naasomeswara ರವರ ಬ್ಲಾಗ್

ಥಟ್ ಅಂತ ಹೇಳಿ - ಲಿಮ್ಕ ದಾಖಲೆ!

ಗೆಳೆಯರೆ!

ನಿಮಗೆಲ್ಲ ತಿಳಿದಿರುವ ಹಾಗೆ ಚಂದನ ವಾಹಿನಿಯಲ್ಲಿ ’ಥಟ್ ಅಂತ ಹೇಳಿ’ ಕನ್ನಡ ಕ್ವಿಜ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮ ಈಗ ಅಧಿಕೃತವಾಗಿ ಲಿಮ್ಕ ದಾಖಲೆಯನ್ನು ಸೇರಿದೆ. ಸಂಬಂಧಿತ ದಾಖಲೆ ಪತ್ರವನ್ನು ಲಗತ್ತಿಸಿದ್ದೇನೆ. ಈ ಬಗ್ಗೆ ಮಾಹಿತಿಯು ೨೦೧೨ ಆವೃತ್ತಿಯ ಲಿಮ್ಕ ಪುಸ್ತಕದಲ್ಲಿ ಬಂದಿದೆ. ಭಾರತದ ಯಾವುದೇ ವಾಹಿನಿಯಲ್ಲಿ ಸುದೀರ್ಘ ಕಾಲ ಕ್ವಿಜ್ ಕಾರ್ಯಕ್ರಮ ನಡೆಸಿದ್ದಕ್ಕಾಗಿ ಈ ದಾಖಲೆ ಸಂದಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.6 (5 votes)
To prevent automated spam submissions leave this field empty.

ನೀವು ಬಂದರೆ ನನಗೆ ಸಂತೋಷವಾಗುತ್ತದೆ


ನೀವು ಬಂದರೆ ನನಗೆ ಸಂತೋಷವಾಗುತ್ತದೆ


 ದಿನಾಂಕ: ಫೆಬ್ರವರಿ ೬, ೨೦೧೧


ದಿನ: ಭಾನುವಾರ


ಸಮಯ: ಬೆಳಿಗ್ಗೆ ೧೦.೩೦


ಸ್ಥಳ: ೭೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ


ನ್ಯಾಶನಲ್ ಕಾಲೇಜು ಮೈದಾನ


ಬೆಂಗಳೂರು


ಕನ್ನಡ ನಾಡು-ನುಡಿಗೆ ಸೇವೆ ಮಾಡಿರುವವರ ಗೌರವಿಸುವ ಕಾರ್ಯಕ್ರಮ.


ಈ ಸಲ ಸನ್ಮಾನಿತರ ಪಟ್ಟಿಯಲ್ಲಿ ನನ್ನ ಹೆಸರೂ ಇದೆ.


ನಿಮ್ಮ ಸಮ್ಮುಖದಲ್ಲಿ ಸನ್ಮಾನಿತನಾಗುವ ಆಸೆ ನನ್ನದು.


ನಿರಾಸೆ ಮಾಡಬೇಡಿ. ನೀವು ಬರುವಿರಿ ಎಂಬ ನಿರೀಕ್ಷೆ ನನ್ನದು.


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮಂಗಳೂರಿನಲ್ಲಿ ಕ್ವಿಜ಼್!

ಮಂಗಳೂರಿನಲ್ಲಿ ಕ್ವಿಜ಼್!


ಇದೇ ಶನಿವಾರ, ೨೦.೧೧.೨೦೧೦ ರ ಸಂಜೆ ೫.೦೦ ಗಂಟೆಗೆ


ಮಂಗಳೂರಿನ ಸಮ್ಮರ್ ಸ್ಯಾಂಡ್ ಬೀಚ್-ನಲ್ಲಿ ಕ್ವಿಜ಼್ ಕಾರ್ಯಕ್ರಮ ನಡೆಯಲಿದೆ


ದಕ್ಷಿಣ ಕನ್ನಡ ಜಿಲ್ಲಾ ಅಂತರ ಶಾಲಾ ವಿಜ್ಞಾನ ಕ್ವಿಜ಼್ ಕಾರ್ಯಕ್ರಮ!


ನೋಡಲು ಹಾಗೂ ಭಾಗವಹಿಸಲು ಬನ್ನಿ!


ಸರಿ ಉತ್ತರ ನೀಡಿದವರಿಗೆ ಒಂದು ಪುಸ್ತಕ ಹಾಗೂ ಕ್ಯಾಡ್ಬರಿ ಚಾಕೋಲೆಟ್ ಬಹುಮಾನ!!!


ಬನ್ನಿ! ಬೀಚಿನಲ್ಲಿ ಭೇಟಿಯಾಗೋಣ


ನಾ.ಸೋಮೇಶ್ವರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸಾಹಿತ್ಯ ಕೂಟ: ಚಿಂತಾಮಣಿ: ೨೮೦೦ ನೆಯ ಶನಿವಾರದ ಕಾರ್ಯಕ್ರಮ!

ಇದೊಂದು ದಾಖಲೆ!

