರ್ತೀನಿ. ನನಗೆ ಸಂಪದ ಒಬ್ಬ ಗೆಳೆಯನ ಥರಾ...ಒಬ್ಬ ಮಾರ್ಗದರ್ಶಕನ ಥರಾ.... ಒಬ್ಬ ಗುರುವಿನ ಥರಾ....

ನಾನು ಕಂಪ್ಯೂಟರ್ ನಲ್ಲಿ ಕೆಲ್ಸ ಮಾಡುತ್ತಿದ್ದಷ್ಟು ಸಮಯ, ಇಂಟರ್ನೆಟ್ ಬಳಸುತ್ತಿರುವಷ್ಟು ಸಮಯ, ಸಂಪದ ಓಪನ್ ನಲ್ಲಿ ಇರತ್ತೆ. ನಾನೇನಾದ್ರು ಒಂದು ಅಥವಾ ಎರಡು ದಿನ ನೆಟ್ ಓಪನ್ ಮಾಡಿಲ್ಲ ಅಂದ್ರೆ , ಅಕಸ್ಮಾತ್ ಸಂಪದ ಓಪನ್ ಆಗಿಲ್ಲ ಅಂದ್ರೆ, ಏನನ್ನೋ ಕಳೆದುಕೊಂಡ ಹಾಗೆ ಭಾಸವಾಗತ್ತೆ ! ಕೂಡಲೆ ಹರಿಪ್ರಸಾದ್ ನಾಡಿಗ್ ರವರಿಗೆ ಅಥವಾ ಓಂಶಿವಪ್ರಕಾಶ್ ರವರ ಗಮನಕ್ಕೆ ತಂದು ಸರಿಪಡಿಸೋ ತನಕ ಕಾಯ್ತಾ ಇರ್ತೀನಿ. ಇದು ನನಗೆ ಸಂಪದ ಮೇಲೆ ಇರೋ ಪ್ರೀತಿ ಅಂತ ನನ್ನ ಭಾವನೆ.

ಹೀಗಿರುವಾಗ ಸಂಪದದಲ್ಲಿ ನಾವೇಕೆ ಕಿತ್ತಾಡಬೇಕು, ಮನಸ್ಸಿಗೆ ಬೇಸರ ತರಿಸಬೇಕು. ಯಾರ್ಯಾರೋ, ಎಲ್ಲಿಂದಲೊ ಸಂಪದಕ್ಕೆ ಬರ್ತಾರೆ ಬಂದಾಗ ಸಂಪದ ನೋಡಿ , ಸಂಪದ ಬಳಗ ನೋಡಿ ಬೇಸರ ಪಡಬಾರದು, ಖುಷಿಪಡಬೇಕು...ನಾವೂ ಸಂಪದಿಗರಾಗೋಣ ಅಂತ ಉತ್ಸುಕರಾಗಬೇಕು.... ! ಹಾಗೆ ನೋಡಿದವರು ಅಂದುಕೊಳ್ಳುವ ಹಾಗೆ ನಾವು ನಡೆದುಕೊಳ್ಳಬೇಕು. ಗೆಳೆಯರೇ, ಇದು ಕೇವಲ ನನ್ನ ಅನಿಸಿಕೆ ಮಾತ್ರ . ಯಾರನ್ನೆ ಆಗಲಿ ನೋಯಿಸಬೇಕು ಅನ್ನೋ ಭಾವನೆಯಿಂದಾಗಲಿ, ಒಬ್ಬರನ್ನು ಹಿಯ್ಯಾಳಿಸಿಯಾಗಲಿ ಬರೆದಿದ್ದಲ್ಲ . ಇದರಿಂದ ಯಾರ ಮನಸ್ಸಿಗಾದರೂ ಬೇಸರವಾದರೆ ದಯಮಾಡಿ ನನ್ನನ್ನು ಕ್ಷಮಿಸಿ........

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಖತ್...
ನಂದೂ ಅಟೇಯಾ...
:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:D

ಪ್ರತಿಕ್ರಿಯೆಗೆ ನನ್ನಿ

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್ , ಎಲ್ಲರೂ ಹೀಗೆ ಅಂದ್ಕೊಂಡ್ರೆ ಎಲ್ಲರೂ ಆರಾಮಾಗಿರಬಹುದು...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಚೇತನ್ ........

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್, ನಿಮ್ಮ ಅಭಿಪ್ರಾಯ ಚೆನ್ನಾಗಿದೆ. ಎಲ್ಲರೂ (ನನ್ನಂತೆ ಲೇಖನಗಳನ್ನು ಬರೆಯಲು ಬರದಿರುವವರು) ನಮ್ಮದೇ
ಅಭಿಪ್ರಾಯ ಎನ್ನಬಹುದಾಗಿದೆ.
ಎಲ್ಲರ ಹುಟ್ಟು ಹಬ್ಬಗಳನ್ನು ನೆನಪಿನಲ್ಲಿಟ್ಟುಕೊಂಡಿರುವುದೇ ಅಲ್ಲದೇ ಎಲ್ಲರಿಗೂ ಶುಭಾಶಯಾಗಳನ್ನೂ ಕವನ ಬರೆದು ಜೊತೆಗೆ ಚಿತ್ರಗಳನ್ನೂ ಹಾಕಿರುತ್ತೀರಿ. ನೋಡಿ ತುಂಬಾ ಖುಷಿಯಾಯಿತು. ನಿಮ್ಮ ಬ್ಲಾಗ್ನಲ್ಲಿ ಇ-ಅಂಚೆ ಅವಕಾಶ ಇದೆಯೇ ಅಂತ ಹುಡುಕುತ್ತಿದ್ದೆ. ಮತ್ತೊಂದು ಲೇಖನ ಬರೆದದ್ದು ನನಗೆ ಈ ಪ್ರತಿಕ್ರಿಯೆ ನೀಡಲು ಅನುಕೂಲವಾಯಿತು. ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮ್ಮ ಪ್ರತಿಕ್ರಿಯೆಗೆ ಧನ್ಯವಾದ ಅಂಬಿಕಾವರೆ..
ಲೇಖಕರನ್ನು ಸಂಪರ್ಕಿಸಿ ಅನ್ನೋದನ್ನ ಕ್ಲಿಕ್ ಮಾಡಿದ್ರೆ ಅಲ್ಲಿಂದ ಸಂದೇಶವನ್ನು ಕಳುಹಿಸಬಹುದು...

