ಜ್ಯೋತಿಷ ಮತ್ತು ಜನ್ಮಸಮಯ

5

ಜ್ಯೋತಿಷ ಮತ್ತು ಸತ್ಯ ಎನ್ನುವ ಆನಂದರಾಮ ಶಾಸ್ತ್ರಿಗಳ ಲೇಖನವನ್ನು ಓದಿದ ಮೇಲೆ ಜ್ಯೋತಿಷದ ಬಗ್ಗೆ ನನ್ನ ಅಭಿಪ್ರಾಯವನ್ನು ಬರೆಯಬೇಕೆನಿಸಿತು.

ಒಂದು ಕಾಲದಲ್ಲಿ ನಾನೂ ಜ್ಯೋತಿಷವನ್ನು ಕಲಿಯಬೇಕು ಎಂದು ಹೊರಟವನು. ಆದರೆ ನನ್ನ ಮೂಲಭೂತ ’ತರ್ಲೆ’ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಲಾಗದವರು ನಾನು ಜ್ಯೋತಿಷ ಕಲಿಯಲು ನಾಲಾಯಕ್ ಎಂದರು. ಹೌದು. ಜ್ಯೋತಿಷ ಕಲಿಯಲು ನಾನು ನಾಲಾಯಕ್ಕೆ!

೧. ಜ್ಯೋತಿಷದ ಮೊದಲ ಅರ್ಧ ಭಾಗವಾದ ಕುಂಡಲಿ ರಚನೆಯಲ್ಲಿ ಒಂದು ತರ್ಕಬದ್ಧವಾದ ಆಧಾರವಿದೆ. ಈ ಭಾಗವನ್ನು ಜ್ಯೋತಿಷ ಬಲ್ಲ ಯಾರೇ ಬೇಕಾದರೂ ರಚಿಸಲಿ, ಅದು ಏಕರೂಪವಾಗಿ ಬರುತ್ತದೆ.

೨. ಎರಡನೆಯ ಭಾಗ ಫಲಜ್ಯೋತಿಷ. ಜಾತಕದಲ್ಲಿ ಇಂತಿಂತಿಹ ಮನೆಯಲ್ಲಿ ಇಂತಿಂತಹ ಗ್ರಹಗಳಿದ್ದರೆ, ಇಂತಿಂತಹ ಫಲಗಳು ಬರುತ್ತವೆ ಎಂದು ವ್ಯಾಖ್ಯಾನಿಸುತ್ತಾರಲ್ಲ, ಅದರ ಬಗ್ಗೆ ನನ್ನ ತಕರಾರಿದೆ. ಒಂದೇ ಜಾತಕವನ್ನು ನೀವು ನಾಲ್ಕು ಜನರ ಬಳಿ ನೀಡಿದರೆ, ಅವರು ನಾಲ್ಕು ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ನೀವು ಜಾತಕನ ಬದುಕನ್ನು ನೋಡಿದರೆ, ಅದು ಐದನೆಯ ರೀತಿಯಲ್ಲಿ ನಡೆದಿರುತ್ತದೆ. ಈ ವ್ಯಾಖ್ಯಾನಕ್ಕೆ ಯಾವುದೇ ರೀತಿಯ ತಾರ್ಕಿಕ ವಿವರಣೆಯೂ ನಿಮಗೆ ದೊರೆಯುವುದಿಲ್ಲ.

 

ಜ್ಯೋತಿಷಕ್ಕೆ ಸಂಬಂಧಪಟ್ಟ ಹಾಗೆ ನನ್ನ ಮೂಲಭೂತ ಪ್ರಶ್ನೆ ಮಗುವಿನ ಜನನ ಸಮಯ ನಿರ್ಧಾರದ ಬಗ್ಗೆ.

  • ತಾಯಿಯ ಯೋನಿಯಲ್ಲಿ ಮಗುವಿನ ತಲೆ ಕಾಣಿಸಿಕೊಂಡ ಸಮಯವನ್ನು ಜನನ ಸಮಯ ತೆಗೆದುಕೊಳ್ಳಬೇಕೆ?
  • ಮಗು ಪೂರ್ಣವಾಗಿ ಹೊರಬಂದ ಸಮಯವನ್ನು ತೆಗೆದುಕೊಳ್ಳಬೇಕೆ?
