ಜ್ಯೋತಿಷ, ಜನ್ಮ ಸಮಯ ಹಾಗೂ ಒಂದು ಲಕ್ಷ ರೂಪಾಯಿ!

4.25

ಜ್ಯೋತಿಷ, ಜನ್ಮ ಸಮಯ ಹಾಗೂ ಒಂದು ಲಕ್ಷ ರೂಪಾಯಿ!
    ಮಂಜುನಾಥ್, ನನ್ನ ಜ್ಯೋತಿಷ ಹಾಗೂ ಜನ್ಮಸಮಯ ಎನ್ನುವ ಲೇಖನಕ್ಕೆ ತಾವು ತಮ್ಮ ಅನಿಸಿಕೆ, ಅಭಿಪ್ರಾಯ, ಉತ್ತರ ಹಾಗೂ ವಿವರಣೆಯನ್ನು ನೀಡಿದುದಕ್ಕೆ ಧನ್ಯವಾದಗಳು.
    ದಯವಿಟ್ಟು ತಾಳ್ಮೆಯಿಂದ ಹಾಗೂ ಪೂರ್ವಗ್ರಹ ಪೀಡಿತರಾಗದೇ ನನ್ನ ಹಿಂದಿನ ಹಾಗೂ ಈಗಿನ ಬರಹವನ್ನು ಓದಿ.

 • ನಾನು ಜ್ಯೋತಿಷವನ್ನು ತಿರಸ್ಕರಿಸುವವನಲ್ಲ; ಪುರಸ್ಕರಿಸುವವನೂ ಅಲ್ಲ. ಸತ್ಯವನ್ನು ತಿಳಿಯಬೇಕೆಂಬ ಆಸೆ ಮಾತ್ರ ನನಗಿದೆ.
 • ವಿಜ್ಞಾನ ಎನ್ನುವುದು ನನ್ನ ಅಳತೆಗೆ ಸಿಗುವ ಜ್ಞಾನ. ನನ್ನ ಹಾಗೆ ವೈಜ್ಞಾನಿಕ ಅಧ್ಯಯನ ಮಾಡಿರುವವರಿಗೆ ಲಭ್ಯವಾಗುವ ಜ್ಞಾನ. ಜ್ಯೋತಿಷದ ಮೊದಲ ಭಾಗ ಎಲ್ಲರಿಗೂ ಅರ್ಥವಾಗುವಂತಹದ್ದೆ. ಜನ್ಮ ಕುಂಡಲಿ ರಚಿಸಲು ಸೂಚಿಸಿರುವ ಮಾರ್ಗವನ್ನು ಯಾರೇ ಆಗಲಿ, ನಿಖರವಾಗಿ ಅನುಸರಿಸಿದರೆ, ಎಲ್ಲರಿಗೂ ಏಕರೂಪದ ಫಲಿತಾಂಶ ಬರುತ್ತದೆ. ಇದರಲ್ಲಿ ನನಗಂತೂ ಯಾವುದೇ ಅನುಮಾನವಿಲ್ಲ.
 • ಜ್ಯೋತಿಷದ ಎರಡನೆಯ ಭಾಗವಾದ ಫಲ ಜ್ಯೋತಿಷದ ಬಗ್ಗೆ ನನ್ನ ಅನುಮಾನಗಳಿವೆ. ನನ್ನ ಅನುಮಾನಗಳು ನಿಮಗೆ ಬಾಲಿಶವಾದದ್ದು ಎಂದು ಅನಿಸಿದರೆ, ಅದಕ್ಕೆ ನನ್ನ ಅಭ್ಯಂತರವಿಲ್ಲ. ಏಕೆಂದರೆ ಜ್ಯೋತಿಷವನ್ನು ನಾನು ಶಾಸ್ತ್ರೀಯವಾಗಿ ಕಲಿತಿಲ್ಲ. ಸತ್ಯವನ್ನು ತಿಳಿಯಬೇಕೆಂಬ ಆಸೆ ನನಗಿರುವುದರಿಂದ ನನ್ನ ಅರಿವಿನ ಹಿನ್ನೆಲೆಯಲ್ಲಿ ನನಗೆ ತೋಚಿದ ಪ್ರಾಮಾಣಿಕ ಪ್ರಶ್ನೆಗಳನ್ನು ಕೇಳುವ ಹಕ್ಕು ನನಗಿದೆ. ಜ್ಯೋತಿಷವನ್ನು ಅಮೂಲಾಗ್ರವಾಗಿ ತಿಳಿದಿರಬಹುದಾದ ತಮಗೆ ನನ್ನ ಪ್ರಶ್ನೆಗಳು ಬಾಲಿಶವೆನಿಸಿರುವುದರಲ್ಲಿ ಆಶ್ಚರ್ಯವಿಲ್ಲ.
 • ನನ್ನ ಬಾಲಿಶ ಪ್ರಶ್ನೆಗಳು ನಾನು ವೈದ್ಯಕೀಯವನ್ನು ಸೇರುವುದಕ್ಕೆ ಮೊದಲು, ನನ್ನ ಪಿಯುಸಿ ದಿನಗಳ ಪ್ರಶ್ನೆಗಳು. ಅಂದಿನ ದಿನಗಳಲ್ಲಿ ನಾನು ಕೇಳುತ್ತಿದ್ದ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುವ ಗುರು ನನಗೆ ದೊರೆಯಲಿಲ್ಲ. ಫಲ ಜ್ಯೋತಿಷಕ್ಕೆ ಯಾವುದೇ ತರ್ಕಬದ್ಧ ವಿವರಣೆ ನನಗೆ ದೊರೆಯಲಿಲ್ಲ. ಈ ಒಂದು ಅಂಶವನ್ನು ತಮ್ಮ ಗಮನಕ್ಕೆ ಮತ್ತೆ ತರಬಯಸುತ್ತೇನೆ.
 • ಬೆನಕ ಅವರು ನೀಡಿದ ಶ್ಲೋಕ ನಂತರದ ದಿನಗಳಲ್ಲಿ ನನ್ನ ಗಮನಕ್ಕೆ ಬಂದಿತ್ತು. ಆದರೆ ಈ ಶ್ಲೋಕದ ಬಗ್ಗೆ ನನ್ನದೇ ಆದ ಗೊಂದಲಗಳಿವೆ. ಒಂದು ಮಗುವಿನ ಕುಂಡಲಿಯನ್ನು ನಿರ್ಮಿಸಲು ಆ ಮಗುವಿನ ಜನ್ಮಸಮಯವು ಬಹಳ ಮುಖ್ಯ. ಶ್ಲೋಕವನ್ನು ಗಮನಿಸಿ. ನಾಲ್ಕು ಯುಗಗಳಿಗೆ ನಾಲ್ಕು ಭಿನ್ನ ರೀತಿಯ ಜನನ ಸಮಯ ನಿರ್ಣಯ ಲಕ್ಷಣಗಳನ್ನು ಹೇಳುತ್ತದೆ. ಈ ಭಿನ್ನತೆ ಏಕೆ ಎಂದು ಪ್ರಶ್ನೆ ಕೇಳಿದರೆ ಅದಕ್ಕೆ ನಿಖರ ಉತ್ತರ ದೊರೆಯುವುದಿಲ್ಲ. (ಹೆಚ್ಚೆಂದರೆ ಕೃತಯುಗದಲ್ಲಿ ಧರ್ಮವು ನಾಲ್ಕು ಕಾಲುಗಳಲ್ಲಿ, ತ್ರೇತಾಯುಗದಲ್ಲಿ ಮೂರುಕಾಲುಗಳಲ್ಲಿ ಹಾಗೂ ದ್ವಾಪರಯುಗದಲ್ಲಿ ಎರಡು ಕಾಲುಗಳಲ್ಲಿ ನಿಂತಿತ್ತು. ಕಲಿಯುಗದಲ್ಲಿ ಪಾಪಿಗಳೇ ಹೆಚ್ಚಿರುವುದರಿಂದ ಧರ್ಮವು ಒಂದೇ ಕಾಲಿನಲ್ಲಿ ನಿಂತಿದೆ. ಹಾಗಾಗಿ ಮೊದಲ ಮೂರು ಯುಗಗಳಿಗೆ ಅನ್ವಯವಾಗುವ ನೀತಿ-ನಿಯಮಗಳು ಕಲಿಯುಗಕ್ಕೆ ಅನ್ವಯವಾಗಬೇಕಿಲ್ಲ ಎಂಬ ಉತ್ತರವನ್ನು ನೀಡಬಹುದು. ಅಥವ ದೈವಮೂಲ, ಋಷಿಮೂಲ, ನದಿಮೂಲವನ್ನು ಹುಡುಕಬಾರದು. ಇದ್ದದ್ದನ್ನು ಇದ್ದ ಹಾಗೆ ಒಪ್ಪಿಕೊಳ್ಳಬೇಕು. ಪ್ರಶ್ನಿಸುವ ಅಧಿಕಾರ ನಿಮಗಿಲ್ಲ ಎಂದು ಹೇಳಬಹುದು. ಆದರೆ ನನ್ನ ಮನಸ್ಸು ಇಂತಹ ಉತ್ತರವನ್ನು ಸ್ವೀಕರಿಸಲು ಸಿದ್ಧವಿಲ್ಲ.)
 • ಕೃತಯುಗದಲ್ಲಿ ಗರ್ಭಾದಾನ ಸಮಯ ಅಂದರೆ ಅಂಡಾಣು ಹಾಗೂ ವೀರ್ಯಾಣುಗಳ ಸಮಯ. ಅದನ್ನು ಹೊಸ ಜೀವದ ಉತ್ಪತ್ತಿ ಎಂದು ಪರಿಗಣಿಸುತ್ತಿದ್ದರು. ಇದು ವಾಸ್ತವದಲ್ಲಿ ಸತ್ಯ. ಅಂಡಾಣು ಸ್ವಯಂ ಪ್ರತ್ಯೇಕವಾಗಿ ಜೀವಿಸಲಾರದು. ವೀರ್ಯಾಣುವಿಗೆ ಪ್ರತ್ಯೇಕ ಅಸ್ತಿತ್ವವಿರುವುದಿಲ್ಲ. ಎರಡೂ ಸಂಯೋಗವಾದರೆ ಮಾತ್ರ ಹೊಸ ಜೀವದ ಉಗಮವಾಗುತ್ತದೆ. ಇದು ಹೊಸ ಜೀವಿಯ ಹುಟ್ಟಿನ ನಿಜವಾದ ಸಮಯ. ಕೃತಯುಗದಲ್ಲಿ ಇದನ್ನೇ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿದ್ದರು ಎಂದು ಶ್ಲೋಕ ಹೇಳುತ್ತದೆ. ಇದನ್ನೂ ಸಹಾ ನನ್ನ ಬಾಲಿಶ ಪ್ರಶ್ನೆಗಳಲ್ಲಿ ಪ್ರಸ್ತಾಪಿಸಿದ್ದೇನೆ. (ತಮ್ಮ ಅವಗಾಹನೆಗಾಗಿ ನನ್ನ ಬಾಲಿಶ ಪ್ರಶ್ನೆಯನ್ನು ಉದ್ಧರಿಸುತ್ತಿದ್ದೇನೆ: ವಾಸ್ತವದಲ್ಲಿ ಒಬ್ಬ ವ್ಯಕ್ತಿಯ ಭವಿಷ್ಯವನ್ನು ಹೇಳಬೇಕಾದರೆ, ಅವನ ಜೀವ ರೂಪುಗೊಂಡ ಸಮಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಅದುವೇ ವೈಜ್ಞಾನಿಕ ಎಂದು ಅಂಬೋಣ. ಅಂದರೆ, ಅಂಡಾಣು ಮತ್ತು ವೀರ್ಯಾಣು ಮಿಲನವಾಗುವ ಸಂದರ್ಭ. ಜಾತಕನ ಹೆತ್ತವರು ಕೂಡಿದ ಸಮಯ. ಇದನ್ನೇ ಗರ್ಭಾದಾನ ಎಂದು ಶ್ಲೋಕ ಹೇಳುತ್ತದೆ)
 • ಎರಡನೆಯದು ತ್ರೇತಾಯುಗದ ಪ್ರಶ್ನೆ. ಬೆನಕ ಅವರು ತ್ರೇತಾಯಾಂ ಪುಂಸವನಂ ಎಂಬ ಶಬ್ಧಗಳಲ್ಲಿ, ಪುಂಸವನಂ ಎಂಬ ಶಬ್ಧಕ್ಕೆ ಪುಂಸವನ ಅಥವ ಜಲಸ್ರಾವ ಎಂಬ ಅರ್ಥವನ್ನು ನೀಡಿದ್ದಾರೆ. ಈ ಪುಂಸವನ ಎನ್ನುವುದು ಹಿಂದು ಧರ್ಮದಲ್ಲಿ ಹುಟ್ಟಿದ ಒಂದು ಮಗುವಿಗೆ ಸಲ್ಲುವ ಷೋಡಶ ಕರ್ಮಗಳಲ್ಲಿ ಒಂದು. ಮಗುವು ಹುಟ್ಟುವುದಕ್ಕೆ ಮೊದಲು ಮೂರು ಕರ್ಮಗಳನ್ನು ನಡೆಸುವರು. ಗರ್ಭಾದಾನ, ಪುಂಸವನ ಮತ್ತು ಸೀಮಂತೋನಯನ. ನನ್ನ ಅರಿವಿನ ಹಿನ್ನೆಲೆಯಲ್ಲಿ ಈ ಪುಂಸವನ ಎನ್ನುವುದೇ ತರ್ಕಹೀನ. ಹೆಸರೇ ಸೂಚಿಸುವ ಹಾಗೆ, ಇದು ಗಂಡು ಮಗು ಹುಟ್ಟಲಿ ಎಂದು ಎಂದು ನಡೆಸುವ ಒಂದು ಕರ್ಮ. ನಾನು ಓದಿರುವ ವಿಜ್ಞಾನವು ಮಗುವಿನ ಲಿಂಗನಿರ್ಣಯವು ಅಂಡಾಣು-ವೀರ್ಯಾಣುಗಳ ಮಿಲನದಲ್ಲಿ ನಿರ್ಧರಿತವಾಗುತ್ತದೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ತಾಯಿಯು ಗರ್ಭವನ್ನು ಧರಿಸಿ ೩-೪ ನೆಯ ತಿಂಗಳಾಗಿರುವಾಗ, ಪುಂಸವನ ಎಂಬ ಕರ್ಮವನ್ನು ನಡೆಸುವರು. ಇದನ್ನು ನಿರ್ದಿಷ್ಟ ತಿಥಿ ಹಾಗೂ ನಕ್ಷತ್ರವಿರುವಾಗ ಮಾತ್ರ ಮಾಡುವರು. ಜ್ಯೋತಿಷಿಗಳು ಸೂಚಿಸುವ ಸಮಯದಲ್ಲಿ ಪುರೋಹಿತರು ಈ ಕರ್ಮವನ್ನು ನಡೆಸಿ, ಗಂಡು ಮಗುವು ಹುಟ್ಟಲಿ ಎನ್ನುವರು. ಆದರೆ ನಾನು ಕಂಡ ಹಾಗೆ ಪುಂಸವನ ಮಾಡಿಸಿಕೊಂಡ ತಾಯಿಯು ಹೆಣ್ಣು ಮಗುವನ್ನು ಹೆತ್ತಿದ್ದಾಳೆ. ಆಗ ನಾನು ನಿಮ್ಮ ಪುಂಸವನ ಮಾಡಿಸಿಕೊಂಡವರಿಗೆ ಏಕೆ ಗಂಡು ಮಗುವಾಗಿ, ನಿಮ್ಮ ಕರ್ಮ ನಿಜವಾಗಲಿಲ್ಲ ಎಂದು ಜ್ಯೋತಿಷಿಗಳನ್ನು ಕೇಳಿದೆ. ಆಗವರು ಇದೊಂದು ಕರ್ಮವಯ್ಯ ಅಷ್ಟೆ. ಅವರವರ ಪೂರ್ವಜನ್ಮ ಕರ್ಮದ ಫಲವಾಗಿ ಮಕ್ಕಳು ಹುಟ್ಟುತ್ತಾರೆ. ಇದಕ್ಕೆ ಹೆಚ್ಚಿನ ಅರ್ಥ ನೀಡಬೇಡ ಎಂದರು. ಪ್ರತಿಯೊಬ್ಬ ತಂದೆ ತಾಯಿಗೂ ಗಂಡು ಮಗು ಹುಟ್ಟಲಿ ಎಂದು ಆಸೆಯಿರುತ್ತದೆ. ಆ ಹಿನ್ನೆಲೆಯಲ್ಲಿ ಇಂತಹ ಕರ್ಮ ಹುಟ್ಟಿರಬೇಕು ಎಂದು ನನ್ನ ಅನಿಸಿಕೆ. (ನನ್ನ ಅನಿಸಿಕೆ ಬಾಲಿಶವೆಂದು ತಮಗೆ ಅನಿಸಿದಲ್ಲಿ ಸರಿಯಾದ ವಿವರಣೆಯನ್ನು ನೀಡಿ. ನನ್ನನ್ನು ತಿದ್ದಿಕೊಳ್ಳುವೆ. ಕಲಿಯುವುದಕ್ಕೆ ವಯಸ್ಸಿನ ಅಂತರ ಬರಬಾರದು. ಮಂಡನಮಿಶ್ರರಂತಹ ಮಹಾ ವಿದ್ವಾಂಸರು ಶಂಕರಾಚಾರ್ಯರೆಂಬ ಹುಡುಗನ ಮುಂದೆ ಸೋಲುತ್ತಾರೆ. ಅವರನ್ನು ಗುರುವೆಂದು ಸ್ವೀಕರಿಸುತ್ತಾರೆ. ಹಾಗಾಗಿ ಸಮಾಜದಲ್ಲಿ ನನಗಿರುವ ಸ್ಥಾನ-ಮಾನವನ್ನು ತಾವು ಪರಿಗಣಿಸದೇ ಸತ್ಯವನ್ನು ತಿಳಿಸುವವರಂತಾಗಿ) ಮತ್ತೊಂದು ವಿಶೇಷ ಎಂದರೆ ಈ ಪುಂಸವನ ಕರ್ಮವನ್ನು ತಾಯಿಯ ಚೊಚ್ಚಲ ಮಗುವಿಗೆ ಮಾಡುವುದು ಹೆಚ್ಚು. ನಂತರದ ಮಕ್ಕಳಿಗೆ ಮಾಡುವುದಿಲ್ಲ. ಇದಕ್ಕೆ ಕಾರಣವನ್ನು ತಿಳಿದವರು ಹೇಳಬೇಕು. ಈ ಪುಂಸವನವು ಹೇಗೆ ಮಗುವಿನ ಜನ್ಮಕಾಲವನ್ನು ನಿರ್ಣಯಿಸುತ್ತದೆ ಎನ್ನುವುದು ನನ್ನ ಬಾಲಿಶ ಮತಿಗೆ ಇನ್ನೂ ಅರ್ಥವಾಗಿಲ್ಲ. ಏಕೆಂದರೆ ಪುಂಸವನವನ್ನು ನಡೆಸುವ ಕಾಲಕ್ಕೆ ಜೀವಾಂಕುರವಾಗಿ ೩-೪ ತಿಂಗಳು ಗತಿಸಿರುತ್ತದೆ. ಮಗುವಿನ ಪ್ರಸವವೂ ಆಗಿರುವುದಿಲ್ಲ. ಹಾಗಿರುವಾಗ ಪುಂಸವನದ ಕಾಲವನ್ನು ಹೇಗೆ ಜನ್ಮಕಾಲ ಎಂದು ಪರಿಗಣಿಸುವುದು? ಬೆನಕ ಅವರು ಜಲಸ್ರಾವ ಎಂಬ ಮತ್ತೊಂದು ಪದಪ್ರಯೋಗ ಮಾಡಿದ್ದಾರೆ. ತಾಯಿಯ ಗರ್ಭದಲ್ಲಿ ಮಗುವು ಒಂದು ಗರ್ಭಜಲ ಚೀಲದಲ್ಲಿರುತ್ತದೆ. ಮಗುವು ಪ್ರಸವವಾಗುವುದಕ್ಕೆ ಮೊದಲು ಚೀಲ ಹರಿಯಬೇಕು. ಚೀಲದೊಳಗೆ ಇರುವ ಜಲ ಹೊರಹರಿಯಬೇಕು. ಆನಂತರವೇ ಮಗುವಿನ ಪ್ರಸವ ನಡೆಯುತ್ತದೆ. ಸಹಜ ಪ್ರಸವದಲ್ಲಿ ಚೀಲ ಹರಿಯುವುದು ಹಾಗೂ ಗರ್ಭಜಲ ಹೊರಬರುವುದು ಸಹಜ ಕ್ರಿಯೆಗಳು. ಅವು ತಮಗೆ ತಾವೇ ನಡೆಯುತ್ತವೆ. ಆದರೆ ಆಸ್ಪತ್ರೆಗಳಲ್ಲಿ ಈ ಕ್ರಿಯೆಗಳನ್ನು ಸಹಜವಾಗಿ ನಡೆಯಲು ಬಿಡುವುದಿಲ್ಲ. ತಾಯಿಯ ಸ್ಥಿತಿಯನ್ನು ನೋಡಿಕೊಂಡು ವೈದ್ಯರೇ/ದಾದಿಯೇ ಬೆರಳಿನಿಂದ ಈ ಚೀಲವನ್ನು ಹರಿದು, ಗರ್ಭಜಲವನ್ನು ಹೊರಹರಿಯಲು ಬಿಡುತ್ತಾರೆ. ಬೆನಕ ಅವರ ವಿವರಣೆಯ ಅನ್ವಯ, ಈ ಸಮಯವನ್ನೇ ಮಗುವಿನ ಜನ್ಮ ಸಮಯ ಎಂದು ತ್ರೇತಾಯುಗದಲ್ಲಿ ಪರಿಗಣಿಸುತ್ತಿದ್ದರು ಎಂದಾಗುತ್ತದೆ. ನನ್ನ ಬಾಲಿಶ ಮತಿಗೆ ಇದು ತರ್ಕ ಹೀನ ಎಂದು ಅನಿಸುತ್ತದೆ. ಪುಂಸವನ ಹಾಗೂ ಗರ್ಭಜಲಸ್ರಾವಗಳ ನಡುವೆ  ಸುಮಾರು ೫-೬ ತಿಂಗಳುಗಳ ಕಾಲ ವ್ಯತ್ಯಾಸವಿರುತ್ತದೆ. ಇವೆರಡು ಒಂದೇ ಆಗಿರಲು ಸಾಧ್ಯವಿಲ್ಲ. ಪುಂಸವನದ ಕಾಲ ಗರ್ಭಜಲಸ್ರಾವ ಕಾಲಕ್ಕೆ ಸಮನಾದ ಕಾಲ ಎನ್ನುವುದಕ್ಕೆ ಯಾವುದೇ ಆಧಾರವನ್ನು ಬೆನಕ ಅವರು ನೀಡಿಲ್ಲ. ಆದರೆ ಇವೆರಡು ಒಂದೇ ಆಗಿರಲು ಸಾಧ್ಯವಿಲ್ಲ ಎನ್ನುವುದು ನನ್ನಂತಹ ಬಾಲಿಶ ಮತಿಗಳಿಗೆ ಅರ್ಥವಾಗುವಾಗ, ತಮ್ಮಂತಹ ತಿಳಿದವರಿಗೆ ಸುಲುಭವಾಗಿ ಅರ್ಥವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಜ್ಯೋತಿಷ ವಿಜ್ಞಾನವಾಗಿದ್ದರೆ ಅದು ಖಚಿತವಾಗಿರಬೇಕಲ್ಲವೆ! ತ್ರೇತಾಯುಗದಲ್ಲಿ ಜ್ಯೋತಿಷಿಗಳು ಏಕೆ ಎರಡೆರಡು ರೀತಿಯ ಜನ್ಮ ಸಮಯಗಳನ್ನು ಪರಿಗಣಿಸುತ್ತಿದ್ದರು? ಈ ಎರಡೂ ಜನನಕಾಲವನ್ನು ಲೆಕ್ಕಕ್ಕೆ ತೆಗೆದುಕೊಂಡು, ಎರಡು ಜಾತಕಗಳನ್ನು ರಚಿಸಿ, ಅವುಗಳ ಫಲಜ್ಯೋತಿಷವನ್ನು ಬರೆಯಿಸಿದರೆ, ಅವು ಏಕರೂಪವಾಗಿರುತ್ತದೆಯೆ?