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹಳ ಚೆನ್ನಾಗಿ ಬರೆದಿದ್ದೀರಿ ನಾಗ್ರಾಜ್ ... ನನ್ನ ಅಭಿಪ್ರಾಯ ಕೂಡಾ ಇದೇ ಆಗಿತ್ತು .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಭವಾನಿ ಲೋಕೇಶ್ ರವರೆ......ಎಲ್ಲರೂ ಸಹ ಸಂಪದದಲ್ಲಿ ನಗುನಗುತ್ತಾ ಇರಬೇಕು ಅನ್ನೋ ಆಸೆ ನಂದು.

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ನಾಗರಾಜ್ ಅವರಿಗೆ

ಹೌದು ಸಂಪದ ಒಂದು ದೊಡ್ಡ ಕುಟುಂಬದ ಹಾಗೆ. ನನಗಂತೂ ಇಲ್ಲಿಗೆ ಬಂದಾಗಿನಿಂದ ತುಂಬಾ ಸಂತೋಷವಾಗಿದೆ. ಹೊಸ ಹೊಸ ವಿಚಾರಗಳನ್ನು ತಿಳಿದು, ಹೊಸ ಸ್ನೇಹಿತರನ್ನು ಪಡೆದು, ಮನ ತೆರೆದು, ಭಾವನೆಗಳನ್ನು ಹಂಚಿಕೊಂಡು, ಸುಖವಾಗಿದ್ದೇನೆ. ಒಂದು ದಿನ ಸಂಪದ ನೋಡದಿದ್ದರೂ ನನಗೆ ಬೇಸರವಾಗತ್ತೆ. ಸಂಪದದ ಎಲ್ಲಾ ಮಿತ್ರರಿಗೂ ನನ್ನ ಧನ್ಯವಾದಗಳು.

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಶ್ಯಾಮಲರವರೇ...
ನೀವು ಹೇಳಿದ್ದು ನಿಜ ನಾನು ಪ್ರತಿ ನಿತ್ಯಲೂ ಸಂಪದ ಬಳಗದವರ ಜೊತೆ ಚಾಟ್ ಮಾಡ್ತಾ ಅಥವಾ ಪೋನ್ ಮಾಡ್ತಾ ಮಾತಾಡ್ತಾ ಇರ್ತೀನಿ, ನನಗೆ ತುಂಬಾನೇ ಸಂತೋಷಾವಾಗತ್ತೆ ಕಾರಣ ನನಗೆ ಸ್ನೇಹಿತರು ಜಾಸ್ತಿ ಆದ್ರು ಅನ್ನೋ ಭಾವನೆಯಿಂದ......

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote]ನನಗಂತೂ ಸಂಪದದಲ್ಲಿ ಇದ್ದಷ್ಟು ಸಮಯ ತುಂಬಾನೆ ಖುಷಿಯಿಂದ ಇರ್ತೀನಿ. ನನಗೆ ಸಂಪದ ಒಬ್ಬ ಗೆಳೆಯನ ಥರಾ...ಒಬ್ಬ ಮಾರ್ಗದರ್ಶಕನ ಥರಾ.... ಒಬ್ಬ ಗುರುವಿನ ಥರಾ.... [/quote]

ನಿಜಾರೀ ನಾಗರಾಜ್ ನಂಗೂ ಹಾಗೆ ಅನ್ಸತ್ತೆ.

ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಶ್ಯಾಮಲಾರವರೆ.. ಹಾಗೆ ಇರಬೇಕು ಇಲ್ಲಂದ್ರೆ ಮನಸ್ಸಿಗೆ ನೆಮ್ಮದಿ ಸಿಗಲ್ಲ

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲಾ ಸರಿ.
ಆದರೆ ಬೇಸರ ಆಗೋದು ತುಂಬಾ ರಿಲೇಟಿವ್. ಒಬ್ಬೊಬ್ಬರು ಒಂದೊಂದು ಮಾತಿಗೆ ತಲೆ ಕೆಡಿಸಿಕೊಳ್ಳುತ್ತಾರೆ. ಎಲ್ಲಾರನ್ನೂ ಮೆಚ್ಚಿಸಿ ಬರೆಯೋದು ಅಸಾಧ್ಯ.
(ಬೇಕಿದ್ದರೆ ಬರೆದ ಬರಹಗಳಿಗೆಲ್ಲಾ "ಆಹಾ ಚೆನ್ನಾಗಿದೆ" ಅಂತ ಒಂದು ಕಾಮೆಂಟು ಹಾಕಬಹುದು. ಅದನ್ನೂ sarcastic ಆಗಿ ಯಾರೋ ಅರ್ಥಮಾಡಿಕೊಂಡು ಗೋಳಾಡಬಹುದು)
ಜಗಳ ಕದನಗಳು ಒಂದು online forum ನಲ್ಲಿ ಸಾಮಾನ್ಯ. ಅದಕ್ಕೆಲ್ಲಾ ಸೊಪ್ಪು ಹಾಕದೇ ಇದ್ದರೆ ಆಯಿತು. ಬೇಸರ ತರುವಂತಹ ಮಾತು/ಬರಹ/ಚರ್ಚೆ ಇಲ್ಲದ "utopia" ಮರೀಚಿಕೆ ಅಷ್ಟೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ ಶ್ರೀನಿಧಿ ಯವರೆ
ನೀವು ಹೇಳಿದ ಹಾಗೆ ಎಲ್ಲಾನೂ ಇರಬೇಕು ಆದ್ರೆ ಎಷ್ಟರಮಟ್ಟಿಗೆ ಜನರ ಮನಸ್ಸಿಗೆ ಬೇಸರವನ್ನುಂಟು ಮಾಡೊದಿಲ್ಲವೋ ಾಲ್ಲಿತನಕ ಓಕೆ ಅತಿಯಾದರೆ ತುಂಬಾನೇ ಕಷ್ಟ ಅಲ್ವಾ.....?

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೇಸರ ಬರದಂತೆ ಬರೆಯೋದು ಸಾಧ್ಯ ಇಲ್ಲ ಅಂತಾನೇ ನಾನು ಹೇಳಿದ್ದು. ಬೇಸರ ಆಗದಂತೆ ನಾವು ಓದಿಕೊಳ್ಳಬೇಕು ಅಷ್ಟೇ. ಮತ್ತೆ ಅತಿ ಅನ್ನೋದು ರಿಲೇಟಿವ್!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜರೆ ನಿಮ್ಮಿಂದ ಉತ್ತಮ ಬರಹ. ಹಾಗೆ ಶ್ರೀನಿಧಿಯವರ ಪ್ರತಿಕ್ರಿಯೆಗೆ ನನ್ನ ಸಹಮತವಿದೆ. ಎಲ್ಲವೂ ರಿಲೇಟಿವ್ ಅಷ್ಟೆ. ಕುಹಕವೆನ್ನುವ(ಇದು ಕೂಡ ರಿಲೇಟಿವ್) ಲೇಖನವನ್ನು ಓದಲೇಬೇಡಿ. ಬರಹಗಳು ಎಲ್ಲರ ಅಭಿಪ್ರಾಯವಾಗಬೇಕೆಂದಿಲ್ಲ. ಕಮೆಂಟ್ ಗಳ ಯುದ್ದದ್ದಲ್ಲಿ ಹೊಸ ವಿಚಾರ ಬರುವುದಕ್ಕಿಂತ ನೆಮ್ಮದಿ ಹಾಳಾಗುವುದೇ ಹೆಚ್ಚು :).