  • ಮಗುವು ನೆಲವನ್ನು ಸ್ಪರ್ಶಿಸಿದ ಸಮಯವನ್ನು ತೆಗೆದುಕೊಳ್ಳಬೇಕೆ? – ಇದುವೇ ಸರಿಯಾದ ಸಮಯ ಎಂದಾದಲ್ಲಿ, ಇಂದಿನ ದಿನಗಳಲ್ಲಿ ಆಸ್ಪತ್ರೆಯಲ್ಲಿ ಹೆರಿಗೆ ನಡೆದಾಗ, ಮಗುವು ನೆಲವನ್ನು ಸ್ಪರ್ಶಿಸುವುದೇ ಇಲ್ಲ. ಎಲ್ಲವೂ ಹೆರಿಗೆಯ ಟೇಬಲ್ಲಿನ ಮೇಲೆಯೇ ನಡೆದುಹೋಗುತ್ತದೆ. ಆಸ್ಪತ್ರೆಯಿಂದ ಮನೆಗೆ ಬಂದ ಮೇಲೆ, ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲ ಎನ್ನುವಂತಹ ಸಮಯದಲ್ಲಿ ಮಾತ್ರ ತಾಯಿಯು ಮಗುವನ್ನು ಅನಿವಾರ್ಯವಾಗಿ ನೆಲದ ಮೇಲೆ ಮಲಗಿಸುತ್ತಾಳೆ.
  • ಹೆರಿಗೆಯ ಟೇಬಲ್ ಭೂಮಿಯ ಮೇಲೆ ಇರುವುದರಿಂದ, ಮಗು ಟೇಬಲ್ಲನ್ನು ಸ್ಪರ್ಷಿಸಿದ ಕ್ಷಣವೇ ನೆಲವನ್ನೂ ಸ್ಪರ್ಶಿಸಿತು ಎಂದೇ ಭಾವಿಸೋಣ. ಕೆಲವು ಸಂದರ್ಭಗಳಲ್ಲಿ ಮಗುವು ಹುಟ್ಟಿದ ಕೂಡಲೇ ಅದನ್ನು ಟೇಬಲ್ಲಿನ ಮೇಲೆ ಬಿಡದೆ, ಮಗುವನ್ನು ಹಾಗೆಯೇ ತಾಯಿಯ ಹೊಟ್ಟೆಯ ಮೇಲೆ ಮಲಗಲು ಬಿಡುವುದುಂಟು. ತಾಯಿಯ ದೇಹದ ಕಾವು ಮಗುವಿಗೆ ಅಗತ್ಯವಾಗಿರುತ್ತದೆ. ಮಗುವ್ಬು ಸಾಕಷ್ಟು ಸಮಯ ತಾಯಿಯ ಹೊಟ್ಟೆಯ ಮೇಲೆಯೇ ಇರುವುದುಂಟು. ಅಂತಹ ಸಮಯದಲ್ಲಿ ಮಗುವಿನ ಜನನ ಸಮಯವನ್ನು ತಿಳಿಯುವುದು ಹೇಗೆ?
  • ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಮಗುವನ್ನು ಹೊರತೆಗೆಯುವಾಗ ಸಮಯವನ್ನು ಹೇಗೆ ನಿರ್ಧರಿಸುವುದು? ಗರ್ಭಾಶದಿಂದ ಮಗುವನ್ನು ಹೊರತೆಗೆದಾಗಲೋ ಇಲ್ಲವೇ ಹೊಕ್ಕಳುಬಳ್ಳಿಯನ್ನು ಕತ್ತರಿಸಿದಾಗಲೋ? ಇತ್ತೀಚಿನ ದಿನಗಳಲ್ಲಿ ‘ಒಳ್ಳೆಯ’ ದಿನವನ್ನು ನೋಡಿ ಸಿಸೇರಿಯನ್ ಮಾಡಿಸುವುದಿದೆ.
  • ವಾಸ್ತವದಲ್ಲಿ ಒಬ್ಬ ವ್ಯಕ್ತಿಯ ಭವಿಷ್ಯವನ್ನು ಹೇಳಬೇಕಾದರೆ, ಅವನ ಜೀವ ರೂಪುಗೊಂಡ ಸಮಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಅದುವೇ ವೈಜ್ಞಾನಿಕ ಎಂದು ಅಂಬೋಣ. ಅಂದರೆ, ಅಂಡಾಣು ಮತ್ತು ವೀರ್ಯಾಣು ಮಿಲನವಾಗುವ ಸಂದರ್ಭ. ಜಾತಕನ ಹೆತ್ತವರು ಕೂಡಿದ ಸಮಯ.