 • ದ್ವಾಪರಯುಗದಲ್ಲಿ ಮಗುವಿನ ಶೀರ್ಷೋದಯ ವನ್ನು ಜನನ ಕಾಲ ಎಂದು ಪರಿಗಣಿಸಬೇಕು ಎನ್ನುತ್ತದೆ ಶ್ಲೋಕ. ಆಸ್ಪತ್ರೆಗಳಲ್ಲಿ ನಾವು ಶಿಶು ಪ್ರಸವವನ್ನು ಮಾಡುವಾಗ ಗರ್ಭಜಲ ಒಡೆಯುತ್ತಿರುವಂತೆಯೇ ಮಗುವಿನ ತಲೆಯನ್ನು ನೋಡಬಹುದು. ಏಕೆಂದರೆ ಗರ್ಭಜಲ ಸೋರಿದ ಮೇಲೆ ಮಗುವನ್ನು ಹೆಚ್ಚು ಕಾಲ ಗರ್ಭಾಶಯದಲ್ಲಿ ಬಿಡುವಂತಿಲ್ಲ. ಆದಷ್ಟು ಬೇಗ ಪ್ರಸವವನ್ನು ಮಾಡಿಸಬೇಕಾಗುತ್ತದೆ. ಇದು ಹೇಗೆ ಮಗುವಿನ ಜನನ ಕಾಲವಾಗಬಲ್ಲುದು ಎನ್ನುವುದು ನನ್ನ ತರ್ಕಕ್ಕೆ ನಿಲುಕುತ್ತಿಲ್ಲ. ಡಾಕ್ಟ್ರೆ.. ನಿಮ್ಮದು ಬಾಲಿಶ ಬುದ್ಧಿ. ಕಲಿಯುಗದಲ್ಲಿ ಇದ್ದುಕೊಂಡು ದ್ವಾಪರಯುಗದ ಬಗ್ಗೆ ಪ್ರಶ್ನೆ ಕೇಳುತ್ತಿದ್ದೀರಲ್ಲ, ಇದು ಸರಿಯೇ? ಇಷ್ಟೂ ನಿಮಗೆ ಗೊತ್ತಾಗುವುದಿಲ್ಲವೆ? ಎಂದು ನೀವು ಪ್ರಶ್ನೆ ಕೇಳಬಹುದು. ಕ್ಷಮಿಸಿ ಮಂಜು. ಇದು ಜೀವಾಂಕುರ ಸಮಯವಲ್ಲ. ಮಗುವು ತಾಯಿಯ ಒಡಲಿನಿಂದ ಪೂರ್ಣ ಹೊರಬಂದ ಪ್ರಸವ ಸಮಯವೂ ಅಲ್ಲ. ಇದು ಹೇಗೆ ಜನ್ಮಸಮಯವಾಗಬಲ್ಲುದು? ಶ್ಲೋಕದಲ್ಲಿ ಋಷಿಗಳು ಬರೆದದ್ದು ಸತ್ಯ. ಅದನ್ನು ಪ್ರಶ್ನೆ ಮಾಡದೇ ನೀವು ಒಪ್ಪಿಕೊಳ್ಳಬೇಕು ಎನ್ನುವಿರಾದರೆ, ನಾನು ಆ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ. ಏಕೆಂದರೆ ನನ್ನ ಅನಿಸಿಕೆಯ ಅನ್ವಯ ವೇದಗಳಿಂದ ಹಿಡಿದು ಈ ಭೂಮಿಯಲ್ಲಿ ಲಭ್ಯವಿರುವ ಎಲ್ಲ ರೀತಿಯ ಬರಹವೂ ಮಾನವ ನಿರ್ಮಿತವಾದವು. ದೇವವಾಣಿಯಲ್ಲ. ಮೇಲಿನ ಶ್ಲೋಕವನ್ನು ಮನುಷ್ಯರೇ ಬರೆದಿರುವರು. ದೇವರಲ್ಲ. ಇದು ನನ್ನ ಸ್ಪಷ್ಟ ನಿಲುವು.  ಹಾಗಾಗಿ ಜ್ಯೋತಿಷಿಗಳು ತ್ರೇತಾ ಮತ್ತು ದ್ವಾಪರಯುಗಗಳಲ್ಲಿ ಶಿಶುವಿನ ಜನನ ಕಾಲವನ್ನು ತರ್ಕಹೀನವಾಗಿ ನಿರ್ಧರಿಸುತ್ತಿದ್ದರು ಎಂದು ಹೇಳಬೇಕಗುತ್ತದೆ. ದ್ವಾಪರ ಯುಗದ ಈ ಜನನ ಕಾಲ ನಿರ್ಣಯವನ್ನು ಬಾಲಿಶಪ್ರಶ್ನೆ ರೂಪದಲ್ಲಿ ನಾನು ಕೇಳಿರುವುದನ್ನು ಮತ್ತೊಮ್ಮೆ ಓದಿ (ತಮ್ಮ ಅವಗಾಹನೆಗಾಗಿ ನನ್ನ ಪ್ರಶ್ನೆಯನ್ನು ಇಲ್ಲಿ ಉದ್ಧರಿಸುತ್ತಿದ್ದೇನೆ. ತಾಯಿಯ ಯೋನಿಯಲ್ಲಿ ಮಗುವಿನ ತಲೆ ಕಾಣಿಸಿಕೊಂಡ ಸಮಯವನ್ನು ಜನನ ಸಮಯ ತೆಗೆದುಕೊಳ್ಳಬೇಕೆ?)
 • ಕಲೌ ಭೂಪತನಂ ಸ್ಮ್ರೃತಮ್ - ಕಲಿಯುಗದಲ್ಲಿ ಮಗುವು ಭೂಮಿಯನ್ನು ಸ್ಪರ್ಶಿಸಿದ ಸಮಯವನ್ನೇ ಜನನ ಕಾಲ ಎಂದು ನಿರ್ಧರಿಸಬೇಕೆಂದು ಶ್ಲೋಕ ಹೇಳುತ್ತದೆ. ಭೂಪತನಂ ಎಂಬ ಶಬ್ಧದಲ್ಲಿ ಭೂ ಮುಖ್ಯವಲ್ಲ; ಪತನಂ ಎಂಬುದೇ ಮುಖ್ಯ ಎಂದು (ಉತ್ತರಪದಾರ್ಥ ಪ್ರಧಾನೋ ತತ್ಪುರುಷಃ). ವ್ಯಾಕರಣ ಸೂತ್ರ ಸಮೇತ ಬೆನಕ ಅವರು ವಿವರಣೆಯನ್ನು ನೀಡಿದ್ದಾರೆ. ಪತನಂ ಎಂಬ ಶಬ್ಧಕ್ಕೆ ಬೀಳು ಎಂಬ ಅರ್ಥವಿದೆ. ಅಷ್ಟೆ. ಈ ಅರ್ಥದ ಅನ್ವಯ ಮಗುವು ಬೀಳುವ ಸಮಯವೇ ಮಗುವು ಹುಟ್ಟಿದ ಸಮಯ. ಮಗುವು ತಾಯಿಯ ಜನನಾಂಗದಿಂದ ಕೆಳಕ್ಕೆ ಬಿದ್ದರೆ ಅದು ನೆಲವನ್ನು ಮುಟ್ಟಲೇಬೇಕು. ಆದರೆ ಬೆನಕ ಅವರು, ಪತನಂ ಎಂಬ ಶಬ್ಧಕ್ಕೆ ಮಗುವು ತಾಯಿಯ ಒಡಲಿನಿಂದ ಪ್ರತ್ಯೇಕಗೊಂಡ ಸಮಯಯಾವ ತಾಯಿಯು ಉತ್ತಮ ಆಹಾರ, ವ್ಯಾಯಾಮ ಹಾಗೂ ಸ್ವಸ್ಥ ಮನಸ್ಸನ್ನು ಇಟ್ಟುಕೊಂಡಿರುತ್ತಾಳೋ, ಆಕೆಗೆ ಹೆರಿಗೆ ಸರಾಗವಾಗಿ ನಡೆಯುತ್ತದೆ.ಎಂದು ವ್ಯಾಖ್ಯಾನಿಸುತ್ತಾರೆ. ನನ್ನ ಸೀಮಿತ ಜ್ಞಾನಾನ್ವಯ ಶಾಸ್ತ್ರಭಾಷಾ ಶಬ್ದವನ್ನು ಹೀಗೆ ಹಿಂಜುವುದು ಸರಿಯಲ್ಲ (ಸಾಹಿತ್ಯಿಕ ಶಬ್ಧಗಳ ಅರ್ಥವನ್ನು ಹಿಂಜಬಹುದು). ಶ್ಲೋಕದಲ್ಲಿರುವ ಭೂಪತನಂ ಎಂಬ ಪ್ರಯೋಗ ಸರಿಯಾಗಿಯೇ ಇದೆ. ಪ್ರಾಚೀನ ಕಾಲದಲ್ಲಿ ಮಾನವ ಸ್ತ್ರೀ ನಿಂತುಕೊಂಡೇ ಮಗುವಿಗೆ ಜನ್ಮವೀಯುತ್ತಿದ್ದಳು. ಈ ಪದ್ಧತಿಯು ಇಂದೂ ಸಹ ಕೆಲವು ಬುಡಕಟ್ಟುಗಳಲ್ಲಿ ಆಚರಣೆಯಲ್ಲಿದೆ ಎಂದು ನಾನು ಕೇಳಿದ್ದೇನೆ. (ಆಧುನಿಕ ಯುಗದಲ್ಲಿ ಈ ಪದ್ಧತಿಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ Free Standing Birth ಎಂದು ಗೂಗಲಿಸಿ. ತಮಗೆ ಸಾಕಷ್ಟು ಮಾಹಿತಿ ದೊರೆಯುತ್ತದೆ) ತಾಯಿಯು ನಿಂತುಕೊಂಡಾಗ ಭೂಮಿಯ ಗುರುತ್ವಾಕರ್ಷಣೆಯು ಪ್ರಸವವನ್ನು ಸರಾಗವಾಗಿಸುತ್ತದೆ. ಜೀವಜಗತ್ತಿನಲ್ಲಿ ಚತುಷ್ಪಾದಿ ಪ್ರಾಣಿಗಳು ನಿಂತುಕೊಂಡೇ ಪ್ರಸವಿಸುತ್ತವೆ. ಅವುಗಳಿಗೆ ಯಾರೂ ಹೆರಿಗೆ ಮಾಡಿಸಲು ಬರುವುದಿಲ್ಲ. ಗುರುತ್ವಾಕರ್ಷಣೆ ಹಾಗೂ ಗರ್ಭಾಶಯದ ಒತ್ತಡಗಳು ಸುಖಪ್ರಸವಕ್ಕೆ ಕಾರಣವಾಗುತ್ತವೆ. ಮನುಷ್ಯನ ನಾಗರೀಕನಾಗುತ್ತಿರುವಂತೆಯೇ ಮಲಗಿ ಪ್ರಸವ ಮಾಡಿಸುವ ಹವ್ಯಾಸ ಹೆಚ್ಚಿದೆ (ಇದಕ್ಕೆ ಕಾರಣವನ್ನು ಬರೆಯುತ್ತಾ ಹೋದರೆ ಅದು ವಿಷಯಾಂತರವಾಗುತ್ತದೆ). ತಾಯಿಯಾದವಳು ಮಲಗಿಕೊಂಡು ಹೆರುವುದು ನಿಜಕ್ಕೂ ಅವೈಜ್ಞಾನಿಕ. ಈ ಬಗ್ಗೆ ವೈದ್ಯಕೀಯ ಶಿಕ್ಷಣದಲ್ಲಿಯೂ  ಚರ್ಚೆ ನಡೆಯುತ್ತದೆ. (ಆದರೆ ನಾನು ತಾಯಿಯೋರ್ವಳಿಗೆ ನಿಂತುಕೊಂಡು ಮಗುವನ್ನು ಹೆರಿ ಎಂದು ಹೇಳಿದರೆ, ಆಕೆ ಹಾಗೂ ಆಕೆಯ ಮನೆಯವರು ನನ್ನನ್ನು ಅಮಾನವೀಯ ವೈದ್ಯರು ಎಂದು ಕರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಡಾಕ್ಟ್ರೆ...ಹೆರಿಗೆ ನೋವು ಹೇಗಿರುತ್ತೆ ಅಂತ ನಿಮಗೆ ಗೊತ್ತಾ? ಹೆಣ್ಣು ಎಷ್ಟು ನೋವನ್ನು ತಿನ್ನುತ್ತಾಳೆ ಎಂದರೆ, ಸರಾಗವಾಗಿ ಹೆರಿಗೆಯಾದರೆ ಮತ್ತೊಮ್ಮೆ ತಾಯಿಯ ಹೊಟ್ಟೆಯಿಂದ ಹುಟ್ಟಿಬಂದ ಹಾಗೆ ಅನ್ನೋದು ನಿಮಗೆ ತಿಳಿದಿಲ್ಲವೇ ಎಂದೆಲ್ಲ ನನ್ನನ್ನು ಪ್ರಶ್ನಿಸಬಹುದು. ಯಾವುದಾದರೊಂದು ಆತಂಕವು ತಾಯಿಯನ್ನು ಕಾಡುತ್ತಿದ್ದರೆ, ಆಕೆಯ ಹೆರಿಗೆ ಕಷ್ಟಕರವಾಗುತ್ತದೆ. ಇದು ನನ್ನ ಅನಿಸಿಕೆ ಮಾತ್ರವಲ್ಲ. ನೀವು ಯಾವುದೇ ಪ್ರಸೂತಿ ತಂತ್ರಜ್ಞರನ್ನು ಕೇಳಿ ಪರಾಮರ್ಶಿಸಬಹುದು) ಒಂದು ವೇಳೆ ಆಕೆ ನಿಂತುಕೊಂಡು ಹೆರಿಗೆ ಮಾಡಿಸಿಕೊಂಡರೆ, ಮಗುವು ನೆಲವನ್ನು ಮುಟ್ಟಲೇಬೇಕು. ಹಾಗಾಗಿ ಭೂಪತನಂ ಎಂಬುದು ಸರಿಯಾದ ಪ್ರಯೋಗ. ಈ ಶ್ಲೋಕವನ್ನು ಬರೆದ ಕಾಲಕ್ಕೆ ಹೆರಿಗೆಯಲ್ಲಿ ಸಿಸೇರಿಯನ್, ಫಾರ್ಸೆಪ್ಸ್ ಡೆಲಿವರಿ, ವ್ಯಾಕ್ಯೂಮ್ ಡೆಲಿವರಿ, ಎಪಿಸಿಯಾಟಮಿ ಡೆಲಿವರಿ ಇತ್ಯಾದಿಗಳು ಇರಲಿಲ್ಲ. ಡೆಲಿವರಿ ಟೇಬಲ್ ಇರಲಿಲ್ಲ. ಹಾಗಾಗಿ ಅಂದಿನ ಕಾಲದಲ್ಲಿ ಭೂಪತನಂ ಶಬ್ಧವನ್ನು ಹಿಂಜಲಿಲ್ಲ. ಇವೆಲ್ಲ ಇಂದಿನ ವಿಜ್ಞಾನದ ಫಲಗಳು. ಹಾಗಾಗಿ ಬೆನಕ ಅವರು ಮಗುವು ತಾಯಿಯ ದೇಹದಿಂದ ಪ್ರತ್ಯೇಕಗೊಳ್ಳುವ ಸಮಯವೇ ಮಗುವಿನ ಜನನ ಸಮಯ ಎಂದು ವ್ಯಾಖ್ಯಾನಿಸಿದ್ದಾರೆ. ಇದು ಅವರೇ ಮಾಡಿಕೊಂಡಿರುವ ಅನುಕೂಲಾರ್ಥ. ಈ ಅರ್ಥ ಮೂಲ ಶ್ಲೋಕದಲ್ಲಿ ಇಲ್ಲ. ವೈದ್ಯಕೀಯದಲ್ಲೂ ಸಹಾ, ಮಗುವೇ ಯಾವ ವಿಧಾನದಲ್ಲಿಯಾದರೂ ಹುಟ್ಟಲಿ,  ಮಗುವಿನ ಜನನ ಸಮಯವನ್ನು ದಾಖಲಿಸಲು, ಮಗುವು ತಾಯಿಯ ದೇಹದಿಂದ ಪೂರ್ಣವಾಗಿ ಪತ್ಯೇಕಗೊಂಡ ಕಾಲವನ್ನೆ ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ.
 • ತ್ರೇತಾ, ದ್ವಾಪರಯುಗಗಳಲ್ಲಿ ಮಗುವಿನ ಜನನ ಸಮಯವನ್ನು ನಿರ್ಧರಿಸುವ ವಿಧಾನ ನನಗೆ ತರ್ಕಬದ್ಧವಾಗಿದೆ ಹಾಗೂ ಪ್ರಾಯೋಗಿಕವಾಗಿದೆ ಎಂದು ನನ್ನ ಬಾಲಿಶ ಮತಿಗೆ ಅನಿಸುವುದಿಲ್ಲ. ಕಲಿಯುಗದ ಜನನ ಸಮಯವನ್ನು ಬೆನಕ ಅವರು ಹೇಳುವ ಹಾಗೆ ಹಿಂಜಿದರೆ, ಅದನ್ನು ಮಗುವಿನ ಜನನ ಸಮಯ ಎಂದು ಪರಿಗಣಿಸಿ ಜಾತಕವನ್ನು ಬರೆಯಬಹುದು.
 • ಈ ಶ್ಲೋಕದಲ್ಲಿ ಹೇಳಿರುವ ಕೃತಯುಗ, ತ್ರೇತಾಯುಗ, ದ್ವಾಪರಯುಗಗಳು ಇದ್ದವೇ ಎಂಬ ಪ್ರಶ್ನೆಯ ಬಗ್ಗೆ ಇಲ್ಲಿ ನಾನು ಚರ್ಚಿಸಲು ಹೋಗುವುದಿಲ್ಲ. ವಿಷಯಾಂತರವಾದೀತು ಎಂಬುದೇ ಅದಕ್ಕೆ ಕಾರಣ.