ಮೇಲಿನದು ನನ್ನ ಅನಿಸಿಕೆ ಅಷ್ಟೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಿಯಾಗಿ ಹೇಳಿದ್ರಿ ಆಚಾರ್ರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್,
ಕೆಲವೊಮ್ಮೆ ಇಲ್ಲಿ ಇದ್ದೂ ಇಲ್ಲಿ ಇಲ್ಲದಂತಿರುವ ಅಭ್ಯಾಸ ಮಾಡ್ಕೊಳ್ಳಿ, ಅಷ್ಟೆ.
ಇದೊಂದು ತರ ಯೋಗಭ್ಯಾಸ ಮಾಡಿದ ಹಾಗೆ ಆಗುತ್ತೆ. ತಮ್ಮೆಲ್ಲಾ ಬೇಸರ, ಕೋಪ, ರೋಷ, ಎಲ್ಲವನ್ನೂ ಹದ್ದು ಬಸ್ತಿನಲ್ಲಿ ಇಡೋದಕ್ಕೆ ಅಭ್ಯಾಸ ಮಾಡುವತ್ತ ಇದು ಸಹಕಾರಿಯಾಗುತ್ತದೆ. ಮುಂದೊಂದು ದಿನ ನೀವು ಈ ಸಂಪದದ ಸಹಾಯದಿಂದ ಯೋಗಿ ಆಗಿ ಬಿಡ್ತೀರಿ.
ಯಾವಾ ಗುರೂಜಿಗಳ ಅಥವಾ ಬಾಬಾಗಳ ಶಿಬಿರಕ್ಕೂ ಹೋಗ ಬೇಕಾಗಿಲ್ಲ...
:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗ್ಡೆಸಾರ್ ನಾನು ಇದೇ ತತ್ವವನ್ನ ಬಳಸ್ತಾ ಇದ್ದೀನಿ.... ;)
ನನಗೆ ಯಾವುದೇ ವಿಧವಾಗಿ ಯಾರ ಮೇಲು ಸಹ ಬೇಸರ ಇಲ್ಲ, ನನ್ನನು ಯಾರೂ ಸಹ ಬೇಸರ ಪಡಿಸಿಲ್ಲ ಸಂಪದದಲ್ಲಿ ನಡೆಯುತ್ತಿರುವುದನ್ನ ಬರೆದೆ ಅಷ್ಟೆ :)

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್,
ನಿಜ, ನಾವೆಲ್ಲಾ ಒಂದು ಕುಟುಂಬ. ನಾನಂತೂ ಸಂಪದ ನೋಡದೆ ಇರಲಾರೆ. ಬಹಳ ಆಕ್ಟೀವ್ ಆಗಿದ್ದ ಸುಪ್ರೀತನ ಮೌನ ನನಗೆಷ್ಟು ದು:ಖ ತರೆಸಿದೆ, ಗೊತ್ತಾ? ಬುದ್ಧಿಯ ಮೇಲುಗೈ ಆದಾಗ ಗೊಂದಲ ಉಂಟಾಗುತ್ತದೆ.
ಒಂದು ಸ್ಪಷ್ಟ ಪಡಿಸ ಬಯಸುವೆ.ಸಂಪದದಲ್ಲಿ ವೈಚಾರಿಕ ಯುದ್ಧ ಕೆಲವು ಭಾರಿ ನಡೆಯುತ್ತೆ. ಅದರಿಂದ ಹೊರಹೊಮ್ಮುವ ನವನೀತವನ್ನು ಅನುಭವಿಸಬೇಕು. ನಾನಂತೂ ಭಾವುಕ. ಆದರೆ ವೈಚಾರಿಕವಾಗಿ ಗಟ್ಟಿ ಇರುವ ಜನರಿದ್ದಾರೆ.ಅವರುಗಳ ಪ್ರತಿಕ್ರಿಯೆಗಳನ್ನು ಗಮನಿಸ ಬೇಕು, ಅದೆಷ್ಟು ನಮಗೆ ತಿಳಿಯದ ವಿಚಾರ ಅದರಿಂದ ಹೊರ ಬರುತ್ತೆ! ಇದು ಸಂಪದದ ಕೊಡುಗೆ. ಯಾರೂ ಸಂಪದ ಬಿಟ್ಟಿರಲಾರರು. ಆದರೆ ಮತ್ತೊಬ್ಬರಿಗೆ ಮನಸ್ಸಿಗೆ ನೋವುಂಟಾಗುವಂತೆ ಬರೆಯುವುವುದನ್ನು ನಿಲ್ಲಿಸಿದರೆ ಒಳ್ಳೆಯದು. ಇಲ್ಲವಾದರೆ ಮುಂದಾದರೂ ಪಶ್ಚಾತ್ಥಾಪ ಪಡಬೇಕಾಗುತ್ತದೆ. ಇದು ನನ್ನ ಕಳಕಳಿಯ ವಿನಂತಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮ್ಮ ಪ್ರತಿಕ್ರಿಯೆಗೆ ಧನ್ಯವಾದ ಶ್ರೀಧರ್ ಸಾರ್..
ಸುಪ್ರಿತ್ ರವರ ವಿಚಾರವಾಗಿ ನಾನೇನು ಮಾತನಾಡಲಾರೆ ಸಂಪದದಲ್ಲಿ ಸುಪ್ರಿತ್ ವಿಚಾರವಾಗಿ ಏನನ್ನೂ ಬರೆಯಲು ಹೋಗಬೇಡಿ ಅವರ ಮಿಂಚಂಚೆಗೆ ಹಾಕಿ ;)

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್...
ಸಂಪದ ನನ್ನ ಆತ್ಮೀಯ ಗೆಳತಿ, ನಿಮಗೆ ಗೆಳೆಯ ಅವರವರ ಭಾವಕ್ಕೆ, ಚೆನ್ನಾಗಿ ಬರೆದಿದ್ದೀರಿ. ನನ್ನ ಅಭಿಪ್ರಾಯವೂ ಕೂಡ ಅದೇ ಆಗಿದೆ.