  • ಅಂಡಾಣು ಮತ್ತು ವೀರ್ಯಾಣುಗಳ ಮಿಲನದ ಸಮಯವನ್ನು ಹೇಗೆ ನಿರ್ಧರಿಸುವುದು ಎಂದು ಕೇಳಿದ್ದಕ್ಕೆ ನನಗೆ ದೊರೆತ ವಿವರಣೆ. ಹಿಂದಿನ ದಿನಗಳಲ್ಲಿ (?) ವಿವಾಹ ಎನ್ನುವುದು ಸಂತಾನಕ್ಕಾಗಿ ಮಾತ್ರ ಎಂದಾಗಿತ್ತು. ಆಗ ಸಂತಾನವನ್ನು ಪಡೆಯಬೇಕು ಎನ್ನುವುವರು, ತಮ್ಮ ತಮ್ಮ ಜಾತಕಗಳಿಗೆ (ನಕ್ಷತ್ರ) ಅನುಗುಣವಾಗಿ ನಿರ್ದಿಷ್ಟ ತಿಥಿ, ಸಮಯಗಳಲ್ಲಿಯೇ ಸಂಭೋಗವನ್ನು ನಡೆಸಬೇಕಿತ್ತಂತೆ! ಹಾಗೆ ನಡೆಸಿ, ನಿರೀಕ್ಷಿತ ಕಾಲಮಾನಕ್ಕೆ ಸರಿಯಾಗಿ ಮಗುವನ್ನು ಪಡೆದರೆ, ಆ ಮಗುವಿನ ಜಾತಕ ನಿಖರವಾಗಿರುತ್ತದೆಯಂತೆ. ಆಗ ಫಲಜ್ಯೋತಿಷ ಭಾಗ ನಿಜವಾಗುವುದಂತೆ!
  • ಇಂದಿನ ದಿನಗಳಲ್ಲಿ ಮದುವೆಯಾದ ರಾತ್ರಿಯೇ ಪ್ರಸ್ತವನ್ನು ಏರ್ಪಡಿಸುವುದು ಸಹಜ. ಆದರೆ ಇಂದಿಗೆ ೩೦-೪೦ ವರ್ಷಗಳ ಹಿಂದೆ ಹೀಗಿರಲಿಲ್ಲ. ಮದುವೆಯಾದ ದಂಪತಿಗಳ ಪ್ರಸ್ತಕ್ಕೆ ಕೆಲವು ಸಲ ೩ ತಿಂಗಳಿನವರೆಗೆ ಕಾಯಬೇಕಾಗಿತ್ತು. ಸಂತಾನ ದಾನಕ್ಕೆ ಸರಿಯಾದ ಸಮಯವನ್ನು ಕಾಯುತ್ತಾ!!!
  • ಜ್ಯೋತಿಷ ಎನ್ನುವುದು ವೈಜ್ಞಾನಿಕವೇ, ಅವೈಜ್ಞಾನಿಕವೇ ಎಂದು ನಿರ್ಧರಿಸುವುದರ ಮೊದಲು ಜ್ಯೋತಿಷದ ಕೆಲವು ಮೂಲಭೂತ ಪ್ರಶ್ನೆಗಳ ಬಗ್ಗೆ ವಿಚಾರ ಮಾಡಬೇಕಾಗುತ್ತದೆ ಹಾಗೂ ಆ ನಿಯಮಗಳಿಗೆ ಅನುಗುಣವಾಗಿ ಕುಂಡಲಿಯನ್ನು ಹಾಕಲಾಗಿದೆಯೇ ಎಂಬುದನ್ನು ವಿಚಾರ ಮಾಡಬೇಕಾಗುತ್ತದೆ.