 • ಮಂಜು ಅವರೆ! ಬೆನಕ ಅವರ ಉತ್ತರವನ್ನು ಮತ್ತೊಮ್ಮೆ ಓದಿನೋಡಿ. (ಸಿಝೇರಿಯನ್ ಸಮಯ ಬದಲಿಸಿ, ಒಳ್ಳೆಯ ಗ್ರಹಗತಿಯಿರುವಂತೆ ಮಾಡಲು ಸಾಧ್ಯ ಎಂಬುದು - ಜನನಕ್ಕೆ ಮುಹೂರ್ತವಿಟ್ಟಂತೆ - ಇದು ಸಾಧ್ಯವಿದೆ! ಆದರೆ, ಆ ಮುಹೂರ್ತವೂ ಬಹುಮಟ್ಟಿಗೆ ದೈವನಿಶ್ಚಿತವೇ ಎಂಬುದು ಸತ್ಯ; ಅರ್ಥಾತ್ ಒಂದು ಮಗು ಸಿಝೇರಿಯನ್ ಶಸ್ತ್ರಚಿಕಿತ್ಸೆಯಿಂದ ಹುಟ್ಟುವುದೋ ಇಲ್ಲವೋ ಎಂಬುದೂ ಪೂರ್ವನಿರ್ಧರಿತವಾಗಿದೆ ಎಂಬುದು ಬಹು ವಿದ್ವಾಂಸರ ಅಭಿಪ್ರಾಯ. ಹಾಗಾಗಿ, ಜ್ಯೋತಿಷಿ ಹೇಳಿದರೂ, ವೈದ್ಯರು ನಿರ್ಧರಿಸಿದರೂ, ಛೇದಸವನದಿಂದ(ಅಥವಾ ಅಸಹಜವಾಗಿ) ಹುಟ್ಟುವ ಮಕ್ಕಳ ಬಗ್ಗೆ ಜ್ಯೋತಿಷದಲ್ಲಿ "ಅಯೋನಿಜನ್ಮ" ಎಂದು ವಿವರಿಸಲಾಗಿದೆ; ಅವರ ಜಾತಕ ಹೇಗಿರುವುದೆಂಬ ನಿದರ್ಶನಗಳೂ ನಮ್ಮ ಪೂರ್ವಜರ ಮೇರುಕೃತಿಗಳಲ್ಲಿ ಲಭ್ಯವಿದೆ!) ಇಲ್ಲಿ ಬೆನಕ ಅವರು ಒಂದು ಮಗುವು ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಹುಟ್ಟಿದರೆ ಅದು ದೈವನಿಶ್ಚಿತ ಎನ್ನುತ್ತಾರೆ. ಜನನಕ್ಕೆ ಮುಹೂರ್ತವಿಡಬಹುದು ಎನ್ನುತ್ತಾರೆ. (ಈ ವಾದವನ್ನು ನೀವು ಒಪ್ಪುವುದಾದರೆ ವೈದ್ಯರು ಹಣದಾಸೆಗಾಗಿ ಸಿಸೇರಿಯನ್ ಶಸ್ತ್ರಚಿಕಿತ್ಸೆಯನ್ನು, ಅಗತ್ಯವಿಲ್ಲದಿದ್ದರೂ ಮಾಡುವುದು ಸಹಾ ದೈವನಿಯಾಮಕವೇ ಆಗುತ್ತದೆ. ಅಲ್ಲವೆ! ದೇವರೇ ಮಗುವಿನ ಜನನ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಆಗಬೇಕೆಂದು ನಿರ್ಣಯಿಸಿರುವಾಗ ಸುಮ್ಮನೇ ನನ್ನಂತಹ ವೈದ್ಯರನ್ನು ದುರಾಸೆಯ ವೈದ್ಯರು ಎಂದು ಏಕೆ ದೂರುತ್ತಿದ್ದೀರಿ! ದೇವರನ್ನು ದೂರಿ) ಅವರ ಈ ವಿವರಣೆಗೆ ನಾನು ಯಾವುದೇ ಪ್ರತಿವಾದವನ್ನು ಹೂಡುವುದಿಲ್ಲ ಎಂದು ಬರೆದಿರುವೆ. ಏಕೆಂದರೆ, ದೇವರು-ವಿಧಿ-ಪೂರ್ವಜನ್ಮ-ಕರ್ಮ-ಪುನರ್ಜನ್ಮ-ದೈವಲೀಲೆ ಇತ್ಯಾದಿಗಳ ನಂಬಿಕೆಯನ್ನು ಆಧರಿಸಿರುವಂತಹದ್ದು. ಇವನ್ನು ನಂಬುವವರು ನಂಬಲಿ. ಅದರ ಬಗ್ಗೆ ನನಗೆ ಯಾವುದೇ ತಕರಾರಿಲ್ಲ. ಅವರನ್ನು ಪುರಸ್ಕರಿಸುವುದಕ್ಕೂ ಹೋಗುವುದಿಲ್ಲ. ಖಂಡಿಸುವುದಕ್ಕೂ ಹೋಗುವುದಿಲ್ಲ. ನಾನು ಕಾರ್ಯ-ಕಾರಣಗಳಲ್ಲಿ ನಂಬಿಕೆಯನ್ನಿಟ್ಟವನು. ಕಾರ್ಯ ಕಾರಣಗಳಿಗೆ ಅತೀತವಾಗಿರುವಂತಹವನ್ನು ಅಧ್ಯಯನ ಮಾಡುವ ಕುತೂಹಲವಿದೆ. ಆದರೆ ಅವಹೇಳನ ಮಾಡುವ, ಇಲ್ಲವೇ ಎಲ್ಲವೂ ಸಾರಾಸಗಟಾಗಿ ಕಂದಾಚಾರ ಎಂದು ದೂರುವ ಉದ್ಧಟತನಕ್ಕೆ ಹೋಗುವುದಿಲ್ಲ. ನಾನು ದೈವಶಾಸ್ತ್ರಜ್ಞನಲ್ಲ.  ಹಾಗಾಗಿ ಎಲ್ಲವೂ ಪೂರ್ವನಿರ್ಣಯಿತ-ದೈವನಿಶ್ಚಿತ ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ಎಲ್ಲವೂ ಪೂರ್ಣನಿರ್ಣಯಿತ ಎಂದು ಭಾವಿಸುವ/ನಂಬುವ ಮನಸ್ಸು ಏನನ್ನು ಪ್ರಶ್ನಿಸದೆ ಎಲ್ಲವನ್ನು ನಂಬಬೇಕಾಗುತ್ತದೆ. ಹಾಗೆ ನಾನು ನಂಬಲು ನಾನು ಸಿದ್ಧನಿಲ್ಲ. ನನಗೆ ಗೊತ್ತಿಲ್ಲದಿರುವ/ನಿಲುಕದಿರುವ ವಿಷಯಗಳನ್ನು ಏಕಾಏಕಿ ಒಪ್ಪಲು ನಾನು ಸಿದ್ಧನಿಲ್ಲ. ನನಗೆ ತಿಳಿಯುವ ಹಾಗೆ ವಿವರಿಸುವ ಸಾಮರ್ಥ್ಯವಿರುವವರು ನನಗೆ ದೊರೆಯುವವರಿಗು ನಾನು ಸುಮ್ಮನಿರಲು ಬಯಸುತ್ತೇನೆ.
 • ನೀವೂ ಹಾಗೂ ಸುರೇಶ್ ನಾಡಿಗ್ ಹೇಳಿದಂತಹ ಅನೇಕ ಪ್ರಕರಣಗಳನ್ನು ನಾನೂ ಕೇಳಿದ್ದೇನೆ. ಆದರೆ ಅಂತಹ ಪ್ರಕರಣಗಳು ನನ್ನ ಅನುಭವಕ್ಕೆ ಬಂದಿಲ್ಲವಾದ ಕಾರಣ ಆ ಬಗ್ಗೆ ನಾನು ಯಾವುದೇ ಟೀಕೆಯನ್ನು ಮಾಡುವುದಿಲ್ಲ.
 • ಈ ಲೇಖನದ ಮುಗಿಸುವ ಮೊದಲು ನನ್ನ ಒಂದು ವಿನಂತಿ. ಜ್ಯೋತಿಷವು ಒಂದು ಶಾಸ್ತ್ರವೇ ಅಥವ ಅಲ್ಲವೇ ಎಂಬುದನ್ನು ಒರೆಗೆ ಹಚ್ಚಲು ನಾನು ಸಿದ್ಧ. ನಾನು ಹುಟ್ಟಿದ ದಿನ, ಸಮಯ, ಸ್ಥಳ ಇತ್ಯಾದಿಗಳನ್ನು ನೀಡುತ್ತೇನೆ. ನನ್ನ ಭೂತ, ವರ್ತಮಾನ ಹಾಗೂ ಭವಿಷ್ಯವನ್ನು ನೂರಕ್ಕೆ ನೂರರಷ್ಟು ನಿಖರವಾಗಿ ಹೇಳಿದ ಜ್ಯೋತಿಷಿಗೆ ನಾನು ಒಂದು ಲಕ್ಷ ರೂಪಾಯಿಗಳ ನಗದನ್ನು ಬಹುಮಾನವಾಗಿ ನೀಡುತ್ತೇನೆ.
 • ಸಂಪದ ಸದಸ್ಯರ ಒಂದು ನ್ಯಾಯಮಂಡಳಿಯನ್ನು ರಚಿಸೋಣ. ಅವರ ವಶಕ್ಕೆ ನಾನು ಮುಂಚಿತವಾಗಿ ಒಂದು ಲಕ್ಷ ರೂಪಾಯಿಗಳ ನಗದನ್ನು ನೀಡುತ್ತೇನೆ. ನೀವು ಕರೆದು ತರುವ ಜ್ಯೋತಿಷಿಗಳು ಅಥವ ನೀವೇ ನನ್ನ ಭೂತ ಹಾಗೂ ವರ್ತಮಾನವನ್ನು ಹೇಳಲಿ/ಹೇಳಿ. ಹಾಗೆಯೇ ನಿಗದಿತ ದಿನದಿಂದ ಮುಂದಿನ ಐದು ವರ್ಷಗಳವರೆಗೆ ನನ್ನ ಭವಿಷ್ಯವನ್ನು ೧೦೦ಕ್ಕೆ ನೂರರಷ್ಟು ನಿಖರವಾಗಿ ಹೇಳಲಿ/ಹೇಳಿ. ಹಾಗೆ ಹೇಳಿದರೆ, ಸಂಪದ ನ್ಯಾಯಮಂಡಳಿಯು ಆ ಒಂದು ಲಕ್ಷ ರೂಪಾಯಿಗಳನ್ನು ಬಡ್ಡಿ ಸಮೇತ ಜ್ಯೋತಿಷಿಗಳಿಗೆ ನೀಡಬಹುದು ಎಂದು ಲಿಖಿತ ರೂಪದಲ್ಲಿ ಬರೆದುಕೊಡುತ್ತೇನೆ. ಅಂತಹ ಜ್ಯೋತಿಷಿಗಳನ್ನು ಪರಿಚಯ ಮಾಡಿ ನನ್ನ ಭವಿಷ್ಯವನ್ನು ನಿಖರವಾಗಿ ತಿಳಿಯಲು ಸಹಾಯ ಮಾಡುವ ನಿಮ್ಮನ್ನೂ ಸೂಕ್ತವಾಗಿ ಸನ್ಮಾನಿಸುತ್ತೇನೆ. ಜ್ಯೋತಿಷ ಸತ್ಯವೆ ಅಥವ ಕಲ್ಪನೆಯೆ ಎಂದಬುದನ್ನು ಪರೀಕ್ಷಿಸುವ ಈ ಅಧ್ಯಯನದ ಸೂಕ್ಷ್ಮ ನಿಯಮಗಳನ್ನು ಸಂಪದ ನ್ಯಾಯಮಂಡಲಿ ನಿರ್ಧರಿಸಲಿ.
 • ಈ ಅಧ್ಯಯನಕ್ಕೆ ಒಂದು ಕಾಲಮಿತಿಯನ್ನು ಹಾಕಿಕೊಳ್ಳುವುದು ಸೂಕ್ತ. ಅದನ್ನು ಸಂಪದ ನ್ಯಾಯ ಮಂಡಳಿ ಇಲ್ಲವೇ ತಾವೇ ಸೂಚಿಸಬಹುದು.


ನಮಸ್ಕಾರ.
ನನ್ನಭೂತ-ವರ್ತಮಾನ-ಭವಿಷ್ಯವನ್ನು ನಿಮ್ಮಿಂದ ತಿಳಿಯಲು ನಾನು ಕಾಯುತ್ತಿದ್ದೇನೆ.
-- ನಾ.ಸೋಮೇಶ್ವರ‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (8 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸೋಮೇಶ್ವರರೆ, ನನ್ನನ್ನೇ ಸಂಬೋಧಿಸಿದ ತಮ್ಮ ಮಾಹಿತಿಭರಿತ ಲೇಖನಕ್ಕಾಗಿ ಧನ್ಯವಾದಗಳು. ಎಲ್ಲ ಯುಗಗಳಲ್ಲೂ ಜನನ ಸಮಯದ ಬಗ್ಗೆ ಇದ್ದ ನಂಬಿಕೆಗಳನ್ನು ಬಹಳ ಚೆನ್ನಾಗಿ ವಿವರಿಸಿದ್ದೀರಿ. ನನ್ನ ಒಂದು ಪ್ರತಿಕ್ರಿಯೆ ಇಷ್ಟೊಂದು ವಿದ್ವತ್ಪೂರ್ಣ ಲೇಖನಕ್ಕೆ ಕಾರಣವಾಗಿದ್ದರೆ ನಿಜಕ್ಕೂ ನಾನು ಧನ್ಯ. ನನ್ನ ಸ್ವಲ್ಪ ಖಾರವಾದ ಪ್ರತಿಕ್ರಿಯೆಗೆ ಕಾರಣ ನಿಮ್ಮ ಜನನ ಸಮಯ ನಿರ್ಧಾರ ಮಾಡುವ ಬಗೆಗಿನ ಗೊಂದಲಪೂರಿತ ಪ್ರಶ್ನೆಗಳು. ತಾಯ ಗರ್ಭದಿಂದ ಮಗು ಪೂರ್ಣವಾಗಿ ಹೊರಬಂದ ಸಮಯವನ್ನು ಜನ್ಮಸಮಯ ಎಂದು ನಿರ್ಧರಿಸುವುದು ಈಗ ಆಚರಣೆಯಲ್ಲಿರುವ ಹಾಗೂ ನಮಗೆಲ್ಲರಿಗೂ ಗೊತ್ತಿರುವ ಪದ್ಧತಿ. ನನ್ನ ಪ್ರತಿಕ್ರಿಯೆ ಇಷ್ಟಕ್ಕೆ ಮಾತ್ರ ಸೀಮಿತ. ಅದನ್ನು ಬಿಟ್ಟು ನೀವು ಎತ್ತಿದ ಪ್ರಶ್ನೆಗಳು ನನಗೆ ಬಾಲಿಶವಾಗಿ ಕಂಡವು. ಈಗ ಈ ನಿಮ್ಮ ಲೇಖನ ಓದಿದ ನಂತರ ಅರ್ಥವಾಗುತ್ತಿದೆ, ನೀವು ಇತರ ಯುಗಗಳನ್ನೂ ಮನದಲ್ಲಿಟ್ಟುಕೊಂಡು ಆ ರೀತಿಯ ಪ್ರಶ್ನೆಗಳನ್ನು, ಅದೂ ನಿಮ್ಮ ವಿದ್ಯಾರ್ಥಿ ದೆಸೆಯಲ್ಲಿ, ಎತ್ತಿದ್ದೀರೆಂದು. ಇನ್ನು ಜ್ಯೋತಿಷ್ಯದ ಬಗೆಗೆ ಬಂದರೆ ಅದನ್ನು ನಂಬುವುದು ಬಿಡುವುದು ನಿಮ್ಮ ವೈಯಕ್ತಿಕ ವಿಚಾರ. ನಿಮ್ಮನ್ನು ನಂಬಿ ಎಂದು ನಾನು ಎಲ್ಲಿಯೂ ಒತ್ತಾಯಿಸಿಲ್ಲ, ಯಾರನ್ನೂ ಬಲವಂತವಾಗಿ ಒತ್ತಾಯಿಸಲೂ ಆಗುವುದಿಲ್ಲ. ಅದೆಲ್ಲ ಅವರವರ ಭಾವಕ್ಕೆ, ಅವರವರ ಭಕುತಿಗೆ. ದೇವರನ್ನಾಗಲಿ, ಜ್ಯೋತಿಷ್ಯವನ್ನೆ ಆಗಲಿ ನಾನು ನಂಬುತ್ತೇನೆ, ಏಕೆಂದರೆ ಅದರಿಂದ ನನಗೆ ಒಳ್ಳೆಯದಾಗಿದೆ. ಇನ್ನು ನಿಮ್ಮ ಒಂದು ಲಕ್ಷ ರೂಪಾಯಿಯ ಬಹುಮಾನದ ಬಗ್ಗೆ ಹೇಳುವುದಾದರೆ, ಇದನ್ನು ಇಲ್ಲಿ ಸಂಪದದಲ್ಲಿ ಪ್ರಕಟಿಸುವುದಕ್ಕಿಂತ ವರ್ತಮಾನ ಪತ್ರಿಕೆಗಳಲ್ಲಿ ಪ್ರಕಟಿಸಿದರೆ ಉತ್ತಮ. ಆಗ ನಿಮಗೆ ಅವಶ್ಯವಿರುವಂತಹ ಜ್ಯೋತಿಷಿಗಳು ಸಿಗಬಹುದು. ಏಕೆಂದರೆ ನಾನಾಗಲಿ, ಬೆನಕ ಅಥವಾ ಸುರೇಶ್ ನಾಡಿಗರಾಗಲಿ, ನಿಮಗೆ ಅಂತಹ ಜ್ಯೋತಿಷಿಯೊಬ್ಬನನ್ನು ಹಿಡಿದು ತರುತ್ತೇವೆಂದು ಎಲ್ಲೂ ಹೇಳಿಲ್ಲ. ನಿಮ್ಮ ಜ್ಯೋತಿಷಿಯ ಹುಡುಕಾಟ ಯಶಸ್ವಿಯಾಗಲೆಂದು ಹಾರೈಸುತ್ತೇನೆ. ಇನ್ನು ಸಿಝೇರಿಯನ್ ಬಗ್ಗೆ ಬಂದರೆ ಅದೆಷ್ಟು ನರ್ಸಿಂಗ್ ಹೋಂಗಳಲ್ಲಿ, ಆಸ್ಪತ್ರೆಗಳಲ್ಲಿ ಹಣದಾಸೆಗಾಗಿ ಸಾಮಾನ್ಯ ಹೆರಿಗೆಗಳನ್ನೂ ಸಿಝೇರಿಯನ್ ಆಗಿ ಮಾಡುತ್ತಾರೆನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ. ಅದಕ್ಕೆ ಪ್ರತ್ಯೇಕ ತನಿಖಾ ವರದಿ ಕೊಡುವ ಅಗತ್ಯವಿಲ್ಲ. ಶುಭವಾಗಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾ ಸೊ ಅವರೇ, ಅರ್ಥಪೂರ್ಣ ಮಾಹಿತಿ. ನೀವು ಅಂದುಕೊಂಡಿರುವ ಬಾಲಿಶ ಪ್ರಶ್ನೆಗಳ ಹಿಂದೆಯೂ ಇಂತಹ ಅಗಾಧ ವಿದ್ವತ್ಪೂರ್ಣ ವಿಚಾರಗಳಿವೆ ಎಂದು ಓದಿದಾಗ ನಿಜಕ್ಕೂ ಅಚ್ಚರಿಯಾಯಿತು .ಹಾಗೆಯೇ ಗೌರವವೂ ಹೆಚ್ಚಾಯಿತು. ನಿಮ್ಮಂತಹ ಅರಿತವರನ್ನು ಕೆಣಕಿ ನಮಗೆ ಇಂಥ ಅರ್ಥಪೂರ್ಣ ಲೇಖನದ ಸ್ವಾದವನ್ನು ಉಣಬಡಿಸಲು ಸಹಕಾರಿಯಾದ ಮಂಜಣ್ಣನವರಿಗೂ ಧನ್ಯವಾದಗಳು. ಹಿಂದೆಯೂ ನೀವು ಆಧಾರಸಹಿತ ನೀಡಿದ ಉತ್ತರ ರೂಪದ ಲೇಖನವನ್ನು ಇಲ್ಲಿ ಸ್ಮರಿಸಬಹುದು. ಹೀಗೆ ಇಷ್ಟೆಲ್ಲಾ ತಿಳಿಯಬಹುದು ಎಂದಾದರೆ ಸೂಕ್ತರನ್ನು ಕೆಣಕುವುದು ಒಳ್ಳೆಯದೇ..ಅಲ್ಲವೇ? ಇದಕ್ಕೆ ಅರಿತವರು ಹೇಗೆ,ಏನು ಉತ್ತರ ಕೊಡುವರು ಎಂಬ ನಿರೀಕ್ಷೆಯಲ್ಲಿ ಇದ್ದೇನೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಹ ಹ್ಹ! ಅಷ್ಟಲ್ಲದೇ ಗಂಧದ ಜೊತೆ ಗುದ್ದಾಟವೂ ಲೇಸು ಅಂತ ಹೇಳ್ತಾರೇನ್ರೀ? ಮರುಗದ ಜೊತೆ ಜಗಳ : http://sampada.net/b... -ಹಂಸಾನಂದಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>"ಸಗಣಿಯವನ ಜತೆ ಸರಸಕ್ಕಿಂತ ಗಂಧದವನ ಜತೆ ಗುದ್ದಾಟ ಲೇಸು "< ನಿಜ ಹಂಸಾನಂದಿಯವರೇ.. ಅಪ್ಪಟ ಸತ್ಯ.ಈ ಬರಹವೇ ಅದಕ್ಕೆ ನಿದರ್ಶನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾ ಸೋಮೇಶ್ವರರೇ, ನಿಮ್ಮ ಒ೦ದು ವಿಶ್ಲೇಷಾತ್ಮಕ ವಿದ್ವತ್ಪೂರ್ಣ ಪೂರ್ವಾಗ್ರಹಪೀಡಿತವಲ್ಲದ ಲೇಖನಕ್ಕೆ ನನ್ನ Hats off! ಶತಶತಮಾನಗಳ ಕಾಲ ರೂಢಿಯಲಿರುವ ಒ೦ದು ನ೦ಬಿಕೆಯ ಬಗ್ಗೆ ಅನಗತ್ಯ ವ್ಯ೦ಗ್ಯ ಬಳಸದೆ ಹೇಗೆ ಸಮಚಿತ್ತದಿ೦ದ ಒ೦ದು ಸು೦ದರ ಲೇಖನ ಬರೆಯಬಹುದು ಎ೦ಬುದಕ್ಕೆ ನಿಮ್ಮ ಈ ಲೇಖನ ಸಾಕ್ಶಿ. ನನ್ನ ಅನಿಸಿಕೆಗಳು: ಜ್ಯೋತಿಷ್ಯ ಒ೦ದು ಶಾಸ್ತ್ರ ! ಇಲ್ಲ. ಅದು ಒ೦ದು ಶೋಷಣೆಯಫಲಶ್ರುತಿ ಎ೦ದು ನನಗನ್ನಿಸುತ್ತದೆ. ಇನ್ನು ಜ್ಯೋತಿಷ್ಯಫಲ ಇದು ಮನುಷ್ಯಪ್ರಯತ್ನವನ್ನೇ, ಅವನ ಸ೦ಕಲ್ಪಶಕ್ತಿಯನ್ನೇ ಅನುಮಾನಿಸುವ ಧಿಕ್ಕರಿಸುವ ಒ೦ದು ನಕಾರಾತ್ಮಕ ಒ೦ದು ಮೌಢ್ಯ. ಇಲ್ಲಿ ಶೇಕ್ಸ್ಪಿಯರ್ ಹೇಳಿದ ಒ೦ದು ಮಾತು ನನ್ನ ಮನಸ್ಸಿನಲ್ಲಿ ಸದಾ ಗುಯ್ ಗುಡುತ್ತದೆ "The fault my dear Brutus, lies not in our stars' But in ourselves, that we are underlings.' ಫಲಜ್ಯೊತಿಷ್ಯ ಹೇಳುವ ಮನೆಯಲ್ಲಿ ಎಲ್ಲವೂ ಸರಿಯಾಗಿದೆಯಾ? ಮುರಿದ ಮನೆಗಳು ಭಗ್ನಗೊ೦ಡ ಸ೦ಬ೦ಧಗಳು ಅವಗಢಗಳು, ಅಕಾಲಿಕ ಮರಣ ಅಕಾಲಿಕ ವೈಧವ್ಯ ಅವರಿಗೆ ಕಾಡುತ್ತಿಲ್ಲವಾ? None but the fools believe in prophecies, forsaking their own judgement. Those who know, know that such men only come to grief. ಇದು ಗ್ರೀಕ್ ಚಿ೦ತಕ ಯೂರಿಪಿಡೀಸ್ ನ ಮಾತುಗಳು. ಸ್ವಲ್ಪ ವಿವೇಕಿಯಾಗೋಣ. ದೇವರು ನಮಗೆ ಬುದ್ಧಿಯನ್ನೂ ದಯಪಾಲಿಸಿದ್ದಾನೆ. ಅದನ್ನು ಉಪಯೋಗಿಸುವುದು ಯಾವಾಗ??