ಸೀತ ಆರ್. ಮೊರಬ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು.....

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಲೇಖಕರನ್ನು ಸಂಪರ್ಕಿಸಿ ಅನ್ನೋದನ್ನ ಕ್ಲಿಕ್ ಮಾಡಿದ್ರೆ ಅಲ್ಲಿಂದ ಸಂದೇಶವನ್ನು ಕಳುಹಿಸಬಹುದು.....>>
ನಾಗರಾಜ್,
ಹೊಸ ಪ್ರತಿಕ್ರಿಯೆ ಬರೆಯಿರಿ, ನಿರ್ವಾಹಕರ ಗಮನಕ್ಕೆ ತನ್ನಿ. ಎಂಬ ಎರಡು ಅಂಶಗಳು ತಿಳಿಯಿತು. ನೀವು ಹೇಳಿದಂತೆ ಲೇಖಕರನ್ನು ಸಂಪರ್ಕಿಸಿ ಈ ವಿಷಯ ಎಲ್ಲಿದೆಯೋ ತಿಳಿಯಲಿಲ್ಲ. ನಿರ್ವಾಹಕರೆಂದರೆ ಸಂಪದದ ನಿರ್ವಾಹಕರಲ್ಲವೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಅಂಬಿಕಾರವರೆ ನಿರ್ವಾಹಕರೆಂದರೆ, ಸಂಪದ ನಿರ್ವಾಹಕರೆ ಅಲ್ಲಿ ಲೇಖಕರನ್ನು ಸಂಪರ್ಕಿಸಿ ಇರಬೇಕು ಆದ್ರೆ ಈ ಬ್ಲಾಗ್ ನಲ್ಲಿ ನಾಪತ್ತೆಯಾಗದೆ. :( ಕಾರಣ ನನಗೂ ಗೊತ್ತಿಲ್ಲ. ನನ್ನ ಬೇರೆಲ್ಲಾ ಬ್ಲಾಗ್ ಗಳಲ್ಲಿ ಇದೆ ಬೇಕಾದ್ರೆ ಅಲ್ಲಿಂದಲೇ ಸಂಪರ್ಕಿಸಿ :)

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಪುಟದಲ್ಲೂ ಅದು ಇದೆ ಕಣ್ರೀ.
ನಿಮ್ಮ ಬ್ಲಾಗಿನಲ್ಲಿ "ಹೊಸಪ್ರತಿಕ್ರಿಯೆ ಸೇರಿಸಿ " ಅಂತ ಬರೆದಿದೆ ಅಲ್ಲ ಅದರ ಕೆಳಗೆ ಇದೆ. ಬಹುಷ:, ನೀವೇ ಲೇಖಕರಾದುದರಿಂದ, ಅದು ನಿಮಗೆ ತೋರಿ ಬರುವುದಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲ ಹೆಗ್ಡೆಸಾರ್ ಇಷ್ಟೊತ್ತು ಇರಲಿಲ್ಲ ಆಗಲೆ ಹುಡುಕಿದೆ ಈಗ ಬಂದಿದೆ ಅದು ಹೇಗೆ ಅಂತ ಗೊತ್ತಾಗ್ತಾ ಇಲ್ಲ :(

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತಮ ಸಲಹೆ ನಾಗರಾಜ್....
....ಪ್ರತಿಕ್ರಿಯೆಗಳನ್ನು ಓದುತ್ತಿದ್ದ ಹಾಗೆ..
ಕ೦ಡಬ೦ದ ಒಟ್ಟು ಅಭಿಪ್ರಾಯಗಳು....
ನಿಮ್ಮ ಸಲಹೆಯನ್ನು ಅನುಮೋದಿಸುತ್ತವೆ..
ನಾನೂ ಕೂಡ ಅನುಮೋದಿಸುತ್ತೇನೆ...
ಆದರೆ ಬೌದ್ದಿಕ ಮಟ್ಟವನ್ನು ಹೆಚ್ಚಿಸುವ
ಕೆಲವೊಮ್ಮೆ ಪ್ರಚೋದಿಸುವ ಆರೋಗ್ಯಕರ
ಚರ್ಚೆಗಳು...ಬೇಕಾಗುತ್ತದೆ..!
ಇಲ್ಲದಿದ್ದರೆ...
"ನಿಮ್ಮ ಕವನ ಚೆನ್ನಾಗಿದೆ.... ಲೇಖನ ಅದ್ಭುತವಾಗಿದೆ.."
ಇಷ್ಟೇ ಪ್ರತಿಕ್ರಿಯೆಗಳು ಉಳಿದುಕೊ೦ಡುಬಿಟ್ಟಾವು...

ಅನ೦ತ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್
ಅನಂತ್ ಹೇಳಿದ್ದು ಸರಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ರೂಪಾರವ್ರೇ....

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಅನಂತ್ ರವರೇ ನನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದೆ ಅಷ್ಟೆ...

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದಕ್ಕೆ ನಾ ಬಹಳ ಆಶಾ ಮಾಡಿ ಬ್ಲಾಗ್/ಕವಿತಾ ಕಳಸ್ತೇನಿ ಆದ್ರ ಬಂದ ಪ್ರತಿಕ್ರಿಯಾ ನೋಡಿ ಬ್ಯಾಸರಿಕಿ ಆಗ್ತದ.
ಉದಾ: ನನ್ನ ಇತ್ತೀಚಿನ "ಶುರುವಾತಿನ ಪ್ರಲಾಪಗಳು"ಗೆ ಶ್ರೀ ಹೆಗಡೆಯವರು ನೀಡಿದ ಪ್ರತಿಕ್ರಿಯಾ ನೋಡ್ರಿ.
ಅಲ್ಲಿ ಬಳಸಿರುವ ಭಾಷೆ ಖಂಡಿತ ಯೋಗ್ಯವಲ್ಲ. ಇರಲಿ ಅದು ಅವರಿಗೆ ಸರಿ ಕಾಣುತ್ತಿರಬಹುದು.ಆದರೆ ಬರೆದವನಿಗೆ
ಘಾಸಿ ಆಗುವ ಹಾಗೆ ಪ್ರತಿಕ್ರಿಯಾ ಯಾಕ್ ಕೊಡಬೇಕು.....?
ನಾ ಮತ್ತೊಂದು ವಿಷಯ ಹೇಳಬೇಕು ಬ್ಯಾರೆ ದವರು ಹೊಗಳಲೇ ಬೇಕು ಅಂತ ನಾ ಕವಿತಾ/ಬ್ಲಾಗ್ ಬರಿಯುವುದಿಲ್ಲ
ಈಗೀಗ ಯಾಕೋ ಸಂಪದಕ್ಕ ಬರಿಯೂವುದ ಬ್ಯಾಸರಿಕಿ ಆಗೇದ....!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಅಬಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕೆ ಧನ್ಯವಾದ ದೇಸಾಯಿರವರೇ....
ಮನಸ್ಸಿಗೆ ಬೇಸರವಾಗುವಂತೆ ಮಾಡಿದ ಪ್ರತಿಕ್ರಿಯೆಗೆ ಉತ್ತರ ನೀಡಲು ಹೋಗಬೇಡಿ ಸುಮ್ಮನಿದ್ದು ಬಿಡಿ ಆಗ ಅವರೇ ಬೇಸರಪಡುತ್ತಾರೆ. ಮತ್ತೊಂದು ವಿಚಾರ ಹೇಳಿದ್ರಿ ಯಾರೇ ಆಗಲಿ ಕಾಮೆಂಟ್ ಗಾಗಿ ಬ್ಲಾಗ್ ಬರೆಯೋದಿಲ್ಲ ಇದು ಸತ್ಯವಾದ ಮಾತು.
ಯಾರೋ ಏನೋ ಅಂತಾರೆ ಅಂತ ನೀವು ಸಂಪದದ ಮೇಲೆ ಬೇಸರ ಪಟ್ರೆ ಹೇಗೆ.. ನೀವೆ ಹೀಗೆ ಅಂದ್ರೆ ನಮ್ಮಂತವರು ಹೇಗೆ ನೀವೆ ಹೇಳಿ.....?