 

-      ನಾಸೋ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (8 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಲೇಖನಕ್ಕೆ ಸಂಬಂಧಿಸಿದ ಕೆಲವು ವಿಚಾರಗಳು- >>ತಮ್ಮ ತಮ್ಮ ಜಾತಕಗಳಿಗೆ (ನಕ್ಷತ್ರ) ಅನುಗುಣವಾಗಿ ನಿರ್ದಿಷ್ಟ ತಿಥಿ, ಸಮಯಗಳಲ್ಲಿಯೇ ಸಂಭೋಗವನ್ನು ನಡೆಸಬೇಕಿತ್ತಂತೆ!>> ಹಿಂದೆ ಹುಡುಗಿಯರು ರಜಸ್ವಲೆ ಆಗುವುದಕ್ಕಿಂತ ಮುಂಚೆ ಮದುವೆ ಆಗಿರುತ್ತಿತ್ತು.(ಸಣ್ಣ ವಯಸ್ಸಿನಲ್ಲೆ-ಆ ಕಾಲದ ವ್ಯವಸ್ಥೆ :) ಬಿಡಿ) ಮದುವೆಯಾದ ನಂತರ ವರನು ವಧುವು ರಜಸ್ವಲೆ ಆಗುವವರೆಗೆ ಬ್ರಹ್ಮಚರ್ಯೆಯಲ್ಲಿದ್ದು ವಧು ಋತುಸ್ನಾತಳಾದ ನಂತರ ಗರ್ಭಾಧಾನವೆಂಬ ಪ್ರಥಮಸಂಸ್ಕಾರವನ್ನು ನೆಡಸಲು ಯೋಗ್ಯವಾದ ಮುಹೂರ್ತವನ್ನು ನೋಡಿ ಆ ದಿನ ಶೋಭನಪ್ರಸ್ಥವನ್ನು ನೆಡಸುತ್ತಿದ್ದರು. ಋತು ಸ್ನಾತಳಾದ ಮೇಲೆ ೧೬ ದಿನಗಳವರೆಗೆ ಗರ್ಭಧಾರಣಾ ಸಾಮರ್ಥ್ಯವಿರುವುದು. (ವಿಭಾವರೀ ಷೋಡಶ ಭಾಮಿನೀನಾಂ) ಗರ್ಭಧರಿಸಿದ ಮೇಲೆ ಮೊದಲನೇ ತಿಂಗಳು ಶುಕ್ರ ಶೋಣಿತ ಮಿಶ್ರವಾಗಿದ್ದು ಎರಡನೇ ತಿಂಗಳಲ್ಲಿಮಾಂಸದ ಮುದ್ದೆಯಾಗುವುದು. ಮೂರನೆಯತಿಂಗಳಲ್ಲಿ ಅವಯವಾಂಕುರವಾಗುವುದು.ನಾಲ್ಕನೆಯ ತಿಂಗಳಲ್ಲಿ ಮೂಳೆಗಳು ಮೂಡಿ ಐದನೆಯ ತಿಂಗಳಲ್ಲಿ ಚರ್ಮ ಉತ್ಪತ್ತಿಯಾಗುವುದು. ಆರನೆಯ ತಿಂಗಳಲ್ಲಿ ಕೂದಲು ಉಗುರು ಇತ್ಯಾದಿಗಳುಂಟಾಗಿ ಏಳನೆಯ ತಿಂಗಳಲ್ಲಿ ಜ್ಞಾನೇಂದ್ರಿಯಗಳ ಉತ್ಪತ್ತಿಯಾಗಿ ಶರೀರ ಜೀವ ಸಂಯುಕ್ತವಾಗುತ್ತದೆ. ಎಂಟನೆಯ ತಿಂಗಳಲ್ಲಿ ತಾಯಿ ಭುಜಿಸಿದ ಆಹಾರವು ನಾಳದ ಮೂಲಕ ಶಿಶುವಿನ ಉದರವನ್ನು ಪ್ರವೇಶಿಸಿದೇಹ ಪುಷ್ಟಿಯುಂಟಾಗುವುದು. ೯ ನೆಯ ತಿಂಗಳಲ್ಲಿ ಸರ್ವಾಂಗ ಸಂಪೂರ್ಣವಾಗುವುದು. ಇದು ಬೃಹಜ್ಜಾತಕದಲ್ಲಿ ವರಾಹ ಮಿಹಿರರ ವಿವರಣೆ.( ಕಲಿಲ ಘನಾಂಕುರ ಅಸ್ಥಿ ಚರ್ಮ...)(ಇದು ವೈಜ್ಞಾನಿಕ ಹೌದೋ ಅಲ್ಲವೋ ನನಗೆ ಗೊತ್ತಿಲ್ಲ.)