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜಕ್ಕೂ ಉತ್ತಮ ಲೇಖನ. ಡಾಕ್ಟ್ರೆ, ನಿಂತುಕೊಂಡೇ ಮಗುವಿಗೆ ಜನ್ಮ ನೀಡುವ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಆಸೆ ಇದೆ. ನೀವೇ ವಿಷಯಾ೦ತರ ಆಗತ್ತೆ ಅ೦ತ ಹೇಳಿದರೂ ತಿಳ್ಕೋಬೇಕು ಅನ್ನೋ ಆಸಕ್ತಿಯಿ೦ದ ಕೇಳ್ತಾ ಇದೀನಿ. ಸಾದ್ಯ ಆದ್ರೆ ಪ್ರತಿಕ್ರಯಿಸಿ. ಮಲಗಿಕೊಂಡು ಹೆರುವುದು ಹೇಗೆ ಅವೈಜ್ಞಾನಿಕ ? ನಿ೦ತು ಹೆರುವುದರಿ೦ದ ಹೇಗೆ ಸುಖಪ್ರಸವವಾಗುತ್ತದೆ ? ನಿ೦ತು ಹೆರುವುದರಿ೦ದ ಸುಖಪ್ರಸವವಾಗುವುದಾದರೆ ಮಾನವ ಮಲಗಿಕೊಂಡು ಹೆರುವುದು ಯಾಕೆ ರೂಡಿಸಿಕ೦ಡ ? -- ಹರ್ಷ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾ.ಸೋಮೇಶ್ವರರಿಗೆ, "ಈ ಲೇಖನದ ಮುಗಿಸುವ ಮೊದಲು ನನ್ನ ಒಂದು ವಿನಂತಿ. ಜ್ಯೋತಿಷವು ಒಂದು ಶಾಸ್ತ್ರವೇ ಅಥವ ಅಲ್ಲವೇ ಎಂಬುದನ್ನು ಒರೆಗೆ ಹಚ್ಚಲು ನಾನು ಸಿದ್ಧ. ನಾನು ಹುಟ್ಟಿದ ದಿನ, ಸಮಯ, ಸ್ಥಳ ಇತ್ಯಾದಿಗಳನ್ನು ನೀಡುತ್ತೇನೆ. ನನ್ನ ಭೂತ, ವರ್ತಮಾನ ಹಾಗೂ ಭವಿಷ್ಯವನ್ನು ನೂರಕ್ಕೆ ನೂರರಷ್ಟು ನಿಖರವಾಗಿ ಹೇಳಿದ ಜ್ಯೋತಿಷಿಗೆ ನಾನು ಒಂದು ಲಕ್ಷ ರೂಪಾಯಿಗಳ ನಗದನ್ನು ಬಹುಮಾನವಾಗಿ ನೀಡುತ್ತೇನೆ." ಖುಷಿ ಆಯ್ತು! ನಮ್ಮೂರಲ್ಲೂ ಜೇಮ್ಸ್ ರಾಂಡಿ ಇದಾರಲ್ಲ ಅಂತ :) http://www.randi.org... ವಿಷಯಕ್ಕೆ ಅಷ್ಟಾಗಿ ಸಂಭಂದಿಸಿದ್ದಲ್ಲದ ಒಂದು ಪ್ರಶ್ನೆ. ನಿಮಗೆ ಸಮಯವಾದಾಗ ಉತ್ತರಿಸಿ. ಮನುಷ್ಯನ ಸ್ಪಾನ್ ಆಫ್ ಲೈಫ್ ನಲ್ಲಿ, ಸುಮಾರಾಗಿ ಯಾವ ವಯಸ್ಸಿನಿಂದ ಯಾವ ವಯಸ್ಸಿನವರೆಗೆ ಅವನ/ಳ ಯೋಚನೆಗಳಲ್ಲಿ ಕ್ಲಾರಿಟಿ, ಅವನ್ನು ಎಕ್ಸಿಕ್ಯೂಟ್ ಮಾಡುವಲ್ಲಿ ಶ್ರದ್ಧೆ ಈ ಗುಣಗಳು ಹೆಚ್ಚಾಗಿ ಕಂಡುಬರುತ್ತವೆ? ಮನುಷ್ಯನ-biology ಯ ಪ್ರಕಾರ ಯಾವಾಗ? statistics ನ ಪ್ರಕಾರ ಯಾವಾಗ? ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಸೋ ಸರ್.. ನಿಮ್ಮ ಲೇಖನದಿಂದ ಎಷ್ಟೋ ವಿಷಯಗಳು ತಿಳಿದವು..ತುಂಬಾ ಧನ್ಯವಾದಗಳು:). ನಿಮ್ಮ ಒಂದು ಲಕ್ಷ ರೂಪಾಯಿಯ ಸವಾಲನ್ನು ನೋಡಿ..ಅದೂ <<ಹಾಗೆಯೇ ನಿಗದಿತ ದಿನದಿಂದ ಮುಂದಿನ ಐದು ವರ್ಷಗಳವರೆಗೆ ನನ್ನ ಭವಿಷ್ಯವನ್ನು ೧೦೦ಕ್ಕೆ ನೂರರಷ್ಟು ನಿಖರವಾಗಿ ಹೇಳಲಿ/ಹೇಳಿ.>> ಎಂಬ ವಾಕ್ಯವನ್ನು ನೋಡಿ ನಾನು ಓದಿದ ಎರಡು ಕಥೆಗಳು ನೆನಪಿಗೆ ಬಂದವು. - ಒಬ್ಬ ರಾಜನಿದ್ದ. ಆ ರಾಜನ ಆಸ್ಥಾನಕ್ಕೆ ಭೂತ-ವರ್ತಮಾನ-ಭವಿಷ್ಯವನ್ನು ನಿಖರವಾಗಿ ಹೇಳಬಲ್ಲ ಒಬ್ಬ ಹೆಸರಾಂತ ಜ್ಯೋತಿಷಿ ಬಂದ. ರಾಜನಿಗೆ ಇವನ ಭವಿಷ್ಯ ಸುಳ್ಳು ಎನಿಸಬೇಕಾಗಿತ್ತು. ಮೊದಲು ತನ್ನದೇ ಭವಿಷ್ಯ ಹೇಳುವಂತೆ ಹೇಳಿ, ತಾನು ಯಾವಾಗ ಮರಣ ಹೊಂದುತ್ತೇನೆ ಎಂದು ಕೇಳಿದ. ಜ್ಯೋತಿಷಿ ಲೆಕ್ಕಾಚಾರ ಹಾಕಿ ಇನ್ನೊಂದು ವರುಷದ ನಂತರ..ಇಂಥ ದಿನ ಎಂದ. ರಾಜನಿಗೆ ಸಿಟ್ಟು ಬಂದರೂ ತಡೆದುಕೊಂಡು, ನಿಮ್ಮ ಮರಣ ಯಾವಾಗ ಎಂದು ಜ್ಯೋತಿಷಿಯನ್ನೆ ಕೇಳಿದ. ಜ್ಯೋತಿಷಿ ಮತ್ತೆ ಲೆಕ್ಕಾಚಾರ ಹಾಕಿ ಐದು ವರುಷದ ನಂತರ..ಇಂಥ ದಿನ ಎಂದ. ಕೇಳಿಸಿಕೊಂಡ ರಾಜ 'ಅಷ್ಟು ಖಚಿತವೇ?' ಎಂದು ಜ್ಯೋತಿಷಿಯನ್ನು ಕೇಳಿದ. ಜ್ಯೋತಿಷಿ 'ಹೌದು, ನನ್ನ ಲೆಕ್ಕಾಚಾರ ತಪ್ಪಲು ಸಾಧ್ಯವೇ ಇಲ್ಲ ' ಎಂದ. ರಾಜ ಕೂಡಲೇ ಎದ್ದವನೇ, ತನ್ನ ಖಡ್ಗ ಹಿರಿದು, ಜ್ಯೋತಿಷಿಯ ತಲೆ ತರಿದು ಗಹ-ಗಹಿಸಿ ನಕ್ಕ!. - ಇನ್ನೊಬ್ಬ ಜ್ಯೋತಿಷಿಯ ಪರೀಕ್ಷೆ ಇದೇ ರಾಜನಿಂದ. ರಾಜನ ಕೈಮುಷ್ಟಿಯಲ್ಲಿ ಹಕ್ಕಿ, ಅದರ ಮೇಲೆ ವಸ್ತ್ರ ಮುಚ್ಚಲ್ಪಟ್ಟಿದೆ. ರಾಜನ ಪ್ರಶ್ನೆ ಜ್ಯೋತಿಷಿಗೆ ತನ್ನ ಮುಷ್ಟಿಯಲ್ಲಿರುವ ಹಕ್ಕಿ ಸತ್ತಿದಿಯೋ, ಜೀವಂತವಿದೆಯೋ. ಜ್ಯೋತಿಷಿ ವಿಚಾರ ಮಾಡಿದ ..ತಾನು ಹಕ್ಕಿ ಜೀವಂತವಿದೆ ಎಂದರೆ, ರಾಜ ಮುಷ್ಟಿ ಹಿಚುಕಿ ಹಕ್ಕಿಯನ್ನು ಕೊಲ್ಲುತ್ತಾನೆ. ಸತ್ತಿದೆ ಎಂದರೆ, ಜೀವಂತ ಹಕ್ಕಿಯನ್ನು ತೋರಿಸುತ್ತಾನೆ!. ಜ್ಯೋತಿಷಿ ಜ್ಯೋತಿಷ್ಯಕ್ಕಿಂತಲೂ ಬುದ್ದಿವಂತಿಕೆ ಬಳಸಿದ, ಬದುಕಿದರೆ ಬೇಡಿ ತಿಂದೇನೆಂದೆಣಿಸಿ ಹೇಳಿದ 'ಮಹಾರಾಜ, ನೀವು ದೇವರ ಸಮಾನ. ಈ ರಾಜ್ಯದಲ್ಲಿ ನಿಮ್ಮಿಚ್ಛೆಯಿಲ್ಲದೇ ಒಂದು ಹುಲ್ಲು ಕಡ್ಡಿಯೂ ಅಲುಗಾಡದು..ಅಂದಮೇಲೆ ಈ ಹಕ್ಕಿಯ ಅಳಿವು,ಉಳಿವು ಕೂಡ ನಿಮ್ಮ ಕೈಯಲ್ಲಿದೆ' !.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಕಥೆಗಳನ್ನು ಇಲ್ಲಿ ಉಲ್ಲೇಖಿಸಲು ಕಾರಣ ಯಾವುದೇ ಸಂಗತಿಯ 'ಭವಿಷ್ಯ'ವನ್ನು ಯಾರೂ ನೂರಕ್ಕೆ ನೂರು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯ / ಒಂದು ಕಾರ್ಯದ 'ಭವಿಷ್ಯ' ಎನ್ನುವುದು ಸುತ್ತಮುತ್ತಲಿನ ಸಂಗತಿಗಳ ಮೇಲೆ, ಅವುಗಳ ವರ್ತನೆಯ ಮೇಲೆ ಅವಲಂಬಿತವಾಗಿರುತ್ತದೆ. ಯಾರೋ ಭವಿಷ್ಯ ಹೇಳಿದರೂ ಅವುಗಳನ್ನು ಸುಳ್ಳು ಮಾಡಿಸಬಹುದಾದ 'ಅರ್ಹತೆ' ನಮಗಿದೆ ಎಂದು. ವೈಜ್ಞಾನಿಕ ವಿಷಯಗಳಲ್ಲೂ ಇದು ಸತ್ಯ. ನೂರಕ್ಕೆ ನೂರು ಸಫಲತೆಯ ಸಾಧ್ಯತೆ ಇಲ್ಲವೆಂದೇ ಅತ್ಯಂತ ಕರಾರುವಾಕ್ಕಾಗಿ ಯೋಜಿಸಲ್ಪಟ್ಟ ಉಪಗ್ರಹ ಉಡಾವಣೆಯನ್ನೂ ವಿಮೆಯ ಕೆಳಗೆ ತರುತ್ತಾರೆ. ಅತ್ಯಂತ ಭರವಸೆಯೊಂದಿಗೆ, ಅತಿ ಯೋಜಿತವಾಗಿ, ಎಲ್ಲ ಪ್ರಮುಖ ದೇಶಗಳ ವಿಜ್ಙಾನಿಗಳ ಮಿದುಳಿನ ಕೂಸಾಗಿ ಪ್ರಾರಂಭವಾದ 'ಮಹಾ ಸ್ಪೋಟ'ದ ಅಧ್ಯಯನ ಕೂಡಾ ಅಡೆ-ತಡೆಗಳಿಂದ ಕೂಡಿ,ಮೊದಲೇ ಊಹಿಸದ ಕಾರಣಗಳಿಗಾಗಿ ನಿಲ್ಲಿಸಲ್ಪಡಬೇಕಾಗಿ ಬರುತ್ತದೆ. ಅದರ ಪ್ರಗತಿ ವಿಳಂಬಗೊಳ್ಳುತ್ತಲೆ ಹೋಗಿ..ಒಂದು ದಿನ ಪ್ರಯೋಗ ಮುಗಿದಿದೆ, ಎಲ್ಲವೂ ಸುಖಾಂತವಾಗಿದೆ ಎಂದು ಘೋಷಿಸಲ್ಪಡಬೇಕಾಗಿ ಬರುತ್ತದೆ!!. ವಿಫಲತೆಗಳನ್ನು ವಿಜ್ಙಾನ ವಿನಯದಿಂದ ಒಪ್ಪಿಕೊಳ್ಳುತ್ತದೆ, ತಪ್ಪುಗಳನ್ನು ಒಪ್ಪಿಕೊಂಡು ಭವಿಷ್ಯದತ್ತ ಮುಂದಡಿಯಿಡುತ್ತದೆ ಎಂದೆಲ್ಲಾ ಹೇಳುವವರು ಉಳಿದ ಶಾಸ್ತ್ರಗಳಿಗೆ/ಪದ್ಧತಿಗಳಿಗೆ/ನಂಬಿಕೆಗಳಿಗೆ ತನ್ನ 'ವಿಫಲತೆ ಒಪ್ಪಿಕೊಳ್ಳುವ' 'ವಿನಯ ತೋರಿಸುವ' ಅವಕಾಶವನ್ನೇಕೆ ನೀಡುವುದಿಲ್ಲ? ನಮ್ಮ ತಿಳುವಳಿಕೆಗೆ ಬಂದದಷ್ಟೇ ಸತ್ಯವೆ? ಈ ಅಗಾಧ ಬ್ರಹ್ಮಾಂಡದಲ್ಲಿ ನಮ್ಮ ಗಮನಕ್ಕೆ ಬಾರದ, ತಿಳುವಳಿಕೆಗೆ ಹೊರತಾಗಿರುವ ವಿಷಯಗಳಿನ್ನೇಷ್ಟೋ ಇರಬಹುದಾದ ಸಾಧ್ಯತೆ ಇದೆಯಲ್ಲವೆ?? ಇನ್ನು ಜ್ಯೋತಿಷ್ಯಶಾಸ್ತ್ರದ ಬಗ್ಗೆ..ನಾನು ಓದಿದ ಪ್ರಕಾರ ಒಬ್ಬ ಮನುಷ್ಯನ ಜಾತಕದಲ್ಲಿ ಉದಾಹರಣೆಗೆ..ಸಂಗೀತಕ್ಕೆ ಇಂಬು ಕೊಡುವ ಲಕ್ಷಣಗಳಿದ್ದಲ್ಲಿ ಅದನ್ನು ಹೇಳುವುದು ಜ್ಯೋತಿಷ್ಯದ ಧರ್ಮ. ಉತ್ತಮ ಸಂಗೀತಗಾರನಾಲು ಸಂಗೀತದ ಶಿಕ್ಷಣ ಪಡೆಯಬೇಕಾದ್ದದ್ದು ಜಾತಕನ ಕರ್ತವ್ಯ. ಅದನ್ನು ಮಾಡದೆ ವಿಫಲತೆಯನ್ನು ಜ್ಯೋತಿಷ್ಯದ ಮೇಲೆ ಅಪಾದಿಸಿದರೆ ಸರಿಯೆ? ಶಸ್ತ್ರಚಿಕಿತ್ಸೆಗೆ ಒಳಗಾಗುವ ವ್ಯಕ್ತಿಯನ್ನು ದೈಹಿಕವಾಗಿ ಮೊದಲೇ ಸಿದ್ಧಪಡಿಸುವಂತೆ, ನಿಯಮಬದ್ಧಗೊಳಿಸುವುವಂತೆ ಉದಾ: ಖಾಲಿಹೊಟ್ಟೆಯಲ್ಲಿ ಇರಬೇಕು, ಈ ಔಷಧಿ ತೆಗೆದುಕೊಳ್ಳಬೇಕು, ಈ ಪಥ್ಯ ಮಾಡಬೇಕು ಎಂದೆಲ್ಲಾ ಪಾಲಿಸುವಂತೆ ಒಬ್ಬ ಉತ್ತಮ ಜ್ಯೋತಿಷಿಯ ಹತ್ತಿರ ಹೋಗುವವನು ಮಾನಸಿಕ ಸಿದ್ಧತೆಗಳನ್ನು ಮಾಡಿಕೊಂಡು, ಪವಿತ್ರತೆಯನ್ನು ಕಾದುಕೊಳ್ಳಬೇಕಾಗಿ ಬರುತ್ತದೆ. ಇಲ್ಲಿ ಭವಿಷ್ಯ ಹೇಳುವವನಷ್ಟೇ ಭವಿಷ್ಯ ಕೇಳುವವನು ಮುಖ್ಯನಾಗುತ್ತಾನೆ. ಕೇವಲ ಹಣದ ಆಸೆಗೆ ಜ್ಯೋತಿಷ್ಯ ಹೇಳಲು ಇಳಿಯುವವರು ನಿಜವಾದ ಸಾಧಕರಾಗಿರುವುದಿಲ್ಲ. ಟಿ.ವಿ ಜ್ಯೋತಿಷಿಗಳ ವಿಷಯ ಇಲ್ಲಿ ಪ್ರಸ್ತಾಪಿಸುತ್ತಿಲ್ಲ. ನನಗನಿಸುವಂತೆ ವಿಜ್ಙಾನಕ್ಕೂ ಮಿತಿ ಇದೆ..ತಿಳಿಯಲಾರದ ಎಷ್ಟೋ ಸಂಗತಿಗಳಿವೆ. ಜಗತ್ತಿನ ಪ್ರತಿಯೊಂದು ಆಗು-ಹೋಗುಗಳನ್ನು ಪ್ರತಿ ಪ್ರಶ್ನೆಗಳಿಗವಕಾಶ ಇಲ್ಲದಂತೆ, ಪ್ರತಿಶತ ನೂರರಂತೆ ವಿಜ್ಙಾನ ನಿರೂಪಿಸಿದ ನಂತರ ಎಲ್ಲರನ್ನು 'ವೈಜ್ಙಾನಿಕ ಮನೋಭಾವ 'ದ ಛತ್ರಿಯಡಿಯೇ ಇರಬೇಕು ಎಂದು ತಾಕೀತು ಮಾಡೋಣ. ಅದಾಗುವವರೆಗೆ 'ವೈಜ್ಙಾನಿಕ ಮನೋಭಾವ ' ಇಲ್ಲದ/ಕಡಿಮೆ ಇರುವ/ಸಾರಾಸಗಟಾಗಿ ನಂಬದ/ಅನುಕೂಲಕ್ಕೆ ತಕ್ಕಂತೆ ನಂಬುವ ಇತರ ಪ್ರಜೆಗಳನ್ನು ಮೂಢರು, ಮೂರ್ಖರು ಎನ್ನದಿರೋಣ!. ( ಇದು ನಾಸೋರವರ ಪ್ರಸ್ತುತ ಲೇಖನಕ್ಕೆ ನೇರ ಪ್ರತಿಕ್ರಿಯೆಯಲ್ಲ..ನಂಬಿಕೆಗಳು, ವೈಜ್ಙಾನಿಕ ಮನೋಭಾವದ ಬಗ್ಗೆ ಒಂದು ಪುಟ್ಟ ಟಿಪ್ಪಣಿ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿಜಯ್: ನಿಮ್ಮ ಅಭಿಪ್ರಾಯಕ್ಕೆ ನನ್ನದೂ ಸಮ್ಮತಿಯಿದೆ, ಏಕೆಂದರೆ ಹೆಚ್ಚೂ ಕಮ್ಮಿ ನನ್ನದೂ ಅದೇ ಅಭಿಪ್ರಾಯ (ವಿಜ್ಞಾನದ ಬಗ್ಗೆ). ಇತೀ, ಉಉನಾಶೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಉಮೇಶ್ :). ನಾನು ಕೂಡ ನನ್ನ ಭವಿಷ್ಯವನ್ನು ಯಾವುದೇ ಜ್ಯೋತಿಷಿಯ ಹತ್ತಿರ ಕೇಳಿಲ್ಲ..ಬಹುಷಃ ಕೇಳುವುದು ಇಲ್ಲ. ಆದರೆ ನನ್ನ ಅನುಭವಕ್ಕೆ ಬಂದ ಕೆಲವು ಘಟನೆಗಳಿಂದ ಜ್ಯೋತಿಶ್ಯಾಸ್ತ್ರದ ಮೇಲೆ ತೀರ ಅಪನಂಬಿಕೆಯೂ ಇಲ್ಲ. ವಿರಾಮವಿದ್ದಾಗ ಒಮ್ಮೆ ಜೇಮ್ಸ ರಾಂಡಿ ಫೌಂಡೇಶನ್ ನ ತಾಣಕ್ಕೆ ಭೆಟ್ಟಿಕೊಟ್ಟು ಮಿಲಿಯನ್ ಡಾಲರ್ ಸವಾಲಿನ applicants log ನ ಕೆಲವು ಕೇಸ್ ಗಳನ್ನು ಓದಿ.(ನಾನು ಓದಿದ್ದು psychic reading, alternative medicine field ನ ಕೆಲವು ಕೇಸ್ ಗಳು ) ಈ ಮಿಲಿಯನ್ ಡಾಲರ್ ಯಾರೂ ಗೆಲ್ಲಲಿಲ್ಲ..ಗೆಲ್ಲಲು ಸಾಧ್ಯವೂ ಇಲ್ಲ. ಯಾಕೆಂದರೆ ಉಳಿದವರಿಂದ ಇವರು ಬಯಸುವುದು ಶೇಕಡಾ ನೂರರ ಫಲಿತಾಂಶ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಸೋಮೇಶ್ವರ ಅವರೆ, ನಾನು ಈದಿನ ಜ್ಯೋತಿಷ್ಯ ಲೋಕಕ್ಕೆ ಕಾಲಿರಿಸಿದೆ :) ವಿಜಯ ಕರ್ನಾಟಕದ ಈ ದಿನದ (೧೧-೬-೨೦೧೦) ಲವಲವಿಕೆ ವಿಭಾಗದಲ್ಲಿ ರಾಜೀವ ಲೋಚನ ಅವರು ಹೇಳಿಕೊಟ್ಟಂತೆ, ೩ಏ ನಿಮಿಷದಲ್ಲಿ ಜನ್ಮಕುಂಡಲಿ ರಚಿಸುವುದನ್ನು ಕಲಿತೆ. ಆಗಲೇ ಒಂದು ಕೇಸು ಬೇರೆ ಸಿಕ್ಕಿತು- (>>ನಮಸ್ಕಾರ. ನನ್ನಭೂತ-ವರ್ತಮಾನ-ಭವಿಷ್ಯವನ್ನು ನಿಮ್ಮಿಂದ ತಿಳಿಯಲು ನಾನು ಕಾಯುತ್ತಿದ್ದೇನೆ. -- ನಾ.