ಹಾಗೇ ಸುಮ್ಮನೆ!

0

ಗೆಳೆಯರೆ!


 


ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಅಕ್ಷರ ಜೋಡಿಸಿ ಎಂಬ ಒಂದು ಪ್ರಶ್ನೆಯನ್ನು ತಾವೆಲ್ಲ ನೋಡಿರುತ್ತೀರಿ. ಇಲ್ಲಿ ನಾನು ನಿಮಗೆ ಕೆಲವು ಹೆಸರುಗಳನ್ನು ನೀಡುತ್ತೇನೆ. ಅಲ್ಲಿರುವ ಅಕ್ಷರಗಳನ್ನು ಮತ್ತೆ ಜೋಡಿಸಿ. ಅವರ ಬದುಕಿಗೆ ಸನಿಹವಾದ ಒಂದು ನುಡಿಗಟ್ಟನ್ನು ರೂಪಿಸಿ. ನನ್ನ ಈ ಬರಹಕ್ಕೆ ಆಧಾರ ನನಗೆ ಬಂದಂತಹ ಒಂದು ಮಿಂಚಂಚೆ.


 


ಮೊದಲು ಒಂದು ಉದಾಹರಣೆ:


ಪ್ರಶ್ನೆ: ಈ ಕ್ರಿಕೆಟ್ ಆಟಗಾರನ ಸೊಗಸನ್ನು ಅವನ ಹೆಸರಿನ ಅಕ್ಷರಗಳಿಂದಲೇ ರೂಪಿಸಿ.


DILIP VENGSARKAR


ಉತ್ತರ: SPARKLING DRIVE


 


ಹೀಗೆಯೇ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರವನ್ನು ನೀಡಿ.


 


೧. ಈ ರಾಜಕುಮಾರಿಯ ಅಂತ್ಯವನ್ನು ರೂಪಿಸಿ.


PRINCESS DIANA


೨. ಬಿಲ್ ಕ್ಲಿಂಟನ್ ಅವರ ರಾಜಕೀಯ ಬದುಕನ್ನು ಅಲ್ಲೋಲ ಕಲ್ಲೋಲ ಮಾಡಿದ ಈ ಮಹಿಳೆಯನ್ನು ವರ್ಣಿಸಿ.


MONICA LEWINSKY


೩. ಒಂದು ವಿಶಾಲ ಹಜಾರದಲ್ಲಿ ಹಲವು ಜನರು ವಾಸಿಸುವ / ನಿದ್ರಿಸುವ ಸ್ಥಳ, ಸಾಮಾನ್ಯವಾಗಿ ಹೇಗೆ ಇರುತ್ತದೆ ಎಂಬುದನ್ನು ಹೇಳಿ.


DORMITORY


೪. ಈ ಕೆಲಸದಲ್ಲಿರುವ ಇರುವವನು ಏನನ್ನು ಮಾಡಬಹುದು?


ASTRONOMER


೫. ಹತಾಶೆಗೆ ಒಲಗಾದವನು ಕೆಲವು ಸಲ ತನ್ನ ಜೀವವನ್ನು ಹೀಗೆ ಕೊನೆಗೊಳಿಸಿಕೊಳ್ಳಬಹುದಲ್ಲವೆ!?


DESPERATION


೬. ಇವುಗಳ ಕೆಲಸವೇನು?


THE EYES


೭. ದಶಮಾಂಶ ಪದ್ಧತಿಯಲ್ಲಿ ಉಪಯೋಗಿಸುವ ಬಿಂದುವನ್ನು ಹೇಗೆ ವರ್ಣಿಸಬಹುದು?


A DECIMAL POINT


೮. ಎಲ್ಲಕ್ಕಿಂತಲೂ ಬೊಮ್ಬಾಟ್!!!  ಬಹಳಷ್ಟು ಅತ್ತೆಯಂದಿರನ್ನು ಹೀಗೆ ವರ್ಣಿಸಬಹುದೆ??????!!!!!!


MOTHER-IN-LAW


 


ಉತ್ತರವನ್ನು ಒಂದು ದಿನದಲ್ಲಿ ಬರೆದು ತಿಳಿಸಿ. ಎಲ್ಲ ಉತ್ತರವನ್ನು ಸ್ವತಂತ್ರವಾಗಿ ನೀಡುವವರಿಗೆ ‘ಥಟ್ ಅಂತ ಹೇಳಿ’ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಿಕೊಡುವಂತೆ ನಿರ್ಮಾಪಕರನ್ನು ಒಲಿಸುತ್ತೇನೆ.


