ನಿಮ್ಮ ಸಹಾಯ ಬೇಕಾಗಿದೆ!

0

 


ಗೆಳೆಯರೆ!


ಇತ್ತೀಚೆಗೆ ಆಫ್ಘಾನಿಸ್ತಾನದಲ್ಲಿ ಭೂಕಂಪನವಾಯಿತು. ಅದರ ಪರಿಣಾಮ ನಮ್ಮ ದೇಶದ ಉತ್ತರಖಂಡ್ ರಾಜ್ಯದ ಮೇಲಾಗಿದೆ. ಉತ್ತರಖಂಡ್ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಭೂಕುಸಿತವುಂಟಾಗಿದೆ. ಬಹುಪಾಲು ರಸ್ತೆಗಳು ಮುಚ್ಚಿಹೋಗಿವೆ. ಜೊತೆಗೆ ನಿರಂತರ ವರ್ಷಧಾರೆಯ ಕಾರಣ ಬದುಕು ಅಸ್ತವ್ಯಸ್ತವಾಗಿದೆ.


 


ಚಾರ್ಧಾಮ್ ಯಾತ್ರೆಗೆ ಹೊರಟ ಯಾತ್ರಿಕರು ಮಾರ್ಗದ ವಿವಿಧ ಸ್ಥಳಗಳಲ್ಲಿ ಸಿಕ್ಕಿಹಾಕಿಕೊಂಡು ಮುಂದಕ್ಕೂ ಹೋಗಲಾಗದೆ, ಹಿಂದಕ್ಕೂ ಬರಲಾಗದೇ ನಡುವೆ ಸಿಕ್ಕಿಬಿದ್ದಿದ್ದಾರೆ.


 


ಬೆಂಗಳೂರಿನ ಏಜೀಸ್ ಆಫೀಸಿನಿಂದ ೫೨ ಜನರು ಉತ್ತರಕಾಶಿಯಲ್ಲಿ ನಮ್ಮ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಈಗಷ್ಟೇ ಶ್ರೀಮತಿ ನಾಗರತ್ನ ಅವರು ಸಹಾಯಕ್ಕಾಗಿ ನನಗೆ ಫೋನ್ ಮಾಡಿದರು. ನಾನು ಬೆಂಗಳೂರು ದೂರದರ್ಶನ, ಟಿವಿ=೯ ಹಾಗೂ ಸುವರ್ಣ ವಾಹಿನಿಯಲ್ಲಿರುವ ಕೆಲವು ಗೆಳೆಯರಿಗೆ ಮಾಹಿತಿಯನ್ನು ನೀಡಿ ಶ್ರೀಮತಿ ನಾಗರತ್ನ ಅವರ ಫೋನ್ ನಂಬರ್ ನೀಡಿದ್ದೇನೆ. ಈ ಬಗ್ಗೆ ಜನರ ಗಮನವನ್ನು ಹಾಗೂ ಸರ್ಕಾರದ ಗಮನವನ್ನು ಸೆಳೆಯುವಂತೆ ಪ್ರಾರ್ಥಿಸಿದ್ದೇನೆ.


 


ನಮ್ಮ ಓದುಗರಲ್ಲಿ ಯಾರಾದರೂ ಸರ್ಕಾರದ ಮಟ್ಟದಲ್ಲಿ ಪ್ರಭಾವ ಬೀರಿ ಈ ಜನರಿಗೆ ಸಹಾಯ ನೀಡಲು ಸಾಧ್ಯವೆ? ನೀವೂ ಸಹಾ ಶ್ರೀಮತಿ ನಾಗರತ್ನ ಅವರೊಂದಿಗೆ ಒಮ್ಮೆ ಮಾತನಾಡಬಹುದು. ಅವರ ಮೊಬೈಲ್ ನಂಬರ್ ೯೯೪೫೦೧೨೦೮೭.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಸರ್, ಈ ವಿಷಯ ಈಗಾಗಲೇ ಸರಕಾರದ ಗಮನಕ್ಕೆ ಬ೦ದಿದೆ. ಕರ್ನಾಟಕದ ಯಾತ್ರಿಕರನ್ನು ವಾಪಸು ಕರೆದು ತರುವ ಜವಾಬ್ದಾರಿಯನ್ನು ಸರಕಾರ ಗಿರೀಶ್ ಮಟ್ಟಣ್ಣನವರ್ ಅವರಿಗೆ ಒಪ್ಪಿಸಿದೆ. ನಿಮ್ಮ ಕಳಕಳಿಗೆ ಧನ್ಯವಾದಗಳು. -- ಹರ್ಷ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.