ಸೋಮೇಶ್ವರ) ಸರ್, ನೀವು ಪ್ರಸಿದ್ಧರಿರುವುದರಿಂದ ನಿಮ್ಮ ಭೂತ, ವರ್ತಮಾನ ಎಲ್ಲರಿಗೂ ತಿಳಿದಿದೆ. ಅದನ್ನು ಹೇಳುವುದರಲ್ಲಿ ಹೆಚ್ಚುಗಾರಿಕೆ ಏನಿಲ್ಲ. ಇನ್ನು ಭವಿಷ್ಯ-(>>>ಮುಂದಿನ ಐದು ವರ್ಷಗಳವರೆಗೆ ನನ್ನ ಭವಿಷ್ಯವನ್ನು ೧೦೦ಕ್ಕೆ ನೂರರಷ್ಟು ನಿಖರವಾಗಿ ಹೇಳಿ.) ಸದ್ಯಕ್ಕೆ ಮುಂದಿನೆರಡು ದಿನದ್ದು ಹೇಳುತ್ತೇನೆ-(ನಿಮ್ಮ ಕುಂಡಲಿ ಇನ್ನೂ ನೋಡಿಲ್ಲ) ಬಹಳ ಬಹಳ busy ಇರುತ್ತೀರಿ. ಸಂಡೆ ಕೆಲ ಸಂಪದಿಗರನ್ನ ಭೇಟಿಯಾಗಲಿದ್ದೀರಿ. ೧೦೦೦೦೦/೫/೧೨/೩೦*೨=? ಒಂದೆರಡು ಲೆಕ್ಕ ಮಾಡಿ ಅಥವಾ ಕವಡೆ ಆಕಡೆ ಈಕಡೆ ಹಾಕಿ ಅಥವಾ ಕಂಪ್ಯೂಟರ್‌ನಲ್ಲಿ ಒಂದೆರಡು ಕ್ಲಿಕ್ ಮಾಡಿ ೧೦ ನಿಮಿಷದಲ್ಲೇ ಸಾವಿರಾರು ರುಪಾಯಿ ಸಂಪಾದಿಸುವ ಜ್ಯೋತಿಷಿಗೆ( ಅದೂ ೫! ವರ್ಷದ ಭವಿಷ್ಯ ಹೇಳಬೇಕು!!) ನಿಮ್ಮ ಚಾಲಂಜ್‌ನ ಹಣ ನಗಣ್ಯ. ಒಂದೆರಡು ಕೋಟಿಯಾದರೂ ಮಾಡಿ ಸರ್. ನಾನು ಪ್ರಯತ್ನಿಸುತ್ತೇನೆ. :) :) -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್ ನಿಮ್ಮ ತಾಳ್ಮೆಗೆ, ವಿಚಾರ ಸರಣಿಗೆ, ಅದನ್ನು ಪ್ರಸ್ತುತ ಪಡಿಸಿರುವ ರೀತಿಗೆ, ವೈಜ್ಞಾನಿಕ ಮನೋಭಾವಕ್ಕೆ ನಮ್ಮ (ಅಂದರೆ ನನ್ನ ಮನೆಯವರ ಮತ್ತು ಇಬ್ಬರು ಸ್ನೇಹಿತರ) ಅಭಿನಂದನೆಗಳು. ನಿಮ್ಮ ಸವಾಲನ್ನು ಯಾರಾದರೂ ಸ್ವೀಕರಿಸುತ್ತಾರೆಯೇ ಎಂಬುದನ್ನು ನಾವೂ ಕಾದುನೋಡುತ್ತಿದ್ದೇವೆ. ಮನುಷ್ಯ ಪ್ರಜ್ಞೆ ನಿಜವಾಗಿ ಸ್ವತಂತ್ರವೋ? ಅದು ಗ್ರಹತಾರೆನಿಹಾರಿಕೆಗಳಂತೆ ಸೃಷ್ಟಿಯ ನಿಯಮಗಳಿಗೆ ಅನುಸಾರವಾಗಿ ವರ್ತಿಸುತ್ತದೆಯೋ ಇಲ್ಲವೋ ಇವೆಲ್ಲವೂ ತೇಜಸ್ವಿಯವರು ಹೇಳುವಂತೆ 'ಚಿದಂಬರ ರಹಸ್ಯ'. ಸೃಷ್ಟಿಯ ನಿಯಮದಂತೆ ಕರಾರುವಕ್ಕಾಗಿ ಲಕ್ಷಾಂತರ ವರ್ಷಗಳಿಂದ ವರ್ತಿಸುತ್ತಾ ಬಂದಿರುವ ಆಕಾಶ ಕಾಯಗಳನ್ನೇ ತನ್ನ ಅನುಕೂಲಕ್ಕೆ ತಕ್ಕಂತೆ (ಸಹಜ ಜನ್ಮ ಸಮಯವನ್ನು ತನ್ನ ನಂಬಿಕೆಯ ಸಮಯಕ್ಕೆ) ಬದಲಾಯಿಸುವ ಮನುಷ್ಯನ ಮನಸ್ಸು 'ಏನು?' ಸ್ವತಂತ್ರವೇ? ವಿಶ್ವನಿಯಮಾಂತರ್ಗತವೇ? ವಿಶ್ವನಿಯಮಾತೀತವೇ? ನಿಮ್ಮ ಸವಾಲು ಸ್ವೀಕರಿಸಿದವರು ಒಂದು ಲಕ್ಷರೂಪಾಯಿ ಗೆಲ್ಲುವಂತಾದರೆ ಈ ಕೆಲವು ಅನುಮಾನಗಳೂ ಬಗೆಹರಿಯಬಹುದು! ಜೋತಿಷ್ಯದ ಮೊದಲ ಭಾಗ ಸ್ವೀಕೃತವೇ ಆದರೂ "ಜ್ಯೋತಿಷದ ಎರಡನೆಯ ಭಾಗವಾದ ಫಲ ಜ್ಯೋತಿಷದ ಬಗ್ಗೆ ನನ್ನ ಅನುಮಾನಗಳಿವೆ" ಎಂಬ ನಿಮ್ಮ ಅಭಿಪ್ರಾಯ ನಮ್ಮಗಳದೂ ಆಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾ ಸೋಮೇಶ್ವರ ಅವರೇ, ನಿಮ್ಮ ಯೋಚನಾ ಲಹರಿಗೂ ನನ್ನದಕ್ಕೂ ಒಂದೇ ವ್ಯತ್ಯಾಸ. ನೀವು ಜ್ಯೋತಿಷ್ಯದಲ್ಲಿ ಭವಿಷ್ಯ ನುಡಿಯುವಿಕೆಗೆ ಹೆಚ್ಚು ಒತ್ತು ಕೊಟ್ಟಿದ್ದೀರಿ. ನಾನು ಭವಿಷ್ಯದಲ್ಲಿ ನನ್ಗೆ ಏನಾಗುತ್ತದೆ ಎಂದು ನಿಖರವಾಗಿ ತಿಳಿಯುವುದಕ್ಕಿಂತಲೂ ಏನು ಆಗುವ ಸಾಧ್ಯತೆಯಿದೆ (probability) ಮತ್ತು ಇದಕ್ಕೆ ನಾನು ಏನು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂಬುದಾಗಿ ಅಷ್ಟೆ. ಇದನ್ನು ನಾನು ಮೊದಲೂ ಸ್ಪಷ್ಟ ಪಡಿಸಿದ್ದೇನೆ. ದೇವರ ಮೇಲಿನ ನಂಬಿಕೆ, ಕರ್ಮ ಸಿಧ್ಧಾಂತವೇ ಜ್ಯೋತಿಷ್ಯದ ಮೂಲವೇ ಹೊರತು ಕಾಲಗಣನೆಯಲ್ಲ. ನಿಮಗೆ ಮುಂದೆ ೫ ವರ್ಷಗಳಲ್ಲಿ ಏನು ಆಗುತ್ತದೆ ಎಂದು ನಿಖರವಾಗಿ ತಿಳಿಯುವುದು ಜ್ಯೋತಿಷ್ಯವಾದರೆ ನನಗೆ ನನ್ನ ಕರ್ಮಫಲ ಯಾವ ರೀತಿಯಲ್ಲಿದೆ ಎಂದು ತಿಳಿದು ಅದಕ್ಕನುಗುಣವಾಗಿ ನನ್ನ ಕಾರ್ಯವನ್ನು ಮಾಡುವ ಒಂದು ಪ್ರಯತ್ನ ಅಷ್ಟೆ. ನೀವು ಜ್ಯೋತಿಷ್ಯದ ಬಗ್ಗೆ ತರ್ಕಿಸಬೇಕಾದರೆ ಮೊದಲು ಕರ್ಮ ಸಿಧ್ಧಾಂತದ ಬಗ್ಗೆ ಚರ್ಚಿಸಿ ನಿಮ್ಮ ನಿರ್ಧಾರಕ್ಕೆ ಬರಬಹುದು. ಕಾಲಗಣನೆಯ ಬಗ್ಗೆ ಮತ್ತೆ ಯೋಚಿಸಬಹುದು ಯಾಕೆಂದರೆ ಬರೇ ಭವಿಷ್ಯ ನುಡಿಯುವಿಕೆಯೇ ಜ್ಯೋತಿಷ್ಯವಾಗಿದ್ದು, ಅದರ ಮೇಲೆ ನಮ್ಮ ಪ್ರಯತ್ನವು ಏನೇನೂ ಅಲ್ಲದಿದ್ದರೆ ಅದನ್ನು ತಿಳಿದು ಮಾಡುವುದಾದರೂ ಏನು? ಹಿಂಟ್ - ದಿನಕ್ಕೆ ೨೪ ಗಂಟೆಯೂ ಸತ್ಕಾರ್ಯ ಮಾಡುವವನಿಗೆ, ಸಮಾಧಿ ಸ್ಥಿತಿಯಲ್ಲಿರುವ ಯೋಗಿಗೆ, ದೇವರಿಗೆ ಜ್ಯೋತಿಷ್ಯದ ಅಗತ್ಯವಿಲ್ಲ. ಯಾಕೆಂದರೆ ಅದನ್ನು ತಿಳಿದು ಆತ ಮಾಡುವುದಾದರೂ ಏನು? ಯಾವುದೆಲ್ಲ ಒಳ್ಳೆಯ ಕೆಲಸ ಸಾಧ್ಯವೋ ಅದನ್ನು ಈಗಾಗಲೇ ಆತ ಮಾಡುತ್ತಿದ್ದಾನಲ್ಲ? ನನ್ನ ಅನಿಸಿಕೆ ಮಟ್ಟಿಗೆ ಹೇಳುವುದಾದರೆ ಯಾವನೇ ಒಬ್ಬ ಜ್ಯೋತಿಷಿಗೆ ೫ ವರ್ಷಗಳ ಫಲ ಹೇಳುವುದು ಅಸಾಧ್ಯ. ನಿಖರತೆಯು ಎಂದಿಗೂ ಜ್ಯೋತಿಷ್ಯ ಶಾಸ್ತ್ರದ priority ಆಗಿರಲಿಲ್ಲ ಎಂದು ನನ್ನ ಅನಿಸಿಕೆ. ಕೇವಲ ತರ್ಕಕ್ಕಾಗಿ ಜ್ಯೋತಿಷ್ಯದ ಅಧ್ಯಯನ ಮಾಡುವವನಿಗೆ ಅದು priority ಆಗಿರಬಹುದು ಆದರೆ ಒಬ್ಬ ಸಾಧಕನಿಗಲ್ಲ. ನಾನು ನಿಖರವಾಗಿ ಭವಿಷ್ಯ ಹೇಳಬಲ್ಲೆ ಎನ್ನ್ನ್ನುವವ ಒಬ್ಬ ಅಹಂಕಾರಿಯಾಗಿರಬೇಕು ಅಥವಾ ಕಪಟ ಜ್ಯೋತಿಷಿಯಾಗಿರಬೇಕು. ಇನ್ನು ನಿಮ್ಮ ಒಂದು ಲಕ್ಷ ರೂಪಾಯಿಯ ಸವಾಲು ಹೊಸದೇನಲ್ಲ. ದೇವರನ್ನು ತೋರಿಸಿಕೊಟ್ಟರೆ ಇಂತಿಷ್ಟು ದುಡ್ಡೊ ಕೊಡುತ್ತೇವೆ ಎಂದು ಹೇಳಿದ ಕಥೆಗಳನ್ನೆಲ್ಲ ಕೇಳಿರುತ್ತೇವಲ್ಲ. ಪ್ರಜ್ಞಾವಂತ ಜ್ಯೋತಿಷಿಯೊಬ್ಬ ಈ ಸವಾಲನ್ನು ನಯವಾಗಿ ತಿರಸ್ಕರಿಸಿ ವಾಸ್ತವವನ್ನು ಅರುಹಬೇಕು. ಇದರಲ್ಲಿ ಮಾನ ಹೋಗುವ ಪ್ರಶ್ನೆಯೇ ಇಲ್ಲ. ದೇವರನ್ನು ತೋರಿಸಿಕೊಡಿ ಎಂದು ಕೇಳುವವನಿಗೆ ತೋರಿಸಿಕೊಡಲು ಸಾಧ್ಯವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇನ್ನು ನೀವು ನಿಮ್ಮ ಲೇಖನದುದ್ದಕ್ಕೂ 'ತರ್ಕಬದ್ದತೆ' ಮತ್ತು 'ಪ್ರಾಯೋಗಿಕತೆ' ಬಗ್ಗೆ ಹೇಳಿದ್ದೀರಿ. ಇದರ ಬಗ್ಗೆ ನನ್ನದೊಂದು 'ಕಿರಿಕ್' ಪ್ರಶ್ನೆಯಿದೆ. ಕ್ವಾಂಟಮ್ ಫಿಸಿಕ್ಸ್ ನ ಇತ್ತೀಚಿನ ಬೆಳವಣಿಗೆಗಳನ್ನ್ನು ಗಮನಿಸಿದ್ದೀರಾ? "uncertainty principle" ಬಗ್ಗೆ ಕೇಳಿದ್ದೀರಾ? ಇದರ ಪ್ರಕಾರ ಪ್ರಯೋಗವೊಂದನ್ನು ವಸ್ತುನಿಷ್ಠವಾಗಿ/unbiased ಆಗಿ ಮಾಡಲು ಸಾಧ್ಯವೇ ಇಲ್ಲ. ಯಾಕೆಂದರೆ observer ಒಂದು part of the observation ಆಗಿಬಿಡುತ್ತಾನೆ! ಕೆಳಗಿನ ಪ್ಯಾರಾ ಇದರ ಬಗ್ಗೆ ಹೆಚ್ಚು ಬೆಳಕು ಬೀರಬಹುದು : "The notion of the observer becoming a part of the observed system is fundamentally new in physics. In quantum physics, the observer is no longer external and neutral, but through the act of measurement he becomes himself a part of observed reality. This marks the end of the neutrality of the experimenter. It also has huge implications on the epistemology of science: certain facts are no longer objectifiable in quantum theory. If in an exact science, such as physics, the outcome of an experiment depends on the view of the observer, then what does this imply for other fields of human knowledge? It would seem that in any faculty of science, there are different interpretations of the same phenomena. More often than occasionally, these interpretations are in conflict with each other. Does this mean that ultimate truth is unknowable?" ಇನ್ನು observation ಸಾಧ್ಯವಿಲ್ಲಎಂದರೆ ಅದು observe/measure ಮಾಡಲು technically ಸಾಧ್ಯವಾಗದಿರುವಿಕೆಯಲ್ಲ. ಬದಲಾಗಿ ಅದು ಪ್ರಕ್ರಿಯೆಯ ಒಂದು ಭಾಗವೇ ಆಗಿದೆ. ಕೆಳಗಿನ ಹೇಳಿಕೆಯನ್ನು ಓದಿ : "The act of measuring one magnitude of a particle, be it its mass, its velocity, or its position, causes the other magnitudes to blur. This is not due to imprecise measurements. Technology is advanced enough to hypothetically yield correct measurements. The blurring of these magnitudes is a fundamental property of nature." ಸೋಮೇಶ್ವರರೇ, ವಿಜ್ಞಾನದಲ್ಲಿ ನಾವು ಸಾಮಾನ್ಯವಾಗಿ ನಡೆಸುವ 'ಪ್ರಯೋಗ' ಗಳ ಸತ್ಯಾಸತ್ಯತೆಯ ಬಗ್ಗೆಯೇ ಸಂಶಯ ಪಡುವಷ್ಟು ವಿಜ್ಞಾನ ಮುಂದುವರೆದಿರುವಾಗ, ವಸ್ತುನಿಷ್ಠತೆ, ಪ್ರಯೋಗ ಶೀಲತೆಗಳ ಹೊರತಾಗಿ ಸತ್ಯವನ್ನು ಹುಡುಕುವುದು ಅಗತ್ಯ ಎಂದು ನಿಮಗೆ ಅನಿಸುವುದಿಲ್ಲವೆ? ಗೂಗಲ್ಲಿನಲ್ಲಿ ಒಮ್ಮೆ ಸುಮ್ಮನೆ "quantum physics and god" ಅಂತ ಸರ್ಚ್ ಕೊಡಿ. ಅನೇಕ ಆಸಕ್ತಿದಾಯಕ ಬರಹಗಳು ಸಿಗುತ್ತವೆ. ಅವುಗಳಲ್ಲಿ ಇದೂ ಒಂದು : http://www.thebigvie... ಇಂತಹ ಬರಹಗಳು ದೇವರನ್ನು ಸಮರ್ಥಿಸಲು ಭಕ್ತರು ಕಂಡುಕೊಂದ ಹೊಸ excuse ಎಂದು ನೀವು ಹೇಳುವ ಮುನ್ನ ನಾನೇ ಸಮಜಾಯಿಷಿ ಕೊಡುತ್ತೇನೆ.. ಮೇಲಿನ ಲೇಖನದ ಪೀಠಿಕೆ ಹೀಗಿದೆ : "Do not take the lecture too seriously . . . just relax and enjoy it. I am going to tell you what nature behaves like. If you will simply admit that maybe she does behave like this, you will find her a delightful, entrancing thing. Do not keep saying to yourself "But how can it be like that?" because you will get . . . into a blind alley from which nobody has yet escaped. Nobody knows how it can be like that." ನಿಮ್ಮ ಯೋಚನೆಗೆ ಅದು ಸರಕಾದರೆ ನನಗೆ ಖುಷಿ. ಅಷ್ಟಕ್ಕೂ ಕ್ವಾಂಟಮ್ ಫಿಸಿಕ್ಸ್ ನ ಬಗ್ಗೆಯೇ ವಿಜ್ಞಾನಿಗಳಲ್ಲಿ ಒಮ್ಮತವಿಲ್ಲದಿರುವಾಗ ನಮ್ಮಂಥ ಒಬ್ಬೊಬ್ಬರಿಗೆ ಒಂದೊಂದು ಯೋಚನೆ ಹೊಳೆದರೆ ವಿಶೇಷವಿದೆಯೇ? Schrödinger's cat ಮತ್ತು Many-worlds interpretation ಹೇಳುವುದೂ ಇದೇ ಅಲ್ಲವೇ? ಯೋಚಿಸಿ. http://en.wikipedia.... http://en.wikipedia....