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್ ರವರೆ ನಿಮ್ಮ ಈ ಲೇಖನ ನನ್ನ ವ್ಯಕ್ತಿಗತ ಅಭಿಪ್ರಾಯವೊಂದನ್ನ ವ್ಯಕ್ತಪಡಿಸಲು ಪ್ರೇರಣೆಯಾಗಿದೆ, ವಾಸ್ತವವಾಗಿ ನನಗೆ ಸ್ನೇಹಿತರ ಸಂಖ್ಯೆ ಕಡಿಮೆ ಬಹುಶಃ ನಾನು ಏಕಾಂತವನ್ನ ಇಷ್ಟಪಡುತ್ತೇನೆ ಎಂಬುದು ಇದಕ್ಕೆ ಕಾರಣವಿರಬಹುದು,ಹಾಗೂ ಆ ಕೆಲವೇ ಸ್ನೇಹಿತರು ನನಗೆ ತುಂಬಾ ಆತ್ಮೀಯರು ಕೂಡ,ಕಂಪ್ಯೂಟರ್ ಕ್ಷೇತ್ರ ನನಗೆ ಹೊಸತು ಹೀಗೆ ಬ್ರೌಸಿಂಗ್ ಮಾಡಬೇಕಾದರೆ ಅಚಾನಕ್ಕಾಗಿ ಸಿಕ್ಕ ಅಮೂಲ್ಯ ನಿಧಿ ಈ ಸಂಪದ. ಇದೊಂದು "ಸ್ನೇಹಸಂಪದ" ನೀವು ಇದನ್ನ ಕುಟುಂಬವೆಂದು ಕರೆದಿದ್ದೀರಿ,ಕುಟುಂಬ ವ್ಯವಸ್ಥೆಯಲ್ಲಿ ಕಾಣದೆ ಇರುವಂತಹ ವ್ಯಕ್ತಿಸ್ವಾತಂತ್ರ್ಯ ಇದರಲ್ಲಿದೆ. ’ಲೋಕೋ ಭಿನ್ನರುಚಿಃ’ ಎಂಬ ಮಾತೊಂದಿದೆ, 'it takes all sorts to make a world' ಸಂಪದದಲ್ಲಿ ಇಂತಹ ಆಂತರಿಕ ಸ್ವಾತಂತ್ರ್ಯಕ್ಕೆ ಅವಕಾಶ ಇರುವುದರಿಂದಲೇ ಇಷ್ಟೊಂದು ಆತ್ಮೀಯತೆಗೆ ಕಾರಣವಾಗಿದೆ ಎಂಬುದು ನನ್ನ ಅಭಿಪ್ರಾಯ,ಇಲ್ಲಿ ಆಪ್ತತೆ,ಆತ್ಮೀಯತೆ,ವೈಚಾರಿಕತೆ,ಭಾವುಕತೆ,ಕತೆ,ಕವಿತೆ,ಕಲಾತ್ಮಕತೆ,ರೋಚಕತೆ,ವ್ಯಥೆ,ಹೀಗೆ ಎಲ್ಲದಕ್ಕೂ ಇಲ್ಲಿ ಜಾಗವುಂಟು,ಇಲ್ಲಿ ಬೇಸಿರಿಸಿಕೊಳ್ಳುವಂಥ ವಿಚಾರಗಳು ನಡೆಯುತ್ತವೆ ಎಂಬುದು ನಿಜವಾದರೂ ಅದು ಸಹಜವಾದುದು,ಏಕೆಂದರೆ ಇಲ್ಲಿ ಬೇರೆ ಬೇರೆ ಹಿನ್ನಲೆಯಿಂದ ಬಂದವರಿದ್ದಾರೆ. ಒಬ್ಬರ ವಿಚಾರಗಳು ಕೆಲವರಿಗೆ ಇಷ್ಟವಾಗದೆ ಇರಬಹುದು ಆದರೆ ಆ ಕಾರಣಕ್ಕೆ ಸಂಪದ ತೊರೆಯುವುದು ಸಮಂಜಸವಲ್ಲ, ಸಮಸ್ತ ಕನ್ನಡಿಗರನ್ನೊಳಗೊಂಡ ಸಂಪದ ನಮ್ಮೆಲ್ಲರ ಗುರಿಯಾಗಬೇಕು. ’ವಿಶ್ವಪಥ ಮನುಜ ಮತ’ ನಮ್ಮೆಲ್ಲರ ಆಶಯವಾಗಬೇಕು,ಸಾಹಿತ್ಯಿಕ ಚರ್ಚೆ,ವೈಜ್ಣಾನಿಕ,ತಾಂತ್ರಿಕ,ಪರಿಸರ,ರಾಜಕೀಯ,ಧರ್ಮ,ಭಾಷೆ,ಹೀಗೆ ಎಲ್ಲಾ ತರಹದ ವಿಚಾರ ವಿನಿಮಯ ಇಲ್ಲಿ ಆಗಬೇಕು,ಇದಕ್ಕೆ ನೀವೇನಂತೀರಿ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಮಂಜುನಾಥ್ ರವರೇ ಈಗಾಗಲೇ ಸಂಪದದಲ್ಲಿ ಸಾಕಷ್ಟು ಆಗುತ್ತಿವೆ ಇನ್ನಷ್ಟು ಮುಂದುವರೆದರೆ ಇನ್ನೂ ಚೆನ್ನಾಗಿರತ್ತೆ.