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ವಿಭಾವರೀ ಷೋಡಶ ಭಾಮಿನೀನಾಂ<< ವರಾಹಮಿಹಿರನು ಹಾಗೂ ಅಲ್ಲಮಪ್ರಭು ಅವರು ಗರ್ಭದಲ್ಲಿ ಭ್ರೂಣ ರೂಪುಗೊಳ್ಳುವ ಬಗ್ಗೆ ಬರೆದಿರುವರು. ಇಬ್ಬರ ವಿವರವು ಹೆಚ್ಚೂ ಕಡಿಮೆ ಒಂದೇ ರೀತಿಯಲ್ಲಿದೆ. - ಅಂಡವು ಸಾಮಾನ್ಯವಾಗಿ ಋತುಚಕ್ರದ ೧೪ ನೆಯ ದಿನದಂದು ಬಿಡುಗಡೆಯಾಗುತ್ತದೆ. ಅದರ ಆಯಸ್ಸು ಸುಮಾರು ೨೪ ಗಂಟೆಗಳು. ಯೋನಿನಾಳದಲ್ಲಿ ವೀರ್ಯಾಣುವಿನ ಆಯಸ್ಸು ಸುಮಾರು ೪೮ ದಿನಗಳು. (ಅಪರೂಪಕ್ಕೆ ೭ ದಿನಗಳವರೆಗೂ ಬದುಕುವುದುಂಟು) ಅಂದರೆಋತುಚಕ್ರದ ೧೨, ೧೩, ೧೪, ೧೫, ೧೬ ದಿನಗಳು ಗರ್ಭಕಟ್ಟುವುದಕ್ಕೆ ಪ್ರಶಸ್ತವಾಗಿರುವ ದಿನಗಳು. ೧೨ ದಿನಗಳಿಗಿಂತ ಮೊದಲು ಹಾಗೂ ೧೬ ದಿನಗಳ ನಂತರ ಗರ್ಭ ಕಟ್ಟುವ ಸಾಧ್ಯತೆಯು ಕಡಿಮೆಯಿರುತ್ತದೆ. - ಭ್ರೂಣಕ್ಕೆ ಎರಡು ತಿಂಗಳಾದಾಗ ಅಂಗಜನನ (ಆರ್ಗನೋಜೆನೆಸಿಸ್) ಯೋಜನೆ ರೂಪುಗೊಳ್ಳುತ್ತದೆ ಹಾಗೂ ಗುಂಡಿಗೆ ಮೊದಲು ಕೆಲಸ ಮಾಡಲಾರಂಭಿಸುತ್ತದೆ. ಆನಂತರ ಭ್ರೂಣವು ಗಾತ್ರದಲ್ಲಿ ಹಿಗ್ಗುತ್ತಾ ಹೋಗುತ್ತದೆ. ಹಾಗಾಗಿ ವರಾಹ ಮಿಹಿರ ಹಾಗೂ ಅಲ್ಲಮಪ್ರಭು ಅವರ ವಿವರಣೆ ಸಂಪೂರ್ಣ ವೈಜ್ಞಾನಿಕ ಎನ್ನಲು ಬರುವುದಿಲ್ಲ. - ಆಧುನಿಕ ವೈದ್ಯಕೀಯದ ಅನ್ವಯ ವರಾಹಮಿಹಿರ ಹಾಗೂ ಅಲ್ಲಮಪ್ರಭು ಅವರ ವಿವರಣೆ ಯಥಾವತ್ ನಿಜವಲ್ಲದಿರಬಹುದು. ಆದರೂ ಅವರು ಅವರ ಕಾಲಕ್ಕೆ ನೀಡಿರುವ ಈ ವಿವರಣೆ ಅದ್ಭುತ ಎಂದೇ ಪರಿಗಣಿಸಬೇಕಾಗುತ್ತದೆ. ವರಾಹಮಿಹಿರನು ಕ್ರಿಶ ೫೦೫-೫೮೭ರಲ್ಲಿ ಬದುಕಿದ್ದವನು. ಅಲ್ಲಮಪ್ರಭು ಅವರ ಕಾಲ ನಿಖರವಾಗಿ ಗೊತ್ತಿಲ್ಲ. ಆದರೆ ಅವರು ೧೨ ನೆಯ ಶತಮಾನದವರು ಎಂದರೂ ಎಲ್ಲರೂ ಒಪ್ಪಿರುವರು. - ೧೬-೧೭ ನೆಯ ಶತಮಾನದ ಯೂರೋಪಿಯನ್ ವೈದ್ಯರು ಮೊದಲಬಾರಿ ‘ಯೋನಿ’ ಗೆ ವಜೈನ ಎಂಬ ಶಬ್ದವನ್ನು ರೂಪಿಸುತ್ತಾರೆ, ಅವರ ಭ್ರೂಣಶಾಸ್ತ್ರದ ಅರಿವು ತೀರಾ ಸೀಮಿತವಾಗಿತ್ತು. ಆ ಲೆಕ್ಕದಲ್ಲಿ ವರಾಹಮಿಹಿರ ಹಾಗೂ ಅಲ್ಲಮಪ್ರಭು ಅವರು ಬರೆದಿರುವ ವಿಚಾರ ಅಂದಿನ ಕಾಲಕ್ಕೆ ಬಹಳ ಮುಂದುವರೆದಿತ್ತು ಎನ್ನಬಹುದು. - ನಾಸೋ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಲ್ಲಮಪ್ರಭು ಅವರು ಗರ್ಭದಲ್ಲಿ ಭ್ರೂಣ ರೂಪುಗೊಳ್ಳುವ ಬಗ್ಗೆ ಬರೆದಿರುವರು.