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ್ವಾಂಟಮ್ ಫಿಸಿಕ್ಸ್ ದೇವರ ಅಸ್ತಿತ್ವದ ಸಾಕ್ಷಿ ಎಂದು ಹೇಳುವುದು ಎಷ್ಟು ಸರಿಯೋ/ತಪ್ಪೋ ಅಷ್ಟೇ ಸರಿ/ತಪ್ಪು ದೇವರಿಲ್ಲ ಎನ್ನುವುದು! ದೇವರ ಕಾನ್ಸೆಪ್ಟು ಇಲ್ಲದೆಯೇ ವಿಜ್ಞಾನ/ಪ್ರಕೃತಿಯನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲವೇ? ಇದೆಯೆಂದು ಹೇಳುತ್ತದೆ ಕೆಳಗಿನ ವೀಡಿಯೋ. ಅಷ್ಟಕ್ಕೂ ಈ ಜಗತ್ತು ದೇವರನ್ನು ನಂಬುವವರಿಗೆ ಮಾತ್ರ ಅಲ್ಲ ತಾನೇ? :) http://vodpod.com/wa...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Quantum physics- mechanics -theory ಯನ್ನು ಸ೦ಪದದಲ್ಲಿ ಫಿಸಿಕ್ಸ್ ಪ೦ಡಿತರು, ಬಲ್ಲವರು ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಒ೦ದು ಲೇಖನವನ್ನು ಬರೆಯಲು ಸಾಧ್ಯವಾ? ಅ೦ಥಾ ಲೇಖನಕ್ಕೆ ನಾನು ಎದುರು ನೋಡುತ್ತಿರುತ್ತೇನೆ. ಈ ಕ್ವಾ೦ಟಮ್ ಸಿದ್ಧಾ೦ತವು ಪದೇ ಪದೇ ಅನೇಕ ಚರ್ಚೆಯಲ್ಲಿ ನುಸುಳುತ್ತಿರುತ್ತದೆ. ಈ ಕುತೂಹಲವನ್ನು ಬಲ್ಲವರು ಅಚ್ಚ ಕನ್ನಡದಲ್ಲಿ ತಣಿಸುವಿರಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜ್ಞಾನದೇವರೇ, ವಿಜ್ಞಾನದ ಉಮೇದುವಾರರು ಸಂಪದದಲ್ಲಿ ಬೇಕಾಷ್ಟಿದ್ದಾರೆ. ಅವರಾರೂ ಇದರ ಬಗ್ಗೆ ಚರ್ಚೆ ಮಾಡದಿರುವುದು ದುರಂತ. ಎಲ್ಲರೂ ತಮಗಾಗದ ಸಬ್ಜೆಕ್ಟ್ ಗಳನ್ನು ದೂರುವುದೇ ಜ್ಞಾನ ಎಂದುಕೊಂಡಂತಿದೆ. ಈ ದೇವರ ವಿಷಯಗಳನ್ನು ಬಿಟ್ಟು ಇತರ ವಿಷಯಗಳ ಬಗ್ಗೆ ಒಂದೆರಡು ಲೇಖನ ಬರೆದಿದ್ದೆ. ಅದಕ್ಕೆ ಬಂದ ಪ್ರತಿಕ್ರಿಯೆ ನೋಡಿ ಇನ್ನು ಅಂತಹ ಲೇಖನ ಬರೆಯುವುದರಲ್ಲಿ ಅರ್ಥ ಇಲ್ಲ ಎಂದು ತೀರ್ಮಾನಿಸುದ್ದೇನೆ. ಅಸಲು ಇಲ್ಲಿರುವ ವಿಜ್ಞಾನಿಗಳಿಗೆ ವಿಜ್ನ್ಞಾನದ ವಿಷಯಗಳೂ ಬೇಕಾಗಿಲ್ಲ, ಕೇವಲ ಶಾಸ್ತ್ರದ್ವೇಶವನ್ನೇ ವಿಜ್ಞಾನ ಎಂದು ತಿಳಿದಂತಿದೆ. 'ವಿಜ್ಞಾನಿ'ಗಳ ಬಗ್ಗೆ ನನ್ನ ಅಸಹನೆ ನಾ ಸೋಮೇಶ್ವರ ಬಗ್ಗೆ ಅಲ್ಲ. ಅವರು ತಮ್ಮ ನಿಲುವುಗಳನ್ನು ಸ್ಪಷ್ಟವಾಗಿ ಹೇಳಿದ್ದರಿಂದ ಅದರಲ್ಲಿ ಯಾವುದೇ ದ್ವಂದ್ವ ಇಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ನೀರ್ಕಜೆಯವರೇ, ಒ೦ದು ಸಿದ್ಧಾ೦ತದ ಬಗ್ಗೆ ವೈಜ್ಞಾನಿಕತೆಯ ಬಗ್ಗೆ ವೈಚಾರಿಕತೆಯ ಬಗ್ಗೆ ಒ೦ದು ಅಗಾಧ(ಒಮ್ಮೊಮ್ಮೆ ಅಸಹ್ಯವೆನಿಸುವಷ್ಟು) ಆಬ್ಸೆಶನ್ ಬೆಳೆಸಿಕೊ೦ಡವರು ಧರ್ಮ ದೇವರು,ಆಧ್ಯಾತ್ಮವನ್ನು ಆಳವಾಗಿ ಟೀಕಿಸಿದ೦ತೆ ವೈಜ್ಞಾನಿಕ ಲೇಖನವನ್ನು ಅಷ್ಟೇ ಆಳವಾಗಿ ಎಲ್ಲರಿಗೂ ಮನಮುಟ್ಟುವ೦ತೆ ಸಮರ್ಥವಾಗಿ ಪ್ರಯತ್ನ ಮಾಡಲೊಲ್ಲರು. ನಾನು ಇದನ್ನೇ ಬಿಯಾಸ್ Pathological Bias ಎ೦ದು ಕರೆಯುವುದು. ನಾನು ಕೇಳಿದ ಕ್ವಾ೦ಟಮ್ ನ ಬಗ್ಗೆ ವಿಜ್ಞಾನ ಪ್ರೇಮಿಗಳು ನಾ ಸೋಮೇಶ್ವರರು ಬರೆದ೦ತೆ (ಮುಕ್ತವಾಗಿ) ಬರೆಯಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜ್ಞಾನದೇವ ಅವರೆ! ನಾನು ಭೌತ ವಿಜ್ಞಾನಿಯಲ್ಲ. ಆದರೆ ಕ್ವಾಂಟಂ ಫಿಸಿಕ್ಸ್ ಬಗ್ಗೆ ಆಸಕ್ತಿಯಿದೆ. ನನ್ನ ಸ್ವ-ಪರಿಶ್ರಮದಿಂದ ಅದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ನನಗೆ ತಿಳಿದಿರುವುದನ್ನು ನನಗೆ ತಿಳಿದ ಹಾಗೆ ಬರೆಯಬಲ್ಲೆ. ಈಗ ಅಮೆರಿಕದ ತುರ್ತು ಪ್ರಯಾಣದಲ್ಲಿ (ಒಬ್ಬರ ಆರೋಗ್ಯಕ್ಕೆ ಸಂಬಂಧಪಟ್ಟದ್ದು) ವ್ಯಸ್ತವಾಗಿರುವ ಕಾರಣ ಯಾವುದೇ ಓದು-ಬರಹವನ್ನು ಮಾಡಲು ಮನಸ್ಸಿಲ್ಲ. ಅಲ್ಲದೇ ಜ್ಯೋತಿಷ ಮತ್ತು ಒಂದು ಲಕ್ಷ ರೂಪಾಯಿಗೆ ಸಂಬಂಧ ಪಟ್ಟ ಹಾಗೆ ನಾನು ಅನೇಕರಿಗೆ ಉತ್ತರಿಸಬೇಕಿದೆ. ಸಮಯದ ಕೊರತೆಯಿತ್ತು. ಥಟ್ ಅಂತ ಹೇಳಿ-೧೫೦೦ ರ ಸಂಭ್ರಮದಲ್ಲಿ ತೊಡಗಿದ್ದ ಕಾರಣ ಅವರಿಗೆ ಉತ್ತರ ನೀಡಲು ಆಗಲಿಲ್ಲ. ಹಾಗೆಯೇ ಮಿದುಳು ಮತ್ತು ತುರುಬಿನ ಬಗ್ಗೆ ಥರ್ಮೋಡೈನಮಿಕ್ಸ್ ಆಧಾರಿತ ಲೇಖನವನ್ನು ಅರ್ಧ ಬರೆದು ಹಾಗೇ ಬಿಟ್ಟಿದ್ದೇನೆ. ಅರಿವು/ಮಾಹಿತಿಯನ್ನು ಹಂಚಿಕೊಳ್ಳಲು ಹಾಗೂ ಚರ್ಚೆ ಮಾಡಲು ತುಂಬಾ ವಿಷಯಗಳಿವೆ. ಆದರೆ ನನ್ನ ಮನೋವೇಗಕ್ಕೆ ಸರಿಯಾಗಿ ಬೆರಳಚ್ಚಿಸಲು ಆಗುತ್ತಿಲ್ಲ. ಈ ನಡುವೆ ಮನೆಯನ್ನೂ ಕಟ್ಟಿಸುತ್ತಿದ್ದೇನೆ. ಅದರದ್ದೇ ಆದ ತಲೆನೋವುಗಳು ಸಾಕಷ್ಟಿವೆ. ಹಾಗಾಗಿ ನಾನು ಬಯಸಿದ ಹಾಗೆ ಬರೆಯಲು ಆಗುತ್ತಿಲ್ಲ. ಪ್ರೀತಿ-ಪ್ರೇಮ-ವಿಜ್ಞಾನದ ಬಗ್ಗೆ ಒಂದು ಪುಸ್ತಕವನ್ನು ಬರೆಯಲಾರಂಭಿಸಿದ್ದೇನೆ. ಮುಗಿಯುವ ಹಂತಕ್ಕೆ ಬಂದಿದೆ. ಅದನ್ನು ಮುದ್ರಿಸುವ ಮೊದಲು ಸಂಪದ ಬಳಗದ ಜೊತೆ ಹಂಚಿಕೊಳ್ಳುವ ಇಚ್ಛೆಯಿದೆ. ನಿಮ್ಮ ಸಲಹೆಗಳನ್ನು ಸ್ವೀಕರಿಸಿ, ಆ ಪುಸ್ತಕವನ್ನು ಮಾಹಿತಿಪೂರ್ಣವಾಗಿ ಮಾಡಬೇಕೆಂಬ ಆಸೆ ನನ್ನದು. ಈ ಬಗ್ಗೆ ಕನ್ನಡದ ಯಾವುದೇ ಪುಸ್ತಕವಿಲ್ಲದ ಕಾರಣ, ಈ ಪುಸ್ತಕವು ಪ್ರೀತಿಸುವ ಯುವಹೃದಯಿಗಳಿಗೆ ಒಂದು ಕೈಪಿಡಿಯಾಗಬೇಕು ಎನ್ನುವ ಹಂಬಲ ನನ್ನದು. ಏನೇನೋ ಕನಸುಗಳು! ಇಷ್ಟೆಲ್ಲ ರೇಜಿಗೆಯನ್ನು ಮೈಗೆ ಹಚ್ಚಿಕೊಂಡಿದ್ದರೂ ಸಂಪದಕ್ಕೆ ಸಮಯ ಸಿಕ್ಕಾಗೆಲ್ಲ ಬರೆಯಬೇಕೆನ್ನುವ ಆಸೆಯಿದೆ. - ನಾಸೋ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ದೇವರು-ವಿಧಿ-ಪೂರ್ವಜನ್ಮ-ಕರ್ಮ-ಪುನರ್ಜನ್ಮ-ದೈವಲೀಲೆ ಇತ್ಯಾದಿಗಳ ನಂಬಿಕೆಯನ್ನು ಆಧರಿಸಿರುವಂತಹದ್ದು. ಇವನ್ನು ನಂಬುವವರು ನಂಬಲಿ. ಅದರ ಬಗ್ಗೆ ನನಗೆ ಯಾವುದೇ ತಕರಾರಿಲ್ಲ. ಅವರನ್ನು ಪುರಸ್ಕರಿಸುವುದಕ್ಕೂ ಹೋಗುವುದಿಲ್ಲ. ಖಂಡಿಸುವುದಕ್ಕೂ ಹೋಗುವುದಿಲ್ಲ. ನಾನು ಕಾರ್ಯ-ಕಾರಣಗಳಲ್ಲಿ ನಂಬಿಕೆಯನ್ನಿಟ್ಟವನು. ಕಾರ್ಯ ಕಾರಣಗಳಿಗೆ ಅತೀತವಾಗಿರುವಂತಹವನ್ನು ಅಧ್ಯಯನ ಮಾಡುವ ಕುತೂಹಲವಿದೆ. ಆದರೆ ಅವಹೇಳನ ಮಾಡುವ, ಇಲ್ಲವೇ ಎಲ್ಲವೂ ಸಾರಾಸಗಟಾಗಿ ಕಂದಾಚಾರ ಎಂದು ದೂರುವ ಉದ್ಧಟತನಕ್ಕೆ ಹೋಗುವುದಿಲ್ಲ.>> ನಾ ಸೋ ಅವರೆ ವಿದ್ಯೆ ಇರುವವರಿಗೆ ವಿನಯ ಇರುತ್ತೆ ಅದು ಅವರಿಗೆ ಭೂಷಣ ಎಂಬ ಮಾತನ್ನು ನಿಮ್ಮ ಮೇಲಿನ ಸಾಲುಗಳು ಸಾಬೀತು ಪಡಿಸುತ್ತವೆ. ಆದರೆ ಸಂಪದದ ಚರ್ಚೆಗಳಲ್ಲಿ ಉದ್ದಟತನದ್ದೇ ಹೆಚ್ಚು ದರ್ಬಾರು ನಾನು ಅಂತಹ ಒಂದು ಉದ್ದಟತನದ (ಬಾಲಿಶ) ಪ್ರಶ್ನೆ ಮುಂದಿಡಲು ಇಚ್ಚಿಸುತ್ತೇನೆ. ವಿಜ್ಞಾನವೆನ್ನುವುದು ಒಂದು ಸಿದ್ದಾಂತವನ್ನು ಪ್ರಸ್ತುತ ಪಡಿಸಿದಾಗ ಅದರ ಸಮನಾಂತರ ಸಿದ್ದಾಂತವನ್ನು ಪ್ರಸ್ತುತ ಪಡಿಸಿದರಷ್ಟೆ ನಂಬುತ್ತದೆ ಅಥವ ಅದರ ಇರುವಿಕೆಯನ್ನು ಒಪ್ಪುತ್ತದೆ ಎಂದು ಸಂಪದದ ಕೆಲವು ವಿಜ್ಞಾನಿಗಳು ’ಪ್ರತಿಪಾ(ವಾ)ದಿ’ಸುತ್ತಾರೆ. ಹಾಗಾದರೆ ಜ್ಯೋತಿಷಕ್ಕೆ ವಿಜ್ಞಾನದಲ್ಲಿ ಸಮಾಂತರ ಸಿದ್ದಾಂತವಿದೆಯೆ? ವೈಜ್ಞಾನಿಕವಾಗಿ ಭವಿಷ್ಯ ನುಡಿಯಲಾಗುತ್ತದೆಯೆ? ಯಾರಾದರೂ ವಿಜ್ಞಾನಿಗಳು ವೈಜ್ಞಾನಿಕವಾಗಿ ನನ್ನ ಮುಂದಿನ ಕೇವಲ ೫ ದಿನಗಳ ಭವಿಷ್ಯವನ್ನು ನುಡಿದು ಅದು ನಿಜವಾದರೆ, ನಾನೂ ಕೂಡ, ಕ್ಷಮಿಸಿ ೧ ಲಕ್ಷ ನನ್ನಂತಹವನಿಗೆ ಸಾಧ್ಯವಿಲ್ಲ ೧೦೦೦ ರೂಗಳನ್ನು ಕೊಡಲು ಸಿದ್ದ. ದಯವಿಟ್ಟು ಕ್ಷಮಿಸಿ ವಿಜ್ಞಾನವೇ ಅಂತಿಮ ಎಂದು ಪ್ರತಿಪಾದಿಸುವ ಪ್ರಬುದ್ದರಿಗೆ ನನ್ನ ಈ ಅಪ್ರಬುದ್ದ ಸವಾಲು. ಕ್ಷಮಿಸಿ ಇಲ್ಲಿ ವಿಜ್ಞಾನಿಗಳ ನಂಬಿಕೆಯನ್ನು ಅವಹೇಳನಗೊಳಿಸುವ ಉದ್ದೇಶ ಉದ್ದಟತನ ಖಂಡಿತಾ ಇಲ್ಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈಗಾಗಲೇ ಒಂದು ಲಕ್ಷ ರೂಪಾಯಿ ಹಣ ಇಟ್ಟಿರುವ ವಿಷಯ ನಿಮಗೆ ಗೊತ್ತೇ? ಎರಡು ವರ್ಷದ ಕೆಳಗೆ ನಮ್ಮ ಮನೆಗೆ ಬಂದಿದ್ದ (ಏನ್.ಎಂ.ಕೆ ಆರ್.ವಿ. ಕಾಲೇಜಿನ ಸೈಕಾಲಜಿ ಪ್ರೊಫೆಸರ್) ಶ್ರೀದರ ಮೂರ್ತಿಯವರು ಈ ವಿಷಯ ಹೇಳಿದರು. ಅವರು, ಒಂದಿಷ್ಟು ಜನ ಸ್ನೇಹಿತರು ಸೇರಿ ಒಂದು ಲಕ್ಷ ರೂಪಾಯಿ ಒಟ್ಟು ಮಾಡಿ ಇಟ್ಟಿದ್ದಾರಂತೆ. (ಎರಡೋ ಮೂರೋ ಮರೆತ್ತಿದ್ದೇನೆ) ಜಾತಕದ ಪೂರ್ವಾಪರ ಸರಿಯಾಗಿ ಹೇಳುವ ಜ್ಯೋತಿಷಿಗೆ ಆ ಬಹುಮಾನವಂತೆ. ಆದರೆ ಚಾಲೆಂಜ್ ಸ್ವೀಕರಿಸುವವರು ಹತ್ತು ಸಾವಿರ ರೂಪಾಯಿ ಡಿಪಾಸಿಟ್ ಇಡಬೇಕಂತೆ!!! ಹೇಳಿದ್ದು ಸುಳ್ಳಾಗಿದ್ದರೆ ಆ ದುಡ್ಡು ವಾಪಸ್ ಇಲ್ಲ. ಇಲ್ಲಿಯವರೆಗೂ (ಎರಡು ವರ್ಷದ ಹಿಂದೆ) ಯಾರೂ ಆ ಸವಾಲು ಸ್ವೀಕರಿಸಿಲ್ಲವಂತೆ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾನ್ಯ ಡಾ. ಸೋಮೇಶ್ವರರೇ, ಮೊದಲು ನಿಮ್ಮನ್ನು ಅಭಿನಂಧಿಸುತ್ತೇನೆ. ಒಂದು ಲಕ್ಷದ ಪಣ ಎಂದರೆ ಸಣ್ಣ ಹಣವೇನಲ್ಲ!! ನನಗೇ ಆದ ಅನುಭವಗಳಿಂದ ಹಾಗೂ ನಾನು ಹತ್ತಿರದಿಂದ ನೋಡಿದ ಕೆಲವು ಅನುಭವಗಳಿಂದಾಗಿ, ಜ್ಯೋತಿಶ್ಯದ ಸೋಲು ಗೆಲವುಗಳನ್ನು ಕಂಡಿದ್ದೇನೆ. ನನಗೂ ನಿಮ್ಮಂತೆ ಜ್ಯೋತಿಶ್ಯದ ಸತ್ಯಾಸತ್ಯತೆಯನ್ನು ನಿಖರವಾಗಿ ಅಳೆಯಬೇಕೆಂಬ ಬಯಕೆ ಇದೆ. ಹೀಗಾಗಿ ನಾನು ಒಂದು ಮಾರ್ಗವನ್ನು ಆಯ್ದುಕೊಂಡಿದ್ದೆ.. ಆ ಮಾರ್ಗ ಹೀಗಿತ್ತು. ಗೊತ್ತಿದ್ದು.ದರಿಂದ ಗೊತ್ತಿಲ್ಲದೆಡೆಗೆ ಸಾಗುವುದೇ ಅದಾಗಿತ್ತು.( survey from known to unknow ) ..........ಧನಿಷ್ಟಾ ನಕ್ಷ್ಹತ್ರದಲ್ಲಿ ಜನಿಸಿದವರು ಮೆಳ್ಳಗಣ್ಣೀನವರಾಗಿರುತ್ತಾರೆ,------ಎಂಬ ವಿಷಯ ತಿಳಿದು ಬಂದಿತು. ---- ನಾನು ನೋಡಿದ ಎರಡು ಸಂದರ್ಭಗಳಲ್ಲಿ ಅದು ನಿಜವೇ ಆಗಿತ್ತು. ಅದನ್ನು ಆಧಾರವಿಟ್ಟುಕೊಂಡು ನಾನು ರಾಜ್ಯವ್ಯಾಪಿ ಧನಿಷ್ಠಾ ನಕ್ಷ್ಹತ್ರದವರ ವಿವರವನ್ನು ಅಭ್ಯಸಿಸಲು ಹೊರಟೆ. ಇದಕ್ಕಾಗಿ ನಾನು ಪತ್ರಿಕಾ ಪ್ರಕಟಣೆಯನ್ನೂ ನೀಡಿದೆ. ವಿಜಯಕರ್ನಾಟಕವೂ ಸೇರಿ ಹಲವು ಪತ್ರಿಕೆಯಲ್ಲಿ ನನ್ನ ವಿಳಾಸವು ಪ್ರಕಟವಾಯಿತು. ಆದರೆ, ಅದಕ್ಕೆ ಒಂದೇ ಒಂದೂ ಪ್ರ್ತತಿಕ್ರಿಯೆ ಬರಲೇ ಇಲ್ಲ!!