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉಮೇಶ್ ಇದು ನನ್ನ ಪ್ರತಿಕ್ರಿಯೆಯಾಗಿತ್ತು.
http://sampada.net/blog/umeshhubliwala/01/04/2009/18564
>>ಉಮೇಶ್,
ನೀವು ಹುಡುಗನಾಗಿದ್ದಾಗ ಇನ್ನೂ ಚೆನ್ನಾಗಿ ಬರೆಯುತ್ತಿದ್ದೀರಿ ಅಂತ ಈಗ ನನಗೆ ಅನ್ನಿಸಿದರೆ ನನ್ನ ತಪ್ಪೇನು ಇಲ್ಲ ಅಲ್ಲವೇ?

>>೨) ಗೆಳೆಯ, ಕಪ್ಪು ಮೇಘದ ಜತೆ
ಚಂದ್ರ ಸುರತ ಆಡುವುದು ನೀ ನೋಡಿಲ್ಲ...?
ಚಿಂತಿಸಬೇಡ
ನನ್ನವಳು ಹೆರಳ ಬೆನ್ನ ಮೇಲೆ
ಹರಡಿದುದ ನೋಡಿಬಿಡು ಸಾಕು....!<<

ಮದುವೆಯಾಗುವ ಮೊದಲು ಗೆಳೆಯನಿಗೆ ಹೇಳಿದ ಈ ಮಾತನ್ನು ಈಗಲೂ ಆ ಗೆಳೆಯನನ್ನು ಕರೆದು ಹೇಳಿ ನಿಮ್ಮವಳ ಬೆನ್ನನ್ನು ತೋರಿಸಲು ತಯಾರಿದ್ದೀರಾ? ಜೋಕೆ...!!!"<<

ಅದಕ್ಕೆ ಅಂದಿನ ಪ್ರತಿಕ್ರಿಯೆ ಹೀಗಿದೆ:

>>ಹೆಗಡೆ ಸರ್ ಧನ್ಯವಾದಗಳು....ಏನು ಮಾಡಲಿ ಬಣ್ಣಹಚ್ಚಿಕೊಳ್ಳುವುದು ನನ್ನ ಖಯಾಲಿ ಆಗಾಗ ಹಳೇ ನೆನಪು ಎಲ್ಲ ಕಲೆಹಾಕಿ ಬಣ್ಣ ಬಳೀತಿನಿ...ಇನ್ನು ಬೆನ್ನಿನ ವಿಷಯ ಬೆನ್ನು ನೋಡಿ ಬಹಳ ದಿನ ಆದ್ವು ಅದಕ್ಕೂ ಬೆನ್ನ್ಯಾಕ
ಬ್ಯಾರೇದು ಸಿಗತಿರಬೇಕಾದರ...!<<

ಅಂದು ನನ್ನ ಹಾಸ್ಯವನ್ನು ಹಾಸ್ಯವಾಗಿಯೇ ಪರಿಗಣಿಸಿ ಪ್ರತಿಕ್ರಿಯಿಸಿದ ನೀವು ಇಂದು ಈ ರೀತಿ ಬೇರೆಲ್ಲೋ ಬಂದು ಬೇರೆ ರಾಗದಲ್ಲಿ ನುಡಿಯುತ್ತಿರುವುದು ಆಭಾಸವೆನಿಸಿದೆ. ಅಂದೇ ನುಡಿಯಬಹುದಿತ್ತು. ಪರವಾಗಿಲ್ಲ, ಈಗಲಾದರೂ ಹೇಳಿ, ನನ್ನ ಯಾವ ಮಾತುಗಳು ಅಸಭ್ಯ ಅಂತ ಅನ್ನಿಸಿದೆ, ವಿವರಿಸುವಿರಾ? ಅಲ್ಲದೆ ನಿಮ್ಮ ಉತ್ತರದಲ್ಲಿದ್ದ ಗೂಢಾರ್ಥ ನನ್ನ ಪ್ರತಿಕ್ರಿಯೆಯಲ್ಲಿತ್ತೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗಡೆಯವರೇ,
ಮಧ್ಯೆ ಮೂಗು ತೂರಿಸುತ್ತಿರುವುದಕ್ಕೆ ಕ್ಷಮೆಯಿರಲಿ..
ಆದರೂ ನನಗನಿಸಿದ್ದನ್ನ.. ಹೇಳಿಬಿಡೋಣ ಅಂತನ್ನಿಸಿತು..
ಮೊದಲಿಗೆ, ಅಂದರೆ ಸರಿಯಾಗಿ, ನಿರಂತರವಾಗಿ, ಸಂಪದ ನೋಡಲು ಆರಂಭಿಸಿದ ನಂತರ, ನಾನು ಕೆಲವು ಬರಹಗಳನ್ನು ಹಾಕಲಾರಂಭಿಸಿದ ದಿನಗಳಲ್ಲಿ, ನಿಮ್ಮ ಅನಿಸಿಕೆ ನೋಡಿದಾಗ, ಇದ್ಯಾಕೆ ಇವರು ಈ ತರಹ ಉತ್ತರಿಸುತ್ತಾರೆ, ಅಂತನ್ನಿಸುತ್ತಿತ್ತು.. ತೆರೆದ ಹೃದಯೊದೊಂದಿಗೆ, ಮುಚ್ಚುಮರೆಯಲ್ಲದೇ ಹೇಳುತ್ತಿದ್ದೇನೆ.. "ಈ ಮನುಷ್ಯನಿಗೆ ಇದೇನಪ್ಪಾ ಇಷ್ಟೊಂದು ಅಹಂಕಾರ" ಅಂತ ಅನ್ಕೊತ್ತಿದ್ದೆ.. ನಂತರ, ತಿಳ್ಕೊಳಲಾರಂಭಿಸಿದೆ.. ಅದರಲ್ಲಿ ನಿಮ್ಮ ಹಾಸ್ಯದ ಲೇಪನ ಇದೆ ಅನ್ನೋದು..

