ನಿನ್ನ ನಿರೀಕ್ಷೆಯಲ್ಲಿ

5


 


ನಿನ್ನ ನಿರೀಕ್ಷೆಯಲ್ಲಿ
ಆಗುಂಬೆ ಘಾಟಿನ ತುತ್ತ ತುದಿಯಲ್ಲಿ ನಿಂತಿರುವೆ
ಅಲ್ಲಿ ನಾನೇ ಎತ್ತರ, ನನ್ನ ಮೀರಿಸುವವರು ಇಲ್ಲ.
ದೂರದ ಪಡುವಣದಲ್ಲಿ ಸಮುದ್ರದ ಅಲೆಗಳು
ಸೂರ್ಯನು ಹೊಂಬಣ್ಣ ಬಳಿದು ಹೊರಟನಲ್ಲ.


ಗಾಳಿ ಬೀಸುತ್ತಿದೆ ನೋಡಿ ನನ್ನ  ಬೀಳಿಸುವ ಹಾಗೆ
ಎರಡು ಬಾಹುಗಳ ತೆರೆದು ಆದಿತ್ಯನ ಕಡೆ ನೋಡಿದೆ.
ಬೇಡಿದೆ ತುಂಬು ಬಾಹುವ, ಬರಿದಾದ ನನ್ನ ಮನವ
ದಿನಕರ ಕರಗಿ ಮರೆಯಾದ, ನನ್ನ ಕೋರಿಕೆ ಕೇಳದೆ.


ಬಾನ ಹೊಂಬಣ್ಣವು ರಕ್ತ ಚೆಲ್ಲಿದಂತೆ ಕೆಂಪಾಯಿತು
ದಿಗಂತದಂಚಿನಲ್ಲಿ ಕಪ್ಪು ಅಲೆಯು ನುಸುಳಿ ಬಂದಿತು.
ತೆರೆದ ನನ್ನ ಬಾಹುಗಳು ತೆರದೇ ಇವೆ, ಬರಿದಾಗಿವೆ
ಪ್ರಕೃತಿಯ ನಡುವೆ, ಖಾಲಿಯಾದೆ ಎಂದು ಅನಿಸಿತು.


ಓ ನನ್ನ ಚೇತನ! ಮುಗುಳು ನಗುತ್ತಾ ಬಾ, ಈಗಲೇ
ನನ್ನ ಜಡ ಕಣ ಕಣಗಳಲ್ಲಿ ನವ ಚೈತನ್ಯವ ಹರಿಸು.
ನಾನು ಬೀಳುತ್ತಿರುವೆ ಅಂತ್ಯವಿಲ್ಲದ ಕತ್ತಲ ಕಮರಿಗೆ
ಹಿಡಿದುಕೋ, ಎತ್ತಿಕೋ, ನಿನ್ನೆದೆಗೆ ನನ್ನನಪ್ಪಿ ಹರಸು.


-------


ನಾ.ಸೋಮೇಶ್ವರ


http://wallpepper.files.wordpress.com/2007/11/balda_orange_sunset_alps.jpg

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾನಿನ್ನೂ ಕೈ ತೆರೆದೇ ಇದ್ದೆ ಅದೆಷ್ಟು ಹೊತ್ತು ಇದ್ದೇನೋ ಅದೆಷ್ಟು ತಾರೆಗಳು ಮಿಂಚಿ ಮರೆಯಾದವೋ ಮತ್ತೆ ಕೆಂಪಾಯಿತು ಬಾನು ನನ್ನ ಕರೆಗೆ ಓಗೊಟ್ಟು ಮೂಡಿತು ಬೆಳಕು ಮತ್ತೊಮ್ಮೆ ಈ ಬಾರಿ ನಾ ಕಾಯುತ್ತಿದ್ದೆ ಅದಕ್ಕೇ ಅವಿರ್ಭವಿಸಿತು ಚೈತನ್ಯ ನನ್ನೊಳಗೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿತೆ ಪ್ರತಿ ಕವಿತೆ ಎರಡು ಸುಪರ್ ಧನ್ಯವಾದಗಳು ಸೋಮೇಶ್ವರ್ ಸರ್ ಮತ್ತು ಸಂತೋಷ್ ಇಬ್ಬರಿಗೂ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸು೦ದರ ಕವನ, ಆದರೆ ಸೂರ್ಯಾಸ್ತದಲ್ಲಿ ನಿ೦ತು <<ಈಗಲೇ ನನ್ನ ಜಡ ಕಣ ಕಣಗಳಲ್ಲಿ ನವ ಚೈತನ್ಯವ ಹರಿಸು.>>ಅನ್ನುವುದು ಆಭಾಸವೇನೋ ಅನ್ನಿಸಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.