ಅ ನಂತರದ ದಿನಗಳಲ್ಲಿ ನನ್ನ ವಯಕ್ತಿಕ ಕಾರ್ಯಭಾರದಿಂದಾಗಿ, ಈ ಕಾರ್ಯ ಮುಂದು ವರೆಯಲು ಸಾಧ್ಯವಾಗಲೇ ಇಲ್ಲ. "ಮೂಲಾ ನಕ್ಷ್ಹತ್ರದಲ್ಲಿ ಜನಿಸಿದವರು ತಂದೆಯನ್ನು ಕಳೆದುಕೊಳ್ಳುತ್ತಾರೆ" ಎಂಬ ಸಾರ್ವತಿಕ ಅಭಿಪ್ರಾಯವಿದೆ. ತಂದೆಯನ್ನು ಬಾಲ್ಯದಲ್ಲೇ ಕಳೆದುಕೊಂಡ ಎರಡು ವ್ಯಕ್ತಿಗಳೂ ನನಗೆ ಗೊತ್ತು.. ಆದರೆ ತಂದೆಯನ್ನು ಕಳೆದುಕೊಂಡ ಇನ್ನಿತರ ಹಲವರು ಜನರೂ ಇದ್ದಾರಲ್ಲವೇ!! ಹೀಗಾಗಿ ಇದು ಸತ್ಯವೂ ಆಗಿರಬಹುದು ಅಸತ್ಯವೂ ಆಗಿರಬಹುದು. ಸೋಮೇಶರವರೇ, ನೀವು ಮುಂದಿನ ಐದುವರ್ಷದ ಭವಿಷ್ಯವನ್ನು ಕೇಳಹೊರಟಿರುವಿರಿ. ಇದು ಕುತೂಹಲಕಾರಿಯಾಗಿದ್ದರೂ "ಅಪಾಯಕಾರಿಯೂ" ಹೌದು. ನೀವು ಈಗಾಗಲೇ ಕೆಲವು ಸುಖದ ದಿನಗಳನ್ನೂ ಕಷ್ಟದ ದಿನಗಳನ್ನೂ ಕಂಡಿರಬಹುದು. ಕಷ್ಟದ ದಿನಗಳನ್ನು ದಾಟಿ ಬಂದಿದ್ದಕ್ಕೆ ಹೆಮ್ಮೆಯೂ ಇರಬಹುದು. ಆದರೆ ಭವಿಷ್ಯದ ತಿಳುವಳಿಕೆ ನಿಮಗೆ ಸುಖನೀಡಲಾರದು.. ಭವಿಷ್ಯ ನುಡಿದ ಜ್ಯೋತಿಶಿಯು ನಿಮ್ಮ ಭವಿಶ್ಯವನ್ನು ಹೀಗೆ ಹೇಳಿದ ಎಂದು ಇಟ್ಟುಕೊಳ್ಳೋಣ----- ಥಟ್ಟಂತ ಹೇಳಿ ಕಾರ್ಯಕ್ರಮ ಅರ್ಧಕ್ಕೇ ನಿಲ್ಲುತ್ತದೆ / ನೀವು ವೈದ್ಯವ್ರತ್ತಿಯನ್ನು ಬಿಟ್ಟು ಬೇರೆ ವ್ರತ್ತಿಗೆ ಹೋಗಬೇಕಾಗುತ್ತದೆ. ಇತ್ಯಾದಿ ಇತ್ಯಾದಿ.. ಇಂತಹ ವಿಷಯಕ್ಕೆ ನೀವು ಸೊಪ್ಪು ಹಾಕುವುದಿಲ್ಲ.. ಆದರೆ ಅವನು ---- ನಿಮ್ಮ ಮಕ್ಕಳ ವಿದ್ಯಾಭ್ಯಾಸವು ಅರ್ಧದಲ್ಲೇ ನಿಲ್ಲುತ್ತದೆ./ ಅವರ ಏಳಿಗೆ ಆಗುವುದಿಲ್ಲ, / ಅವರಿಗೆ ಮಕ್ಕಳಾಗುವುದಿಲ್ಲ ಇತ್ಯಾದಿ ಇತ್ಯಾದಿ ಹೇಳಿದರೆ ನೀವು ಅದನ್ನು ಅಲಕ್ಷ್ಹಿಸಬಹುದು. ಆದರೆ ನಿಮ್ಮ ಶ್ರೀಮತಿಯವರು ಅದನ್ನು ಗಂಭೀರವಾಗಿ ತೆಗೆದುಕೊಂಡು ಮಾನಸಿವಾಗಿ ಜರ್ಜರಿತವಾಗಬಹುದು. ಅವರು ಉಪವಾಸ ಹರಕೆ ವ್ರತ ಇತ್ಯಾದಿಗಳ ಬೆನ್ನು ಹತ್ತಬಹುದು. ಹೀಗಾಗಿ ಭವಿಷ್ತವನ್ನು ಕೇಳುವುದರ ಬಗ್ಗೆ ತಾವು ತಮ್ಮ ಮನೆಯಲ್ಲಿ ಒಟ್ಟಿಗೆ ಕುಳಿತು, ಪುನರಾಲೋಚಿದುವುದು ಒಳಿತು. ಜೊತೆಗೆ ,. ಅಂಗೈ ತೋರಿಸಿ ಅವಲಕ್ಷ್ಹಣ ಹೇಳಿಸಿಕೊಳ್ಳಬಾರದೆಂದು ಹಿರಿಯರು ಒಂದು ಮಾತನ್ನು ನೆನಸಿಕೊಳ್ಳುವುದು ಒಳಿತು ನಾನು ಆಯ್ದುಕೊಂಡು ಕೈಸಾಗದೇ ಬಿಟ್ಟಿರುವ ಮಾರ್ಗವು ಸುಲಭವೂ ನಿಖರವೂ ಆಗಬಹುದು. ಆದ್ದರಿಂದ ತಾವು ತಮಗಿರುವ ವ್ಯಾಪಕವಾದ ಸಂಪರ್ಕವನ್ನು ಉಪಯೋಗಿದಿಕೊಂಡು ಕುಳಿತಲ್ಲೇ ಸತ್ಯಾ ಸತ್ಯತೆಯನ್ನು ಅಳೆದು ಸಮಾಜಕ್ಕೆ ನೀಡಬಹುದು. ದಯವಿಟ್ಟು ಹೀಗೆ ಮಾಡಿ-- "ಮೂಲಾ ನಕ್ಷ್ಹತ್ರದಲ್ಲಿ ಜನಿಸಿದವರು ತಂದೆಯನ್ನು ಕಳೆದುಕೊಳ್ಳುತ್ತಾರೆ" ಅಥವಾ ಅಶ್ವಿನಿ ನಕ್ಷತ್ರದಲ್ಲಿ ಹುಟ್ಟಿದವರಿಗೆ ಹೀಗೆಯೇ ಆಗುತ್ತದೆ, ಭರಣೀನಕ್ಷತ್ರದ ಮೂರನೇ ಪಾದದಲ್ಲಿ ಹುಟ್ಟಿದವರಿಗೆ ಹೀಗೆಯೇ ಆಗುತ್ತದೆ ಎಂಬರ್ಥದ ಮಾತುಗಳ ಬೆನ್ನು ಹತ್ತಬಹುದು. ಅಥವಾ ಹೀಗೂ ಮಾದಬಹುದು---- ಇಂದಿಗೆ ಮೂವತ್ತು ವರ್ಷದಂದು ಅಂದರೆ ದಿನಾಂಕ ೧೬- ೦೬-೧೯೮೦ ರಂದು ಜನಿಸಿದ ಗಂಡು /ಹೆಣ್ಣು ಗಳು, ಇಂದಿನ ದಿನದಲ್ಲಿ ಹೊಂದಿರುವ ವಿದ್ಯಾಭ್ಯಾಸ / ಹುದ್ದೆ / ಜೀವನಕ್ಕೆ ಹಿಡಿದಿರುವ ವ್ರತ್ತಿ / ಆರ್ಥಿಕ ಸ್ಥಿತಿ ಇತ್ಯಾದಿಗಳನ್ನು ಪಣಕ್ಕೆ ಸಿದ್ದವಾಗಿ ಹೇಳುವ ಜ್ಯೋತಿಷಿ(ಗಳಿಂದ) ಯಿಂದ ಲಿಖಿತವಾಗಿ ಪಡೆದುಕೊಳ್ಳಬೆಕು. ಜನನ ಮರಣ ದಾಖಲೆ ಇಲಾಖೆಯಿಂದ ದಿನಾಂಕ, ೧೬- ೦೬-೧೯೮೦ ರಂದು ಜನಿಸಿದ ಒಂದು ಸಾವಿರ ಜನರ ಜನರ ಮಾಹಿತಿಯನ್ನು ಪಡೆದುಕೊಂಡುಇದನ್ನು ತಾಳೆ ನೋಡುವುದು.( ವ್ಯಕ್ತಿಗೆ ಇರುಸು ಮುರುಸು ಆಗದಂತೆ ನೋಡಿಕೊಳ್ಳ ಬೇಕು.) ನಿರ್ದಿಷ್ಟ ದಿನಾಂಕದಂದು ಜನಿಸಿದವರ ಮಾಹಿತಿಗಳನ್ನು ಸಂಗ್ರಹಿಸಲು, ಬೇರೆಬೇರೆ ಊರು ಬೇರೆಬೇರೆ ರಾಜ್ಯ ಬೇರೆಬೇರೆ ದೇಶಗಳಲ್ಲಿರುವ ಸಂಪದಿಗರು ಸಹಾಯ ಮಾಡಬಹುದು. ***************************** **************************** ಮಹಿಳೆಯರು ನಿಂತು ಪ್ರಸವಿಸುವುದರ ಕುರಿತು ನನ್ನ ಕಿರು ಮಾಹಿತಿ--- ಮೂರು ದಶಕಗಳ ಹಿಂದೆ, ಬಿಜಾಪುರ ಜಿಲ್ಲೆಯ ಲಮಾಣಿ ತಾಂಡದಲ್ಲಿ ನೋಡಿದ ದ್ರುಶ್ಯ ನೆನಪಿಗೆ ಬಂದಿತು. ಸಾಧಾರಣವಾಗಿ ಲಮಾಣೆ ತಾಂಡಾಗಳಲ್ಲಿ ವೈದ್ಯನ ಅವಶ್ಯಕತೆ ಇರುವುದ್ದಿಲ್ಲ. ಅಲ್ಲಿಯ ಮಹಿಳೆಯರೇ ಒಬ್ಬರಿಗೆ ಒಬ್ಬರು ಸಹಾಯ ಮಾಡುತ್ತಾರೆ. ಆದರೆ ಅನಿವಾರ್ಯ ಎಂದೆನಿಸಿದಾಗ ನನಗೆ ಕರೆಕಳುಹಿಸಿದ್ದಕ್ಕೆ ನಾನು ಹೋಗಿದ್ದೆ. ತಾಂಡಾಕೆ ಹೋಗಿ ಮನೆ ಎಂಬ ಗುಡಿಸಲ ಒಳಗೆ ಹೋಗಿ, ಪರದೆ ಅಡ್ಡಮಾಡಿರುವ ಪ್ರಸವದ ಕೋಣೆಗೆ ನಾನು ಇನ್ನೇನು ಕಾಲು ಇಡಬೇಕು. ಅಲ್ಲಿರುವ ಮಹಿಳೆಯರು ಲಮಾಣೆ ಭಾಷೆಯಲ್ಲಿ ಜೋರಾಗಿ ಏನೇನೋ ಹೇಳಿದರು. ಆಗ ಯಜಮಾನ ಹೇಳಿದ " ಡಾಕ್ಟರರೇ, ನಿಮ್ಮ ಅವಶ್ಯಕತೆ ಇಲ್ಲಂತೆ. ಪ್ರಸವ ತಾನಾಗಿಯೇ ಆಗುತ್ತಿದೆಯಂತೆ". ಒಳಗೆ ಕಾಲಿಟ್ಟ ಹೆಜ್ಜೆಯನ್ನ್ನು ತತ್ ಕ್ಷಣ ನಾನು ಹೊರಗಿಟ್ಟೆ.. ಆದರ ಆ ಅರ್ಧ ಸೆಕೆಂಡಿನಲ್ಲಿ ಕಂಡ ಝಲಕ್ ಅಥವಾ glimpse ಇನ್ನೂ ಕಣ್ಣ ಮುಂದಿದೆ. ಬಸರಿ ಹೆಂಗಸು ಕುಕ್ಕರು ಕಾಲಿನಲ್ಲಿ ಮಲವಿಸರ್ಜನೆಗೆ ಕೂಡ್ರುವರೀತಿಯಲ್ಲಿ ಕುಳಿತಿದ್ದಾಳೆ.! ಎಡಕ್ಕೆ ಬಲಕ್ಕೆ ಕುಳಿತ ಎರಡು ಮಹಿಳೆಯರ ನಾಲ್ಕು ಕೈಗಳು , ---- ಕ್ರಿಕೆಟ್ ನಲ್ಲಿ ಕ್ಯಾಚು ಹಿಡಿಯಲು ನಿಂತ ಕ್ಷೇತ್ರ ರಕ್ಷಕರಂತೆ--- ಸಜ್ಜಾಗಿ ನಿಂತಿವೆ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>"ಮೂಲಾ ನಕ್ಷ್ಹತ್ರದಲ್ಲಿ ಜನಿಸಿದವರು ತಂದೆಯನ್ನು ಕಳೆದುಕೊಳ್ಳುತ್ತಾರೆ" ಎಂಬ ಸಾರ್ವತಿಕ ಅಭಿಪ್ರಾಯವಿದೆ ನನ್ ಫ್ರೆಂಡೊಬ್ರುದ್ದು ಮೂಲಾ ನಕ್ಷತ್ರ, ೨೧ ವರ್ಷ ವಯಸ್ಸಾಗಿದೆ.. ಅವ್ರ ತಂದೆ ಇನ್ನೂ ಗಟ್ಟಿ ಮುಟ್ಟಾಗಿದಾರೆ.. ಒಂದು ಕೆಟ್ಟ ಸಂಶಯ.. ಇಲ್ಲಿ ತಂದೆ ಅಂದ್ರೆ ಹೆತ್ತವಳ ಗಂಡ ಅಂತ್ಲಾ ಅಥವಾ ಜನನಕ್ಕೆ ಕಾರಣರಾದವರು ಅಂತ್ಲಾ.. ನನ್ನ ಪ್ರಶ್ನೆ ಅನುಚಿತವೆನಿಸಿದರೆ ಕ್ಷಮೆ ಇರಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲಚಂದ್ರ: >>> ನನ್ ಫ್ರೆಂಡೊಬ್ರುದ್ದು ಮೂಲಾ ನಕ್ಷತ್ರ, ...... >>> ಒಂದು ಕೆಟ್ಟ ಸಂಶಯ.. ಇಲ್ಲಿ ತಂದೆ ಅಂದ್ರೆ .... ನಿಮ್ ಫ್ರೆಂಡ್ ಇದನ್ನು ಕಂಡ್ರೆ ಏನ್ ಗತಿ? ಇತೀ, ಉಉನಾಶೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೋಡಿದ್ರೆ ಕೆಟ್ಟದಾಗಿರತ್ತಲ್ವ.. ಮೇಲೆ ಶಾಸ್ತ್ರಿಗಳು ತಮ್ಮ ಕಾಮೆಂಟಿನಲ್ಲಿ ತಿಳಿಸಿದ್ದಕ್ಕೂ, ನಾ ಕೇಳಿದ ಪ್ರಶ್ನೆಗೂ ವ್ಯತ್ಯಾಸವಿಲ್ಲವಷ್ಟೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>ನಾನು ಹುಟ್ಟಿದ ದಿನ, ಸಮಯ, ಸ್ಥಳ ಇತ್ಯಾದಿಗಳನ್ನು ನೀಡುತ್ತೇನೆ ಯಾವ ಸಮಯ ಹೇಳ್ತೀರಾ ಸರ್? (ಯಾವ ಯುಗದ ಲೆಕ್ಕಾಚಾರದಲ್ಲಿ "ಹುಟ್ಟಿದ ಸಮಯ") :o) >>>ನೀವು ಕರೆದು ತರುವ ಜ್ಯೋತಿಷಿಗಳು ಅಥವ ನೀವೇ ನನ್ನ ಭೂತ ಹಾಗೂ ವರ್ತಮಾನವನ್ನು ಹೇಳಲಿ/ಹೇಳಿ. ಹಾಗೆಯೇ ನಿಗದಿತ ದಿನದಿಂದ ಮುಂದಿನ ಐದು ವರ್ಷಗಳವರೆಗೆ ... ಐದು ವರ್ಷ ತುಂಬ ಹೆಚ್ಚಾಯಿತು ಅಲ್ಲವೆ? >>>ನನ್ನ ಭವಿಷ್ಯವನ್ನು ೧೦೦ಕ್ಕೆ ನೂರರಷ್ಟು ನಿಖರವಾಗಿ ಹೇಳಲಿ/ಹೇಳಿ. ೧೦೦% ಸರಿಯಾಗಿ ಯಾವ ಕ್ಷೇತ್ರದಲ್ಲಿದೆ? ನಿನ್ನೆ ನನ್ನ ಡೆಂಟಿಸ್ಟ್ "ಹಲ್ಲಿನಲ್ಲಿ ಇನ್‍ಫೆಕ್ಷನ್ ಆಗಿದೆ; ರೂಟ್ ಕ್ಯಾನಲ್ ಮಾಡಿಸಬೇಕು" ಅಂದರು. ಅದು ಮಾಡಿದ್ರೆ ಇನ್‍ಫೆಕ್ಷನ್ ಹೋಗುತ್ತಾ ಅಂದ್ರೆ, ಖಾಯಮ್ ಇಲ್ಲ; ಸಕ್ಶಸ್ ರೇಟ್ ೯೮% ಅಂದರು. ಆ ಇನ್‍ಫೆಕ್ಷನ್ ಸುಮಾರು ನಾಲ್ಕುವರೆ ವರ್ಷದಿಂದ ಇದೆ. ಅದನ್ನು ಆರು ತಿಂಗಳಲ್ಲಿ ರೂಟ್ ಕ್ಯಾನಲ್ ಮಾಡಿಸದಿದ್ದರೆ ಎಲ್ಲಾ ಹಲ್ಲಿಗೂ ಇನ್‍ಫೆಕ್ಷನ್ ಆಗುತ್ತೆ ಅಂತ ನನ್ನ ಆಗಿನ ಡೆಂಟಿಸ್ಟ್ ಹೇಳಿದ್ದರು. ಹಾಗೆನೂ ಆಗಲಿಲ್ಲ. ಏನ್ ಮಾಡೋಣ? :o( ................ ಇಷ್ಟಕ್ಕೂ ನಾನು ಜ್ಯೋತಿಷ ನಂಬಲ್ಲ. ನಂಬಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ "ರೂಟ್ ಕ್ಯಾನೆಲ್" ಅನ್ನುವುದೊಂದು ಹಣಕೀಳುವ ಪಿಡುಗು. ಇತ್ತೀಚೆಗೆ ಖಾಸಗೀ ದಂತವೈದ್ಯರು ಹಣಕೀಳುವ (ಹಲ್ಲುಕೀಳುವ ಅಲ್ಲ) ಹೊಸ ಹೊಸ ತಂತ್ರಗಳನ್ನು ಹುಡುಕಿಕೊಂಡಿದ್ದಾರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ... http://sampada.net/f...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀನಿವಾಸ್.. ಈ ಚರ್ಚೆಗೆ ಪೂರಕವಾಗಿಯೇ ತಮ್ಮ ಲೇಖನ ಮತ್ತು ಅಲ್ಲಿನ ಚರ್ಚೆ ಇದೆ..ಕೊಂಡಿಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲಚ೦ದ್ರರೇ, ತ೦ದೆ-ತಾಯಿ ಎನ್ನುವ ಪದಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ಈ ಸ೦ಧರ್ಬದಲ್ಲಿ ತಮ್ಮ ಪ್ರಶ್ನೆ ಉಚಿತವಾದದ್ದೇ! ನನ್ನ ಅನಿಸಿಕೆ ಸರಿಯಾಗಿದ್ದಲ್ಲಿ, ಹೆತ್ತವರನ್ನು ತ೦ದೆ-ತಾಯಿ ಎ೦ತಲೂ ಸಾಕಿದವರನ್ನು ಯಾ ತಾತ್ಕಾಲಿಕವಾಗಿ ಸಾಕುವವರನ್ನು ಪೋಷಕರು ಎ೦ತಲೂ ಕರೆಯುತ್ತಾರೆ. ಅಕಸ್ಮಾತ್ ಸಣ್ಣತನದಲ್ಲಿಯೇ ಮಕ್ಕಳನ್ನು ದತ್ತು ಪಡೆದು ಸಾಕುವವರು ಸಹ ಪೋಷಕರೇ ವಿನ: ತ೦ದೆ-ತಾಯಿಗಳಲ್ಲ. ಆ ಮಕ್ಕಳೂ ಸಹ ದತ್ತು ಮಕ್ಕಳು ಯಾ ಪೋಷಿಸುವವರು ದತ್ತು ತ೦ದೆ-ತಾಯಿಗಳು ( ಎರವಲು?) ಎ೦ದೇ ಕರೆಯಲ್ಪಡುತ್ತಾರೆ. ಮೂಲಾ ನಕ್ಷತ್ರ ಎ೦ದಕೂಡಲೇ ಸ೦ಪೂರ್ಣ ಮೂಲ ನಕ್ಷತ್ರದವರೆ೦ದಲ್ಲ. ಪ್ರತೀ ನಕ್ಷತ್ರಗಳಿಗೂ ನಾಲ್ಕು ಪಾದಗಳು ಯಾ ಚರಣಗಳು ಇದ್ದು, ಒ೦ದೊ೦ದು ಚರಣದಲ್ಲಿ ಜನಿಸುವವರ ( ಅ೦ದರೆ ದಿನವೊ೦ದರ ಒ೦ದು ನಕ್ಷತ್ರ ನಾಲ್ಕು ಚರಣಗಳಲ್ಲಿ ಹರಡಿಕೊ೦ಡಿದ್ದು, ಪ್ರತ್ಯೇಕ ಅವಧಿಗಳನ್ನು ಹೊ೦ದಿರುತ್ತವೆ.) ಭವಿಷ್ಯ ಒ೦ದೊ೦ದು ತೆರನಾಗಿರುತ್ತವೆ. ಮೂಲಾ ನಕ್ಷತ್ರದಲ್ಲಿ ಜನಿಸುವವರ ಸ೦ಪೂರ್‍ಣ ಸಾಮ್ಯತೆಗಳು ಒ೦ದೇ ತೆರನಾಗಿದ್ದರೂ ಅವರ ನಕ್ಷತ್ರ ಚರಣಗಳ ಪ್ರಕಾರ ಅಲ್ಪ ಸ್ವಲ್ಪ ಬದಲಾವಣೆಗಳನ್ನು ಹೊ೦ದಿರುತ್ತವೆ. ಅದರಲ್ಲಿಯೂ ಮೂಲಾ ನಕ್ಷತ್ರಗಳ ಚರಣಗಳನ್ನು ೧. ಪ್ರಥಮ ಮೂಲ ಭೂ ಮೂಲ-ದ್ವೀತಿಯ ಮೂಲ ಸ್ತ್ರೀ ಮೂಲ- ತೃತೀಯ ಮೂಲ-ಅತ್ತೆ ಮೂಲ ಹಾಗೂ ನಾಲ್ಕನೇ ಮೂಲ ಗ೦ಡಾ೦ತರ ಮೂಲ ಎ೦ದು ಹೇಳುತ್ತಾರೆ. ತೃತೀಯ ಮೂಲದಿ೦ದ ಸ್ತ್ರೀ ಮದುವೆಯಾಗುವ ಮನೆಯಲ್ಲಿ ಅತ್ತೆಗೆ ಕಷ್ಟವೆನ್ನುತ್ತಾರೆ. ಆದ್ದರಿ೦ದಲೇ ಸಾಮಾನ್ಯವಾಗಿ ಅತ್ತೆ ಇರದ ಮನೆಯನ್ನೇ ಹುಡುಕುತ್ತಾರೆ. ನಾಲ್ಕನೇ ಚರಣದಲ್ಲಿ ಜನಿಸಿದವರ ಸ್ತ್ರೀಯರನ್ನು ಸೊಸೆಯಾಗಿ ಕರೆತರಲು ಸ್ವಲ್ಪ ಹಿ೦ದು-ಮು೦ದು ನೋಡುತ್ತಾರೆ. ಸೊಸೆಯಾಗಿ ತ೦ದರೆ ಮನೆ ಅಳಿಯುತ್ತದೆ ಅ೦ದರೆ ಕುಟು೦ಬ ಒಡೆಯುತ್ತದೆ ಎ೦ಬ ನ೦ಬಿಕೆ ಇದೆ. ಹಾಗ೦ತ ಇವೆಲ್ಲವೂ ಸರಿ ಎ೦ದು ನ೦ಬಬೇಕಿಲ್ಲ.