ಆದರೂ ನನ್ನ ಮನಸ್ಸಿನ ಇನ್ನೊಂದೆರಡು ಯೋಚನೆಗಳನ್ನ ನಿಮ್ಮ ಬಳಿ ಹಂಚಿಕೊಳ್ಳುತ್ತೇನೆ.. ನಾನು ವಯಸ್ಸಿನಲ್ಲಿ ನಿಮಗಿಂತ ಬಹಳ ಚಿಕ್ಕವ.. ತಪ್ಪಾದಲ್ಲಿ ಕ್ಷಮಿಸಿ..
ಏನೇ ಇದ್ದರೂ, ನಿಮ್ಮ ಮಾತಿನಲ್ಲಿ, ಹಾಸ್ಯಕ್ಕಿಂತ ಹೆಚ್ಚಾಗಿ ವ್ಯಂಗ್ಯ, ಕೆಣಕು ಜಾಸ್ತಿ ಅನ್ನಿಸೋಲ್ವಾ.. ಬೇಡವೇ ಬೇಡ ಅಂತ ಅನ್ನೋಲ್ಲಾ ಹೆಗಡೆಯವರೆ.. ಆದರೆ, ಅದು ಕೆಲವೊಮ್ಮೆ..ಮೃದು ಹೃದಯಿಗಳ ಮನಸ್ಸನ್ನ ನೋಯೋ ಮಟ್ಟಕ್ಕೆ ಹೋಗೋ ಅವಶ್ಯಕತೆ ಇಲ್ಲಾ ಅಂತ ನನಗನ್ನಿಸಿದ್ದು.. ಎಲ್ಲಾರಿಗೂ ಅಲ್ಲ ನನ್ನೀ ಮಾತು..

ನಾನು ಹೇಳೋ ಮಾತಿನಲ್ಲಿ ತಪ್ಪಿದ್ದಲ್ಲಿ.. ದಯಮಾಡಿ ಕ್ಷಮಿಸಿ..
ಹಾಗೇ.. ನಾನು ಓದೋ, ನಿಮ್ಮ ಪ್ರತೀ ಪ್ರತಿಕ್ರಿಯೆಯನ್ನು.. ನಾನು ಗಮನವಿಟ್ಟು, ಆಸಕ್ತಿಯಿಂದ ಓದುತ್ತೇನೆ.. ಹೆಚ್ಚಾಗಿ ನನಗೆ ಇಷ್ಟ ಆಗುತ್ತೆ.. ಇನ್ನೂ ನಿಮ್ಮ ಪದ್ಯಗಳೂ ಕೂಡ.. ಬಹು ಪ್ರೀತಿಯವು.. ಆದರೂ ನನ್ನ ಮಾತು ನಿಮಗೇನನ್ನಿಸುತ್ತದೋ ನೋಡಿ, ಯೋಚಿಸಿ.. ತಿಳಿಸಿ..

ನಲ್ಮೆಯ ನಮನಗಳೊಂದಿಗೆ,
ನಿಮ್ಮೊಲವಿನ,
ಸತ್ಯ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>...ಏನೇ ಇದ್ದರೂ, ನಿಮ್ಮ ಮಾತಿನಲ್ಲಿ, ಹಾಸ್ಯಕ್ಕಿಂತ ಹೆಚ್ಚಾಗಿ ವ್ಯಂಗ್ಯ, ಕೆಣಕು ಜಾಸ್ತಿ ಅನ್ನಿಸೋಲ್ವಾ..<<
ಅನಿಸಿದಾಗ ಹೇಳಿದರೆ ತಿದ್ದಿಕೊಳ್ಳಬಹುದು ಸತ್ಯಚರಣ್. ಯಾರೂ ಪರಿಪೂರ್ಣರಲ್ಲ, ನಾನಂತೂ ಅಲ್ಲವೇ ಅಲ್ಲ.
ಬರೆಯುವವನ ಮಾತು ಓದುವವನಿಗೆ ಅದೇ ಭಾವನೆಯಲ್ಲಿ ಅರ್ಥ ಆಗಬೇಕೆಂದೇನೂ ಇಲ್ಲ. ಆದರೆ, ನೋವು ಮಾಡುವ ಮತ್ತು ಕೆಣಕುವ ಉದ್ದೇಶದಿಂದ ಬರೆದುದರ ನೆನಪೇ ನನಗಿಲ್ಲ. ಯಾಕಂದರೆ ನಾನು ಆ ಉದ್ದೇಶ ಇಟ್ಟುಕೊಂಡು ಬರೆಯುವುದೇ ಇಲ್ಲ. ಉದಾಹರಣೆ ನೀಡಿ ಉಪಕರಿಸಿದರೆ, ನಿಮ್ಮನ್ನು ಕೃತಜ್ಞತೆಯಿಂದ ಸ್ಮರಿಸುತ್ತಿರುತ್ತೇನೆ. ಉಮೇಶ್ ಅವರು ಉದಾಹರಿಸಿದಲ್ಲಿ ನನ್ನಿಂದ ತಪ್ಪು ನಡೆದಿದೆಯೆಂದು ನಿಮಗನ್ನಿಸಿದೆಯಾ?
ನಾನು ಮಾಯ್ಸರಿಗೆ ಉತರನೆಡಿದ್ದನ್ನು ನೀವು ಗಮನಿಸಿರಬಹುದು.
http://sampada.net/blog/asuhegde/09/04/2009/18919
>>.... ಇದಂತೂ ಚೂರೂ ಹಿಡಿಸಲಿಲ್ಲ.<<
ಎಲ್ಲವೂ ಎಲ್ಲರಿಗೂ ಹಿಡಿಸಲೇ ಬೇಕೆಂದೇನೂ ಇಲ್ಲ. ಹಿಡಿಸುವುದೂ ಇಲ್ಲ. ಹಾಗಿದ್ದಾಗಲೇ ಅದು ಚೆನ್ನ.
ಬೆಳೆಯಲು ಇಚ್ಚಿಸುವವನಿಗೆ ಇಂತಹ ಪ್ರತಿಕ್ರಿಯೆಗಳು ಸಹಕಾರಿ. ನನ್ನಿಂದ ಮುಕ್ತ ಸ್ವಾಗತ ಯಾವಾಗಲೂ.
ಎಲ್ಲರೂ ಹೊಗಳುತ್ತಲೇ ಇದ್ದರೆ, ಮನುಷ್ಯನ ಬೆಳವಣಿಗೆ ಕುಂಟಿತಗೊಳ್ಳುತ್ತದೆ ಅನ್ನುವುದು ನನ್ನ ಅನಿಸಿಕೆ.
ಈ ರೀತಿಯ ಪ್ರತಿಕ್ರಿಯೆ ಬಂದಾಗಲೇ ಆತ್ಮಾವಲೋಕನ ಸಾಧ್ಯ ಅಂತ ನನ್ನ ಭಾವನೆ.
ಧನ್ಯವಾದಗಳು.

ನಿಮ್ಮ ಮನ ನೊಂದಿದ್ದರೆ ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ. ಆದರೆ, ಉದಾಹರಣೆ ಕೊಟ್ಟರೆ ಉಪಕಾರವಾಗುತ್ತೆ. ಉದಾಹರಣೆ ನೀಡದೆ ಉಮೇಶ್ ಅವರ ತರಹ ಮೇಲ್ಸರದ ಮಾತನ್ನು ನೀವೂ ಆಡಿದರೆ ನನ್ನ ಮನಸ್ಸಿಗೂ ಬೇಸರ ನೋವು ಎರಡೂ ಆಗುತ್ತೆ. ಆಗೋಲ್ವೆ ಮತ್ತೆ? ಆ ಮನುಷ್ಯ ಮತ್ತೆ ಇತ್ತ ಮುಖಾನೇ ಹಾಕಿಲ್ಲ ನೋಡಿ. ಅಪವಾದ ಹಾಕುವುದು ಮುಖ್ಯ ಅಲ್ಲ. ಅದಕ್ಕೆ ಪುರಾವೆ ಬೇಕಲ್ವಾ? ಹಾಗಿದ್ದಿದ್ದರೆ ಉತ್ತರಿಸಬಹುದಿತ್ತು ಆತ.

ನೀವು ಇನ್ನೊಬ್ಬರ ಹೇಳಿಕೆಗಳ ಮೇಲೆ ನಿಮ್ಮ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ನಿಮಗೆ ಅಸಮಾಧಾನ ಆದಾಗ ಹೇಳಿ. ಇಲ್ಲಾಂದ್ರೆ ಮಿಂಚಂಚೆ ಕಳಿಸಿ. ಎಲ್ಲವೂ ಸ್ವಾಗತ.

ನಿಮ್ಮ ನಮನಗಳಿಗೆ ಪ್ರತಿ ನಮನ. ಎಳ್ಲಷ್ಟೂ ಅಸಮಾಧಾನ ಇಲ್ಲ. ಮನ ನೋಯಿಸಿಕೊಂಡು ಇರಬೇಡಿ.
:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ‍್.. ನಾಚಿಕೊಳ್ಳೋ ಹಾಗೆ ಮಾಡಿಬಿಟ್ರಿ..
ಕ್ಷಮಿಸಿ.. ದೊಡ್ಡವರ ಹತ್ತಿರ, ಕ್ಷಮೆ ಕೇಳಿಸಿಕೊಂಡು, ಅಭ್ಯಾಸ ಇಲ್ಲ..
ಕ್ಷಮೆ ಕೇಳಬೇಡಿ ಸರ‍್.. ಅದೂ ಈ ರೀತಿಯಲ್ಲಿ.. ನಿಜ ಹೇಳ್ತೀನಿ.. ಕಣ್ಣಲ್ಲಿ ನೀರು ಬಂದುಬಿಡುತ್ತೆ..(ನಿಜ, ತಪ್ಪು ತಿಳಿಬೇಡಿ)
ಖಂಡಿತ.. ನನಗೆ ತಪ್ಪು ಅನ್ನಿಸಿದ್ದನ್ನ ಅಲ್ಲೇ ಹೇಳಿಬಿಡುವೆ.. ಮುಂದಿನ ಬಾರಿಯಿಂದ..
ದಯವಿಟ್ಟ ತಾವು ಬೇಸರಿಸಬೇಡಿ.. ಮಿಂಚಂಚೆ ಮಾತು ಸರಿ.. ಆದರೆ, ಅಲ್ಲಿವರೆವಿಗೆ ಹೋಗೋದು ಅಂದರೆ, ಅದು ನನ್ನ ಅತಿರೇಕ ಆಗಬಹುದು.. ಅಲ್ಲಿವರೆವಿಗೆ ಹೋಗೋಲ್ಲ ಅನ್ಕೋತೀನಿ.. ಹಾಗೆ, ಬೇರೆಯವರ ಹೇಳಿಕೆ ಮೇಲೆ ನನ್ನ ಮಾತುಗಳನ್ನ ಆಡೋ ಪ್ರಯತ್ನ ನನ್ನಲ್ಲಿ ಕಡಿಮೆ.. ಆಗೋದೆ ಇಲ್ಲ ಅಂತನೂ ಹೇಳಲ್ಲ.. ಸಾಧ್ಯತೆ ಇರುತ್ತೆ.. ಆದರೆ ಈ ಮಾತು ನನ್ನದೇ ಆಗಿತ್ತು..
ಆದರೆ, ಈಗ, ನನಗೆ ಅತಿ ಹೆಚ್ಚಿನ ಸಮಾಧಾನ, ಸಂತೋಷ ಸಿಕ್ಕಿದೆ.. ಮನದ ಮೂಲೆಯಲ್ಲಿ ಎಲ್ಲಾದರೂ ಇನ್ನೂ ನೋವೇನಾದರೂ ಉಳಿದಿದ್ದಲ್ಲಿ.. ಅದು ಕೂಡ ಈಗ ಹಾರಿ ಹೋಗಿದೆ..

ನಿಮ್ಮೊಲವಿನ,
ಸತ್ಯ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಅಳಿಸಿದರೆ ನಾನೂ ಅಳುವೆ
ನೀವು ನಕ್ಕರೆ ನಾನೂ ನಗುವೆ
ಏಕೆಂದರೆ ಮನದೊಳಗೆ ನಾನಿನ್ನೂ ಮಗುವೆ
:-)

ನಾನು ಮನೆಗೆ ಬಂದ ನಂತರ ಸಂಪದದ ಭೇಟಿ ಮಾಡುವುದು ಕಡಿಮೆ. ಈಗಷ್ಟೇ ಕಚೇರಿಯಿಂದ ಭಾರವಾದ ಮನಸ್ಸಿನಿಂದ ಬಂದೆ. ನನ್ನಿಂದಾಗಿ ಯಾರಿಗೋ ನೋವು ಆಗಿದೆ ಎನ್ನುವುದು ಸಹಿಸಲಾಗದ ಮಾತು. ಹಾಗಾಗಿ ಪುನಃ ಸಂಪದಕ್ಕೆ ಬಂದೆ. ಈಗ ಹೃದಯ ಹಗುರಾಯಿತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ಸಂತೋಷ ಆಯ್ತು.. ನಿಮ್ಮ ಸಮಾಧಾನ ನೋಡಿ..

ನಿಮ್ಮೊಲವಿನ,
ಸತ್ಯ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮಿಬ್ಬರ ಇ ಸಂಭಾಷಣೆ ಓದಿ ಸಂತೋಷವಾಯ್ತು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂತೋಷದಿಂದ ಸಂತೋಷ ಹೆಚ್ಚುತ್ತದೆ.. ಅಲ್ಲವೇ.. :)

ನಿಮ್ಮೊಲವಿನ,
ಸತ್ಯ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.