 


ದಯವಿಟ್ಟು ಈ ಸಾಲುಗಳನ್ನು ಹಂಚಿಕೊಳ್ಳಿ. ನನಗೆ ಈ ಸಾಲುಗಳು ಹೇಗೆ ಅರ್ಥವಾಗಬಹುದು ಅನ್ನೋ ಕುತೂಹಲ!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಯೋನಿನಾಳದಲ್ಲಿ ವೀರ್ಯಾಣುವಿನ ಆಯಸ್ಸು ಸುಮಾರು ೪೮ ದಿನಗಳು.<< ಸರ್, ಇದು ಸರಿನಾ ? ನಾನು ೪೮ ಗ೦ಟೆ ಅನ್ಕೊ೦ಡಿದ್ದೆ, ಅದು ೪೮ ದಿನ ಆದ್ರೆ ನಮ್ಮ ಎಲ್ಲಾ ಲೆಕ್ಕಾಚಾರ ತಲೆಕೆಳಗ್ ಆಗುತ್ತೆ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೪೮ ಗಂಟೆ ಅನ್ನೋದು ಸರಿ. ಟೈಪಿಸುವಾಗ ತಪ್ಪಾಗಿದೆ. ಕ್ಷಮಿಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು..:-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾಧ್ಯವಾದರೆ, ಮೂಲ ಶ್ಲೋಕ ಗಳನ್ನಾಕಿ ವಿವರವಾಗಿ ಬರೆಯಿರಿ. ಓದುವ ಆಸಕ್ತಿ ಇದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರಗಳು ಸರ್ ನೀವು ಬರೆದಿದ್ದು ಬಹಳ ಚೆನ್ನಾಗಿದೆ, ಬೇರೆ ಯಾರದೋ ಕೆಟ್ಟ ದೃಷ್ಟಿ ಬೀಳದಿರಲಿ. ಇಂತಿ ನಿಮ್ಮ, ಕಿರು ಕವಿ "ಸಿದ್ದರಾಮ ಎನ್.ಕೋರಪಳ್ಳಿ"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಗುಲಗಂಜಿ ಲೇಖನದ ನೆಪದಲ್ಲಿ ಇಲ್ಲಿ ಚಿನ್ನದಂಥ ವಿಚಾರಗಳು ಹೊರಹೊಮ್ಮುತ್ತಿವೆ. ಬಹಳ ಸಂತೋಷದ ಸಂಗತಿ. ಮಾನವನಮೇಲೆ ಗ್ರಹಗಳ ಪ್ರಭಾವ ಗಣನೀಯ ಪ್ರಮಾಣದ್ದೇನಲ್ಲ. ಪ್ರಭಾವ ಮತ್ತು ಪ್ರಭಾವಲಯ ಇವು ಗ್ರಹತಾರೆಗಳಲ್ಲಿದ್ದರೆ, ಆಗ ಇವು ಮಾನವನಲ್ಲೂ ಇವೆಯೆಂಬ ವಿಚಾರದನುಸಾರ, ಮಾನವಪ್ರಯತ್ನವು ಅವನ ಭವಿಷ್ಯವನ್ನು ರೂಪಿಸುವಲ್ಲಿ ನೆರವಾಗುತ್ತದೆ. ಆದ್ದರಿಂದ, ಜ್ಯೋತಿಷನುಡಿಯೇ ಅಂತಿಮವೇನಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಸೋ ಅವರೆ: >> ವರಾಹ ಮಿಹಿರ ಹಾಗೂ ಅಲ್ಲಮಪ್ರಭು ಅವರ ವಿವರಣೆ ಸಂಪೂರ್ಣ ವೈಜ್ಞಾನಿಕ ಎನ್ನಲು ಬರುವುದಿಲ್ಲ... ಸಂಪೂರ್ಣ ವೈಜ್ಞಾನಿಕ ಎನ್ನಲು ಅದು "ಸಾರ್ವಕಾಲಿಕ ಸತ್ಯ"ವಾಗಿರಬೇಕೆ? ಅಥವಾ ಅದನ್ನು (ವಿಷಯವನ್ನು) ಹೇಗೆ ಕಂಡುಕೊಂಡರು, ಹೇಗೆ ವಿವರಿಸಿದರು ಅನ್ನುವುದೇ ಆಧಾರವಾಗಬೇಕೆ? ನನ್ನ ಅಭಿಪ್ರಾಯದಲ್ಲಿ "ಗಣಿತ"ದಲ್ಲಿ ದೊರಕಿದಷ್ಟು ಸಾರ್ವಕಾಲಿಕ ಸತ್ಯಗಳು "ವಿಜ್ಞಾನ"ದಲ್ಲಿ ಸಿಗಲ್ಲ. ವಿಜ್ಞಾನದಲ್ಲಿ ಹೊಸ ಹೊಸ ವಿಚಾರಗಳು ಕಂಡು ಬಂದಂತೆಲ್ಲ ಹಳೆಯ ವಿಚಾರಗಳು ತಪ್ಪು ಎಂದರಿವಾಗುವ ಸಾಧ್ಯತೆಗಳು ಹೆಚ್ಚು. ಉದಾಹರಣೆಗೆ, ಇಂದಿನ ಔಷಧ ವಿಜ್ಞಾನವು "ಟ್ರಯಲ್ ಅಂಡ್ ಎರರ್" ಆಧಾರದಲ್ಲಿ ನಿಂತಿದೆ. ಹಾಗಾಗಿ ಇಂದು ಯಾವುದೇ ಸೈಡ್ ಎಫೆಕ್ಟ್ ಇಲ್ಲ ಅಂತ ಹೊರಬಂದ ಔಷಧ, ನಾಳೆ ಅಪಾಯಕಾರಿ ಎಂದು ತೀರ್ಮಾನವಾಗಬಹುದು. ಹಾಗೆಂದು ಔಷಧತಯಾರಿಕೆ ವೈಜ್ಞಾನಿಕವಲ್ಲ ಎನ್ನಲಾದೀತೆ? ಇತೀ, ಉಉನಾಶೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗೇ ಜ್ಯೋತಿಷ್ಯವೂ ಸಹ "ಟ್ರಯಲ್ ಅಂಡ್ ಎರರ್ " ವಿಧಾನ ದಿಂದ ಬರೆದಿರಬಹುದಲ್ಲವೇ ...?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇರಬಹುದು. ಏಕೆಂದರೆ, ಟ್ರಯಲ್ ಕೇಸುಗಳನ್ನೂ ನೋಡಿದ್ದೇನೆ; ಎರರ್ ಕೇಸುಗಳನ್ನೂ ನೋಡಿದ್ದೇನೆ. ನಾನು ಜ್ಯೋತಿಷ ನಂಬುತ್ತಿರಲಿಲ್ಲ; ಈಗಲೂ ನಂಬುತ್ತಿಲ್ಲ. ಆದರೆ ಇತ್ತೀಚೆಗೆ ಒಬ್ಬರು - ಸುಮಾರಾಗಿ ಸರಿಯಾಗಿ ಹೇಳಿದವರು ಸಿಕ್ಕಿದ್ದಾರೆ. ಅದು ಕಾಕತಾಳೀಯವಿರಬಹುದು ಅನ್ನುವ ಅನುಮಾನವಿದೆ. ಇತೀ, ಉಉನಾಶೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಲ್ಲವರ ಈ ಸಂವಾದಮಾಲೆ ಬಲು ಖುಷಿ ಕೊಡುತ್ತಿದೆ. ಇಲ್ಲಿ ನಾನು ತಿಳಿದುಕೊಂಡದ್ದು ಹಲವಿದೆ. ತಿಳಿಯಬೇಕಾದ್ದು ತುಂಬ ಇದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.