ಒಮ್ಮೊಮ್ಮೆ ಆಗದಿರುವುದೂ ಇದೆ. ಸ೦ಪೂರ್‍ಣ ಜ್ಞಾನಿಯಲ್ಲ. ತಪ್ಪಿದ್ದರೆ ಬಲ್ಲವರು ಕ್ಷಮಿಸಿ, ಸರಿಪಡಿಸುವಿರೆ೦ದು ನ೦ಬಿರುತ್ತೇನೆ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ತ೦ದೆ-ತಾಯಿ ಎನ್ನುವ ಪದಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ಈ ಸ೦ಧರ್ಬದಲ್ಲಿ ತಮ್ಮ ಪ್ರಶ್ನೆ ಉಚಿತವಾದದ್ದೇ! ಈ ಸಂದರ್ಭ ಅಂದರೆ? ಹೇಗೆ ಕಳೆದುಕೊಳ್ಳುತ್ತಾ ಇದೆ ಅಂತ ತಿಳಿಸ್ತೀರ? >>ಪ್ರತೀ ನಕ್ಷತ್ರಗಳಿಗೂ ನಾಲ್ಕು ಪಾದಗಳು ಯಾ ಚರಣಗಳು ಇದ್ದು.. ಮತ್ತೆ ಇದು ಲಿಂಗದ ಮೇಲೂ ಆಧಾರಿತ ಅಲ್ವೇ.. ಹುಡುಗನಿಗಾದರೆ ಅವನ ಕಡೆಯವರಿಗೆ ಯಾವ ರೀತಿಯ ದುಷ್ಪರಿಣಾಮಗಳು ಉಂಟಾಗಬಹುದು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೂಲ ನಕ್ಷತ್ರದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಸಿದ್ದಕ್ಕೆ ನನ್ನಿ.. ನಾ ತಿಳಿಸಿದವ್ರು ರಾತ್ರಿ ೮:೩೦ಕ್ಕೆ ಹುಟ್ಟಿದ್ದಂತೆ.. ಅಂದ್ರೆ ನಾಲ್ಕನೇ ಪಾದನೇನೋ ಅಲ್ವ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆತ್ತ ತ೦ದೆ ತಾಯಿಗಳು ವೃಧ್ಧಾಪ್ಯಕ್ಕೆ ಬ೦ದ ಕೂಡಲೇ ಕೆಲಸಕ್ಕೆ ಬರದವರೆ೦ದು, ಮನೆಯಿ೦ದ ಆಚೆ ತಳ್ಳುವ ಹಾಗೂ ತ೦ತಮ್ಮ ಇಳಿವಯಸ್ಸಿಗೆ ಆಸರೆಯಿಲ್ಲದೆ, ಪರಾಧೀನರಾಗಿ, ತಮ್ಮ ಉಳಿದ ದಿನಗಳ ಬಗ್ಗೆ ದೀನರಾಗಿ ಆಕಾಶದತ್ತ ನಿಟ್ಟುಸಿರು ಬಿಟ್ಟು ನೋಡುತ್ತಾ ಕಳೆಯುವ ವೃಧ್ಧರ ಸ೦ಖ್ಯೆ ವೃಧ್ಧಾಶ್ರಮಗಳಲ್ಲಿ ಹೆಚ್ಚಾಗುತ್ತಾ ಇರುವ ಈ ದಿನಗಳಲ್ಲಿ ನನ್ನ ಉತ್ತರ ಸಮರ್ಪಕವಲ್ಲವೇ ಪಾಲಚ೦ದ್ರರೇ? ತಪ್ಪಾದಲ್ಲಿ ಕ್ಷಮಿಸುವುದು. ಒ೦ದು ನಕ್ಷತ್ರದ ಅವಧಿ ೬೦ ಘಳಿಗೆಗಳು. ಒ೦ದು ಘ೦ಟೆ ಎ೦ದರೆ ೨.೧/೨ ಘಳಿಗೆ, ೨೪ ನಿಮಿಷಗಳಿಗೆ ೧ ಘಳಿಗೆ, ೨೪ ಸೆಕೆ೦ಡುಗಳಿಗೆ ಒ೦ದು ವಿಘಳಿಗೆ. ಭಾರತೀಯ ಪಧ್ಧತಿಯ ಪ್ರಕಾರ ಸೂರ್ಯೋದಯದಿ೦ದ ಸೂರ್ಯೋದಯಕ್ಕೆ ಒ೦ದು ದಿನ. ಅದನ್ನು ಅಹೋರಾತ್ರಿ ಎ೦ತಲೂ ಕರೆಯಬಹುದು. ಆಯಾ ದಿನದಲ್ಲಿ ಯಾವ ನಕ್ಷತ್ರವು ಎಷ್ಟು ಘಳಿಗೆ ಇದೆ ಎ೦ಬುದರ ಮೇಲೆ ಪಾದಗಳನ್ನು ನಿಷ್ಕರ್ಷಿಸಬಹುದು. ಒ೦ದೇ ನಕ್ಷತ್ರವು ಹಿ೦ದಿನ ದಿನ ಪೂರ್ತಿ ಹಾಗೂ ಮಾರನೆಯ ದಿನ ಸೂರ್ಯೋದಯಕ್ಕೆ ಮಾತ್ರವೇ ಇರಬಹುದು. ಅದರ ಒಟ್ಟೂ ಘಳಿಗೆಗಳ ೧/೪ ನೇ ಭಾಗವೇ ಅದರ ಒ೦ದೊ೦ದು ಚರಣದ ಅವಧಿ. ಇದು ಲಿ೦ಗಾಧಾರಿತವೇ ಎ೦ಬುದರ ಬಗ್ಗೆ ನನಗೆ ಅರಿವಿಲ್ಲ. ಮೂಲಾ ನಕ್ಷತ್ರದಲ್ಲಿ ಜನಿಸಿದ ಪುರುಷರ ಬಗ್ಗೆ ನನಗಷ್ಟು ಅರಿವಿಲ್ಲ. ಕ್ಷಮಿಸುವುದು. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೃದ್ಧಾಶ್ರಮದಲ್ಲಿ ವೃದ್ಧರ ಸಂಖ್ಯೆಯ ಹೆಚ್ಚಳವೇ ನಿಮ್ಮ ಅನಿಸಿಕೆಗೆ ಆಧಾರ ಎನ್ನುವುದು ಅಷ್ಟೇನೂ ಸಮರ್ಪಕವಲ್ಲ ಎನಿಸುತ್ತದೆ. ವೃದ್ಧಾಶ್ರಮದ ಪರಿಕಲ್ಪನೆ ಇತ್ತೀಚಿಗಿನದು. ಹಿಂದೆ ಮನೆಯಲ್ಲಿ ಹಿರಿಯರನ್ನು ಇರಿಸಿಕೊಂಡ ಮಾತ್ರಕ್ಕೆ ಅವರ ಮೇಲೆ ಗೌರವ ಇತ್ತು ಅನ್ನುವುದಕ್ಕೆ ಬಾರದು, ಅಥವಾ ಮನೆಯಲ್ಲಿರಿಸಿಕೊಂಡೂ ಗೌರವದಿಂದ ನಡೆಸಿಕೊಂಡರು ಅನ್ನುವುದಕ್ಕಾಗದು. ಕ್ಷಮಿಸುವ ಪದ ಯಾಕೆ ಅಂತ ತಿಳೀಲಿಲ್ಲ, ನಾ ನಿಮ್ಮನ್ನು ಕ್ಷಮಿಸುವಷ್ಟು ಹಿರಿಯನೂ ಅಲ್ಲ. ೨.೫೦ ಘಳಿಗೆ --> ೧ ಗಂಟೆ ೬೦ ಘಳಿಗೆ --> ೨೪ ಗಂಟೆ = ೧ ದಿನ >>ಅದರ ಒಟ್ಟೂ ಘಳಿಗೆಗಳ ೧/೪ ನೇ ಭಾಗವೇ ಅದರ ಒ೦ದೊ೦ದು ಚರಣದ ಅವಧಿ. ಅಂದ್ರೆ ೨೪/೪ = ೬ ಗಂಟೆ ಒಂದೊಂದ್ ಪಾದದ ಕಾಲಾವಧಿ >> ಭಾರತೀಯ ಪಧ್ಧತಿಯ ಪ್ರಕಾರ ಸೂರ್ಯೋದಯದಿ೦ದ ಸೂರ್ಯೋದಯಕ್ಕೆ ಒ೦ದು ದಿನ ಅಂದರೆ, ಸೂರ್ಯೋದಯ ೬ ಗಂಟೆಗಾದ್ರೆ.. ೬ + ೬ = ೧೨ ಗಂಟೆಯವರೆಗೆ ಒಂದು ಪಾದ, ೧೨ + ೬ = ೬ ಸಂಜೆ ಆರರವರೆಗೆ ಇನ್ನೊಂದು, ಮಧ್ಯ ರಾತ್ರಿ ೧೨ರ ವರೆಗೆ ಮತ್ತೊಂದು, ಬೆಳಿಗ್ಗೆ ೬ರವರೆಗೆ ಕೊನೇಯ ಪಾದವಿದ್ದು.. ಮುಂದಿನ ಸುರ್ಯೋದಯವೂ ೬ ಗಂಟೆಗೇ ಆದರೆ ಆಗ ನಕ್ಷತ್ರ ಬದಲಾಗಿ, ಅದರ ಮೊದಲನೆಯ ಪಾದ ಆರಂಭವಾಗುವುದೇ.. ಹೆಚ್ಚಿನ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲಚ೦ದ್ರರೇ, <<ಕ್ಷಮಿಸುವ ಪದ ಯಾಕೆ ಅಂತ ತಿಳೀಲಿಲ್ಲ, ನಾ ನಿಮ್ಮನ್ನು ಕ್ಷಮಿಸುವಷ್ಟು ಹಿರಿಯನೂ ಅಲ್ಲ.>> ನನ್ನ ಅನಿಸಿಕೆ ನಿಮ್ಮ ಪ್ರಕಾರ ತಪ್ಪಾಗಿದ್ದಲಿ ಯಾ ನಿಮಗೆ ಸಮ೦ಜಸವಾಗಿಲ್ಲದಿದ್ದಲ್ಲಿ ಕ್ಷಮಿಸಿ ಎನ್ನುವ ಅರ್ಥದಲ್ಲಿ ಬರೆದ್ದಿದ್ದು. ಒ೦ದೊ೦ದು ನಕ್ಷತ್ರ ಸ೦ಪೂರ್ಣ ೬೦ ಘಳಿಗೆ ಪೂರ್ಣವಾಗಿ ಒ೦ದು ದಿನದಲ್ಲಿ ಬರುತ್ತದೆ ಎನ್ನಲಿಕ್ಕಾಗುವುದಿಲ್ಲ. ನಿನ್ನೆ ಆಶ್ಲೇಷಾ ನಕ್ಷತ್ರ ೪೭ ಮುಕ್ಕಾಲು ಘಳಿಗೆ ಮಾತ್ರವೇ ಇದ್ದು,ಈದಿನ ಗುರುವಾರ ಜೂನ್ ೧೭- ಮಘಾ ನಕ್ಷತ್ರ ಕೇವಲ ೪೩.೫ ಘಳಿಗೆ ಮಾತ್ರವೇ ಇದೆ. (ಶಾರದಾ ಕ್ಯಾಲೆ೦ಡರ್ ಪ್ರಕಾರ) ನಾಳೆ ಪೂರ್ವಾಷಾಢ ನಕ್ಷತ್ರ ಕೇವಲ ೩೯.೫ ಘಳಿಗೆ ಮಾತ್ರವೇ ಇದೆ.ಇದರಲ್ಲಿ ಈದಿನದ ನಕ್ಷತ್ರ ಮಘಾ ದಲ್ಲಿ ಜನಿಸಿದವರಾಗಿದ್ದರೆ, ೬೦ ಘಳಿಗೆಗಳಲ್ಲಿ ಅಶ್ಲೇಷಾ ನಕ್ಷತ್ರದ ಅವಧಿಯಾದ ೪೭ ಮುಕ್ಕಾಲು ಘಳಿಗೆಯನ್ನು ಕಳೆದು ಉಳಿದ ಅವಧಿಯನ್ನು ಮಘಾ ನಕ್ಷತ್ರದ ಈ ದಿನದ ಅವಧಿಗೆ ಸೇರಿಸಿ. ಇದೇ ಆ ನಕ್ಷತ್ರದ ಆದ್ಯ೦ತ ಕಾಲ ಅ೦ದರೆ ಸ೦ಪೂರ್ಣ ಅವಧಿ. ಇದರಲ್ಲಿ ಪ್ರತಿ ನಾಲ್ಕನೆಯ ಒ೦ದು ಭಾಗವು ನಕ್ಷತ್ರದ ಒ೦ದೊ೦ದು ಪಾದದ ಅವಧಿಯನ್ನು ಸೂಚಿಸುತ್ತದೆ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ತಿಳುವಳಿಕೆಯ ಪ್ರಕಾರ ನಕ್ಷತ್ರದ ಒಂದು ಪಾದ ಎಂದರೆ- (360/27)/4 ಅಂದರೆ ೩.೩ ಡಿಗ್ರೀ. ಚಂದ್ರ ೩೬೦ ಡಿಗ್ರೀ ಚಲನೆಯಲ್ಲಿ(೨೮ ದಿನದಲ್ಲಿ) ೩.೩ ಡಿಗ್ರೀ ಚಲಿಸಲು ತೆಗೆದುಕೊಳ್ಳುವ ಕಾಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಚಿಕೊಪ್ಪರೇ, ನನಗನ್ನಿಸುತ್ತೇ ನಾವಿಬ್ಬರೂ ತಿಳಿಸಿರುವುದೂ ಸರಿಯೇ. ಆದರೆ ಬೇರೆ ಬೇರೆ ರೀತಿಯಲ್ಲಿ ತಿಳಿಸಿದ್ದೇವೆ ಅನ್ನಿಸುತ್ತೆ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ನಿನ್ನೆಯ ತಾಜಾ ಅನುಭವ. ನಿನ್ನೆ ದಿನಾಂಕ್ ೧೮-೦೬-೨೦೧೦ರ ಪ್ರಜಾವಾಣಿಯಲ್ಲಿ ನನ್ನ ರಾಶಿ ಭವಿಷ್ಯದಲ್ಲಿ ಹೀಗೆ ಬರೆದಿತ್ತು.---ಆಕಸ್ಮಿಕ ಧನಲಾಭ, ವ್ಯವಹಾರ ನಿಮಿತ್ತ ದೂರಪ್ರಯಾಣ, ಸಂಸಾರದಲ್ಲಿನ ಸಮಸ್ಯೆಯ ಪರಿಹಾರ. ನನಗೆ ಹಣಬರುವುದು ಒಂದೇ ಮೂಲದಿಂದ. ಅದು ನಿಶ್ಚಿತವಾಗಿಯೂ ಮಾಸಾಂತ್ಯದಲ್ಲಿ ಮಾತ್ರ. ಇನ್ನು , ಕೈಗಡ ತೆಗೆದುಕೊಂಡವರಲ್ಲಿ ಕೊಡುವವರೆಲ್ಲಾ ಹಣ ಕೊಟ್ಟಿದ್ದಾರೆ. ಕೊಡಲಾರದವರು ಎಂದು ಕೊಡಲಾರರೆಂದು ನಿರ್ಧರಿಸಿ ಅವರನ್ನೂ ಋಣ ಮುಕ್ತರನ್ನಾಗಿ ಮಾಡಿದ್ದರಿಂದ, ಇಂದು ಎಲ್ಲಿಂದ ಅನಿರೀಕ್ಷಿತವಾಗಿ ಹಣ ಬಂದೀತೆಂದು ಕುತೂಹಲ ತಾಳಿದ್ದೆ. ಯಾರಪ್ಪಾ? ಆ ಪುಣ್ಯಾತ್ಮ!!- ಎಂದುಕೊಳ್ಳುತ್ತಿದ್ದೆ. ಹೌದು. ನಿಜವಾಗಿಯೂ ಅನಿರೀಕ್ಷಿತವಾಗಿ ಹಣ ನನಗೆ ಸೇರಿತು!! ನನ್ನ ಮೊಬೆಲ್ಲಿಗೆ ಬಂದ ಎಸ್ ಎಮ್ ಎಸ್ ನನ್ನ ಖಾತೆಗೆ ಹಣಜಮಾ ಆಗಿದ್ದನ್ನು ಹೇಳಿತು.!! ಅಲ್ಲಿಗೆ ಜ್ಯೋತಿಷ್ಯ ನಿಜವಾಯಿತು. ನಾನು ಹಣವನ್ನು ನಿರೀಕ್ಷಿಸಿರಲಿಲ್ಲ. ಅದು ಸತ್ಯ. ಆದರ ನಿನ್ನೆ ನನಗೆ ಹಣ ಬರಲೇ ಬೇಕೆಂಬ ಲಿಖಿತವಿತ್ತು.( ವಿಧಿಲಿಖಿತ?) ಪ್ರತಿತಿಂಗಳಿನಂತೆ, ನಿನ್ನೆ ನನ್ನ ಉಳಿತಾಯ ಖಾತೆಗೆ , ಠೇವಣಿ ಹಣದಿಂದ ಬಡ್ಡಿಯು ಜಮಾ. ಆಗಲೇಬೇಕಿತ್ತು.ಬ್ಯಾಂಕಿನ ಕಂಪ್ಯೂಟರ್ ಬಡ್ಡಿಯನ್ನು ನನ್ನ ಖಾತೆಗೆ ಜಮಾ ಮಾಡಿ, ನನ್ನ ಮೊಬೆಲ್ಗೆ ಮಾಹಿತಿಯನ್ನು ರವಾನಿಸಿತ್ತು ಹೀಗಾಗಿ ಪತ್ರಿಕೆಯಲ್ಲಿ ಭವಿಷ್ಯವನ್ನು ಕಾಕತಾಳೀಯ ಎಂತಲೂ ಹೆಳಬಹುದಲ್ಲವೇ. ಇಂತಹ ಕಾಕತಾಳೀಯಗಳ ಅನುಭವಗಳು ನನಗೆ ಸಾಕಷ್ಟು ಸಾರೆ ಆಗಿದೆ. ಭಾಗ ಎರಡು.-- ಈಗೊಂದು ತಿಂಗಳಿನಿಂದಲು, ಬೆಂಗಳೂರಿನ ಮಿತ್ರರೊಬ್ಬರ ಮನೆಯಲ್ಲಿ ಈ ತಿಂಗಳ ೨೭ ರಂದು ಇರುವ ಮಿತ್ರಭೋಜನಕ್ಕೆ ಹೋಗುವುದರ ಕುರಿತು , ಮನೆಯಲ್ಲಿ ಚರ್ಚೆ ನಡೆಯುತ್ತಲೇ ಇದೆ. ಒಬ್ಬರೇ ಹೋಗಬೇಕೋ, ಇಬ್ಬರೂ ಹೋಗಬೇಕೋ, ಹೋಗದಿದ್ದರೆ ಏನಾಗುತ್ತದೆ. ಎಂದು ಹೋಗುವುದ್ದು ಇತ್ಯಾದಿ ಚರ್ಚೆ ಆಗಿ, ೨೬ ಕ್ಕೆ ಬೇಂಗಳೂರಿಗೆ ಇಬ್ಬರೂ ಹೋಗುವುದು. ಒಂದು ವಾರ ಬೆಂಗಳೂರಿನಲ್ಲಿ ಇದ್ದು ಬರುವುದು ಎಂದು ತೀರ್ಮಾನಿಸಲಾಗಿತ್ತು. ನಿನ್ನೆ ನನ್ನ ತಲೆಯಲ್ಲಿ ಇದ್ದ್ದಕ್ಕಿದ್ದಂತೆ ಒಂದು ಯೋಚನೆ ಬಂದಿತು. -- ನಂತರ ಒಂದು ವಾರ ಬೆಂಗಳೂರಿನಲ್ಲಿ ಉಳಿಯುವುದರಬದಲಿ ಒಂದು ವಾರಮೊದಲೇ ಹೋಗಿ, ಮಿತ್ರಭೋಜನದ ತರುವಾಯ ಹಿಂದಿರುಗೆ ಬಂದರೆ ಹೆಚ್ಚಿನ ಅನುಕೂಲವಾಗುತ್ತದೆ. .- ನಾಳೆಯೇ ಹೋದರೆ ಒಳ್ಳೆಯದು-- ನಿನ್ನೆ ಸಾಯಂಕಾಲದವರೆಗೂ ಚರ್ಚೆನಡೆದು, ಕೊನೆಗೆ ಮಡದಿ ವೀಟೋ ಚಲಾಯಿಸಿದ್ದರಿಂದ ಪ್ರಯಾಣ ಮುಂದೂಡಲಾಯಿತು. ಇಲ್ಲಿ ನಾನು ದೂರದ ಊರಿಗೆ ಹೋಗಲಿಲ್ಲವಾದರೂ ಆ ಬಗ್ಗೆ ಚಿಂತೆ ಮಾದಿದ್ದರಿಂದ ---- ಗಣಿತದಲ್ಲಿ ತಪ್ಪು ಉತ್ತರವನ್ನು ಕೊಟ್ಟರೂ ಗಣಿತಮಾಡಿದ ರೀತಿಯು ಸರಿಯಾಗಿದ್ದರೆ ಅರ್ಧ ಮಾರ್ಕ್ಸ್ಕ ಕೊಡಿತ್ತಾರಲ್ಲಾ---- ಹಾಗೆ, ಇಲ್ಲಿ ಜ್ಯೋತಿಷ್ಯಕ್ಕೆ ಮಾರ್ಕ್ಸ್ ಏಕೆ ಕೊಡಬಾರದು?? ಇಲ್ಲೂ ಒಂದು ಪ್ರಶ್ನೆ ಇದೆ. . ನಮ್ಮ ಪ್ರಯಾಣದ ಉದ್ದೇಶವು ವ್ಯವಹಾರ ನಿಮಿತ್ತ ಆಗಿರಲಿಲ್ಲ!! ಭಾಗ ೩ ಸಂಸಾರದಲ್ಲಿನ ಸಮಸ್ಯೆಯ ಪರಿಹಾರ.---- ಇದರ ಬಗ್ಗೆ ಹೇಳಬೇಕೆಂದರೆ, ನಮ್ಮ ಸಂಸಾರದಲ್ಲಿ ಸಮಸ್ಯೆಯೇ ಇಲ್ಲ. ಹೀಗಾಗಿ ಪರಿಹಾರದ ಪ್ರಶ್ನೆಯೇ ಹುಟ್ಟುವುದಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ,
ನನ್ನ ಮಾಹಿತಿ ಪ್ರಕಾರ ಜ್ಯೋತಿಷ್ಯ ಶಾಸ್ತ್ರಕ್ಕೆ ಶಾಪವಿದೆ ."ಪಂಚ ಭವತಿ ಪಂಚ ನ ಭವತಿ".
ಎಲ್ಲವೂ ಪೂರ್ವ ನಿಯೋಜಿತವದರೆ , ಪರಮಾತ್ಮ ,ಜೀವಾತ್ಮ ಮತ್ತು ಕರ್ಮಾಚರಣೆಗೆ  ಅರ್ಥ ವಿರುವುದಿಲ್ಲ.
ನಿಮ್ಮ ಪ್ರಕಾರ ಎಲ್ಲವೂ ಮಾನವ ನಿರ್ಮಿತ ಎಂದಾದರೆ (ವೇದಗಳ ಸಹಿತ), ಮಾನವನ ಅರಿವಿಗೆ ಅಥವಾ ಬುದ್ಧಿಗೆ ನಿಲುಕದೆ ಇರುವ ಇನ್ನು ವಿಷಯಗಲಿವೆಯೇಕೆ .
ಕೇವಲ ಜ್ಯೋತಿಷ್ಯ ಶಾಸ್ತ್ರವನ್ನು ಅಭ್ಯಾಸ ಮಾಡದೇ , ವೇದಗಳು , ಉಪನಿಷತ್ತುಗಳು ಪುರಾಣಗಳನ್ನ ಒಟ್ಟಾರೆ  ಸರಿಯಾದ ಗುರುಗಳ ಬಳಿ ಅಭ್ಯಾಸ ಮಾಡುವದು ಒಳಿತು.
ಮಾನವನ ಭುದ್ಧಿಗೂ ನಿಲುಕದೆ ಇರುವ ವಿಷಯದ ಬಗ್ಗೆ , ನಮ್ಮ ಪ್ರಾಚಿನರು ಒಳ್ಳೆಯ ಪ್ರಯೋಗಗಳನ್ನ ಮಾಡಿದ್ದಾರೆ. ("ಓಂ"  ಸಂಸ್ಕ್ರತ ಅರ್ಥ ಫ್ರೊಂ  ಶ್ರೀ ಬನ್ನಂಜೆ ಗೋವಿಂದಾಚಾರ್ಯ )
ಅನಿಲ ಹರಿಹರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.