ಸುಮಾರು ೫೫ ವರಗಳಿಂದ, ಪ್ರತಿಶನಿವಾರವು ತಪ್ಪದೇ ಒಂದು ಸಾಹಿತ್ಯ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವ ಅಪರೂಪದ ಸಂಸ್ಥೆಯು ಚಿಂತಾಮಣಿಯಲ್ಲಿದೆ. ಅದುವೇ ಸಾಹಿತ್ಯ ಕೂಟ. ಇದನ್ನು ವೈ.ಎಸ್.ಗುಂಡಪ್ಪ ಎಂಬ ಮಹಾನುಾವರು ಸ್ಥಾಪಿಸಿದರು. ಈಗ ಅವರಿಲ್ಲ. ಆದರೆ, ಅವರ ಮಕ್ಕಳು ತಮ್ಮ ತಂದೆಯವರು ಆರಂಭಿಸಿದ ಈ ಸಾಹಿತ್ಯ ದಾಸೋಹವನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.

 

ಇಂದು ೨೮೦೦ ನೆಯ ಕಾರ್ಯಕ್ರಮ.

 

ನಾನು ’ಪ್ರಶ್ನ ಚಿಂತಾಮಣಿ’ ಎಂಬ ಸರಳ ಕ್ವಿಜ್ ಕಾರ್ಯಕ್ರಮವನ್ನು ನಡೆಸುತ್ತಿದ್ದೇನೆ. ಕ್ವಿಜ್ ವಿಷಯ, ಸೂರ್ಯನನ್ನೂ ಒಳಗೊಂಡಂತೆ ಸೂರ್ಯನ ವ್ಯಾಪ್ತಿಯಲ್ಲಿ ಬರುವ ಎಲ್ಲ ವಿ್ಯಗಳು. ಎಂದಿನಂತೆ ಪ್ರತಿ ಸರಿ ಉತ್ತರಕ್ಕೂ ಒಂದು ಪುಸ್ತಕ ಬಹುಮಾನ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

ನಿಮ್ಮ ಸಹಾಯ ಬೇಕಾಗಿದೆ!

 


ಗೆಳೆಯರೆ!


ಇತ್ತೀಚೆಗೆ ಆಫ್ಘಾನಿಸ್ತಾನದಲ್ಲಿ ಭೂಕಂಪನವಾಯಿತು. ಅದರ ಪರಿಣಾಮ ನಮ್ಮ ದೇಶದ ಉತ್ತರಖಂಡ್ ರಾಜ್ಯದ ಮೇಲಾಗಿದೆ. ಉತ್ತರಖಂಡ್ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಭೂಕುಸಿತವುಂಟಾಗಿದೆ. ಬಹುಪಾಲು ರಸ್ತೆಗಳು ಮುಚ್ಚಿಹೋಗಿವೆ. ಜೊತೆಗೆ ನಿರಂತರ ವರ್ಷಧಾರೆಯ ಕಾರಣ ಬದುಕು ಅಸ್ತವ್ಯಸ್ತವಾಗಿದೆ.


 


ಚಾರ್ಧಾಮ್ ಯಾತ್ರೆಗೆ ಹೊರಟ ಯಾತ್ರಿಕರು ಮಾರ್ಗದ ವಿವಿಧ ಸ್ಥಳಗಳಲ್ಲಿ ಸಿಕ್ಕಿಹಾಕಿಕೊಂಡು ಮುಂದಕ್ಕೂ ಹೋಗಲಾಗದೆ, ಹಿಂದಕ್ಕೂ ಬರಲಾಗದೇ ನಡುವೆ ಸಿಕ್ಕಿಬಿದ್ದಿದ್ದಾರೆ.


 


ಬೆಂಗಳೂರಿನ ಏಜೀಸ್ ಆಫೀಸಿನಿಂದ ೫೨ ಜನರು ಉತ್ತರಕಾಶಿಯಲ್ಲಿ ನಮ್ಮ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಈಗಷ್ಟೇ ಶ್ರೀಮತಿ ನಾಗರತ್ನ ಅವರು ಸಹಾಯಕ್ಕಾಗಿ ನನಗೆ ಫೋನ್ ಮಾಡಿದರು. ನಾನು ಬೆಂಗಳೂರು ದೂರದರ್ಶನ, ಟಿವಿ=೯ ಹಾಗೂ ಸುವರ್ಣ ವಾಹಿನಿಯಲ್ಲಿರುವ ಕೆಲವು ಗೆಳೆಯರಿಗೆ ಮಾಹಿತಿಯನ್ನು ನೀಡಿ ಶ್ರೀಮತಿ ನಾಗರತ್ನ ಅವರ ಫೋನ್ ನಂಬರ್ ನೀಡಿದ್ದೇನೆ. ಈ ಬಗ್ಗೆ ಜನರ ಗಮನವನ್ನು ಹಾಗೂ ಸರ್ಕಾರದ ಗಮನವನ್ನು ಸೆಳೆಯುವಂತೆ ಪ್ರಾರ್ಥಿಸಿದ್ದೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - naasomeswara ರವರ ಬ್ಲಾಗ್