 


-ನಾಸೋ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಈ ಮಿಂಚಂಚೆ ನಂಗೂ ಬಂದಿತ್ತು.. ಉತ್ತರಗಳೂ ನೆನಪಲ್ಲಿವೆ.. ಹೇಳಿದ್ರೆ ಬೇರೆಯವ್ರಿಗೆ ಥಟ್ ಅಂತ ಹೇಳಿಲಿ ಭಾಗವಹಿಸೋ ಅವಕಾಶ ತಪ್ಪಿಹೋಗುತ್ತಲಾ ಅಂತ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ಸೋಮಶೇಖರರವರೆ, ನಿಮ್ಮ ಕಾರ್ಯಕ್ರಮ ಬಹಳ ಅಧ್ಭುತ ,ನಮ್ಮ ತಂದೆಯವರಿಗೆಂಟು ತುಂಬ ಪ್ರಿಯ, ಸ್ವಲ್ಪ common ಹೆಲ್ತ್ ಸಂಬಂಧ ಪ್ರೆಶ್ನೆಗಳು ಹೆಚ್ಚಾಗಿ ಮೂಡಿಬರಲಿ ಎಂಬ ಆಶಯ. Dr .House ಅಂತ ಅಮೇರಿಕಾದಲ್ಲಿ ಒಂದು ಟಿವಿ ಸೀರಿಯಲ್ ಇದೆ ಬಹುಷಃ ನಿಮಗೆ ಇಷ್ಟವಾಗಬಹುದು ನಿಮ್ಮ ಸವಾಲುಗಳಿಗೆ ಉತ್ತರ ಹೀಗಿವೆ, PRINCESS DIANA --END IS A CAR SPIN MONICA LEWINSKY --NICE SILKY WOMAN DORMITORY --DIRTY ROOM ASTRONOMER --MOON STARER DESPERATION --A ROPE ENDS IT or De-SEPERATION THE EYES --THEY SEE A DECIMAL POINT --IM A DOT IN PLACE MOTHER-IN-LAW --WOMAN HITLER ಧನ್ಯವಾದಗಳು ಅವಕಾಶ ಸಿಕ್ಕುವುದೆಂಬ ಆಸೆಯೊಂದಿಗೆ ಮನು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈಗಾಗಲೇ ಮಿಂಚೆಯ ಮೂಲಕ ಉತ್ತರ ತಿಳಿದವರು ಸ್ವಲ್ಪ ಕಾಯಬಹುದಿತ್ತು.......... ನನ್ನ ಮಿಂಚೆಯ ವಿಳಾಸ ಸಿಗಲಿಲ್ಲವೆಂಬ ತಾಂತ್ರಿಕ ಗೊಂದಲ ತಿಳಿಯಿತು. ಚಿಂತೆಯಿಲ್ಲ. ಪಾಲಚಂದ್ರ ಹಾಗೂ ವೀರೇಂದ್ರ ಅವರಿಗೆ ಅಭ್ಯಂತರವಿಲ್ಲವೆಂದರೆ ಮನ್ನು ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬಹುದಲ್ಲವೆ! ಮನ್ನು ನಿಮ್ಮ ಚರವಾಣಿಯ ಸಂಖ್ಯೆಯನ್ನು ತಿಳಿಸಿ. ನಿಮಗೆ ಆಹ್ವಾನಿಸಲು ಪ್ರಯತ್ನಿಸುತ್ತೇನೆ. ನನ್ನ ಮಿಂಚೆಯ ವಿಳಾಸ naasomeswara@gmail.com naasomeswara@yahoo.com - naasO
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ಖಂಡಿತ, ಏನೂ ಅಭ್ಯಂತರ ಇಲ್ಲ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲಚಂದ್ರ ಅವರೇ, ತಮ್ಮ ಈ ಉದಾರತೆಗೆ ನನ್ನ ನಮನಗಳು. ಮೆಚ್ಚಿದೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಸೋರವರೆ ನಿಮ್ಮೆ ಮಿಂಚೆ ವಿಳಾಸವೇನು ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓ ಮನುರವ್ರು ,, ಆಗಲೇ ಇಲ್ಲೇ ಉತ್ತರಗಳನ್ನು ಕಳುಹಿಸಿದ್ದಾರೆ.. ನನ್ನ ಉತ್ತರವೂ ಸಹ ಅದೇ ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಯವಿಟು ಕ್ಷಮಿಸಿ ವೀರೇಶ್ರವರೆ , ನಾನು ಸಹ ಮಿಂಚಿಗಾಗಿ ಹುಡುಕಿದೆ ,ಅವರ ಬ್ಲಾಗ್ನಲ್ಲೂ ಸಹ ಸಿಗದ್ದಿದ್ದಾಗ ಇಲ್ಲೇ ಹಾಕಬೇಕಾಯ್ತು ಮನು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲಚಂದ್ರರವರು ಅಂದ ಹಾಗೆ ನನಗು ಏನು ಅಬ್ಯಂತರವಿಲ್ಲ ಅನ್ನಲು ಕಷ್ಟವಾಗುತದೆ :) ಆದರೆ ನಾನು ಕೆಲ ಕ್ಲಿಷ್ಟವಾದುದನ್ನು ಗೊತ್ತಾಗದೆ ಗೂಗಲ್ ಮಾಡಿದ್ದೆ .. ಅದರಿಂದ ಓಕೆ.. ನಾಸೋರವರೆ ಸಾಧ್ಯವಾದರೆ ಮುಂದೆ ನಮಗೂ ಅಂದು ಅವಕಾಶ ಮಾಡಿಕೊಡಿ .. - ವೀರೇಂದ್ರ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.